ರೂ 500, 1000 ನೋಟುಗಳು ಇನ್ನು ಅಮಾನ್ಯ: ಕೇಂದ್ರ ಸರ್ಕಾರ

ಚಾಲ್ತಿಯಲ್ಲಿರುವ ರೂ 500 ಮತ್ತು ರೂ 1000 ನೋಟಗಳ ಚಲಾವಣೆ ಮೇಲೆ ಕೇಂದ್ರ ಸರ್ಕಾರ ನಿಷೇಧ ಹೇರಿದೆ. ರಾಷ್ಟ್ರೀಯ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ರವರು ಈ ಐತಿಹಾಸಿಕ ನಿರ್ಧಾರವನ್ನು ತಿಳಿಸಿದರು. ಕಪ್ಪು ಹಣ, ಖೋಟಾ ನೋಟು ಮತ್ತು ಭ್ರಷ್ಟಾಚಾರ ತಡೆಗಟ್ಟುವ ಸಲುವಾಗಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಆದರೆ ರೂ 100, ರೂ 50, ರೂ 20, ರೂ 10, ರೂ 5, ರೂ 2 ಮತ್ತು 1 ಮೇಲೆ ಯಾವುದೇ ನಿರ್ಬಂಧವಿಲ್ಲ.

ಪ್ರಮುಖಾಂಶಗಳು:

  • 500 ರೂ. ಹಾಗೂ 1000 ರೂ. ಹಳೆಯ ನೋಟುಗಳನ್ನು ಹೊಂದಿರುವವರು ನವೆಂಬರ್‌ 10ರಿಂದ ಡಿಸೆಂಬರ್‌ 30ರ ವರೆಗೆ ಬ್ಯಾಂಕ್‌ಗಳಲ್ಲಿ ಮತ್ತು ಅಂಚೆ ಕಚೇರಿಗಳಲ್ಲಿ ಆಧಾರ್‌, ಪ್ಯಾನ್‌ನಂಥ ಅಧಿಕೃತ ಗುರುತು ಪತ್ರ ನೀಡಿ ವಿನಿಮಯ ಮಾಡಿಕೊಂಡು 100 ಅಥವಾ ಇನ್ನಾವುದೇ ನಿಷೇಧಿತವಲ್ಲದ ಮೌಲ್ಯದ ಕರೆನ್ಸಿ ನೋಟುಗಳನ್ನು ಪಡೆಯಬಹುದು.
  • ಡಿಸೆಂಬರ್ 31 ರೊಳಗೆ ವಿನಿಮಯ ಮಾಡಿಕೊಳ್ಳಲು ಆಗದವರು ಭಾರತೀಯ ರಿಸರ್ವ್ ಬ್ಯಾಂಕ್ ಕಚೇರಿಗೆ ತೆರಳಿ ಮಾರ್ಚ್ 31, 2017 ರೊಳಗೆ ಘೋಷಣೆ ಪತ್ರ ಸಲ್ಲಿಸುವ ಮೂಲಕ ವಿನಿಮಯ ಮಾಡಿಕೊಳ್ಳಬೇಕು.
  • ಈಗ ರದ್ದಾಗುವ 500 ರೂ. ನೋಟಿನ ಬದಲು ಹೊಸವಿನ್ಯಾಸ ಹಾಗೂ ಅಂಶಗಳುಳ್ಳ 500 ರೂ. ಹಾಗೂ ಹೊಸ 2000 ರೂ. ಮೌಲ್ಯದ ಹೊಸ ನೋಟನ್ನು ನವೆಂಬರ್ 10 ರಂದು ಬಿಡುಗಡೆ ಮಾಡಲಾಗುತ್ತದೆ.
  • ನಗದು ರಹಿತ ವ್ಯವಹಾರ ಅಂದರೆ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಡಿಡಿ, ಚೆಕ್ ಮತ್ತು ಎಲೆಕ್ಟ್ರಾನಿಕ್ ಫಂಡ್ ಟ್ರಾನ್ಸಫರ್ ಮೂಲಕ ವ್ಯವಹರಿಸಲು ಯಾವುದೇ ನಿರ್ಬಂಧವಿಲ್ಲ.

ನಾಸಾದಿಂದ ‘ಜೇಮ್ಸ್ ವೆಬ್” ಹೆಸರಿನ ಪ್ರಬಲ ದೂರದರ್ಶಕ  

ಬಾಹ್ಯಾಕಾಶದಲ್ಲಿ ಶೋಧನ ಕಾರ್ಯಗಳಿಗೆ ಬಳಕೆಯಾಗುತ್ತಿರುವ ಹಬಲ್ ದೂರದರ್ಶಕಕ್ಕಿಂತ 100 ಪಟ್ಟು ಪ್ರಬಲವಾದ ದೂರದರ್ಶಕವನ್ನು ನಾಸಾ ಸಿದ್ಧಪಡಿಸಿದೆ. 26 ವರ್ಷಗಳಷ್ಟು ಹಳೆಯದಾದ ನಾಸಾದ ಹಬಲ್ ಬಾಹ್ಯಾಕಾಶ ದೂರದರ್ಶಕಕ್ಕಿಂತ ‘ಜೇಮ್ಸ್ ವೆಬ್’ ಹೆಚ್ಚು ಸಮರ್ಥವಾಗಿದ್ದು, ಜಗತ್ತಿನ ಸೃಷ್ಟಿಯಲ್ಲಿನ ಮೊದಲ ಗ್ಯಾಲಕ್ಸಿಗಳನ್ನು ಪತ್ತೆ ಮಾಡಲು ಅನುವಾಗಲಿದೆ.

  • ಜೇಮ್ಸ್ ವೆಬ್ ದೂರದರ್ಶಕದ ಇನ್ಫ್ರಾರೆಡ್ ಕ್ಯಾಮೆರಾಗಳು ಅತಿ ಸೂಕ್ಷ್ಮವಾಗಿದ್ದು, ಸೂರ್ಯ ಕಿರಣಗಳಿಂದ ಅವುಗಳನ್ನು ಮರೆಯಾಗಿಡಬೇಕು.
  • ಟೆನ್ನಿಸ್ ಕೋರ್ಟ್ ಅಳತೆಯ 5 ಪದರಗಳ ಸೂರ್ಯ ರಕ್ಷಾಕವಚ ಶಾಖವನ್ನು ದೂರದರ್ಶಕದ ಸಂವೇದಕಗಳಿಗೆ ತಲುಪದಂತೆ ತಡೆಯುತ್ತದೆ.
  • ಸೂರ್ಯ ರಕ್ಷಾಕವಚವು ಮನುಷ್ಯರ ಕೂದಲಿನಷ್ಟು ತೆಳುವಾಗಿದೆ. ಐದೂ ಪದರಗಳು ಶೋಧಕದ ಉಷ್ಣ ಮತ್ತು ಶೀತ ಭಾಗಗಳಲ್ಲಿ ಉಷ್ಣತೆ ಸರಿದೂಗಿಸುವ ಕಾರ್ಯನಿರ್ವಹಿಸುತ್ತವೆ.
  • ಪದರಗಳು ಕೆಪ್ಟಾನ್ನಿಂದ ಮಾಡಲ್ಪಟ್ಟಿದ್ದು, 298 ಡಿಗ್ರಿ ಸೆಲ್ಸಿಯಸ್ನಷ್ಟು ಉಷ್ಣತೆಯನ್ನು ತಡೆಯಬಲ್ಲದಾಗಿದೆ.

ಕೊರಡಿಯ ಐಲಿಂಟ್ (Coradia iLint) ವಿಶ್ವದ ಪ್ರಥಮ ಹೈಡ್ರೋಜನ್ ಚಾಲಿತ ರೈಲು

ವಿಶ್ವದ ಮೊದಲ ಜಲಜನಕ ಇಂಧನ ಚಾಲಿತ ಮತ್ತು ಶೂನ್ಯ ಹೊರಸೂಸುವಿಕೆ ರೈಲಿಗೆ ಜರ್ಮನಿಯಲ್ಲಿ ಚಾಲನೆ ನೀಡಲಾಗಿದೆ. ಇದಕ್ಕೆ “ಕೊರಡಿಯ ಐಲಿಂಟ್” ಎಂದು ಹೆಸರಿಡಲಾಗಿದೆ. ಫ್ರಾನ್ಸ್ ರೈಲು ಕಂಪನಿ ಅಲ್ಸ್ಟೋಮ್ ಈ ಪರಿಸರ ಸ್ನೇಹಿ ರೈಲನ್ನು ಅಭಿವೃದ್ದಿಪಡಿಸಿದೆ. ಕೊರಡಿಯ ಐಲಿಂಟ್ ರೈಲು ಕೇವಲ ಹಬೆ ಮತ್ತು ಸಾಂದ್ರೀಕೃತ ನೀರನ್ನು ಹೊರಸೂಸುತ್ತದೆ.

  • ರೈಲಿನ ಛಾವಣೆ ಮೇಲೆ ಇರಿಸಲಾದ ಜಲಜನಕ ಇಂಧನ ಟ್ಯಾಂಕ್ ಮೂಲಕ ಈ ರೈಲು ಕಾರ್ಯನಿರ್ವಹಿಸುತ್ತದೆ.
  • ಪ್ಯೂಲ್ ಸೆಲ್ ಗಳು ಜಲಜನಕ ಮತ್ತು ಆಮ್ಲಜನಕವನ್ನು ವಿದ್ಯುತ್ ಆಗಿ ಪರಿವರ್ತಿಸುತ್ತವೆ. ಹೆಚ್ಚುವರಿ ವಿದ್ಯುತ್ ಲೀಥಿಯಂ ಐಯಾನ್ ಬ್ಯಾಟರೀಯಲ್ಲಿ ಶೇಖರಣೆಗೊಳ್ಳುತ್ತದೆ.
  • ಈ ರೈಲು ಸಂಪೂರ್ಣವಾಗಿ ಇಂಗಾಲ ಮುಕ್ತವಾದ ಕಾರಣ ಸಂಪ್ರದಾಯಿಕ ಡಿಸೇಲ್ ರೈಲಿಗೆ ಹೋಲಿಸಿದರೆ ಸಂಪೂರ್ಣ ಪರಿಸರ ಸ್ನೇಹಿ.
  • ಈ ರೈಲಿನ ಗರಿಷ್ಠ ವೇಗ ಪ್ರತಿ ಗಂಟೆಗೆ 87 ಮೈಲಿ ಹಾಗೂ ಜಲಜನಕ ಇಂಧನ ಟ್ಯಾಂಕ್ ಸಾಮರ್ಥ್ಯ 497 ಮೈಲಿ.

Leave a Comment

This site uses Akismet to reduce spam. Learn how your comment data is processed.