ಡಾ. ಎಂ. ಪ್ರಭಾಕರ ಜೋಶಿಗೆ  ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪಾರ್ತಿಸುಬ್ಬ ಪ್ರಶಸ್ತಿ

ಯಕ್ಷಗಾನದ ಹಿರಿಯ ವಿದ್ವಾಂಸ, ಅರ್ಥಧಾರಿ ಡಾ.ಎಂ. ಪ್ರಭಾಕರ ಜೋಶಿ ರವರನ್ನು ಪಾರ್ತಿಸುಬ್ಬ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಪಾರ್ತಿಸುಬ್ಬ ಪ್ರಶಸ್ತಿಯನ್ನು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಯಕ್ಷಗಾನಕ್ಕೆ ಮಹತ್ವದ ಕೊಡುಗೆ ನೀಡುವ ಪ್ರಶಸ್ತಿಯಾಗಿದೆ. ಪ್ರಶಸ್ತಿಯು 1 ಲಕ್ಷ ನಗದು ಮತ್ತು ಫಲಕವನ್ನು ಒಳಗೊಂಡಿದೆ.

ಡಾ ಎಂ ಪ್ರಭಾಕರ ಜೋಶಿ:

  • ಜೋಶಿ ಅವರು ಪ್ರಮುಖ ಯಕ್ಷಗಾನ ವಿಮರ್ಶಕರು. ಉಪನ್ಯಾಸಕರಾಗಿ ನಂತರ ಪ್ರಾಂಶುಪಾಲ ರಾಗಿ ಬಡ್ತಿಹೊಂದಿ ನಿವೃತ್ತರಾಗಿದ್ದಾರೆ.
  • ಜೋಶಿ ರವರು ನಾಲ್ಕು ದಶಕಗಳಿಗೂ ಮೀರಿ ಅಗ್ರಪಂಕ್ತಿಯ ಅರ್ಥದಾರಿಯಾಗಿದ್ದಾರೆ. ಹಲವು ಯಕ್ಷಗಾನ ಕೃತಿಗಳನ್ನು ರಚಿಸಿದ್ದಾರೆ’.

ಇತರೆ ಪ್ರಶಸ್ತಿ:

  • ವಾರ್ಷಿಕ ಗೌರವ ಪ್ರಶಸ್ತಿ:  ವಾರ್ಷಿಕ ಗೌರವ ಪ್ರಶಸ್ತಿಗೆ ಉತ್ತರಕನ್ನಡದ ಹೊನ್ನಾವರದ ಗುಂಡಿಬೈಲು ಸುಬ್ರಾಯ ವೆಂಕಟರಮಣ ಭಟ್ಟ (ಬಡಾಬಡಗುತಿಟ್ಟು ಯಕ್ಷಗಾನ), ದಕ್ಷಿಣ ಕನ್ನಡದ ಕೊಕ್ಕಡದ ಗೋಪಾಲಕೃಷ್ಣ ಕುರುಪ್‌ (ತೆಂಕುತಿಟ್ಟು ಯಕ್ಷಗಾನ),ಉಡುಪಿ ಜಿಲ್ಲೆ ಉಳ್ಳೂರಿನ ಹೇರಂಜಾಲು ಸುಬ್ಬಣ್ಣ ಗಾಣಿಗ (ಬಡಗುತಿಟ್ಟು ಯಕ್ಷಗಾನ), ಬಳ್ಳಾರಿಯ ಬಸವನಕುಂಟೆಯ ಉಷಾರಾಣಿ (ಬಯಲಾಟ), ಬೆಳಗಾವಿ ಕಣಗಾಲದ ತುಕಾರಾಮ ಮಾರುತಿ ನಾಯಕ್‌ (ಸಣ್ಣಾಟ), ಬಾಗಲಕೋಟೆಯ ಜಮಖಂಡಿಯ ವಿಲಾಸಾಬಾಯಿ ತೇರದಾಳ (ಶ್ರೀಕೃಷ್ಣ ಪಾರಿಜಾತ),  ರಾಮನಗರ ಜಿಲ್ಲೆಯ ನಾರಸಂದ್ರ ಗ್ರಾಮದ ನರಹರಿ ಶಾಸ್ತ್ರಿ (ಸೂತ್ರದ ಗೊಂಬೆಯಾಟ), ಮೈಸೂರಿನ ಹೊಸಹೆಮ್ಮಿಗೆ ಗ್ರಾಮದ ಚಿಕ್ಕಚೌಡಯ್ಯ ನಾಯ್ಕ (ಮೂಡಲಪಾಯ ಯಕ್ಷಗಾನ),  ದಾವಣಗೆರೆಯ ತೋರಣಗಟ್ಟೆ ಗ್ರಾಮದ ಪಿ. ನಿಂಗಪ್ಪ ತೋರಣಗಟ್ಟೆ (ಬಯಲಾಟ), ಬೆಂಗಳೂರಿನ ಶ್ರೀನಿವಾಸ ಸಾಸ್ತಾನ (ಯಕ್ಷಗಾನ) ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿ ತಲಾ ₹50 ಸಾವಿರ, ಪ್ರಶಸ್ತಿ ಫಲಕ ಒಳಗೊಂಡಿದೆ .

ದೇಶದ ಮೊದಲ ಬ್ಯಾಂಕಿಂಗ್ ರೋಬೋಟ್ “ಲಕ್ಷ್ಮಿ” ಚೆನ್ನೈನಲ್ಲಿ ಕಾರ್ಯಾರಂಭ

ದೇಶದ ಮೊದಲ ಬ್ಯಾಂಕಿಂಗ್ ರೋಬೋಟ್ ಚೆನ್ನೈ ನಲ್ಲಿ ಕಾರ್ಯಾರಂಭ ಮಾಡಿದೆ. ಚೆನ್ನೈ ನ ಸಿಟಿ ಯೂನಿಯನ್ ಬ್ಯಾಂಕ್ ಈ ರೋಬೋಟ್ ಅನ್ನು ಪರಿಚಯಿಸಿದೆ.  ಕೃತಕ ಬುದ್ಧಿಮತ್ತೆ ರೋಬೋಟ್ ನ ಗೆ ಹೆಸರು “ಲಕ್ಷ್ಮಿ”.

ಪ್ರಮುಖಾಂಶಗಳು:

  • ಬ್ಯಾಂಕಿಂಗ್ ರೊಬೋಟ್ ಲಕ್ಷ್ಮಿ ತನ್ನ ಬಳಿ ಮಾಹಿತಿ ಕೇಳುವ ಗ್ರಾಹಕರಿಗೆ ಖಾತೆಯಲ್ಲಿರುವ ಮೊತ್ತ, ಬಡ್ಡಿ ದರ, ಗೃಹ ಸಾಲ, ಕೋರ್ ಬ್ಯಾಂಕಿಂಗ್ ಸೊಲ್ಯೂಷನ್ಸ್ ಸೇರಿದಂತೆ ಒಟ್ಟು 125 ವಿಷಯಗಳ ಬಗ್ಗೆ ಮಾಹಿತಿ ನೀಡುವ ಸಾಮರ್ಥ್ಯ ಹೊಂದಿದೆ.
  • ಗ್ರಾಹಕರು ಖಾತೆಯ ವಿವರ ಹಾಗೂ ವಹಿವಾಟುಗಳ ವಿವರಗಳನ್ನು ರೋಬೋಟ್ ಮೇಲಿರುವ ಪರದೆಯ ಮೂಲಕ ಪಡೆಯಬಹುದಾಗಿದೆ.
  • ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ರೊಬೋಟ್ ಧ್ವನಿ ಮೂಲಕ ತಿಳಿಸುವುದಿಲ್ಲ, ಬದಲಾಗಿ ಪರದೆ ಮೂಲಕ ಪ್ರದರ್ಶಿಸುತ್ತದೆ. ಕೃತಕ ಬುದ್ಧಿಮತ್ತೆ ಹೊಂದಿರುವ ಬ್ಯಾಂಕಿಂಗ್ ರೊಬೋಟ್ ಲಕ್ಷ್ಮಿ ಗ್ರಹಕರೊಂದಿಗೆ ಇಂಗ್ಲೀಷ್ ನಲ್ಲಿ ಸಂವಹನ ನಡೆಸಲಿದ್ದು, ಗ್ರಾಹಕರೊಂದಿಗೆ ನಿರಂತರ ಸಂವಹನ ನಡೆಸುವ ಮೂಲಕ ತನ್ನ ಸಂವಹನ ಕಲೆಯನ್ನು ಸಹ ಹೆಚ್ಚಿಸಿಕೊಳ್ಳಲಿದೆ.
  • ಒಂದು ವೇಳೆ ಗ್ರಾಹಕರು ಕೇಳಿದ ಪ್ರಶ್ನೆಗೆ ಉತ್ತರಿಸಲು ಸಾಧ್ಯವಗದೇ ಇದ್ದರೆ ಅದನ್ನು ಬ್ಯಾಂಕ್ ಮ್ಯಾನೇಜರ್ ಬಳಿ ಕೇಳುವಂತೆ ರೋಬೋಟ್ ಸಲಹೆ ನೀಡುತ್ತದೆ.

ಶ್ರೀಲಂಕಾದ ಖ್ಯಾತ ಗಾಯಕ ಮತ್ತು ಸಂಗೀತ ನಿರ್ದೇಶಕ ಪಂಡಿತ್ ಅಮರದೇವ ನಿಧನ

ಶ್ರೀಲಂಕಾದ ಖ್ಯಾತ ಗಾಯಕ ಹಾಗೂ ಸಂಗೀತ ನಿರ್ದೇಶಕ ಪಂಡಿತ್ ಅಮರದೇವ ನಿಧನರಾಗಿದ್ದಾರೆ ಅಮರದೇವ ರವರು ಭಾರತೀಯ ಶಾಸ್ತ್ರೀಯ ರಾಗಗಳು ಮತ್ತು ಶ್ರೀಲಂಕಾದ. ಭಾರತದ ಪದ್ಮಶ್ರೀ ಸೇರಿದಂತೆ ಅವರು ಹಲವಾರು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದರು. ಅಮರದೇವ ಅವರು ಭಾರತೀಯ ಶಾಸ್ತ್ರೀಯ ರಾಗಗಳು ಹಾಗೂ ಶ್ರೀಲಂಕಾದ ಶ್ರೀಮಂತ ಜನಪದ ಸಂಗೀತ ಪರಂಪರೆಗಳಿಂದ ಸ್ಫೂರ್ತಿ ಪಡೆದಿದ್ದರು.

ಅಮರದೇವ ಬಗ್ಗೆ:

  • ದೇಶಮಾನ್ಯ ವನ್ನಕುವಟ್ಟ ವದುಗೆ ಡಾನ್ ಅಲ್ಬರ್ಟ್ ಪೆರೆರ ಇದು ಅಮರದೇವರ ಮೂಲ ಹೆಸರು. ಅಮರದೇವ ಎಂದೇ ಇವರು ಪ್ರಸಿದ್ದರಾಗಿದ್ದರು.
  • ಡಿಸೆಂಬರ್ 5, 1927 ರಲ್ಲಿ ಜನಸಿದ ಇವರು, ಶ್ರೀಲಂಕಾ ಕಂಡ ಪ್ರಸಿದ್ದ ಗಾಯಕ, ವಾಯಲಿನ್ ವಾದಕ ಹಾಗೂ ಸಂಗೀತ ನಿರ್ದೇಶಕ. ಶ್ರೀಲಂಕಾದ ಸಂಗೀತ ಮಾಂತ್ರಿಕ ಎಂದೇ ಜನಪ್ರಿಯರಾಗಿದ್ದರು.

ಪ್ರಶಸ್ತಿಗಳು:

  • ಫಿಲಿಪ್ಪೀನ್ಸ್ನ ರಾಮೊನ್ ಮ್ಯಾಗ್ಸೇಸೆ ಪ್ರಶಸ್ತಿ (2001)
  • ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ (2002),
  • ಶ್ರೀಲಂಕಾದ ಅಧ್ಯಕ್ಷರ ಕಲಾ ಕೀರ್ತಿ ಪ್ರಶಸ್ತಿ (1986) ಮತ್ತು ದೇಶಮಾನ್ಯ ಪ್ರಶಸ್ತಿ (1998)ಗಳು ಸೇರಿದಂತೆ ಇನ್ನು ಅನೇಕ ದೇಶ ಮತ್ತು ವಿದೇಶ ಪ್ರಶಸ್ತಿಗಳು ಅವರಿಗೆ ಲಭಿಸಿವೆ.

One Thought to “ಪ್ರಚಲಿತ ವಿದ್ಯಮಾನಗಳು- ನವೆಂಬರ್-10, 2016”

  1. VIDYA SAGAR

    sir!! next week psi mock test erutha??

Leave a Comment

This site uses Akismet to reduce spam. Learn how your comment data is processed.