ಪ್ಯಾರಿಸ್ ಒಪ್ಪಂದದಿಂದ ಹೊರಗುಳಿಯಲು ಅಮೆರಿಕ ನಿರ್ಧಾರ

ಹವಾಮಾನ ಬದಲಾವಣೆಯನ್ನು ತಡೆಯುವುದಕ್ಕಾಗಿ ಜಾಗತಿಕ ಮಟ್ಟದಲ್ಲಿ 2015ರಲ್ಲಿ ಮಾಡಲಾದ ಮಹತ್ವದ ಪ್ಯಾರಿಸ್‌ ಒಪ್ಪಂದದಿಂದ ಅಮೆರಿಕ ಹೊರಗುಳಿಯುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಘೋಷಿಸಿದ್ದಾರೆ. ‘ಪ್ಯಾರಿಸ್‌ ಒಪ್ಪಂದವು ಅಮೆರಿಕ ಹಾಗೂ ಅದರ ಅರ್ಥವ್ಯವಸ್ಥೆಗೆ ಮಾರಕವಾಗಿದೆ ಎಂದು ಎಂದು ಟ್ರಂಪ್ ಹೇಳಿದ್ದಾರೆ.

            ಅಮೆರಿಕದ ಈ ನಿರ್ಧಾರದಿಂದ ಪ್ಯಾರಿಸ್ ಒಪ್ಪಂದದಿಂದ ಹಿಂದುಳಿದಿರುವ ಅಲ್ಪಸಂಖ್ಯಾತ ರಾಷ್ಟ್ರಗಳಾದ ಸಿರಿಯಾ ಮತ್ತು ನಿಕರಾಗುವಾ ಸೇರಿದಂತೆ ಇತರೆ ರಾಷ್ಟ್ರಗಳ ಪಟ್ಟಿಗೆ ಅಮೆರಿಕಾ ಸಂಯುಕ್ತ ಸಂಸ್ಥಾನ ಸೇರ್ಪಡೆಗೊಳ್ಳಲಿದೆ. ಪ್ಯಾರಿಸ್ ಒಪ್ಪಂದಕ್ಕೆ 2015ರಲ್ಲಿ 195 ರಾಷ್ಟ್ರಗಳಿಂದ ಸಹಿ ಮಾಡಿದ್ದು ಕಳೆದ ವರ್ಷ ನವೆಂಬರ್ ನಿಂದ ಜಾರಿಗೆ ಬಂದಿದೆ.

ನಿರ್ಧಾರಕ್ಕೆ ಕಾರಣ:

ಪ್ಯಾರಿಸ್ ಒಪ್ಪಂದವೂ ಭಾರತ ಮತ್ತು ಚೀನಾದಂತಹ ದೇಶಗಳ ಮೇಲೆ ಕಠಿಣ ನಿರ್ಬಂಧ ಹೇರದೆ ಲಾಭಕರವಾಗಿದ್ದು, ಅಮೆರಿಕಕ್ಕೆ ಇದರಿಂದ ಅನ್ಯಾಯವಾಗಲಿದೆ ಎಂಬ ಕಾರಣದಿಂದ ಅಮೆರಿಕ ಈ ನಿರ್ಧಾರ ತಳಿದಿದೆ. ಪ್ಯಾರಿಸ್ ಒಪ್ಪಂದದ ಅನುಷ್ಠಾನದಿಂದ ಅಮೆರಿಕಾದ ಆರ್ಥಿಕ ವಲಯಗಳಾದ ಕಾಗದ, ಸಿಮೆಂಟ್, ಕಬ್ಬಿಣ ಮತ್ತು ಉಕ್ಕಿನ, ಕಲ್ಲಿದ್ದಲು ಮತ್ತು ನೈಸರ್ಗಿಕ ಅನಿಲ ಕ್ಷೇತ್ರಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದಾಗಿ ಟ್ರಂಪ್ ಹೇಳಿದ್ದಾರೆ. ಇದರಿಂದ ಅಮೆರಿಕದ ಜಿಡಿಪಿಗೆ 3 ಟ್ರಿಲಿಯನ್ ಡಾಲರ್ ನಷ್ಟವನ್ನು ಉಂಟಾಗಲಿದ್ದು, 6.5 ದಶಲಕ್ಷ ಕೈಗಾರಿಕಾ ಉದ್ಯೋಗಗಳು ನಶಿಸಲಿದ್ದು, ಅಮೆರಿಕ ಕುಟುಂಬಗಳಿಗೆ $7,000ರಷ್ಟು ವಾರ್ಷಿಕ ಆದಾಯದಲ್ಲಿ ಕಡಿಮೆ ಆಗಲಿದೆ.

ಪರಿಣಾಮ:

ವಿಶ್ವದ ಎರಡನೇ ಅತಿ ದೊಡ್ಡ ಹಸಿರುಮನೆ ಅನಿಲಗಳ ಹೊರಸೂಸುವಿಕೆ ರಾಷ್ಟ್ರ ಅಮೆರಿಕ.  ಒಪ್ಪಂದದಿಂದ ಹೊರಬಂದಿರುವ ಅಮೆರಿಕದ ಈ ನಿರ್ಧಾರ ಒಪ್ಪಂದದ ಭವಿಷ್ಯದ ಬಗ್ಗೆ ಪ್ರಶ್ನಿಯನ್ನು ಮೂಡಿಸಿದೆ. ಒಪ್ಪಂದದ ಬಗ್ಗೆ ಅಷ್ಟೇನು ಆಸಕ್ತಿ ವಹಿಸಿದ ಕೆಲವು ದೇಶಗಳು ಹವಾಮಾನ ಒಪ್ಪಂದವನ್ನು ತೊರೆಯುವಲ್ಲಿ ಅಮೆರಿಕದ ಮಾರ್ಗವನ್ನು ಅನುಸರಿಸಬಹುದು ಎಂಬ ಭೀತಿ ಶುರುವಾಗಿದೆ.

ಸಮುದ್ರ ಪರೀಕ್ಷೆಗೆ ಸ್ಕಾರ್ಪೀನ್ ಸರಣಿಯ ಎರಡನೆಯ ಜಲಾಂತರ್ಗಾಮಿ ನೌಕೆಖಾಂಡೇರಿಸಿದ್ದ

ಸ್ಕಾರ್ಪೀನ್ ಸರಣಿಯ ಎರಡನೆಯ ಜಲಾಂತರ್ಗಾಮಿ ನೌಕೆ ‘ಖಾಂಡೇರಿ’ ಸಮುದ್ರ ಪರೀಕ್ಷೆಗೆ ಮುಕ್ತವಾಗಿದೆ ಎಂದು ರಕ್ಷಣಾ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಐಎನ್ಎಸ್ ಖಾಂಡೇರಿ ಸ್ಕಾರ್ಪೀನ್ ಶ್ರೇಣಿಯ ಎರಡನೇ ಜಲಾಂತರ್ಗಾಮಿ ನೌಕೆಯಾಗಿದ್ದು, ಮುಂಬೈನ ಮಝಗಾನ್ ಡಾಕ್ ಲಿಮಿಟೆಡ್ ಅಭಿವೃದ್ದಿಪಡಿಸಿದೆ. ದೇಶೀಯವಾಗಿ ನಿರ್ಮಿಸುವ ಭಾರತದ ಪ್ರಯತ್ನದಲ್ಲಿನ ಮಹತ್ವದ ಹೆಜ್ಜೆ ಇದು ಎನ್ನಲಾಗಿದೆ. ಪ್ರಾಜೆಕ್ಟ್-75 ಅಡಿ ಭಾರತೀಯ ನೌಕಸೇನಾಗೆ ಅಭಿವೃದ್ದಿಪಡಿಸಲಾಗುತ್ತಿರುವ ಆರು ಸ್ಕಾರ್ಪೀನ್ ಶ್ರೇಣಿಯ ಜಲಾಂತರ್ಗಾಮಿ ನೌಕೆಗಳಲ್ಲಿ ಇದು ಎರಡನೇಯದು.

ಪ್ರಮುಖಾಂಶಗಳು:

  • ಛತ್ರಪತಿ ಶಿವಾಜಿ ನಿಯಂತ್ರಣದಲ್ಲಿದ್ದ ‘ಖಾಂಡೇರಿ’ ಕೋಟೆಯ ಹೆಸರನ್ನೇ ಈ ಜಲಾಂತರ್ಗಾಮಿಗೆ ಇಡಲಾಗಿದೆ. ಸಮುದ್ರದ ನಡುವೆ ಇದ್ದ ಈ ಕೋಟೆಯ ಕಾರಣದಿಂದಾಗಿ ಶಿವಾಜಿಯ ನೌಕಾದಳ 17ನೇ ಶತಮಾನದಲ್ಲಿ ಪಾರಮ್ಯ ಸಾಧಿಸಿತ್ತು ಎನ್ನಲಾಗಿದೆ. ಖಾಂಡೇರಿ ಟೈಗರ್ ಶಾರ್ಕಿನ ಮತ್ತೊಂದು ಹೆಸರು ಸಹ ಆಗಿದೆ.
  • ಸಾಂಪ್ರದಾಯಿಕ ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಿಸುವ ವಿಶ್ವದ ಕೆಲವೇ ದೇಶಗಳಲ್ಲಿ ಭಾರತವೂ ಒಂದು. ಫ್ರಾನ್ಸ್ನ ಡಿಸಿಎನ್‌ಎಸ್ ಕಂಪೆನಿಯ ಸಹಭಾಗಿತ್ವದಲ್ಲಿ ಮಜಗಾಂವ್ ಹಡಗುಕಟ್ಟೆಯಲ್ಲಿ
  • ಈ ಜಲಾಂತರ್ಗಾಮಿಯನ್ನು ಡಿಸೆಂಬರ್ವರೆಗೆ ಬಂದರಿನಲ್ಲಿ ಹಾಗೂ ಸಮುದ್ರದಲ್ಲಿ ಕಠಿಣ ಪರೀಕ್ಷೆಗಳಿಗೆ ಒಡ್ಡಲಾಗುತ್ತದೆ. ಜಲಾಂತರ್ಗಾಮಿಯ ಪ್ರತಿ ವ್ಯವಸ್ಥೆ ಎಷ್ಟು ಪರಿಣಾಮಕಾರಿ ಆಗಿದೆ ಎಂಬುದನ್ನು ಅಳೆಯಲಾಗುತ್ತದೆ. ಈ ಪರೀಕ್ಷೆಗಳು ಪೂರ್ಣಗೊಂಡ ನಂತರ ಜಲಾಂತರ್ಗಾಮಿಯನ್ನು ನೌಕಾಪಡೆಗೆ ಸೇರಿಸಲಾಗುತ್ತದೆ.
  • ಸ್ಕಾರ್ಪೀನ್ ಜಲಾಂತರ್ಗಾಮಿಗಳು ಡೀಸೆಲ್ ಮತ್ತು ವಿದ್ಯುತ್ ಚಾಲಿತ ಎಂಜಿನ್ ಹೊಂದಿವೆ.
  • ರಹಸ್ಯವಾಗಿ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ. ನಿಖರ ದಾಳಿ ನಡೆಸುವ ಶಸ್ತ್ರಾಸ್ತ್ರ ಬಳಸಿ ವೈರಿಗೆ ಭಾರಿ ಹಾನಿ ಉಂಟು ಮಾಡುವುದು. ನೌಕೆಗಳನ್ನು ಧ್ವಂಸಗೊಳಿಸುವ ಕ್ಷಿಪಣಿ, ಸ್ಫೋಟಕ ಬಳಸುವ ಸಾಮರ್ಥ್ಯ ಹೊಂದಿದೆ.
  • ಈ ಜಲಾಂತರ್ಗಾಮಿ ಎಲ್ಲಿದೆ ಎಂದು ಪತ್ತೆ ಮಾಡುವುದು ತೀರಾ ಕಷ್ಟ. ಶತ್ರು ದೇಶದ ಕಡೆಯಿಂದ ನುಗ್ಗುವ ಜಲಾಂತರ್ಗಾಮಿಗಳನ್ನು ಹಿಮ್ಮೆಟ್ಟಿಸಲು ಸಹ ಈ ಜಲಾಂತರ್ಗಾಮಿಗಳನ್ನು ಬಳಸಿಕೊಳ್ಳಬಹುದು. ಗುಪ್ತವಾಗಿ ಮಾಹಿತಿ ಕಲೆಹಾಕುವ ಕೆಲಸಕ್ಕೆ ಈ ನೌಕೆ ಹೇಳಿ ಮಾಡಿಸಿದಂತಿದೆ ಅರ್ಧ ಶತಮಾನದ ಸಂಭ್ರಮ ಭಾರತೀಯ ನೌಕಾಪಡೆಯ ಜಲಾಂತರ್ಗಾಮಿ ವಿಭಾಗವು ಈ ವರ್ಷದ ಡಿಸೆಂಬರ್ 8ರಂದು 50 ವರ್ಷಗಳನ್ನು ಪೂರೈಸಲಿದೆ. 1967ರ ಡಿಸೆಂಬರ್ 8ರಂದು ನೌಕಾಪಡೆಗೆ ಐಎನ್‌ಎಸ್ ಕಲ್ವರಿ ಜಲಾಂತರ್ಗಾಮಿಯನ್ನು ಹಸ್ತಾಂತರಿಸಲಾಯಿತು. ಅಂದಿನಿಂದ ಪ್ರತಿವರ್ಷ ಡಿಸೆಂಬರ್ 8ರಂದು ಜಲಾಂತರ್ಗಾಮಿ ದಿನ ಆಚರಿಸಲಾಗುತ್ತಿದೆ.

ಪ್ರಾಜೆಕ್ಟ್-75:

ಪ್ರಾಜೆಕ್ಟ್ 75ರ ಅಡಿಯಲ್ಲಿ ಭಾರತೀಯ ನೌಕಾಪಡೆಗೆ  2022 ರ ವೇಳೆಗೆ ಏರ್ ಇಂಡಿಪೆಂಡೆಂಟ್ ಪ್ರೊಪಲ್ಶನ್ ಸಿಸ್ಟಮ್ (ಎಐಪಿ) ತಂತ್ರಜ್ಞಾನದೊಂದಿಗೆ 6 ಮುಂದಿನ ಪೀಳಿಗೆಯ ಡೀಸಲ್ ಜಲಾಂತರ್ಗಾಮಿಗಳನ್ನು ನಿರ್ಮಿಸಲಾಗುವ ಉದ್ದೇಶವನ್ನು ಹೊಂದಲಾಗಿದೆ. ಯೋಜನೆಯನ್ನು ಅಕ್ಟೋಬರ್ 2005 ರಲ್ಲಿ ಫ್ರಾನ್ಸ್ನ ಡಿಸಿಎನ್ಎಸ್ನಿಂದ ನೆರವು ಮತ್ತು ತಂತ್ರಜ್ಞಾನ ವರ್ಗಾವಣೆಯೊಂದಿಗೆ ಮಾಡಿಕೊಳ್ಳಲಾದ ಒಪ್ಪಂದದಡಿ ನಿರ್ಮಿಸಲ್ಪಟ್ಟಿದೆ. ಸರಣಿಯ ಮೊದಲ ನೌಕೆ ಐಎನ್ಎಸ್ ಕಲ್ವಾರಿಯು ಸಮುದ್ರ ಪ್ರಯೋಗಗಳನ್ನು ಪೂರ್ಣಗೊಳಿಸುತ್ತಿದ್ದು, ಶೀಘ್ರದಲ್ಲೇ ಕಾರ್ಯಾರಂಭಗೊಳ್ಳಲಿದೆ. ಇತರ ನಾಲ್ಕು ಜಲಾಂತರ್ಗಾಮಿ ನೌಕೆಗಳು ಐಎನ್ಎಸ್ ಖಂಡೇರಿಯ ನಂತರ ಒಂಭತ್ತು ತಿಂಗಳ ಮಧ್ಯಂತರದಲ್ಲಿ ಬಿಡುಗಡೆಗೊಳ್ಳುವ ನಿರೀಕ್ಷೆಯಿದೆ.

ಕಾರ್ಪೋರೆಟ್ ಆಡಳಿತ: ಉದಯ್ ಕೋಟಕ್ ಸಮಿತಿ ರಚಿಸಿದ ಸೆಬಿ

ಮಾರುಕಟ್ಟೆ ನಿಯಂತ್ರಕ ಸೆಬಿಯು ಕೋಟಾಕ್ ಮಹೀಂದ್ರಾ ಬ್ಯಾಂಕಿನ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಉದಯ್ ಕೋಟಾಕ್ ಅವರ ನೇತೃತ್ವದಲ್ಲಿ ಕಾರ್ಪೊರೇಟ್ ಆಡಳಿತ ಸುಧಾರಣೆಗೆ ಸಮಿತಿಯನ್ನು ರಚಿಸಿದೆ. ಷೇರುಪೇಟೆಯಲ್ಲಿ ಪಟ್ಟಿಮಾಡಿದ ಕಂಪೆನಿಗಳ ಸಾಂಸ್ಥಿಕ ಆಡಳಿತದ ಗುಣಮಟ್ಟವನ್ನು ಸುಧಾರಿಸುವ ಗುರಿಯೊಂದಿಗೆ ಈ ಸಮಿತಿಯನ್ನು ರಚಿಸಲಾಗಿದೆ.

            ಉದಯ್ ಕೊಟಾಕ್ ನೇತೃತ್ವದ ಸಮಿತಿಯು ಕಾರ್ಪೊರೇಟ್ ಇಂಡಿಯಾ, ಸ್ಟಾಕ್ ಎಕ್ಸ್ಚೇಂಜ್, ವೃತ್ತಿಪರ ಸಂಸ್ಥೆಗಳು, ಹೂಡಿಕೆದಾರರ ಗುಂಪುಗಳು, ಚೇಂಬರ್ ಆಫ್ ಕಾಮರ್ಸ್, ಕಾನೂನು ಸಂಸ್ಥೆಗಳು, ಶಿಕ್ಷಣ ತಜ್ಞರು ಮತ್ತು ಸಂಶೋಧನಾ ವೃತ್ತಿಪರರು ಮತ್ತು ಸೆಬಿಯ ಪ್ರತಿನಿಧಿಗಳನ್ನು ಒಳಗೊಂಡಿರಲಿದೆ. ಸಮಿತಿಗೆ ನಾಲ್ಕು ತಿಂಗಳೊಳಗೆ ವರದಿಯನ್ನು ಸಲ್ಲಿಸುವಂತೆ ಸೂಚಿಸಲಾಗಿದೆ.

ಸಮಿತಿ ಮಾಡಲಿರುವ ಶಿಫಾರಸ್ಸುಗಳು:

  • ಸ್ವತಂತ್ರ ನಿರ್ದೇಶಕರ ಆತ್ಮವಿಶ್ವಾಸ ಮತ್ತು ಕಂಪೆನಿಯ ಕಾರ್ಯಾಚರಣೆಯಲ್ಲಿ ಅವರ ಸಕ್ರಿಯ ಭಾಗವಹಿಸುವಿಕೆಯನ್ನು ಖಾತರಿಪಡಿಸಿಕೊಳ್ಳುವುದು.
  • ವಹಿವಾಟುಗಳಿಗೆ ಸಂಬಂಧಿಸಿದ ಸುರಕ್ಷತೆ ಮತ್ತು ಅಭಿವ್ಯಕ್ತಿಗಳನ್ನು ಸುಧಾರಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಶಿಫಾರಸ್ಸು ಮಾಡುವುದು.
  • ಸಾಮಾನ್ಯ ಸಭೆಗಳಲ್ಲಿ ಪಾಲ್ಗೊಳ್ಳುವಿಕೆ ಹಾಗೂ ಮತದಾನ ಯ ಮೇಲೆ ಹೂಡಿಕೆದಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಕ್ರಮಗಳನ್ನು ಸೂಚಿಸುವುದು.
  • ಮಂಡಳಿ ಮೌಲ್ಯಮಾಪನ ಅಭ್ಯಾಸಗಳ ಪರಿಣಾಮಕಾರಿತ್ವವನ್ನು ಸುಧಾರಿಸಲು ಕ್ರಮವಹಿಸಲು ಶಿಫಾರಸ್ಸು ಮಾಡುವುದು.

3 Thoughts to “ಪ್ರಚಲಿತ ವಿದ್ಯಮಾನಗಳು-ಜೂನ್,10,2017”

  1. ಮೇಘನ.

    ತುಂಬಾ ಉಪಯುಕ್ತ ಮಾಹಿತಿಗಳು ನಮಗೆ ಇದರಿಂದ ದೊರೆಯುತ್ತಿವೆ. ಇನ್ನು ಹೆಚ್ಚಿನ ಮಾಹಿತಿಯನ್ನು ಬಿಡುಗಡೆ ಮಾಡಿ

  2. Harish

    Tottaly good but…. Little much Speed up the updtes…thank u sir.

  3. ಉದಯ

    ನಿಮ್ಮ ಸೇವೆಗೆ ನಾವು ಋಣಿ

Leave a Comment

This site uses Akismet to reduce spam. Learn how your comment data is processed.