ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಸೆಪ್ಟೆಂಬರ್ 18, 2016

Question 1

1.ಬ್ಯಾಂಕಿಂಗ್ ಶಿಕ್ಷಣ ಪರಿಚಯಿಸುವ ಸಲುವಾಗಿ ಯಾವ ಬ್ಯಾಂಕ್ ಇತ್ತೀಚೆಗೆ “ಬನಾರಸ್ ಹಿಂದೂ ವಿಶ್ವವಿದ್ಯಾಲಯ ಜೊತೆ ಒಪ್ಪಂದಕ್ಕೆ ಸಹಿ ಹಾಕಿತು?

A
ಭಾರತೀಯ ಸ್ಟೇಟ್ ಬ್ಯಾಂಕ್
B
ಎಕ್ಸಿಸ್ ಬ್ಯಾಂಕ್
C
ಐಸಿಐಸಿಐ ಬ್ಯಾಂಕ್
D
ದೇನಾ ಬ್ಯಾಂಕ್
Question 1 Explanation: 
ಎಕ್ಸಿಸ್ ಬ್ಯಾಂಕ್:

ದೇಶದ ಎರಡನೇ ಅತಿ ದೊಡ್ಡ ಖಾಸಗಿ ವಲಯ ಬ್ಯಾಂಕ್ ಆಗಿರುವ ಎಕ್ಸಿಸ್ ಬ್ಯಾಂಕ್ ವಿಶೇಷ ಬ್ಯಾಂಕಿಂಗ್ ಶಿಕ್ಷಣ ಪರಿಚಯಿಸುವ ಸಲುವಾಗಿ ಬನಾರಸ್ ಹಿಂದೂ ವಿಶ್ವವಿದ್ಯಾಲಯದೊಂದಿಗೆ ಒಪ್ಪಂದಕ್ಕೆ ಸಹಿಹಾಕಿದೆ. ಒಪ್ಪಂದದಂತೆ ವಿಶ್ವವಿದ್ಯಾಲಯ ಮತ್ತು ಎಕ್ಸಿಸ್ ಬ್ಯಾಂಕ್ ಜೊತೆಯಾಗಿ ವಿಶೇಷ ಬ್ಯಾಂಕಿಂಗ್ ಕೋರ್ಸ್ ಅನ್ನು ವಿನ್ಯಾಸಗೊಳಿಸಲಿವೆ. ಅದರಂತೆ ಬ್ಯಾಂಕಿಂಗ್ ವಲಯಕ್ಕೆ ಸಂಬಂಧಿಸಿದ ವಿಶಿಷ್ಟ ಪದವಿಗಳನ್ನು ನೀಡಲಿವೆ.

Question 2

2. ವೆನೆಜುವೆಲಾದನಲ್ಲಿ ನಡೆಯಲಿರುವ “2016 ಆಲಿಪ್ತ ಚಳುವಳಿ (NAM)” ಶೃಂಗಸಭೆಯಲ್ಲಿ ಭಾಗವಹಿಸಲಿರುವ ಭಾರತದ ನಿಯೋಗದ ಮುಂದಾಳತ್ವವನ್ನು ಯಾರು ವಹಿಸಲಿದ್ದಾರೆ?

A
ಅರುಣ್ ಜೇಟ್ಲಿ
B
ಹಮೀದ್ ಅನ್ಸಾರಿ
C
ನರೇಂದ್ರ ಮೋದಿ
D
ಜಾವೇದಕರ್
Question 2 Explanation: 

ಭಾರತದ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು “2016 ಆಲಿಪ್ತ ಚಳುವಳಿ (NAM)” ಶೃಂಗಸಭೆಯಲ್ಲಿ ಭಾಗವಹಿಸಲಿರುವ ಭಾರತದ ನಿಯೋಗದ ಮುಂದಾಳತ್ವವನ್ನು ವಹಿಸಿದ್ದಾರೆ. 17ನೇ ಆಲಿಪ್ತ ಚಳುವಳಿ ವೆನೆಜುವೆಲಾದ ಮಾರ್ಗರಿಟ ದ್ವೀಪದಲ್ಲಿ ಸೆಪ್ಟೆಂಬರ್ 17 ರಿಂದ ಆರಂಭಗೊಂಡಿದೆ. ಭಾರತ ಆಲಿಪ್ತ ಚಳುವಳಿಯ ಸದಸ್ಯ ರಾಷ್ಟ್ರವಾಗಿದೆ.

Question 3

3. 2016 ಅಂತಾರಾಷ್ಟ್ರೀಯ ಓಝೋನ್ ಪದರ ಸಂರಕ್ಷಣಾ ದಿನ (International Day for the Preservation of the Ozone Layer)ದ ಧ್ಯೇಯವಾಕ್ಯ ______?

A
Ozone and climate: restored by a world united
B
Come together to preserve Ozone
C
No Ozone No Tomorrow
D
Ozone: Let’s preserve it
Question 3 Explanation: 
Ozone and climate: restored by a world united:

ಅಂತಾರಾಷ್ಟ್ರೀಯ ಓಝೋನ್ ಪದರ ಸಂರಕ್ಷಣಾ ದಿನವನ್ನು ಪ್ರತಿ ವರ್ಷ ಸೆಪ್ಟೆಂಬರ್ 16 ರಂದು ಆಚರಿಸಲಾಗುತ್ತದೆ. 1987 ಸೆಪ್ಟೆಂಬರ್ 16 ರಂದು ಓಝೋನ್ ಪದರ ಸಂರಕ್ಷಣೆಗಾಗಿ ಮಾಂಟ್ರಿಯಲ್ ಪ್ರೊಟೊಕಾಲ್ ಅಂತಾರಾಷ್ಟ್ರೀಯ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಆಗಾಗಿ ಸೆಪ್ಟೆಂಬರ್ 16ರನ್ನು ಓಝೋನ್ ಪದರ ಸಂರಕ್ಷಣಾ ದಿನವನ್ನಾಗಿ ಆಚರಿಸಲಾಗುತ್ತಿದೆ.

Question 4

4. ಸ್ವಚ್ಚ ಭಾರತ ಅಭಿಯಾನದ ಸಂಕೇತ (Mascot)ವಾಗಿ ಈ ಕೆಳಗಿನ ಯಾರು ಆಯ್ಕೆಯಾಗಿದ್ದಾರೆ?

A
ಕುನ್ವಾರ್ ಬಾಯಿ
B
ಕಿಶೋರ್ ಸಿಂಗ್
C
ಮಲ್ಲಮ್ಮ
D
ಸಂದೀಪ್ ಚವ್ಹಾಣ್
Question 4 Explanation: 

ಸಾಕಿದ್ದ ಮೇಕೆಗಳನ್ನು ಮಾರಿ ಶೌಚಾಲಯ ನಿರ್ಮಿಸಿ ಸುದ್ದಿಯಲ್ಲಿದ್ದ ಕುನ್ವಾರ್ ಬಾಯಿ ಅವರನ್ನು ಸ್ವಚ್ಚ ಭಾರತ ಅಭಿಯಾನದ ಚಿನ್ಹೆಯಾಗಿ ಆಯ್ಕೆಮಾಡಲಾಗಿದೆ. ಅಲ್ಲದೇ, ಸ್ವಚ್ಚ ಭಾರತ ದಿವಸ್ (ಸೆಪ್ಟೆಂಬರ್ 17) ರಂದು ಪ್ರಧಾನಿ ಮೋದಿ ರವರು ಕುನ್ವರ್ ಬಾಯಿ ಅವರನ್ನು ಸನ್ಮಾನ ಮಾಡಲಿದ್ದಾರೆ.

Question 5

5. ಈ ಕೆಳಗಿನ ಯಾರು “ಫೆಲೊಸ್ ಆಫ್ ನೇಚರ್ ದಕ್ಷಿಣ ಏಷ್ಯಾ ಸಣ್ಣ ಕಥೆ ಪ್ರಶಸ್ತಿ (Fellows of Nature (FON) South Asia Short Story)”ಗೆ ಭಾಜನರಾಗಿದ್ದಾರೆ?

A
ರಸಿಕ್ ರವೀಂದ್ರ
B
ಮೇಘನ ಪಂತ್
C
ನಿರ್ಮಲ ಜ್ಯೋತಿ
D
ಕಿಶೋರಿ ಚಂದ್ರ
Question 5 Explanation: 
ಮೇಘನ ಪಂತ್:

ಮೇಘ್ನ ಪಂತ್ ಫೆಲೊಸ್ ಆಫ್ ನೇಚರ್ ದಕ್ಷಿಣ ಏಷ್ಯಾ ಸಣ್ಣ ಕಥೆ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಅವರು ಸಣ್ಣ ಕಥೆ “ಫೀಪಲ್ ಆಫ್ ದಿ ಸನ್” ಗೆ ಈ ಪ್ರಶಸ್ತಿ ದೊರೆತಿದೆ. ಅಕ್ಟೋಬರ್ 2016 ರಲ್ಲಿ ನಡೆಯಲಿರುವ ಕುಮೊನ್ ಸಾಹಿತ್ಯ ಸಮ್ಮೇಳನದಲ್ಲಿ ಪ್ರಶಸ್ತಿಯನ್ನು ನೀಡಲಾಗುವುದು.

Question 6

6. ರಿಯೋ ಪ್ಯಾರಾಲಿಂಪಿಕ್ಸ್ ಮುಕ್ತಾಯ ಸಮಾರಂಭದಲ್ಲಿ ಭಾರತದ ಧ್ವಜ ಪಥ ಮುನ್ನೆಡಿಸಿದವರು ಯಾರು?

A
ದೇವೇಂದ್ರ ಜಝಾರಿಯಾ
B
ತಂಗವೇಲು ಮರಿಯಪ್ಪನ್
C
ದೀಪಾ ಮಲಿಕ್
D
ವರುಣ್ ಸಿಂಗ್ ಭಾಟಿ
Question 6 Explanation: 
ತಂಗವೇಲು ಮರಿಯಪ್ಪನ್:

ರಿಯೋ ಪ್ಯಾರಾಲಿಂಪಿಕ್ಸ್ ಹೈಜಂಪ್ ವಿಭಾಗದಲ್ಲಿ ಚಿನ್ನ ಗೆದ್ದು ಭಾರತಕ್ಕೆ ಪದಕ ತಂದ ತಂಗವೇಲು ಮರಿಯಪ್ಪನ್ ಅವರು ರಿಯೋ ಪ್ಯಾರಾಲಿಂಪಿಕ್ಸ್ ಮುಕ್ತಾಯ ಸಮಾರಂಭದಲ್ಲಿ ಭಾರತದ ಧ್ವಜ ಪಥ ಮುನ್ನೆಡಿಸಿದರು.

Question 7

7. ಕ್ಷಿಪಣೆ ನಾಶಕ ಸಾಮರ್ಥ್ಯ ಹೊಂದಿರುವ ಅತ್ಯಾಧುನಿಕ ಯುದ್ದನೌಕೆ “ಐಎನ್ಎಸ್ ಮರ್ಮಗೋವಾ”ಗೆ ಎಲ್ಲಿ ಚಾಲನೆ ನೀಡಲಾಯಿತು?

A
ಗೋವಾ
B
ಮುಂಬೈ
C
ಚೆನ್ನೆ
D
ಕಾಂಡ್ಲ
Question 7 Explanation: 
ಮುಂಬೈ:

ಸ್ವದೇಶಿ ತಂತ್ರಜ್ಞಾನ ನಿರ್ಮಿತ ಮರ್ಮಗೋವಾ ಯುದ್ದನೌಕೆ ಭಾರತೀಯ ನೌಕಪಡೆಗೆ ಸೇರ್ಪಡೆಯಾಗಿದೆ. ಅತ್ಯಾಧುನಿಕ ತಂತ್ರಜ್ಞಾನ ಮತ್ತು ಕ್ಷಿಪಣಿ ನಾಶಕ ಸಾಮರ್ಥ್ಯ ಹೊಂದಿರುವ ಈ ಹೊಸ ಯುದ್ಧನೌಕೆ ಮುಂಬೈನ ಮಝ್ ಗಾಂವ್ ಬಂದರಿನಲ್ಲಿ ಚಾಲನೆ ನೀಡಲಾಗಿದೆ. ಸಂಪೂರ್ಣವಾಗಿ ಸ್ವದೇಶಿಯಾಗಿ ನಿರ್ಮಾಣವಾಗುತ್ತಿರುವ ಈ ಯುದ್ಧನೌಕೆ ಅತ್ಯಂತ ಹೊಸ ತಂತ್ರಜ್ಞಾನವನ್ನು ಹೊಂದಿದೆ. 2015ರಲ್ಲಿ ಭಾರತೀಯ ನೌಕಪಡೆಗೆ ಐಎನ್ ಎಸ್ ವಿಶಾಖಪಟ್ಟಣಂ ಎಂಬ ಶತ್ರುಸಂಹಾರಕ ಯುದ್ಧನೌಕೆ ಸೇರ್ಪಡೆಯಾಗಿದ್ದರೆ, ಮರ್ಮಗೋವಾ ಭಾರತದಲ್ಲಿ ನಿರ್ಮಾಣವಾದ 2ನೇ ಕ್ಷಿಪಣಿ ನಾಶಕ ಯುದ್ಧನೌಕೆಯಾಗಿದೆ. ಒಟ್ಟು 29,700 ಕೋಟಿ ರೂಪಾಯಿ ವೆಚ್ಚದಲ್ಲಿ ನಾಲ್ಕು ನೂತನ ಯುದ್ಧನೌಕೆ ತಯಾರಾಗಲಿದೆ. ಮರ್ಮಗೋವಾ ಯುದ್ಧನೌಕೆ 7,300 ಟನ್ಸ್ ತೂಕ ಇದೆ. ಗಂಟೆಗೆ ಸುಮಾರು 56 ಕಿಲೋ ಮೀಟರ್ ವೇಗದಲ್ಲಿ ಚಲಿಸಲಿದ್ದು, ಕ್ಷಿಪಣಿ ನಾಶಕ ಸಾಮರ್ಥ್ಯ ಹೊಂದಿದೆ.

Question 8

8. 2016 ವಿಶ್ವ ಆರ್ಥಿಕ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಈ ಕೆಳಗಿನ ದಕ್ಷಿಣ ಏಷ್ಯಾ ರಾಷ್ಟ್ರಗಳ ಪೈಕಿ ಪ್ರಥಮ ಸ್ಥಾನದಲ್ಲಿರುವ ರಾಷ್ಟ್ರ ಯಾವುದು?

A
ಚೀನಾ
B
ಭೂತಾನ್
C
ನೇಪಾಳ
D
ಶ್ರೀಲಂಕಾ
Question 8 Explanation: 
ಭೂತಾನ್:

2016 ವಿಶ್ವ ಆರ್ಥಿಕ ಸ್ವಾತಂತ್ರ್ಯ ಸೂಚ್ಯಂಕ ಬಿಡುಗಡೆಗೊಂಡಿದ್ದು, 159 ದೇಶಗಳ ಪೈಕಿ ಭಾರತ 112ನೇ ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ಸೂಚ್ಯಂಕಕ್ಕೆ ಹೋಲಿಸಿದರೆ ಭಾರತ 10 ಸ್ಥಾನಗಳ ಕುಸಿತಕಂಡಿದ್ದು, ಕಳಪೆ ಸಾಧನೆ ತೋರಿದೆ. ಸೂಚ್ಯಂಕದಲ್ಲಿ ಹಾಂಕಾಂಗ್‌ ಮೊದಲ ಸ್ಥಾನ ಪಡೆದುಕೊಂಡಿದೆ. ಸಿಂಗಪುರ, ನ್ಯೂಜಿಲೆಂಡ್‌, ಸ್ವಿಟ್ಜರ್ಲೆಂಡ್‌, ಕೆನಡಾ, ಮಾರಿಷಸ್‌, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ ನಂತರದ ಸ್ಥಾನದಲ್ಲಿ ಇವೆ. ಚೀನಾ (113), ಬಾಂಗ್ಲದೇಶ (121) ಪಾಕಿಸ್ತಾನ (133) ಭಾರತಕ್ಕಿಂತ ಪಟ್ಟಿಯಲ್ಲಿ ಹಿಂದೆ ಬಿದ್ದಿವೆ. ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಭೂತಾನ್ 78ನೇ ಸ್ಥಾನಗಳಿಸುವ ಮೂಲಕ ಮುಂಚೂಣಿಯಲ್ಲಿದೆ. ನೇಪಾಳ 108 ನೇ ಸ್ಥಾನ ಮತ್ತು ಶ್ರೀಲಂಕಾ 111 ನೇ ಸ್ಥಾನಗಳಿಸುವ ಮೂಲಕ ಭಾರತಕ್ಕಿಂತ ಮುಂದಿವೆ.

Question 9

8. 2016 ವಿಶ್ವ ಆರ್ಥಿಕ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಈ ಕೆಳಗಿನ ದಕ್ಷಿಣ ಏಷ್ಯಾ ರಾಷ್ಟ್ರಗಳ ಪೈಕಿ ಪ್ರಥಮ ಸ್ಥಾನದಲ್ಲಿರುವ ರಾಷ್ಟ್ರ ಯಾವುದು?

A
ಚೀನಾ
B
ಭೂತಾನ್
C
ನೇಪಾಳ
D
ಶ್ರೀಲಂಕಾ
Question 9 Explanation: 
ಭೂತಾನ್:

2016 ವಿಶ್ವ ಆರ್ಥಿಕ ಸ್ವಾತಂತ್ರ್ಯ ಸೂಚ್ಯಂಕ ಬಿಡುಗಡೆಗೊಂಡಿದ್ದು, 159 ದೇಶಗಳ ಪೈಕಿ ಭಾರತ 112ನೇ ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ಸೂಚ್ಯಂಕಕ್ಕೆ ಹೋಲಿಸಿದರೆ ಭಾರತ 10 ಸ್ಥಾನಗಳ ಕುಸಿತಕಂಡಿದ್ದು, ಕಳಪೆ ಸಾಧನೆ ತೋರಿದೆ. ಸೂಚ್ಯಂಕದಲ್ಲಿ ಹಾಂಕಾಂಗ್‌ ಮೊದಲ ಸ್ಥಾನ ಪಡೆದುಕೊಂಡಿದೆ. ಸಿಂಗಪುರ, ನ್ಯೂಜಿಲೆಂಡ್‌, ಸ್ವಿಟ್ಜರ್ಲೆಂಡ್‌, ಕೆನಡಾ, ಮಾರಿಷಸ್‌, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ ನಂತರದ ಸ್ಥಾನದಲ್ಲಿ ಇವೆ. ಚೀನಾ (113), ಬಾಂಗ್ಲದೇಶ (121) ಪಾಕಿಸ್ತಾನ (133) ಭಾರತಕ್ಕಿಂತ ಪಟ್ಟಿಯಲ್ಲಿ ಹಿಂದೆ ಬಿದ್ದಿವೆ. ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಭೂತಾನ್ 78ನೇ ಸ್ಥಾನಗಳಿಸುವ ಮೂಲಕ ಮುಂಚೂಣಿಯಲ್ಲಿದೆ. ನೇಪಾಳ 108 ನೇ ಸ್ಥಾನ ಮತ್ತು ಶ್ರೀಲಂಕಾ 111 ನೇ ಸ್ಥಾನಗಳಿಸುವ ಮೂಲಕ ಭಾರತಕ್ಕಿಂತ ಮುಂದಿವೆ.

Question 10

9. ಅರುಣಾಚಲ ಪ್ರದೇಶದ ನೂತನ ರಾಜ್ಯಪಾಲರಾಗಿ ಯಾರು ಪ್ರಮಾಣ ವಚನ ಸ್ವೀಕರಿಸಿದರು?

A
ಶಂಕರ ಮೂರ್ತಿ
B
ವಿ ಷಣ್ಮುಗನಾಥಂ
C
ಸೋಮಶೇಖರ್
D
ರಾಮ್ ನಾಥ್ ಕೋವಿಂದ್
Question 10 Explanation: 
ವಿ ಷಣ್ಮುಗನಾಥಂ:

ವಿ ಷಣ್ಮುಗನಾಥಂ ರವರು ಅರುಣಾಚಲ ಪ್ರದೇಶದ ನೂತನ ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕರಿಸಿದರು. ವಿ ಷಣ್ಮುಗನಾಥಂ ಪ್ರಸ್ತುತ ಮೇಘಾಲಯದ ರಾಜ್ಯಪಾಲರಾಗಿದ್ದು, ಅರುಣಾಚಲ ಪ್ರದೇಶದ ರಾಜ್ಯಪಾಲರಾಗಿ ಹೆಚ್ಚುವರಿಯಾಗಿ ನಿಯೋಜಿಸಲಾಗಿದೆ.

There are 10 questions to complete.

[button link=”http://www.karunaduexams.com/wp-content/uploads/2016/09/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಸೆಪ್ಟೆಂಬರ್-ಕ್ವಿಜ್-18.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

5 Thoughts to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಸೆಪ್ಟೆಂಬರ್ 18, 2016”

  1. ಸಂತೋಷ್ ಗೌಡರ

    ಧನ್ಯವಾದಗಳು ಸರ್

  2. MuraliReddy K S

    Its very good sir

Leave a Comment

This site uses Akismet to reduce spam. Learn how your comment data is processed.