ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಅಕ್ಟೋಬರ್-17, 2016

Question 1

1.“104ನೇ ಭಾರತೀಯ ಸೈನ್ಸ್ ಕಾಂಗ್ರೆಸ್ (Indian Science Congress)” ಜನವರಿ, 2017 ರಲ್ಲಿ ಯಾವ ರಾಜ್ಯದಲ್ಲಿ ನಡೆಯಲಿದೆ?

A
ತಮಿಳುನಾಡು
B
ಆಂಧ್ರ ಪ್ರದೇಶ
C
ತೆಲಂಗಣ
D
ಮಹಾರಾಷ್ಟ್ರ
Question 1 Explanation: 
ಆಂಧ್ರ ಪ್ರದೇಶ:

ಆಂಧ್ರ ಪ್ರದೇಶದ ಎಸ್.ವಿ ವಿಶ್ವವಿದ್ಯಾಲಯ, ತಿರುಪತಿಯಲ್ಲಿ “104ನೇ ಭಾರತೀಯ ಸೈನ್ಸ್ ಕಾಂಗ್ರೆಸ್” ಜನವರಿ 3 ರಿಂದ 7 ರವರೆಗೆ ನಡೆಯಲಿದೆ. ಅಮೆರಿಕ, ಜಪಾನ್, ಫ್ರಾನ್ಸ್, ಇಸ್ರೇಲ್ ಮತ್ತು ಬಾಂಗ್ಲದೇಶದಿಂದ ಒಂಬತ್ತು ನೊಬೆಲ್ ಪುರಸ್ಕೃತ ವಿಜ್ಞಾನಿಗಳು ಈ ಕಾಂಗ್ರೆಸ್ ನಲ್ಲಿ ಭಾಗವಹಿಸಲಿದ್ದಾರೆ.

Question 2

2.“ಅಂತಾರಾಷ್ಟ್ರೀಯ ಬಡತನ ನಿರ್ಮೂಲನ ದಿನ”ವನ್ನು ಈ ದಿನದಂದು ಆಚರಿಸಲಾಗುವುದು _______?

A
ಅಕ್ಟೋಬರ್ 15
B
ಅಕ್ಟೋಬರ್ 16
C
ಅಕ್ಟೋಬರ್ 17
D
ಅಕ್ಟೋಬರ್ 18
Question 2 Explanation: 
ಅಕ್ಟೋಬರ್ 17:

ಅಂತಾರಾಷ್ಟ್ರೀಯ ಬಡತನ ನಿರ್ಮೂಲನ ದಿನವನ್ನು ಅಕ್ಟೋಬರ್ 17ರಂದು ಪ್ರತಿ ವರ್ಷ ಆಚರಿಸಲಾಗುವುದು. ಜಾಗತಿಕ ಮಟ್ಟದಲ್ಲಿ ಬಡತನ ನಿರ್ಮೂಲನೆ ಮಾಡಲು ಕರೆ ನೀಡುವುದು ಈ ದಿನದ ಉದ್ದೇಶ. Moving from humiliation and exclusion to participation: Ending poverty in all its forms” ಈ ವರ್ಷದ ಬಡತನ ನಿರ್ಮೂಲನ ದಿನದ ಥೀಮ್.

Question 3

3.2016 ಚೈನೀಸ್ ತೈಪೆ ಮಾಸ್ಟರ್ಸ್ ಟೂರ್ನಿಯ ಪುರುಷರ ಸಿಂಗಲ್ಸ್ ನಲ್ಲಿ ಪ್ರಶಸ್ತಿ ಗೆದ್ದ ಭಾರತೀಯ ಆಟಗಾರ ಯಾರು?

A
ಸೌರಭ್ ವರ್ಮ
B
ಸುಶೀಲ್ ಶರ್ಮ
C
ಅಶೋಕ್ ಘೋಷಲ್
D
ಸಮೀರ್ ವರ್ಮ
Question 3 Explanation: 
ಸೌರಭ್ ವರ್ಮ:

ಭಾರತದ ಉದಯೋನ್ಮುಖ ಆಟಗಾರ ಸೌರಭ್ ವರ್ಮಾ, ಚೈನೀಸ್ ತೈಪೆ ಗ್ರ್ಯಾನ್ ಪ್ರೀ ಬ್ಯಾಡ್ಮಿಂಟನ್ ಪಂದ್ಯಾವಳಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್ ಪ್ರಶಸ್ತಿ ಪಡೆದಿದ್ದಾರೆ. ಫೈನಲ್ ಪಂದ್ಯದಲ್ಲಿ ಭಾರತದ ಸೌರಭ್ 12-10, 12-10, 3-3 ಗೇಮ್ಗಳಿಂದ ಮಲೇಷ್ಯಾದ ಡರೇನ್ ಲೀವ್ ಎದುರು ಗೆಲುವು ಸಾಸಿದರು.

Question 4

4.ಇತ್ತೀಚೆಗೆ “ಶೆಂಝೌ-11 (Shenzhou-11)” ಮಾನವ ಸಹಿತ ಬಾಹ್ಯಕಾಶ ನೌಕೆಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ದೇಶ ಯಾವುದು?

A
ಅಮೆರಿಕ
B
ಚೀನಾ
C
ಜಪಾನ್
D
ರಷ್ಯಾ
Question 4 Explanation: 
ಚೀನಾ:

ಇಬ್ಬರು ಖಗೋಳಯಾತ್ರಿಗಳನ್ನು ಹೊಂದಿರುವ ಅಂತರಿಕ್ಷ ನೌಕೆ “ಶೆಂಝೌ-11” ಅನ್ನು ಚೀನಾ ಯಶಸ್ವಿಯಾಗಿ ಉಡಾವಣೆ ಮಾಡುವ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಸಾಧನೆ ಮಾಡಿದೆ. ವಾಯುವ್ಯ ಚೀನಾದ ಗೋಬಿ ಮರುಭೂಮಿ ಬಳಿ ಜಿಯುಕ್ವಾನ್ ಉಪಗ್ರಹ ಉಡಾವಣಾ ಕೇಂದ್ರದಿಂದ 50 ವರ್ಷದ ಜಿಂಗ್ ಹೈಪೆಂಗ್ ಮತ್ತು 37ರ ಹರೆಯದ ಚೆನ್ ಡಾಂಗ್ ಅವರಿದ್ದ ಶೆಂಝೌ-11 (ಚೀನಿ ಭಾಷೆಯಲ್ಲಿ ಸ್ವರ್ಗ ನೌಕೆ) ಗಗನನೌಕೆಯನ್ನು ಯಶಸ್ವಿಯಾಗಿ ಗಗನಕ್ಕೆ ಚಿಮ್ಮಿಸಲಾಯಿತು.ಉಡಾವಣೆ ನಂತರ ಲಾಂಗ್ ಮಾರ್ಚ್-2ಎಫ್ ಕ್ಯಾರಿಯರ್ ರಾಕೆಟ್ನಿಂದ ಈ ಗಗನನೌಕೆ ಅಂತರಿಕ್ಷ ಕಕ್ಷೆಗೆ ಸೇರ್ಪಡೆಯಾಗಲಿದೆ.

Question 5

5.ಅಂತಾರಾಷ್ಟ್ರೀಯ ಆಹಾರ ಸಂರಕ್ಷಣೆ ಒಕ್ಕೂಟದ (International Association Of Food Protection (IAFP)) ಯುವ ವಿಜ್ಞಾನಿ ಪ್ರಶಸ್ತಿಯನ್ನು ಪಡೆದುಕೊಂಡಿರುವ ಭಾರತೀಯ ಮೂಲದ ವಿಜ್ಞಾನಿ ಯಾರು?

A
ಕೀರ್ತಿರಾಜ್ ಕುಂಡ್ಲಿಕ್ ಗಾಯಕ್ವಾಡ್
B
ಅಶಿಶ್ ಕುಮಾರ್ ಜೊಂಡಲೆ
C
ಅಶೋಕ್ ಶಿಂಧೆ
D
ಮಹಂತೇಶ್ ಪಾಟೀಲ್
Question 5 Explanation: 
ಕೀರ್ತಿರಾಜ್ ಕುಂಡ್ಲಿಕ್ ಗಾಯಕ್ವಾಡ್:

ಭಾರತೀಯ ಮೂಲದ ಯುವ ವಿಜ್ಞಾನಿ ಕೀರ್ತಿರಾಜ್ ಕುಂಡ್ಲಿಕ್ ಗಾಯಕ್ವಾಡ್ ಅವರು ಅಂತಾರಾಷ್ಟ್ರೀಯ ಆಹಾರ ಸಂರಕ್ಷಣೆ ಒಕ್ಕೂಟ ನೀಡುವ ಯುವ ವಿಜ್ಞಾನಿ ಸ್ಕಾಲರ್ಷಿಪ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸಕ್ರಿಯ ಪ್ಯಾಕೇಜಿಂಗ್ ವಿಭಾಗದಲ್ಲಿ ಆಮ್ಲಜನಕ ಸೂಕ್ಷ್ಮ ಆಹಾರ ಪದಾರ್ಥಗಳನ್ನು ಶೇಖರಿಸಿಡಲು ವಿನೂತನ ಆಮ್ಲಜನಕ ಹೀರಿಕೊಳ್ಳುವ ಪ್ಯಾಕೇಜ್ ವ್ಯವಸ್ಥೆಯನ್ನು ಅಭಿವೃದ್ದಿಪಡಿಸಿದಕ್ಕಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ.

Question 6

6.ಅಂತಾರಾಷ್ಟ್ರೀಯ ಮಹಿಳಾ ಕುಸ್ತಿಪಟು ಗೀತಾ ಫೋಗಟ್ ಅವರು ಯಾವ ರಾಜ್ಯದ ಪೊಲೀಸ್ ಡಿಎಸ್ಪಿ ಆಗಿ ನೇಮಕಗೊಂಡಿದ್ದಾರೆ?

A
ರಾಜಸ್ತಾನ
B
ಹರಿಯಾಣ
C
ಪಂಜಾಬ್
D
ಕೇರಳ
Question 6 Explanation: 
ಹರಿಯಾಣ:

ಹರಿಯಾಣ ಸರಕಾರ ಅಂತಾರಾಷ್ಟ್ರೀಯ ಮಹಿಳಾ ಕುಸ್ತಿಪಟು ಗೀತಾ ಫೋಗಟ್ ಅವರನ್ನು ರಾಜ್ಯ ಪೊಲೀಸ್ ಡಿಎಸ್ಪಿ ಆಗಿ ನೇಮಕ ಮಾಡಿದೆ. ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಗೃಹ ಇಲಾಖೆಯ ಪ್ರಸ್ತಾವಕ್ಕೆ ಸಮ್ಮತಿ ನೀಡಲಾಗಿದೆ. ಫೋಗತ್ ಪದವೀಧರೆ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಅಥ್ಲೀಟ್. 2010ರಲ್ಲಿ ದಿಲ್ಲಿಯಲ್ಲಿ ನಡೆದಿದ್ದ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಚಿನ್ನದ ಪದಕವನ್ನು ಜಯಿಸಿದ್ದರು.

Question 7

7.ಈ ಕೆಳಗಿನ ಯಾವ ವರ್ಷ ಮೂಲಭೂತ ಕರ್ತವ್ಯಗಳನ್ನು(Fundamental Duties) ಭಾರತ ಸಂವಿಧಾನದಲ್ಲಿ ಅಳವಡಿಸಲಾಯಿತು?

A
1956
B
1976
C
1963
D
1975
Question 7 Explanation: 
1976:

1976' ರಲ್ಲಿ ಸಂವಿಧಾನಕ್ಕೆ 42ನೇ ತಿದ್ದುಪಡಿ ತರುವ ಮೂಲಕ ಸಂವಿಧಾನಕ್ಕೆ "4A" ಎಂಬ ಭಾಗ ಮತ್ತು "51ಎ" ಎಂಬ ಪರಿಚ್ಛೇದದಡಿಯಲ್ಲಿ 10 ಮೂಲಭೂತ ಕರ್ತವ್ಯಗಳನ್ನು ಸೇರಿಸಲಾಯಿತು. ಮೂಲಭೂತ ಕರ್ತವ್ಯಗಳ ಪರಿಕಲ್ಪನೆಯನ್ನು ರಷ್ಯಾ ದೇಶದ ಸಂವಿಧಾನದಿಂದ ಎರವಲು ಪಡೆಯಲಾಗಿದೆ.

Question 8

8.ವಿಶ್ವಸಂಸ್ಥೆಯ ನಿರಸ್ತ್ರೀಕರಣ ಅಧಿವೇಶನ (UN Conference on Disarmament)ದ ಭಾರತದ ರಾಯಭಾರಿಯಾಗಿ ಯಾರನ್ನು ನೇಮಕಮಾಡಲಾಗಿದೆ?

A
ಸಂಜುಶಾಸ್ತ್ರಿ ಯಾದವ್
B
ಅಮನ್ ದೀಪ್ ಸಿಂಗ್ ಗಿಲ್
C
ನವೀನ್ ಕುಮಾರ್ ಸಿಂಗ್
D
ಅಮರೇಶ್ ಗಿರಿಧರ್
Question 8 Explanation: 
ಅಮನ್ ದೀಪ್ ಸಿಂಗ್ ಗಿಲ್:

ಹಿರಿಯ ಐಎಫ್ಎಸ್ ಅಧಿಕಾರಿ ಅಮನ್ ದೀಪ್ ಸಿಂಗ್ ಗಿಲ್ ಅವರು ವಿಶ್ವಸಂಸ್ಥೆಯ ನಿರಸ್ತ್ರೀಕರಣ ಅಧಿವೇಶನದ ಭಾರತ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. ಗಿಲ್ ಅವರು 1982 ಬ್ಯಾಚ್ ಐಎಫ್ಎಸ್ ಅಧಿಕಾರಿ. ವಿಶ್ವಸಂಸ್ಥೆಯ ನಿರಸ್ತ್ರೀಕರಣ ಸಮ್ಮೇಳನ, ಜಿನೆವಾ, ಸ್ವಿಟ್ಜರ್ಲ್ಯಾಂಡ್ ನಲ್ಲಿದೆ.

Question 9

9. ಈ ಕೆಳಗಿನ ಯಾವ ಸಂದರ್ಭದಲ್ಲಿ ಸೂರ್ಯ ಗ್ರಹಣ ಸಂಭವಿಸುತ್ತದೆ?

A
ಸೂರ್ಯ ಮತ್ತು ಭೂಮಿ ನಡುವೆ ಚಂದ್ರ ಬಂದಾಗ
B
ಭೂಮಿ ಮತ್ತು ಚಂದ್ರನ ನಡುವೆ ಸೂರ್ಯ ಬಂದಾಗ
C
ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಬಂದಾಗ
D
ಸೂರ್ಯ ಮತ್ತು ಚಂದ್ರನ ನಡುವೆ ಕ್ಷುದ್ರಗ್ರಹ ಬಂದಾಗ
Question 9 Explanation: 
ಸೂರ್ಯ ಮತ್ತು ಭೂಮಿ ನಡುವೆ ಚಂದ್ರ ಬಂದಾಗ:

ಸೂರ್ಯ ಗ್ರಹಣವು ಸೌರಮಂಡಲದಲ್ಲಿ ನಡೆಯುವ ಭೂಮಿ, ಸೂರ್ಯ ಮತ್ತು ಚಂದ್ರರನ್ನೊಳಗೊಂಡ ಒಂದು ಖಗೋಳ ಪ್ರಕ್ರಿಯೆ. ಅಮಾವಾಸ್ಯೆಯ ದಿನ ಮಾತ್ರ ಸೂರ್ಯ ಗ್ರಹಣ ಸಂಭವಿಸಲು ಸಾಧ್ಯ. ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬ೦ದಾಗ ಸೂರ್ಯ ಗ್ರಹಣ ಸ೦ಭವಿಸುತ್ತದೆ.

Question 10

10.21ನೇ ಭಾರತ ಕಾನೂನು ಆಯೋಗದ ಸದಸ್ಯ ಕಾರ್ಯದರ್ಶಿಯಾಗಿ ಯಾರು ನೇಮಕಗೊಂಡಿದ್ದಾರೆ?

A
ಸಂಜಯ್ ಸಿಂಗ್
B
ಕರಣ್ ಶರ್ಮ
C
ಚಂದ್ರಮೋಹನ್ ಬಾಬು
D
ಕೃಷ್ಣ ದೀಕ್ಷಿತ್
Question 10 Explanation: 
ಸಂಜಯ್ ಸಿಂಗ್:

ಮಾಜಿ ಶಾಸಕಾಂಗ ಕಾರ್ಯದರ್ಶಿ ಸಂಜಯಸಿಂಗ್, ಭಾರತದ ಕಾನೂನು ಆಯೋಗದ ಸದಸ್ಯ ಕಾರ್ಯ ದರ್ಶಿಯಾಗಿ ನೇಮಕಗೊಂಡಿದ್ದಾರೆ.ರಾಷ್ಟ್ರಪತಿ ಪ್ರಣವ್ ಮುಖರ್ಜಿ ಈ ನೇಮಕಾತಿ ಮಾಡಿದ್ದು, ಸಿಂಗ್ರ ಅಧಿಕಾರಾವಧಿ 2018ರ ಆ.31ರ ವರೆಗಿರಲಿದೆಯೆಂದು ಅಧಿಕೃತ ಆದೇಶ ತಿಳಿಸಿದೆ. ಭಾರತದ ಕಾನೂನು ಸೇವೆಯ ನಿವೃತ್ತ ಅಧಿಕಾರಿಯಾಗಿರುವ ಸಿಂಗ್, 2014ರ ಆಗಸ್ಟ್ ನಲ್ಲಿ ಶಾಸಕಾಂಗ ಕಾರ್ಯದರ್ಶಿಯಾಗಿ ನೇಮಕವಾಗಿದ್ದರು. 2015ರ ಸೆ.1ರಂದು ರಚನೆಯಾಗಿರುವ 21 ಕಾನೂನು ಆಯೋಗದ ಅವಧಿ 2018ರ ಆ.31ರ ವರೆಗಿದೆ.

There are 10 questions to complete.

[button link=”http://www.karunaduexams.com/wp-content/uploads/2016/10/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಕ್ವಿಜ್-ಅಕ್ಟೋಬರ್-17.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

3 Thoughts to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಅಕ್ಟೋಬರ್-17, 2016”

  1. firoz nujawar

    wonderfull thank u

  2. ಸಂತೋಷ್ ಗೌಡರ

    ಧನ್ಯವಾದ ಸರ್

Leave a Comment

This site uses Akismet to reduce spam. Learn how your comment data is processed.