ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಸೆಪ್ಟೆಂಬರ್ 8, 2016

Question 1

1. ಯಾವ ಬ್ಯಾಂಕ್ ಇತ್ತೀಚೆಗೆ ಪವರ್ ಬ್ಯಾಂಕಿಂಗ್ ಕಾರ್ಯಾಚರಣೆಗಾಗಿ “ಸಾಫ್ಟವೇರ್ ರೊಬೊಟಿಕ್ಸ್ (Software Robotics)” ಪರಿಚಯಿಸಿದ ದೇಶದ ಮೊದಲ ಬ್ಯಾಂಕ್ ಎನಿಸಿದೆ?

A
HDFC
B
ICICI
C
Axis
D
Corporation
Question 1 Explanation: 
ICICI:

ಭಾರತದ ಅತಿದೊಡ್ಡ ಖಾಸಗಿ ಬ್ಯಾಂಕ್ ಐಸಿಐಸಿಐ ಬ್ಯಾಂಕ್ ಪವರ್ ಬ್ಯಾಂಕಿಂಗ್ ಕಾರ್ಯಾಚರಣೆಗೆ ಸಾಪ್ಟವೇರ್ ರೊಬೊಟಿಕ್ಸ್ (Software Robotics) ಅನ್ನು ಪರಿಚಯಿಸಿದೆ. ಆ ಮೂಲಕ ಈ ವಿನೂತನ ತಂತ್ರಜ್ಞಾನವನ್ನು ಜಾರಿಗೆ ತಂದ ದೇಶದ ಮೊದಲ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಹಾಗೂ ಜಾಗತಿಕ ಮಟ್ಟದಲ್ಲಿ ಈ ತಂತ್ರಜ್ಞಾನದ ಮೊರೆ ಹೋಗಿರುವ ಕೆಲವೇ ಬ್ಯಾಂಕ್ ಗಳಲ್ಲಿ ಇದು ಒಂದಾಗಿದೆ.

Question 2

2.ಸಂಕೋಶ್ (Sankosh) ನದಿಯು ಈ ಕೆಳಗಿನ ಯಾವ ಎರಡು ರಾಜ್ಯಗಳ ಗಡಿಭಾಗವಾಗಿದೆ?

A
ಬಿಹಾರ ಮತ್ತು ಪಶ್ಚಿಮ ಬಂಗಾಳ
B
ಅರುಣಾಚಲ ಪ್ರದೇಶ ಮತ್ತು ಅಸ್ಸಾಂ
C
ಬಿಹಾರ್ ಮತ್ತು ಜಾರ್ಖಂಡ್
D
ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ
Question 2 Explanation: 
ಅರುಣಾಚಲ ಪ್ರದೇಶ ಮತ್ತು ಅಸ್ಸಾಂ:

ಸಂಕೋಶ್ ನದಿಯು ಅರುಣಾಚಲ ಪ್ರದೇಶ ಮತ್ತು ಅಸ್ಸಾಂ ರಾಜ್ಯಗಳನ್ನು ಬೇರ್ಪಡಿಸುವ ಮೂಲಕ ಎರಡು ರಾಜ್ಯಗಳ ಗಡಿಭಾಗವಾಗಿ ಮಾರ್ಪಟ್ಟಿದೆ.

Question 3

3. ರಾಷ್ಟ್ರೀಯ ಮಾದರಿ ಸಮೀಕ್ಷೆ ಕಚೇರಿ (NSSO) ಇತ್ತೀಚೆಗೆ ಬಿಡುಗಡೆ ಮಾಡಿದ ಸ್ವಚ್ಚ ರಾಜ್ಯಗಳ ಪಟ್ಟಿಯಲ್ಲಿ ಪ್ರಥಮ ಸ್ಥಾನಗಳಿಸಿರುವ ರಾಜ್ಯ ಯಾವುದು?

A
ಕೇರಳ
B
ಸಿಕ್ಕಿಂ
C
ಕರ್ನಾಟಕ
D
ಪಂಜಾಬ್
Question 3 Explanation: 
ಸಿಕ್ಕಿಂ :

ರಾಜ್ಯ ದೇಶದ ಅತ್ಯಂತ ಸ್ವಚ್ಚ ರಾಜ್ಯ ಎಂಬ ಹಿರಿಮೆಗೆ ಪಾತ್ರವಾಗಿದೆ. ರಾಷ್ಟ್ರೀಯ ಮಾದರಿ ಸಮೀಕ್ಷೆ ಕಚೇರಿ (NSSO) ಬಿಡುಗಡೆಗೊಳಿಸಿರುವ ಸ್ವಚ್ಛತೆಯ ಸೂಚ್ಯಂಕದಲ್ಲಿ ಕರ್ನಾಟಕ 18ನೇ ಸ್ಥಾನ ಪಡೆದಿದೆ. ಸಿಕ್ಕಿಂ, ಕೇರಳ, ಮಿಜೋರಾಂ ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದುಕೊಂಡಿವೆ. ಕೊನೆಯ ಸ್ಥಾನದಲ್ಲಿ ಜಾರ್ಖಂಡ್ ಇದೆ.

Question 4

4. “2016 ಎಂಎಂ ಬೆನ್ನೆಟ್ಸ್ ಪ್ರಶಸ್ತಿ”ಗೆ ಆಯ್ಕೆಯಾಗಿರುವ “Into The Hidden Valley” ಕಾದಂಬರಿಯ ಲೇಖಕರು ಯಾರು?

A
ಸ್ಟುವರ್ಟ್ ಬ್ಲಾಕ್ ಬರ್ನ್
B
ಜೇಮ್ಸ್ ವ್ಯಾಟ್ಸನ್
C
ಜೆ.ಕೆ ರೌಲಿಂಗ್
D
ಕಿರಣ್ ದೇಸಾಯಿ
Question 4 Explanation: 
ಸ್ಟುವರ್ಟ್ ಬ್ಲಾಕ್ ಬರ್ನ್:

ಅರುಣಾಚಲ ಪ್ರದೇಶ ಅಪತಣಿ (Apatani) ಬುಡಕಟ್ಟು ಜನಾಂಗ ಕುರಿತಾದ ಸ್ಟುವರ್ಟ್ ಬ್ಲಾಕ್ ಬರ್ನ್ ರವರ “Into The Hidden Valley” ಕಾದಂಬರಿಯನ್ನು ಪ್ರತಿಷ್ಠಿತ ಎಂಎಂ ಬೆನ್ನೆಟ್ಸ್ ಪ್ರಶಸ್ತಿ (2016 MM Bennetts Award)ಗೆ ಆಯ್ಕೆಮಾಡಲಾಗಿದೆ. ಬ್ರಿಟಿಷ್ ಆಡಳಿತಾವಧಿ ಈ ಬುಡಕಟ್ಟು ಜನಾಂಗದ ಮೇಲೆ ಹೇಗೆ ಪರಿಣಾಮ ಬೀರಿತು ಎಂಬುದರ ಬಗ್ಗೆ ಕಾದಂಬರಿಯಲ್ಲಿ ಬಣ್ಣಿಸಲಾಗಿದೆ.

Question 5

5. ಕೇಂದ್ರ ಸರ್ಕಾರ ಇತ್ತೀಚೆಗೆ “ಸ್ವದೇಶ ದರ್ಶನ” ಯೋಜನೆಯಡಿ ಐದು ರಾಜ್ಯಗಳಲ್ಲಿ ಪ್ರವಾಸೋದ್ಯಮ ಉತ್ತೇಜಿಸಲು ರೂ 450 ಕೋಟಿಗೆ ಒಪ್ಪಿಗೆ ನೀಡಿದೆ. ಈ ಕೆಳಗಿನ ಯಾವ ರಾಜ್ಯ ಇದಕ್ಕೆ ಸಂಬಂಧಿಸಿಲ್ಲ?

A
ಮಧ್ಯ ಪ್ರದೇಶ
B
ಸಿಕ್ಕಿಂ
C
ಕರ್ನಾಟಕ
D
ತಮಿಳು ನಾಡು
Question 5 Explanation: 
ಕರ್ನಾಟಕ:

ದೇಶದ ಐದು ರಾಜ್ಯಗಳಾದ ಮಧ್ಯ ಪ್ರದೇಶ, ಉತ್ತರಖಂಡ್, ತಮಿಳುನಾಡು, ಉತ್ತರ ಪ್ರದೇಶ ಮತ್ತು ಸಿಕ್ಕಿಂ ರಾಜ್ಯಗಳಲ್ಲಿ “ಸ್ವದೇಶಿ ದರ್ಶನ” ಯೋಜನೆಯಡಿ ಪ್ರವಾಸೋದ್ಯಮವನ್ನು ಅಭಿವೃದ್ದಿಪಡಿಸುವ ಸಲುವಾಗಿ ಕೇಂದ್ರ ಸರ್ಕಾರ ರೂ 450 ಕೋಟಿಯನ್ನು ಬಿಡುಗಡೆಗೊಳಿಸಲು ಒಪ್ಪಿಗೆ ಸೂಚಿಸಿದೆ. ಅದರಂತೆ ಮಧ್ಯ ಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ಪರಂಪರಿಕ ವರ್ತುಲ (Heritage Circuit), ಉತ್ತರ ಪ್ರದೇಶದಲ್ಲಿ ರಾಮಾಯಣ ವರ್ತುಲ, ಸಿಕ್ಕಿಂನಲ್ಲಿ ಈಶಾನ್ಯ ವರ್ತುಲ ಮತ್ತು ತಮಿಳುನಾಡಿನಲ್ಲಿ ಕರಾವಳಿ ವರ್ತುಲ ಅಭಿವೃದ್ದಿಪಡಿಸಲು ಕೇಂದ್ರ ಪ್ರವಾಸೋದ್ಯಮ ಸಚಿವಾಲಯ ಸಮ್ಮತಿಸಿದೆ.

Question 6

6. ಇತ್ತೀಚೆಗೆ ಭಾರತ ಮತ್ತು ಚಿಲಿ ಸರ್ಕಾರ ಆದ್ಯತಾ ವ್ಯಾಪಾರ ಒಪ್ಪಂದವನ್ನು ವಿಸ್ತರಿಸಲು ಒಪ್ಪಂದಕ್ಕೆ ಸಹಿಹಾಕಿವೆ. ಈ ಕೆಳಗಿನ ಯಾವ ವರ್ಷದಲ್ಲಿ ಉಭಯ ದೇಶಗಳ ನಡುವೆ ಆದ್ಯತಾ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಾಗಿದೆ?

A
2006
B
2010
C
2012
D
2015
Question 6 Explanation: 
2006:

ಭಾರತ ಮತ್ತು ಚಿಲಿ ನಡುವೆ ಪ್ರಸ್ತುತ ಚಾಲ್ತಿಯಲ್ಲಿರುವ ಆದ್ಯತಾ ವ್ಯಾಪಾರ ಒಪ್ಪಂದವನ್ನು ವಿಸ್ತರಿಸುವ ಒಡಂಬಡಿಕೆಗೆ ಭಾರತ-ಚಿಲಿ ಸಹಿ ಹಾಕಿದವು. ಆ ಮೂಲಕ ಮತ್ತಷ್ಟು ವಸ್ತುಗಳನ್ನು ಒಪ್ಪಂದಡಿ ಸೇರ್ಪಡೆಗೊಳಿಸಲಾಗಿದೆ. ಭಾರತ ಮತ್ತು ಚಿಲಿ ನಡುವೆ ಆದ್ಯತಾ ವ್ಯಾಪಾರ ಒಪ್ಪಂದಕ್ಕೆ ಮಾರ್ಚ್ 2006 ರಲ್ಲಿ ಸಹಿ ಮಾಡಲಾಗಿದ್ದು, ಆಗಸ್ಟ್ 2007 ರಿಂದ ಜಾರಿಗೆ ಬಂದಿದೆ.

Question 7

7. ಭಾರತ ಮತ್ತು ಅಮೆರಿಕಾ ಸೇನಾ ಪಡೆಗಳ “ಯುದ್ದ್ ಅಭ್ಯಾಸ್” ಸಮರಾಭ್ಯಾಸ ಸೆಪ್ಟೆಂಬರ್ 14 ರಿಂದ ಯಾವ ರಾಜ್ಯದಲ್ಲಿ ನಡೆಯಲಿದೆ?

A
ಗೋವಾ
B
ಉತ್ತರಖಂಡ್
C
ಉತ್ತರ ಪ್ರದೇಶ
D
ರಾಜಸ್ತಾನ
Question 7 Explanation: 
ಉತ್ತರಖಂಡ್:

ಭಾರತ ಮತ್ತು ಅಮೆರಿಕಾ ಸೇನಾಪಡೆಗಳ ಯುದ್ದ್ ಅಭ್ಯಾಸ್” ಜಂಟಿ ಸಮರಾಭ್ಯಾಸ ಉತ್ತರಖಂಡದ ಚೌಬಾಟಿಯಾದಲ್ಲಿ ಸೆಪ್ಟೆಂಬರ್ 14 ರಿಂದ 17 ವರೆಗೆ ನಡೆಯಲಿದೆ. ಭಾರತದ ಮದ್ರಾಸ್ ರೆಜಿಮೆಂಟ್ ಯೋಧರು ಈ ಅಭ್ಯಾಸದಲ್ಲಿ ಭಾಗವಹಿಸಲಿದ್ದಾರೆ.

Question 8

8. ಇತ್ತೀಚೆಗೆ ಯಶಸ್ವಿಯಾಗಿ ಪ್ರಯೋಗಾರ್ಥ ಹಾರಾಟ ನಡೆಸಿ ಸುದ್ದಿಯಲ್ಲಿದ್ದ ಸ್ವದೇಶಿ ನಿರ್ಮಿತ “ಲೈಟ್ ಯುಟಿಲಿಟಿ ಹೆಲಿಕಾಪ್ಟರ್ (Light Utility Helicopter) ಅನ್ನು ಈ ಕೆಳಗಿನ ಯಾವ ಸಂಸ್ಥೆ ಅಭಿವೃದ್ದಿಪಡಿಸಿದೆ?

A
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL)
B
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ದಿ ಸಂಸ್ಥೆ (DRDO)
C
ಏರೋನಾಟಿಕ್ ಡೆವೆಲಪ್ಮೆಂಟ್ ಎಸ್ಟಾಬ್ಲಿಷ್ಮೆಂಟ್ (ADE)
D
ಭಾರತ್ ಎಲೆಕ್ಟ್ರಿಕಲ್ಸ್ ಲಿಮೆಟೆಡ್ (BEL)
Question 8 Explanation: 
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL):

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಅಭಿವೃದ್ದಿಪಡಿಸಿರುವ ಸ್ವದೇಶಿ ನಿರ್ಮಿತ ಲೈಟ್ ಯುಟಿಲಿಟಿ ಹೆಲಿಕಾಪ್ಟರ್ ಸಿದ್ಧವಾಗಿದ್ದು, ಹೆಎಚ್ ಎಲ್ ವಿಮಾನ ನಿಲ್ದಾಣದಲ್ಲಿ ಹೆಲಿಕಾಪ್ಟರ್ ತಾಂತ್ರಿಕ ಪರೀಕ್ಷಾರ್ಥ ಹಾರಾಟ ಯಶಸ್ವಿಯಾಗಿದೆ. ಹೆಚ್ ಎಎಲ್ ನ ಇಬ್ಬರು ನುರಿತ ಪೈಲಟ್ ಗಳು ಎಲ್ ಯು ಹೆಚ್ ಅನ್ನು ಸುಮಾರು 15 ನಿಮಿಷಗಳ ಕಾಲ ಚಲಾಯಿಸಿದ್ದು, ಹೆಲಿಕಾಪ್ಟರ್ ತಾಂತ್ರಿಕವಾಗಿ ಸಮರ್ಥವಾಗಿದೆ ಎಂದು ಹೇಳಿದ್ದಾರೆ. ರಕ್ಷಣಾ ಇಲಾಖೆಯ ಮೂಲಗಳು ತಿಳಿಸಿರುವಂತೆ ಹಾಲಿ ಇರುವ ಭಾರತೀಯ ಸೇನೆಯ ಹಳೆಯ ಚೀತಾ ಮತ್ತು ಚೇತಕ್ ಹೆಲಿಕಾಪ್ಟರ್ ಗಳಿಗೆ ಪರ್ಯಾಯವಾಗಿ ಕಾರ್ಯನಿರ್ವಹಿಸಲು ಹೆಚ್ಎಎಲ್ ಈ ಎಲ್ ಯುಹೆಚ್ ಹೆಲಿಕಾಪ್ಟರ್ ಅನ್ನು ಸಿದ್ಧಪಡಿಸಿದೆ ಎಂದು ಹೇಳಲಾಗುತ್ತಿದೆ. ಹೆಎಚ್ ಎಲ್ ನಿರ್ಮಿತ ಎಲ್ ಯುಹೆಚ್ ಹೆಲಿಕಾಪ್ಟರ್ 750 ಕಿ.ವ್ಯಾಟ್ನ ಸಫ್ರಾನ್ ಎಚ್ಇ ಆರ್ಡಿಡೆನ್ 1 ಯು. ಇಂಜಿನ್ ಹೊಂದಿದ್ದು, ತನ್ನ ಭಾರ ಸೇರಿದಂತೆ ಒಟ್ಟು 3,150 ಕೆ.ಜಿ. ತೂಕದ ಸಾಮಗ್ರಿ ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿದೆ. ಈ ಹೆಲಿಕಾಪ್ಟರ್ ಗೆ ಒಮ್ಮೆ ಇಂಧನ ತುಂಬಿಸಿದರೆ ಸುಮಾರು 350 ಕಿ.ಮೀ ಗಳ ವರೆಗೂ ಸಾಗ ಬಲ್ಲ ಸಾಮರ್ಥ್ಯವನ್ನು ಈ ಕಾಪ್ಟರ್ ಹೊಂದಿದ್ದು, 6.5 ಕಿ.ಮೀ. ಎತ್ತರದಲ್ಲಿ ಹಾರಬಲ್ಲದಾಗಿದೆ. ಇಬ್ಬರು ಪೈಲಟ್ ಗಳು ಸೇರಿದಂತೆ ಒಟ್ಟು 8 ಮಂದಿ ಆಸೀನರಾಗಬಹುದಾಗಿದ್ದು, ಸಮುದ್ರ ಮಟ್ಟದಿಂದ ಹಿಮಾಲಯದ ಎತ್ತರದವರೆಗೂ ಈ ಲಘು ಹೆಲಿಕಾಪ್ಟರ್ ಹಾರುವ ಸಾಮರ್ಥ್ಯ ಹೊಂದಿದೆ.

Question 9

9. ಇತ್ತೀಚೆಗೆ “ಶೌಕತ್ ಮಿರ್ಝಿಯೊಯೆವ್” ರವರು ಯಾವ ದೇಶದ ಉಸ್ತುವಾರಿ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ?

A
ಇರಾನ್
B
ಈಜಿಪ್ಟ್
C
ಉಝ್ಬೆಕಿಸ್ತಾನ
D
ಕಝಾಕಿಸ್ತಾನ
Question 9 Explanation: 
ಉಝ್ಬೆಕಿಸ್ತಾನ:

ಉಝ್ಬೆಕಿಸ್ತಾನದ ಪ್ರಧಾನಿ ಶೌಕತ್ ಮಿರ್ಝಿಯೊಯೆವ್ ಅವರನ್ನು ಉಝ್ಬೆಕಿಸ್ತಾನದ ಉಸ್ತುವಾರಿ ಅಧ್ಯಕ್ಷರನ್ನಾಗಿ ದೇಶದ ಸಂಸತ್ತು ಗುರುವಾರ ನೇಮಿಸಿದೆ. ಸುದೀರ್ಘ ಕಾಲ ದೇಶವನ್ನಾಳಿದ ಅಧ್ಯಕ್ಷ ಇಸ್ಲಾಮ್ ಕರಿಮೊವ್ ಇತ್ತೀಚೆಗೆ ಮೆದುಳಿನ ರಕ್ತಸ್ರಾವದಿಂದ ನಿಧನರಾದ ಕಾರಣ ಅಧ್ಯಕ್ಷ ಹುದ್ದೆ ತೆರವಾಗಿತ್ತು.

Question 10

10. ಈ ಕೆಳಗಿನ ಯಾರು ಆಕ್ಸಿಜನ್ ಪೂರೈಕೆ ಇಲ್ಲದೇ ಮೌಂಟ್ ಎವರೆಸ್ಟ್ ಏರಿದವರಲ್ಲಿ ಮೊದಲಿಗರೆನಿಸಿದ್ದಾರೆ?

A
ರೈನ್ಹೊಲ್ಡ್ ಮೆಸ್ನರ್
B
ಜೀನ್ ಟ್ರೊಯ್ಲೆಟ್
C
ಡಂಕನ್ ಚೆಸೆಲ್
D
ತೆರೆಸಾ ಸಿಂಗ್
Question 10 Explanation: 
ರೈನ್ಹೊಲ್ಡ್ ಮೆಸ್ನರ್:

ಜರ್ಮನಿಯ ರೈನ್ಹೊಲ್ಡ್ ಮೆಸ್ನರ್ ರವರು ಆಕ್ಸಿಜನ್ ಪೂರೈಕೆ ಇಲ್ಲದೇ ಮೌಂಟ್ ಎವರೆಸ್ಟ್ ಏರಿದವರಲ್ಲಿ ಮೊದಲಿಗರೆನಿಸಿದ್ದಾರೆ. ಮೆಸ್ನರ್ 1978 ರಲ್ಲಿ ಪೀಟರ್ ಹಬೆಲರ್ ಜೊತೆಗೂಡಿ ಈ ಸಾಧನೆಯನ್ನು ಮಾಡಿದ್ದಾರೆ.

There are 10 questions to complete.

3 Thoughts to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಸೆಪ್ಟೆಂಬರ್ 8, 2016”

  1. Anonymous

    all are superb questions….tnx sir

  2. umesh

    nice questions sir

  3. mahesh

    I like this site. …sir

Leave a Comment

This site uses Akismet to reduce spam. Learn how your comment data is processed.