ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಸೆಪ್ಟೆಂಬರ್ 16, 2016

Question 1

1.“2015 ರಾಷ್ಟ್ರೀಯ ಮಾನವತಾ ಪದಕ (2015 National Humanities Medal)”ಕ್ಕೆ ಆಯ್ಕೆಯಾಗಿರುವ ಭಾರತೀಯ ಅಮೆರಿಕನ್ ವೈದ್ಯ ಯಾರು?

A
ಅಬ್ರಹಾಂ ವರ್ಗೀಸ್
B
ಜೊಕೊಬ್ ವರ್ಗೀಸ್
C
ಸುವರ್ಣನಾಥ್ ಜೈನ್
D
ಜಗನ್ನಾಥ್ ಸಿಂಗ್
Question 1 Explanation: 
ಅಬ್ರಹಾಂ ವರ್ಗೀಸ್:

ಭಾರತೀಯ ಅಮೆರಿಕನ್ ವೈದ್ಯ ಹಾಗೂ ಲೇಖಕ ಅಬ್ರಹಾಂ ವರ್ಗೀಸ್, 2015ರ ಪ್ರತಿಷ್ಠಿತ ರಾಷ್ಟ್ರೀಯ ಮಾನವತಾ ಪದಕಕ್ಕೆ ಆಯ್ಕೆಯಾಗಿದ್ದಾರೆ. ಸೆ.21ರಂದು ನಡೆಯಲಿರುವ ಸಮಾರಂಭದಲ್ಲಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ, ವರ್ಗೀಸ್ರಿಗೆ ಈ ಪ್ರಶಸ್ತಿಯನ್ನು ಪ್ರದಾನಿಸಲಿದ್ದಾರೆ. ಇತರೆ 11 ಮಂದಿ ಜೊತೆಗೆ ವರ್ಗೀಸ್ ರವರು ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇವರು ಸದ್ಯ ಸ್ಟಾಂಡರ್ಡ್ ಸ್ಕೂಲ್ ಆಫ್ ಮೆಡಿಸಿನ್ನಲ್ಲಿ ಔಷಧ ಶಾಸ್ತ್ರ ಪ್ರೊಫೆಸರ್ ಆಗಿದ್ದಾರೆ. 61ರ ಹರೆಯದ ವರ್ಗೀಸ್, 'ಮೈ ಓನ್ ಕಂಟ್ರಿ' ಹಾಗೂ 'ಕಟ್ಟಿಂಗ್ ಫಾರ್ ಸ್ಟೋನ್' ಸಹಿತ ಅನೇಕ ಜನಪ್ರಿಯ ಪುಸ್ತಕಗಳನ್ನು ಬರೆದಿದ್ದಾರೆ.

Question 2

2. ಇತ್ತೀಚಿನ ವರದಿಯೊಂದರ ಪ್ರಕಾರ ಭಯೋತ್ಪಾದನೆ ದಾಳಿಗೆ ತುತ್ತಾಗಿರುವ ರಾಷ್ಟ್ರಗಳ ಪೈಕಿ ಭಾರತ ಎಷ್ಟನೇ ಸ್ಥಾನದಲ್ಲಿದೆ?

A
ಎರಡು
B
ಮೂರು
C
ನಾಲ್ಕು
D
ಐದು
Question 2 Explanation: 
ನಾಲ್ಕು:

ಕಳೆದ ವರ್ಷ ಭಯೋತ್ಪಾದನೆ ಒಳಗಾದ ರಾಷ್ಟ್ರಗಳ ಪೈಕಿ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಇರಾಕ್, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ನಂತರ ಭಯೋತ್ಪಾದಕರ ದಾಳಿಗೆ ಒಳಗಾದ ದೇಶಗಳ ಸ್ಥಾನದಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ. ವಿಶ್ವದ ವಿವಿಧೆಡೆ ಕಳೆದ ವರ್ಷ ನಡೆದ 11,774 ಭಯೋತ್ಪಾದಕರ ದಾಳಿಯಲ್ಲಿ, 28,328 ಮಂದಿ ಹತರಾಗಿದ್ದು, 35,320 ಜನ ತೀವ್ರ ಗಾಯಗೊಂಡಿದ್ದಾರೆ. ಭಾರತದಲ್ಲಿ ನಡೆದ 791 ದಾಳಿಗಳಲ್ಲಿ ಶೇಕಡ 43ರಷ್ಟು ನಕ್ಸಲೀಯರಿಂದ ನಡೆದ ಕೃತ್ಯವಾಗಿದ್ದು, ಭಯೋತ್ಪಾದಕರ ಕೌರ್ಯಕ್ಕೆ 289 ಭಾರತೀಯರು ಕೊಲ್ಲಲ್ಪಟ್ಟಿದ್ದಾರೆ. ಅಮೆರಿಕದ ವಿದೇಶಾಂಗ ಇಲಾಖೆಯೊಂದಿಗೆ ಕರಾರು ಮಾಡಿಕೊಂಡು ಭಯೋತ್ಪಾದನೆ ಕುರಿತ ಅಧ್ಯಯನಕ್ಕಾಗಿ ನ್ಯಾಷನಲ್ ಕನ್ಸೊರ್ಟಿಯಂ ಸಂಗ್ರಹಿಸಿದ ಅಂಕಿ-ಅಂಶಗಳಿಂದ ಈ ಮಾಹಿತಿ ಬಹಿರಂಗಗೊಂಡಿದೆ. ತಾಲಿಬಾನ್, ಇಸ್ಲಾಮಿಕ್ ಸ್ಟೇಟ್ ಮತ್ತು ಬೋಕೋ ಹರಾಂ-ಈ ಮೂರು ವಿಶ್ವದ ಅತ್ಯಂತ ಅಪಾಯಕಾರಿ ಭಯೋತ್ಪಾದನೆ ಸಂಘಟನೆಗಳೆಂದು ಕುಖ್ಯಾತಿ ಪಡೆದಿವೆ.

Question 3

3. ಭಾರತದ ಸಂಸತ್ತು ಈ ಕೆಳಕಂಡವುಗಳನ್ನು ಒಳಗೊಂಡಿದೆ ______?

A
ಲೋಕಸಭೆ
B
ರಾಜ್ಯಸಭೆ
C
ಲೋಕಸಭೆ ಮತ್ತು ರಾಜ್ಯಸಭೆ
D
ರಾಷ್ಟ್ರಪತಿ, ಲೋಕಸಭೆ ಮತ್ತು ರಾಜ್ಯಸಭೆ
Question 3 Explanation: 
ರಾಷ್ಟ್ರಪತಿ, ಲೋಕಸಭೆ ಮತ್ತು ರಾಜ್ಯಸಭೆ:

ಭಾರತದ ಸಂಸತ್ತು ಭಾರತದ ಗಣರಾಜ್ಯದ ಒಕ್ಕೂಟ ಸರ್ಕಾರದ ಎರಡು ಶಾಸನಸಭೆಗಳುಳ್ಳ (ಉಭಯ ಸದನಿಕ) ಸರ್ವೋಚ್ಚ ವಿಧಾಯಕ ಘಟಕವಾಗಿದೆ. ಭಾರತದ ರಾಷ್ಟ್ರಪತಿಯವರ ಕಚೇರಿ, "ರಾಜ್ಯಸಭಾ" ಎಂದು ಕರೆಯಲ್ಪಡುವ ರಾಜ್ಯಗಳ ಪರಿಷತ್ತು ಆಗಿರುವ ಒಂದು ಮೇಲ್ಮನೆ, ಮತ್ತು "ಲೋಕಸಭಾ" ಎಂದು ಕರೆಯಲ್ಪಡುವ ಪ್ರಜಾಪ್ರತಿನಿಧಿಗಳ ಸಭೆಯಾಗಿರುವ ಒಂದು ಕೆಳಮನೆಯನ್ನು ಇದು ಒಳಗೊಂಡಿದೆ.

Question 4

4. ಈ ಕೆಳಗಿನ ಯಾವ ಕ್ರೀಡಾಂಗಣದಲ್ಲಿ ಭಾರತ ಕ್ರಿಕೆಟ್ ತಂಡ ತನ್ನ 500ನೇ ಟೆಸ್ಟ್ ಪಂದ್ಯವನ್ನು ಆಡಲಿದೆ?

A
ಗ್ರೀನ್ ಪಾರ್ಕ್ ಸ್ಟೇಡಿಯಂ, ಕಾನ್ಪುರ
B
ಫಿರೋಜ್ ಷಾ ಕೋಟ್ಲಾ, ದೆಹಲಿ
C
ಈಡನ್ ಗಾರ್ಡನ್, ಕೊಲ್ಕತ್ತ
D
ಸರ್ದಾರ್ ಪಟೇಲ್, ಅಹಮದಬಾದ್
Question 4 Explanation: 
ಗ್ರೀನ್ ಪಾರ್ಕ್ ಸ್ಟೇಡಿಯಂ, ಕಾನ್ಪುರ :

ಭಾರತ ಕ್ರಿಕೆಟ್ ತಂಡಕ್ಕೆ ಸೆಪ್ಟಂಬರ್ 22 ಮಹತ್ವದ ದಿನವಾಗಿದ್ದು, ಅಂದು ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಆರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯ ಭಾರತದ 500 ನೇ ಟೆಸ್ಟ್ ಪಂದ್ಯವಾಗಿದೆ. ಭಾರತ ಟೆಸ್ಟ್ ನಲ್ಲಿ 499 ಪಂದ್ಯಗಳನ್ನು ಆಡಿದ್ದು, 129 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. 157 ಪಂದ್ಯಗಳನ್ನು ಸೋತಿದೆ. 212 ಪಂದ್ಯಗಳು ಡ್ರಾ ಆಗಿದ್ದರೆ, 1 ಪಂದ್ಯ ಟೈ ಆಗಿದೆ. 976 ಪಂದ್ಯಗಳನ್ನಾಡುವ ಮೂಲಕ ಅಇ ಹೆಚ್ಚು ಟೆಸ್ಟ್ ಪಂದ್ಯವಾಡಿ ಇಂಗ್ಲೆಂಡ್ ಮೊದಲ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ 791 ಹಾಗೂ ವೆಸ್ಟ್ ಇಂಡೀಸ್ 517 ಟೆಸ್ಟ್ ಪಂದ್ಯಗಳನ್ನಾಡುವ ಮೂಲಕ ಕ್ರಮವಾಗಿ 2 ಹಾಗೂ 3 ನೇ ಸ್ಥಾನದಲ್ಲಿವೆ

Question 5

5. ಕುಲಾಂತರಿ ತಳಿ ಅಭಿವೃದ್ದಿಯಲ್ಲಿ ಮುಂಚೂಣಿಯಲ್ಲಿದ್ದ ಜೈವಿಕ ತಂತ್ರಜ್ಞಾನ ಸಂಸ್ಥೆ ಮಾನ್ಸಾಂಟೊವನ್ನು ಯಾವ ಸಂಸ್ಥೆ ಇತ್ತೀಚೆಗೆ ಖರೀದಿಸಿದೆ?

A
ಮಹೀಂದ್ರ ಅಂಡ್ ಮಹೀಂದ್ರ
B
ಬೇಯರ್
C
ಮೈಕೊ
D
ಪಯನಿಯರ್
Question 5 Explanation: 
ಬೇಯರ್:

ವಿಶ್ವದ ಪ್ರಸಿದ್ದ ಜೈವಿಕ ತಂತ್ರಜ್ಞಾನ ಸಂಸ್ಥೆಗಳಲ್ಲಿ ಒಂದಾದ ಮಾನ್ಸಾಂಟೊವನ್ನು ಜರ್ಮನಿಯ ರಾಸಾಯನಿಕ ಮತ್ತು ಔಷಧ ತಯಾರಿಕಾ ದೈತ್ಯ ಸಂಸ್ಥೆ ಬೇಯರ್ ಸ್ವಾಧೀನಪಡಿಸಿಕೊಂಡಿದೆ. ಅಂದಾಜು ರೂ 4.42 ಲಕ್ಷ ಕೋಟಿಗಳಷ್ಟು ಮೊತ್ತದ ಸಂಪೂರ್ಣ ನಗದು ರೂಪದಲ್ಲಿನ ಈ ಸ್ವಾಧೀನ ಪ್ರಕ್ರಿಯೆಯು ಅತಿದೊಡ್ಡ ವಹಿವಾಟು ಆಗಿದೆ. ಬೇಯರ್, ಮಾನ್ಸೊಂಟೊದ ಪ್ರತಿ ಷೇರನ್ನು ತಲಾ ರೂ 8,576 ದರದಲ್ಲಿ ಖರೀದಿಸಿದೆ. ಎರಡೂ ಸಂಸ್ಥೆಗಳ ಆಡಳಿತ ಮಂಡಳಿಗಳು ವಿಲೀನ ಪ್ರಕ್ರಿಯೆಯನ್ನು ಅನುಮೋದಿಸಿವೆ. ಈ ಪ್ರಕ್ರಿಯೆ 2017ರ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ. ವಿಲೀನದ ನಂತರ ವಿಶ್ವದ ಅತಿದೊಡ್ಡ ಬೀಜ ಮತ್ತು ಕೀಟನಾಶಕ ಸಂಸ್ಥೆ ಅಸ್ತಿತ್ವಕ್ಕೆ ಬರಲಿದೆ. ಅಮೆರಿಕದ ಮಾನ್ಸಾಂಟೊ, ಹತ್ತು ವರ್ಷಗಳಿಂದ ದೇಶದಲ್ಲಿ ಕುಲಾಂತರಿ ಹತ್ತಿ ಬೀಜಗಳ ವಹಿವಾಟು ನಡೆಸುತ್ತಿದೆ.

Question 6

6. ಇತ್ತೀಚೆಗೆ ಸುದ್ದಿಯಲ್ಲಿದ್ದ ಚೀನಾದ “ಟಿಯಾಂಗಾಂಗ್-2” ಸಂಬಂಧಿಸಿದಂತೆ ಸರಿಯಾದ ಹೇಳಿಕೆಯನ್ನು ಗುರುತಿಸಿ?

A
ಹವಾಮಾನ ಕುರಿತ ಅಧ್ಯಯನಕ್ಕಾಗಿ ಚೀನಾದ ನೂತನ ಉಪಗ್ರಹ
B
ಪ್ರಾಯೋಗಿಕ ಬಾಹ್ಯಕಾಶ ಕೇಂದ್ರ
C
ವಿಶ್ವದ ಅತಿದೊಡ್ಡ ಜಲಂತರ್ಗಾಮಿ ನೌಕೆ
D
ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಕ್ಷಿಪಣೆ
Question 6 Explanation: 
ಪ್ರಾಯೋಗಿಕ ಬಾಹ್ಯಕಾಶ ಕೇಂದ್ರ:

ಚೀನಾ ಇತ್ತೀಚೆಗೆ ಟಿಯಾಂಗಾಂಗ್-2 ಹೆಸರಿನ ಬಾಹ್ಯಾಕಾಶ ಕೇಂದ್ರ (Space Lab)ವನ್ನು ಯಶಸ್ವಿಯಾಗಿ ನೆರವೇರಿಸಿದೆ. ಗೋಬಿ ಮರುಭೂಮಿಯಲ್ಲಿರು ಜಿಯೊಕ್ವಾನ್ ಉಪಗ್ರಹ ಉಡಾವಣಾ ಕೇಂದ್ರದಿಂದ ಲಾಂಗ್ ಮಾರ್ಚ್-2ಎಫ್ ರಾಕೆಟ್ ಮೂಲಕ ಯಶಸ್ವಿಯಾಗಿ ಉಡಾಯಿಸಲಾಯಿತು. ಭೂಮಿಯಿಂದ 400 ಕಿ.ಮೀ ಎತ್ತರದ ಕಕ್ಷೆಯಲ್ಲಿ ಈ ಬಾಹ್ಯಕಾಶ ಕೇಂದ್ರ ಕಾರ್ಯನಿರ್ವಹಿಸಲಿದೆ. ಅಕ್ಟೋಬರ್ ತಿಂಗಳಲ್ಲಿ ಇಬ್ಬರು ವಿಜ್ಞಾನಿಗಳನ್ನು ಈ ಕೇಂದ್ರಕ್ಕೆ ಕಳುಹಿಸಲು ಚೀನಾ ಸಿದ್ದತೆ ನಡೆಸಿದ್ದು, ವಿವಿಧ ಸಂಸೋಧನೆಯಲ್ಲಿ ತೊಡಗಲಿದ್ದಾರೆ.

Question 7

7. ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ ನರೇಶ್ ಸರವಣ್ ಯಾವ ದೇಶದವರು?

A
ದಕ್ಷಿಣ ಆಫ್ರಿಕಾ
B
ವೆಸ್ಟ್ ಇಂಡೀಸ್
C
ಬಾಂಗ್ಲದೇಶ
D
ಶ್ರೀಲಂಕಾ
Question 7 Explanation: 

ವೆಸ್ಟ್ ಇಂಡೀಸ್ ನ ಮಧ್ಯಮ ಕ್ರಮಾಂಕ ಬ್ಯಾಟ್ಸ್ ಮನ್ ರಾಮ್ ನರೇಶ್ ಸರವಣ್ ಅವರು ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಹೇಳಿದ್ದಾರೆ. 36 ವರ್ಷ ವಯಸ್ಸಿನ ಸರವಣ್ 2013ರಿಂದ ಯಾವುದೇ ಪಂದ್ಯಗಳಲ್ಲಿ ಆಡಿರಲಿಲ್ಲ. 2000ರಲ್ಲಿ ಪಾಕಿಸ್ತಾನ ವಿರುದ್ಧದಲ್ಲಿ ಬಾರ್ಬಡೋಸ್ ನಲ್ಲಿ ಟೆಸ್ಟ್ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದ ಸರವಣ್ ಅವರಿಗೆ ವೆಸ್ಟ್ ಇಂಡೀಸ್ ನ ದಿಗ್ಗಜ ಬ್ರಿಯನ್ ಲಾರಾ ಅವರ ನಿವೃತ್ತಿಯ ನಂತರ 3ನೇ ಕ್ರಮಾಂಕದಲ್ಲಿ ಆಡುವ ಅವಕಾಶ ಸಿಕ್ಕಿತ್ತು. ಒಟ್ಟಾರೆ 87 ಟೆಸ್ಟ್ ಪಂದ್ಯಗಳು, 181 ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ, 18 ಟ್ವೆಂಟಿ20ಗಳನ್ನು ಆಡಿ ಒಟ್ಟು 11,994 ಅಂತಾರಾಷ್ಟ್ರೀಯ ರನ್ ಕಲೆ ಹಾಕಿದ್ದಾರೆ. 2009ರಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ರಾಮ್ನರೇಶ್ 291 ರನ್ಗಳಿಸಿದ್ದು ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. ನಾಯಕರಾಗಿ ರಾಮ್ನರೇಶ್ 5 ಏಕದಿನ, 4 ಟೆಸ್ಟ್ ಮತ್ತು 2 ಟಿ20 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಐಪಿಎಲ್ ನಲ್ಲಿ ಕೇವಲ 4 ಪಂದ್ಯಗಳನ್ನಾಡಿದ್ದರು. ಪಾರ್ಟ್ ಟೈಮ್ ಲೆಗ್ ಸ್ಪಿನ್ ಬೌಲರ್ ಆಗಿದ್ದ ಸರವಣ್ ಏಕದಿನದಲ್ಲಿ 16, ಟೆಸ್ಟ್ ನಲ್ಲಿ 23 ಹಾಗೂ ಟಿ20ಯಲ್ಲಿ 2 ವಿಕೆಟ್ ಪಡೆದಿದ್ದಾರೆ.

Question 8

8. ಕರ್ಕಾಟಕ ಸಂಕ್ರಾಂತಿ ವೃತ್ತ (Tropic of Cancer) ಈ ಕೆಳಗಿನ ಯಾವ ರಾಜ್ಯದ ಮೂಲಕ ಹಾದು ಹೋಗುವುದಿಲ್ಲ?

A
ಗುಜರಾತ್
B
ಪಶ್ಚಿಮ ಬಂಗಾಳ
C
ಮಣಿಪುರ
D
ಜಾರ್ಖಂಡ್
Question 8 Explanation: 
ಮಣಿಪುರ:

ಕರ್ಕಾಟಕ ಸಂಕ್ರಾಂತಿ ವೃತ್ತ ಭಾರತವನ್ನು ಎರಡು ಭಾಗವಾಗಿ ವಿಭಜಿಸಿದೆ. ಇದು ಭಾರತದ ಎಂಟು ರಾಜ್ಯಗಳಲ್ಲಿ ಹಾದು ಹೋಗುತ್ತದೆ. ಅವುಗಳೆಂದರೆ ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ, ಜಾರ್ಖಂಡ್, ಪಶ್ಚಿಮ ಬಂಗಾಳ, ತ್ರಿಪುರ ಚತ್ತೀಸ್ ಘರ್ ಮತ್ತು ಮಿಜೋರಂ

Question 9

9. ವಯೋವೃದ್ದರು ಮತ್ತು ವಿಕಲಚೇತನ ಪ್ರಯಾಣಿಕರ ಅನುಕೂಲಕ್ಕಾಗಿ ಭಾರತೀಯ ರೈಲ್ವೆ ಯಾವ ಸೇವೆಯನ್ನು ಇತ್ತೀಚೆಗೆ ಆರಂಭಿಸಿದೆ?

A
ರೈಲು ಮಿತ್ರ
B
ಯಾತ್ರಿ ಮಿತ್ರ
C
ಪ್ರಯಾಣ್ ಸಾಥಿ
D
ಸುಲಭ್ ಯಾತ್ರಿ
Question 9 Explanation: 
ಯಾತ್ರಿ ಮಿತ್ರ:

ರೈಲು ಪ್ರಯಾಣವನ್ನು ಮತ್ತಷ್ಟು ಸ್ನೇಹಮಯಗೊಳಿಸುವ ಸಲುವಾಗಿ ಭಾರತೀಯ ರೈಲ್ವೆ “ಯಾತ್ರಿ ಮಿತ್ರ” ಹೆಸರಿನ ಹೊಸ ಸೇವೆಯನ್ನು ಆರಂಭಿಸಿದೆ. ಈ ಸೇವೆಯನ್ನು ವಿಶೇಷವಾಗಿ ವಯೋವೃದ್ದರು, ವಿಕಲಚೇತನರು ಮತ್ತು ರೋಗಗ್ರಸ್ಥ ಪ್ರಯಾಣಿಕರ ಅನುಕೂಲಕ್ಕಾಗಿ ಆರಂಭಿಸಲಾಗಿದೆ. ಈ ಸೇವೆಯಡಿ ವೃದ್ದ ಮತ್ತು ವಿಕಲಚೇತನರು ವೀಲ್ ಚೇರ್ ಮತ್ತು ಬ್ಯಾಟರಿ ಚಾಲಿತ ಕಾರುಗಳ ಬಳಕೆಯನ್ನು ಸುಲಭವಾಗಿಸಲಾಗುವುದು. ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಈ ಸೇವೆ ಲಭ್ಯವಿರಲಿದೆ. ಇದರಡಿ ಸೇವೆಯನ್ನು ಒದಗಿಸುವ ಸಲುವಾಗಿ ರೈಲು ಮಿತ್ರರರನ್ನು ನೇಮಕಮಾಡಲಾಗುವುದು.

Question 10

10. ಇತ್ತೀಚೆಗೆ ರಿಲಯನ್ಸ್ ಕಮ್ಯೂನಿಕೇಷನ್ ಮತ್ತು ಈ ಕೆಳಗಿನ ಯಾವ ಸಂಸ್ಥೆ ತಮ್ಮ ವೈರ್ಲೆಸ್ ವಹಿವಾಟನ್ನು ವಿಲೀನಗೊಳಿಸಲು ನಿರ್ಧರಿಸಿವೆ?

A
ಯೂನಿನಾರ್
B
ಏರ್ ಸೆಲ್
C
ಎಂಟಿಎಸ್
D
ಟಾಟಾ ಡೊಕೊಮೊ
Question 10 Explanation: 
ಏರ್ ಸೆಲ್:

ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಕಮ್ಯುನಿಕೇಷನ್ಸ್ (ಆರ್ಕಾಂ) ಮತ್ತು ಏರ್ಸೆಲ್ ತಮ್ಮ ವೈರ್ಲೆಸ್ ವಹಿವಾಟನ್ನು ಪರಸ್ಪರ ವಿಲೀನಗೊಳಿಸಲುನಿರ್ಧರಿಸಿವೆ. ಏರ್ಸೆಲ್ನ ಪ್ರವರ್ತಕ ಸಂಸ್ಥೆಯಾಗಿರುವ ಮ್ಯಾಕ್ಸಿಸ್ ಕಮ್ಯುನಿಕೇಷನ್ಸ್ ಬೆರ್ಹಾಡ್ (ಎಂಸಿಬಿ) ಮತ್ತು ಆರ್ಕಾಂ, ವಿಲೀನದ ನಂತರ ಅಸ್ತಿತ್ವಕ್ಕೆ ಬರಲಿರುವ ಹೊಸ ಸಂಸ್ಥೆಯಲ್ಲಿ ತಲಾ ಶೇ 50ರಷ್ಟು ಪಾಲು ಬಂಡವಾಳ ಹೊಂದಿರಲಿವೆ. ಆಡಳಿತ ಮಂಡಳಿಯಲ್ಲಿ ಎರಡೂ ಸಂಸ್ಥೆಗಳಿಗೆ ಸಮಾನ ಪ್ರಾತಿನಿಧ್ಯ ಇರಲಿದೆ. ದೇಶಿ ದೂರಸಂಪರ್ಕ ವಲಯದಲ್ಲಿನ ಅತಿದೊಡ್ಡ ವಿಲೀನ ಇದಾಗಿದ್ದು, ಜಂಟಿ ಸಂಸ್ಥೆಯ ಒಟ್ಟು ಆಸ್ತಿ ಮೌಲ್ಯವು ರೂ 65 ಸಾವಿರಕೋಟಿಗಳಷ್ಟಾಗಲಿದೆ.

There are 10 questions to complete.

[button link=”http://www.karunaduexams.com/wp-content/uploads/2016/09/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಸೆಪ್ಟೆಂಬರ್-ಕ್ವಿಜ್-16.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

4 Thoughts to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಸೆಪ್ಟೆಂಬರ್ 16, 2016”

  1. ಸಂತೋಷ್ ಗೌಡರ

    ಧನ್ಯವಾದಗಳು ಸರ್

  2. Sheetal mookanavar

    Super

Leave a Comment

This site uses Akismet to reduce spam. Learn how your comment data is processed.