ರಿಲಾಯನ್ಸ್ ಕಮ್ಯುನಿಕೇಷನ್ಸ್ ಮತ್ತು ಏರ್ ಸೆಲ್ ವಿಲೀನಕ್ಕೆ ಒಪ್ಪಿಗೆ

ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಕಮ್ಯುನಿಕೇಷನ್ಸ್ (ಆರ್ಕಾಂ) ಮತ್ತು ಏರ್ ಸೆಲ್ ತಮ್ಮ ವೈರ್ಲೆಸ್ ವಹಿವಾಟನ್ನು ಪರಸ್ಪರ ವಿಲೀನಗೊಳಿಸಲು ಒಪ್ಪಿಗೆ ನೀಡಿವೆ. ಈ ವಿಲೀನದೊಂದಿಗೆ ಉದಯಿಸಲಿರುವ ಹೊಸ ಸಂಸ್ಥೆಯು ಗ್ರಾಹಕರ ಸಂಖ್ಯೆ ಮತ್ತು ವರಮಾನದ ವಿಷಯದಲ್ಲಿ  ದೇಶದ 4ನೇ ಅತಿದೊಡ್ಡ ದೂರಸಂಪರ್ಕ ಸಂಸ್ಥೆಯಾಗಿ ಹೊರಹೊಮ್ಮಲಿದೆ.

ಪ್ರಮುಖಾಂಶಗಳು:

  • ವಿಲೀನಗೊಂಡ ಕಂಪನಿಯು 850, 900, 1800 ಮತ್ತು 2100 ಮೆಗಾ ಹರ್ಟ್ಜ್ ನಲ್ಲಿ ಒಟ್ಟಾರೆ 448 ಮೆಗಾ ಹರ್ಟ್ಜ್ ಹೊಂದುವ ಮೂಲಕ ದೇಶದಲ್ಲಿ ಎರಡನೇ ಅತಿ ದೊಡ್ಡ ಸ್ಪೆಕ್ಟ್ರಂ ಹೊಂದಿರುವ ಸಂಸ್ಥೆ ಎನಿಸಲಿದೆ.
  • ವಿಲೀನದ ನಂತರ ಅಸ್ತಿತ್ವಕ್ಕೆ ಬರಲಿರುವ ಹೊಸ ಸಂಸ್ಥೆಯಲ್ಲಿ ಎರಡು ಕಂಪನಿಗಳು ತಲಾ ಶೇ 50ರಷ್ಟು ಪಾಲು ಬಂಡವಾಳ ಹೊಂದಿರಲಿವೆ. ಆಡಳಿತ ಮಂಡಳಿಯಲ್ಲಿ ಎರಡೂ ಸಂಸ್ಥೆಗಳಿಗೆ ಸಮಾನ ಪ್ರಾತಿನಿಧ್ಯ ಇರಲಿದೆ.
  • ದೇಶಿ ದೂರಸಂಪರ್ಕ ವಲಯದಲ್ಲಿನ ಅತಿದೊಡ್ಡ ವಿಲೀನ ಇದಾಗಿದ್ದು, ಜಂಟಿ ಸಂಸ್ಥೆಯ ಒಟ್ಟು ಆಸ್ತಿ ಮೌಲ್ಯವು ರೂ 65 ಸಾವಿರಕೋಟಿಗಳಷ್ಟಾಗಲಿದೆ.

500ನೇ ಟೆಸ್ಟ್ ಪಂದ್ಯವನ್ನಾಡುವ ತವಕದಲ್ಲಿ ಭಾರತ ಕ್ರಿಕೆಟ್ ತಂಡ

ಸೆಪ್ಟೆಂಬರ್ 22 ಭಾರತ ಕ್ರಿಕೆಟ್ ಇತಿಹಾಸದಲ್ಲಿ ಮಹತ್ವದ ದಿನ. ಸೆಪ್ಟೆಂಬರ್ 22 ರಂದು ಭಾರತ ತಂಡ ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ನ್ಯೂಜಿಲೆಂಡ್ ವಿರುದ್ಧ 500 ನೇ ಟೆಸ್ಟ್ ಪಂದ್ಯವನ್ನು ಆಡಲಿದೆ. ಆ ಮೂಲಕ 500 ಟೆಸ್ಟ್ ಪಂದ್ಯಗಳನ್ನು ಆಡಿರುವ ಕೆಲವೇ ಕೆಲವು ತಂಡಗಳ ಪಟ್ಟಿಗೆ ಭಾರತ ಕ್ರಿಕೆಟ್ ತಂಡ ಸೇರ್ಪಡೆಗೊಳ್ಳಲಿದೆ. ಭಾರತ ಇದುವರೆಗೂ ಆಡಿರುವ 499 ಟೆಸ್ಟ್ ಪಂದ್ಯಗಳಲ್ಲಿ 129 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. 157 ಪಂದ್ಯಗಳನ್ನು ಸೋತಿದೆ. 212 ಪಂದ್ಯಗಳು ಡ್ರಾ ಆಗಿದ್ದರೆ, 1 ಪಂದ್ಯ ಟೈ ಆಗಿದೆ.

ಪ್ರಮುಖಾಂಶಗಳು:

  • ಇಂಗ್ಲೆಂಡ್ ತಂಡ 976 ಟೆಸ್ಟ್ ಪಂದ್ಯಗಳನ್ನು ಆಡುವ ಮೂಲಕ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿರುವ ತಂಡ ಎನಿಸಿದೆ.
  • ಆಸ್ಟ್ರೇಲಿಯಾ 791 ಹಾಗೂ ವೆಸ್ಟ್ ಇಂಡೀಸ್ 517 ಟೆಸ್ಟ್ ಪಂದ್ಯಗಳನ್ನಾಡುವ ಮೂಲಕ ಕ್ರಮವಾಗಿ 2 ಹಾಗೂ 3 ನೇ ಸ್ಥಾನದಲ್ಲಿವೆ.
  • 1932 ರಲ್ಲಿ ಇಂಗ್ಲೆಂಡ್ ವಿರುದ್ದ ಟೆಸ್ಟ್ ಪಂದ್ಯವನ್ನಾಡುವ ಮೂಲಕ ಭಾರತ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿತು. ಸಿ.ಕೆ ನಾಯ್ಡು ರವರು ಭಾರತ ತಂಡದ ನಾಯಕರಾಗಿದ್ದರು.
  • ಲಾಲಾ ಅಮರ್ ನಾಥ್ 1933 ರಲ್ಲಿ ಇಂಗ್ಲೆಂಡ್ ವಿರುದ್ಧ ಶತಕ ಗಳಿಸಿದ್ದು, ಭಾರತದ ಪರ ಮೊದಲ ಶತಕವಾಗಿದೆ.
  • ಪಾಲಿ ಉಮ್ರಿಗರ್ 1956 ರಲ್ಲಿ ನ್ಯೂಜಿಲೆಂಡ್ ವಿರುದ್ಧ ಮೊದಲ ದ್ವಿಶತಕ ಗಳಿಸಿದರೆ, 2004 ರಲ್ಲಿ ವೀರೇಂದ್ರ ಸೆಹ್ವಾಗ್ ಪಾಕ್ ವಿರುದ್ಧ ಭಾರತದ ಮೊದಲ ತ್ರಿ ಶತಕ ಗಳಿಸಿದ್ದಾರೆ. 1999 ರಲ್ಲಿ ಪಾಕ್ ವಿರುದ್ಧ ಅನಿಲ್ ಕುಂಬ್ಳೆ ಒಂದೇ ಇನ್ನಿಂಗ್ಸ್ ನಲ್ಲಿ ಎಲ್ಲಾ 10 ವಿಕೆಟ್ ಗಳಿಸಿ ದಾಖಲೆ ಬರೆದಿದ್ದಾರೆ.

ಶ್ರೀಶ್ರೀ ರವಿಶಂಕರ್ ಗುರೂಜಿ ಅವರಿಗೆ “ಸೈಮನ್ ವಿಸೆಂಥಲ್ ಮಾನವತಾವಾದಿ ಪ್ರಶಸ್ತಿ”

ಆರ್ಟ್ ಆಫ್ ಲೀವಿಂಗ್ ಸಂಸ್ಥಾಪಕ ಮತ್ತು ಆದ್ಯಾತ್ಮಿಕ ಗುರು ಶ್ರೀಶ್ರೀ ರವಿಶಂಕರ್ ಗುರೂಜಿ ಅವರನ್ನು ‘ಸೈಮನ್ ವಿಸೆಂಥಲ್ ಮಾನವತಾವಾದಿ ಪ್ರಶಸ್ತಿ’ಗೆ ಆಯ್ಕೆಮಾಡಲಾಗಿದೆ. ಜೇರುಸಲೇಂ ಮಾನವ ಹಕ್ಕುಗಳ ಸಂಘಟನೆ  ಈ ಪ್ರಶಸ್ತಿಯನ್ನು ನೀಡುತ್ತಿದೆ. ಪ್ರಶಸ್ತಿಯನ್ನು ಸೆಪ್ಟೆಂಬರ್ 21 ರಂದು ದೆಹಲಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ವಿತರಿಸಲಾಗುವುದು.

  • ಮಾನವನ ಘನತೆ, ಅಂತರ್ ಧರ್ಮೀಯ ಸಂಬಂಧಗಳು ಮತ್ತು ಜನರಲ್ಲಿ ಸಹನೆ ಪಸರಿಸುವ ನಿಟ್ಟಿನಲ್ಲಿ ಗುರೂಜಿ ಸಲ್ಲಿಸಿರುವ ಸೇವೆಯನ್ನು ಗಮನಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
  • ಮಾನವ ಹಕ್ಕುಗಳ ರಕ್ಷಣೆಗೆ ಜೇರುಸಲೇಂ ಮಾನಹ ಹಕ್ಕು ಸಂಘಟನೆ ಕೈಗೊಂಡ ಕಾರ್ಯಕ್ಕೆ ರವಿಶಂಕರ್ ಗುರೂಜಿ ಕೈಜೋಡಿಸಿದ್ದರು.
    ಅಲ್ಲದೇ, ಭಾರತದಲ್ಲಿ 2009ರಿಂದ ವ್ಯವಹಾರದ ಪ್ರಮುಖ ಸಾಧನವಾಗಿ ಬಳಸಲಾಗುತ್ತಿರುವ ಹಿಟ್ಲರ್ನ ಪುಸ್ತಕ ‘ಮೈನ್ ಕಾಂಫ್’ನ ಮಾರಾಟಕ್ಕೆ ಈ ಸಂಘಟನೆ ವಿರೋಧ ವ್ಯಕ್ತಪಡಿಸಿತ್ತು ಇದನ್ನು ರವಿಶಂಕರ್ ಗುರೂಜಿ ಬೆಂಬಲಿಸಿದ್ದರು.
  • ಗುರೂಜಿ ಅವರಿಗೆ ಈಗಾಗಲೇ ಅನೇಕ ರಾಷ್ಟ್ರೀಯ ಅಂತಾರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ.
  • 2016 ರಲ್ಲಿ ಅವರಿಗೆ ದೇಶದ ಎರಡನೇ ಅತ್ಯುನ್ನತ ಪ್ರಶಸ್ತಿಯಾದ ಪದ್ಮ ವಿಭೂಷಣವನ್ನು ನೀಡಲಾಗಿದೆ.

ಗೋವಾದ ಪಣಜಿಯಲ್ಲಿ ಬ್ರಿಕ್ಸ್ ರಾಷ್ಟ್ರಗಳ ಪರಿಸರ ಸಚಿವರ ಸಭೆ ಆರಂಭ

ಬ್ರಿಕ್ಸ್ ರಾಷ್ಟ್ರಗಳ ಪರಿಸರ ಸಚಿವರ (Environment Ministers) ಸಭೆ ಗೋವಾದ ಪಣಜಿಯಲ್ಲಿ ಆರಂಭಗೊಂಡಿದೆ. ವಾಯು ಹಾಗೂ ಜಲ ಮಾಲಿನ್ಯ ಮತ್ತು ಹವಾಮಾನ ಬದಲಾವಣೆಯ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರವನ್ನು ಬಲಪಡಿಸುವುದು ಈ ಸಭೆಯಲ್ಲಿ ಪ್ರಮುಖವಾಗಿ ಚರ್ಚಿಸಲಾಗುವುದು. ವಿಷಯವಾಗಿದೆ ಚರ್ಚಿಸಲಿದ್ದಾರೆ. ಎರಡು ದಿನಗಳ ಸಭೆಯನ್ನು ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆಯ ಸಹಾಯಕ ಸಚಿವ ಅನಿಲ್ ಮಾಧವ ದವೆ ಉದ್ಘಾಟಿಸಿದರು.

  • ಬ್ರಿಕ್ಸ್ ರಾಷ್ಟ್ರಗಳ ಸಚಿವರು ಪರಸ್ಪರ ಹಿತಾಸಕ್ತಿಯ ಸೈದ್ಧಾಂತಿಕ ಕ್ಷೇತ್ರಗಳು ಹಾಗೂ ವಾಯು, ಜಲ ಮಾಲಿನ್ಯ, ಘನ-ದ್ರವ್ಯ ತ್ಯಾಜ್ಯ ವಿಲೇವಾರಿ, ಹವಾಮಾನ ಬದಲಾವಣೆ ಮತ್ತು ಜೀವ ವೈವಿಧ್ಯದ ರಕ್ಷಣೆಯಂತಹ ಪ್ರಮುಖ ಕ್ಷೇತ್ರಗಳಲ್ಲಿ ಸಹಕಾರಕ್ಕಾಗಿ ಆದ್ಯತೆಯ ಕ್ರಮಗಳ ಕುರಿತು ಚರ್ಚಿಸಲಾಯಿತು.
  • ಪರಿಸರ ಸಂಬಂಧಿತ ವಿಷಯಗಳ ಸಲುವಾಗಿ ಜಂಟಿ ಕಾರ್ಯಪಡೆಯನ್ನು ಸ್ಥಾಪಿಸಲು ಬ್ರಿಕ್ಸ್ ರಾಷ್ಟ್ರಗಳು ಸಮ್ಮತಿಸಿದವು.
  • ಪ್ಯಾರಿಸ್ ಪರಿಸರ ಒಪ್ಪಂದಕ್ಕೆ ಬ್ರಿಕ್ಸ್ ರಾಷ್ಟ್ರಗಳ ಸಂಪೂರ್ಣ ಸಹಕಾರವಿದ್ದು, ಪರಿಸರ ಮಾಲಿನ್ಯ ನಿಯಂತ್ರಣದಲ್ಲಿ ಬ್ರಿಕ್ಸ್ ರಾಷ್ಟ್ರಗಳ ಪಾತ್ರ ಮಹತ್ವದು ಎಂದು ಘೋಷಿಸಿದವು.
  • ಈ ಸಭೆಯು ಮುಂದಿನ ತಿಂಗಳು ಗೋವಾದಲ್ಲಿ ನಡೆಯಲಿರುವ ಬ್ರಿಕ್ಸ್ ರಾಷ್ಟ್ರಗಳ ಮುಖ್ಯಸ್ಥರ ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ಕೇಂದ್ರದ ವಿವಿಧ ಸಚಿವಾಲಯಗಳು ಹಮ್ಮಿಕೊಳ್ಳುತ್ತಿರುವ ಸರಣಿ ಸಭೆಗಳಲ್ಲಿ ಒಂದಾಗಿದೆ.

ಭಾರತೀಯ ಅಮೆರಿಕನ್ ವೈದ್ಯ ಅಬ್ರಹಾಂ ವರ್ಗೀಸ್ ರವರಿಗೆ 2015 ರಾಷ್ಟ್ರೀಯ ಮಾನವತಾ ಪದಕ

ಭಾರತೀಯ ಅಮೆರಿಕನ್ ವೈದ್ಯ ಹಾಗೂ ಲೇಖಕ ಅಬ್ರಹಾಂ ವರ್ಗೀಸ್ ಅವರನ್ನು 2015ರ ಪ್ರತಿಷ್ಠಿತ ರಾಷ್ಟ್ರೀಯ ಮಾನವತಾ ಪದಕ (2015 National Humanities Medal)ಕ್ಕೆ ಆಯ್ಕೆಮಾಡಲಾಗಿದೆ. ವರ್ಗೀಸ್ ಮತ್ತು ಇತರೆ 11 ಮಂದಿಯನ್ನು ಈ ಪದಕಕ್ಕೆ ಆಯ್ಕೆಮಾಡಲಾಗಿದ್ದು, ಅಮೆರಿಕಾದ ಅಧ್ಯಕ್ಷ ಬರಾಕ್ ಒಬಾಮ ಅವರು ಸೆಪ್ಟೆಂಬರ್ 21 ರಂದು ವಾಷಿಂಗ್ಟನ್ ನಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ. ರೋಗಿಯೇ ಔಷಧಿ ಉದ್ಯಮದ ಕೇಂದ್ರವೆಂದು ‘ತಮಗೆ’ ಜ್ಞಾಪಿಸುತ್ತಿರುವುದಕ್ಕಾಗಿ ವರ್ಗೀಸ್ರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ.

ಅಬ್ರಹಾಂ ವರ್ಗೀಸ್ ಬಗ್ಗೆ:

  • ವರ್ಗಿಸ್ ಅವರು ಇಥೋಪಿಯಾದಲ್ಲಿ ಜನಿಸಿದ್ದಾರೆ. ಇಥೋಪಿಯಾದಲ್ಲಿ ಶಿಕ್ಷಕರಾಗಿದ್ದ ಕೇರಳ ಮೂಲದ ದಂಪತಿಯ ಮಗ
  • ಪ್ರಸ್ತುತ ಇವರು ಸ್ಟಾಂಡರ್ಡ್ ಸ್ಕೂಲ್ ಆಫ್ ಮೆಡಿಸಿನ್ನಲ್ಲಿ ಔಷಧ ಶಾಸ್ತ್ರ ಪ್ರೊಫೆಸರ್ ಆಗಿದ್ದಾರೆ. ವೈದ್ಯರಲ್ಲದೇ ಲೇಖಕರು ಆಗಿರುವ ಇವರು ‘ಮೈ ಓನ್ ಕಂಟ್ರಿ’ ಹಾಗೂ ‘ಕಟ್ಟಿಂಗ್ ಫಾರ್ ಸ್ಟೋನ್’ ಸಹಿತ ಅನೇಕ ಜನಪ್ರಿಯ ಪುಸ್ತಕಗಳನ್ನು ಬರೆದಿದ್ದಾರೆ.

ರಾಷ್ಟ್ರೀಯ ಮಾನವತಾ ಪದಕ:

  • ರಾಷ್ಟ್ರೀಯ ಮಾನವತಾ ಪದಕವನ್ನು 1997 ರಿಂದ ನೀಡಲಾಗುತ್ತಿದೆ.
  • ರಾಷ್ಟ್ರೀಯ ಮಾನವತಾ ಪದಕವನ್ನು ದೇಶದ ತಿಳುವಳಿಕೆ, ಇತಿಹಾಸ, ಭಾಷೆ, ತತ್ವಶಾಸ್ತ್ರ, ಸಾಹಿತ್ಯ ಮತ್ತು ಇತರ ಮಾನವೀಯ ವಿಷಯಗಳನ್ನು ವಿಸ್ತಾರಗೊಳಿಸಲು ಸೇವೆ ನೀಡಿದ ವ್ಯಕ್ತಿ ಅಥವಾ ಸಂಘಟನೆ ನೀಡಲಾಗುವುದು.

ಭಾರತೀಯ ಮೂಲದ ವಿಜ್ಞಾನಿ ರಮೇಶ್ ರಸ್ಕರ್ ಅವರಿಗೆ ಪ್ರತಿಷ್ಠಿತ ಲೆಮಲ್ಸನ್ ಎಂಐಟಿ ಪ್ರಶಸ್ತಿ

ಭಾರತ ಮೂಲದ ವಿಜ್ಞಾನಿ ರಮೇಶ್ ರಸ್ಕರ್ ಅವರಿಗೆ ಪ್ರತಿಷ್ಠಿತ ಲೆಮಲ್ಸನ್ ಎಂಐಟಿ ಪ್ರಶಸ್ತಿ ನೀಡಲಾಗಿದೆ. ನಾಸಿಕ್ ಮೂಲದ 46 ವರ್ಷದ ರಮೇಶ್ ಮಸಚುಸೆಟ್ಟ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಮೀಡಿಯಾ ಲ್ಯಾಬ್ನಲ್ಲಿರುವ ಕ್ಯಾಮರ ಕಲ್ಚರ್ ಸಂಶೋಧನಾ ಗುಂಪಿನ ಸ್ಥಾಪಕ ಹಾಗೂ ಮೀಡಿಯ ಆರ್ಟ್ಸ್ ಆಯಂಡ್ ಸಯನ್ಸಸ್ನ ಅಸೋಸಿಯೇಟ್ ಪ್ರೊಫೆಸರ್ ಆಗಿದ್ದಾರೆ. ಅಲ್ಟ್ರಾ-ಫಾಸ್ಟ್ ಇಮೇಜಿಂಗ್ ಕ್ಯಾಮರವನ್ನು ಅಭಿವೃದ್ದಿಪಡಿಸಿರುವುದಕ್ಕಾಗಿ ಇವರನ್ನು ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಈ ಕ್ಯಾಮರ ಬಳಸಿ ಪುಸ್ತಕವನ್ನು ತೆರೆಯದೆಯೇ ಕೆಲವು ಒಳ ಪುಟಗಳನ್ನು ಓದಲು ಸಾಧ್ಯವಾಗಲಿದೆ.

ರಮೇಶ್ ರಸ್ಕರ್ ಬಗ್ಗೆ:

  • ರಮೇಶ್ ಅವರು ಮೂಲತ ಮಹಾರಾಷ್ಟ್ರದ ನಾಸಿಕ್ ನವರು
  • ಪ್ರಸ್ತುತ ಇವರು ಮಸಚುಸೆಟ್ಟ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಮೀಡಿಯಾ ಲ್ಯಾಬ್ನಲ್ಲಿರುವ ಕ್ಯಾಮರ ಕಲ್ಚರ್ ಸಂಶೋಧನಾ ಗುಂಪಿನ ಸ್ಥಾಪಕ ಹಾಗೂ ಮೀಡಿಯ ಆರ್ಟ್ಸ್ ಆಯಂಡ್ ಸೈನ್ಸ್ ಅಸೋಸಿಯೇಟ್ ಪ್ರೊಫೆಸರ್ ಆಗಿದ್ದಾರೆ.
  • ಇವರು 75ಕ್ಕೂ ಹೆಚ್ಚು ಪೇಟೆಂಟ್ ಹಾಗೂ 120ಕ್ಕೂ ಹೆಚ್ಚು ವಿಮರ್ಶೆಗಳನ್ನು ಪ್ರಕಟಿಸಿದ್ದಾರೆ.
  • ಇವರ ಫೆಮ್ಟ ಫೋಟೊಗ್ರಫಿ ಹಾಗೂ ಅಭಿವೃದ್ಧಿಶೀಲ ಜಗತ್ತಿಗಾಗಿ ಅವರು ರೂಪಿಸಿದ ಕಡಿಮೆ ವೆಚ್ಚದ ಕಣ್ಣು ಆರೈಕೆ ವಿಧಾನಗಳು ಅವರಿಗೆ ಪ್ರಸಿದ್ಧಿಯನ್ನು ತಂದುಕೊಟ್ಟಿವೆ.

ಪ್ರಶಸ್ತಿಯ ಬಗ್ಗೆ:

  • ಮಸಚುಸೆಟ್ಟ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸ್ಕೂಲ್ ಆಫ್ ಇಂಜನಿಯರಿಂಗ್ ಪ್ರಶಸ್ತಿಯನ್ನು ನೀಡುತ್ತಿದೆ. ಪ್ರಶಸ್ತಿಯನ್ನು 1994 ರಲ್ಲಿ ಜೆರೊಮ್ ಎಚ್ ಲೆಮಲ್ಸನ್ ಸ್ಥಾಪಿಸಿದರು.
  • ವಿಜ್ಞಾನ ಮತ್ತು ತಂತ್ರಜ್ಞಾನ ಮೂಲಕ ವಿಶ್ವದ ಅಭಿವೃದ್ದಿ ಶ್ರಮಿಸುವ ಅಮೆರಿಕಾ ಸಂಶೋದಕರಿಗೆ ಪ್ರಶಸ್ತಿಯನ್ನು ನೀಡಲಾಗುತ್ತದೆ.
  • ಪ್ರಶಸ್ತಿಯು 500000 ಯುಎಸ್ ಡಾಲರ್ ಮೊತ್ತವನ್ನು ಒಳಗೊಂಡಿದೆ.

Leave a Comment

This site uses Akismet to reduce spam. Learn how your comment data is processed.