ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಸೆಪ್ಟೆಂಬರ್ 25, 2016

Question 1

1.ಇಸ್ರೋ ಇತ್ತೀಚೆಗೆ ಯಶಸ್ವಿಯಾಗಿ ಉಡಾಯಿಸಿದ “ಪ್ರಥಮ್” ಉಪಗ್ರಹವನ್ನು ಈ ಕೆಳಗಿನ ಯಾವ ಶೈಕ್ಷಣಿಕ ಸಂಸ್ಥೆ ಅಭಿವೃದ್ದಿಪಡಿಸಿದೆ?

A
ಐಐಟಿ ಖರಗಪುರ
B
ಐಐಎಸ್ಸಿ, ಬೆಂಗಳೂರು
C
ಐಐಟಿ, ಬಾಂಬೆ
D
ಎಸ್ಆರ್ ಎಂ, ಚೆನ್ನೈ
Question 1 Explanation: 
ಐಐಟಿ, ಬಾಂಬೆ:

ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ ಎಂಟು ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವ ಮೂಲಕ ಮತ್ತೊಮ್ಮೆ ದಾಖಲೆ ನಿರ್ಮಿಸಿದೆ. ಉಪಗ್ರಹ ಉಡಾವಣಾ ವಾಹಕ PSLV-ಸಿ35 ಬಳಸಿ ಈ ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆ ಹಾರಿಸಿತು. ಎಂಟು ಉಪಗ್ರಹಗಳ ಪೈಕಿ ಐದು ವಿದೇಶಿ ಉಪಗ್ರಹಗಳು ಸೇರಿವೆ. ಇಂಡಿಯನ್ ಇನ್ಸ್ಟಿಟ್ಯೂಟ್ ಟೆಕ್ನಾಲಜಿ, ಬಾಂಬೆ ಅಭಿವೃದ್ದಿಪಡಿಸಿರುವ ಪ್ರಥಮ್ ಉಪಗ್ರಹ ಹಾಗೂ ಬೆಂಗಳೂರಿನ ಪಿಇಎಸ್ ವಿಶ್ವವಿದ್ಯಾಲಯದ PISAT ಉಪಗ್ರಹ ಸಹ ಸೇರಿವೆ. ಪ್ರಥಮ ಉಪಗ್ರಹ 10 ಕೆಜಿ ತೂಕವಿದ್ದು, ಬಾಹ್ಯಕಾಶದಲ್ಲಿ ಒಟ್ಟು ಎಲೆಕ್ಟ್ರಾನ್ ಗಣನೆಯನ್ನ ಅಧ್ಯಯನ ಮಾಡಲಿದೆ.

Question 2

2. ಸರಕು ಮತ್ತು ಸೇವಾ ತೆರಿಗೆ (GST)ಯಡಿ ವರ್ತಕರ ವಹಿವಾಟಿನ ಗರಿಷ್ಠ ವಿನಾಯ್ತಿ ಮಿತಿಯನ್ನು ಎಷ್ಟು ಲಕ್ಷಕ್ಕೆ ನಿಗದಿಪಡಿಸಲಾಗಿದೆ?

A
15 ಲಕ್ಷ
B
20 ಲಕ್ಷ
C
25 ಲಕ್ಷ
D
30 ಲಕ್ಷ
Question 2 Explanation: 
20 ಲಕ್ಷ:

ಸರಕು ಮತ್ತು ಸೇವಾ ತೆರಿಗೆ (GST)ಯಡಿ ವರ್ತಕರ ವಹಿವಾಟಿನ ಗರಿಷ್ಠ ವಿನಾಯ್ತಿ ಮಿತಿಯನ್ನು ರೂ 20 ಲಕ್ಷಕ್ಕೆ ನಿಗದಿಪಡಿಸಲಾಗಿದೆ. ಈಶಾನ್ಯ ರಾಜ್ಯಗಳಿಗೆ ಈ ಮಿತಿಯನ್ನು ರೂ 10 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

Question 3

3. ಭಾರತೀಯ ಬಾಕ್ಸಿಂಗ್ ಫೆಡರೇಷನ್ (BFI) ಅಧ್ಯಕ್ಷರಾಗಿ ಯಾರು ನೇಮಕಗೊಂಡಿದ್ದಾರೆ?

A
ರೋಹಿತ್ ಜೈನ್
B
ಅಜಯ್ ಸಿಂಗ್
C
ರವಿ ಕುಲಕರ್ಣಿ
D
ಜಾಧವ್ ಸಿಂಗ್
Question 3 Explanation: 
ಅಜಯ್ ಸಿಂಗ್:

ಭಾರತೀಯ ಬಾಕ್ಸಿಂಗ್ ಫೆಡರೇಶನ್(ಬಿಎಫ್ಐ) ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಉದ್ಯಮಿ ಅಜಯ್ ಸಿಂಗ್ ಭಾರೀ ಅಂತರದ ಮತಗಳಿಂದ ಚುನಾಯಿತರಾದರು. ಅಜಯ್ 49 ಮತಗಳನ್ನು ಪಡೆದರೆ, ಪ್ರತಿ ಸ್ಪರ್ಧಿ ದಿಲ್ಲಿಯ ರೋಹಿತ್ ಜೈನ್ ಕೇವಲ 15 ಮತ ಪಡೆದರು. ಅಂತಾರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಶನ್ನ ವೀಕ್ಷಕರು ಹಾಗೂ ಕ್ರೀಡಾ ಸಚಿವಾಲಯದ ಮೇಲುಸ್ತುವಾರಿಯಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಿತು. 51ರ ಹರೆಯದ ಸಿಂಗ್ ಉತ್ತರ ಖಂಡವನ್ನು ಪ್ರತಿನಿಧಿಸುತ್ತಿದ್ದು, ಈ ಹಿಂದೆ ಸ್ಪೈಸ್ ಜೆಟ್ ಏರ್ವೇಸ್ನ ಚೇರ್ಮನ್ ಹಾಗು ಆಡಳಿತ ನಿರ್ದೇಶಕರಾಗಿದ್ದರು.

Question 4

4. 2016 ಪಾನ್ ಫೆಸಿಪಿಕ್ ಓಪನ್ ಮಹಿಳೆಯರ ಸಿಂಗಲ್ಸ್ ನಲ್ಲಿ ಪ್ರಶಸ್ತಿಯನ್ನು ಗೆದ್ದವರು ಯಾರು?

A
ನಯೊಮಿ ಒಸಾಕ
B
ಕ್ಯಾರೊಲಿನ್ ವೋಝ್ನಿಯಾಕಿ
C
ವಿಕ್ಟೋರಿಯಾ ಅಝೆರೆಕಾ
D
ಮಾರ್ಟಿನಾ ಹಿಂಗೀಸ್
Question 4 Explanation: 
ಕ್ಯಾರೊಲಿನ್ ವೋಝ್ನಿಯಾಕಿ:

ವಿಶ್ವದ ಮಾಜಿ ನಂ.1 ಆಟಗಾರ ಕ್ಯಾರೊಲಿನ್ ವೋಝ್ನಿಯಾಕಿ ಪಾನ್ ಪೆಸಿಫಿಕ್ ಓಪನ್ನಲ್ಲಿ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಮಹಿಳೆಯರ ಸಿಂಗಲ್ಸ್ ಫೈನಲ್ನಲ್ಲಿ ಡೆನ್ಮಾರ್ಕ್ನ ವೋಝ್ನಿಯಾಕಿ ಜಪಾನ್ನ ನಯೊಮಿ ಒಸಾಕಾರನ್ನು 7-5, 6-3 ನೇರ ಸೆಟ್ಗಳ ಅಂತರದಿಂದ ಮಣಿಸಿದರು. ಈ ಮೂಲಕ ಈ ವರ್ಷ ಚೊಚ್ಚಲ ಪ್ರಶಸ್ತಿಯನ್ನು ಜಯಿಸಿದರು. ಎರಡನೆ ಬಾರಿ ಪಾನ್ ಫೆಸಿಫಿಕ್ ಓಪನ್ನಲ್ಲಿ ಚಾಂಪಿಯನ್ ಆದರು.

Question 5

5. ಈ ಕೆಳಗಿನ ಯಾವ ನಗರ 10 ಲಕ್ಷ ಜನಸಂಖ್ಯೆ ದಾಟಿದ ನಗರಗಳ ಪೈಕಿ “ಬಯಲು ಶೌಚ ಮುಕ್ತ ನಗರ” ಎಂಬ ಗೌರವಕ್ಕೆ ಪಾತ್ರವಾಗಿದೆ?

A
ಮೈಸೂರು
B
ನವದೆಹಲಿ
C
ಪುಣೆ
D
ವಿಜಯವಾಡ
Question 5 Explanation: 
ಮೈಸೂರು:

10 ಲಕ್ಷ ಜನಸಂಖ್ಯೆ ದಾಟಿದ ದೇಶದ ನಗರಗಳ ಪೈಕಿ ಮೈಸೂರು ದೇಶದ ಮೊದಲ ಬಯಲು ಶೌಚ ಮುಕ್ತ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸ್ವಚ್ಛತೆ ಮತ್ತು ನೈರ್ಮಲ್ಯ ಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಕೇಂದ್ರ ನಗರಾಭಿವೃದ್ಧಿ ಇಲಾಖೆಯ ಅಧೀನದಲ್ಲಿ ಭಾರತೀಯ ಗುಣಮಟ್ಟ ಮಂಡಳಿಯು (ಕ್ಯೂಸಿಐ) 75 ನಗರಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಮೈಸೂರಿಗೆ ಈ ಗೌರವ ದೊರೆತಿದೆ.

Question 6

6. ಇತ್ತೀಚೆಗೆ ನಿಧನರಾದ “ಕಿಂಗ್ ಆಫ್ ಗಾಲ್ಫ್” ಎಂದೇ ಖ್ಯಾತರಾಗಿದ್ದ “ಅರ್ನಾಲ್ಡ್ ಪಾಲ್ಮರ್” ಯಾವ ದೇಶದವರು?

A
ಅಮೆರಿಕ
B
ರಷ್ಯಾ
C
ಸ್ವೀಡನ್
D
ಭಾರತ
Question 6 Explanation: 
ಅಮೆರಿಕ:

ಅಮೆರಿಕಾದ ವೃತ್ತಿಪರ ಗಾಲ್ಫರ್ ಅರ್ನಾಲ್ಡ್ ಪಾಲ್ಮರ್ ನಿಧನರಾದರು. ಪಾಲ್ಮರ್ ಅವರು “ಕಿಂಗ್ ಆಫ್ ಗಾಲ್ಫ್” ಎಂದೇ ಪ್ರಸಿದ್ದರಾಗಿದ್ದರು. ಅರ್ನಾಲ್ಡ್ ಪಾಲ್ಮರ್ ಅವರು ತಮ್ಮ ಸುದೀರ್ಘ ವೃತ್ತಿಪರ ಗಾಲ್ಫ್ ನಲ್ಲಿ ವಿಶ್ವಾದ್ಯಂತ ಸುಮಾರು 90ಕ್ಕೂ ಅಧಿಕ ಟೂರ್ನಮೆಂಟ್ ಗಳನ್ನು ಜಯಿಸಿದ್ದರು.

Question 7

7. “ಫಾರ್ಮೋಸ (Formosa)” ಎಂಬುದು ಯಾವ ದೇಶದ ಮೊದಲ ಹೆಸರು?

A
ತೈವಾನ್
B
ಈಜಿಪ್ಟ್
C
ನ್ಯೂಜಿಲ್ಯಾಂಡ್
D
ಕ್ಯೂಬಾ
Question 7 Explanation: 
ತೈವಾನ್
Question 8

8.5ನೇ ಏಷ್ಯಾ ಬೀಚ್ ಗೇಮ್ಸ್ (Asia Beach Games) ನಲ್ಲಿ ಭಾರತದ “ಪಿಂಕಿ ಬಲ್ಹರ” ರವರು ಯಾವ ಕ್ರೀಡೆಯಲ್ಲಿ ಬೆಳ್ಳಿ ಪದಕ ಗೆದ್ದರು?

A
ಕಬಡ್ಡಿ
B
ಈಜು
C
ಕುರಷ್
D
ಹ್ಯಾಂಡ್ ಬಾಲ್
Question 8 Explanation: 
ಕುರಷ್:

ಭಾರತದ ಪಿಂಕಿ ಬಲ್ಹರ ರವರು 5ನೇ ಏಷ್ಯಾ ಬೀಚ್ ಗೇಮ್ಸ್ ನ ಕುರಷ್ ಕ್ರೀಡೆಯಲ್ಲಿ ಎರಡನೇ ಸ್ಥಾನ ಪಡೆಯುವ ಮೂಲಕ ಭಾರತಕ್ಕೆ ಮೊದಲ ಪದಕ ತಂದಿದ್ದಾರೆ. 5ನೇ ಏಷ್ಯಾ ಬೀಚ್ ಗೇಮ್ಸ್ ವಿಯಟ್ನಾಂನ ಡ ನಂಗ್ ನಲ್ಲಿ ಆರಂಭಗೊಂಡಿದೆ. ಭಾರತದಿಂದ 208 ಕ್ರೀಡಾಪಟುಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾರೆ. ಕುರಷ್ ಎಂಬುದು ಕುಸ್ತಿಯ ವಿಧವಾಗಿದ್ದು, ಉಜ್ಬೇಕಿಸ್ತಾನದಲ್ಲಿ ಹುಟ್ಟಿದೆ.

Question 9

9. ಯಾವ ದೇಶದಲ್ಲಿ ಜಗತ್ತಿನ ಅತಿ ದೊಡ್ಡ ರೇಡಿಯೊ ಟೆಲಿಸ್ಕೋಪ್ ಇತ್ತೀಚೆಗೆ ಕಾರ್ಯಾರಂಭ ಮಾಡಿತು?

A
ಜಪಾನ್
B
ಚೀನಾ
C
ಮೆಕ್ಸಿಕೊ
D
ಇರಾಕ್
Question 9 Explanation: 
ಚೀನಾ:

ಚೀನಾದಲ್ಲಿ ಸ್ಥಾಪಿಸಲಾದ ವಿಶ್ವದ ಅತಿ ದೊಡ್ಡ ರೇಡಿಯೊ ಟೆಲಿಸ್ಕೋಪ್ ಕಾರ್ಯಾರಂಭ ಮಾಡಿದೆ. 4.5 ಕೋಟಿ ವರ್ಷಗಳ ಹಿಂದೆ ಗುಜಿಯೋ ಪ್ರಾಂತ್ಯದ ಪರ್ವತದಲ್ಲಿ ಇದ್ದ ಗುಹೆಯೊಂದು ಕುಸಿದುಬಿದ್ದು ಉಂಟಾಗಿರುವ ಬೃಹದಾಕಾರದ ಗುಳಿಯಲ್ಲಿ ಟೆಲಿಸ್ಕೋಪ್ ನಿರ್ಮಿಸಲಾಗಿದೆ. 1200 ಕೋಟಿ ವೆಚ್ಚದ ಈ ಟೆಲಿಸ್ಕೋಪ್‌ನ ತಟ್ಟೆ 30 ಫುಟ್ಬಾಲ್ ಮೈದಾನಗಳಷ್ಟು ವಿಶಾಲವಾಗಿದೆ. ಒಟ್ಟು 4,450 ಫಲಕಗಳನ್ನು ಜೋಡಿಸಲಾಗಿದ್ದು, ಪ್ರತಿ ಫಲಕವೂ ತ್ರಿಕೋನಾಕೃತಿಯಲ್ಲಿ 11 ಮೀಟರ್ ಉದ್ದವಿದೆ. ದೂರದ ಆಕಾಂಶಗಂಗೆಯಲ್ಲಿರುವ ನೈಸರ್ಗಿಕ ಜಲಜನಕ ಹಾಗೂ ಸಾಮಾನ್ಯ ಟೆಲಿಸ್ಕೋಪ್‌ಗಳ ಪತ್ತೆ ಮಾಡದ ಆಕಾಶಕಾಯಗಳನ್ನು ಇದು ಪತ್ತೆ ಮಾಡಲಿದೆ. ಇದಕ್ಕಿಂತ ಹೆಚ್ಚಾಗಿ ಇನ್ನಿತರ ಆಕಾಶಕಾಯ, ಜನವಸತಿ ಪ್ರದೇಶಗಳಿಂದ ಹೊರಹೊಮ್ಮುವ ಸೂಕ್ಷಾತೀಸೂಕ್ಷ್ಮ ತರಂಗಗಳನ್ನು ಈ ಟೆಲಿಸ್ಕೋಪ್‌ ಗ್ರಹಿಸುವ ಸಾಮರ್ಥ್ಯ ಹೊಂದಿದೆ.

Question 10

10. 2016-17ನೇ ಸಾಲಿನ ಕೆ.ಕೆ.ಪೈ ರಾಷ್ಟ್ರೀಯ ಬ್ಯಾಂಕಿಂಗ್ ಪ್ರಶಸ್ತಿ ಯಾರಿಗೆ ಲಭಿಸಿದೆ?

A
ರಾಘವೇಂದ್ರ ರಾವ್
B
ಪ್ರಕಾಶ್ ಮಲ್ಯ
C
ಕೆ ಪಿ ಭಟ್
D
ಅರುಂಧತಿ ಭಟ್ಟಚಾರ್ಯ
Question 10 Explanation: 
ಪ್ರಕಾಶ್ ಮಲ್ಯ:

ವಿಜಯಾ ಬ್ಯಾಂಕಿನ ಮಾಜಿ ಅಧ್ಯಕ್ಷ ಪ್ರಕಾಶ ಮಲ್ಯ ಅವರು 2016–17ನೇ ಸಾಲಿನ ಕೆ.ಕೆ. ಪೈ ರಾಷ್ಟ್ರೀಯ ಬ್ಯಾಂಕಿಂಗ್‌ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ಬ್ಯಾಂಕಿಂಗ್‌ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅವರು 1973ರಲ್ಲಿ ಅಧಿಕಾರಿಯಾಗಿ ಕೆನರಾ ಬ್ಯಾಂಕ್‌ ಸೇರುವ ಮೂಲಕ ವೃತ್ತಿ ಜೀವನ ಆರಂಭಿಸಿದ್ದರು. ಬ್ಯಾಂಕಿನ ದೆಹಲಿ ವಲಯದ ಮುಖ್ಯಸ್ಥರಾಗಿ ಹಾಗೂ ಕೆನರಾ ಬ್ಯಾಂಕಿನ ಪತ್ರಿಕೆಯಾದ ‘ಶ್ರೇಯಸ್’ನ ಸಂಪಾದಕರಾಗಿ ಕೂಡ ಕೆಲಸ ಮಾಡಿದ್ದರು. ಮಣಿಪಾಲದ ಟಿ.ಎ. ಪೈ ನಿರ್ವಹಣಾ ಸಂಸ್ಥೆಯಲ್ಲಿ ಅ.9ರಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು.

There are 10 questions to complete.

[button link=”http://www.karunaduexams.com/wp-content/uploads/2016/09/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಸೆಪ್ಟೆಂಬರ್-ಕ್ವಿಜ್-25.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

4 Thoughts to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಸೆಪ್ಟೆಂಬರ್ 25, 2016”

  1. HAJARATALI

    Super sir

  2. ScottOreby

    As a Newbie, I am always exploring online for articles that can benefit me. Thank you http://member.thinkfree.com/myoffice/show.se?f=72de34d73df63bee475107c8548dae0d

Leave a Comment

This site uses Akismet to reduce spam. Learn how your comment data is processed.