ನೆಪ್ಚೂನ್ ಗಾತ್ರದ ದೂರದ ಗ್ರಹದಲ್ಲಿ ನೀರಿನ ಕುರುಹು ಪತ್ತೆ

ವಿಜ್ಞಾನಿಗಳು HAT-P-26b ಎಂಬ ದೂರದ ನೆಪ್ಚೂನ್-ಗಾತ್ರದ ಗ್ರಹದ ವಾತಾವರಣದಲ್ಲಿ “ಬಲವಾದ ನೀರಿನ ಕುರುಹು”ವನ್ನು ಪತ್ತೆ ಮಾಡಿದ್ದಾರೆ. NASAದ ಹಬಲ್ ಮತ್ತು ಸ್ಪಿಟ್ಜರ್ ಬಾಹ್ಯಾಕಾಶ ದೂರದರ್ಶಕಗಳನ್ನು ಬಳಸಿ ನಡೆಸಿದ ಅಧ್ಯಯನದ ಪ್ರಕಾರ, HAT-P-26bಯು ಬಹುತೇಕ ಹೈಡ್ರೋಜನ್ ಮತ್ತು ಹೀಲಿಯಂಗಳನ್ನು ಒಳಗೊಂಡಿರುವ ವಾತಾವರಣವನ್ನು ಹೊಂದಿದೆ ಎಂದು ಹೇಳಲಾಗಿದೆ. ಗ್ರಹದ ವಾತಾವರಣವು ಮೋಡಗಳಿಂದ ಮುಕ್ತವಾಗಿದ್ದು ಬಲವಾದ ನೀರಿನ ಕುರುಹು ಹೊಂದಿದೆ.

                ಗ್ರಹದ ನಕ್ಷತ್ರದ ಮುಂದೆ ಹಾದುಹೋಗುವಾಗ ನಾಲ್ಕು ಟ್ರಾನ್ಸಿಸ್ಟರ್ ಗಳಿಂದ ಪಡೆದ ಮಾಹಿತಿಯನ್ನು ಸಂಗ್ರಹಿಸುವುದರ ಮೂಲಕ ನೀರಿನ ಉಪಸ್ಥಿತಿಯನ್ನು ಸಂಶೋಧಕರು ಪತ್ತೆ ಮಾಡಿದ್ದಾರೆ. ಈ ಅಧ್ಯಯನವನ್ನು ಸೈನ್ಸ್ ಜರ್ನಲ್ನಲ್ಲಿ ಪ್ರಕಟಿಸಲಾಗಿದೆ.

ಸಂಶೋಧನೆಯ ಮಹತ್ವ:

ನೆಪ್ಚೂನ್ನ ಗಾತ್ರ ಮತ್ತು ಅದರ ನಕ್ಷತ್ರಕ್ಕೆ ಸಮೀಪವಿರುವ ಗ್ರಹದಲ್ಲಿ ನಡೆಸಲಾಗಿರುವ ಅತ್ಯಂತ ವಿವರವಾದ ಅಧ್ಯಯನ ಇದಾಗಿದೆ. ಈ ಗಾತ್ರದ ಗ್ರಹಗಳಲ್ಲಿ ಇದುವರೆಗೂ ಕಂಡುಬಂದಿರುವ ನೀರಿನ ಪ್ರಮಾಣಕ್ಕೆ ಹೋಲಿಸಿದರೆ ಈ ಗ್ರಹದಲ್ಲಿ ಅತ್ಯಂತ ಹೆಚ್ಚಿದೆ.  HAT-P-26b ಸುಮಾರು 437 ಬೆಳಕಿನ ವರ್ಷಗಳ ದೂರದಲ್ಲಿದೆ. ಗ್ರಹಗಳ ವ್ಯವಸ್ಥೆಗಳ ಹುಟ್ಟು ಮತ್ತು ಅಭಿವೃದ್ಧಿಯ ಬಗ್ಗೆ ಹೆಚ್ಚು ತಿಳಿದುಕೊಳ್ಳುವಲ್ಲಿ ಅಧ್ಯಯನದ ಮಹತ್ವದಾಗಿದೆ.

“ವನ್ನಾಕ್ರೈ ಕುತಂತ್ರಾಂಶ”ಕ್ಕೆ ಭಾರತ ಸೇರಿದಂತೆ ಹಲವು ರಾಷ್ಟ್ರಗಳು ಬಲಿ

ಜಾಗತಿಕ ಸೈಬರ್ ದಾಳಿಗೆ ಭಾರತ ಸೇರಿದಂತೆ ಸುಮಾರು ನೂರ ದೇಶಗಳನ್ನು ತುತ್ತಾಗಿವೆ. “ಶಾಡೋ ಬ್ರೋಕರ್ಸ್” ಹೆಸರಿನ ಸೈಬರ್ ಗ್ಯಾಂಗ್ ಈ ಕೃತ್ಯವನ್ನು ನಡೆಸಿರುವ ನಿಗೂಢ ಸಂಘಟನೆ ಎನ್ನಲಾಗಿದೆ.. ಅಮೆರಿಕದ ಪ್ರಬಲ ಮಿಲಿಟರಿ ಗುಪ್ತಚರ ಘಟಕವಾದ ನ್ಯಾಷನಲ್ ಸೆಕ್ಯುರಿಟಿ ಏಜೆನ್ಸಿ (ಎನ್ಎಸ್ಎ) ನಿಂದ ‘ಎಟರ್ನಲ್ ಬ್ಲೂ’ ಎಂಬ ಹ್ಯಾಕಿಂಗ್ ಉಪಕರಣವನ್ನು ಕದಿಯುವ ಮೂಲಕ ಈ ಸಂಘಟನೆಯು ದಾಳಿ ನಡೆಸಿದೆ. ಹ್ಯಾಕಿಂಗ್ ಉಪಕರಣ ‘ಎಟರ್ನಲ್ ಬ್ಲೂ’ ಮೈಕ್ರೋಸಾಫ್ಟ್ ವಿಂಡೋಸ್ ಬಳಸಿಕೊಂಡು ಎಲ್ಲಾ ಕಂಪ್ಯೂಟರ್ಗಳ ಮಾಹಿತಿಯನ್ನು ಸುಲಭವಾಗಿ ಪಡೆಯುತ್ತದೆ. ಭಯೋತ್ಪಾದಕರು ಮತ್ತು ಶತ್ರು ರಾಷ್ಟ್ರಗಳು ಬಳಸುವ ಕಂಪ್ಯೂಟರ್ಗಳಿಂದ ಮಾಹಿತಿ  ಪಡೆಯಲು ಎನ್ಎಸ್ಎ ಇದನ್ನು ಅಭಿವೃದ್ಧಿಪಡಿಸಿದೆ. ಸೈಬರ್ ಅಟ್ಯಾಕ್ ಅನ್ನು ದೊಡ್ಡ ರಾನ್ಸಮ್ವೇರ್ ದಾಳಿ ಎಂದು ಪರಿಗಣಿಸಲಾಗಿದೆ. ಭದ್ರತಾ ಸಾಫ್ಟ್ವೇರ್ ಕಂಪನಿ ಅವಾಸ್ಟ್ ಪ್ರಕಾರ, ಅದರ ಸಂಶೋಧಕರು ಯುಕೆ, ರಷ್ಯಾ, ಉಕ್ರೇನ್, ಭಾರತ, ಚೀನಾ, ಇಟಲಿ ಮತ್ತು ಈಜಿಪ್ಟ್ ಸೇರಿದಂತೆ 99 ದೇಶಗಳಲ್ಲಿ 75,000 ಕ್ಕಿಂತ ಹೆಚ್ಚು ದಾಳಿಗಳನ್ನು ಗುರುತಿಸಿದ್ದಾರೆ.

                ಹ್ಯಾಕರ್ಗಳು WannaCry, WanaCrypt0r 2.0, WannaCry ಮತ್ತು WCry ಎಂದು ಕರೆಯಲ್ಪಡುವ ರಾನ್ಸಮ್ವೇರ್ (ransomware) ಅನ್ನು, ಸಾಮಾನ್ಯವಾಗಿ ಇಮೇಲ್ಗಳ ಮೂಲಕ ವ್ಯಾಪಿಸಿವೆ. ದಾಳಿಗೊಳಗಾದ ಕಂಪ್ಯೂಟರ್ಗಳಲ್ಲಿರುವ ಫೈಲ್ಗಳನ್ನು ಬಳಕೆದಾರರು ಅವುಗಳನ್ನು ಪ್ರವೇಶಿಸಲು ಸಾಧ್ಯವಿಲ್ಲದ ರೀತಿಯಲ್ಲಿಯೇ ಲಾಕ್ ಮಾಡಲಾಗುತ್ತದೆ. ಲಾಕ್ ಆಗಿರುವ ಫೈಲ್ಗಳನ್ನು ಹಿಂಪಡೆಯಲು cryptocurrency Bitcoin ನಲ್ಲಿ ಪಾವತಿಯನ್ನು ಮಾಡಬೇಕಾಗುತ್ತದೆ.

ದಾಳಿಯ ಪರಿಣಾಮ:

ಯುರೋಪ್ ಮತ್ತು ಏಷ್ಯಾದಲ್ಲಿ ಈ ಸೈಬರ್ ದಾಳಿಯಿಂದ ಅನೇಕ ಆಸ್ಪತ್ರೆಗಳು, ಶಾಲೆಗಳು ಮತ್ತು ವಿಶ್ವವಿದ್ಯಾಲಯಗಳ ಕಾರ್ಯಾಚರಣೆಗೆ ತೊಡಕಾಗಿದೆ. ಬ್ರಿಟನ್ನ ರಾಷ್ಟ್ರೀಯ ಆರೋಗ್ಯ ಸೇವೆ (ಎನ್ಎಚ್ಎಸ್) ತೀವ್ರ ದಾಳಿಗೆ ತುತ್ತಾಗಿದೆ.  ದಾಳಿಗೆ ಒಳಗಾದ ಇತರ ಪ್ರಮುಖ ಸಂಸ್ಥೆಗಳೆಂದರೆ ಸ್ಪೇನ್ನ ದೂರಸಂಪರ್ಕ ಕಂಪೆನಿ ಟೆಲಿಫೋನಿಕಾ, ಪೋರ್ಚುಗಲ್ ಟೆಲಿಕಾಮ್ ಮತ್ತು ಟೆಲಿಫೋನಿಕಾ ಅರ್ಜೆಂಟೈನಾ, ಜರ್ಮನಿಯ ರೈಲ್ವೆ ಆಪರೇಟರ್ ಡಾಯ್ಚ ಬಾನ್ ಇತ್ಯಾದಿ.. ಭಾರತದಲ್ಲಿ, ಆಂಧ್ರಪ್ರದೇಶದ ಪೋಲಿಸ್ ಕಂಪ್ಯೂಟರ್ಗಳು ಸೈಬರ್ ದಾಳಿಗೆ ಒಳಗಾಗಿವೆ. ಚಿತ್ತೂರು, ಕೃಷ್ಣ, ಗುಂಟೂರು, ವಿಶಾಖಪಟ್ಟಣಂ ಮತ್ತು ಶ್ರೀಕಕುಲಂ ಜಿಲ್ಲೆಗಳಲ್ಲಿನ 18 ಪೋಲಿಸ್ ಘಟಕಗಳಲ್ಲಿ ಕಂಪ್ಯೂಟರ್ಗಳು ಮೇಲೆ ದಾಳಿಯ ಪರಿಣಾಮ ಬೀರಿದೆ.

2016ನೇ ಸಾಲಿನ ಟಿಯೆಸ್ಸಾರ್ ಪ್ರಶಸ್ತಿಗೆ ನಾಗೇಶ ಹೆಗಡೆ ಆಯ್ಕೆ

ರಾಜ್ಯ ಸರ್ಕಾರ ಕೊಡಮಾಡುವ ಟಿಯೆಸ್ಸಾರ್‌ ಪ್ರಶಸ್ತಿ 2016ನೇ ಸಾಲಿಗೆ ಹಿರಿಯ ಪತ್ರಕರ್ತ ನಾಗೇಶ ಹೆಗಡೆ ಭಾಜನರಾಗಿದ್ದಾರೆ. ಇದೇ ವೇಳೆ ಮೊಹರೆ ಹಣಮಂತರಾಯ ಪ್ರಶಸ್ತಿಗೆ ಗಂಗಾಧರ ಹಿರೇಗುತ್ತಿ ಅವರನ್ನು ಆಯ್ಕೆ ಮಾಡಲಾಗಿದೆ. ಗಂಗಾಧರ ಹಿರೇಗುತ್ತಿ ರವರು ಕಾರವಾರದ ‘ಕರಾವಳಿ ಮುಂಜಾವು’ ಪತ್ರಿಕೆ ಸಂಪಾದಕ. ಮೊಹರೆ ಹಣಮಂತರಾಯ ಪ್ರಶಸ್ತಿಯನ್ನು ಪತ್ರಿಕಾ ಸಂಸ್ಥೆ ಕಟ್ಟಿ ಬೆಳೆಸಿದವರಿಗೆ ನೀಡಲಾಗುತ್ತಿದೆ.

  • ನಿವೃತ್ತ ನ್ಯಾಯಾಧೀಶರಾದ ಇಂದ್ರಕಲಾ ಅಧ್ಯಕ್ಷತೆಯ  ಸಮಿತಿ ಇವರುಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ.
  • ಜುಲೈ 1ರಂದು ಪತ್ರಿಕಾ ದಿನಾಚರಣೆ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
  • ಈ ಪ್ರಶಸ್ತಿಗಳು ತಲಾ ₹ 1 ಲಕ್ಷ ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ.
  • ವಿಜ್ಞಾನ ಹಾಗೂ ಪರಿಸರ ಪತ್ರಿಕೋದ್ಯಮದಲ್ಲಿ ಪರಿಣತಿ ಪಡೆದಿರುವ ನಾಗೇಶ ಹೆಗಡೆ ‘ಪ್ರಜಾವಾಣಿ’ಯ ಅಂಕಣಕಾರರಾಗಿದ್ದಾರೆ.

ಚೂರು ಪಾರು:

  • ಸ್ಪ್ಯಾನಿಷ್‌ ಗ್ರ್ಯಾನ್‌ ಪ್ರಿ ಫಾರ್ಮುಲಾ –1 ರೇಸ್‌ ಲೂಯಿಸ್‌ ಹ್ಯಾಮಿಲ್ಟನ್‌ ಗೆ ಪ್ರಶಸ್ತಿ: ಸ್ಪ್ಯಾನಿಷ್‌ ಗ್ರ್ಯಾನ್‌ ಪ್ರಿ ಫಾರ್ಮುಲಾ –1 ರೇಸ್‌ನಲ್ಲಿ ಲೂಯಿಸ್ ಹ್ಯಾಮಿಲ್ಟನ್ ಚಾಂಪಿಯನ್‌ ಆಗಿದ್ದಾರೆ.ಈ ಮೂಲಕ ವೃತ್ತಿಬದುಕಿನ 55ನೇ ಪ್ರಶಸ್ತಿ ಎತ್ತಿಹಿಡಿದರು. ಹ್ಯಾಮಿಲ್ಟನ್‌ ಈ ಋತುವಿನಲ್ಲಿ ಗೆದ್ದ ಎರಡನೇ ಟ್ರೋಫಿ ಇದಾಗಿದೆ.
  • ಟೆನ್ನಿಸ್ ಶ್ರೇಯಾಂಕ ಜರ್ಮನಿಯ ಏಂಜಲಿಕ್ ಕೆರ್ಬರ್ ಮತ್ತು ಬ್ರಿಟನ್ ಆ್ಯಂಡಿ ಮರ್ರೆಗೆ ಮೊದಲ ಸ್ಥಾನ: ಜರ್ಮನಿಯ ಏಂಜಲಿಕ್‌ ಕೆರ್ಬರ್‌ ವಿಶ್ವ ಟೆನಿಸ್‌ ಶ್ರೇಯಾಂಕದಲ್ಲಿ ಅಗ್ರ ಸ್ಥಾನಕ್ಕೇರಿದ್ದಾರೆ. ಕೆರ್ಬರ್‌ 7.035 ಪಾಯಿಂಟ್‌ ಲಭಿಸಿದೆ. ಸೆರೆನಾ ವಿಲಿಯಮ್ಸ್‌ಗೆ ಎರಡನೇ ಸ್ಥಾನದಲ್ಲಿದ್ದು110 ಪಾಯಿಂಟ್‌ಗಳು ಲಭಿಸಿದೆ. ಮೂರನೇ ಸ್ಥಾನದಲ್ಲಿರುವ ಚೆಕ್ ಗಣರಾಜ್ಯದ ಕ್ಯಾರೋಲಿನಾ ಪ್ಲಿಸ್ಕೊವಾ 6.104 ಪಾಯಿಂಟ್‌ ಗಳಿಸಿದ್ದಾರೆ. ಪುರುಷರ ವಿಭಾಗದಲ್ಲಿ ಬ್ರಿಟನ್‌ನ ಆ್ಯಂಡಿ ಮರ್ರೆ ಮೊದಲ ಸ್ಥಾನದಲ್ಲಿದ್ದಾರೆ. ಸ್ಪೇನ್‌ನ ರಾಫೆಲ್‌ ನಡಾಲ್‌ ನಾಲ್ಕನೇ ಸ್ಥಾನಕ್ಕೇರಿ ಗಮನ ಸೆಳೆದಿದ್ದಾರೆ. ರಾಫೆಲ್ ನಡಾಲ್ ಕಳೆದ ವರ್ಷದ ಅಕ್ಟೋಬರ್‌ನಲ್ಲಿ ನಾಲ್ಕನೇ ಸ್ಥಾನಕ್ಕೇರಿದ್ದರು.
  • ಗಿರಡ್ಡಿ ಗೋವಿಂದರಾಜಗೆ 2017ನೇ ಸಾಲಿನ ಸೇಡಿಯಾಪು ಪ್ರಶಸ್ತಿ: ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ನೀಡುವ 2017ನೇ ಸಾಲಿನ ಸೇಡಿಯಾಪು ಪ್ರಶಸ್ತಿಗೆ ಸಾಹಿತಿ ಗಿರಡ್ಡಿ ಗೋವಿಂದರಾಜ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ₹10,000 ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

Leave a Comment

This site uses Akismet to reduce spam. Learn how your comment data is processed.