ನ್ಯೂಟ್ರಾನ್ ನಕ್ಷತ್ರಗಳ ಅಧ್ಯಯನಕ್ಕೆ ಹೊಸ ಮಿಷನ್ ಆರಂಭಿಸಲಿರುವ ನಾಸಾ

ನ್ಯೂಟ್ರಾನ್ ನಕ್ಷತ್ರಗಳನ್ನು ಅಧ್ಯಯನ ಮಾಡಲು ಮೀಸಲಾಗಿರುವ ವಿಶ್ವದ ಮೊಟ್ಟಮೊದಲ ಮಿಷನ್ ಅನ್ನು ಪ್ರಾರಂಭಿಸಲು ನಾಸಾ ಸಜ್ಜಾಗಿದೆ. ನಾಸಾವು ಫಾಲ್ಕನ್ 9 ರಾಕೆಟ್ ಬಳಸಿ “ನ್ಯೂಟ್ರಾನ್ ಸ್ಟಾರ್ ಇಂಟೀರಿಯರ್ ಕಾಂಪೋಸಿಶನ್ ಎಕ್ಸ್ಪ್ಲೋರರ್ ಅಥವಾ NICER ಅನ್ನು ಪ್ರಾರಂಭಿಸಲಿದೆ.

            ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ದಲ್ಲಿ NICER ಅನ್ನು ಬಾಹ್ಯ ಪ್ಲೆಲೋಡ್ ಆಗಿ ಜೋಡಣೆ ಮಾಡಲಾಗುವುದು. ಸ್ಥಾಪನೆಯಾದ ಒಂದು ವಾರದ ನಂತರ, NICER ನ್ಯೂಟ್ರಾನ್ ನಕ್ಷತ್ರಗಳನ್ನು ವೀಕ್ಷಿಸಲು ಪ್ರಾರಂಭಿಸಲಿದೆ. ಈ ಮಿಷನ್ ವಿಶೇಷವಾಗಿ ಪಲ್ಸರ್ಗಳ ಮೇಲೆ ಕೇಂದ್ರೀಕರಿಸಲಿದೆ. ಈ ಕಾರ್ಯಾಚರಣೆಯ ಸಂದರ್ಭದಲ್ಲಿ, ಬಾಹ್ಯಾಕಾಶದಲ್ಲಿ ಪ್ರಪಂಚದ ಮೊದಲ ಎಕ್ಸ್-ರೇ ಸಂಚರಣೆ ಪ್ರದರ್ಶನವನ್ನು ಸಹ ನಾಸಾ ಕೈಗೊಳ್ಳಲಿದೆ.

ITTF URCಗೆ ಸದಸ್ಯರಾಗಿ ಗಣೇಶನ್ ನೀಲಕಂಠ ನೇಮಕ

ಗಣೇಶನ್ ನೀಲಕಂಠ ಅಯ್ಯರ್ ಅವರು ಅಂತರರಾಷ್ಟ್ರೀಯ ಟೇಬಲ್ ಟೆನಿಸ್ ಫೆಡರೇಶನ್ (ಐಟಿಟಿಎಫ್)ನ ಅಂಪೈರ್ ಮತ್ತು ರೆಫರೀಸ್ ಸಮಿತಿಯ (ಯುಆರ್ಸಿ) ಸದಸ್ಯರಾಗಿ ನೇಮಕಗೊಂಡದ್ದಾರೆ. ಆ ಮೂಲಕ ಐಐಟಿಎಫ್ ಯುಆರ್ಸಿಗೆ ನೇಮಕಗೊಂಡ ಮೊದಲ ಭಾರತೀಯ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಅಯ್ಯರ್ ಅವರು ಎರಡು ವರ್ಷಗಳ ಅವಧಿ ವರೆಗೆ ಸೇವೆ ಸಲ್ಲಿಸಲ್ಲಿದ್ದಾರೆ. ಇವರ ಸೇವಾಧಿಯನ್ನು ವಿಸ್ತರಿಸಬಹುದಾಗಿದೆ.

ಇದರೆ ಜೊತೆಗೆ ಗಣೇಶನ್ ನೀಲಕಂಠ ಅಯ್ಯರ್ ಅವರನ್ನು ITTF ಗೆ ಏಷ್ಯಾದ ತಾಂತ್ರಿಕ ಕಮಿಷನರ್ ಆಗಿ ಸಹ ಶಿಫಾರಸ್ಸು ಮಾಡಲಾಗಿದೆ. ಅವರು ಈ ಹುದ್ದೆಯಲ್ಲಿ ನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸಲಿದ್ದಾರೆ.

ಗಣೇಶನ್ ಈಗಾಗಲೇ ದಕ್ಷಿಣ ಏಷ್ಯಾದ ಫೆಡರೇಶನ್ ತಾಂತ್ರಿಕ ಸಮಿತಿಯ ಅಧ್ಯಕ್ಷರಾಗಿ ಮತ್ತು ಕಾಮನ್ವೆಲ್ತ್ ಟೇಬಲ್ ಟೆನ್ನಿಸ್ ಒಕ್ಕೂಟದ ತಾಂತ್ರಿಕ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಅವರು ಇತ್ತೀಚೆಗೆ ವೂಕ್ಸಿ (ಚೀನಾ)ನಲ್ಲಿ ನಡೆದ ಏಷ್ಯನ್ ಚಾಂಪಿಯನ್ಶಿಪ್ ಸ್ಪರ್ಧೆಯ ವ್ಯವಸ್ಥಾಪಕರಾಗಿ ಮೇಲ್ವಿಚಾರಣೆ ಮಾಡಿದ್ದರು. ಗಣೇಶನ್ ರವರು ಕೌಲಾಲಂಪುರ್ ವಿಶ್ವ ಚಾಂಪಿಯನ್ಶಿಪ್ 2016ರಲ್ಲಿ ಉಪ ತೀರ್ಪುಗಾರರಾಗಿ ಸೇವೆ ಸಲ್ಲಿಸಿದ್ದರು ಮತ್ತು ಗ್ಲ್ಯಾಸ್ಗೋದಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟಗಳಂತೆಯೇ ಕಾಂಪಿಟೇಶನ್ ಮ್ಯಾನೇಜರ್ ಮತ್ತು ರೆಫರಿ ಸೇರಿದಂತೆ ವಿವಿಧ ಇಂಟರ್ನ್ಯಾಷನಲ್ ಸ್ಪರ್ಧೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಭಾರತೀಯ ಮೂಲದ ವಾರಡ್ಕರ್ ಐರ್ಲೆಂಡಿನ ನೂತನ ಪ್ರಧಾನಿ

ಐರ್ಲೆಂಡಿನ ಫೈನ್ ಗೇಲ್ ಪಕ್ಷ 38 ವರ್ಷ ವಯಸ್ಸಿನ ಲಿಯೋ ವಾರಡ್ಕರ್ ಅವರನ್ನು ಐರ್ಲೆಂಡ್ ಪ್ರಧಾನ ಮಂತ್ರಿಯಾಗಿ ಆಯ್ಕೆ ಮಾಡಿದೆ. ವಾರಡ್ಕರ್ ಅವರು ಎಂಡಾ ಕೆನ್ನಿ ರವರ ಉತ್ತಾರಧಿಕಾರಿಯಾಗಿದ್ದಾರೆ. ಜೂನ್ 13ರಂದು ಐರಿಶ್ ಸಂಸತ್ ಸಭೆ ಸೇರಲಿದ್ದು, ಅಂದು ವಾರಡ್ಕರ್ ಅವರು ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿರುವುದನ್ನು ದೃಢಪಡಿಸಲಿದೆ.

ಲಿಯೋ ವರಾಡ್ಕರ್ ಅವರು ಐರ್ಲೆಂಡ್ನ ಮೊದಲ ಸಲಿಂಗಕಾಮಿ ಪ್ರಧಾನಿಯಾಗಿದ್ದಾರೆ. ಇಂದೊಮ್ಮೆ ಬಲಿಷ್ಠ ಕ್ಯಾಥೋಲಿಕ್ ದೇಶವಾಗಿದ್ದ ಐರ್ಲ್ಯಾಂಡಿನಲ್ಲಿ ಈ ಚುನಾವಣೆ ತ್ವರಿತ ಸಾಮಾಜಿಕ ಬದಲಾವಣೆಯ ಒಂದು ಗಮನಾರ್ಹ ಚಿಹ್ನೆಯಾಗಿದೆ. ಲಿಯೋ ಅವರು ಐರ್ಲೆಂಡಿನ ಅತೀ ಕಿರಿಯ ಪ್ರಧಾನಿ ಮತ್ತು ಜನಾಂಗೀಯ ಅಲ್ಪಸಂಖ್ಯಾತ ಹಿನ್ನೆಲೆಯಿಂದ ಆಯ್ಕೆಯಾದ  ಐರ್ಲೆಂಡ್ ಮೊದಲ ಪ್ರಧಾನ ಮಂತ್ರಿ ಸಹ ಆಗಿದ್ದಾರೆ.

            ವರಾಡ್ಕರ್ ಅವರು ಶೇ 60%ರಷ್ಟು ಮತಗಳಿಸಿ ತಮ್ಮ ಪ್ರತಿಸ್ಪರ್ಧಿ ಸೈಮನ್ ಕವೆನಿ ಅವರನ್ನು ಸೋಲಿಸಿದರು.

            ಐರ್ಲೆಂಡ್ 1993 ರಲ್ಲಿ ಸಲಿಂಗಕಾಮವನ್ನು ಒಪ್ಪಿಕೊಂಡಿತು. 2015ರಲ್ಲಿ ಸಲಿಂಗ ವಿವಾಹವನ್ನು ಅಳವಡಿಸಿಕೊಂಡ ವಿಶ್ವದ ಮೊದಲ ರಾಷ್ಟ್ರವೆನಿಸಿದೆ.

            ಲಿಯೋ ವಾರಡ್ಕರ್ ತಂದೆ ಮುಂಬೈ ಮೂಲದ ವೈದ್ಯರಾಗಿದ್ದಾರು. 1970ರ ದಶಕದಲ್ಲಿ ಅವರು ಮಿರಿಯಮ್ ಎಂಬ ಐರಿಷ್ ನರ್ಸನ್ನು ಇಂಗ್ಲೆಂಡಿನಲ್ಲಿ ಭೇಟಿಯಾಗಿ, ವಿವಾಹದ ನಂತರ ಐರ್ಲೆಂಡ್ಗೆ ತೆರಳಿ ಅಲ್ಲೇ ನೆಲೆಸಿದರು.

ಜಾಗತಿಕ ರಿಟೇಲ್ ಅಭಿವೃದ್ದಿ ಸೂಚ್ಯಂಕದಲ್ಲಿ ಭಾರತಕ್ಕೆ ಅಗ್ರಸ್ಥಾನ

‘ದಿ ಏಜ್ ಆಫ್ ಫೋಕಸ್’ ಎಂಬ ಹೆಸರಿನಡಿ ಹೊರತರಲಾಗಿರುವ 2017 ಜಾಗತಿಕ ರಿಟೇಲ್ ಅಭಿವೃದ್ಧಿ ಸೂಚ್ಯಂಕ (GRDI)ದಡಿ ರಿಟೇಲ್ ಕ್ಷೇತ್ರದಲ್ಲಿ ಸುಲಭವಾಗಿ ವ್ಯವಹರಿಸುವ 30 ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಪೈಕಿ ಭಾರತಕ್ಕೆ ಅಗ್ರಸ್ಥಾನ ಲಭಿಸಿದೆ.  ಇದು ಜಾಗತಿಕ ರಿಟೇಲ್ ಅಭಿವೃದ್ಧಿ ಸೂಚ್ಯಂಕದ (GRDI) 16 ನೇ ಆವೃತ್ತಿಯಾಗಿದೆ.

ಪ್ರಮುಖಾಂಶಗಳು:

  • ಸೂಚ್ಯಂಕದಲ್ಲಿ ಚೀನಾ ಎರಡನೆಯ ಸ್ಥಾನದಲ್ಲಿದೆ. ಆದಾಗ್ಯೂ, ಚೀನಾದ ಮಾರುಕಟ್ಟೆಯ ಗಾತ್ರ ಮತ್ತು ರಿಟೇಲ್ ವ್ಯಾಪಾರದಲ್ಲಿ ಮುಂದುವರಿದ ವಿಕಾಸವು ಚಿಲ್ಲರೆ ಹೂಡಿಕೆಯಲ್ಲಿ ಅತ್ಯಂತ ಆಕರ್ಷಕ ಮಾರುಕಟ್ಟೆಗಳಲ್ಲಿ ಒಂದಾಗಿದೆ ಎಂದು ಹೇಳಲಾಗಿದೆ.
  • ಭಾರತದ ತ್ವರಿತವಾಗಿ ವಿಸ್ತರಿಸುತ್ತಿರುವ ಆರ್ಥಿಕತೆ, FDI ನಿಯಮಗಳ ಸಡಿಲಿಕೆ ಸೂಚ್ಯಂಕದಲ್ಲಿ ಭಾರತದ ಅಗ್ರ ಶ್ರೇಯಾಂಕವನ್ನು ಕಾಯ್ದುಕೊಳ್ಳಲು ಪ್ರಮುಖ ಕಾರಣ ಎನಿಸಿವೆ.
  • ದೇಶದ ಚಿಲ್ಲರೆ ವಲಯವು ವಾರ್ಷಿಕ 20% ಬೆಳವಣಿಗೆ ಆಗುತ್ತಿದೆ. ಇದರ ಜೊತೆಗೆ, 2020ರ ಹೊತ್ತಿಗೆ ಚಿಲ್ಲರೆ ವಲಯದ ಗಾತ್ರ ದ್ವಿಗುಣಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ. ಇದಲ್ಲದೆ, ಶೀಘ್ರವಾಗಿ ಬೆಳೆಯುತ್ತಿರುವ ಇ-ವಾಣಿಜ್ಯದಿಂದ ಚಿಲ್ಲರೆ ವಲಯವು ಲಾಭಗಳನ್ನು ಪಡೆದಿದೆ. ವಾರ್ಷಿಕವಾಗಿ ಈ ವಲಯವು ಶೇ 30ರಷ್ಟು ಬೆಳೆಯುತ್ತಿದ್ದು, 2020 ರ ಹೊತ್ತಿಗೆ 48 ಶತಕೋಟಿ ಡಾಲರ್ ತಲುಪಲಿದೆ ಎಂದು ಅಂದಾಜಿಸಲಾಗಿದೆ.
  • ಚಿಲ್ಲರೆ ವಲಯದಲ್ಲಿನ ಪ್ರಮುಖ ಕ್ಷೇತ್ರಗಳಲ್ಲಿ ಎಫ್ಡಿಐ ನಿಬಂಧನೆಗಳನ್ನು ಸರಕಾರ ಸಡಿಲಿಸಿದೆ. ಕಳೆದ ವರ್ಷ, B2B ಇ-ಕಾಮರ್ಸ್ ವ್ಯವಹಾರಗಳಲ್ಲಿ ಮತ್ತು ಆಹಾರ ಉತ್ಪನ್ನಗಳನ್ನು ಮಾರಾಟ ಮಾಡುವ ಚಿಲ್ಲರೆ ವ್ಯಾಪಾರಿಗಳಿಗೆ 100% ಮಾಲೀಕತ್ವವನ್ನು ಅನುಮತಿಸಲು ಸರ್ಕಾರ ನಿರ್ಧರಿಸಿದೆ.

GRDI:

GRDIಯನ್ನು ಪ್ರತಿವರ್ಷ ಲಂಡನ್ ಮೂಲದ ವ್ಯವಹಾರ ಸಲಹಾ ಸಂಸ್ಥೆ ಎ ಟಿ ಕೆರ್ನೆ ಪ್ರಕಟಿಸುತ್ತಿದೆ. ಪ್ರಸ್ತುತದಲ್ಲಿ ಅತ್ಯಂತ ಆಕರ್ಷಕವಾದ ಹಾಗೂ ಭವಿಷ್ಯದ ಸಂಭಾವ್ಯತೆಯನ್ನು ಹೊಂದಿರುವ ಮಾರುಕಟ್ಟೆಗಳನ್ನು ಗುರುತಿಸಲು ಸೂಚ್ಯಂಕ ಸಹಾಯ ಮಾಡುತ್ತದೆ. ವಿಶ್ವಾದ್ಯಂತ ಚಿಲ್ಲರೆ ಹೂಡಿಕೆಗಾಗಿ 30 ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಸೂಚ್ಯಂಕದಲ್ಲಿ ಶ್ರೇಯಾಂಕವನ್ನು ನೀಡಲಾಗಿದೆ.

ಚೂರು ಪಾರು:

  • ವಿಶ್ವ ಟೇಬಲ್ ಟೆನ್ನಿಸ್ ಚಾಂಪಿಯನ್ ಷಿಪ್ ಫೈನಲ್ ತಲುಪಿದ ಭಾರತದ ಜೋಡಿ: ಭಾರತದ ಮನಿಕಾ ಬತ್ರಾ ಹಾಗೂ ಮೌಮ ದಾಸ್ ವಿಶ್ವ ಟೇಬಲ್ ಟೆನ್ನಿಸ್ ಚಾಂಪಿಯನ್ ಷಿಪ್ ನ ಫೈನಲ್ ತಲುಪುವ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ಜೋಡಿ ಎನ್ನುವ ಖ್ಯಾತಿಗೆ ಪಾತ್ರವಾಯಿತು. ದಸೆಲ್ ದೊರ್ಪ್ ನಲ್ಲಿ ಈ ಚಾಂಪಿಯನ್ ಷಿಪ್ ಅನ್ನು ಆಯೋಜಿಸಲಾಗಿತ್ತು. ಕಳೆದ ಬಾರಿ ಈ ಚಾಂಪಿಯನ್ ಷಿಪ್ ಅನ್ನು 2015ರಲ್ಲಿ ಸುಝೋವ್ ನಲ್ಲಿ ಆಯೋಜಿಸಲಾಗಿತ್ತು. 2019ರಲ್ಲಿ ಬುಡಪೆಸ್ಟ್ ನಲ್ಲಿ ಮುಂದಿನ ಚಾಂಪಿಯನ್ ಷಿಪ್ ನಡೆಯಲಿದೆ. 1926 ರಿಂದ ವಿಶ್ವ ಟೇಬಲ್ ಟೆನ್ನಿಸ್ ಚಾಂಪಿಯನ್ಷಿಪ್ ಆಯೋಜಿಸಲಾಗುತ್ತಿದೆ. 1957 ರಿಂದ ಈ ಚಾಂಪಿಯನ್ಷಿಪ್ ದ್ವೈವಾರ್ಷಿಕವಾಗಿ ಆಯೋಜಿಸಲಾಗಿದೆ. ಪುರುಷರ ಸಿಂಗಲ್ಸ್, ಮಹಿಳಾ ಸಿಂಗಲ್ಸ್, ಪುರುಷರ ಡಬಲ್ಸ್, ಮಹಿಳಾ ಡಬಲ್ ಮತ್ತು ಮಿಶ್ರ ಡಬಲ್ಸ್ಗಳನ್ನು ಒಳಗೊಂಡ ಐದು ವೈಯಕ್ತಿಕ ಪಂದ್ಯಾವಳಿಗಳು ಪ್ರಸ್ತುತ ಚಾಂಪಿಯನ್ಶಿಪ್ ಒಂದು ಭಾಗವಾಗಿ ನಡೆಯುತ್ತವೆ.

Leave a Comment

This site uses Akismet to reduce spam. Learn how your comment data is processed.