ಪೋಷಕರು, ಶಿಕ್ಷಕರು ಒಮ್ಮೆ ಓದಲೇಬೇಕಾದ ಮಾಹಿತಿಯಿದು. ನಿಮ್ಮ ಮಗು 8ನೇ ತರಗತಿಯಲ್ಲಿದ್ದು, ಸರ್ಕಾರಿ ಅಥವಾ ಅನುದಾನಿತ ಶಾಲೆಯಲ್ಲಿದ್ದರೆ, ನೀವು ಇದನ್ನು ಅವಶ್ಯವಾಗಿ ಓದಲೇಬೇಕು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರದ ವತಿಯಿಂದ ಸ್ಕಾಲರ್’ಶಿಪ್ ಪಡೆಯುವಂತಹ ಯೋಜನೆಯಿದು.
ಈ ಪರೀಕ್ಷೆ ಹೇಗಿರುತ್ತದೆ, ಅದಕ್ಕೆ ಯಾರು ಯಾರು ಕುಳಿತುಕೊಳ್ಳಬಹುದು ಎಂಬುದನ್ನು ಮೊದಲು ತಿಳಿದುಕೊಳ್ಳಿ.

NMMS ಪರೀಕ್ಷೆ ಎಂದರೇನು?

ನ್ಯಾಷನಲ್ ಮೀನ್ಸ್ ಕಮ್ – ಮೆರಿಟ್ ಸ್ಕಾಲರ್’ಷಿಪ್ ಎಕ್ಸಾಮಿನೇಷನ್
(National Means cum- Merit Scholarship Examination).
● 2007 – 08ನೇ ಸಾಲಿನಿಂದ ಕೇಂದ್ರ ಸರ್ಕಾರ ಈ ಯೋಜನೆ ಜಾರಿಗೊಳಿಸಿದೆ.
● ಕೇಂದ್ರ – ರಾಜ್ಯ ಸರ್ಕಾರಗಳ ಮುಖ್ಯ ಗುರಿ ಸಾರ್ವತ್ರಿಕವಾಗಿ ಗುಣಾತ್ಮಕ ಶಿಕ್ಷಣ ನೀಡುವುದು.

ಉದ್ದೇಶಗಳು
1. ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ಪೂರಕ ಕೌಶಲ್ಯಗಳನ್ನು ಮಕ್ಕಳಲ್ಲಿ ಬೆಳೆಸುವುದು.
2. ಸ್ಪರ್ಧಾತ್ಮಕ ಮನೋಭಾವ ಬೆಳೆಸುವುದು.
3. ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ಗುರುತಿಸುವುದು.
4. ಶೈಕ್ಷಣಿಕ ಪ್ರತಿಭೆ ಗುರುತಿಸಿ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವುದು.
5. ಪ್ರತಿಭಾವಂತ ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿಯದಂತೆ ತಡೆದು ಅವರ ವಿದ್ಯಾಭ್ಯಾಸ ಮುಂದುವರಿಕೆಗೆ ಪ್ರೇರೇಪಿಸುವುದು.
6. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸುವುದು.

ಅರ್ಹತೆ
● ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 8ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳು ಮಾತ್ರ NMMS ಪರೀಕ್ಷೆಗೆ ಅರ್ಹರು.
1. ಪೋಷಕರ ವಾರ್ಷಿಕ ವರಮಾನ ರೂ. 1,50,000 ಮೀರಿರಬಾರದು.
2. 7ನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಸಾಮಾನ್ಯ ಹಾಗೂ ಇತರೆ ವರ್ಗಗಳ ವಿದ್ಯಾರ್ಥಿಗಳು ಶೇ. 55 ಅಂಕಗಳನ್ನು (ಅಥವಾ ಗ್ರೇಡ್) ಪಡೆದಿರಬೇಕು. SC/ST/ವಿಕಲಚೇತನ ವಿದ್ಯಾರ್ಥಿಗಳಿಗೆ ಶೇ. 5% ರಿಯಾಯಿತಿ ಇದೆ.
3. ಕೇಂದ್ರ/ರಾಜ್ಯ ಸರ್ಕಾರಗಳು ನಡೆಸುವ ವಸತಿಯುತ ಶಾಲೆ ಮಕ್ಕಳಿಗೆ ಈ ಪರೀಕ್ಷೆ ಅನ್ವಯಿಸುವುದಿಲ್ಲ. ಉದಾ:- ಮೊರಾರ್ಜಿ ಶಾಲೆ, ನವೋದಯ ಶಾಲೆ, ಕೇಂದ್ರೀಯ ವಿದ್ಯಾಲಯ, ಸೈನಿಕ ಶಾಲೆ ಇತ್ಯಾದಿ.

● ಪರೀಕ್ಷೆ ಯಾವಾಗ ನಡೆಯುತ್ತದೆ?
DSERT ಸಾಮಾನ್ಯವಾಗಿ ಪ್ರತಿವರ್ಷ ನವೆಂಬರ್ ತಿಂಗಳಲ್ಲಿ ರಾಜ್ಯಮಟ್ಟದ ಪರೀಕ್ಷೆ ನಡೆಸುತ್ತದೆ. ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಅರ್ಜಿಗಳನ್ನು ಮುದ್ರಿಸಿ ಎಲ್ಲಾ BEO ಕಛೇರಿಗೆ ಕಳಿಸುತ್ತದೆ. ವಿದ್ಯಾರ್ಥಿಗಳು ಮತ್ತು ಪೋಷಕರು ಅರ್ಜಿಗಳನ್ನು ಪಡೆದು ಪೂರ್ಣ ಮಾಹಿತಿ ತುಂಬಿ ಸಂಬಂಧಿಸಿದ BEO ಕಛೇರಿಗೆ ಸಲ್ಲಿಸಬೇಕು.

NMMS ಪರೀಕ್ಷೆಯ – ಪ್ರಶ್ನೆಪತ್ರಿಕೆಯ ಸ್ವರೂಪ:
● NMMS ಪರೀಕ್ಷೆಯು 2 ಪತ್ರಿಕೆಗಳನ್ನು (Paper) ಒಳಗೊಂಡಿರುತ್ತದೆ.
1. GMAT ಪರೀಕ್ಷೆ – General Mental Ability Test [ಸಾಮಾನ್ಯ ಬೌದ್ಧಿಕ ಸಾಮರ್ಥ್ಯ ಪರೀಕ್ಷೆ]
ಈ ಪೇಪರ್’ನಲ್ಲಿ 90 ಬಹುಅಂಶ ಆಯ್ಕೆ ಪ್ರಶ್ನೆಗಳಿರುತ್ತವೆ. ಪ್ರತಿ ಪ್ರಶ್ನೆಗೂ ಒಂದು ಅಂಕದಂತೆ 90 ಅಂಕಗಳು. ಈ ಪ್ರಶ್ನೆಗಳ ಮೂಲಕ ವಿಶ್ಲೇಷಿಸುವ ಮತ್ತು ಸಂಶ್ಲೇಷಿಸುವ ಸಾಮರ್ಥ್ಯಗಳನ್ನು ಅಳೆಯಲಾಗುವುದು.
2. SAT ಪರೀಕ್ಷೆ: Scholastic Ability Test [ವ್ಯಾಸಂಗ ಪ್ರವೃತ್ತಿ ಸಾಮರ್ಥ್ಯ ಪರೀಕ್ಷೆ]. ಈ ಪತ್ರಿಕೆಯಲ್ಲಿ ಒಟ್ಟು 90 ಪ್ರಶ್ನೆಗಳಿರುತ್ತವೆ. ಇವುಗಳಲ್ಲಿ 35 ಪ್ರಶ್ನೆಗಳು – ವಿಜ್ಞಾನ (ಭೌತಶಾಸ್ತ್ರ – ರಸಾಯನಶಾಸ್ತ್ರ – ಜೀವಶಾಸ್ತ್ರ) 35 ಪ್ರಶ್ನೆಗಳು – ಸಮಾಜವಿಜ್ಞಾನ (ಇತಿಹಾಸ – ಭೂಗೋಳ – ಪೌರನೀತಿ) 20 ಪ್ರಶ್ನೆಗಳು – ಗಣಿತ ವಿಷಯಗಳನ್ನು ಆಧರಿಸಿ SAT ಪರೀಕ್ಷೆ ಇರುತ್ತದೆ. ಇದು 8ನೇ ತರಗತಿಯ ಪಠ್ಯಕ್ರಮ ಆಧರಿಸುತ್ತದೆ.

● ರಾಜ್ಯಮಟ್ಟದ ಪರೀಕ್ಷೆಯಲ್ಲಿ ಅರ್ಹರಾಗಲು ಸಾಮಾನ್ಯ ವರ್ಗದ ವಿದ್ಯಾರ್ಥಿಗಳು 2 ಪತ್ರಿಕೆಗಳು ಸೇರಿ ಒಟ್ಟು ಕನಿಷ್ಠ ಶೇ. 40% ರಷ್ಟು ಅಂಕಗಳನ್ನು ಅಂದರೆ 90ಕ್ಖೆ 36 ಹಾಗೂ SC/ST ವಿದ್ಯಾರ್ಥಿಗಳು ಕನಿಷ್ಠ ಶೇ. 32%ರಷ್ಟು ಅಂದರೆ ಒಟ್ಟು 90ಕ್ಕೆ 29 ಅಂಕಗಳನ್ನು ಪಡೆಯುವುದು. ಈ ಅರ್ಹತಾ ಅಂಕಗಳನ್ನು NCERT ವರ್ಷದಿಂದ ವರ್ಷಕ್ಕೆ ಬದಲಾಯಿಸುವುದು.
● ಕರ್ನಾಟಕ ರಾಜ್ಯಕ್ಕೆ ನಿಗದಿಯಾಗಿರುವ 5534 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಬೇಕಾಗಿರುವುದರಿಂದ ವಿದ್ಯಾರ್ಥಿಗಳು ಗಳಿಸಿದ ಒಟ್ಟು ಅಂಕಗಳ ಆಧಾರದ ಮೇಲೆ Rank ಪಟ್ಟಿ ತಯಾರಿಸಿ, ಪ್ರತಿ ಜಿಲ್ಲೆಯ Rank ಆಧಾರದ ಮೇಲೆ ವರ್ಗವಾರು ವಿದ್ಯಾರ್ಥಿಗಳಿಗೆ ನಿಗದಿ ಮಾಡಿರುವ ಸಂಖ್ಯೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ವಿದ್ಯಾರ್ಥಿಗೆ ದೊರೆಯುವ ಪ್ರಯೋಜನಗಳು:

NMMS ಪರೀಕ್ಷೆಯು ವಿದ್ಯಾರ್ಥಿ ಜೀವನದಲ್ಲಿ ಒಂದು ಬಾರಿ ಮಾತ್ರ ದೊರೆಯುವ ಸುವರ್ಣಾವಕಾಶ.
ಈ ಪರೀಕ್ಷೆಯಲ್ಲಿ ಭಾಗವಹಿಸುವುದರಿಂದ ಮುಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉತ್ತಮ ಅಡಿಪಾಯ ದೊರೆತಂತಾಗುತ್ತದೆ. ಈ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದರೆ ವಿದ್ಯಾರ್ಥಿವೇತನ ಲಭಿಸುವುದಲ್ಲದೆ ಅತ್ಯುತ್ತಮ ಸಾಧನೆ ಮಾಡಿದ ಕೀರ್ತಿ ಸಿಗುತ್ತದೆ.

● ಆಯ್ಕೆಯಾದ ವಿದ್ಯಾರ್ಥಿಗಳಿಗೆ ಜಿಲ್ಲಾ ಕೋಟಾ, ಪ್ರವರ್ಗವಾರು ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳಿಗೆ ರೊ. 500, 9ನೇ ತರಗತಿಯಿಂದ ದ್ವಿತೀಯ PUC ತನಕ ಅಂದರೆ 4 ವರ್ಷ ಪ್ರೋತ್ಸಾಹ ಧನ ದೊರೆಯುತ್ತದೆ. ಅಂದರೆ ಪ್ರತಿವರ್ಷ 6000 ರೂ. ಒಟ್ಟು 24,000 ರೂ. ಗಳು ವಿದ್ಯಾರ್ಥಿಗಳಿಗೆ ಸಿಗುತ್ತದೆ.

ಈ ಮೇಲ್ಕಂಡ ಪರೀಕ್ಷೆಗೆ ಈ ಮುಂಚೆ ಆಂಗ್ಲ ಮಾಧ್ಯಮದಲ್ಲಿ ಮಾತ್ರ ಪುಸ್ತಕಗಳಿದ್ದವು. ಕನ್ನಡ ಮಾಧ್ಯಮದಲ್ಲಿ ಆ ಪುಸ್ತಕವನ್ನು ಕೊಡುವ ಪ್ರಥಮ ಪ್ರಯತ್ನವನ್ನು ‘ಅರವಿಂದ್ ಇಂಡಿಯಾ’ದವರು ಮಾಡಿದ್ದಾರೆ.
ಸ್ವಅಧ್ಯಯನಕ್ಕೆ ಸಹಕಾರಿಯಾಗುವಂತೆ ಶಿಕ್ಷಕರಾದ ಈರಪ್ಪ ಶಿ. ಮಹಾಲಿಂಗಾಪುರ (ವೀರೇಶ್) ಅವರು ಅಂಕಗಣಿತಕ್ಕೆ ಸಂಬಂಧಿಸಿದ ಸಮಸ್ಯೆ ಹಾಗೂ ಉತ್ತರಗಳನ್ನೊಳಗೊಂಡ ಪುಸ್ತಕ ರಚಿಸಿರುವುದು ವಿದ್ಯಾರ್ಥಿ ವಲಯಕ್ಕೆ ಮಹತ್ತರ ಕೊಡುಗೆ. 2009ರಿಂದ 2015ರವರೆಗಿನ ಪ್ರಶ್ನೆಪತ್ರಿಕೆಗಳು ಹಾಗೂ ಅದರ ಉತ್ತರಗಳನ್ನು ಈ ಪುಸ್ತಕದಲ್ಲಿ ಕೊಡಲಾಗಿದೆ.

ಪುಸ್ತಕದ ಬೆಲೆ : 235ರೂ.
ಪುಟಗಳು : 264.
ಪುಸ್ತಕದ ಆಕಾರ : 1/4 ಕ್ರೌನ್.
ಪ್ರಕಾಶಕರು : ಅರವಿಂದ್ ಇಂಡಿಯಾ,
645/A, 6ನೇ ಮುಖ್ಯ ರಸ್ತೆ,
5ನೇ ಅಡ್ಡ ರಸ್ತೆ, ವಿಜಯನಗರ,
ಬೆಂಗಳೂರು – 560 040
ದೂರವಾಣಿ : 98863 46356.
ಇ-ಮೇಲ್ : aravindindia29@gmail.com

Leave a Comment

This site uses Akismet to reduce spam. Learn how your comment data is processed.