ಪ್ರಚಲಿತ ವಿದ್ಯಮಾನಗಳು- ಸೆಪ್ಟೆಂಬರ್ 14, 2016

ಬಿಎಸ್‌ಎಫ್‌ ಪುನರ್‌ರಚನೆ: ಗಡಿ ಭದ್ರತಾ ಪಡೆಯ (ಬಿಎಸ್‌ಎಫ್‌) ಬಹಳ ಕಾಲದಿಂದ ಬಾಕಿಯಿದ್ದ ಕೇಡರ್‌ ವ್ಯವಸ್ಥೆ ಪುನರ್‌ರಚನೆಗೆ ಸಂಪುಟ ಒಪ್ಪಿಗೆ ನೀಡಿದೆ. ಇದರಿಂದಾಗಿ ಬಿಎಸ್‌ಎಫ್‌ನಲ್ಲಿ 74 ಹುದ್ದೆಗಳು ಸೃಷ್ಟಿಯಾಗಲಿವೆ. ಬಿಎಸ್‌ಎಫ್‌ನ ಕಾರ್ಯಾಚರಣಾ ಸಾಮರ್ಥ್ಯ ಮತ್ತು ಆಡಳಿತಾತ್ಮಕ ಸಾಮರ್ಥ್ಯವನ್ನು ಹೆಚ್ಚಿಸುವುದು ಈ ನಿರ್ಧಾರದ ಉದ್ದೇಶವಾಗಿದೆ. ಸೆಪ್ಟೆಂಬರ್ 14: ರಾಷ್ಟ್ರೀಯ ಹಿಂದಿ ದಿವಸ್ ರಾಷ್ಟ್ರೀಯ ಹಿಂದಿ ದಿವಸವನ್ನು ಸೆಪ್ಟೆಂಬರ್ 14 ರಂದು ಆಚರಿಸಲಾಗುತ್ತದೆ. ರಾಷ್ಟ್ರವ್ಯಾಪ್ತಿ ಹಿಂದಿ ಮಾತನಾಡುವ ರಾಜ್ಯಗಳಲ್ಲಿ ಮತ್ತು ಹಿಂದಿ ಅಧಿಕೃತ ಭಾಷೆಯಾಗಿರುವ ಇತರೆ ರಾಷ್ಟ್ರಗಳಲ್ಲೂ ಸಹ ರಾಷ್ಟ್ರೀಯ ಹಿಂದಿ…

Read More

ಪ್ರಚಲಿತ ವಿದ್ಯಮಾನಗಳು- ಸೆಪ್ಟೆಂಬರ್ 13, 2016

ಸರಕು ಮತ್ತು ಸೇವಾ ತೆರಿಗೆ ಮಂಡಳಿ ರಚನೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಸರಕು ಮತ್ತು ಸೇವಾ ತೆರಿಗೆ ಮಂಡಳಿ ರಚನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಸಂವಿಧಾನದ ಪರಿಚ್ಚೇದ 279ಎ ಅಡಿ ಈ ಮಂಡಳಿ ರಚನೆಯಾಗಲಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಣಯವನ್ನು ಕೈಗೊಳ್ಳಲಾಗಿದೆ. ಸಂಪುಟ ಸಭೆಯಲ್ಲಿ ಕೈಗೊಳ್ಳಲಾದ ಇತರೆ ತೀರ್ಮಾನಗಳು: ನವಹದೆಹಲಿಯಲ್ಲಿ ಸರಕು ಮತ್ತು ಸೇವಾ ತೆರಿಗೆ ಮಂಡಳಿ ಕಾರ್ಯಾಲಯದ ಸ್ಥಾಪನೆಗೆ ಅನುಮೋದನೆ ನೀಡಲಾಗಿದೆ.…

Read More

ಪ್ರಚಲಿತ ವಿದ್ಯಮಾನಗಳು- ಸೆಪ್ಟೆಂಬರ್ 12, 2016

ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರ ಕೃಷಿ ಉತ್ಪನ್ನ ಗುಣಮಟ್ಟ ಪರಿಶೀಲನೆಗೆ “ಅನ್ನದರ್ಪಣ” ತಂತ್ರಾಂಶ ರಾಜ್ಯದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗಲ್ಲಿ ರೈತರ ಕೃಷಿ ಉತ್ಪನ್ನಗಳ ಗುಣಮಟ್ಟ ಪರೀಕ್ಷಿಸಿ, ವರ್ಗೀಕರಿಸುವ ಸಲುವಾಗಿ ಆತ್ಯಾಧುನಿಕ “ಅನ್ನದರ್ಪಣ’ ಹೆಸರಿನ ತಂತ್ರಾಂಶವನ್ನು ಅಭಿವೃದ್ದಿಪಡಿಸಲಾಗಿದೆ. ಈ ತಂತ್ರಾಂಶವನ್ನು ಪ್ರಾಯೋಗಿಕವಾಗಿ ಗದಗಿನ ಎಪಿಎಂಸಿಯಲ್ಲಿ ಆರಂಭಮಾಡಲಾಗಿದೆ. ರಾಜ್ಯದಲ್ಲಿ ಮೂರು ವರ್ಷಗಳಿಂದ ಜಾರಿಯಲ್ಲಿರುವ ‘ಇ-ಮಾರಾಟ’ ವ್ಯವಸ್ಥೆಗೆ ಇದು ದೊಡ್ಡ ಮಟ್ಟದಲ್ಲಿ ಉತ್ತೇಜನ ನೀಡುವ ಸಾಧ್ಯತೆಗಳಿದೆ ಎನ್ನಲಾಗಿದೆ. ತಂತ್ರಾಂಶದ ಬಗ್ಗೆ: ಕೋಲ್ಕತ್ತದ ಆಧುನಿಕ ಕಂಪ್ಯೂಟರ್ ಅಭಿವೃದ್ಧಿ ಕೇಂದ್ರದ (ಸಿ-ಡಾಕ್) ತಂತ್ರಜ್ಞರು ಅನ್ನದರ್ಪಣ’…

Read More

ಪ್ರಚಲಿತ ವಿದ್ಯಮಾನಗಳು- ಸೆಪ್ಟೆಂಬರ್ 11, 2016

ಲಾವೋಸ್ನ ವಿಯೆಂಟಿಯಾನ್ ನಲ್ಲಿ 2016 ಅಸಿಯಾನ್ ಶೃಂಗಸಭೆ ಆಗ್ನೇಯ ಏಷ್ಯಾ ರಾಷ್ಟ್ರಗಳ (ASEAN) 28 ಮತ್ತು 29ನೇ ಶೃಂಗಸಭೆ ಲಾವೋಸ್ ನ ವಿಯೆಂಟಿಯಾನ್ ನಲ್ಲಿ ಸೆಪ್ಟೆಂಬರ್ 6 ರಿಂದ 8 ರವರೆಗೆ ನಡೆಯಿತು. ಲಾವೋಸ್ ರಾಷ್ಟ್ರದ ಪ್ರಧಾನಿ “ಥಾನ್ಗ್ಲೌನ್ ಸಿಸೌಲಿಥ್ (Thongloun Sisoulith)” ಅವರು ಶೃಂಗಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. Turning Vision into Reality for a Dynamic ASEAN Community” ಇದು ಈ ಶೃಂಗಸಭೆಯ ಧ್ಯೇಯವಾಕ್ಯವಾಗಿತ್ತು. ಅಸಿಯಾನ್ 10 ರಾಷ್ಟ್ರಗಳಾದ ಇಂಡೋನೇಷಿಯಾ, ಮಲೇಷಿಯಾ, ಫಿಲಿಫೈನ್ಸ್, ಥಾಯ್…

Read More

ಪ್ರಚಲಿತ ವಿದ್ಯಮಾನಗಳು- ಸೆಪ್ಟೆಂಬರ್ 10, 2016

ಹಿಮಾಚಲ ಪ್ರದೇಶದ ಮಂಡಿ, ಮಹಾರಾಷ್ಟ್ರದ ಸಿಂಧುದುರ್ಗ ದೇಶದ ಸ್ವಚ್ಚ ಜಿಲ್ಲೆಗಳು ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆ ಮತ್ತು ಮಹಾರಾಷ್ಟ್ರದ ಸಿಂಧುದುರ್ಗ ಗ್ರಾಮೀಣ ಸ್ವಚ್ಚ ಸರ್ವೇಕ್ಷಣಾದಲ್ಲಿ ದೇಶದ ಸ್ವಚ್ಚ ಜಿಲ್ಲೆಗಳಾಗಿ ಹೊರಹೊಮ್ಮಿವೆ. ಬಯಲು ಪ್ರದೇಶ ಜಿಲ್ಲೆಗಳ ವಿಭಾಗದಲ್ಲಿ ಮಹಾರಾಷ್ಟ್ರದ ಸಿಂಧುದುರ್ಗ ಸ್ವಚ್ಚ ಜಿಲ್ಲೆಯೆನಿಸಿದರೆ, ಗುಡ್ಡಗಾಡು ಪ್ರದೇಶಗಳ ಜಿಲ್ಲೆಗಳ ಪೈಕಿ ಹಿಮಾಚಲ ಪ್ರದೇಶದ ಮಂಡಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ಕೇಂದ್ರ ಕುಡಿಯುವ ನೀರು, ನೈರ್ಮಲ್ಯ, ಗ್ರಾಮೀಣಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವಾಲಯ ಗ್ರಾಮೀಣ ಸ್ವಚ್ಚ ಸರ್ವೇಕ್ಷಣಾ ವರದಿಯನ್ನು ಬಿಡುಗಡೆಗೊಳಿಸಿದೆ. ಗುಡ್ಡಗಾಡು…

Read More

ಪ್ರಚಲಿತ ವಿದ್ಯಮಾನಗಳು- ಸೆಪ್ಟೆಂಬರ್ 9, 2016

“ಬೆನ್ನು ಕ್ಷುದ್ರಗ್ರಹ (Bennu Asteroid)ದಲ್ಲಿ ಮಾದರಿ ಸಂಗ್ರಹಣೆಗಾಗಿ ನಾಸಾದಿಂದ “OSIRIS-Rex” ಬಾಹ್ಯಕಾಶ ನೌಕೆ ಅಮೆರಿಕಾದ ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (ನಾಸಾ) “101955 ಬೆನ್ನು ಕ್ಷುದ್ರಗ್ರಹ (Bennu Asteroid)”ನ ಅಧ್ಯಯನಕ್ಕಾಗಿ “ಒಸಿರಿಸ್-ರೆಕ್ಸ್” ಬಾಹ್ಯಕಾಶ ನೌಕೆಯನ್ನು ಹಾರಿ ಬಿಟ್ಟಿದೆ. OSIRIS-Rex  ಎಂದರೆ Origins, Spectral Interpretation, Resource Identification, Security-Regolith Explorer ಎಂದರ್ಥ. ಈ ನೌಕೆಯು ಕ್ಷುದ್ರಗ್ರಹ ಅಧ್ಯಯನಕ್ಕಾಗಿ ಅಭಿವೃದ್ದಿಪಡಿಸಿರುವ ನಾಸಾದ ಮೊದಲ ಬಾಹ್ಯಕಾಶ ನೌಕೆಯಾಗಿದೆ. ಅಟ್ಲಾಸ್ V ರಾಕೆಟ್ ಬಳಸಿ ಕೇಪ್ ಕನವರೆಲ್ ಏರ್ ಫೋರ್ಸ್…

Read More

ಪ್ರಚಲಿತ ವಿದ್ಯಮಾನಗಳು- ಸೆಪ್ಟೆಂಬರ್ 8, 2016

ಸೆಪ್ಟೆಂಬರ್ 8: ಅಂತಾರಾಷ್ಟ್ರೀಯ ಸಾಕ್ಷರತಾ ದಿನ ಅಂತಾರಾಷ್ಟ್ರೀಯ ಸಾಕ್ಷರತಾ ದಿನವನ್ನು ಪ್ರತಿ ವರ್ಷ ಸೆಪ್ಟೆಂಬರ್ 8 ರಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಸಮಾಜ ಮತ್ತು ಸಮುದಾಯಕ್ಕೆ ಸಾಕ್ಷರತೆಯ ಮಹತ್ವವನ್ನು ಒತ್ತಿಹೇಳುವುದು ಈ ದಿನದ ಮುಖ್ಯ ಉದ್ದೇಶ. ಅಂತಾರಾಷ್ಟ್ರೀಯ ಸಾಕ್ಷರತಾ ದಿನವನ್ನು ಯುನೆಸ್ಕೋ 1966 ರಿಂದ ಆಚರಿಸುತ್ತಿದ್ದು, ಈ ವರ್ಷ 50ನೇ ಸಾಕ್ಷರತಾ ದಿನವನ್ನ ಆಚರಿಸಲಾಗುತ್ತಿದೆ. ರಾಷ್ಟ್ರೀಯ ಸಾಕ್ಷರತಾ ಮಿಷನ್ ಪ್ರಾಧಿಕಾರ ಈ ದಿನದಂದು ಭಾರತದಾದ್ಯಂತ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಾಕ್ಷರತಾ ದಿನವನ್ನು ಆಚರಿಸಲಾಗುತ್ತದೆ. ದೇಶದಲ್ಲಿ ಅನಕ್ಷರತೆಯನ್ನು ತೊಲಗಿಸುವ…

Read More

ಪ್ರಚಲಿತ ವಿದ್ಯಮಾನಗಳು- ಸೆಪ್ಟೆಂಬರ್ 7, 2016

“ಶ್ರೀಲಂಕಾ ಮಲೇರಿಯಾ ಮುಕ್ತರಾಷ್ಟ್ರ” ವಿಶ್ವ ಆರೋಗ್ಯ ಸಂಸ್ಥೆ ಘೋಷಣೆ ದ್ವೀಪ ರಾಷ್ಟ್ರ ಶ್ರೀಲಂಕಾವನ್ನು ಮಲೇರಿಯಾ ಮುಕ್ತರಾಷ್ಟ್ರವೆಂದು ವಿಶ್ವ ಆರೋಗ್ಯ ಸಂಸ್ಥೆ ಅಧಿಕೃತವಾಗಿ ಘೋಷಿಸಿದೆ. ಆ ಮೂಲಕ ಆಗ್ನೇಯ ಏಷ್ಯಾದಲ್ಲಿ ಮಲೇರಿಯಾ ರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಿದ ಎರಡನೇ ರಾಷ್ಟ್ರವೆನಿಸಿದೆ. ಈ ಮುಂಚೆ 2015 ರಲ್ಲಿ ಮಾಲ್ಡೀವ್ಸ್ ಮಲೇರಿಯಾ ಮುಕ್ತರಾಷ್ಟ್ರವೆನಿಸಿತ್ತು. ಶ್ರೀಲಂಕಾದ ಕೊಲೊಂಬೊದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಹಮ್ಮಿಕೊಂಡಿದ್ದ 69ನೇ ಆಗ್ನೇಯ ಏಷ್ಯಾ ವಲಯ ಸಭೆಯಲ್ಲಿ ಘೋಷಣೆ ಮಾಡಲಾಗಿದೆ. ಜೊತೆಗೆ ಸಾರ್ವಜನಿಕ ಆರೋಗ್ಯ ಕ್ಷೇತ್ರಕ್ಕೆ ಮಹತ್ವ ನೀಡಿರುವ ಹಿನ್ನಲೆಯಲ್ಲಿ…

Read More

ಪ್ರಚಲಿತ ವಿದ್ಯಮಾನಗಳು- ಸೆಪ್ಟೆಂಬರ್ 6, 2016

ಪೋಪ್ ಫ್ರಾನ್ಸಿಸ್ ರವರಿಂದ ಮದರ್ ತೆರೆಸಾಗೆ ಸಂತ ಪದವಿ ಪ್ರದಾನ ಬಡವರ ಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟು ವಿಶ್ವ ಮನ್ನಣೆಗಳಿಸಿದ ಮದರ್ ತೆರೆಸಾ ಅವರಿಗೆ ಸಂತ ಪದವಿ ಪ್ರದಾನ ಮಾಡಲಾಯಿತು. ವ್ಯಾಟಿಕನ್‌ನ ಸೇಂಟ್‌ ಪೀಟರ್ ಸ್ಕ್ವೇರ್‌ನಲ್ಲಿ ನಡೆದ ಸಮಾರಂಭದಲ್ಲಿ ಪೋಪ್‌ ಫ್ರಾನ್ಸಿಸ್‌ ಅವರು ತೆರೆಸಾ ಅವರಿಗೆ ಸಂತ ಪದವಿ ಪ್ರದಾನ ಮಾಡಿದರು. ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಭಾರತದ ನಿಯೋಗದ ನೇತೃತ್ವವಹಿಸಿದ್ದರು. ತೆರೆಸಾ ಅವರು ಸಂತ ಪದವಿ ಪಡೆದ ಭಾರತದ ನಾಲ್ಕನೇಯವರು. ಈ ಹಿಂದೆ…

Read More

ಪ್ರಚಲಿತ ವಿದ್ಯಮಾನಗಳು- ಸೆಪ್ಟೆಂಬರ್ 5, 2016

ವಿದೇಶಿ ಬಂಡವಾಳ ಹೂಡಿಕೆದಾರರಿಗೆ ಖಾಯಂ ಭಾರತೀಯ ನಿವಾಸಿ ಸ್ಥಾನಮಾನ ನೀಡಲು ಕೇಂದ್ರ ಒಪ್ಪಿಗೆ ಭಾರತದಲ್ಲಿ ಬಂಡವಾಳ ಹೂಡುವ ವಿದೇಶಿಯರಿಗೆ ಖಾಯಂ ಭಾರತೀಯ ನಿವಾಸಿ (Permanent Residency Status) ನೀಡುವ ಯೋಜನೆಗೆ ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿದೆ. ಆದರೆ ಈ ಯೋಜನೆಯು ಕೇಂದ್ರ ಸರ್ಕಾರ ವಿದೇಶಿ ನೇರ ಬಂಡವಾಳ ಹೂಡಿಕೆ ನಿಯಮಕ್ಕೆ ಕಾಲಕಾಲಕ್ಕೆ ತರುವ ಬದಲಾವಣೆಗೆ ಒಳಪಟ್ಟಿರುತ್ತದೆ. ದೇಶದಲ್ಲಿ ವಿದೇಶಿ ಹೂಡಿಕೆ ಹಾಗೂ ಭಾರತ ಸರ್ಕಾರದ “ಮೇಕ್ ಇನ್ ಇಂಡಿಯಾ” ಯೋಜನೆಯ ಉತ್ತೇಜನಕ್ಕೆ ಇದು ಸಹಕಾರಿಯಾಗಲಿದೆ ಎನ್ನಲಾಗಿದೆ. ಪ್ರಮುಖಾಂಶಗಳು:…

Read More