ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ನವೆಂಬರ್-3, 2016

Question 1

1. ಯಾವ ರಾಜ್ಯ ದೇಶದಲ್ಲೆ ಮೊದಲ ಬಾರಿಗೆ ಎಲ್ಲಾ ಜಿಲ್ಲೆಗಳಲ್ಲಿ ಸೈಬರ್ ಪೊಲೀಸ್ ಠಾಣೆಯನ್ನು ಸ್ಥಾಪಸಲಿದೆ?

A
ಕೇರಳ
B
ಮಹಾರಾಷ್ಟ್ರ
C
ಗುಜರಾತ್
D
ಬಿಹಾರ್
Question 1 Explanation: 
ಮಹಾರಾಷ್ಟ್ರ:

ಮಹಾರಾಷ್ಟ್ರ ಸರ್ಕಾರ ರಾಜ್ಯದ 36 ಜಿಲ್ಲೆಗಳಲ್ಲಿ ಸೈಬರ್ ಪೊಲೀಸ್ ಠಾಣೆಯನ್ನು ಸ್ಥಾಪಿಸಲಿದೆ. ಆ ಮೂಲಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸೈಬರ್ ಪೊಲೀಸ್ ಠಾಣೆಯನ್ನು ಸ್ಥಾಪಿಸದ ಮೊದಲ ರಾಜ್ಯ ಗೌರವಕ್ಕೆ ಪಾತ್ರವಾಗಲಿದೆ. ರಾಜ್ಯದಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ 42 ಸೈಬರ್ ಕ್ರೈಂ ಲ್ಯಾಬ್ ಗಳನ್ನು ಪೊಲೀಸ್ ಠಾಣೆಗಳನ್ನಾಗಿ ಪರಿವರ್ತಿಸಲಾಗುವುದು. ಮಹಾರಾಷ್ಟ್ರದಲ್ಲಿ ಸೈಬರ್ ಅಪರಾಧಗಳು ಎಗ್ಗಿಲ್ಲದೇ ಹೆಚ್ಚುತ್ತಿರುವ ಕಾರಣ ಈ ಕ್ರಮಕ್ಕೆ ಮುಂದಾಗಿದೆ.

Question 2

2.ಇತ್ತೀಚೆಗೆ “ಮೈಕೆಲ್ ಅಹೌನ್ (Michael Aoun)” ಅವರು ಯಾವ ದೇಶದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ?

A
ಲೆಬಾನನ್
B
ಸೈಪ್ರಸ್
C
ಕ್ಯೂಬಾ
D
ನಮೀಬಿಯಾ
Question 2 Explanation: 
ಲೆಬಾನನ್ :

ಮಾಜಿ ಸೇನಾ ಕಮಾಂಡರ್ ಮೈಕಲ್ ಅಹೌನ್ ಅವರನ್ನು ಲೆಬಾನನ್ ಅಧ್ಯಕ್ಷರಾಗಿ ಲೆಬಾನನ್ ಸಂಸತ್ತು ಆಯ್ಕೆಮಾಡಿದೆ. ಅಧ್ಯಕ್ಷ ಚುನಾವಣೆಯಲ್ಲಿ ಮೈಕಲ್ ಅವರ ಪರವಾಗಿ 83 ಸದಸ್ಯರು ಮತ ಹಾಕುವ ಮೂಲಕ ಅಧ್ಯಕ್ಷರಾಗುವ ಹಾದಿಯನ್ನು ಸುಗಮಗೊಳಿಸಿದರು. ಅಧ್ಯಕ್ಷರಾಗಲು 65 ಮತಗಳು ಮಾತ್ರ ಅವಶ್ಯವಿತ್ತು.

Question 3

3.ಸರಕು ಮತ್ತು ಸೇವಾ ಮಂಡಳಿ ನಾಲ್ಕು ಸ್ತರಗಳಲ್ಲಿ ತೆರಿಗೆಯನ್ನು ವಿಧಿಸಲು ನಿರ್ಧರಿಸಿರುವ ಸರಿಯಾದ ಶೇಕಡಾ ದರವನ್ನು ಗುರುತಿಸಿ?

A
6, 12, 18, 24
B
5, 12, 18, 28
C
6, 12, 18, 25
D
5, 10, 18, 28
Question 3 Explanation: 
5, 12, 18, 28:

5,12,18 ಮತ್ತು 28 ಶೇಕಡಾ ದರಗಳ ನಾಲ್ಕು ಸ್ತರಗಳಲ್ಲಿ ಸರಕು ಹಾಗೂ ಸೇವಾ ತೆರಿಗೆಯನ್ನು ವಿಧಿಸಲು ಜಿಎಸ್ಟಿ ಮಂಡಳಿಯು ನಿರ್ಧರಿಸಿದೆ. ಅಗತ್ಯ ವಸ್ತುಗಳಿಗೆ ಕಡಿಮೆ ತೆರಿಗೆಯಿದ್ದರೆ, ಐಷಾರಾಮಿ ವಸ್ತುಗಳಿಗೆ ಹೆಚ್ಚಿನ ತೆರಿಗೆ ವಿಧಿಸಲಾಗುವುದು,ಜೊತೆಗೆ ಹೆಚ್ಚುವರಿ ಸೆಸ್ನ ಹೊರೆಯೂ ಇರುತ್ತದೆ. ಸರಕುಗಳಿಗೆ ಶೇ.5ರ ಕನಿಷ್ಠ ತೆರಿಗೆಯನ್ನು ವಿಧಿಸಲಾಗುತ್ತದೆ. ಎರಡು ದಿನಗಳ ಜಿಎಸ್ಟಿ ಮಂಡಳಿಯ ಮೊದಲ ದಿನದ ಸಭೆಯಲ್ಲಿ ಕೈಗೊಳ್ಳಲಾದ ನಿರ್ಧಾರಗಳನ್ನು ಪ್ರಕಟಿಸಿದ ವಿತ್ತಸಚಿವ ಅರುಣ್ ಜೇಟ್ಲಿ ಅವರು, ಪ್ರಸ್ತುತ ಶೇ.30-31ರ ತೆರಿಗೆ(ಅಬಕಾರಿ ಸುಂಕ ಮತ್ತು ವ್ಯಾಟ್ ಸೇರಿ)ಯಿರುವ ಸರಕುಗಳಿಗೆ ಅತ್ಯಧಿಕ ತೆರಿಗೆ ಸ್ತರ(ಶೇ.28)ವು ಅನ್ವಯವಾಗಲಿದೆ ಎಂದರು. ಜಿಎಸ್ಟಿ 2017 ಎಪ್ರಿಲ್ 1ರಿಂದ ಜಾರಿಗೊಳ್ಳಲಿದೆ.

Question 4

4. “ಮೌಂಟ್ ಕಾಂಗ್ಟೊ (Mt. Kangto)” ಯಾವ ರಾಜ್ಯದ ಅತಿ ಎತ್ತರದ ಶಿಖರ?

A
ಅರುಣಾಚಲ ಪ್ರದೇಶ
B
ಅಸ್ಸಾಂ
C
ತ್ರಿಪುರ
D
ಸಿಕ್ಕಿಂ
Question 4 Explanation: 

ಮೌಂಟ್ ಕಾಂಗ್ಟೋ ಅರುಣಾಚಲ ಪ್ರದೇಶದ ಅತಿ ಎತ್ತರದ ಶಿಖರ. ಇದರ ಎತ್ತರ 7,042 ಮೀಟರ್ ನಷ್ಟಿದೆ. ವರ್ಷ ಪೂರ್ತಿ ಹಿಮದಿಂದ ಆವೃತ್ತವಾಗಿರುವ ಈ ಶಿಖರವು ಪಾಚುಕ್ ನದಿಯ ಉಗಮ ಸ್ಥಾನವಾಗಿದೆ. ಪಾಚುಕ್ ನದಿ ಕಮೆಂಗ್ ನದಿಯ ಪ್ರಮುಖ ಉಪನದಿ.

Question 5

5.2016 ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ (ಐಎಫ್ಎಫ್ಐ) ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆಯಾಗಿರುವ ಕ್ವೋನ್ ಟೆಕ್ ಇಮ್ (Kwon Taek Im) ಯಾವ ದೇಶದವರು?

A
ಚೀನಾ
B
ದಕ್ಷಿಣ ಕೊರಿಯಾ
C
ರಷ್ಯಾ
D
ಇಸ್ರೇಲ್
Question 5 Explanation: 
ದಕ್ಷಿಣ ಕೊರಿಯಾ
Question 6

6. 6ನೇ ಭಾರತೀಯ ಭಾಷಾ ಉತ್ಸವ (Indian Language Festival)ದ ಧ್ಯೇಯ ವಾಕ್ಯ ______?

A
Languages for Communications
B
Language as Public Action
C
Languages for Unity
D
One India Many Languages
Question 6 Explanation: 
Language as Public Action:

6ನೇ ಭಾರತೀಯ ಭಾಷಾ ಉತ್ಸವ “ಸಮನ್ವಯ” ನವದೆಹಲಿಯಲ್ಲಿ ಆರಂಭಗೊಂಡಿದೆ. ಎಂಬ ಖ್ಯಾತ ಗಾಂಧಿವಾದಿ ಇಳಾ ಭಟ್ ಉದ್ಘಾಟನಾ ಭಾಷಣದೊಂದಿಗೆ ಉತ್ಸವಕ್ಕೆ ಚಾಲನೆ ನೀಡಿದ್ದಾರೆ. ಇಂಡಿಯಾ ಹೆರಿಟೇಜ್ ಸೆಂಟರ್ನಲ್ಲಿ ಮೂರು ದಿನಗಳ ಕಾಲ ನಡೆಯುವ ಈ ವಾರ್ಷಿಕ ಕಾರ್ಯಕ್ರಮವು 'ಸಂಭಾಷಣೆಯ ಮಾಧ್ಯಮ ನೆಲೆಯನ್ನು ಸೃಷ್ಟಿಸಲು ಬಯಸಿದೆ' ಹಾಗೂ ಉರ್ದು, ತೆಲುಗು, ಗುಜರಾತಿ, ಸಂತಾಲಿ ಹಾಗೂ ಖಾಸಿಗಳಂತಹ ವಿವಿಧ ಭಾಷೆಗಳ ಮೇಲೆ ಬೆಳಕು ಚೆಲ್ಲಲಿದೆ. ಸಾರ್ವಜನಿಕ ಕ್ರಮವಾಗಿ ಭಾಷೆ (Language as Public Action) ಇದು ಈ ವರ್ಷದ ಧ್ಯೇಯವಾಕ್ಯ.

Question 7

7. 2016 ಬಹರೇನ್ ಅಂತರರಾಷ್ಟ್ರೀಯ ಚಾಲೆಂಜ್ ಬ್ಯಾಡ್ಮಿಂಟನ್ ಪ್ರಶಸ್ತಿಯನ್ನು ಗೆದ್ದುಕೊಂಡ ಭಾರತದ ಆಟಗಾರ ಯಾರು?

A
ಪ್ರತುಲ್ ಜೋಶಿ
B
ಅತುಲ್ ಕಶ್ಯಪ್
C
ಸುದೀಂದ್ರ ಚಾವ್ಹಣ್
D
ನರೇಂದ್ರ ಭಾಟಿಯ
Question 7 Explanation: 
ಪ್ರತುಲ್ ಜೋಶಿ:

ಉದಯೋನ್ಮುಖ ಆಟಗಾರ ಪ್ರತುಲ್ ಜೋಶಿ ಅವರು ಬಹರೇನ್ ಅಂತರರಾಷ್ಟ್ರೀಯ ಚಾಲೆಂಜ್ ಬ್ಯಾಡ್ಮಿಂಟನ್ ಪ್ರಶಸ್ತಿಯನ್ನು ಗೆದ್ದು ಕೊಂಡರು. ಅಂತರರಾಷ್ಟ್ರೀಯ ಮಟ್ಟದಲ್ಲಿ ಇದು ಅವರ ಚೊಚ್ಚಲ ಪ್ರಶಸ್ತಿಯಾಗಿದೆ. ಸೆಗಯ್ಯಾದಲ್ಲಿ ನಡೆದ ಫೈನಲ್ನಲ್ಲಿ ಜೋಶಿ ಅವರು 21-17, 12-21, 21-15ರಿಂದ ಆದಿತ್ಯ ಅವರ ವಿರುದ್ಧ ಗೆದ್ದರು.

Question 8

8. “ಚಿಲ್ಡ್ರನ್ ಟ್ರಾಫಿಕ್ ಎಜುಕೇಷನ್ ಪಾರ್ಕ್ (Children Traffic Education Park)” ಯಾವ ನಗರದಲ್ಲಿದೆ?

A
ಭೂಪಾಲ್
B
ನೊಯ್ಡಾ
C
ನಾಸಿಕ್
D
ಪುಣೆ
Question 8 Explanation: 
ನಾಸಿಕ್ :

ಚಿಲ್ಡ್ರನ್ ಟ್ರಾಫಿಕ್ ಎಜುಕೇಷನ್ ಪಾರ್ಕ್ ಮಹಾರಾಷ್ಟ್ರದ ನಾಸಿಕ್ ನಲ್ಲಿದೆ. ಇತ್ತೀಚೆಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಈ ಪಾರ್ಕ್ ನಲ್ಲಿ “ನಾಲೆಡ್ಜ್ ಹಬ್” ಗೆ ಚಾಲನೆ ನೀಡಿದರು. ಆ ಮೂಲಕ ಯುವಕರಲ್ಲಿ ಟ್ರಾಫಿಕ್ ನಿಯಮಗಳು, ನಿರ್ವಹಣೆಯ ಬಗ್ಗೆ ಅರಿವು ಮೂಡಿಸಲಾಗುವುದು.

Question 9

9. “ಸ್ವಚ್ಚ ರೈಲ್ವೆ ಮಿಷನ್”ನ ರಾಯಭಾರಿಯಾಗಿ ಯಾರನ್ನು ನೇಮಕ ಮಾಡಲಾಗಿದೆ?

A
ಸಾನಿಯಾ ಮಿರ್ಜಾ
B
ಕಮಲ್ ಹಾಸನ್
C
ಬಿಂದೇಶ್ವರ್ ಪಾಠಕ್
D
ಶ್ರೀಧರನ್
Question 9 Explanation: 
ಬಿಂದೇಶ್ವರ್ ಪಾಠಕ್:

ಸುಲಭ್ ಇಂಟರ್ನ್ಯಾಶನಲ್ ಸಂಸ್ಥಾಪಕ ಬಿಂದೇಶ್ವರ್ ಪಾಠಕ್ ಅವರನ್ನು ಸ್ವಚ್ಚ ರೈಲ್ವೆ ಮಿಷನ್ ರಾಯಭಾರಿಯನ್ನಾಗಿ ನೇಮಕಮಾಡಲಾಗಿದೆ. ಸುಲಭ್ ಇಂಟರ್ನ್ಯಾಶನಲ್ ನೈರ್ಮಲ್ಯತೆ ಮತ್ತು ಪರಿಸರ ಕ್ಷೇತ್ರದಲ್ಲಿ ಗಮನಾರ್ಹ ಕೆಲಸವನ್ನು ಮಾಡುತ್ತಿದೆ.

Question 10

10. ಬಿತರ್ಕಾನಿಕ ರಾಷ್ಟ್ರೀಯ (Bhitarkanika National Park) ಉದ್ಯಾನವನ ಯಾವ ರಾಜ್ಯದಲ್ಲಿದೆ?

A
ಕೇರಳ
B
ಬಿಹಾರ
C
ಒಡಿಶಾ
D
ಪಶ್ಚಿಮ ಬಂಗಾಳ
Question 10 Explanation: 
ಒಡಿಶಾ:

ಬಿತರ್ಕಾನಿಕ ರಾಷ್ಟ್ರೀಯ ಉದ್ಯಾನವನ ಒಡಿಶಾದಲ್ಲಿದೆ. ಈ ಉದ್ಯಾನವನ್ನು ಯುನೆಸ್ಕೋ ಪಾರಂಪರಿಕ ಪಟ್ಟಿಗೆ ಸೇರ್ಪಡೆಗೊಳಿಸಲು ರಾಜ್ಯ ಸರ್ಕಾರ ಹಲವು ವರ್ಷಗಳಿಂದ ಪ್ರಯತ್ನಿಸುತ್ತಿದೆ. ಇತ್ತೀಚೆಗೆ ಯುನೆಸ್ಕೋ ನಿಯೋಜಿಸಿದ ಐಯುಸಿಎನ್ ನ ದ್ವಿಸದಸ್ಯ ತಾಂತ್ರಿಕ ತಂಡ ಉದ್ಯಾನವನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.

There are 10 questions to complete.

[button link=”http://www.karunaduexams.com/wp-content/uploads/2016/11/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಕ್ವಿಜ್-ನವೆಂಬರ್-3.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

Leave a Comment

This site uses Akismet to reduce spam. Learn how your comment data is processed.