ಭಾರತ-ಯುಕೆ ಎರಡು ಒಡಂಬಡಿಕೆ ಒಪ್ಪಂದಕ್ಕೆ ಸಹಿ

ಭಾರತ ಮತ್ತು ಯುನೈಟೆಡ್ ಕಿಂಗ್ಡಮ್ ಎರಡು ಮಹತ್ವದ ಒಡಂಬಡಿಕೆಗೆ ಒಪ್ಪಂದಕ್ಕೆ ಸಹಿ ಹಾಕಿದ್ದು, ಉಭಯ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಸುಗಮಕೊಳ್ಳಲಿದೆ. ಯುಕೆ ಪ್ರಧಾನ ಮಂತ್ರಿ ಥೆರೆಸಾ ಮೇ ಅವರು ಮೂರು ದಿವಸಗಳ ಕಾಲ ಭಾರತ ಪ್ರವಾಸದ ಆಗಮಿಸಿರುವ ವೇಳೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಬ್ರಿಟನ್ ಪ್ರಧಾನಿಯಾದ ನಂತರ ಥೆರೆಸಾ ಮೇ ಅವರು ಯುರೋಪ್ ನಂತರ ಇದೇ ಮೊದಲ ಬಾರಿಗೆ ಬೇರೆ ದೇಶಕ್ಕೆ ಭೇಟಿನೀಡಿದ್ದಾರೆ.

ಸಹಿ ಹಾಕಲಾದ ಒಪ್ಪಂದಗಳು:

  • ಸುಲಭ ವಹಿವಾಟು ನಡೆಸುವ ಕುರಿತಾದ ಒಪ್ಪಂದ: ಈ ಒಪ್ಪಂದದಡಿ ಯುಕೆ ತಜ್ಞರು ಭಾರತಕ್ಕೆ ಭೇಟಿ ನೀಡಿ, ಸಂಬಂಧಪಟ್ಟ ಇಲಾಖೆ ಮತ್ತು ಏಜೆನ್ಸಿಗಳಿಗೆ ಅಗತ್ಯ ಸಲಹೆ ನೀಡಿ ಸುಲಭ ವಹಿವಾಟು ನಡೆಸಲು ಸಹಕರಿಸಲಿದ್ದಾರೆ. ಸುಲಭ ವಹಿವಾಟು ನಡೆಸುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತದ ಶ್ರೇಣಿಯನ್ನು ಸುಧಾರಿಸಲು ತಾಂತ್ರಿಕ ನೆರವು, ಅತ್ಯುತ್ತಮ ವಿಧಾನಗಳನ್ನು ಯುಕೆ ಭಾರತದೊಂದಿಗೆ ಹಂಚಿಕೊಳ್ಳಲಿದೆ.
  • ಭೌದ್ದಿಕ್ಕ ಆಸ್ತಿ ಕ್ಷೇತ್ರದಲ್ಲಿ ಒಡಂಬಡಿಕೆ ಒಪ್ಪಂದ: ಭಾರತದ ಕೈಗಾರಿಕಾ ನೀತಿ ಮತ್ತು ಉತ್ತೇಜನ ಇಲಾಖೆ ಹಾಗೂ ಯುಕೆ ಭೌದ್ದಿಕ ಆಸ್ತಿ ಕಚೇರಿ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಭೌದ್ದಿಕ ಆಸ್ತಿ ಕ್ಷೇತ್ರ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಮತ್ತು ಯುಕೆ ಭೌದ್ದಿಕ ಕಚೇರಿಗಳ ನಡುವೆ ಪರಸ್ಪರ ಸಹಕಾರ ವೃದ್ದಿಸುವುದು ಈ ಒಪ್ಪಂದದ ಉದ್ದೇಶವಾಗಿದೆ.

ಸೌರವ್ಯೂಹದ ಲೋಹದ ಕ್ಷುದ್ರಗ್ರಹ “ಸೈಕ್”ನಲ್ಲಿ ನೀರಿನ ಕುರುಹು ಪತ್ತೆ   

ಸೌರವ್ಯೂಹದ ಅತಿದೊಡ್ಡ ಲೋಹ ಕ್ಷುದ್ರಗ್ರಹ “ಸೈಕ್(Psyche)”ನಲ್ಲಿ ನೀರು ಇರುವಿಕೆಯ ಕುರುಹನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.  ನಾಸಾದ ಹೊಸ ಇನ್ಪ್ರಾರೆಡ್ ಟೆಲಿಸ್ಕೋಪ್ ಫೆಸಿಲಿಟಿ ಬಳಸಿ ವಿಜ್ಞಾನಿಗಳು ಈ ಸಂಶೋಧನೆ ಕೈಗೊಂಡಿದ್ದಾರೆ. ಈ ದೂರದರ್ಶಕವನ್ನು ಬಳಸಿ ನಡೆಸಲಾದ ಅಧ್ಯಯನದಲ್ಲಿ ಸೈಕ್ ಕ್ಷುದ್ರಗ್ರಹದ ಮೇಲೆ ನೀರು ಅಥವಾ ಹೈಡ್ರಾಕ್ಸಿಲ್ ಇರುವುದನ್ನು ಪತ್ತೆಹಚ್ಚಲಾಗಿದೆ.

  • ಸೈಕ್ ಕ್ಷುದ್ರಗ್ರಹದ ಮೇಲೆ ಪತ್ತೆಹಚ್ಚಲಾಗಿರುವ ನೀರು ಅಥವಾ ಹೈಡ್ರಾಕ್ಸಿಲ್ ಮೂಲ ಯಾವುದೆಂಬುದು ರಹಸ್ಯವಾಗಿ ಉಳಿದಿದೆ.
  • ಸುಮಾರು ವರ್ಷಗಳ ಹಿಂದೆ ಇಂಗಾಲದ ಕ್ಷುದ್ರಗ್ರಹ ಸೈಕ್ ಕ್ಷುದ್ರಗ್ರಹಕ್ಕೆ ಅಪ್ಪಳಿಸಿದ ಕಾರಣ ಖನಿಜ ಭರಿತ ನೀರು ಸಂಭವಿಸಿರಬಹುದೆಂದು ನಂಬಲಾಗಿದೆ.

ಸೈಕ್ ಕ್ಷುದ್ರಗ್ರಹ:

  • ಸೈಕ್ ಕ್ಷುದ್ರಗ್ರಹ ಸೌರವ್ಯೂಹದ ಅತಿದೊಡ್ಡ ಲೋಹ ಭರಿತ ಕ್ಷುದ್ರಗ್ರಹ
  • ಶುದ್ದ ನಿಕ್ಕಲ್-ಕಬ್ಬಿಣ ಲೋಹದಿಂದ ಈ ಕ್ಷುದ್ರಗ್ರಹ ರೂಪುಗೊಂಡಿದ್ದು, ಕ್ಷುದ್ರಗ್ರಹ ಪಟ್ಟಿಯಲ್ಲಿದೆ.
  • ಸೈಕ್ ಕ್ಷುದ್ರಗ್ರಹ ಕೋಟ್ಯಾಂತರ ವರ್ಷಗಳ ಹಿಂದೆ ನಾಶವಾದ ಗ್ರಹದ ಅವಶೇಷ ಎಂದು ವಿಜ್ಷಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಸಿಂಗಟಾಲೂರು ಏತನೀರಾವರಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ

ಗದಗ, ಕೊಪ್ಪಳ, ಬಳ್ಳಾರಿ ಜಿಲ್ಲೆಯ ಕೃಷಿ ಜಮೀನು ನೀರಾವರಿ ಯೋಜನೆಯ ಎಡಭಾಗದ ಮೊದಲ ಹಂತದ ನೀರೆತ್ತುವ ಯೋಜನೆಗೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಮ್ಮಿಗಿ ಗ್ರಾಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು.

ಯೋಜನೆಯ ಬಗ್ಗೆ:

  • ಮುಂಡರಗಿ ತಾಲೂಕಿನ ಹಮ್ಮಿಗಿ ಬಳಿ ತುಂಗಭದ್ರಾ ನದಿಗೆ ಬ್ಯಾರೇಜು ನಿರ್ಮಿಸಿ ಎಡ ಹಾಗೂ ಬಲಬದಿಗಳ ಏತ ನೀರಾವರಿ ಸೌಲಭ್ಯ ಒದಗಿಸುವುದೇ ಇದರ ಮೂಲ ಉದ್ದೇಶ.
  • ಸಿಂಗಟಾಲೂರು ಏತ ನೀರಾವರಿ ಯೋಜನೆಯಡಿ ತುಂಗಭದ್ರಾ ನದಿಯಿಂದ ಗದಗ, ಕೊಪ್ಪಳ, ಬಳ್ಳಾರಿ ಜಿಲ್ಲೆಯ 40 ಸಾವಿರ ಎಕರೆ ಕೃಷಿ ಜಮೀನಿಗೆ ನೀರಾವರಿ ಸೌಲಭ್ಯ ಒದಗಿಸಲಾಗುವುದು.
  • ಈ ಯೋಜನೆಯಗೆ ರಾಜ್ಯ ಸರ್ಕಾರ 1991-92ರಲ್ಲಿ ಅನುಮೋದನೆ ನೀಡಿತ್ತು. ಅದರಂತೆ ರೂ. 63.62 ಕೋಟಿ ವೆಚ್ಷದಲ್ಲಿ64 ಟಿ.ಎಂ.ಸಿ. ನೀರು ಬಳಕೆ ಮಾಡಲು ಮೊದಲು ನಿರ್ಧರಿಸಲಾಗಿತ್ತು.
  • ತದನಂತರ 2000 ನೇ ವರ್ಷದಲ್ಲಿ ಅಂದು ಜಲಸಂಪನ್ಮೂಲ ಖಾತೆ ಸಚಿವರಾಗಿದ್ದ ಎಚ್.ಕೆ.ಪಾಟೀಲರು ಈ ಯೋಜನೆಯ ವ್ಯಾಪ್ತಿ ಹೆಚ್ಚಿಸಿ ಹೆಚ್ಚುವರಿಯಾಗಿ91 ಟಿ.ಎಂ.ಸಿ. ನೀರು ಹಂಚಿಕೆ ಮಾಡಿಸಿ ಪರಿಷ್ಕೃತ 595 ಕೋಟಿ ರೂ. ವೆಚ್ಚಕ್ಕೆ ಅನುಮೋದನೆ ದೊರಕಿಸಿದ್ದರು.
  • 2015 ರ ರಾಜ್ಯ ಬಜೆಟ್ ನಲ್ಲಿ ಪರಿಷ್ಕೃತ 5768 ಕೋಟಿ ರೂ. ಅನುದಾನ ಒದಗಿಸಿ 48,381 ಎಕರೆ ಹರಿ ನೀರಾವರಿ ಹಾಗೂ 2,16,848 ಎಕರೆ ಹನಿ ನೀರಾವರಿ ಒಟ್ಟು65 ಲಕ್ಷ ಎಕರೆ ಕೃಷಿ ಜಮೀನಿಗೆ ನೀರಾವರಿ ಕಲ್ಪಿಸುವುದಕ್ಕೆ ಅವಕಾಶ ನೀಡಿದರು.
  • ಇದರನ್ವಯ ಬಳ್ಳಾರಿಯ ಹೂವಿನ ಹಡಗಲಿ ಯೋಜಿತ ಅಚ್ಚುಕಟ್ಟು ಪ್ರದೇಶ 35,791 ಎಕರೆ, ಕೊಪ್ಪಳ ತಾಲೂಕಿನಲ್ಲಿ 15,520 ಸೂಕ್ಷ್ಮ ನೀರಾವರಿ ಸೇರಿದಂತೆ ಒಟ್ಟು 55,706 ಹಾಗೂ ಯಲಬುರ್ಗಾದಲ್ಲಿ 14,624 ಸೂಕ್ಷ್ಮ ನೀರಾವರಿಯ 14,624 ಎಕರೆ ಪ್ರದೇಶಗಳು ನೀರಾವರಿ ಸೌಲಭ್ಯ ದೊರಕಲಿದೆ (ಕೃಪೆ: ಒನ್ ಇಂಡಿಯಾ).

ನಾಸಾದ ಎಂಎಂಎಸ್ ಮಿಷನ್ ಗಿನ್ನಿಸ್ ದಾಖಲೆಗೆ ಸೇರ್ಪಡೆ

ನಾಸಾದ ಮ್ಯಾಗ್ನೆಟೋಸ್ಪೆರಿಕ್ ಮಲ್ಟಿಸ್ಕೇಲ್ ಮಿಷನ್ (Magnetospheric Multiscale Mission) ಗಿನ್ನಿಸ್ ದಾಖಲೆ ಸೇರ್ಪಡೆಗೊಂಡಿದೆ. ಭೂಮಿಯಿಂದ ಮೇಲೆ ಅತಿ ಎತ್ತರದಲ್ಲಿ ಗ್ಲೋಬಲ್ ಪೊಸಿಷನಿಂಗ್ ಸಿಸ್ಟಂ ಸಂಕೇತ ಸಾಧಿಸುವ ಮೂಲಕ ಗಿನ್ನಿಸ್ ದಾಖಲೆ ಸೇರ್ಪಡೆಗೊಂಡಿದೆ. ಮ್ಯಾಗ್ನೆಟೋಸ್ಪೆರಿಕ್ ಮಲ್ಟಿಸ್ಕೇಲ್ ಮಿಷನ್ ನ ನಾಲ್ಕು ಉಪಗ್ರಹಗಳು ಭೂಮಿಯ ಮೇಲ್ಮೈ ಮೇಲೆ 70,006.0 ಕಿ.ಮೀ ಎತ್ತರದಲ್ಲಿ ಕಾರ್ಯನಿರ್ವಹಿಸಿ ದಾಖಲೆ ನಿರ್ಮಿಸಿವೆ.

ಎಂಎಂಎಸ್ ಮಿಷನ್ ಬಗ್ಗೆ:

  • ಭೂಮಿಯ ಕಾಂತಗೋಳವನ್ನು ಅಧ್ಯಯನ ನಡೆಸುವ ಸಲುವಾಗಿ ನಾಸಾ ಹಾರಿಬಿಟ್ಟಿರುವ ಮಾನವ ರಹಿತ ಬಾಹ್ಯಕಾಶ ನೌಕೆಯಾಗಿದ್ದು, ಪಿರಮಿಡ್ ಸ್ವರೂಪದಲ್ಲಿ ಹಾರುವ ನಾಲ್ಕು ಉಪಗ್ರಹಗಳನ್ನು ಹೊಂದಿದೆ.
  • 2005 ರಲ್ಲಿ ಈ ನೌಕೆಯನ್ನು ನಾಸಾ ಉಡಾಯಿಸಿದೆ. ಸೂರ್ಯ ಹಾಗೂ ಭೂಮಿಯ ಕಾಂತ ಕ್ಷೇತ್ರ ಸಂವಹನದಿಂದ ಉಂಟಾಗುವ ಕಾಂತೀಯ ಮರುಜೋಡಣೆ ಪ್ರಕ್ರಿಯೆಯನ್ನು ಗುರುತಿಸುವುದು ಈ ಮಿಷನ್ ಉದ್ದೇಶ.
  • ಕಾಂತೀಯ ಮರುಜೋಡಣೆ ಅಧ್ಯಯನ ಅತ್ಯಂತ ಮಹತ್ವದಾಗಿದ್ದು, ಭೂಮಿಯ ಮೇಲಾಗುವ ಅರೋರಾ ಪ್ರಕ್ರಿಯೆ, ಸೂರ್ಯನ ಮೇಲ್ಮೈ ಸ್ಫೋಟಕಗಳು ಮತ್ತು ಕಪ್ಪು ಗುಳಿಗಳ ಬಗ್ಗೆ ತಿಳಿದುಕೊಳ್ಳಲು ಸಹಾಯವಾಗಲಿದೆ.

Leave a Comment

This site uses Akismet to reduce spam. Learn how your comment data is processed.