ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ನವೆಂಬರ್-2, 2016

Question 1

1.ಇತ್ತೀಚೆಗೆ ಅಂಟಾರ್ಟಿಕದ ಯಾವ ಸಮುದ್ರವನ್ನು ವಿಶ್ವದ ಅತಿ ದೊಡ್ಡ ಕಡಲ ಸಂರಕ್ಷಿತ ಪ್ರದೇಶವೆಂದು ಘೋಷಿಸಲಾಗಿದೆ?

A
ಡೇವಿಸ್ ಸಮುದ್ರ
B
ರಾಸ್ ಸಮುದ್ರ
C
ಸ್ಕಾಟಿಯಾ ಸಮುದ್ರ
D
ಮಾವ್ಸನ್ ಸಮುದ್ರ
Question 1 Explanation: 
ರಾಸ್ ಸಮುದ್ರ:

ಅಂಟಾರ್ಟಿಕದ ರಾಸ್ ಸಮುದ್ರವನ್ನು ವಿಶ್ವದ ಅತಿ ದೊಡ್ಡ ಕಡಲ ಸಂರಕ್ಷಿತ ಪ್ರದೇಶ (Marine Protect Area)ವೆಂದು ಘೋಷಿಸಲಾಗಿದೆ. ಆಸ್ಟ್ರೇಲಿಯಾದ ಹೊಬರ್ಟ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಅಂಟಾರ್ಟಿಕ ಸಾಗರ ಜೀವ ಸಂಪನ್ಮೂಲ (CCAMLR) ಸಂರಕ್ಷಣೆ ಆಯೋಗದ ಸಭೆಯಲ್ಲಿ 24 ರಾಷ್ಟ್ರಗಳು ಮತ್ತು ಐರೋಪ್ಯ ಒಕ್ಕೂಟದ ನಡುವಿನ ಐತಿಹಾಸಿಕ ಒಪ್ಪಂದ ಮೂಡುವ ಮೂಲಕ ರಾಸ್ ಸಮುದ್ರವನ್ನು ವಿಶ್ವದ ಅತಿ ದೊಡ್ಡ ಕಡಲ ಸಂರಕ್ಷಿತ ಪ್ರದೇಶವೆಂದು ಘೋಷಿಸಲಾಯಿತು.

Question 2

2.ಡಿಸೆಂಬರ್ ನಲ್ಲಿ ನಡೆಯಲಿರುವ “ದುಬೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ”ದಲ್ಲಿ ಯಾರಿಗೆ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಲಾಗುವುದು?

A
ವಿದ್ಯಾ ಬಾಲನ್
B
ರೇಖಾ
C
ಅಕ್ಷಯ್ ಕುಮಾರ್
D
ಐಶ್ವರ್ಯ ರೈ
Question 2 Explanation: 
ರೇಖಾ:

ಬಾಲಿವುಡ್ ನಟಿ ರೇಖಾ ಅವರಿಗೆ ದುಬೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ”ದಲ್ಲಿ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು. ದುಬೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ” ಡಿಸೆಂಬರ್ 7 ರಿಂದ 14 ರವರೆಗೆ ನಡೆಯಲಿದೆ. ನಟಿ ರೇಖಾ ಅವರು ತಮ್ಮ ನಾಲ್ಕು ದಶಕಗಳ ಸಿನಿಮಾ ಬದುಕಿನಲ್ಲಿ 180 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡದ ಮೇರುನಟ ಡಾ.ರಾಜ್ ಕುಮಾರ್ ಅಭಿನಯದ 1969 ರಲ್ಲಿ ತೆರೆಕಂಡ ಆಪರೇಷನ್ ಸಿಐಡಿ 999 ರೇಖಾ ಅವರ ಮೊದಲ ಚಿತ್ರ.

Question 3

3. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸ್ಮಾರ್ಟ್ ಗವರ್ನಮೆಂಟ್ ಕೇಂದ್ರ ಕಚೇರಿ ಎಲ್ಲದೆ?

A
ಬೆಂಗಳೂರು
B
ಹೈದ್ರಾಬಾದ್
C
ಚೆನ್ನೈ
D
ನವದೆಹಲಿ
Question 3 Explanation: 
ಹೈದ್ರಾಬಾದ್:

ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸ್ಮಾರ್ಟ್ ಗವರ್ನಮೆಂಟ್ ಕೇಂದ್ರ ಕಚೇರಿ ಹೈದ್ರಾಬಾದ್ ನಲ್ಲಿದೆ. ಭಾರತ ಸರ್ಕಾರ, ಆಂಧ್ರಪ್ರದೇಶ ಸರ್ಕಾರ ಮತ್ತು ನಾಸ್ಕಾಂ ಈ ಸಂಸ್ಥೆಯನ್ನು 2002 ರಲ್ಲಿ ಹುಟ್ಟುಹಾಕಿದೆ. ಇ-ಗವರ್ನೆನ್ಸ್ಗೆ ಸಂಬಂಧಿಸಿದ ಹೊಸ ಶೋಧನೆ ಮತ್ತು ಯೋಜನೆ ಜಾರಿಗೆ ಶ್ರಮಿಸುತ್ತಿರುವ ಸಂಸ್ಥೆ ಇದಾಗಿದೆ.

Question 4

4. ದಕ್ಷಿಣ ಕೊರಿಯಾದ ನೂತನ ಪ್ರಧಾನಿಯಾಗಿ ಯಾರನ್ನು ನೇಮಕ ಮಾಡಲಾಗಿದೆ?

A
ಕಿಮ್ ಬ್ಯೊಂಗ್ ಜೂನ್
B
ಹ್ವಾಂಗ್ ಕ್ಯೊ ಅಹ್ನ
C
ಪಾರ್ಕ್ ಗ್ವೀನ್ ಹೈ
D
ಕಿಮ್ ಜಂಗ್ ಹ್ಯೂಂಗ್
Question 4 Explanation: 
ಕಿಮ್ ಬ್ಯೊಂಗ್ ಜೂನ್:

ದಕ್ಷಿಣ ಕೊರಿಯಾದ ಪ್ರಧಾನಿ ಮತ್ತು ಹಣಕಾಸು ಸಚಿವರನ್ನು ಬದಲಾಯಿಸಿ ಅಧ್ಯಕ್ಷೆ ಪಾರ್ಕ್ ಗ್ವೀನ್ ಹೈ ಆದೇಶ ಹೊರಡಿಸಿದ್ದಾರೆ. ಹಾಲಿ ಪ್ರಧಾನಿ ಹ್ವಾಂಗ್ ಕ್ಯೊ ಅಹ್ನ ಅವರನ್ನು ಬದಲಾಯಿಸಿ ಕಿಮ್ ಬ್ಯೊಂಗ್ ಜೂನ್ ಅವರನ್ನು ಹೊಸ ಪ್ರಧಾನಿಯನ್ನಾಗಿ ನೇಮಿಸಲಾಗಿದೆ. ದಕ್ಷಿಣ ಕೊರಿಯಾದಲ್ಲಿ ಪ್ರಧಾನಿ ಹುದ್ದೆ ಕೇವಲ ಸಾಂಕೇತಿಕವಾಗಿದ್ದು, ಎಲ್ಲ ಅಧಿಕಾರವನ್ನು ಅಧ್ಯಕ್ಷರೇ ಹೊಂದಿದ್ದಾರೆ. ಪ್ರಧಾನಿ ನೇಮಕಾತಿಗೆ ಸಂಸತ್ ಅನುಮೋದನೆ ಪಡೆಯುವುದು ಅಗತ್ಯವಾಗಿದೆ.

Question 5

5. ಇತ್ತೀಚೆಗೆ ನಗರದ ಎಂ.ಎನ್. ರಾಯ್ ರವರು ಯಾವ ನಗರದ ಮೊದಲ ಮುಖ್ಯ ವಾಸ್ತುಶಿಲ್ಪಿ?

A
ಲಕ್ನೋ
B
ಚಂಡೀಘರ್
C
ಮೈಸೂರು
D
ಕೊಲ್ಕತ್ತಾ
Question 5 Explanation: 
ಚಂಡೀಘರ್:

ಚಂಡೀಘರ್ ನಗರದ ಮೊದಲ ಪ್ರಮುಖ ವಾಸ್ತುಶಿಲ್ಪಿ ಎಂ,ಎನ್.ರಾಯ್ ನಿಧನರಾದರು. ರಾಯ್ ರವರು ಇತ್ತೀಚೆಗೆ “ಮೇಕಿಂಗ್ ಆಫ್ ಚಂಡೀಘರ್: ಲಿ ಕೊರ್ಬಸೈಯರ್ ಅಂಡ್ ಆಫ್ಟರ್ (Making of Chandigarh: Le Corbusier and After)” ಪುಸ್ತಕವನ್ನು ಬರೆದಿದ್ದರು. ಖ್ಯಾತ ಫ್ರೆಂಚ್ ಶಿಲ್ಪಿ ಲಿ ಕೊರ್ಬಸೈಯರ್ ಜೊತೆ ಕೆಲಸ ಮಾಡಿದ ಅನುಭವವನ್ನು ಹೊಂದಿದ್ದರು. ರಾಯ್ ಅವರಿಗೆ ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದರು.

Question 6

6. ಇತ್ತೀಚೆಗೆ ಯಾವ ರಾಜ್ಯ “ಪರಿಪ್ಪಿದ ಮಿಷನ್ (Paripidda Mission)” ಹೆಸರಿನ ವಸತಿ ಯೋಜನೆಯನ್ನು ಜಾರಿಗೊಳಿಸಿದೆ?

A
ಕೇರಳ
B
ಮಹಾರಾಷ್ಟ್ರ
C
ಗೋವಾ
D
ತೆಲಂಗಣ
Question 6 Explanation: 
ಕೇರಳ:

ಕೇರಳ ಸರ್ಕಾರ ರಾಜ್ಯದ ಪ್ರತಿಯೊಬ್ಬ ವಸತಿ ರಹಿತರಿಗೆ ವಸತಿ ಸೌಕರ್ಯ ಕಲ್ಪಿಸಲು “ಪರಿಪ್ಪಿದ ಮಿಷನ್” ಯೋಜನೆಯನ್ನು ಜಾರಿಗೊಳಿಸಿದೆ. ಕೇರಳ ಸಂಸ್ಥಾಪನ ದಿನವಾದ ನವೆಂಬರ್ 1 ರಂದು ಈ ಯೋಜನೆಗೆ ಚಾಲನೆ ನೀಡಲಾಗಿದೆ.

Question 7

7. “2016 ಮಿಸ್ ಈರ್ಥ್” ಕಿರೀಟವನ್ನು ಗೆದ್ದ “ಕ್ಯಾಥರೀನ್ ಎಸ್ಪಿನ್” ಯಾವ ದೇಶದವರು?

A
ಕೊಲಂಬಿಯಾ
B
ಈಕ್ವಾಡರ್
C
ವೆನೆಜುವೆಲಾ
D
ಫಿಲಿಫೈನ್ಸ್
Question 7 Explanation: 
ಈಕ್ವಾಡರ್:

ಈಕ್ವಾಡರ್ ನ ಕ್ಯಾಥರೀನ್ ಎಸ್ಪಿನ್ ಅವರು 2016 ಮಿಸ್ ಈರ್ಥ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. 2016 ಮಿಸ್ ಈರ್ಥ್ ಸ್ಪರ್ಧೆಯನ್ನು ಫಿಲಿಫೈನ್ಸ್ ನ ಮಾಲ್ ಆಫ್ ಏಷ್ಯಾ ಅರೆನಾದಲ್ಲಿ ಆಯೋಜಿಸಲಾಗಿತ್ತು. ಜಗತ್ತಿನ ವಿವಿಧ ದೇಶಗಳ 83 ಸ್ಪರ್ಧಿಗಳ ಪೈಕಿ ಎಸ್ಪಿನ್ ಕಿರೀಟವನ್ನು ತಮ್ಮದಾಗಿಸಿಕೊಂಡರು.

Question 8

8.ರಾಮ್ ನಾಥ್ ಗೋಯೆಂಕಾ ಪ್ರಶಸ್ತಿಯನ್ನು ಯಾವ ಕ್ಷೇತ್ರದ ಸಾಧಕರಿಗೆ ನೀಡಲಾಗುತ್ತದೆ?

A
ಪತ್ರಿಕೋದ್ಯಮ
B
ಆಟೋಮೊಬೈಲ್ ಉದ್ದಿಮೆ
C
ಬ್ಯಾಂಕಿಂಗ್ ಮತ್ತು ಹಣಕಾಸು
D
ಸಿನಿಮಾ
Question 8 Explanation: 
ಪತ್ರಿಕೋದ್ಯಮ:

ಗೋಯೆಂಕಾ ಪ್ರಶಸ್ತಿಯನ್ನು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಾದನೆ ಮಾಡಿದವರಿಗೆ 28 ವಿಭಾಗಗಳಲ್ಲಿ ಕೊಡಲಾಗುತ್ತದೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿದ್ದ ರಾಮ್ ನಾಥ್ ಗೊಯೆಂಕಾ ಅವರ ಸ್ಮರಣಾರ್ಥ 2005 ರಿಂದ ಪತ್ರಿಕೋದ್ಯಮ ಈ ಪ್ರಶಸ್ತಿ ನೀಡಲಾಗುತ್ತಿದೆ.

Question 9

9.ಇತ್ತೀಚೆಗೆ ನಿಧನರಾದ ಫಿಫಾ ವಿಶ್ವಕಪ್ ಟ್ರೋಫಿಯ ವಿನ್ಯಾಸಗಾರ “ಸಿಲ್ವಿಯೊ ಗಝ್ಝನಿಗ” ಯಾವ ದೇಶದವರು?

A
ಫ್ರಾನ್ಸ್
B
ಜರ್ಮನಿ
C
ಇಟಲಿ
D
ಸ್ಪೇನ್
Question 9 Explanation: 
ಇಟಲಿ :

ಇಟಲಿಯ ಪ್ರಖ್ಯಾತ ಶಿಲ್ಪಿ “ಸಿಲ್ವಿಯೊ ಗಝ್ಝನಿಗ” ಇಟಲಿಯ ಮಿಲನ್ ನಗರದಲ್ಲಿ ನಿಧನರಾದರು. ಸಿಲ್ವಿಯೊ ಅವರು 1971 ರಲ್ಲಿ ಫಿಫಾ ವಿಶ್ವಕಪ್ ಟ್ರೋಫಿಯನ್ನು ವಿನ್ಯಾಸಗೊಳಿಸಿ ತಯಾರಿಸಿದ್ದರು. ಸಿಲ್ವಿಯೊ ಅವರು “ಮಿಸ್ಟರ್ ಕಪ್” ಎಂದೇ ಖ್ಯಾತರಾಗಿದ್ದರು. ಫಿಫಾ ವಿಶ್ವಕಪ್ ಟ್ರೋಫಿ 18 ಕ್ಯಾರೆಟ್ ಗಟ್ಟಿ ಚಿನ್ನದಿಂದ ಮಾಡಲಾಗಿದ್ದು, 6 ಕೆ.ಜಿ ತೂಕವಿದೆ.

Question 10

10. ಇತ್ತೀಚೆಗೆ ಬಿಡುಗಡೆಗೊಂಡ ಫೋರ್ಬ್ಸ್ ಫ್ಯಾಬ್ 40 ಪಟ್ಟಿಯಲ್ಲಿ ಭಾರತದ ಅತ್ಯಂತ ಮೌಲ್ಯಯುತ ಕ್ರೀಡಾಪಟು ಯಾರು?

A
ವಿರಾಟ್ ಕೊಹ್ಲಿ
B
ಮಹೇಂದ್ರ ಸಿಂಗ್ ಧೋನಿ
C
ಪಿ ವಿ ಸಿಂಧು
D
ದೀಪಾ ಕಮರ್ಕರ್
Question 10 Explanation: 
ಮಹೇಂದ್ರ ಸಿಂಗ್ ಧೋನಿ:

ಭಾರತ ಏಕದಿನ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಫೋರ್ಬ್ಸ್ ಫ್ಯಾಬ್ 40 ಪಟ್ಟಿಯಲ್ಲಿ ಭಾರತ ಅತ್ಯಂತ ಮೌಲ್ಯಯುತ ಕ್ರೀಡಾಪಟು ಆಗಿ ಹೊರಹೊಮ್ಮಿದ್ದಾರೆ. ಸ್ವಿಸ್ ಟೆನ್ನಿಸ್ ದಂತಕತೆ ರೋಜರ್ ಫೆಡರರ್ ಅವರು ವಿಶ್ವದ ಅತ್ಯಂತ ಮೌಲ್ಯಯುತ ಕ್ರೀಡಾಪಟು ಎನಿಸಿದ್ದಾರೆ.

There are 10 questions to complete.

[button link=”http://www.karunaduexams.com/wp-content/uploads/2016/11/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಕ್ವಿಜ್-ನವೆಂಬರ್-2.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

One Thought to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ನವೆಂಬರ್-2, 2016”

Leave a Comment

This site uses Akismet to reduce spam. Learn how your comment data is processed.