ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಅಕ್ಟೋಬರ್-16, 2016

Question 1

1.ಇತ್ತೀಚೆಗೆ ಸುದ್ದಿಯಲ್ಲಿದ್ದ “ಕಿಗಾಲಿ ಒಪ್ಪಂದ (Kigali Agreement)” ಇದಕ್ಕೆ ಸಂಬಂಧಿಸಿದೆ _____?

A
ಭಯೋತ್ಪಾದನೆ ನಿಗ್ರಹಿಸುವುದು
B
ಹಸಿರು ಮನೆ ಅನಿಲ ತಗ್ಗಿಸುವುದು
C
ಪರಮಾಣು ಅಣ್ವಸ್ತ್ರ ವಿರೋಧಿಸುವುದು
D
ವಲಸೆ ಹಕ್ಕಿಗಳ ಸಂರಕ್ಷಣೆ
Question 1 Explanation: 
ಹಸಿರು ಮನೆ ಅನಿಲ ತಗ್ಗಿಸುವುದು:

ಕಿಗಾಲಿ ಒಪ್ಪಂದ ಇಂಗಾಲದ ಡೈಆಕ್ಸೈಡ್ಗಿಂತಲೂ ಜಾಗತಿಕ ತಾಪಮಾನ ಹೆಚ್ಚಳದಲ್ಲಿ ಸಾವಿರ ಪಟ್ಟು ಅಧಿಕ ಪ್ರಭಾವ ಬೀರುವ ಹೈಡ್ರೋಫ್ಲೂರೋಕಾರ್ಬನ್ (ಎಚ್ಎಫ್ಸಿ) ನಿಯಂತ್ರಿಸಲು ವಿಶ್ವದ 197 ರಾಷ್ಟ್ರಗಳು ಸಹಿ ಹಾಕಿರುವ ಒಪ್ಪಂದವಾಗಿದೆ. ಈ ಐತಿಹಾಸಿಕ ಒಪ್ಪಂದಕ್ಕೆ ರುವಾಂಡಾದ ಕಿಗಾಲಿಯಲ್ಲಿ ಸಹಿ ಹಾಕಿದ ಕಾರಣ ಕಿಗಾಲಿ ಒಪ್ಪಂದ ಎನ್ನಲಾಗಿದೆ. ಈ ಒಪ್ಪಂದವು ಮಾಂಟ್ರಿಯಲ್ ಪ್ರೊಟೊಕಲ್ ಅನ್ನು ತಿದ್ದುಪಡಿ ತರುವುದಾಗಿದೆ. ಜಾಗತಿಕ ತಾಪಮಾನ ಹೆಚ್ಚಳಕ್ಕೆ ಕಾರಣವಾಗುವ ಪ್ರಭಾವಯುತ ಹಸಿರುಮನೆ ಅನಿಲ ಉತ್ಪಾದನೆ ನಿಯಂತ್ರಣ ಹಾಗೂ 2050ರ ವೇಳೆಗೆ 0.5 ಸೆಲ್ಸಿಯಸ್ ಉಷ್ಣಾಂಶ ಏರಿಕೆಯನ್ನು ನಿಯಂತ್ರಿಸುವ ಒಪ್ಪಂದಕ್ಕೆ 200 ರಾಷ್ಟ್ರಗಳು ಒಮ್ಮತ ಸೂಚಿಸಿವೆ. ಗೃಹ ಮತ್ತು ಕಾರುಗಳ ಹವಾನಿಯಂತ್ರಕಗಳಲ್ಲಿ ಶೈತ್ಯಕಾರಿಯಾಗಿ ಹೈಡ್ರೋಫ್ಲೂರೋಕಾರ್ಬನ್ (ಎಚ್ಎಫ್ಸಿ) ಅನಿಲ ಹೆಚ್ಚು ಬಳಕೆಯಾಗುತ್ತಿದೆ. ಜಾಗತಿಕ ತಾಪಮಾನ ಹೆಚ್ಚಳದಲ್ಲಿ ಇದರ ಪ್ರಭಾವ ಅಧಿಕವಾಗಿದ್ದು, 2045ರ ವೇಳೆಗೆ ಶೇ.85ರಷ್ಟು ಎಚ್ಎಫ್ಸಿ ಬಳಕೆ ತಗ್ಗಿಸುವ ನಿಟ್ಟಿನಲ್ಲಿ ಭಾರತ, ಚೀನಾ, ಅಮೆರಿಕ ಹಾಗೂ ಯುರೋಪ್ ಶುಕ್ರವಾರ ಸಮ್ಮತಿಸಿದ್ದವು.

Question 2

2.ಇತ್ತೀಚೆಗೆ ಸರಸ್ವತಿ ನದಿ ಅಸ್ತಿತ್ವದ ಬಗ್ಗೆ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದ ಸಮಿತಿ ಯಾವುದು?

A
ಆರ್ ಮಾಥೂರ್ ಸಮಿತಿ
B
ಸುದರ್ಶನ್ ನಾಯ್ಕ್ ಸಮಿತಿ
C
ಕೆ.ಎಸ್.ವಾಲ್ದೀಯ ಸಮಿತಿ
D
ಮಧುಕರ್ ಗುಪ್ತಾ ಸಮಿತಿ
Question 2 Explanation: 
ಕೆ.ಎಸ್.ವಾಲ್ದೀಯ ಸಮಿತಿ:

ಇದುವರೆಗೂ ಪುರಾಣಗಳಲ್ಲಿ ಉಲ್ಲೇಖಿತವಾಗಿದ್ದ ಸರಸ್ವತಿ ನದಿ ನಿಜವಾಗಲೂ ಅಸ್ತಿತ್ವದಲ್ಲಿತ್ತು ಎಂದು ಕೆ ಎಸ್ ವಾಲ್ದೀಯ ನೇತೃತ್ವದ ಸಮಿತಿ ತನ್ನ ವರದಿಯನ್ನು ಕೇಂದ್ರ ಜಲಸಂಪನ್ಮೂಲ ಸಚಿವಾಲಯಕ್ಕೆ ಸಲ್ಲಿಸಿದೆ. ಭೂಗೋಳಶಾಸ್ತ್ರಜ್ಞರು, ಪುರಾತತ್ತ್ವಜ್ಞರು ಮತ್ತು ಹೈಡ್ರಾಲಾಜಿಸ್ಟ್ ಗಳನ್ನು ಒಳಗೊಂಡಿದ ಸಮಿತಿಯು ಸರಸ್ವತಿ ನದಿ ಮೂಲವನ್ನು ಪತ್ತೆಹಚ್ಚಿರುವುದಾಗಿ ತಿಳಿಸಿದ್ದಾರೆ. ಸರಸ್ವತಿ ನದಿಯನ್ನು ಕಾಲ್ಪನಿಕ ನದಿಯೆಂದೇ ಪರಿಗಣಿಸಲಾಗಿತ್ತು, ಪ್ರಾಚೀನ ಹಿಂದೂ ಪುರಾಣಗಳಲ್ಲಿ, ಋಗ್ವೇದ, ಮಹಾಭಾರತ ಮತ್ತು ರಾಮಾಯಣದಲ್ಲಿ ಈ ನದಿಯ ಬಗ್ಗೆ ಪ್ರಸ್ತಾಪಿಸಲಾಗಿದೆ.

Question 3

3.ಈ ಕೆಳಗಿನ ಉಪಕರಣಗಳನ್ನು ಗಮಿನಿಸಿ:

I) ರೆಫ್ರಿಜರೇಟರ್

II) ಹವಾನಿಯಂತ್ರಕಗಳು

III) ಏರ್ ಸ್ಪ್ರೇ

ಈ ಮೇಲಿನ ಯಾವುಗಳಲ್ಲಿ ಹೈಡ್ರೋಪ್ಲೋರೋಕಾರ್ಬನ್ (HFC)ಯನ್ನು ಬಳಸಲಾಗುತ್ತದೆ?

A
I & II
B
II & III
C
I & III
D
I, II & III
Question 3 Explanation: 
I, II & III:

ಹೈಡ್ರೋಪ್ಲೋರೋಕಾರ್ಬನ್ (HFC) ಅತ್ಯಂತ ಪ್ರಬಲ ಹಸಿರು ಮನೆ ಅನಿಲವಾಗಿದೆ. ಇಂಗಾಲದ ಡೈಆಕ್ಸೈಡ್ಗಿಂತಲೂ 14,800 ಕ್ಕಿಂತ ಹೆಚ್ಚು ಪಟ್ಟು ಜಾಗತಿಕ ತಾಪಮಾನ ಪ್ರಭಾವ ಬೀರುವ ಹೈಡ್ರೋಫ್ಲೂರೋಕಾರ್ಬನ್ ಸಾಮರ್ಥ್ಯವನ್ನು ಹೊಂದಿದೆ. ಹೈಡ್ರೋಪ್ಲೋರೋಕಾರ್ಬನ್ ಅನ್ನು ರೆಫ್ರಿಜರೇಟರ್, ಗೃಹ ಮತ್ತು ವಾಹನ ಹವಾನಿಯಂತ್ರಕಗಳು ಮತ್ತು ಏರ್ ಸ್ಪ್ರೇನಲ್ಲಿ ಅಧಿಕವಾಗಿ ಬಳಸಲಾಗುತ್ತಿದೆ.

Question 4

4.ಮೊದಲ ಆವೃತಿಯ 17 ವರ್ಷದೊಳಗಿನವರ ಬ್ರಿಕ್ಸ್ ಪುಟ್ಬಾಲ್ ಟೂರ್ನಮೆಂಟ್ನಲ್ಲಿ ಪ್ರಶಸ್ತಿ ಗೆದ್ದ ತಂಡ ಯಾವುದು?

A
ಬ್ರೆಝಿಲ್
B
ದಕ್ಷಿಣ ಆಫ್ರಿಕ
C
ಚೀನಾ
D
ಭಾರತ
Question 4 Explanation: 
ಬ್ರೆಝಿಲ್:

ಮೊದಲ ಆವೃತ್ತಿಯ ಬ್ರಿಕ್ಸ್ ಅಂಡರ್-17 ಫುಟ್ಬಾಲ್ ಟೂರ್ನಮೆಂಟ್ನ ಫೈನಲ್ನಲ್ಲಿ ದಕ್ಷಿಣ ಆಫ್ರಿಕ ತಂಡವನ್ನು 5-1 ಅಂತರದ ಗೋಲುಗಳಿಂದ ಮಣಿಸಿದ ಬ್ರೆಝಿಲ್ ತಂಡ ಪ್ರಶಸ್ತಿ ಎತ್ತಿ ಹಿಡಿದಿದೆ. ಗೋವಾದ ನೆಹರೂ ಸ್ಟೇಡಿಯಂನಲ್ಲಿ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದುದ್ದಕ್ಕೂ ಬ್ರೆಝಿಲ್ ಸಂಪೂರ್ಣ ಪ್ರಾಬಲ್ಯ ಮೆರೆಯಿತು. ಬ್ರೆಝಿಲ್ನ ಪರ ಪೌಲೊ ಹೆನ್ರಿಕ್(24ನೆ ನಿಮಿಷ), ವಿನಿಕ್ಯೂಸ್ ಜೋಸ್ ಪೈಕ್ಸೊ(35ನೆ ನಿ.), ವಿಕ್ಟರ್ ಗ್ಯಾಬ್ರಿಯಲ್(40ನೆ, 61ನೆ ನಿ.) ಹಾಗೂ ಅಲನ್ ಡಿಸೋಜಾ(90+1 ನಿ.) ಗೋಲು ಬಾರಿಸಿದರು.ದಕ್ಷಿಣ ಆಫ್ರಿಕದ ಪರ ಸ್ಮೈಸೊ ಬೊಫೆಲಾ 89ನೆ ನಿಮಿಷದಲ್ಲಿ ಏಕೈಕ ಗೋಲು ಬಾರಿಸಿದರು.

Question 5

5.“ದಿ ಸಿಕ್ರೇಟ್ ಡೈರಿ ಆಫ್ ಕಸ್ತೂರಬಾ (The Secret Dairy of Kasturba)” ಪುಸ್ತಕದ ಲೇಖಕರು ____?

A
ನೀಲಿಮಾ ದಾಲ್ಮಿಯಾ ಆಧಾರ್
B
ಹೃಷಿಕಿರಣ್ ಸಿಂಗ್
C
ಭಗವತಿ ಚಂದ್ರನ್
D
ಹರಿಭಗತ್ ದಾಲ್ಮಿಯಾ
Question 5 Explanation: 
ನೀಲಿಮಾ ದಾಲ್ಮಿಯಾ ಆಧಾರ್:

“ದಿ ಸಿಕ್ರೇಟ್ ಡೈರಿ ಆಫ್ ಕಸ್ತೂರಬಾ” ಪುಸ್ತಕವನ್ನು ನೀಲಿಮಾ ದಾಲ್ಮಿಯಾ ಆಧಾರ್ ಅವರು ಬರೆದಿದ್ದಾರೆ. ಪತ್ನಿ ಕಸ್ತೂರಬಾ ಅವರ ನೆರವಿಲ್ಲದೆ ಮಹಾತ್ಮ ಗಾಂಧಿ “ಮಹಾತ್ಮ” ಎನಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ನೀಲಿಮಾ ಪುಸ್ತಕದಲ್ಲಿ ಹೇಳಿದ್ದಾರೆ. ಪುಸ್ತಕವನ್ನು ಅಕ್ಟೋಬರ್ 2 ರಂದು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ.

Question 6

6.“2016 ವಿಶ್ವ ಆಹಾರ ದಿನ (World Food Day)” ಧ್ಯೇಯ ವಾಕ್ಯ ಯಾವುದು?

A
Climate is changing. Food and agriculture must too
B
No More Food Waste
C
Save Food and Save Environment
D
Feeding the world, caring for the earth
Question 6 Explanation: 
Climate is changing. Food and agriculture must too:

ಪ್ರತೀ ವರ್ಷ ಅಕ್ಟೋಬರ್ 16 ರಂದು ವಿಶ್ವ ಆಹಾರ ದಿನವೆಂದು ಆಚರಿಸಲಾಗುತ್ತಿದೆ. 1945 ರಲ್ಲಿ ವಿಶ್ವಸಂಸ್ಥೆಯು ಈ ದಿನವನ್ನು ಕೃಷಿ ಸಂಸ್ಥೆ ಸ್ಥಾಪನೆಯ ದಿನಾಂಕದ ಗೌರವಾರ್ಥವಾಗಿ ಆಹಾರ ದಿನವನ್ನಾಗಿ ಆಚರಿಸಲು ನಿರ್ಧರಿಸಿತು. ಈ ದಿನವನ್ನು ಜಗತ್ತಿನ ಜನರು ಹಸಿವಿನ ವಿರುದ್ಧ ಕೆಲಸ ಮಾಡಲು ಮತ್ತು ಅದರ ನಿರ್ಮೂಲನೆಗಾಗಿ ಕೆಲಸ ಮಾಡಲು ಒಗ್ಗೂಡುವ ಸಲುವಾಗಿ ಆಚರಣೆಗೆ ತರಲಾಗಿದೆ. Climate is changing. Food and agriculture must too ಇದು ಈ ವರ್ಷದ ಧ್ಯೇಯವಾಕ್ಯ.

Question 7

7.“2016 ಇಟಿ ಪನಚೆ ಟ್ರೆಂಡ್ಸಸೆಟ್ಟರ್ ಪ್ರಶಸ್ತಿ (ET Panache Trendsetter Award)” ಪಡೆದ ಬಾಲಿವುಡ್ ನಟಿ ಯಾರು?

A
ಸೋನಂ ಕಪೂರ್
B
ಪ್ರಿಯಾಂಕ ಚೋಪ್ರಾ
C
ಐಶ್ವರ್ಯಾ ರೈ
D
ದೀಪಿಕ ಪಡುಕೋಣೆ
Question 7 Explanation: 
ಸೋನಂ ಕಪೂರ್:

ಬಾಲಿವುಡ್ ನಟಿ ಸೋನಂ ಕಪೂರ್ ಅವರಿಗೆ 2016 ಇಟಿ ಪನಚೆ ಟ್ರೆಂಡ್ಸಸೆಟ್ಟರ್ ಪ್ರಶಸ್ತಿಯನ್ನು ನೀಡಲಾಗಿದೆ. ಇವರ ಜೊತೆಗೆ ದೀಪ ಕರ್ಮಕರ್, ದೇವೆಂದ್ರ ಝಾಜಹರಿಯ, ಅನನ್ಯ ಬಿರ್ಲಾ, ವಿಜಯ್ ಶೇಖರ್ ಶರ್ಮಾ ಅವರಿಗೂ ಈ ಪ್ರಶಸ್ತಿಯನ್ನು ನೀಡಲಾಗಿದೆ. ತಮ್ಮ ಜೀವನ ಕಥೆಗಳ ಮೂಲಕ ಇತರರಿಗೆ ಸ್ಪೂರ್ತಿಯಾಗುವ ಉದ್ಯಮಿಗಳು, ಕ್ರೀಡಾಪಟುಗಳು ಮತ್ತು ಸಿನಿಮಾ ತಾರೆಯರಿಗೆ ಈ ಪ್ರಶಸ್ತಿಯನ್ನು ಕೊಡಲಾಗುತ್ತದೆ.

Question 8

8.2016 ಶಾಂಘೈ ಮಾಸ್ಟರ್ಸ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ನಲ್ಲಿ ಪ್ರಶಸ್ತಿ ಗೆದ್ದವರು ಯಾರು?

A
ಆಯಂಡಿ ಮರ್ರೆ
B
ರೋಜರ್ ಫೆಡರರ್
C
ರಾಬರ್ಟೊ ಬಾಟಿಸ್ಟ
D
ನೊವಾಕ್ ಜೊಕೊಕೋವಿಕ್
Question 8 Explanation: 
ಆಯಂಡಿ ಮರ್ರೆ:

ಇಂಗ್ಲೆಂಡ್ನ ಆಯಂಡಿ ಮರ್ರೆ ಅವರು ಶಾಂಘೈ ಮಾಸ್ಟರ್ಸ್ ಟೆನಿಸ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಪುರುಷರ ಸಿಂಗಲ್ಸ್ ಫೈನಲ್ನಲ್ಲಿ ಮರ್ರೆ 7-6(7-1), 6-1 ನೇರ ಸೆಟ್ಗಳಿಂದ ಸ್ಪೇನ್ನ ರಾಬರ್ಟೊ ಬಾಟಿಸ್ಟ ವಿರುದ್ಧ ಜಯ ಸಾಧಿಸಿದರು. ಇದು ಮರ್ರೆಗೆ 3ನೇ ಶಾಂಘೈ ಪ್ರಶಸ್ತಿಯಾಗಿದೆ. ಇದಕ್ಕೂ ಮುನ್ನ 2010 ಮತ್ತು 2011 ರಲ್ಲಿ ಸತತವಾಗಿ ಚಾಂಪಿಯನ್ ಆಗಿದ್ದರು.

Question 9

9.ಇತ್ತೀಚೆಗೆ ಯಾವ ದೇಶದ ಕ್ರಿಕೆಟ್ ತಂಡ 900 ಏಕದಿನ ಪಂದ್ಯವಾಡಿದ ಜಗತ್ತಿನ ಮೊದಲ ತಂಡ ಎನಿಸಿದೆ?

A
ಆಸ್ಟ್ರೇಲಿಯಾ
B
ಭಾರತ
C
ಇಂಗ್ಲೆಂಡ್
D
ದಕ್ಷಿಣ ಆಫ್ರಿಕ
Question 9 Explanation: 
ಭಾರತ:

ಭಾರತ ತಂಡ 900 ಏಕದಿನ ಪಂದ್ಯವಾಡಿದ ಕ್ರಿಕೆಟ್ ಜಗತ್ತಿನ ಮೊದಲ ದೇಶವೆಂಬ ದಾಖಲೆ ಬರೆಯಿತು. ಧರ್ಮಶಾಲಾದಲ್ಲಿ ನ್ಯೂಜಿಲ್ಯಾಂಡ್ ತಂಡದ ವಿರುದ್ದ ಭಾರತ ಈ ಐತಿಹಾಸಿಕ ಪಂದ್ಯವನ್ನು ಆಡಿತು. ಭಾರತ ತಂಡ 1974ರ ಜುಲೈ 13ರಂದು ಲೀಡ್ಸ್ನಲ್ಲಿ ಮೊಟ್ಟಮೊದಲ ಏಕದಿನ ಪಂದ್ಯವಾಡಿತ್ತು. ಅಜಿತ್ ವಾಡೇಕರ್ ನಾಯಕತ್ವದ ಭಾರತ ತಂಡ ಕ್ರಿಕೆಟ್ ಜನಕ ಇಂಗ್ಲೆಂಡ್ ವಿರುದ್ಧ 4 ವಿಕೆಟ್ಗಳಿಂದ ಸೋಲನುಭವಿಸಿತ್ತು. ಇದು ವಿಶ್ವ ಏಕದಿನ ಕ್ರಿಕೆಟ್ ಇತಿಹಾಸದ 12ನೇ ಪಂದ್ಯವಾಗಿತ್ತು.

Question 10

10.44ನೇ ಚಾಪ್ಲಿನ್ ವಾರ್ಷಿಕ ಪ್ರಶಸ್ತಿಗೆ (44th annual Chaplin Award) ಆಯ್ಕೆ ಆಗಿರುವ ನಟ ಯಾರು?

A
ರಾಬರ್ಟ್ ಡಿ ನಿರೊ
B
ಮೊರ್ಗನ್ ಫ್ರೀಮನ್
C
ರಾಬರ್ಟ್ ಡೌನಿ ಜೂನಿಯರ್
D
ವಿನ್ ಡಿಸೇಲ್
Question 10 Explanation: 
ರಾಬರ್ಟ್ ಡಿ ನಿರೊ:

ಪ್ರಖ್ಯಾತ ಹಾಲಿವುಡ್ ನಟ ಮತ್ತು ನಿರ್ಮಾಪಕ ರಾಬರ್ಟ್ ಡಿ ನಿರೊ ಅವರನ್ನು 44ನೇ ಚಾಪ್ಲಿನ್ ವಾರ್ಷಿಕ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ನಾಲ್ಕು ದಶಕಗಳ ಕಾಲ ಸಿನಿಮಾ ಕ್ಷೇತ್ರಕ್ಕೆ ನೀಡಿರುವ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. “ಮೀನ್ ಸ್ಟ್ರೀಟ್ಸ್”, “ರೇಜಿಂಗ್ ಬುಲ್ಸ್” ಮತ್ತು “ದಿ ಗಾಡ್ ಫಾದರ್ ಪಾರ್ಟ್ II” ರಾಬರ್ಟ್ ಡಿ ನಿರೊ ಅವರ ಪ್ರಮುಖ ಸಿನಿಮಾಗಳು.

There are 10 questions to complete.

[button link=”http://www.karunaduexams.com/wp-content/uploads/2016/10/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಕ್ವಿಜ್-ಅಕ್ಟೋಬರ್-16.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

One Thought to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಅಕ್ಟೋಬರ್-16, 2016”

Leave a Comment

This site uses Akismet to reduce spam. Learn how your comment data is processed.