ಭಾರತೀಯ ನೌಕಪಡೆಗೆ ಸೇರ್ಪಡೆಗೊಂಡ ಐಎನ್ಎಸ್ ತಿಹಾಯು

ಕಾರ್ ನಿಕೋಬರ್ ದರ್ಜೆಯ ಕ್ಷೀಪ್ರ ದಾಳಿ ನಡೆಸಬಲ್ಲ “ಐಎನ್ಎಸ್ ತಿಹಾಯು” ನೌಕೆಯನ್ನು ಭಾರತೀತ ನೌಕಪಡೆಗೆ ನಿಯೋಜಿಸಲಾಯಿತು. ಈ ನೌಕೆಯನ್ನು ಪೂರ್ವ ನೌಕದಳದ ವೈಸ್ ಅಡ್ಮಿರಲ್ ಹೆಚ್.ಸಿ.ಎಸ್ ಬಿಶ್ತ್ ರವರು ವಿಶಾಖಪಟ್ಟಣ, ಆಂಧ್ರಪ್ರದೇಶದಲ್ಲಿ ಸೇರ್ಪಡೆಗೊಳಿಸಿದರು.

ಐಎನ್ಎಸ್ ತಿಹಾಯು ಬಗ್ಗೆ:

  • ಐಎನ್ಎಸ್ ತಿಹಾಯು ಕಾರ್ ನಿಕೋಬರ್ ದರ್ಜೆಯ ವಾಟರ್ ಜೆಟ್ ಕ್ಷೀಪ್ರ ದಾಳಿ ನಡೆಸಬಲ್ಲ ಹಡಗು (WJFAC) ಮಾದರಿಯ ಭಾರತೀಯ ನೌಕ ಸೇನೆ ಸೇರ್ಪಡೆಗೊಂಡ ಆರನೇಯದು. ಭಾರತೀಯ ನೌಕಪಡೆಯ ಪೂರ್ವದಳದಲ್ಲಿ ಇದನ್ನು ನಿಯೋಜಿಸಲಾಗಿದೆ.
  • ಕೊಲ್ಕತ್ತಾದ ಗಾರ್ಡನ್ ರೀಚ್ ಹಡಗು ನಿರ್ಮಾಣ ಮತ್ತು ಎಂಜನಿಯರ್ಸ್ ಸಂಸ್ಥೆ ಈ ನೌಕೆಯನ್ನು ಅಭಿವೃದ್ದಿಪಡಿಸಿದೆ.
  • ಐಎನ್ಎಸ್ ತಿಹಾಯು 315 ಟನ್ ಭಾರವಿದ್ದು, ಗಂಟೆಗೆ 35 ನಾಟ್ಸ್ ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ.
  • ಸ್ವದೇಶಿ ನಿರ್ಮಿತ 30 ಎಂಎಂ CRN ಗನ್ ಮತ್ತು ಭುಜದ ಮೇಲಿಂದ ಭೂಮಿಯಿಂದ ಗಾಳಿಗೆ ಹಾರುವ IGLA ಕ್ಷಿಪಣಿಯನ್ನು ಇದಕ್ಕೆ ಅಳವಡಿಸಲಾಗಿದೆ.

ಕಾರ್ ನಿಕೋಬರ್ ದರ್ಜೆಯ ನೌಕೆಗಳು?

  • ಕಾರ್ ನಿಕೋಬರ್ ದರ್ಜೆಯ ವಾಟರ್ ಜೆಟ್ ಫಾಸ್ಟ್ ಅಟ್ಯಾಕ್ ನೌಕೆಗಳನ್ನು ಕೊಲ್ಕತ್ತಾದ ಗಾರ್ಡನ್ ರೀಚ್ ಹಡಗು ನಿರ್ಮಾಣ ಮತ್ತು ಎಂಜನಿಯರ್ಸ್ ಸಂಸ್ಥೆ ವಿನ್ಯಾಸಗೊಳಿಸಿದೆ. ಈ ನೌಕೆಗಳು ಕರಾವಳಿಯಲ್ಲಿ ಗಸ್ತು ತಿರುಗಬಲ್ಲ ಹೆಚ್ಚು ವ್ಯೂಹ ರಚಿತ ಕ್ಷಿಪ್ರ ದಾಳಿ ನಡೆಸಬಲ್ಲ ನೌಕೆಗಳಾಗಿವೆ.
  • ಅಂಡಮಾನ್ ಮತ್ತು ನಿಕೋಬರ್ನ ಕಾರ್ ನಿಕೋಬರ್ ದ್ವೀಪದ ಹೆಸರನ್ನು ಈ ನೌಕೆಗೆ ಇಡಲಾಗಿದೆ. ಭಾರತೀಯ ನೌಕಪಡೆಯ ಮೊದಲ ವಾಟರ್ ಜೆಟ್ ಫಾಸ್ಟ್ ಅಟ್ಯಾಕ್ ನೌಕೆಗಳು ಇವಾಗಿವೆ.

ಸರ್ ಡೇವಿಡ್ ಕಾಕ್ಸ್ ಅವರಿಗೆ ಮೊದಲ ಅಂತಾರಾಷ್ಟ್ರೀಯ ಸಂಖ್ಯಾಶಾಸ್ತ್ರ ಪ್ರಶಸ್ತಿ

ಪ್ರಖ್ಯಾತ ಬ್ರಿಟಿಷ್ ಸಂಖ್ಯಾಶಾಸ್ತ್ರಜ್ಞ ಸರ್ ಡೇವಿಡ್ ಕಾಕ್ಸ್ ಅವರಿಗೆ ಮೊದಲ ಅಂತಾರಾಷ್ಟ್ರೀಯ ಸಂಖ್ಯಾಶಾಸ್ತ್ರ ಪ್ರಶಸ್ತಿಯನ್ನು ನೀಡಲಾಗಿದೆ. ಇಂಟರ್ ನ್ಯಾಷನಲ್ ಪ್ರೈಜ್ ಇನ್ ಸ್ಟಾಟಿಸ್ಟಿಕಲ್ ಫೌಂಡೇಷನ್ ನೀಡುವ ಈ ಪ್ರಶಸ್ತಿಯನ್ನು ಕಾಕ್ಸ್ ಅವರ ಸರ್ವೈವಲ್ ಅನಾಲಿಸಿಸ್ ಮಾಡೆಲ್ ಅಥವಾ ಕಾಕ್ಸ್ ಮಾಡೆಲ್ ಗೆ ನೀಡಲಾಗಿದೆ. ಕಾಕ್ಸ್ ಅವರು ಅಭಿವೃದ್ದಿಪಡಿಸಿರುವ ಕಾಕ್ಸ್ ಮಾಡೆಲ್ ಅನ್ನು ವೈದ್ಯಕೀಯ, ವಿಜ್ಞಾನ ಮತ್ತು ಎಂಜನಿಯರಿಂಗ್ ಕ್ಷೇತ್ರದಲ್ಲಿ ವ್ಯಾಪಕವಾಗಿ ಅಳವಡಿಸಿಕೊಳ್ಳಲಾಗಿದೆ.

ಸರ್ ಡೇವಿಡ್ ಕಾಕ್ಸ್:

  • ಪ್ರಖ್ಯಾತ ಸಂಖ್ಯಾಶಾಸ್ತ್ರಜ್ಞ ಕಾಕ್ಸ್ 15ನೇ ಜುಲೈ 1924 ರಲ್ಲಿ ಇಂಗ್ಲೆಂಡ್ನ ಬಿರ್ಮಿಂಗ್ ಹ್ಯಾಮ್ ನಲ್ಲಿ ಜನಿಸಿದ್ದಾರೆ.
  • ಕಾಕ್ಸ್ ಅವರು 1992 ರಲ್ಲಿ ಅಭಿವೃದ್ದಿಪಡಿಸಿದ ಕಾಕ್ಸ್ ಮಾಡೆಲ್ ವಿಶ್ವದಾದ್ಯಂತ ಪ್ರಸಿದ್ದಿ ಹೊಂದಿದ್ದು, ಸಮೀಕ್ಷೆಯ ದತ್ತಾಂಶಗಳನ್ನು ವಿಶ್ಲೇಷಣೆ ಮಾಡಲು ಸಂಶೋಧಕರಿಗೆ ಅತ್ಯಂತ ಉಪಯುಕ್ತವಾಗಿದೆ.
  • ಬರ್ನೌಲಿ ಸೊಸೈಟಿ, ರಾಯಲ್ ಸ್ಟಾಟಿಸ್ಟಿಕಲ್ ಸೊಸೈಟಿ ಮತ್ತು ಅಂತಾರಾಷ್ಟ್ರೀಯ ಸ್ಟಾಟಿಸ್ಟಿಕಲ್ ಸೊಸೈಟಿಯ ಅಧ್ಯಕ್ಷರಾಗಿ ಕಾಕ್ಸ್ ಸೇವೆ ಸಲ್ಲಿಸಿದ್ದಾರೆ.

ಪ್ರಶಸ್ತಿಯ ಬಗ್ಗೆ:

  • ಸಂಖ್ಯಾಶಾಸ್ತ್ರಕ್ಕೆ ಗಣನೀಯ ಸೇವೆ ನೀಡಿದವರನ್ನು ಗೌರವಿಸುವ ಸಲುವಾಗಿ ಇಂಟರ್ ನ್ಯಾಷನಲ್ ಪ್ರೈಜ್ ಇನ್ ಸ್ಟಾಟಿಸ್ಟಿಕಲ್ ಫೌಂಡೇಷನ್ ಈ ಪ್ರಶಸ್ತಿಯನ್ನು ಸ್ಥಾಪಿಸಿದೆ.

ಹವಾಮಾನ ಬದಲಾವಣೆ ನಿಭಾಯಿಸಲು ಬಾಂಗ್ಲದೇಶಕ್ಕೆ 2 ಬಿಲಿಯನ್ ಡಾಲರ್ ನೆರವು ಘೋಷಿಸಿದ ವಿಶ್ವಬ್ಯಾಂಕ್

ವಿಶ್ವಬ್ಯಾಂಕ್ ಮುಂದಿನ ಮೂರು ವರ್ಷಗಳಲ್ಲಿ ಹವಾಮಾನ ಬದಲಾವಣೆಯನ್ನು ನಿಭಾಯಿಸುವ ಸಲುವಾಗಿ ಬಾಂಗ್ಲದೇಶಕ್ಕೆ 2 ಬಿಲಿಯನ್ ಡಾಲರ್ ನೆರವಿನ ಪ್ಯಾಕೇಜ್ ಅನ್ನು ಘೋಷಿಸಿದೆ. ಈ ಪ್ಯಾಕೇಜ್ ವಿಶ್ವಬ್ಯಾಂಕ್ ಬಡ ರಾಷ್ಟ್ರಗಳಿಗೆ ನೀಡುವ ನೆರವಿನ ಭಾಗವಾಗಿದೆ. ಹವಾಮಾನ ಬದಲಾವಣೆಗೆ ಅತೀವವಾಗಿ ತುತ್ತಾಗುವ ರಾಷ್ಟ್ರಗಳಲ್ಲಿ ಬಾಂಗ್ಲದೇಶ ಸಹ ಒಂದಾಗಿದೆ. ವಿಶ್ವಬ್ಯಾಂಕ್ ನೆರವಿನಿಂದ ಹವಾಮಾನ ಬದಲಾವಣೆ ಮತ್ತು ಪ್ರಕೃತಿ ವಿಕೋಪಕ್ಕೆ ತುತ್ತಾಗುವ ಸಂತ್ರಸ್ತರ ಜೀವನೋಪಾಯಕ್ಕೆ ಸಹಾಯವಾಗಲಿದೆ.

ಹಿನ್ನಲೆ:

  • ವಿಶ್ವಬ್ಯಾಂಕ್ ನ ಅಧ್ಯಕ್ಷ ಜಿಮ್ ಯಾಂಗ್ ಕಿಮ್ ಅವರು ಬಾಂಗ್ಲದೇಶಕ್ಕೆ ಭೇಟಿ ನೀಡಿದ ವೇಳೆ ಈ ನೆರವಿನ ಪ್ಯಾಕೇಜ್ ಅನ್ನು ಘೋಷಿಸಿದ್ದಾರೆ. ಇದಲ್ಲದೇ, ಬಾಂಗ್ಲದೇಶದ ಮಕ್ಕಳಲ್ಲಿ ಅಪೌಷ್ಠಿಕತೆಯನ್ನು ತೊಲಗಿಸುವುದಕ್ಕಾಗಿ 1 ಬಿಲಿಯನ್ ಡಾಲರ್ ನೆರವನ್ನು ಸಹಾಯ ನೀಡುವುದಾಗಿ ಹೇಳಿದ್ದಾರೆ.

ವಿಶ್ವಸಂಸ್ಥೆಯ ಬಗ್ಗೆ:

  • ವಿಶ್ವಸಂಸ್ಥೆ ಒಂದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯಾಗಿದ್ದು, ಅಭಿವೃದ್ದಿ ಹೊಂದುತ್ತಿರುವ ದೇಶಗಳಲ್ಲಿ ಪ್ರಮುಖ ಯೋಜನೆಗಳನ್ನು ಅನುಷ್ಟಾನಗೊಳಿಸಲು ಆರ್ಥಕ ನೆರವು ಒದಗಿಸುತ್ತಿದೆ.
  • ವಿಶ್ವಸಂಸ್ಥೆಯ ಪ್ರಧಾನ ಕಚೇರಿ ವಾಷಿಂಗಟನ್ ಡಿಸಿ, ಅಮೆರಿಕದಲ್ಲಿದೆ.
  • ವಿಶ್ವಸಂಸ್ಥೆಯನ್ನು ಜುಲೈ 1944ರಲ್ಲಿ ಸ್ಥಾಪಿಸಲಾಗಿದೆ.

One Thought to “ಪ್ರಚಲಿತ ವಿದ್ಯಮಾನಗಳು- ಅಕ್ಟೋಬರ್-20, 2016”

  1. manjunath.s.mullur

    Pdo

Leave a Comment

This site uses Akismet to reduce spam. Learn how your comment data is processed.