ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಅಕ್ಟೋಬರ್-10, 2016

Question 1

1.ವೆನೆಜುವೆಲಾದ ಮಾಜಿ ಅಧ್ಯಕ್ಷ ದಿ. ಹ್ಯೂಗೊ ಚಾವೆಜ್ಝ್ ಸ್ಮರಣಾರ್ಥ ಸ್ಥಾಪಿಸಲಾದ ಪ್ರಪ್ರಥಮ ಶಾಂತಿ ಪ್ರಶಸ್ತಿಗೆ ಯಾರನ್ನು ಆಯ್ಕೆಮಾಡಲಾಗಿದೆ?

A
ನರೇಂದ್ರ ಮೋದಿ
B
ಬರಾಕ್ ಒಬಾಮ
C
ವ್ಲಾದಿಮಿರ್ ಪುಟಿನ್
D
ಶೇಖ್ ಹಸೀನಾ
Question 1 Explanation: 
ವ್ಲಾದಿಮಿರ್ ಪುಟಿನ್:

ವೆನೆಜುವೆಲಾ ಮಾಜಿ ಅಧ್ಯಕ್ಷ ದಿವಂಗತ ಹ್ಯೂಗೊ ಚಾವೆಜ್ಝ್ ಸ್ಮರಣಾರ್ಥ ಶಾಂತಿ ಪ್ರಶಸ್ತಿಯನ್ನು ಸ್ಥಾಪಿಸಿರುವುದಾಗಿ ವೆನೆಜುವೆಲಾ ಅಧ್ಯಕ್ಷ ನಿಕೊಲಸ್ ಮಡುರೊ ಘೋಷಿಸಿದ್ದಾರೆ. ಅಲ್ಲದೇ ಪ್ರಪ್ರಥಮ ಶಾಂತಿ ಪ್ರಶಸ್ತಿಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಅವರನ್ನು ಆಯ್ಕೆಮಾಡಲಾಗಿದೆ. ಪುತಿನ್ ಶಾಂತಿಗಾಗಿ ಹೋರಾಟ ನಡೆಸುತ್ತಿರುವ ಧೀಮಂತ ನಾಯಕರಾಗಿರುವ ಕಾರಣ ಪ್ರಶಸ್ತಿಗೆ ಆಯ್ಕೆ ಮಾಡಿರುವುದಾಗಿ ಮಡುರೊ ತಿಳಿಸಿದ್ದಾರೆ.

Question 2

2.ರಾಷ್ಟ್ರೀಯ ಭದ್ರತಾ ಸಲಹಾ ಮಂಡಳಿಯ (NSAB) ಮುಖ್ಯಸ್ಥರಾಗಿ ಯಾರು ನೇಮಕಗೊಂಡಿದ್ದಾರೆ?

A
ಸಿ ಎಸ್ ರಾಘವನ್
B
ಆರ್ ಚಂದ್ರಮೌಳಿ
C
ಎ ಬಿ ಮಾಥುರ್
D
ಅಮರ್ ನಾಯಕ್
Question 2 Explanation: 
ಸಿ ಎಸ್ ರಾಘವನ್:

ರಾಷ್ಟ್ರೀಯ ಭದ್ರತಾ ಸಲಹಾ ಮಂಡಳಿಯ (ಎನ್ಎಸ್ಎಬಿ) ಮುಖ್ಯಸ್ಥರಾಗಿ ಪಿ.ಎಸ್. ರಾಘವನ್ ಅವರನ್ನು ನೇಮಿಸಲಾಗಿದೆ. ರಾಘವನ್ ಹಿಂದೆ ರಷ್ಯಾದಲ್ಲಿ ಭಾರತದ ರಾಯಭಾರಿಯಾಗಿದ್ದರು. ಆಂತರಿಕ ಮತ್ತು ಬಾಹ್ಯ ಭದ್ರತೆ, ವಿದೇಶಾಂಗ ವ್ಯವಹಾರ, ರಕ್ಷಣೆ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಆರ್ಥಿಕ ವ್ಯವಹಾರಗಳ ಬಗ್ಗೆ ಈ ಮಂಡಳಿಯು ಸಲಹೆ ನೀಡುತ್ತದೆ. ಇದು ಉನ್ನತ ಮಟ್ಟದ ಸಮಿತಿಯಾಗಿದ್ದು ತಿಂಗಳಿಗೆ ಒಮ್ಮೆ ಸಭೆ ನಡೆಸುತ್ತದೆ. ಗುಪ್ತಚರ ಸಂಸ್ಥೆ 'ರಾ'ದ ಮಾಜಿ ಅಧಿಕಾರಿ ಎ.ಬಿ. ಮಾಥೂರ್, ಲೆ.ಜ.(ನಿವೃತ್ತ) ಎಸ್.ಎಲ್. ನರಸಿಂಹನ್ ಮತ್ತು ಗುಜರಾತ್ ನ್ಯಾಷನಲ್ ಲಾ ಯುನಿವರ್ಸಿಟಿಯ ಪ್ರೊ. ವಿಮಲ್ ಎನ್. ಪಟೇಲ್ ಅವರನ್ನು ಮಂಡಳಿಯ ಸದಸ್ಯರನ್ನಾಗಿ ನೇಮಿಸಲಾಗಿದೆ.

Question 3

3.ಈ ಕೆಳಗಿನ ಯಾವ ವಿಮಾನ ನಿಲ್ದಾಣ ಆಫ್ರಿಕಾದ ಮೊದಲ ಸೌರ ವಿದ್ಯುತ್ ಶಕ್ತಿ ಚಾಲಿತ ನಿಲ್ದಾಣವಾಗಿದೆ?

A
ಕೇಪ್ ಟೌನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
B
ಕೈರೊ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
C
ಜಾರ್ಜ್ ವಿಮಾನ ನಿಲ್ದಾಣ
D
ಟಂಬೊ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
Question 3 Explanation: 
ಜಾರ್ಜ್ ವಿಮಾನ ನಿಲ್ದಾಣ:

ದಕ್ಷಿಣ ಆಫ್ರಿಕಾದ ಪುಟ್ಟ ನಗರ ಜಾರ್ಜ್ ನಗರದಲ್ಲಿರುವ ಜಾರ್ಜಾ ವಿಮಾನ ನಿಲ್ದಾಣ ಆಫ್ರಿಕಾದ ಮೊದಲ ಹಸಿರು ವಿಮಾನ ನಿಲ್ದಾಣ ಎಂಬ ಕೀರ್ತಿಗೆ ಪಾತ್ರವಾಗಿದೆ. ಜಾರ್ಜ್ ವಿಮಾನ ನಿಲ್ದಾಣ ಸಂಪೂರ್ಣವಾಗಿ ಸೌರ ವಿದ್ಯುತ್ ನಿಂದ ಕಾರ್ಯನಿರ್ವಹಿಸುತ್ತಿದೆ. ಈ ವಿಮಾನ ನಿಲ್ದಾಣದಲ್ಲಿ 2,000 ಸೌರ ಫಲಕಗಳನ್ನು ಅಳವಡಿಸಲಾಗಿದ್ದು, ಪ್ರತಿ ನಿತ್ಯ 750 ಕಿ.ವ್ಯಾ ವಿದ್ಯುತ್ ಉತ್ಪಾದಿಸುತ್ತಿದ್ದು, ವಿಮಾನ ನಿಲ್ದಾಣಕ್ಕೆ ಅಗತ್ಯವಿರುವದಕ್ಕಿಂತಲೂ ಹೆಚ್ಚು ವಿದ್ಯುತ್ ಅನ್ನು ಉತ್ಪಾದಿಸುತ್ತಿದೆ. 2015 ರಲ್ಲಿ ಕೇರಳದ ಕೊಚ್ಚಿ ವಿಮಾನ ನಿಲ್ದಾಣ ವಿಶ್ವದ ಮೊದಲ ಸೌರ ವಿದ್ಯುತ್ ಚಾಲಿತ ವಿಮಾನ ನಿಲ್ದಾಣ ಎನಿಸಿತ್ತು.

Question 4

4.ಹರಿಕಾ ದ್ರೋಣವಳ್ಳಿ ರವರು ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ?

A
ಚೆಸ್
B
ಬ್ಯಾಡ್ಮಿಂಟನ್
C
ಟೆನ್ನಿಸ್
D
ಅಥ್ಲೆಟಿಕ್ಸ್
Question 4 Explanation: 
ಚೆಸ್:

ಹರಿಕಾ ದ್ರೋಣವಳ್ಳಿ ಭಾರತದ ಶ್ರೇಷ್ಠ ಚೆಸ್ ಆಟಗಾರ್ತಿ. ಹರಿಕಾ ದ್ರೋಣವಳ್ಳಿ ಅವರು ನೂತನ ವಿಶ್ವ ಚೆಸ್‌ ಕ್ರಮಾಂಕ ಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದ್ದಾರೆ.ಇಸ್ಲೆ ಆಫ್‌ ಮ್ಯಾನ್‌ ಚೆಸ್‌ ಟೂರ್ನಿಯಲ್ಲಿ ಅಮೋಘ ಆಟ ಆಡಿದ್ದ ಹರಿಕಾ ಲೈವ್‌ ರೇಟಿಂಗ್‌ ಅನ್ನು 2528ರಿಂದ 2543.4ಕ್ಕೆ ಹೆಚ್ಚಿಸಿ ಕೊಂಡು 10ರಿಂದ ಐದನೇ ಸ್ಥಾನಕ್ಕೆ ಬಡ್ತಿ ಹೊಂದಿದ್ದಾರೆ.

Question 5

5.ತೆಲಂಗಣ ರಾಜ್ಯ ಸರ್ಕಾರ ಇತ್ತೀಚೆಗೆ ಹೊಸದಾಗಿ 21 ಜಿಲ್ಲೆಗಳನ್ನು ರಚಿಸಿದೆ. ಹೊಸ ಜಿಲ್ಲೆಗಳ ರಚನೆಯಿಂದಾಗಿ ತೆಲಂಗಣದ ಜಿಲ್ಲೆಗಳ ಸಂಖ್ಯೆ ಎಷ್ಟು?

A
21
B
25
C
31
D
33
Question 5 Explanation: 
31:

ತೆಲಂಗಣ ರಾಜ್ಯದಲ್ಲಿ ಹೊಸದಾಗಿ 21 ಜಿಲ್ಲೆಗಳನ್ನು ರಚಿಸಲಾಗಿದ್ದು, ಆ ಮೂಲಕ ರಾಜ್ಯದ ಜಿಲ್ಲೆಗಳ ಸಂಖ್ಯೆ 31ಕ್ಕೆ ಏರಿಕೆಯಾಗಿದೆ. 2014ರ ಚುನಾವಣೆ ವೇಳೆ 14 ಹೊಸ ಜಿಲ್ಲೆಗಳನ್ನು ರಚಿಸುವುದಾಗಿ ತೆಲಂಗಣ ರಾಷ್ಟ್ರೀಯ ಸಮಿತಿ ಭರವಸೆ ನೀಡಿತ್ತು, ಆದರೆ ಸರ್ಕಾರದ ಮೇಲೆ ರಾಜ್ಯದ ವಿವಿದೆಡೆಯಿಂದ ಒತ್ತಡ ಹೆಚ್ಚಾದ ಕಾರಣ 21 ಜಿಲ್ಲೆಗಳನ್ನು ಹೊಸದಾಗಿ ರಚಿಸಲಾಗಿದೆ. 2014ರಲ್ಲಿ ಭಾರತ 29ನೇ ರಾಜ್ಯವಾಗಿ ತೆಲಂಗಣ ಉದಯವಾದ ವೇಳೆ 10 ಜಿಲ್ಲೆಗಳನ್ನು ಹೊಂದಿತ್ತು.

Question 6

6. ಬ್ರಿಟಿಷ್ ಸಂಸತ್ತಿಗೆ ಸದಸ್ಯರಾಗಿ ಆಯ್ಕೆಯಾದ ಮೊಟ್ಟ ಮೊದಲ ಭಾರತೀಯ ಯಾರು?

A
ಬಾಲಗಂಗಾಧರ ತಿಲಕ್
B
ದಾದಾಬಾಯಿ ನರೋಜಿ
C
ರಾಜಾರಾಂ ಮೋಹನ್ ರಾಯ್
D
ಗೋಪಾಲ ಕೃಷ್ಣ ಗೋಖಲೆ
Question 6 Explanation: 
ದಾದಾಬಾಯಿ ನರೋಜಿ
Question 7

7.ಇತ್ತೀಚಿನ ವರದಿಯೊಂದರ ಪ್ರಕಾರ ವೈಜ್ಞಾನಿಕ ಸಂಶೋಧನೆಯ ಬೆಳವಣಿಗೆಯಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ?

A
ಎರಡು
B
ಐದು
C
ಏಳು
D
ಒಂಬತ್ತು
Question 7 Explanation: 
ಎರಡು:

ಉನ್ನತ ಗುಣಮಟ್ಟದ ವೈಜ್ಞಾನಿಕ ಸಂಶೋಧನೆಯ ಬೆಳವಣಿಗೆಯಲ್ಲಿ ಜಗತ್ತಿನಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ರೈಸಿಂಗ್‌ ಸ್ಟಾರ್ಸ್‌ ಎಂಬ ವರದಿಯಲ್ಲಿ ಈ ವಿಷಯ ಪ್ರಕಟಗೊಂಡಿದೆ. ವೈಜ್ಞಾನಿಕ ಸಂಶೋಧನೆಯಲ್ಲಿ ಚೀನಾ ಪ್ರಥಮ ಸ್ಥಾನದಲ್ಲಿದೆ.

Question 8

8.ಈ ಕೆಳಗಿನ ಯಾವ ದೇಶದಲ್ಲಿ ನಾಲ್ಕನೇ ಏಷ್ಯನ್ ಚಾಂಪಿಯನ್ಸ್ ಹಾಕಿ ಟ್ರೋಫಿ (Asian Champions Trophy (ACT)) ನಡೆಯಲಿದೆ?

A
ಭಾರತ
B
ಪಾಕಿಸ್ತಾನ
C
ಮಲೇಷಿಯಾ
D
ಶ್ರೀಲಂಕಾ
Question 8 Explanation: 
ಮಲೇಷಿಯಾ:

ನಾಲ್ಕನೇ ಏಷ್ಯನ್ ಚಾಂಪಿಯನ್ಸ್ ಹಾಕಿ ಟ್ರೋಫಿ ಮಲೇಷಿಯಾದ ಕೌಂಟನದಲ್ಲಿ ಅಕ್ಟೋಬರ್ 20 ರಿಂದ 30 ರವರೆಗೆ ನಡೆಯಲಿದೆ. ಭಾರತದ ಗೋಲು ಕೀಪರ್ ಪಿ ಆರ್ ಶ್ರೇಜೆಶ್ 18 ಸದಸ್ಯರನ್ನು ಒಳಗೊಂಡ ಭಾರತ ಹಾಕಿ ಪುರಷರ ತಂಡವನ್ನು ಮುನ್ನೆಡಸಲಿದ್ದಾರೆ.

Question 9

9.ಚಿಲ್ಕಾ ಸರೋವರ ಪ್ರದೇಶವು ಈ ಎರಡು ನದಿಮುಖಜ ಭೂಮಿಗಳ ನಡುವೆ ಇದೆ _____?

A
ಗಂಗಾ ಮತ್ತು ಮಹಾನದಿ
B
ಗೋದಾವರಿ ಮತ್ತು ಕೃಷ್ಣ
C
ಮಹಾನದಿ ಮತ್ತು ಗೋದಾವರಿ
D
ಕೃಷ್ಣ ಮತ್ತು ಗೋದಾವರಿ
Question 9 Explanation: 
ಮಹಾನದಿ ಮತ್ತು ಗೋದಾವರಿ:

ಚಿಲ್ಕಾ ಸರೋವರ ಪ್ರದೇಶವು ಮಹಾನದಿ ಮತ್ತು ಗೋದಾವರಿ ನದಿಮುಖಜ ಭೂಮಿಗಳ ನಡುವೆ ಇದೆ.

Question 10

10. 2016ನೇ ಸಾಲಿನ ಭೌತಶಾಸ್ತ್ರ ನೊಬೆಲ್ ಪಡೆದ ಮೂವರು ವಿಜ್ಞಾನಿಗಳನ್ನು ಗುರುತಿಸಿ?

A
ಡೇವಿಡ್ ಜೆ ಥೌಲೆಸ್, ಎಫ್ ಡಂಕನ್ ಎಂ ಹಲ್ಡೇನ್, ಜೆ ಮೈಕಲ್ ಕೋಸ್ಟೆರ್ಲಿಟ್ಸ್
B
ಡೇವಿಡ್ ಜೆ ಥೌಲೆಸ್, ಎಫ್ ಡಂಕನ್ ಎಂ ಹಲ್ಡೇನ್, ಸಿ ಅರ್ಥರ್ ಜಾನ್ ಸನ್
C
ಡೇವಿಡ್ ಜೆ ಥೌಲೆಸ್, ಜಾರ್ಜ್ ಜೇಮ್ಸನ್, ಜೆ ಮೈಕಲ್ ಕೋಸ್ಟೆರ್ಲಿಟ್ಸ್
D
ಡೇವಿಡ್ ಜೆ ಥೌಲೆಸ್, ಸ್ಟೀಫನ್ ಶೂಮೇಕರ್, ಜೆ ಮೈಕಲ್ ಕೋಸ್ಟೆರ್ಲಿಟ್ಸ್
Question 10 Explanation: 
ಡೇವಿಡ್ ಜೆ ಥೌಲೆಸ್, ಎಫ್ ಡಂಕನ್ ಎಂ ಹಲ್ಡೇನ್, ಜೆ ಮೈಕಲ್ ಕೋಸ್ಟೆರ್ಲಿಟ್ಸ್ :

ಅತ್ಯಾಧುನಿಕ ಗಣಿತೀಯ ವಿಧಾನಗಳನ್ನು ಬಳಸಿ ಭಿನ್ನ ಹಂತಗಳಲ್ಲಿ ಭೌತವಸ್ತುಗಳ ಅಧ್ಯಯನದ ಸಾಧ್ಯತೆಯನ್ನು ಹೊರ ತಂದಿರುವ ಅಮೆರಿಕಾದ ಮೂವರು ವಿಜ್ಞಾನಿಗಳಾದ ಡೇವಿಡ್ ಜೆ ಥೌಲೆಸ್, ಎಫ್ ಡಂಕನ್ ಎಂ ಹಲ್ಡೇನ್, ಜೆ ಮೈಕಲ್ ಕೋಸ್ಟೆರ್ಲಿಟ್ಸ್ 2016ನೇ ಸಾಲಿನ ಭೌತಶಾಸ್ತ್ರ ನೊಬೆಲ್ ಘೋಷಿಸಲಾಗಿದೆ. ಭಿನ್ನ ಹಂತಗಳಲ್ಲಿ ಆಕೃತಿಯ ಜ್ಯಾಮಿತೀಯ ಲಕ್ಷಣಗಳನ್ನು ಅಧ್ಯಯನ ಮಾಡುವುದಕ್ಕೆ ಸಂಬಂಧಿಸಿದಂತೆ (ಟೊಪಾಲಜಿಕಲ್ ಫೇಸ್‌) ಭೌತವಸ್ತು ಹಾಗೂ ಪರಿವರ್ತನೆ ಗಳ ಸೈದ್ಧಾಂತಿಕ ಸಂಶೋಧನೆಗಾಗಿ ಭೌತಶಾಸ್ತ್ರ ನೊಬೆಲ್‌ ಘೋಷಿಸಲಾಗಿದೆ.

There are 10 questions to complete.

[button link=”http://www.karunaduexams.com/wp-content/uploads/2016/10/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಕ್ಚಿಜ್-ಅಕ್ಟೋಬರ್-10.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

4 Thoughts to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಅಕ್ಟೋಬರ್-10, 2016”

  1. C S Guru

    Please correct answer for the last quest…

    1. karunadu

      Corrected, Typing error, download document is correct

  2. CHANNABASAVANNA M

    Question NO 6 Answer Is Wrong
    Right Answer Is DADABHAI NAVAROJI

    1. karunadu

      Corrected , Thank you

Leave a Comment

This site uses Akismet to reduce spam. Learn how your comment data is processed.