ತಬಲಾ ಕಲಾವಿದ ಸುರೇಶ್ ತಲ್ವಾಲಕರ್ ರವರಿಗೆ 2015ನೇ ಸಾಲಿನ ಟಿ ಚೌಡಯ್ಯ ಪ್ರಶಸ್ತಿ

ಪ್ರಖ್ಯಾತ ತಬಲಾ ಕಲಾವಿದ ಸುರೇಶ್ ತಲ್ವಾಲಕರ್ ರವರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುವ 2015ನೇ ಸಾಲಿನ ಟಿ. ಚೌಡಯ್ಯ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಪ್ರಸಿದ್ದ ಸುಗಮ ಸಂಗೀತ ಗಾಯಕಿ ರತ್ನಮಾಲಾ ಪ್ರಕಾಶ್ ಅವರನ್ನು ಸಂತ ಶಿಶುನಾಳ ಷರೀಫ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ.

ಇತರೆ ಪ್ರಶಸ್ತಿಗಳು:

  • ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ: ಪೀಟರ್ ಲೂಯಿಸ್, ದಕ್ಷಿಣ ಕನ್ನಡ
  • ಜಕಣಚಾರಿ ಪ್ರಶಸ್ತಿ: ಎನ್ ಪುಷ್ಪಮಾಲ, ಬೆಂಗಳೂರು
  • ಶ್ರೀನಿಜಗುಣ ಪುರಂದರ ಪ್ರಶಸ್ತಿ: ಬೆಳಕವಾಡಿ ರಂಗಸ್ವಾಮಿ ಅಯ್ಯಂಗಾರ್, ಬೆಂಗಳೂರು
  • ಕುಮಾರವ್ಯಾಸ ಪ್ರಶಸ್ತಿ: ಕಮಲಮ್ಮ ವಿಠಲರಾವ್, ಬೆಂಗಳೂರು
  • ನಾಟ್ಯರಾಣಿ ಶಾಂತಲಾ ಪ್ರಶಸ್ತಿ: ಎಂ ಶಕುಂತಲಾ, ಬೆಂಗಳೂರು
  • ಜಾನಪದ ಪ್ರಶಸ್ತಿ: ಸುತ್ತೂರ ಇಮಾಂಸಾಬ್, ಬಳ್ಳಾರಿ

ಪ್ರಶಸ್ತಿ ಬಗ್ಗೆ:

  • ಚೌಡಯ್ಯ ಪ್ರಶಸ್ತಿ ₹ 5 ಲಕ್ಷ ನಗದು ಮತ್ತು ಸ್ಮರಣಿಕೆ ಒಳಗೊಂಡಿದೆ.
  • ಶಿಶುನಾಳ ಷರೀಫ ಪ್ರಶಸ್ತಿ ₹ 3 ಲಕ್ಷ ನಗದು ಮತ್ತು ಸ್ಮರಣಿಕೆ ಒಳಗೊಂಡಿದೆ.
  • ಇತರ ವಿವಿಧ ಪ್ರಶಸ್ತಿಗಳೂ ತಲಾ ₹ 3 ಲಕ್ಷ ನಗದು ಮತ್ತು ಸ್ಮರಣಿಕೆಗಳನ್ನು ಒಳಗೊಂಡಿವೆ.

ಡಾ.ಅಬ್ದುಲ್ ಕಲಾಂ ಇಗ್ನೈಟ್ ಪ್ರಶಸ್ತಿ ಪ್ರದಾನ ಮಾಡಿದ ಪ್ರಣಬ್ ಮುಖರ್ಜಿ

ಇಗ್ನೈಟ್ (IGNITE) ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಡಾ. ಅಬ್ದುಲ್ ಕಲಾಂ ಇಗ್ನೈಟ್ ಪ್ರಶಸ್ತಿಯನ್ನು ರಾಷ್ಟ್ರಪತಿ ಭವನದಲ್ಲಿ ವಿತರಿಸಿದರು. ಈ ವರ್ಷ ಒಟ್ಟು 31 ವಿದ್ಯಾರ್ಥಿಗಳಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ನ್ಯಾಷನಲ್ ಇನ್ನೋವೇಶನ್ ಫೌಂಡೇಷನ್ ಈ ಸ್ಪರ್ಧೆಯನ್ನು ಪ್ರತಿ ವರ್ಷ ಆಯೋಜಿಸುತ್ತಿದೆ.

ಪ್ರಶಸ್ತಿಯ ಬಗ್ಗೆ:

  • ಇಗ್ನೈಟ್ ಸ್ಪರ್ಧೆ ಮೂಲ ತಾಂತ್ರಿಕ ವಿಚಾರ ಮತ್ತು ನಾವೀನ್ಯತೆಗಳ ಕುರಿತಾದ ರಾಷ್ಟ್ರಮಟ್ಟದ ಸ್ಪರ್ಧೆಯಾಗಿದ್ದು, 12ನೇ ತರಗತಿ ಒಳಗಿನ ವಿದ್ಯಾರ್ಥಿಗಳು ಅಥವಾ ಶಾಲೆಯಿಂದ ಹೊರಗುಳಿದ 17 ವರ್ಷದವರು ಸ್ಪರ್ಧೆಯಲ್ಲಿ ಭಾಗವಹಿಸಬಹುದು.
  • ಮಕ್ಕಳಲ್ಲಿ ಸೃಜನಶೀಲತೆ ಮತ್ತು ಸಹಾನುಭೂತಿ ಚಿಂತನೆ ಉತ್ತೇಜಿಸುವ ಸಲುವಾಗಿ ಈ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದೆ.
  • 2008 ರಿಂದ ಈ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗುತ್ತಿದ್ದು, ನ್ಯಾಷನಲ್ ಇನ್ನೋವೇಶನ್ ಫೌಂಡೇಷನ್ ಈ ಸ್ಪರ್ಧೆಯನ್ನು ಪ್ರತಿ ವರ್ಷ ಆಯೋಜಿಸುತ್ತಿದೆ.
  • ಪ್ರತಿ ವರ್ಷ ಅಕ್ಟೋಬರ್ 15 ರಂದು ಡಾ. ಅಬ್ದುಲ್ ಕಲಾಂ ರವರ ಜನ್ಮ ದಿನದಂದು ಈ ಸ್ಪರ್ಧೆಯ ಪ್ರಶಸ್ತಿಯನ್ನು ಘೋಷಿಸಲಾಗುವುದು.

ನ್ಯಾಷನಲ್ ಇನ್ನೋವೇಶನ್ ಫೌಂಡೇಷನ್:

  • ನ್ಯಾಷನಲ್ ಇನ್ನೋವೇಶನ್ ಫೌಂಡೇಷನ್ ಒಂದು ಸ್ವಾಯುತ್ತತೆ ಸಂಸ್ಥೆಯಾಗಿದ್ದು, ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿದೆ.
  • ದೇಶದಾದ್ಯಂತ ಸುಸ್ಥಿರ ಮತ್ತು ತಳಮಟ್ಟದ ನಾವೀನ್ಯತೆಯನ್ನು ಬೆಂಬಲಿಸುವ ಸಾಂಸ್ಥಿಕ ಸಂಸ್ಥೆಯಾಗಿ 2000ರಲ್ಲಿ ಸ್ಥಾಪಿಸಲಾಗಿದೆ.

ದೊಡ್ಡ ರಾಜ್ಯಗಳ ಪೈಕಿ ಆರ್ಥಿಕ ವಿಭಾಗದಲ್ಲಿ ಕರ್ನಾಟಕ ನಂ.1

ಇಂಡಿಯಾ ಟುಡೇ ನಿಯತಕಾಲಿಕೆ ಸಮೀಕ್ಷೆ ಪ್ರಕಾರ ದೇಶದ ದೊಡ್ಡ ರಾಜ್ಯಗಳ ಪೈಕಿ ಆರ್ಥಿಕ ವಿಭಾಗದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಆ ಮೂಲಕ “ಸ್ಟೇಟ್ಸ್ ಆಫ್ ಸ್ಟೇಟ್ಸ್” ಪ್ರಶಸ್ತಿನ್ನು ಮುಡಿಗೇರಿಸಿಕೊಂಡಿದೆ.

  • ಹೂಡಿಕೆಗೆ ಅಗತ್ಯವಾದ ವಾತಾವರಣ, ಕೃಷಿ, ಶಿಕ್ಷಣ, ಮೂಲಭೂತ ಸೌಕರ್ಯ ಮತ್ತು ಕಾನೂನು ಮತ್ತು ಸುವ್ಯವಸ್ಥೆ, ಪರಿಸರ ಸಂರಕ್ಷಣೆ ಹಾಗೂ ಇ – ಆಡಳಿತವನ್ನು ಪರಿಗಣನೆಗೆ ತೆಗೆದುಕೊಂಡು ಇಂಡಿಯಾ ಟುಡೆ ಮ್ಯಾಗಜಿನ್ ಈ ಸಮೀಕ್ಷೆ ನಡೆಸಿದೆ.
  • ಈ ಸಮೀಕ್ಷೆ ಪ್ರಕಾರ, ದೇಶದಲ್ಲಿ ಆರ್ಥಿಕವಾಗಿ ಪ್ರಗತಿ ಸಾಧಿಸಿರುವ ದೊಡ್ಡ ರಾಜ್ಯಗಳಲ್ಲಿ ಕರ್ನಾಟಕವೇ ಮೊದಲ ಸ್ಥಾನ ಪಡೆದುಕೊಂಡಿದೆ.
  • ಕಳೆದ ಒಂದು ವರ್ಷದ ಪ್ರಗತಿದಾಯಕ ಕಾರ್ಯಕ್ರಮಗಳನ್ನು ಅವಲೋಕಿಸಿ, ಜನಮತದೊಂದಿಗೆ ಈ ಆಯ್ಕೆ ಮಾಡಲಾಗಿದೆ.
  • ದೆಹಲಿಯಲ್ಲಿ ಇಂಡಿಯಾ ಟುಡೇ ಆಯೋಜಿಸಿದ್ದ ‘ಸ್ಟೇಟ್ ಆಫ್ ದಿ ಸ್ಟೇಟ್ಸ್’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಿಂದ ಸಿಎಂ ಸಿದ್ದರಾಮಯ್ಯ ಅವರು ಪ್ರಶಸ್ತಿ ಸ್ವೀಕರಿಸಿದರು.
  • ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಹೆಚ್ಚಾಗಿದೆ. 2014ರಲ್ಲಿ 2,361 ಕೋಟಿ ರೂ. ಇದ್ದ ಬಂಡವಾಳ ಹೂಡಿಕೆ 2015ರಲ್ಲಿ 13,780 ಕೋಟಿ ರೂ.ಗೆ ಏರಿಕೆ ಆಗಿರುವುದರಿಂದ ಕರ್ನಾಟಕಕ್ಕೆ ನಂ.1 ಸ್ಥಾನ ಲಭಿಸಿದೆ.
  • ಕರ್ನಾಟಕದ ಜಿಡಿಪಿ ಪರ್ ಕ್ಯಾಪಿಟಾ ಶೇ.16ರಷ್ಟು ಹೆಚ್ಚಾಗಿದ್ದು, 2014-15ರಲ್ಲಿ 77,168 ರೂ ಇದ್ದದ್ದು 2015-16ರಲ್ಲಿ 89,545 ರೂ.ಗೆ ಏರಿಕೆ ಆಗಿದೆ.
  • ಇನ್ನು ಒಟ್ಟಾರೆ ಶ್ರೇಯಾಂಕದ ಪಟ್ಟಿಯಲ್ಲಿ ಕರ್ನಾಟಕಕ್ಕೆ 4ನೇ ಸ್ಥಾನ ಲಭಿಸಿದ್ದು ಮಹಾರಾಷ್ಟ್ರ ಮೊದಲನೇ ಸ್ಥಾನದಲ್ಲಿದೆ. ಉತ್ತರಾಖಂಡ್ ಹಾಗೂ ಗುಜರಾತ್ ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನ ಪಡೆದಿವೆ.

Leave a Comment

This site uses Akismet to reduce spam. Learn how your comment data is processed.