ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಅಕ್ಟೋಬರ್-23, 2016

Question 1

1.ಈ ಕೆಳಗಿನ ಯಾವುದು ಭಾರತದ ಮೊದಲ “ನವೋದ್ಯಮ ನಿಯತಕಾಲಿಕೆ (Startup Magzine)” ಆಗಿದೆ?

A
ಕೋಫೌಂಡರ್
B
ನ್ಯೂಇಂಡಿಯಾ
C
ವಿಷನ್
D
ಸ್ಟಾರ್ಟ್ ಆಫ್ ಕಿಂಗ್
Question 1 Explanation: 
ಕೋಫೌಂಡರ್:

ಭಾರತದ ಮೊದಲ ನವೋದ್ಯಮ ನಿಯತಕಾಲಿಕೆ “ಕೋಫೌಂಡರ್ (Cofounder)” ಆದೀಶ್ ವರ್ಮಾ ಮತ್ತು ಅರುಣ್ ರಾಜ್ ರಾಜೇಂದ್ರನ್ ಹೊರತಂದಿದ್ದಾರೆ. ನವೋದ್ಯಮ ಮತ್ತು ಹೊಸ ಉದ್ದಿಮೆಗಳ ಯಶಸ್ಸಿನ ಕಥೆಗಳನ್ನು ಈ ನಿಯತಕಾಲಿಕೆ ಒಳಗೊಂಡಿರಲಿದೆ. ಹೊಸದಾಗಿ ನವೋದ್ಯಮ ಆರಂಭಿಸಲಿರುವ ಸಿಇಓ ಮತ್ತು ಸಿಐಒ ಗಳಿಗೆ ನವೋದ್ಯಮದ ಬಗ್ಗೆ ಅಗತ್ಯ ಮಾಹಿತಿಯನ್ನು ನೀಡಲು ಇದು ಸಹಕಾರಿಯಾಗಲಿದೆ.

Question 2

2.ಸಾಫ್ಟ್ವೇರ್ ದಿಗ್ಗಜ ಮೈಕ್ರೋಸಾಫ್ಟ್ ದೇಶದ ಮೊದಲ ಸೈಬರ್ ಭದ್ರತೆ ಕೇಂದ್ರವನ್ನು ಎಲ್ಲಿ ಸ್ಥಾಪಿಸಿದೆ?

A
ಬೆಂಗಳೂರು
B
ಮುಂಬೈ
C
ಪುಣೆ
D
ನವದೆಹಲಿ
Question 2 Explanation: 
ನವದೆಹಲಿ:

ಮೈಕ್ರೋಸಾಫ್ಟ್ ತನ್ನ ಮೊದಲ ಸೈಬರ್ ಭದ್ರತೆ ಕೇಂದ್ರವನ್ನು ನವದೆಹಲಿಯಲ್ಲಿ ಇತ್ತೀಚೆಗೆ ಸ್ಥಾಪಿಸಿದೆ. ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ಸೈಬರ್ ದಾಳಿ ಎದುರಿಸಲು ಇದು ಅನುಕೂಲವಾಗಿದೆ. ಇತ್ತೀಚಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ವಂಚನೆಯಂತಹ ಸೈಬರ್ ಪ್ರಕರಣಗಳು ದೇಶದಲ್ಲಿ ಗಣನೀಯವಾಗಿ ಹೆಚ್ಚಿದ್ದು, ಈ ಕೇಂದ್ರದ ಸ್ಥಾಪನೆ ಭಾರತಕ್ಕೆ ಅತ್ಯಂತ ಅವಶ್ಯಕವಾಗಿದೆ.

Question 3

3.ವೈದ್ಯಕೀಯ ಕ್ಷೇತ್ರದಲ್ಲಿ ಶ್ರೇಷ್ಠ ಸಾಧನೆ ಮಾಡಿದವರಿಗೆ ಕೊಡಲಾಗುವ ಡಾ. ಬಿಧಾನ್ ಚಂದ್ರ ರಾಯ್ (ಬಿ ಸಿ ರಾಯ್) ಪ್ರಶಸ್ತಿಯನ್ನು ಪ್ರಸ್ತಕ ಸಾಲಿನಲ್ಲಿ ಯಾರಿಗೆ ನೀಡಲಾಗಿದೆ?

A
ಡಾ. ಗಂಗರಾಮ್ ಬಡೇರಿಯ
B
ಡಾ. ರಣದೀಪ್ ಗುಲೇರಿಯ
C
ಡಾ. ನವೀನ್ ಕಿರಣ್
D
ಡಾ. ಗುರ್ಜಿತ್ ಸಿಂಗ್
Question 3 Explanation: 
ಡಾ. ರಣದೀಪ್ ಗುಲೇರಿಯ:

ಎಐಐಎಮ್ಎಸ್ ನ ಶ್ವಾಸಕೋಶ ವಿಭಾಗದ ಮುಖ್ಯಸ್ಥ ಡಾ. ರಣದೀಪ್ ಗುಲೇರಿಯ ಮತ್ತು ಗಂಗಾ ರಾಮ್ ಆಸ್ಪತ್ರೆಯ ಮೂಳೆ ಚಿಕಿತ್ಸೆ ವಿಭಾಗದ ಡಾ ಸಿ ಎಸ್ ಯಾಧವ್ ಅವರನ್ನು ಪ್ರಸ್ತಕ ಸಾಲಿನ ಡಾ. ಬಿಧಾನ್ ಚಂದ್ರ ರಾಯ್ (ಬಿ ಸಿ ರಾಯ್) ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ.

Question 4

4.2016 ಅಮೆರಿಕ ಗ್ರ್ಯಾನ್ ಪ್ರಿ ಫಾರ್ಮುಲಾ ಒನ್ ರೇಸ್ನಲ್ಲಿ ಪ್ರಶಸ್ತಿಯನ್ನು ಗೆದ್ದವರು _____?

A
ಲೂಯಿಸ್ ಹ್ಯಾಮಿಲ್ಟನ್
B
ಸರ್ಜಿಯೊ ಪೆರೆಜ್
C
ನಿಕೋ ರೋಸ್ಬರ್ಗ್
D
ಸೆಬಾಸ್ಟಿಯನ್ ವೆಟಾಲ್
Question 4 Explanation: 
ಲೂಯಿಸ್ ಹ್ಯಾಮಿಲ್ಟನ್:

ಬ್ರಿಟನ್ನ ಲೂಯಿಸ್ ಹ್ಯಾಮಿಲ್ಟನ್ ಅವರು ಇಲ್ಲಿ ನಡೆದ ಅಮೆರಿಕ ಗ್ರ್ಯಾನ್ ಪ್ರಿ ಫಾರ್ಮುಲಾ ಒನ್ ರೇಸ್ನಲ್ಲಿ ಚಾಂಪಿಯನ್ ಆಗಿದ್ದಾರೆ. ಈ ಮೂಲಕ ವೃತ್ತಿ ಜೀವನದ 50ನೇ ಪ್ರಶಸ್ತಿ ಎತ್ತಿ ಹಿಡಿದರು. ಹ್ಯಾಮಿ ಲ್ಟನ್ ಈ ಋತುವಿನಲ್ಲಿ ಗೆದ್ದ ಏಳನೇ ಪ್ರಶಸ್ತಿ ಇದಾಗಿದೆ. ರೋಸ್ಬರ್ಗ್ ಎರಡನೇ ಸ್ಥಾನ ಗಳಿಸಿದರೆ, ರೆಡ್ಬುಲ್ ತಂಡದ ಆಸ್ಟ್ರೇಲಿಯಾದ ಚಾಲಕ ಡೇನಿಯಲ್ ರಿಕಿಯಾರ್ಡೊ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟರು.

Question 5

5.ಈ ಕೆಳಗಿನ ದೇಶಗಳನ್ನು ಗಮನಿಸಿ:

I) ಸ್ವಿಟ್ಜರ್ಲ್ಯಾಂಡ್

II) ಐಸ್ ಲ್ಯಾಂಡ್

III) ನಾರ್ವೆ

IV) ಲಿಚ್ಟೆನ್ಸ್ಟಿನ್

ಈ ಮೇಲಿನ ಯಾವ ರಾಷ್ಟ್ರಗಳು ಐರೋಪ್ಯ ಮುಕ್ತ ವ್ಯಾಪಾರ ಒಕ್ಕೂಟ (EFTA)ದ ಸದಸ್ಯ ರಾಷ್ಟ್ರಗಳಾಗಿವೆ?

A
I, II & III
B
II, III & IV
C
I, III & IV
D
I, II, III & IV
Question 5 Explanation: 
I, II, III & IV:

ಐರೋಪ್ಯ ಮುಕ್ತ ವ್ಯಾಪಾರ ಒಕ್ಕೂಟ ಪ್ರಾದೇಶಿಕ ವ್ಯಾಪಾರ ಸಂಘಟನೆಯಾಗಿದ್ದು, ಯುರೋಪ್ನ ನಾಲ್ಕು ರಾಷ್ಟ್ರಗಳಾದ ಸ್ವಿಟ್ಜರ್ಲ್ಯಾಂಡ್, ಐಸ್ ಲ್ಯಾಂಡ್, ನಾರ್ವೆ ಮತ್ತು ಲಿಚ್ಟೆನ್ಸ್ಟಿನ್ ಇದರ ಸದಸ್ಯ ರಾಷ್ಟ್ರಗಳು.

Question 6

6. ಯಾವ ದೇಶವನ್ನು ಮಣಿಸಿ ಭಾರತ ವಿಶ್ವಕಪ್ ಕಬಡ್ಡಿಯಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿತು?

A
ಜಪಾನ್
B
ಆಸ್ಟ್ರೇಲಿಯಾ
C
ಇರಾನ್
D
ಥಾಯ್ಲೆಂಡ್
Question 6 Explanation: 
ಇರಾನ್:

ವಿಶ್ವಕಪ್ ಕಬಡ್ಡಿ ಫೈನಲ್ ಪಂದ್ಯದಲ್ಲಿ ಭಾರತ–ಇರಾನ್ ನಡುವಿನ ಸೆಣಸಾಟದಲ್ಲಿ ಇರಾನ್ ತಂಡವನ್ನು ಬಗ್ಗುಬಡಿದ ಭಾರತದ ಆಟಗಾರರು ವಿಶ್ವಕಪ್ ಕಬಡ್ಡಿ ಚಾಂಪಿಯನ್ ಮುಡಿಗೇರಿಸಿಕೊಂಡರು. ಈ ಮೂಲಕ ಐತಿಹಾಸಿಕ ಸಾಧನೆ ತೋರಿದರು. ಇದರೊಂದಿಗೆ 2004, 2007 ಹಾಗೂ 2016ರಲ್ಲಿ ಇರಾನ್ ವಿರುದ್ಧ ನಡೆದ ಮೂರೂ ಫೈನಲ್ನಲ್ಲೂ ವಿಶ್ವಕಪ್ ಗೆದ್ದ ಹ್ಯಾಟ್ರಿಕ್ ಸಾಧನೆ ಭಾರತದ್ದಾಗಿದೆ.

Question 7

7.ರಾಜ್ಯ ನಿರ್ದೇಶಕ ತತ್ವಗಳು, ರಾಜ್ಯಸಭೆಗೆ ಸದಸ್ಯರ ನಾಮಕರಣ, ರಾಷ್ಟ್ರಧ್ಯಕ್ಷರ ಚುನಾವಣಾ ವಿಧಾನ ಯಾವ ದೇಶದ ಸಂವಿಧಾನದಿಂದ ಎರವರಲು ಪಡೆಯಲಾಗಿದೆ?

A
ಬ್ರಿಟನ್ ಸಂವಿಧಾನ
B
ಅಮೆರಿಕಾ ಸಂವಿಧಾನ
C
ಐರ್ಲೆಂಡ್ ಸಂವಿಧಾನ
D
ಕೆನಡಾ ಸಂವಿಧಾನ
Question 7 Explanation: 
ಐರ್ಲೆಂಡ್ ಸಂವಿಧಾನ:

ರಾಜ್ಯ ನಿರ್ದೇಶಕ ತತ್ವಗಳು, ರಾಜ್ಯಸಭೆಗೆ ಸದಸ್ಯರ ನಾಮಕರಣ, ರಾಷ್ಟ್ರಧ್ಯಕ್ಷರ ಚುನಾವಣಾ ವಿಧಾನವನ್ನು ಐರ್ಲೆಂಡ್ ಸಂವಿಧಾನದಿಂದ ಎರವಲು ಪಡೆಯಲಾಗಿದೆ.

Question 8

8. “2016 ಹಾರ್ಟ್ ಆಫ್ ಏಷ್ಯಾ” ಸಮ್ಮೇಳನ ಡಿಸೆಂಬರ್ 2016 ರಲ್ಲಿ ಭಾರತದ ಯಾವ ನಗರದಲ್ಲಿ ನಡೆಯಲಿದೆ?

A
ನವದೆಹಲಿ
B
ಅಮೃತಸರ
C
ಕೊಚ್ಚಿ
D
ಲೂಧಿಯಾನ
Question 8 Explanation: 
ಅಮೃತಸರ:

ಡಿಸೆಂಬರ್ ಮೊದಲ ವಾರದಲ್ಲಿ ಭಾರತದ ಅಮೃತ ಸರದಲ್ಲಿ ನಡೆಯುವ ಹಾರ್ಟ್ ಆಫ್ ಏಷ್ಯಾ ಸಮ್ಮೇಳನ ನಡೆಯಲಿದೆ. ಈ ಸಮ್ಮೇಳನದಲ್ಲಿ ಪಾಕಿಸ್ತಾನ ಭಾಗವಹಿಸುವುದಾಗಿ ಪಾಕಿಸ್ತಾನ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ಸತ್ರಾಜ್ ಆಜೀಜ್ ಹೇಳಿದ್ದಾರೆ. ರಷ್ಯಾ, ಚೀನಾ, ಟರ್ಕಿ ಸೇರಿದಂತೆ ಒಟ್ಟುನ 14 ರಾಷ್ಟ್ರಗಳ ವಿದೇಶಾಂಗ ಸಚಿವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

Question 9

9.ಯಾವ ರಾಜ್ಯದಲ್ಲಿ ಇತ್ತೀಚೆಗೆ ಪ್ರಧಾನಿ ಮೋದಿ ಅವರು 2540 ಕಿ.ಮೀ ಉದ್ದದ “ಉರ್ಜ ಗಂಗಾ” ಕೊಳವೆ ಅನಿಲ ಯೋಜನೆಗೆ ಚಾಲನೆ ನೀಡಿದರು?

A
ಉತ್ತರಖಂಡ
B
ಹಿಮಾಚಲ ಪ್ರದೇಶ
C
ಉತ್ತರ ಪ್ರದೇಶ
D
ಜಾರ್ಖಂಡ್
Question 9 Explanation: 
ಉತ್ತರ ಪ್ರದೇಶ:

ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ವಾರಣಾಸಿಯಲ್ಲಿ 2540 ಕಿ.ಮೀ ಉದ್ದದ ಕೊಳವೆ ಅನಿಲ ಯೋಜನೆಗೆ ಚಾಲನೆ ನೀಡಿದರು. ಈ ಯೋಜನೆಯ ಮೂಲಕ ಶುದ್ದ ಮತ್ತು ಪರಿಸರ ಸ್ನೇಹಿ ಅಡುಗೆ ಅನಿಲವನ್ನು ವಾರಣಾಸಿ, ಪಾಟ್ನ, ಜೇಮ್ ಶೆಡ್ಪುರ, ಕೊಲ್ಕತ್ತ, ರಾಂಚಿ, ಭುಬನೇಶ್ವರ ಮತ್ತು ಕಟಕ್ ನಗರಗಳಿಗೆ ಪೂರೈಸಲಾಗುವುದು. ಈ ಯೋಜನೆಯು 2020ರ ವೇಳೆಗೆ ಪೂರ್ಣಗೊಳ್ಳಲಿದೆ.

Question 10

10.ಸುಮಾರು 15,300 ಕಿ.ಮೀ ನಿಲುಗಡೆ ರಹಿತ ಹಾರಾಟ ನಡೆಸಿ ದಾಖಲೆ ನಿರ್ಮಿಸಿದ ವಿಮಾನ ಸಂಸ್ಥೆ ಯಾವುದು?

A
ಏರ್ ಇಂಡಿಯಾ
B
ಜೆಟ್ ಏರ್ವೇಸ್
C
ಬ್ರಿಟಿಷ್ ಏರ್ವೇಸ್
D
ಕಿಂಗ್ ಫಿಷರ್
Question 10 Explanation: 
ಏರ್ ಇಂಡಿಯಾ:

ಭಾರತ ಸರ್ಕಾರ ಸ್ವಾಮ್ಯದ ಏರ್ ಇಂಡಿಯಾ ಸಂಸ್ಥೆಯ ಹಿರಿಮೆಗೆ ಮತ್ತೊಂದು ಗರಿ ಸೇರ್ಪಡೆಯಾಗಿದ್ದು, ನವದೆಹಲಿಯಿಂದ ಸ್ಯಾನ್ ಫ್ರಾನ್ಸಿಸ್ ಕೋ ಗೆ ನಿಲುಗಡೆ ರಹಿತ ಪ್ರಯಾಣ ಮಾಡುವ ಮೂಲಕ ದಾಖಲೆ ಬರೆದಿದೆ.ದೆಹಲಿಯಿಂದ-ಸ್ಯಾನ್ ಫ್ರಾನ್ಸಿಸ್ಕೋ ನಡುವಿನ ಸುಮಾರು 15,300 ಕಿ.ಮೀ. ದೂರವನ್ನು ಯಾವುದೇ ನಿಲುಗಡೆ ಇಲ್ಲದೇ ಕೇವಲ 14.5 ಗಂಟೆಯಲ್ಲಿ ಪ್ರಯಾಣಿಸುವ ಮೂಲಕ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಹೊಸ ದಾಖಲೆ ಬರೆದಿದೆ. ಆ ಮೂಲಕ ಈ ಹಿಂದೆ ಎಮಿರೇಟ್ಸ್ ಸಂಸ್ಥೆಯ ಹೆಸರಿನಲ್ಲಿದ್ದ ವಿಶ್ವದಾಖಲೆಯನ್ನು ಏರ್ ಇಂಡಿಯಾ ತನ್ನ ಹೆಸರಿಗೆ ಬರೆಸಿಕೊಂಡಿದೆ. ಈ ಹಿಂದೆ ಎಮಿರೇಟ್ಸ್ ಸಂಸ್ಥೆ ದುಬೈನಿಂದ ಆಕ್ಲೆಂಡ್ಗೆ 14,120 ಕಿ.ಮೀ. ದೂರ ನಿಲುಗಡೆ ರಹಿತ ಹಾರಾಟ ನಡೆಸುತಿತ್ತು. ಏರ್ ಇಂಡಿಯಾ ಕೂಡ ನಿಲುಗಡೆ ರಹಿತ ದೂರ ಪ್ರಯಾಣ ಮಾಡುತ್ತಿತ್ತಾದರೂ ಇಷ್ಟು ಪ್ರಮಾಣದ ದೂರವನ್ನು ಕ್ರಮಿಸಿರಲಿಲ್ಲ. ಈ ಮುನ್ನ ದೆಹಲಿಯಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ಏರ್ ಇಂಡಿಯಾ ಅಟ್ಲಾಂಟಿಕ್ ಸಾಗರ ಮೇಲ್ಭಾಗದಿಂದ ವಿಮಾನ ಹಾರಾಟ ನಡೆಸುತ್ತಿತ್ತು. ಈ ಮಾರ್ಗ 13,900 ಕಿ.ಮೀ. ದೂರ ಇದ್ದು, ವಿಶ್ವದ ಎರಡನೇ ಅತಿ ದೂರದ ನಿಲುಗಡೆ ರಹಿತ ಮಾರ್ಗ ಎಂಬ ಹೆಗ್ಗಳಿಕೆ ಪಡೆದಿತ್ತು.

There are 10 questions to complete.

[button link=”http://www.karunaduexams.com/wp-content/uploads/2016/10/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಕ್ವಿಜ್-ಅಕ್ಟೋಬರ್-23.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

4 Thoughts to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಅಕ್ಟೋಬರ್-23, 2016”

  1. ಸಂತೋಷ್ ಗೌಡರ

    ಧನ್ಯವಾದಗಳು ಸರ್

Leave a Comment

This site uses Akismet to reduce spam. Learn how your comment data is processed.