ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ನವೆಂಬರ್-8, 2016

Question 1

1.ಜಾಗತಿಕ ವ್ಯವಹಾರ ಆಶಾದಾಯಕ ಸೂಚ್ಯಂಕ (Global Business Optimism Index)ನಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ?

A
ಒಂದನೇ ಸ್ಥಾನ
B
ಎರಡನೇ ಸ್ಥಾನ
C
ಮೂರನೇ ಸ್ಥಾನ
D
ನಾಲ್ಕನೇ ಸ್ಥಾನ
Question 1 Explanation: 
ಎರಡನೇ ಸ್ಥಾನ:

ಇತ್ತೀಚೆಗೆ ಬಿಡುಗಡೆಗೊಂಡ ಗ್ರಾಂಟ್ ಥೋರ್ನಟನ್ ಇಂಟರ್ನ್ಯಾಶನಲ್ ಬ್ಯುಸಿನೆಸ್ ವರದಿ ಪ್ರಕಾರ ಜಾಗತಿಕ ವ್ಯವಹಾರ ಆಶಾದಾಯಕ ಸೂಚ್ಯಂಕದಲ್ಲಿ (ಜುಲೈ-ಸೆಪ್ಟೆಂಬರ್ ಅವಧಿ) ಭಾರತ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಏಪ್ರಿಲ್-ಜೂನ್ ಅವಧಿಯಲ್ಲಿ ಭಾರತ ಮೂರನೇ ಸ್ಥಾನದಲ್ಲಿತ್ತು. ಫಿಲಿಫೈನ್ಸ್ ರಾಷ್ಟ್ರವನ್ನು ಹಿಂದಿಕ್ಕೆ ಎರಡನೇ ಸ್ಥಾನಕ್ಕೆ ಜಿಗಿದಿದೆ.

Question 2

2.ಕೇರಳ ಸರ್ಕಾರದ ನಿಧಿ ದತ್ತಿ ಮತ್ತು ಸಲಹಾ ಆಯೋಗ (Fund Trustee and Advisory Commission) ಅಧ್ಯಕ್ಷರಾಗಿ ಯಾರು ನೇಮಕಗೊಂಡಿದ್ದಾರೆ?

A
ವಿನೋದ್ ರಾಯ್
B
ರಘರಾಮ್ ರಾಜನ್
C
ಶಶಿಕಾಂತ್ ಶರ್ಮಾ
D
ಸುದೀಂದ್ರ ಚಾವ್ಹಣ್
Question 2 Explanation: 
ವಿನೋದ್ ರಾಯ್:

ಮಾಜಿ ನಿವೃತ್ತ ಮಹಾಲೇಖಪಾಲ ವಿನೋದ್ ರಾಯ್ ರವರನ್ನು ಕೇರಳದ ನಿಧಿ ದತ್ತಿ ಮತ್ತು ಸಲಹಾ ಆಯೋಗದ ಅಧ್ಯಕ್ಷರನ್ನಾಗಿ ನೇಮಕಮಾಡಲಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ನ ಮಾಜಿ ಡೆಪ್ಯೂಟಿ ಗವರ್ನರ್ ಉಷಾ ಥೋರಟ್ ಮತ್ತು ನಬಾರ್ಡ್ ಮಾಜಿ ಅಧ್ಯಕ್ಷ ಪ್ರಕಾಶ್ ಬಕ್ಷಿ ರವರನ್ನು ಆಯೋಗದ ಸದಸ್ಯರಾಗಿ ನೇಮಕ ಮಾಡಲಾಗುವುದು.

Question 3

3.ಅಮೆರಿಕ ಶಾಸಕಾಂಗದ ಮೇಲ್ಮನೆ ಸೆನೆಟ್ ಗೆ ಆಯ್ಕೆಯಾದ ಮೊದಲ ಭಾರತೀಯ ಸಂಜಾತೆ ಯಾರು?

A
ಪ್ರಮೀಳಾ ಜಯಪಾಲ್
B
ಕಮಲಾ ಹ್ಯಾರೀಸ್
C
ಉಷಾ ಥೋರಟ್
D
ರಾಧಾ ಜಯಚಂದ್ರನ್
Question 3 Explanation: 
ಕಮಲಾ ಹ್ಯಾರೀಸ್:

ಭಾರತ ಸಂಜಾತೆ ಕ್ಯಾಲಿಫೋರ್ನಿಯದ ಅಟಾರ್ನಿ ಜನರಲ್ ಕಮಲಾ ಹ್ಯಾರಿಸ್ ಅವರು ಅಮೆರಿಕಾದ ಸೆನೆಟರ್ ಆಗಿ ಆಯ್ಕೆಯಾಗುವುದರೊಂದಿಗೆ ಇತಿಹಾಸ ಬರೆದಿದ್ದಾರೆ. ತವರು ರಾಜ್ಯ ಕ್ಯಾಲಿಫೋರ್ನಿಯದಲ್ಲಿ ನಡೆದ ಚುನಾವಣೆಯಲ್ಲಿ ಪ್ರತಿಸ್ಪರ್ಧಿ ಡೆಮಾಕ್ರಟಿಕ್ ಪಕ್ಷದ ಲೊರೆಟ್ಟಾ ಸ್ಯಾಂಚೆಝ್ ವಿರುದ್ಧ 34.8 ಶೇ. ಅಂಕಗಳ ಅಂತರದಿಂದ ಗೆಲುವು ಸಾಧಿಸಿರುವ 51ರ ಪ್ರಾಯದ ಹ್ಯಾರಿಸ್ 1,904,714 ಮತಗಳನ್ನು ಪಡೆದಿದ್ದರು. ಹ್ಯಾರಿಸ್ ಅಮೆರಿಕದ ಶಾಸಕಾಂಗದ ಮೇಲ್ಮನೆ ಸೆನೆಟ್ಗೆ ಆಯ್ಕೆಯಾದ ಮೊದಲ ಭಾರತೀಯ ಸಂಜಾತೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Question 4

4. 2016 ರಿಪೋರ್ಟರ್ಸ್ ವಿಥೌಟ್ ಬಾರ್ಡರ್ ನೀಡುವ ಟಿವಿ5 ಮೊಂಡೆ ಪತ್ರಿಕಾ ಸ್ವಾತಂತ್ರ್ಯ ಪ್ರಶಸ್ತಿಗೆ ಯಾರನ್ನು ಆಯ್ಕೆಮಾಡಲಾಗಿದೆ?

A
ಸೈಫ್ ಅಲಿ ಖಾನ್
B
ಹದಿ ಅಬ್ದುಲ್ಲಾ
C
ದಿಯಾ ಸಿಂಗ್
D
ಹಫೀಝ್ ಖಾನ್
Question 4 Explanation: 
ಹದಿ ಅಬ್ದುಲ್ಲಾ:

ಸಿರಿಯಾದ ಸ್ವತಂತ್ರ ಪತ್ರಕರ್ತ ಹದಿ ಅಬ್ದುಲ್ಲಾ ರವರನ್ನು 2016 ರಿಪೋರ್ಟರ್ಸ್ ವಿಥೌಟ್ ಬಾರ್ಡರ್ ನೀಡುವ ಟಿವಿ5 ಮೊಂಡೆ ಪತ್ರಿಕಾ ಸ್ವಾತಂತ್ರ್ಯ ಪ್ರಶಸ್ತಿ (2016 Reporters Without Borders (RSF) – TV5 Monde Press Freedom Prize)ಗೆ ಆಯ್ಕೆಮಾಡಲಾಗಿದೆ. ಯುದ್ದ ಪೀಡಿತ ಸಿರಿಯಾದ ಅತ್ಯಂತ ಅಪಾಯಕಾರಿ ಪ್ರದೇಶಗಳಲ್ಲಿ ಅಂಜದೆ ವರದಿ ಮಾಡಿದಕ್ಕಾಗಿ ಅವರನ್ನು ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಈ ಪ್ರದೇಶಗಳಿಗೆ ಭೇಟಿ ನೀಡಲು ಪಾಶ್ಚಿಮಾತ್ಯ ಪತ್ರಕರ್ತರು ಹಿಂದೇಟು ಹಾಕುತ್ತಿರುವಾಗ ಅದನ್ನು ಲೆಕ್ಕಿಸದೆ ಅಬ್ದುಲ್ಲಾ ಅವರು ಜೀವದ ಹಂಗು ತೊರೆದು ವರದಿ ನೀಡಿದ್ದರು.

Question 5

5. ರಣಜಿ ಟ್ರೋಫಿಯಲ್ಲಿ ವೇಗದ ಶತಕ ಬಾರಿಸಿ ಹೊಸ ದಾಖಲೆ ಬರೆದ ಕ್ರಿಕೆಟ್ ಆಟಗಾರ ಯಾರು?

A
ರಾಬಿನ್ ಉತ್ತಪ್ಪ
B
ರಿಷಬ್ ಪಂತ್
C
ಗೌತಮ್ ಗಂಭೀರ್
D
ಅಂಬಾಟಿ ರಾಯುಡು
Question 5 Explanation: 
ರಿಷಬ್ ಪಂತ್:

ದೆಹಲಿ ತಂಡದ ವಿಕೆಟ್ಕೀಪರ್-ಬ್ಯಾಟ್ಸ್ಮನ್ ರಿಷಬ್ ಪಂತ್ ರಣಜಿ ಟ್ರೋಫಿಯಲ್ಲಿ ವೇಗದ ಶತಕವನ್ನು ಬಾರಿಸುವ ಮೂಲಕ ಇತಿಹಾಸದ ಪುಟದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಜಾರ್ಖಂಡ್ ವಿರುದ್ಧದ ರಣಜಿ ಟ್ರೋಫಿಯ ನಾಲ್ಕನೆ ದಿನದಾಟದಲ್ಲಿ ದೆಹಲಿಯ ಪರ ಎರಡನೆ ಇನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡಿದ ಪಂತ್ ಕೇವಲ 48 ಎಸೆತಗಳಲ್ಲಿ ಶತಕ ಪೂರೈಸಿ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ವೇಗದ ಶತಕ ಬಾರಿಸಿದರು. 48 ಎಸೆತಗಳಲ್ಲಿ ಶತಕ ಪೂರೈಸಿದ ಪಂತ್ ತಮಿಳುನಾಡಿನ ಮಾಜಿ ಆರಂಭಿಕ ಆಟಗಾರ ಚಂದ್ರಶೇಖರ್ ಹಾಗೂ ಒಡಿಶಾದ ನಮನ್ ಓಜಾ ದಾಖಲೆಯನ್ನು ಮುರಿದರು. 1988-89ರ ಆವೃತ್ತಿಯಲ್ಲಿ ಚಂದ್ರಶೇಖರ್ ಶೇಷ ಭಾರತದ ವಿರುದ್ಧ 56 ಎಸೆತಗಳಲ್ಲಿ ಶತಕ ಪೂರೈಸಿದ್ದರು. 2015ರಲ್ಲಿ ನಮನ್ ಓಜಾ ರಣಜಿ ಟ್ರೋಫಿಯಲ್ಲಿ 69 ಎಸೆತಗಳಲ್ಲಿ ಶತಕ ಪೂರೈಸಿದ್ದರು.

Question 6

6. ಇತ್ತೀಚೆಗೆ ನಿಧನರಾದ “ಗಿರೀಶ್ ನಿಕಂ” ಯಾವ ಕ್ಷೇತ್ರಕ್ಕೆ ಸಂಬಂಧಿಸಿದ್ದಾರೆ?

A
ಪತ್ರಿಕೋದ್ಯಮ
B
ವಿಜ್ಞಾನ
C
ಸಾಹಿತ್ಯ
D
ಕ್ರೀಡೆ
Question 6 Explanation: 
ಪತ್ರಿಕೋದ್ಯಮ:

ಹಿರಿಯ ಪತ್ರಕರ್ತ ಹಾಗೂ ರಾಜ್ಯಸಭೆ ಟಿವಿ ನಿರೂಪಕ ಗಿರೀಶ್ ನಿಕಂ (59) ಅವರು ತೀವ್ರ ಹೃದಯಾಘಾತದಿಂದ ನಿಧನ ಹೊಂದಿದರು. ಮೂಲತಃ ಮೈಸೂರಿನವರಾದ ನಿಕಂ 'ಸ್ಟಾರ್ ಆಫ್ ಮೈಸೂರು' ಪತ್ರಿಕೆ ಮೂಲಕ ವೃತ್ತಿ ಆರಂಭಿಸಿದ್ದರು. ಅನಂತರ 'ಇಂಡಿಯನ್್ ಎಕ್ಸ್ಪ್ರೆಸ್' ಪತ್ರಿಕೆ ಸೇರಿದ್ದರು. ರಾಜ್ಯಸಭಾ ಟಿವಿಗೆ ಸೇರುವ ಮುನ್ನ ಆಂಗ್ಲ ಮಾಧ್ಯಮ ಸಂಸ್ಥೆಗಳಾದ 'ಇಂಡಿಯಾ ಟುಡೆ', 'ಡೆಕ್ಕನ್ ಕ್ರಾನಿಕಲ್', 'ನ್ಯೂಸ್ ಟುಡೆ'ಯಲ್ಲೂ ಸೇವೆ ಸಲ್ಲಿಸಿದ್ದರು. ಎರಡು ದಶಕದಿಂದ ಅವರು ದೆಹಲಿಯಲ್ಲಿ ನೆಲೆಸಿದ್ದರು. ರಾಜ್ಯಸಭಾ ಟಿ.ವಿಯಲ್ಲಿ ಅವರು ನಡೆಸುತ್ತಿದ್ದ 'ಬಿಗ್ ಪಿಕ್ಚರ್ ಷೋ' ಜನಪ್ರಿಯವಾಗಿತ್ತು.

Question 7

7. ವಿಶ್ವದ ಮೊದಲ ಹೈಡ್ರೋಜನ್ ಚಾಲಿತ ಮತ್ತು ಶೂನ್ಯ ಹೊರಸೂಸುವಿಕೆ ಪ್ರಯಾಣಿಕರ ರೈಲನ್ನು ಯಾವ ದೇಶದಲ್ಲಿ ಪರಿಚಯಿಸಲಾಯಿತು?

A
ಜಪಾನ್
B
ಇಸ್ರೇಲ್
C
ಜರ್ಮನಿ
D
ರಷ್ಯಾ
Question 7 Explanation: 
ಜರ್ಮನಿ:

ವಿಶ್ವದ ಮೊದಲ ಹೈಡ್ರೋಜನ್ ಚಾಲಿತ ಮತ್ತು ಶೂನ್ಯ ಹೊರಸೂಸುವಿಕೆ ಪ್ರಯಾಣಿಕರ ರೈಲನ್ನು ಜರ್ಮನಿಯಲ್ಲಿ ಪರಿಚಯಿಸಲಾಗಿದೆ. ಈ ನೂತನ ರೈಲಿನ ಹೆಸರು ಕೊರಡಿಯ ಐಲಿಂಟ್ (Coradia ILint). ಈ ಪರಿಸರ ಸ್ನೇಹಿ ರೈಲನ್ನು ಫ್ರಾನ್ಸ್ ನ ಅಲ್ಸ್ಟೋಮ್ ಸಂಸ್ಥೆ ಅಭಿವೃದ್ದಿಪಡಿಸಿದೆ. ಈ ರೈಲು ಕೇವಲ ಹೆಚ್ಚುವರಿ ಹಬೆ ಮತ್ತು ಸಾಂದ್ರಿಕೃತ ನೀರನ್ನು ವಾತಾವರಣಕ್ಕೆ ಹೊರಸೂಸುತ್ತದೆ.

Question 8

8. 47ನೇ ಭಾರತೀಯ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ನಿರ್ದೇಶಕರ ಪದಾರ್ಪಣೆ ಅತ್ಯುತ್ತಮ ಚಿತ್ರ ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ಭಾರತದ ಏಕೈಕ ಚಿತ್ರ ಯಾವುದು?

A
ಕೋರ್ಟ್
B
ಹರಿಕಥಾ ಪ್ರಸಂಗ
C
ಸೈರೆಟ್
D
ಬಾಹುಬಲಿ
Question 8 Explanation: 
ಹರಿಕಥಾ ಪ್ರಸಂಗ:

ಕನ್ನಡದ ನಿರ್ದೇಶಕಿ ಅನನ್ಯಾ ಕಾಸರವಳ್ಳಿ ಅವರ 'ಹರಿಕಥಾ ಪ್ರಸಂಗ' ಚಿತ್ರವು 47ನೇ ಭಾರತೀಯ ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ (ಐಎಫ್ಎಫ್ಐ) ನಿರ್ದೇಶಕರ ಪದಾರ್ಪಣೆಯ ಅತ್ಯುತ್ತಮ ಚಿತ್ರ ವಿಭಾಗದ ಪ್ರಶಸ್ತಿಗಾಗಿ ಆರು ಅಂತರರಾಷ್ಟ್ರೀಯ ಸಿನಿಮಾಗಳೊಂದಿಗೆ ಸ್ಪರ್ಧಿಸಲಿದೆ.ಪ್ರತಿಷ್ಠಿತ ರಜತ ಮಯೂರ, ಪ್ರಮಾಣ ಪತ್ರ ಮತ್ತು ₹10 ಲಕ್ಷ ನಗದು ಇರುವ ಈ ಸ್ಪರ್ಧಾ ವಿಭಾಗದಲ್ಲಿ, 'ಒನ್ ವೀಕ್ ಆಯಂಡ್ ಎ ಡೇ', 'ರಾರಾ', 'ಟ್ರಾಮೊಂಟೇನ್', 'ಟೂ ಬರ್ಡ್ಸ್, ಒನ್ ಸ್ಟೋನ್', 'ವೂಲ್ಫ್ ಆಯಂಡ್ ಶೀಪ್ ಮತ್ತು 'ವ್ರಾಥ್' ಚಿತ್ರಗಳೊಂದಿಗೆ 'ಹರಿಕಥಾ ಪ್ರಸಂಗ ಪೈಪೋಟಿ ನಡೆಸಲಿದೆ. 'ಹರಿಕಥಾ ಪ್ರಸಂಗ' ಅನನ್ಯಾ ಕಾಸರವಳ್ಳಿ ಅವರ ನಿರ್ದೇಶನದ ಮೊದಲ ಸಿನಿಮಾವಾಗಿದ್ದು, ನಿರ್ದೇಶಕರ ಪದಾರ್ಪಣೆಯ ಅತ್ಯುತ್ತಮ ಚಿತ್ರ ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ಭಾರತದ ಏಕೈಕ ಚಿತ್ರವಾಗಿದೆ.

Question 9

9. ಯಾವ ರಾಜ್ಯದಲ್ಲಿ ಅಂತಾರಾಷ್ಟ್ರೀಯ ಕೃಷಿ ತಂತ್ರಜ್ಞಾನ ಮೇಳ (ಗ್ರಾಮ್-2016)ಗೆ ಚಾಲನೆ ನೀಡಲಾಯಿತು?

A
ಗುಜರಾತ್
B
ರಾಜಸ್ತಾನ
C
ಮಧ್ಯ ಪ್ರದೇಶ
D
ಒಡಿಶಾ
Question 9 Explanation: 
ರಾಜಸ್ತಾನ:

ಅಂತಾರಾಷ್ಟ್ರೀಯ ಕೃಷಿ ತಂತ್ರಜ್ಞಾನ ಮೇಳ (Global Rajastan Agritech Meet-2016) ರಾಜಸ್ತಾನದಲ್ಲಿ ಚಾಲನೆ ನೀಡಲಾಯಿತು.

Question 10

10. 2016 ಬ್ರಿಕ್ಸ್ ಸಂವಹನ ಸಚಿವರ ಸಭೆ (BRICS Communication Ministers) ಯಾವ ನಗರದಲ್ಲಿ ನಡೆಯಲಿದೆ?

A
ಪುಣೆ
B
ಬೆಂಗಳೂರು
C
ಮೈಸೂರು
D
ಹೈದ್ರಾಬಾದ್
Question 10 Explanation: 
ಬೆಂಗಳೂರು:

ಎರಡನೇ ಬ್ರಿಕ್ಸ್ ಸಂವಹನ ಸಚಿವರ ಸಭೆ ಬೆಂಗಳೂರಿನಲ್ಲಿ ನವೆಂಬರ್ 10 ರಂದು ನಡೆಯಲಿದೆ. ರಾಜ್ಯ ಖಾತೆ ಸಂಪರ್ಕ ಸಚಿವ ಮನೋಜ್ ಸಿನ್ಹಾ ರವರು ಸಭೆಯ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಎರಡು ದಿನಗಳ ಸಭೆಯಲ್ಲಿ ಬ್ರಿಕ್ಸ್ ರಾಷ್ಟ್ರಗಳ ಉನ್ನತ ಮಟ್ಟದ ಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಲಿದ್ದು, ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಪರಸ್ಪರ ಸಹಕಾರದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು.

There are 10 questions to complete.

[button link=”http://www.karunaduexams.com/wp-content/uploads/2016/11/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಕ್ವಿಜ್-ನವೆಂಬರ್-8.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

4 Thoughts to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ನವೆಂಬರ್-8, 2016”

  1. good questions hats up to u sir

Leave a Comment

This site uses Akismet to reduce spam. Learn how your comment data is processed.