ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಅಕ್ಟೋಬರ್-29, 2016

Question 1

1.ನೀತಿ ಆಯೋಗದ “ಸುಲಭವಾಗಿ ಕೃಷಿ ವಹಿವಾಟು ನಡೆಸುವ ಸೂಚ್ಯಂಕ (Easy of doing agri business index)” ದಲ್ಲಿ ಮೊದಲ ಸ್ಥಾನದಲ್ಲಿರುವ ರಾಜ್ಯ ಯಾವುದು?

A
ಕರ್ನಾಟಕ
B
ಗುಜರಾತ್
C
ಮಹಾರಾಷ್ಟ್ರ
D
ಕೇರಳ
Question 1 Explanation: 
ಮಹಾರಾಷ್ಟ್ರ:

ನೀತಿ ಆಯೋಗ ಇತ್ತೀಚೆಗೆ ಬಿಡುಗಡೆಗೊಳಿಸಿದ ಸುಲಭವಾಗಿ ಕೃಷಿ ವಹಿವಾಟು ನಡೆಸುವ ಸೂಚ್ಯಂಕದಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ಗುಜರಾತ್ ಮತ್ತು ರಾಜಸ್ತಾನ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. ಕೃಷಿ ವಲಯ ಸುಧಾರಣೆಗೆ ರಾಜ್ಯಗಳು ಕೈಗೊಂಡಿರುವ ಕ್ರಮಗಳನ್ನು ಆಧರಿಸಿ ಸೂಚ್ಯಂಕವನ್ನು ಸಿದ್ದಪಡಿಸಲಾಗಿದೆ. ಕೃಷಿವಲಯ ಸುಧಾರಣೆಗೆ ಮಹಾರಾಷ್ಟ್ರ ಸರ್ಕಾರ ಹಲವಾರು ರೈತಪರ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಿರುವುದಾಗಿ ವರದಿಯಲ್ಲಿ ಹೇಳಿದೆ.

Question 2

2.“ಮಿಟ್ರಾಲ್ ವಾಲ್ವ್ ಡಿಸೀಸ್ (Mitral Valve Disease)” ಯಾವ ಪ್ರಾಣಿಯಲ್ಲಿ ಸಾಮಾನ್ಯವಾಗಿ ಕಂಡುಬರುವ ಹೃದಯ ಸಂಬಂಧಿ ಕಾಯಿಲೆಯಾಗಿದೆ?

A
ನಾಯಿ
B
ಬೆಕ್ಕು
C
ಹಸು
D
ಒಂಟೆ
Question 2 Explanation: 
ನಾಯಿ:

ಮಿಟ್ರಾಲ್ ವಾಲ್ವ್ ಡಿಸೀಸ್ ನಾಯಿಗಳಲ್ಲಿ ಕಂಡುಬರುವ ಹೃದಯ ಸಂಬಂಧಿ ಕಾಯಿಲೆ. ಹೃದಯ ಸಂಬಂಧಿ ಕಾಯಿಲೆಯಿಂದ ಸಾವನ್ನಪ್ಪುವ ನಾಯಿಗಳ ಪೈಕಿ ಶೇ 75% ಸಾವು ಈ ಕಾಯಿಲೆಯಿಂದ ಸಂಭವಿಸುತ್ತದೆ. ಇತ್ತೀಚೆಗೆ ಯುಕೆ ಮೂಲದ ವಿಜ್ಞಾನಿಗಳು ಈ ಕಾಯಿಲೆಗೆ ಲಸಿಕೆಯನ್ನು ಕಂಡುಹಿಡಿದಿರುವುದಾಗಿ ಹೇಳಿದ್ದಾರೆ.

Question 3

3.ಮಾದರಿ ನೋಂದಾಣಿ ವ್ಯವಸ್ಥೆ ಸಮೀಕ್ಷೆಯ ವರದಿ ಪ್ರಕಾರ ಭಾರತದಲ್ಲಿ 2010-14 ಅವಧಿಯಲ್ಲಿ ಜನರ ಜೀವಿತ ಸರಾಸರಿ ಅವಧಿ ಎಷ್ಟಿದೆ?

A
66 ವರ್ಷ 10 ತಿಂಗಳು
B
65 ವರ್ಷ 11 ತಿಂಗಳು
C
67 ವರ್ಷ 11 ತಿಂಗಳು
D
69 ವರ್ಷ 8 ತಿಂಗಳು
Question 3 Explanation: 
67 ವರ್ಷ 11 ತಿಂಗಳು:

ಭಾರತದಲ್ಲಿ 2010–14ರ ಅವಧಿಯಲ್ಲಿ ಜನರ ಸರಾಸರಿ ಜೀವಿತಾವಧಿ 67 ವರ್ಷ 11 ತಿಂಗಳಿಗೆ ಏರಿಕೆಯಾಗಿದೆ. ಮಾದರಿ ನೋಂದಣಿ ವ್ಯವಸ್ಥೆಯು (ಎಸ್‌ಆರ್‌ಎಸ್‌) ಈ ಸಮೀಕ್ಷೆ ನಡೆಸಿ ವರದಿ ಬಿಡುಗಡೆ ಮಾಡಿದೆ. ಮೊದಲ ಸಮೀಕ್ಷೆ ಸಂದರ್ಭದಲ್ಲಿ ಮಹಿಳೆಯರ ಸರಾಸರಿ ಜೀವಿತಾವಧಿ (49.0) ಪುರುಷರಿಗಿಂತ (50.5) ಕಡಿಮೆ ಇತ್ತು. 1981–85ರ ಅವಧಿಯ ನಂತರ ಇದು ಬದಲಾಗಿದೆ. 2010–14ರ ಅವಧಿಯಲ್ಲಿ ಮಹಿಳೆಯರ ಸರಾಸರಿ ಜೀವಿತಾವಧಿ 69.6 ವರ್ಷವಾಗಿದ್ದರೆ ಪುರುಷರ ಜೀವಿತಾವಧಿ 66.4 ವರ್ಷ. ಆರಂಭದಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶದ ಜನರ ಸರಾಸರಿ ಜೀವಿತಾವಧಿಯ ನಡುವೆ ಗಣನೀಯ ಅಂತರ ಇತ್ತು. ಆದರೆ ಇದು ಈಗ ಬಹಳ ತಗ್ಗಿದೆ.

Question 4

4.ಮೇರಿಯಾನೊ ರಜೊಯ್ (Mariano Rajoy) ಅವರು ಯಾವ ದೇಶದ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ?

A
ಸ್ಪೇನ್
B
ಫ್ರಾನ್ಸ್
C
ಬ್ರೆಜಿಲ್
D
ಕೀನ್ಯಾ
Question 4 Explanation: 
ಸ್ಪೇನ್ :

ಹಂಗಾಮಿ ಪ್ರಧಾನಿ ಹಾಗೂ ಪಾಪುಲರ್ ಪಾರ್ಟಿ ನಾಯಕ ಮೇರಿಯಾನೊ ರಜೊಯ್ ಅವರು ಪ್ರಧಾನಿಯಾಗಿ ಪುನರ್ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ರಜೊಯ್ ಅವರ ಪರವಾಗಿ 170 ಮತಗಳನ್ನು ಗಳಿಸಿದರೆ, 111 ಮತಗಳು ವಿರುದ್ದವಾಗಿ ಚಲಾಯಿಸಲಾಗಿತ್ತು.

Question 5

5.ಇಂಡಿಯಾ ಟುಡೇ ನಿಯತಕಾಲಿಕೆ ನಡೆದ ಸಮೀಕ್ಷೆ ಪ್ರಕಾರ ದೇಶದ ದೊಡ್ಡ ರಾಜ್ಯಗಳ ಪೈಕಿ ಆರ್ಥಿಕ ವಿಭಾಗದಲ್ಲಿ ಮೊದಲ ಸ್ಥಾನ ಪಡೆದ ರಾಜ್ಯ ಯಾವುದು?

A
ತೆಲಂಗಣ
B
ಆಂಧ್ರ ಪ್ರದೇಶ
C
ಕರ್ನಾಟಕ
D
ತಮಿಳುನಾಡು
Question 5 Explanation: 
ಕರ್ನಾಟಕ:

ಇಂಡಿಯಾ ಟುಡೆ ಮ್ಯಾಗಜಿನ್ ನಡೆಸಿದ ಸಮೀಕ್ಷೆಯಲ್ಲಿ ದೇಶದ ದೊಡ್ಡ ರಾಜ್ಯಗಳ ಪೈಕಿ ಆರ್ಥಿಕ ವಿಭಾಗದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಇದರಲ್ಲಿ ಹೂಡಿಕೆಗೆ ಅಗತ್ಯವಾದ ವಾತಾವರಣ, ಕೃಷಿ, ಶಿಕ್ಷಣ, ಮೂಲಭೂತ ಸೌಕರ್ಯ ಮತ್ತು ಕಾನೂನು ಮತ್ತು ಸುವ್ಯವಸ್ಥೆ, ಪರಿಸರ ಸಂರಕ್ಷಣೆ ಹಾಗೂ ಇ-ಆಡಳಿತವನ್ನು ಪರಿಗಣನೆಗೆ ತೆಗೆದುಕೊಂಡು ಇಂಡಿಯಾ ಟುಡೆ ಮ್ಯಾಗಜಿನ್ ಈ ಸಮೀಕ್ಷೆ ನಡೆಸಿದೆ.ಈ ಸಮೀಕ್ಷೆ ಪ್ರಕಾರ, ದೇಶದಲ್ಲಿ ಆರ್ಥಿಕವಾಗಿ ಪ್ರಗತಿ ಸಾಧಿಸಿರುವ ದೊಡ್ಡ ರಾಜ್ಯಗಳಲ್ಲಿ ಕರ್ನಾಟಕವೇ ಮೊದಲ ಸ್ಥಾನ ಪಡೆದುಕೊಂಡಿದೆ. ಕಳೆದ ಒಂದು ವರ್ಷದ ಪ್ರಗತಿದಾಯಕ ಕಾರ್ಯಕ್ರಮಗಳನ್ನ ಅವಲೋಕಿಸಿ, ಜನಮತದೊಂದಿಗೆ ಈ ಆಯ್ಕೆ ಮಾಡಲಾಗಿದೆ.

Question 6

6.ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿಯ (UNHRC) ಕೇಂದ್ರ ಕಚೇರಿ ಎಲ್ಲಿದೆ?

A
ಜಿನಿವಾ
B
ನ್ಯೂಯಾರ್ಕ್
C
ಬರ್ಲಿನ್
D
ರೋಮ್
Question 6 Explanation: 
ಜಿನಿವಾ:

ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿಯ ಕೇಂದ್ರ ಕಚೇರಿ ಜಿನಿವಾದಲ್ಲಿ. ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿಯಲ್ಲಿ 47 ರಾಷ್ಟ್ರಗಳನ್ನು ಸದಸ್ಯ ರಾಷ್ಟ್ರಗಳಾಗಿವೆ. ಸದಸ್ಯ ರಾಷ್ಟ್ರಗಳು ಮೂರು ವರ್ಷ ಅವಧಿ ನೇಮಕಗೊಳ್ಳುತ್ತವೆ.

Question 7

7.ಇತ್ತೀಚೆಗೆ ನಿಧನರಾದ ಶಶಿಕಲಾ ಕಾಕೋಡ್ಕರ್ ಯಾವ ರಾಜ್ಯದ ಮೊದಲ ಹಾಗೂ ಏಕೈಕ ಮಹಿಳಾ ಮುಖ್ಯಮಂತ್ರಿ ಎನಿಸಿದ್ದರು?

A
ಕೇರಳ
B
ಗೋವಾ
C
ಮಹಾರಾಷ್ಟ್ರ
D
ಗುಜರಾತ್
Question 7 Explanation: 
ಗೋವಾ:

ಗೋವಾದ ಮೊದಲ ಮತ್ತು ಏಕೈಕ ಮಹಿಳಾ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಶಶಿಕಲಾ ಕಾಕೋಡ್ಕರ್(81) ನಿಧನರಾದರು. ಮಹಾರಾಷ್ಟ್ರವಾದಿ ಗೋಮಾಂತಕ ಪಾರ್ಟಿ(ಎಂಜಿಪಿ)ಯ ಹಿರಿಯ ನಾಯಕಿಯಾಗಿದ್ದ ಅವರು ಗೋವಾದ ಮೊದಲ ಮುಖ್ಯಮಂತ್ರಿಯಾಗಿದ್ದ ತನ್ನ ತಂದೆ ದಯಾನಂದ ಬಾಂದೋಡ್ಕರ್ ಅವರು 1973ರಲ್ಲಿ ನಿಧನರಾದ ಬಳಿಕ ಮುಖ್ಯಮಂತ್ರಿಯಾಗಿ ನೇಮಕಗೊಂಡಿದ್ದರು. ಎಪ್ರಿಲ್ 1979ರಲ್ಲಿ ಪಕ್ಷವು ವಿಭಜನೆಗೊಳ್ಳುವವರೆಗೂ ಅವರು ಅಧಿಕಾರದಲ್ಲಿದ್ದರು. 90ರ ದಶಕದ ಆರಂಭದಲ್ಲಿ ಶಿಕ್ಷಣ ಸಚಿವೆಯಾಗಿದ್ದ ಅವರು ಪ್ರಾಥಮಿಕ ಶಿಕ್ಷಣದಲ್ಲಿ ಇಂಗ್ಲೀಷ್ನ್ನು ಪಕ್ಕಕ್ಕೆ ತಳ್ಳಿ ಮರಾಠಿಯನ್ನು ಪ್ರಾದೇಶಿಕ ಭಾಷೆಯನ್ನಾಗಿ ಜಾರಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

Question 8

8.ಮಾಜಿ ಹಣಕಾಸು ಕಾರ್ಯದರ್ಶಿ ಅಶೋಕ್ ಚಾವ್ಲ ಅವರು ಯಾವ ಬ್ಯಾಂಕ್ ನ ಕಾರ್ಯನಿರ್ವಾಹಕೇತರ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ?

A
ಯೆಸ್ ಬ್ಯಾಂಕ್
B
ಐಸಿಐಸಿಐ ಬ್ಯಾಂಕ್
C
ಆಕ್ಸಿಸ್ ಬ್ಯಾಂಕ್
D
ಕಾರ್ಪೋರೇಷನ್ ಬ್ಯಾಂಕ್
Question 8 Explanation: 
ಯೆಸ್ ಬ್ಯಾಂಕ್:

ಮಾಜಿ ಕೇಂದ್ರ ಹಣಕಾಸು ಕಾರ್ಯದರ್ಶಿ ಮತ್ತು ಭಾರತೀಯ ಸ್ಪರ್ಧಾತ್ಮಕ ಆಯೋಗದ ಅಧ್ಯಕ್ಷರಾದ ಅಶೋಕ್ ಚಾವ್ಲ ಅವರು ಯೆಸ್ ಬ್ಯಾಂಕ್ನ ಕಾರ್ಯನಿರ್ವಾಹಕೇತರ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಈ ಹಿಂದೆ ಅಧ್ಯಕ್ಷರಾಗಿದ್ದ ರಾಧ ಸಿಂಗ್ ಅವರ ಅವಧಿ ಪೂರ್ಣಗೊಂಡ ಹಿನ್ನಲೆಯಲ್ಲಿ ಈ ಹುದ್ದೆ ತೆರವಾಗಿತ್ತು. ಅಶೋಕ್ ಚಾವ್ಲ ಅವರು ಮೂರು ವರ್ಷಗಳ ಕಾಲ ಹುದ್ದೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

Question 9

9.ಮಹಿಳೆಯರ ಕುರಿತು ಸಾಮಾಜಿಕ ಅಭಿಪ್ರಾಯವನ್ನು ಬದಲಿಸಲು ಮತ್ತು ಗೌರವ ಮೂಡಿಸಲು 'ನಯೀ ಸೋಚ್' ಅಭಿಯಾನವನ್ನು ಆರಂಭಿಸಿರುವ ಮಾಧ್ಯಮ ಸಂಸ್ಥೆ ಯಾವುದು?

A
ಸ್ಟಾರ್ ಪ್ಲಸ್
B
ಟೆನ್ ಸ್ಪೋರ್ಟ್ಸ್
C
ಜೀ ಗ್ರೂಫ್
D
ಸನ್ ನೆಟವರ್ಕ್
Question 9 Explanation: 
ಸ್ಟಾರ್ ಪ್ಲಸ್:

ಮಹಿಳೆಯರ ಕುರಿತು ಸಾಮಾಜಿಕ ಅಭಿಪ್ರಾಯವನ್ನು ಬದಲಿಸಲು, ಮಹಿಳೆಯರ ಕುರಿತು ಗೌರವ ಮೂಡಿಸಲು 'ನಯೀ ಸೋಚ್' ಎಂಬ ಅಭಿಯಾನವನ್ನು ಸ್ಟಾರ್ ಪ್ಲಸ್ ಚಾನೆಲ್ ಆರಂಭಿಸದೆ. ಈ ಅಭಿಯಾನಕ್ಕೆ ಬಿಸಿಸಿಐ ಕೈಜೋಡಿಸಿದೆ. ಈ ಅಭಿಯಾನದ ಅಂಗವಾಗಿ ಇತ್ತೀಚೆಗೆ ನಡೆದ ಭಾರತ-ನ್ಯೂಜಿಲ್ಯಾಂಡ್ ನಡುವಿನ ಕ್ರಿಕೆಟ್ ಪಂದ್ಯದಲ್ಲಿ ಭಾರತದ ಆಟಗಾರರು ತಮ್ಮ ಅಮ್ಮನ ಹೆಸರು ಇರುವ ಜೆರ್ಸಿಯನ್ನು ಧರಿಸಿ ಕ್ರೀಡಾಕಣಕ್ಕಿಳಿದಿದ್ದಾರೆ.

Question 10

10. ಇತ್ತೀಚೆಗೆ ಬಿಡುಗಡೆಗೊಂಡ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನಿಲ್ಸ್ (ಐಸಿಸಿ) ಮಹಿಳಾ ಬೌಲರ್ ಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡವರು ಯಾರು?

A
ಸ್ಟೆಫಿನ್ ಟೇಲರ್
B
ಜೂಲನ್ ಗೋಸ್ವಾಮಿ
C
ಥಿಶುರ್ ಕಾಮಿನಿ
D
ಪೂನಮ್ ರಾವತ್
Question 10 Explanation: 
ಜೂಲನ್ ಗೋಸ್ವಾಮಿ
There are 10 questions to complete.

[button link=”http://www.karunaduexams.com/wp-content/uploads/2016/10/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಕ್ಚಿಜ್-ಅಕ್ಟೋಬರ್-29.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

3 Thoughts to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಅಕ್ಟೋಬರ್-29, 2016”

  1. keerthana

    Good I want tet sience and maths

  2. Ramyathams

    Give daily updates n also give Tet related questions basic science psychology questions

Leave a Comment

This site uses Akismet to reduce spam. Learn how your comment data is processed.