ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಸೆಪ್ಟೆಂಬರ್ 24, 2016

Question 1

1.2016 ರೈಟ್ ಲೈವ್ಲಿಹುಡ್ ಪ್ರಶಸ್ತಿಗೆ ಆಯ್ಕೆಯಾಗಿರುವ “ದಿ ವೈಟ್ ಹೆಲ್ಮೇಟ್ಸ್ (The White Helmets)” ಯಾವ ದೇಶದ ನಾಗರೀಕ ರಕ್ಷಣಾ ಪಡೆಯಾಗಿದೆ?

A
ಸಿರಿಯಾ
B
ಟರ್ಕಿ
C
ನೈಜೀರಿಯಾ
D
ಈಜಿಪ್ಟ್
Question 1 Explanation: 
ಸಿರಿಯಾ:

ಪರ್ಯಾಯ ನೊಬೆಲ್ ಎಂದೇ ಪ್ರಸಿದ್ದಿ ಹೊಂದಿರುವ ರೈಟ್ ಲೈವ್ಲಿಹುಡ್ ಪ್ರಶಸ್ತಿಯನ್ನು 2016ನೇ ಸಾಲಿಗೆ ಸ್ವೀಡನ್ನ ಸ್ಟಾಕ್ ಹೋಮ್ ನಲ್ಲಿ ಪ್ರಕಟಿಸಲಾಗಿದೆ. ಸಿರಿಯಾದ ನಾರೀಕ ರಕ್ಷಣಾ ಪಡೆ “ದಿ ವೈಟ್ ಹೆಲ್ಮೇಟ್ಸ್” ಈ ಬಾರಿ ಪ್ರಶಸ್ತಿಗೆ ಆಯ್ಕೆಯಾಗಿದೆ. ಇದರೊಂದಿಗೆ ಟರ್ಕಿಯ ಸುದ್ದಿಪತ್ರಿಕ ಕುಮ್ಹುರಿಯತ್ (Cumhuriyat), ರಷ್ಯಾದ ಮಾನಮ ಹಕ್ಕು ಹೋರಾಟಗಾರ್ತಿ ಸ್ವೆಟಲಾನ ಗನ್ನುಷ್ಕಿನ ಮತ್ತು ಈಜಿಪ್ಟ್ನ ಮೊಝ್ನ ಹಸ್ಸನ್ ಮತ್ತು ನಝ್ರ ರವರಿಗೆ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

Question 2

2. ಇತ್ತೀಚೆಗೆ ಜಾಗತಿಕ ಮಟ್ಟದ ಅಧ್ಯಯನವೊಂದು ಬಿಡುಗಡೆಗೊಳಿಸಿದ ವಿಶ್ವದ ಆರೋಗ್ಯ ಸ್ಥಿತಿಯಲ್ಲಿ ಭಾರತ ಎಷ್ಟನೇ ಸ್ಥಾನಗಳಿಸಿದೆ?

A
120
B
134
C
143
D
150
Question 2 Explanation: 
143:

ಜಾಗತಿಕ ಮಟ್ಟದ ಅಧ್ಯಯನವೊಂದರ ಪ್ರಕಾರ ಆರೋಗ್ಯ ಸ್ಥಿತಿಯಲ್ಲಿ ಭಾರತ ವಿಶ್ವದ 188 ದೇಶಗಳ ಪೈಕಿ 143ನೇ ಸ್ಥಾನದಲ್ಲಿದೆ. ಅತ್ಯಧಿಕ ಮರಣ ಪ್ರಮಾಣ, ಮಲೇರಿಯಾ, ನೈರ್ಮಲ್ಯ ಕೊರತೆ ಹಾಗೂ ವಾಯು ಮಾಲಿನ್ಯದ ಕಾರಣಗಳಿಂದಾಗಿ ಭಾರತದ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿ ಹೇಳಿದೆ. ಹಲವು ಆರೋಗ್ಯ ಸೂಚಕಗಳನ್ನು ಮಾನದಂಡವಾಗಿ ಇಟ್ಟುಕೊಂಡು ನಡೆಸಿದ ಅಧ್ಯಯನ ವರದಿಯನ್ನು ಲ್ಯಾನ್ಸೆಟ್ ಮೆಡಿಕಲ್ ಜರ್ನಲ್ನಲ್ಲಿ ಪ್ರಕಟಿಸಲಾಗಿದೆ. ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದ ವೇಳೆ ನಡೆದ ವಿಶೇಷ ಸಮಾರಂಭದಲ್ಲಿ ಈ ವರದಿ ಬಿಡುಗಡೆ ಮಾಡಲಾಗಿದೆ. ಭಾರತವು ನೆರೆ ದೇಶಗಳಾದ ಪಾಕಿಸ್ತಾನ ಹಾಗೂ ಬಾಂಗ್ಲಾಕ್ಕಿಂತ ತುಸು ಮುಂದಿದ್ದು, ಈ ಎರಡು ದೇಶಗಳು ಕ್ರಮವಾಗಿ 149 ಹಾಗೂ 151ನೇ ಸ್ಥಾನದಲ್ಲಿವೆ. ಪ್ರಮುಖ ಆರೋಗ್ಯ ಸೂಚಕಗಳಲ್ಲೊಂದಾದ ಮಲೇರಿಯಾದಲ್ಲಿ ಭಾರತ 10 ಅಂಕ ಪಡೆದು ಅಪಾಯಕಾರಿ ವಲಯದಲ್ಲಿದೆ. ಅಂತೆಯೇ ನೈರ್ಮಲ್ಯದಲ್ಲಿ ಎಂಟು ಅಂಕ ಪಡೆದಿದ್ದು, ನೀರಿನ ಗುಣಮಟ್ಟ ಸೂಕಕವಾದ ಪಿಎಂ 2.5ರಲ್ಲಿ (ದಶಲಕ್ಷ ಕಣಗಳಲ್ಲಿ ಕಲುಶಿತ ಅಂಶ) 18 ಅಂಕ ಪಡೆದಿದ್ದು, ಐಸ್ಲೆಂಡ್ ಅತ್ಯಧಿಕ ಎಸ್ಡಿಜಿ ಸೂಚ್ಯಂಕ ಪಡೆದಿದ್ದು, ಸಿಂಗಾಪುರ ಹಾಗೂ ಸ್ವೀಡನ್ ನಂತರದ ಸ್ಥಾನಗಳಲ್ಲಿವೆ. ಬ್ರಿಟನ್ ಐದನೇ ಸ್ಥಾನದಲ್ಲಿದ್ದು, ಫಿನ್ಲ್ಯಾಂಡ್ ಮುಂದಿನ ಸ್ಥಾನದಲ್ಲಿದೆ. ಕೇಂದ್ರ ಆಫ್ರಿಕನ್ ರಿಪಬ್ಲಿಕ್, ಸೋಮಾಲಿಯಾ ಹಾಗೂ ದಕ್ಷಿಣ ಸೂಡಾನ್ ಕೊನೆಯ ಸ್ಥಾನಗಳಲ್ಲಿವೆ.

Question 3

3. ಆಡಿಟ್ ಬ್ಯೂರೋ ಆಫ್ ಸರ್ಕ್ಯುಲೇಷನ್ (ABC)ನ 2016-17ನೇ ಸಾಲಿಗೆ ಅಧ್ಯಕ್ಷರಾಗಿ ಯಾರು ನೇಮಕಗೊಂಡಿದ್ದಾರೆ?

A
ಐ ವೆಂಕಟ್
B
ರಜತ್ ಶರ್ಮಾ
C
ಆಶೀಶ್ ಬಗ್ಗಾ
D
ಭಾಸ್ಕರ್ ದಾಸ್
Question 3 Explanation: 
ಐ ವೆಂಕಟ್:

ಈನಾಡು ಗ್ರೂಫ್ ಅಧ್ಯಕ್ಷ ಐ ವೆಂಕಟ್ ಅವರು ಆಡಿಟ್ ಬ್ಯೂರೋ ಆಫ್ ಸರ್ಕ್ಯುಲೇಷನ್ 2016-17ನೇ ಸಾಲಿನ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ವೆಂಕಟ್ ಅವರು ಮೀಡಿಯಾ ರಿಸರ್ಚ್ ಯುಸರ್ಸ್ ಕೌನ್ಸಿಲ್ ನ ಅಧ್ಯಕ್ಷರು ಸಹ ಆಗಿದ್ದಾರೆ. ಈ ಹಿಂದೆ ಅವರು ಅಡ್ವರ್ಟೈಸ್ಮೆಂಟ್ ಸ್ಟಾಂಡರ್ಡ್ಸ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷರಾಗಿದ್ದರು.

Question 4

4. ಅತ್ಯಾಧುನಿಕ ರಫೆಲ್ ಜೆಟ್ ಖರೀದಿಸುವ ಸಂಬಂಧ ಭಾರತ ಇತ್ತೀಚೆಗೆ ಈ ಕೆಳಗಿನ ಯಾವ ದೇಶದೊಂದಿಗೆ ಸಹಿ ಹಾಕಿತು?

A
ರಷ್ಯಾ
B
ಇಸ್ರೇಲ್
C
ಫ್ರಾನ್ಸ್
D
ಅಮೆರಿಕ
Question 4 Explanation: 
ಫ್ರಾನ್ಸ್:

ಫ್ರಾನ್ಸ್ ನಿಂದ 36 ರಾಫೆಲ್ ಫೈಟರ್ ಜೆಟ್ ಗಳನ್ನು ಖರೀದಿಸುವ ಒಪ್ಪಂದಕ್ಕೆ ಭಾರತ ಸಹಿ ಹಾಕಿದೆ. ಫ್ರೆಂಚ್ ನ ರಕ್ಷಣಾ ಸಚಿವ ಜೀನ್ ಯೆಸ್ ಲೆ ಡ್ರಿಯಾನ್ ನವದೆಹಲಿಗೆ ಆಗಮಿಸಿದ್ದು, ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ರಾಫೆಲ್ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಒಪ್ಪಂದದ ಭಾಗವಾಗಿ ಇನ್ನು ಕೆಲವೇ ತಿಂಗಳುಗಳಲ್ಲಿ ಮೊದಲ ಎರಡು ಬ್ಯಾಚ್ ನ ರಾಫೆಲ್ ಜೆಟ್ ಗಳು ಭಾರತದ ಕೈ ಸೇರಲಿವೆ. ಒಪ್ಪಂದ ನಡೆದ 66 ತಿಂಗಳಲ್ಲಿ ಒಟ್ಟು 36 ರಾಫೆಲ್ ಜೆಟ್ ಗಳು ಭಾರತದ ಕೈಸೇರಲಿವೆ. ಈ ರಾಫೆಲ್ ಮೆಟೊರೊ ಶ್ರೇಣಿಯ (ದೂರವ್ಯಾಪಿ) ಕ್ಷಿಪಣಿಯಾಗಿದ್ದು, 150 ಕಿ.ಮೀ ಸಾಗುವ ಸಾಮರ್ಥ್ಯ ಹೊಂದಿದೆ.

Question 5

5. ಸಿಖ್ಖರ ಪವಿತ್ರ ಧಾರ್ಮಿಕ ಪುಸ್ತಕ “ದಾಸಮ್ ಗ್ರಂಥ (Dasam Granth)”ವನ್ನು ರಚಿಸಿದ ಸಿಖ್ ಗುರು ______?

A
ಗುರು ಗೋಬಿಂದ್ ಸಿಂಗ್
B
ಗುರು ತೇಜ್ ಬಹುದ್ದೂರ್
C
ಗುರು ಅರ್ಜುನ್ ಸಿಂಗ್
D
ಗುರು ಹರ್ ಗೋಬಿಂದ್
Question 5 Explanation: 

ಸಿಖ್ಖರ ಹತ್ತನೇ ಗುರು ಗುರು ಗೋಬಿಂದ್ ಸಿಂಗ್ ಅವರು ಸಿಖ್ಖರ ಧರ್ಮದ ಪವಿತ್ರ ಪುಸ್ತಕ ಎನಿಸಿದರುವ “ದಾಸಮ್ ಗ್ರಂಥ”ವನ್ನು ರಚಿಸಿದ್ದಾರೆ.

Question 6

6. ಪ್ರಪ್ರಥಮ “ಜೆಸ್ಸೆ ಒವೆನ್ಸ್ ಒಲಪಿಂಕ್ ಸ್ಪಿರಿಟ್ ಪ್ರಶಸ್ತಿ (Jesse Owens Olympic Spirit Award)”ಯನ್ನು ಯಾರಿಗೆ ನೀಡಲಾಗುತ್ತಿದೆ?

A
ಉಸೇನ್ ಬೋಲ್ಟ್
B
ಮುಹಮ್ಮದ್ ಅಲಿ
C
ಮೈಕಲ್ ಫೆಲ್ಪ್
D
ಸೆರೆನಾ ವಿಲಿಯಮ್ಸ್
Question 6 Explanation: 

ಬಾಕ್ಸಿಂಗ್ ದಂತಕತೆ ದಿವಂಗತ ಮುಹಮ್ಮದ್ ಅಲಿ ಅವರಿಗೆ ಮರಣೋತ್ತರವಾಗಿ ಪ್ರಪ್ರಥಮ “ಜೆಸ್ಸೆ ಒವೆನ್ಸ್ ಒಲಂಪಿಕ್ ಸ್ಪಿರಿಟ್ ಪ್ರಶಸ್ತಿ”ಯನ್ನು ನೀಡಲಾಗುತ್ತಿದೆ. ಒವೆನ್ ಅವರು 1936ರ ಬರ್ಲಿನ್ ಒಲಂಪಿಕ್ಸ್ ನಲ್ಲಿ ನಾಲ್ಕು ಚಿನ್ನ ಗೆದ್ದ 80ನೇ ವರ್ಷದ ಸ್ಮರಣಾರ್ಥ ಸ್ಥಾಪಿಸಿರುವ ಈ ಪ್ರಶಸ್ತಿಯನ್ನು ಈ ವರ್ಷದಿಂದ ನೀಡಲಾಗುತ್ತಿದೆ. ಮುಹಮ್ಮದ್ ಅಲಿ 1960ರಲ್ಲಿ ನಡೆದ ಒಲಂಪಿಕ್ಸ್ ನಲ್ಲಿ ಚಿನ್ನ ಗೆದ್ದಿದ್ದರು. ಅಲ್ಲದೇ ಮೂರು ಬಾರಿ ವಿಶ್ವ ಹೆವಿವೈಟ್ ಚಾಂಪಿಯನ್ ಆಗಿದ್ದರು.

Question 7

7. ಇದೇ ಮೊದಲ ಬಾರಿಗೆ ಯಾವ ಹುಲಿ ಸಂರಕ್ಷಣ ಧಾಮದಲ್ಲಿ “ಡ್ರೋನ್” ಬಳಸಿ ಹುಲಿ ಸಂರಕ್ಷಣೆ ಮತ್ತು ಪುನರ್ವಸತಿ ಕಲ್ಪಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು?

A
ಪೆನ್ನಾ ಹುಲಿಸಂರಕ್ಷಣಾ ಧಾಮ
B
ಸಿಮಿಲಿಪಾಲ್ ಹುಲಿಸಂರಕ್ಷಣಾ ಧಾಮ
C
ಭದ್ರಾ ಹುಲಿಸಂರಕ್ಷಣಾ ಧಾಮ
D
ಪೆಂಚ್ ಹುಲಿಸಂರಕ್ಷಣಾ ಧಾಮ
Question 7 Explanation: 
ಸಿಮಿಲಿಪಾಲ್ ಹುಲಿಸಂರಕ್ಷಣಾ ಧಾಮ:

ಒಡಿಶಾದ ಸಿಮಿಲಿಪಾಲ್ ಹುಲಿಸಂರಕ್ಷಣಾ ಧಾಮದಲ್ಲಿ ಡ್ರೋನ್ ಬಳಸಿ ಹುಲಿ ಸಂರಕ್ಷಣೆ ಮತ್ತು ಪುನರ್ವಸತಿ ಕಲ್ಪಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಇದೇ ಮೊದಲ ಬಾರಿಗೆ ಹುಲಿಸಂರಕ್ಷಣೆಗೆ ಡ್ರೋನ್ ಬಳಸಲಾಗುತ್ತಿದೆ. ವೈಲ್ಡ್ಲೈಪ್ ಟ್ರಸ್ಟ್ ಆಫ್ ಇಂಡಿಯಾ ಮತ್ತು ಅರಣ್ಯ ಇಲಾಖೆ ಸಹಯೋಗದಡಿ ಇದಕ್ಕೆ ಚಾಲನೆ ನೀಡಲಾಯಿತು.

Question 8

8. “2016 ಕ್ಲಾರ್ಕ್ ಆರ್ ಭಾವಿನ್ ವೈಲ್ಡ್ ಲೈಫ್ ಲಾ ಎನ್ಪೋರ್ಸ್ಮೆಂಟ್ (Clark R. Bavin Wildlife Law Enforcement Awards)” ಪ್ರಶಸ್ತಿಗೆ ಆಯ್ಕೆಯಾಗಿರುವ ಇಬ್ಬರು ಭಾರತೀಯರು ಯಾರು?

A
ಉಲ್ಲಾಸ್ ಕಾರಂತ್ ಮತ್ತು ಅಶ್ವಿನ್ ಜೈನ್
B
ಸಂಜಯ್ ದತ್ತಾ ಮತ್ತು ರಿತೇಶ್ ಸರೊಥಿಯ
C
ಪ್ರಕಾಶ್ ಸಿಂಗ್ ಮತ್ತು ಅಶ್ವಿನ್ ಜೈನ್
D
ಮಾಧವ್ ದರ್ಪಣ್ ಮತ್ತು ರಿತೇಶ್ ಸರೊಥಿಯ
Question 8 Explanation: 
ಸಂಜಯ್ ದತ್ತಾ ಮತ್ತು ರಿತೇಶ್ ಸರೊಥಿಯ:

ಸಮರ್ಪಕವಾಗಿ ಕಾನೂನು ಜಾರಿಗೊಳಿಸಿ ವನ್ಯಜೀವಿ ಸಂರಕ್ಷಿಸಲು ದಿಟ್ಟ ಧೈರ್ಯ ತೋರಿರುವ ಸಂಜಯ್ ದತ್ತಾ ಮತ್ತು ರಿತೇಶ್ ಸರೊಥಿಯ ಅವರನ್ನು “2016 ಕ್ಲಾರ್ಕ್ ಆರ್ ಭಾವಿನ್ ವೈಲ್ಡ್ ಲೈಫ್ ಲಾ ಎನ್ಪೋರ್ಸ್ಮೆಂಟ್ ಪ್ರಶಸ್ತಿ”ಗೆ ಆಯ್ಕೆಮಾಡಲಾಗಿದೆ. ಸರೋಥಿಯ ಮಧ್ಯಪ್ರದೇಶ ಅರಣ್ಯ ಇಲಾಖೆಯ ಸಹಾಕಯ ಅರಣ್ಯ ಸಂರಕ್ಷರಾಗಿದ್ದಾರೆ. ಸಂಜಯ್ ದತ್ತಾ ಅವರು ಪಶ್ಚಿಮ ಬಂಗಾಳದ ಬೆಳಕೊಬ ಅರಣ್ಯ ಪ್ರದೇಶದಲ್ಲಿ ರೇಂಜ್ ಆಫೀಸರ್ ಆಗಿದ್ದಾರೆ.

Question 9

9. ಇತ್ತೀಚೆಗೆ ನಿಧನರಾದ “ರೆಹೊತಿ ಶರಣ್ ಶರ್ಮಾ” ಅವರು ಯಾವ ಕ್ಷೇತ್ರಕ್ಕೆ ಸಂಬಂಧಿಸಿದ್ದಾರೆ?

A
ಸಾಹಿತ್ಯ
B
ರಾಜಕೀಯ
C
ಕ್ರೀಡೆ
D
ವಿಜ್ಞಾನ
Question 9 Explanation: 
ಸಾಹಿತ್ಯ:

ಖ್ಯಾತ ಹಿಂದಿ ಮತ್ತು ಉರ್ದು ಸಾಹಿತಿ ರೆಹೊತಿ ಶರಣ್ ಶರ್ಮಾ ನವದೆಹಲಿಯಲ್ಲಿ ನಿಧನರಾದರು. ಶರ್ಮಾ ಅವರಿಗೆ 2007 ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ನೀಡಲಾಗಿತ್ತು. ಸಾಹಿತ್ಯ ಕಲಾ ಪರಿಷದ್ ಮತ್ತು ಗಲೀಬ್ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದರು.

Question 10

10. “ಡೆತ್ ವ್ಯಾಲಿ (Death Valley)” ಈ ಕೆಳಗಿನ ಯಾವ ಮರುಭೂಮಿಯಲ್ಲಿ ಕಾಣಬಹುದಾಗಿದೆ _____?

A
ಕೊಲೊರಾಡೊ
B
ಮೊಜಾವೆ
C
ಅಮರ್ಗೊಸ
D
ತಕ್ಲಮಕನ್
Question 10 Explanation: 
ಮೊಜಾವೆ ಮರುಭೂಮಿ
There are 10 questions to complete.

[button link=”http://www.karunaduexams.com/wp-content/uploads/2016/09/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಸೆಪ್ಟೆಂಬರ್-ಕ್ವಿಜ್-24.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

One Thought to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಸೆಪ್ಟೆಂಬರ್ 24, 2016”

Leave a Comment

This site uses Akismet to reduce spam. Learn how your comment data is processed.