ಏರ್ ಚೀಫ್ ಮಾರ್ಷಲ್ ಬಿ.ಎಸ್.ಧನೋವಾ ಅಧಿಕಾರ ಸ್ವೀಕಾರ

ಏರ್ ಚೀಫ್ ಮಾರ್ಷಲ್ ಬೀರೇಂದರ್ ಸಿಂಗ್ ದನೋವಾ ರವರು ಚೀಫ್ ಆಫ್ ಏರ್ ಸ್ಟಾಫ್ ನ 22ನೇ ಏರ್ ಚೀಪ್ ಮಾರ್ಷಲ್ ಆಗಿ ಅಧಿಕಾರ ವಹಿಸಿಕೊಂಡರು. ಅರೂಪ್ ರಹ ರವರು ಸೇವೆಯಿಂದ ನಿವೃತ್ತರಾದ ಕಾರಣ ಅವರ ಉತ್ತರಾಧಿಕಾರಿಯಾಗಿ ಧನೋವಾ ನೇಮಕಗೊಂಡಿದ್ದರು.

ಬಿ.ಎಸ್.ಧನೋವಾ:

  • ಧನೋವಾ ರವರು ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜು ಹಾಗೂ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ಹಳೆಯ ವಿದ್ಯಾರ್ಥಿ. 1978ರಲ್ಲಿ ಭಾರತೀಯ ವಾಯುಪಡೆಯ ಫೈಟರ್ ವಿಭಾಗಕ್ಕೆ ನಿಯೋಜನೆಗೊಂಡರು.
  • ಆನಂತರ ವಿವಿಧ ತುಕಡಿಗಳಲ್ಲಿ ಧನೋವಾ ರವರು ಸೇವೆ ಸಲ್ಲಿಸಿದ್ದಾರೆ. ವೈಸ್ ಚೀಫ್ ಆಗಿ ನೇಮಕವಾಗುವ ಮುಂಚೆ ಅವರು ಸೌಥ್ ವೆಸ್ಟರ್ನ್ ಏರ್ ಕಮಾಂಡ್ ನ ಏರ್ ಇನ್ ಚೀಫ್ ದಕ್ಷಿಣ ಪಶ್ಚಿಮ ಏರ್ ಕಮಾಂಡ್ ಅಧಿಕಾರಿಯಾಗಿದ್ದರು.
  • ಇದಕ್ಕೂ ಮುಂಚೆ ಡಿಫೆನ್ಸ್ ಸರ್ವೀಸ್ಸ್ ಸ್ಟಾಫ್ ಕಾಲೇಜಿನ ಮುಖ್ಯ ಭೋದಕರಾಗಿ ಸೇವೆ ಸಲ್ಲಿಸಿದ್ದರು.
  • ಕಾರ್ಗಿಲ್ ಯುದ್ದ ಸಮಯದಲ್ಲಿ ಪರ್ವತ ಪ್ರದೇಶದಲ್ಲಿ ರಾತ್ರಿ ಕಾರ್ಯಾಚರಣೆ ತುಕಡಿಯ ಮುಂದಾಳತ್ವವನ್ನು ವಹಿಸಿದ್ದರು.
  • ಕಾರ್ಯನೈಪುಣ್ಯತೆಗಾಗಿ ಧನೋವಾ ರವರಿಗೆ ಅತಿ ವಿಶಿಷ್ಟ ಸೇವಾ ಪದಕ, ಯುದ್ದ ಸೇವಾ ಪದಕ ಮತ್ತು ವಾಯುಸೇನಾ ಪದಕ ಲಭಿಸಿದೆ.

ಕೊಚ್ಚಿ ಶಿಪ್ ಯಾರ್ಡ್ ನಿಂದ ಐಎನ್ಎಸ್ ಆಯುಷ್ ಗಸ್ತು ನೌಕೆ ಹಸ್ತಾಂತರ

ಕೊಚ್ಚಿ ಶಿಪ್ ಯಾರ್ಡ್ ನಿರ್ಮಾಣದ ವೇಗವಾಗಿ ಚಲಿಸಬಲ್ಲ ಗಸ್ತು ನೌಕೆ ಐಸಿಜಿಎಸ್ ಆಯುಷ್ ಅನ್ನು ಭಾರತೀಯ ಕರಾವಳಿ ಭದ್ರತ ಪಡೆಗೆ ಹಸ್ತಾಂತರಿಸಿತು. ಇದು ಕೊಚ್ಚಿ ಶಿಪ್ ಯಾರ್ಡ್ ನಿರ್ಮಾಣದ 20ನೇ ಗಸ್ತು ನೌಕೆಯಾಗಿದೆ. ಆ ಮೂಲಕ ಕೊಚ್ಚಿ ಶಿಪ್ ಯಾರ್ಡ್ ಒಪ್ಪಂದದ ಪ್ರಕಾರ ಭಾರತೀಯ ಕರಾವಳಿ ಪಡೆಗೆ 20 ವೇಗವಾಗಿ ಚಲಿಸಬಲ್ಲ ಗಸ್ತು ನೌಕೆಯನ್ನು ಹಸ್ತಾಂತರಿಸಿದಂತಾಗಿದೆ. ಐಸಿಜಿಎಸ್ ಆಯುಷ್ ಕೃಷ್ಣಪಟ್ಟಣಂನಲ್ಲಿರುವ ಕರಾವಳಿ ಭದ್ರತಪಡೆಯ ನಿಲ್ದಾಣದಿಂದ ಕಾರ್ಯನಿರ್ವಹಿಸಲಿದೆ. ಈ ಸರಣಿ ನೌಕೆಗಳ ಕೊನೆಯದಾಗಿದ್ದು, ನಿಗದಿತ ಅವಧಿಗಿಂತ ಮೂರು ತಿಂಗಳ ಮುಂಚಿತವಾಗಿ ಹಸ್ತಾಂತರಿಸಲಾಗಿದೆ.

ಹಿನ್ನಲೆ:

  • ಅಕ್ಟೋಬರ್ 2010ರಲ್ಲಿ 20 ವೇಗವಾಗಿ ಚಲಿಸಬಲ್ಲ ಗಸ್ತು ನೌಕೆಗಳನ್ನು ನಿರ್ಮಿಸಲು ಕೊಚ್ಚಿ ಶಿಪ್ ಯಾರ್ಡ್ ಗೆ ಒಪ್ಪಂದ ನೀಡಲಾಗಿತ್ತು. ಅದರಂತೆ 2013ರಲ್ಲಿ ಕೊಚ್ಚಿ ಶಿಪ್ ಯಾರ್ಡ್ ಮೊದಲ ಗಸ್ತು ನೌಕೆಯನ್ನು ಹಸ್ತಾಂತರ ಮಾಡಿತ್ತು.
  • ಆ ನಂತರ ಎರಡು ತಿಂಗಳ ಅಂತರದಲ್ಲಿ ಉಳಿದ ಗಸ್ತು ನೌಕೆಗಳನ್ನು ಭಾರತೀಯ ಕರಾವಳಿ ಭದ್ರತ ಪಡೆಗೆ ಹಸ್ತಾಂತರಿಸಲಾಗಿತ್ತು.
  • ಈ ನೌಕೆಗಳು 50ಮೀ ಉದ್ದವಿದ್ದು, 7.6 ಮೀಟರ್ ಬೀಮ್ ಅನ್ನು ಹೊಂದಿವೆ.

ವೇಗವಾಗಿ ಚಲಿಸಬಲ್ಲ ಗಸ್ತುನೌಕೆ (Fast Patrol Vessel):

  • ಭಾರತೀಯ ಕರಾವಳಿ ತೀರಾದ ಮೇಲೆ ಕಣ್ಗಾವಲಿರಿಸುವಲ್ಲಿ ಈ ಗಸ್ತು ನೌಕೆಗಳು ಪ್ರಮುಖ ಪಾತ್ರವಹಿಸುತ್ತವೆ. ಕಳ್ಳಸಾಗಣಿಕೆ, ಸಮುದ್ರ ಕಳ್ಳತನ, ರಕ್ಷಣೆ ಕಾರ್ಯ ಹಾಗೂ ಮೀನುಗಳ ಸಂರಕ್ಷಣೆ ಮತ್ತು ಮೀನುಗಳ ನಿಗಾವಹಿಸಲು ಈ ನೌಕೆಗಳನ್ನು ಬಳಸಲಾಗುತ್ತಿದೆ.

ಭಾರತೀಯ ಮೂಲದ ಶಂಕರ್ ಬಾಲಸುಬ್ರಮಣಿಯನ್ ಗೆ ನೈಟ್ ಹುಡ್ ಗೌರವ

ಭಾರತೀಯ ಮೂಲದ ರಸಾಯನವಿಜ್ಞಾನ ಪ್ರಾಧ್ಯಪಕ ಹಾಗೂ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಜೀವಕೋಶ ತಜ್ಞ  ಶಂಕರ್‌ ಬಾಲಸುಬ್ರಮಣಿಯನ್‌ ಅವರಿಗೆ  ಬ್ರಿಟನ್‌ ರಾಣಿ ಎರಡನೇ ಎಲಿಜಬೆತ್‌ ನೀಡುವ ಪ್ರತಿಷ್ಠಿತ ನೈಟ್‌ಹುಡ್‌ ಪುರಸ್ಕಾರ ಲಭಿಸಿದೆ. ಶಂಕರ್‌ ಅವರು ಹೊಸ ಪೀಳಿಗೆಯ ಡಿಎನ್‌ಎ ಕುರಿತು ಮಾಡಿರುವ ಸಂಶೋಧನೆಯನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ. ಈ ಸಂಶೋಧನೆ ದಶಕದಲ್ಲಿ ಜೀವಶಾಸ್ತ್ರ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಭಾರಿ ಬದಲಾವಣೆಗೆ ಕಾರಣವಾಗಲಿದೆ ಎನ್ನಲಾಗಿದೆ.

ಶಂಕರ್ ಸುಬ್ರಮಣಿಯನ್ ಬಗ್ಗೆ:

  • ಶಂಕರ್ ಬಾಲಸುಬ್ರಮಣಿಯನ್ ರವರು 30ನೇ ಸೆಪ್ಟೆಂಬರ್ 1966ರಲ್ಲಿ ಚೆನ್ನೈನಲ್ಲಿ ಜನಿಸಿದ್ದಾರೆ. ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ “ರಿಯಾಕ್ಷನ್ ಮೆಕಾನಿಸಂ ಆಫ್ ದಿ ಎಂಜೈಮ್ ಕ್ರೊರಿಸ್ಮೆಟ್ ಸಿಂಥೆಸ್”ವಿಷಯದ ಮೇಲೆ ಪಿಎಚ್ಡಿ ಪದವಿಯನ್ನು ಪಡೆದಿದ್ದಾರೆ.
  • ನ್ಯೂಕ್ಲಿಕ್ ಆಸಿಡ್ ಕ್ಷೇತ್ರಕ್ಕೆ ನೀಡಿರುವ ಗಣನೀಯ ಕೊಡುಗೆಯಿಂದ ಪ್ರಸಿದ್ದರಾಗಿರುವ ಶಂಕರ್ ರವರು ಸೊಲೆಕ್ಸ ಮತ್ತು ಕೇಂಬ್ರಿಡ್ಜ್ ಎಪಿಜೆನೆಟಿಕ್ಸ್ ನ ವೈಜ್ಞಾನಿಕ ಸಂಸ್ಥಾಪಕರಾಗಿದ್ದಾರೆ.
  • ಪ್ರಸ್ತುತ ಇವರು ಕೇಂಬ್ರಿಜ್‌ ವಿಶ್ವವಿದ್ಯಾಲಯದಲ್ಲಿ ಔಷಧ ರಸಾಯನ ವಿಜ್ಞಾನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ನೈಟ್ ಹುಡ್ ಗೌರವ:

ನೈಟ್ ಹುಡ್ ಪ್ರಶಸ್ತಿ ಯುಕೆಯಲ್ಲಿ ವ್ಯಕ್ತಿಯೊಬ್ಬರಿಗೆ ನೀಡಲಾಗುವ ಅತ್ಯುನ್ನತ ಗೌರವವಾಗಿದೆ. ಈ ಪ್ರಶಸ್ತಿಯನ್ನು ಪಡೆದುಕೊಂಡವರು ತಮ್ಮ ಹೆಸರಿನ ಮುಂದೆ “ಸರ್” ಶೀರ್ಷಿಕೆಯನ್ನು ಸೇರಿಸಕೊಳ್ಳಲು ಅರ್ಹರಾಗಿರುತ್ತಾರೆ. ನೈಟ್ ಹುಡ್ ಪ್ರಶಸ್ತಿಯನ್ನು ಬ್ರಿಟನ್ ರಾಣಿ ಅಥವಾ ರಾಣಿಯ ಪರವಾಗಿ ರಾಯಲ್ ಕಿಂಗ್ ಕುಟುಂಬದ ಸದಸ್ಯರು ಪ್ರಧಾನ ಮಾಡುತ್ತಾರೆ.

ಶ್ರದ್ದಾ ಮತ್ತು ಘ್ಯಾನಶಾಮ್ ಕುಮಾರ್ ದೇವನಾಶ್ ಗೆ 2016 ಭಾರತೀಯ ಜ್ಞಾನಪೀಠ ನವಲೇಖನ ಪ್ರಶಸ್ತಿ

ಭಾರತೀಯ ಜ್ಞಾನಪೀಠ ನವಲೇಖನ 2016ನೇ ಸಾಲಿನ ಪ್ರಶಸ್ತಿಗೆ ಹೆಸರಾಂತ ಇಬ್ಬರು ಹಿಂದಿ ಲೇಖಕರಾದ ಶ್ರದ್ದಾ ಮತ್ತು ಘ್ಯಾನಶಾಮ್ ಕುಮಾರ್ ದೇವನಾಶ್ ರವರನ್ನು ಆಯ್ಕೆಮಾಡಲಾಗಿದೆ. ಶ್ರದ್ದಾ ರವರ ಸಣ್ಣಕಥೆ “ಹವಾ ಮೇನ್ ಫಾದ್ಪಾದತಿ ಛಿತ್ತಿ” ಮತ್ತು ದೇವನಾಶ್ ರವರ “ಆಕಾಶ್ ಮೇನ್ ದೆಹ್” ಕವಿತೆಗೆ ಪ್ರಶಸ್ತಿಯನ್ನು ನೀಡಲಾಗಿದೆ. ಪ್ರಖ್ಯಾತ ಕವಿ ವಿಷ್ಣು ನಗರ್ ನೇತೃತ್ವದ ಆಯ್ಕೆಮಂಡಳಿ ಈ ಇಬ್ಬರನ್ನು ಪ್ರಶಸ್ತಿಗೆ ಆಯ್ಕೆಮಾಡಿದೆ.

ಜ್ಞಾನಪೀಠ ನವಲೇಖನ ಪ್ರಶಸ್ತಿ:

  • ಜ್ಞಾನಪೀಠ ನವಲೇಖನ ಪ್ರಶಸ್ತಿಯನ್ನು ಯುವ ಲೇಖಕರ ಮೊದಲ ರಚನೆಗೆ ನೀಡಲಾಗುತ್ತಿದೆ.
  • ಭಾರತೀಯ ಜ್ಞಾನಪೀಠ ಟ್ರಸ್ಟ್ 2006ರಲ್ಲಿ ಪ್ರಶಸ್ತಿಯನ್ನು ಸ್ಥಾಪಿಸಿದೆ.
  • ಪ್ರಶಸ್ತಿಯು ಸರಸ್ವತಿ ದೇವಿ ಪ್ರತಿಮೆ, ಫಲಕ ಹಾಗೂ ನಗದು ಬಹುಮಾನವನ್ನು ಒಳಗೊಂಡಿದೆ.

One Thought to “ಪ್ರಚಲಿತ ವಿದ್ಯಮಾನಗಳು-ಜನವರಿ-1,2017”

  1. Gangadhara

    Thank you sir

Leave a Comment

This site uses Akismet to reduce spam. Learn how your comment data is processed.