“ಶ್ರೀಲಂಕಾ ಮಲೇರಿಯಾ ಮುಕ್ತರಾಷ್ಟ್ರ” ವಿಶ್ವ ಆರೋಗ್ಯ ಸಂಸ್ಥೆ ಘೋಷಣೆ

ದ್ವೀಪ ರಾಷ್ಟ್ರ ಶ್ರೀಲಂಕಾವನ್ನು ಮಲೇರಿಯಾ ಮುಕ್ತರಾಷ್ಟ್ರವೆಂದು ವಿಶ್ವ ಆರೋಗ್ಯ ಸಂಸ್ಥೆ ಅಧಿಕೃತವಾಗಿ ಘೋಷಿಸಿದೆ. ಆ ಮೂಲಕ ಆಗ್ನೇಯ ಏಷ್ಯಾದಲ್ಲಿ ಮಲೇರಿಯಾ ರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಿದ ಎರಡನೇ ರಾಷ್ಟ್ರವೆನಿಸಿದೆ. ಈ ಮುಂಚೆ 2015 ರಲ್ಲಿ ಮಾಲ್ಡೀವ್ಸ್ ಮಲೇರಿಯಾ ಮುಕ್ತರಾಷ್ಟ್ರವೆನಿಸಿತ್ತು.

  • ಶ್ರೀಲಂಕಾದ ಕೊಲೊಂಬೊದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಹಮ್ಮಿಕೊಂಡಿದ್ದ 69ನೇ ಆಗ್ನೇಯ ಏಷ್ಯಾ ವಲಯ ಸಭೆಯಲ್ಲಿ ಘೋಷಣೆ ಮಾಡಲಾಗಿದೆ. ಜೊತೆಗೆ ಸಾರ್ವಜನಿಕ ಆರೋಗ್ಯ ಕ್ಷೇತ್ರಕ್ಕೆ ಮಹತ್ವ ನೀಡಿರುವ ಹಿನ್ನಲೆಯಲ್ಲಿ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ರವರಿಗೆ ವಿಶ್ವ ಆರೋಗ್ಯ ಸಂಸ್ಥೆ “ಎಕ್ಸಲೆನ್ಸ್ ಇನಲ್ ಪಬ್ಲಿಕ್ ಹೆಲ್ತ್” ಪ್ರಶಸ್ತಿಯನ್ನು ನೀಡಿದೆ.
  • ಕಳೆದ ಆರು ವರ್ಷಗಳ ಹಿಂದೆ ಶ್ರೀಲಂಕಾದಲ್ಲಿ ಮಲೇರಿಯಾ ಪ್ರಕರಣ ಅಧಿಕ ಪ್ರಮಾಣದಲ್ಲಿ ಕಂಡುಬಂದಿತ್ತು. ಆದರೆ ಸರ್ಕಾರ ಕೈಗೊಂಡ ಅನೇಕ ಕ್ರಮಗಳು ಫಲಪ್ರದವಾದ ಕಾರಣ ಕಳೆದ 3.5 ವರ್ಷದಲ್ಲಿ ಯಾವುದೇ ಪ್ರಕರಣ ಪತ್ತೆಯಾಗಿಲ್ಲ.

ಮಲೇರಿಯಾ:

  • ಮಲೇರಿಯಾ ರೋಗವಾಹಕ ಪ್ರೋಟೊಸೋವನ್‌ ಪರಾವಲಂಬಿಗಳ ಮೂಲಕ ಹರಡುವ ಒಂದು ಸಾಂಕ್ರಾಮಿಕ ರೋಗ.
    ಸಾಮಾನ್ಯವಾಗಿ ಸೋಂಕಿತ ಹೆಣ್ಣು “ಅನಾಫಿಲಿಸ್‌” ಸೊಳ್ಳೆ ಕಚ್ಚುವುದರಿಂದ ಜನರು ಮಲೇರಿಯಾ ರೋಗಕ್ಕೆ ಈಡಾಗುತ್ತಾರೆ. ಕೇವಲ ಅನಾಫಿಲಿಸ್‌ ಸೊಳ್ಳೆಗಳು ಮಾತ್ರ ಮಲೇರಿಯಾವನ್ನು ಹರಡಬಲ್ಲದು;
  • ಪ್ರತಿ ವರ್ಷ, ಸುಮಾರು 350-500 ದಶಲಕ್ಷ ಮಲೇರಿಯಾ ಪ್ರಕರಣಗಳು ಪತ್ತೆಯಾಗುತ್ತಿದ್ದು, ಒಂದರಿಂದ ಮೂರು ದಶಲಕ್ಷ ಜನರು ಪ್ರಾಣ ಕಳೆದುಕೊಂಡಿದ್ದುಂಟು; ಇವರಲ್ಲಿ ಹೆಚ್ಚಿನವರು ಆಫ್ರಿಕಾ ಖಂಡದ ಉಪ-ಸಹಾರಾ ವಲಯದಲ್ಲಿನ ಸಣ್ಣ ಮಕ್ಕಳು.
  • ಪ್ಲಾಸ್ಮೋಡಿಯಂ ಜಾತಿಗೆ ಸೇರಿರುವ ಪ್ರೋಟೊಸೋವನ್‌ ಪರಾವಲಂಬಿಯು ಈ ರೋಗಕ್ಕೆ ಕಾರಣ. ಪ್ಲಾಸ್ಮೋಡಿಯಂ ಪರಾವಲಂಬಿಯ ಐದು ಜಾತಿಗಳು ಮನುಷ್ಯರಿಗೆ ಸೋಂಕು ತಗುಲಿಸಬಹುದು; ರೋಗದ ಅತಿ ಗುರುತರವಾದ ಸ್ವರೂಪಕ್ಕೆ ಪ್ಲಾಸ್ಮೋಡಿಯಂ ಫಾಲ್ಸಿಪಾರಮ್‌ ಕಾರಣ. ಪ್ಲಾಸ್ಮೋಡಿಯಂ ವೈವ್ಯಾಕ್ಸ್‌, ಪ್ಲಾಸ್ಮೋಡಿಯಂ ಓವಲೆ, ಮತ್ತು ಪ್ಲಾಸ್ಮೋಡಿಯಂ ಮಲೇರಿಯೆ ಹುಟ್ಟುಹಾಕುವ ಮಲೇರಿಯಾ, ಮನುಷ್ಯರಲ್ಲಿ ತೀಕ್ಷ್ಣವಲ್ಲದ ರೋಗಕ್ಕೆ ಕಾರಣವಾಗುತ್ತದೆ.
  • ಪ್ರತಿ ವರ್ಷ ಏಪ್ರಿಲ್ 25 ರಂದು ವಿಶ್ವ ಮಲೇರಿಯಾ ದಿನವನ್ನು ಆಚರಿಸಲಾಗುತ್ತದೆ.

ಬ್ರಿಕ್ಸ್ ಸಿನಿಮಾ ಉತ್ಸವ: ಕನ್ನಡದ ತಿಥಿ ಚಿತ್ರಕ್ಕೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ

ವಿಶ್ವಮನ್ನಣೆಗಳಿಸಿರುವ ಕನ್ನಡದ ಹೆಮ್ಮೆಯ ಸಿನಿಮಾ “ತಿಥಿ” ನವದೆಹಲಿಯಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಚೊಚ್ಚಲ ಬ್ರಿಕ್ಸ್ ಸಿನಿಮಾ ಉತ್ಸವದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಭಾಜನವಾಗಿದೆ. ಆ ಮೂಲಕ ನೂರಾರು ಕೋಟಿ ರೂ. ವೆಚ್ಚದಲ್ಲಿ ತಯಾರಾಗಿದ್ದ ರಾಜಮೌಳಿ ನಿರ್ದೇಶನದ ತೆಲುಗಿನ ಸೂಪರ್ ಹಿಟ್ ಚಿತ್ರ “ಬಾಹುಬಲಿ’, ಹಿಂದಿಯ ಬಾಜೀರಾವ್ ಮಸ್ತಾನಿ ಮತ್ತು ಕೌಶಿಕ್ ಗಂಗೂಲಿ ನಿರ್ದೇಶನದ ಸಿನೆಮಾವಾಲಾ ಸೇರಿದಂತೆ ಇತರೆ ಚಿತ್ರಗಳನ್ನು ಹಿಂದಿಕ್ಕಿದೆ. ಬ್ರಿಕ್ಸ್ ರಾಷ್ಟ್ರಗಳ ಚಲನಚಿತ್ರೋತ್ಸವದಲ್ಲಿ ಭಾರತ, ರಷ್ಯಾ, ಚೀನಾ, ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್ ದೇಶಗಳ ತಲಾ 4 ಚಿತ್ರಗಳು ಸ್ಪರ್ಧಿಸಿದ್ದವು. ಬ್ರಿಕ್ಸ್ ಸಿನಿಮಾ ಉತ್ಸವಕ್ಕೆ ಸೆಪ್ಟೆಂಬರ್ 2 ರಂದು ದೆಹಲಿಯಲ್ಲಿ ಚಾಲನೆ ನೀಡಲಾಗಿತ್ತು.

ಇತರೆ ಪ್ರಶಸ್ತಿ:

  • ಅತ್ಯುತ್ತಮ ಚಿತ್ರ: ತಿಥಿ
  • ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ: ಹೂಒ ಜಿಯಾನ್ಕಿ (ಚೀನಾ)
  • ಅತ್ಯುತ್ತಮ ನಟ: ಥಾಬೊ ರಮ್ಟ್ಸಿ (ದಕ್ಷಿಣ ಆಫ್ರಿಕಾ)
  • ಅತ್ಯುತ್ತಮ ನಟಿ: ಯುಲಿಯ ಪೆರೆಸಿಲ್ದ್ (ರಷ್ಯಾ)
  • ತೀರ್ಪುಗಾರರ ವಿಶೇಷ ಪ್ರಶಸ್ತಿ: ಬ್ರೆಜಿಲ್ ನ ಫಿಲಿಪ್ಪೆ ಬರ್ಸಿನ್ಸ್ಕಿ (ಬಿಟ್ವೀನ್ ವ್ಯಾಲಿ ಚಿತ್ರಕ್ಕಾಗಿ)

ಸೆಪ್ಟೆಂಬರ್ 5: ರಾಷ್ಟ್ರೀಯ ಶಿಕ್ಷಕರ ದಿನ

ಪ್ರತಿ ವರ್ಷ ಸೆಪ್ಟೆಂಬರ್ 5 ರಂದು ರಾಷ್ಟ್ರೀಯ ಶಿಕ್ಷಕರ ದಿನವನ್ನು ಭಾರತದಾದ್ಯಂತ ಆಚರಿಸಲಾಗುತ್ತದೆ. ಭಾರತದ ಮೊದಲ ಉಪರಾಷ್ಟ್ರಪತಿ ಮತ್ತು ಎರಡನೇ ರಾಷ್ಟ್ರಪತಿಗಳಾದ ಡಾ.ಸರ್ವಪಲ್ಲಿ ರಾಧಕೃಷ್ಣನ್ ಅವರ ಜನ್ಮದಿನವನ್ನ 1962 ರಿಂದ ರಾಷ್ಟ್ರೀಯ ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತಿದೆ. ರಾಷ್ಟ್ರೀಯ ಶಿಕ್ಷಕರ ದಿನವನ್ನ ರಾಷ್ಟ್ರವ್ಯಾಪ್ತಿ ಶಾಲೆಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಗುವುದು. ಈ ದಿನದಂದು ಶಿಕ್ಷಣ ಕ್ಷೇತ್ರಕ್ಕೆ ಅತ್ಯುತ್ತಮ ಸೇವೆ ನೀಡಿದ ಶಿಕ್ಷಕರಿಗೆ ಪ್ರಶಸ್ತಿಗಳನ್ನು ನೀಡಲಾಗುವುದು.

ರಾಧಾಕೃಷ್ಣನ್ ಬಗ್ಗೆ:

  • ಡಾ. ಎಸ್ ರಾಧಾಕೃಷ್ಣನ್ ಅವರು ಸೆಪ್ಟೆಂಬರ್ 5, 1888 ರಲ್ಲಿ ಅಂದಿನ ಬ್ರಿಟಿಷ್ ಮದ್ರಾಸ್ ಪ್ರೆಸಿಡೆನ್ಸಿಗೆ ಸೇರಿದ್ದ ಥಿರುತ್ತನಿ ಯಲ್ಲಿ ಜನಿಸಿದರು.
  • ಶಿಕ್ಷಣದ ಬಗ್ಗೆ ಅತ್ಯಂತ ಗೌರವ, ಪ್ರೀತಿ, ನಿಷ್ಠೆಯನ್ನು ಹೊಂದಿದ್ದದವರು. ಸ್ವತಃ ಶಿಕ್ಷಕರಾಗಿ ಹಲವಾರು ವರ್ಷಗಳ ಕಾಲ ಸೇವೆಗೈದಿರುವ ಡಾ.ರಾಧಾಕೃಷ್ಣನ್, ಭಾರತ ಕಂಡ ಅಗ್ರಗಣ್ಯ ಶಿಕ್ಷಕರಲ್ಲಿ ಪ್ರಮುಖರಾಗಿದ್ದಾರೆ.

ಅಲಂಕರಿಸಿದ ಹುದ್ದೆಗಳು:

  • ಡಾ.ರಾಧಾಕೃಷ್ಣನ್ ಅವರು ಭಾರತದ ಮೊದಲ ಉಪರಾಷ್ಟ್ರಪತಿ. 1952 ರಿಂದ 1962 ವರೆಗೆ ಇವರು ಉಪರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದಾರೆ. ಭಾರತದ ಎರಡನೇ ರಾಷ್ಟ್ರಪತಿಯಾಗಿ 1962 ರಿಂದ 1967 ವರೆಗೆ ಸೇವೆ ಸಲ್ಲಿಸಿದ್ದಾರೆ.

ಪ್ರಶಸ್ತಿಗಳು:

  • ಭಾರತ ರತ್ನ (1954), ಬ್ರಿಟಿಷ್ ರಾಯಲ್ ಆರ್ಡರ್ ಆಫ್ ಮೆರಿಟ್ (1963) ಸೇರಿದಂತೆ ಹಲವು ಪ್ರಶಸ್ತಿಗಳನ್ನ ಪಡೆದುಕೊಂಡಿದ್ದಾರೆ. 1954 ರಲ್ಲಿ ಮೊದಲ ಬಾರಿಗೆ ಭಾರತ ರತ್ನ ಪ್ರಶಸ್ತಿಯನ್ನು ರಾಧಾಕೃಷ್ಣನ್ ಸೇರಿದಂತೆ ರಾಜಕಾರಣಿ ಸಿ.ರಾಜಗೋಪಾಲಚಾರಿ ಮತ್ತು ವಿಜ್ಞಾನಿ ಸಿ.ವಿ.ರಾಮನ್ ಅವರಿಗೆ ನೀಡಲಾಯಿತು.

ಖ್ಯಾತ ಅಸ್ಸಾಮಿ ಕವಿ “ನಳಿನಿಧರ್ ಭಟ್ಟಚಾರ್ಯ” ವಿಧಿವಶ

ಪ್ರಸಿದ್ದ ಅಸ್ಸಾಮಿ ಕವಿ, ಲೇಖಕ ಮತ್ತು ಸಾಹಿತ್ಯ ವಿಮರ್ಶಕ ನಳಿನಿಧರ್ ಭಟ್ಟಚಾರ್ಯ ರವರು ವಯೋಸಹಜ ಅನಾರೋಗ್ಯದಿಂದ ಗುವಾಹಟಿಯಲ್ಲಿ ನಿಧನರಾದರು. ಅವರಿಗೆ 95 ವರ್ಷ ವಯಸ್ಸಾಗಿತ್ತು. ಗುವಾಹಟಿಯ ಆರ್ಯ ವಿದ್ಯಾಪೀಠ ಕಾಲೇಜಿನ ಮಾಜಿ ಪ್ರಾಂಶುಪಾಲರಾಗಿದ್ದ ಇವರು ಅಸ್ಸಾಂನ ಪ್ರಖ್ಯಾತ ಲೇಖಕ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಬಿರೇಂದ್ರಕುಮಾರ್ ಭಟ್ಟಚಾರ್ಯ ರವರ ಸಹೋದರ.

  • 1921 ರಲ್ಲಿ ಅಸ್ಸಾಂನ ಜೊರ್ಹತ್ ಬಳಿಯ ಹಳ್ಳಿಯಲ್ಲಿ ಜನಿಸಿದರು. ಪ್ರಾರಂಭದಲ್ಲಿ ಕವಿಯಾಗಿ ಕಾಣಿಸಿಕೊಂಡರಾದರು ನಂತರದ ದಿನಗಳಲ್ಲಿ ಪ್ರಬಂಧಕಾರ ಹಾಗೂ ಸಾಹಿತ್ಯ ವಿಮರ್ಶಕರಾಗಿ ಹೆಚ್ಚು ಖ್ಯಾತಿ ಪಡೆದರು.
  • “ಚೆರಶಲಿರ್ ಮಲಿತ”, “ಐ ಕುನ್ವೊಲೈಟ್”, “ಅಹಟ ಸಪೊನ್”, “ನೊನಿ ಅಸನೆ ಘರತ್” ಇವರ ಪ್ರಸಿದ್ದ ಕವನ ಸಂಕಲನಗಳಾಗಿವೆ.

ಪ್ರಶಸ್ತಿಗಳು:

  • 1983 ರಲ್ಲಿ ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ
  • 1991 ರಲ್ಲಿ ಭಾರತೀಯ ಭಾಷಾ ಪರಿಷತ್ ಪ್ರಶಸ್ತಿ
  • 2002 ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
  • 2006 ಅಸ್ಸಾಂ ವ್ಯಾಲಿ ಸಾಹಿತ್ಯ ಪ್ರಶಸ್ತಿ

2016 ಇಟಾಲಿಯನ್ ಗ್ರಾಂಡ್ ಫ್ರಿಕ್ಸ್: ನಿಕೊ ರೋಸ್ಬರ್ಗ್ ಚಾಂಪಿಯನ್

ಮರ್ಸಿಡೇಸ್ ಚಾಲಕ ನಿಕೊ ರೋಸ್ಬರ್ಗ್ ಅವರು 2016 ಇಟಾಲಿಯನ್ ಗ್ರಾಂಡ್ ಫ್ರಿಕ್ಸ್ ಫಾರ್ಮೂಲಾ-1 ರೇಸ್ ನಲ್ಲಿ ವಿಜೇತರಾಗಿ ಹೊರಹೊಮ್ಮಿದರು. ಪ್ರಸ್ತಕ ವರ್ಷದಲ್ಲಿ ಇದು ರೋಸ್ಬರ್ಗ್ ಅವರಿಗೆ ಲಭಿಸಿದ 7ನೇ ಪ್ರಶಸ್ತಿಯಾಗಿದ್ದು, ಒಟ್ಟಾರೆಯಾಗಿ 11ನೇ ಪ್ರಶಸ್ತಿಯಾಗಿದೆ. ಈ ವರ್ಷದಲ್ಲಿ ಬ್ರೆಲ್ಜಿಯನ್ ಗ್ರಾಂಡ್ ಫ್ರಿಕ್ಸ್,  ಬಹ್ರೆನ್ ಗ್ರಾಂಡ್ ಫ್ರಿಕ್ಸ್, ಆಸ್ಟ್ರೇಲಿಯನ್ ಗ್ರಾಂಡ್ ಫ್ರಿಕ್ಸ್, ಚೀನೀಸ್ ಮತ್ತು ರಷ್ಯನ್ ಗ್ರಾಂಡ್ ಫ್ರಿಕ್ಸ್ ಗೆದಿದ್ದಾರೆ.

ಪ್ರಶಸ್ತಿ ವಿವರ:

  • ಮೊದಲ ಪ್ರಶಸ್ತಿ: ನಿಕೊ ರೋಸ್ಬರ್ಗ್, ಜರ್ಮನಿ
  • ಎರಡನೇ ಪ್ರಶಸ್ತಿ: ಲೆವಿಸ್ ಹ್ಯಾಮಿಲ್ಟನ್, ಅಮೆರಿಕಾ
  • ಮೂರನೇ ಪ್ರಶಸ್ತಿ: ಸೆಬಾಸ್ಟಿಯನ್ ವೆಟಾಲ್, ಜರ್ಮನಿ
  • ನಾಲ್ಕನೇ ಪ್ರಶಸ್ತಿ: ಕಿಮಿ ರೈಕೊನೆನ್, ಫಿನ್ ಲ್ಯಾಂಡ್
  • ಐದನೇ ಪ್ರಶಸ್ತಿ: ಡೆನಿಯಲ್ ರಿಕ್ಕಿಯಾರ್ಡೊ, ಆಸ್ಟ್ರೇಲಿಯಾ

2 Thoughts to “ಪ್ರಚಲಿತ ವಿದ್ಯಮಾನಗಳು- ಸೆಪ್ಟೆಂಬರ್ 7, 2016”

  1. Anonymous

    Born of radakrishnan date wrong

    1. karunadu

      thank you updated

Leave a Comment

This site uses Akismet to reduce spam. Learn how your comment data is processed.