ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಸೆಪ್ಟೆಂಬರ್ 7, 2016

Question 1

1.ಇತ್ತೀಚೆಗೆ ಆರಂಭಗೊಂಡ “PRABAL DOSTYK -16” ಮಿಲಿಟರಿ ಸಮರಭ್ಯಾಸ ಭಾರತ ಮತ್ತು ಯಾವ ದೇಶದ ನಡುವಿನ ಜಂಟಿ ಸಮರಭ್ಯಾಸವಾಗಿದೆ?

A
ರಷ್ಯಾ
B
ಕಜಖಸ್ತಾನ
C
ಜಪಾನ್
D
ಮೆಕ್ಸಿಕೊ
Question 1 Explanation: 
ಕಜಖಸ್ತಾನ:

ಭಾರತ ಮತ್ತು ಕಜಖಸ್ತಾನ ನಡುವಿನ ಜಂಟಿ ಮಿಲಿಟರಿ ಸಮರಭ್ಯಾಸ “PRABAL DOSTYK -16” ಕಜಖಸ್ತಾನದ ಕರಗಂದ ಪ್ರದೇಶದಲ್ಲಿ ಆರಂಭಗೊಂಡಿತು. ಸೆಪ್ಟೆಂಬರ್ 17 ರವರೆಗೆ 14 ದಿನಗಳ ಕಾಲ ಈ ಅಭ್ಯಾಸ ನಡೆಯಲಿದೆ. ಉಭಯ ದೇಶಗಳ ನಡುವೆ ರಾಜತಾಂತ್ರಿಕ ಸಂಬಂಧವನ್ನು ಬಲಪಡಿಸಲು ಹಾಗೂ ಮಿಲಿಟರಿ ಕೌಶಲ್ಯವನ್ನು ವಿನಿಮಯ ಮಾಡಿಕೊಳ್ಳಲು ಸಮರಭ್ಯಾಸ ಸಹಾಯವಾಗಲಿದೆ. ಈ ಸಮರಭ್ಯಾಸದಲ್ಲಿ ಭಯೋತ್ಪಾದನೆ ಮತ್ತು ಒಳನುಸುಳುವಿಕೆ ನಿಗ್ರಹ ಕಾರ್ಯಾಚರಣೆಗಳನ್ನು ನಡೆಸಲಾಗುವುದು.

Question 2

2.2016 ಪ್ಯಾರಾಲಿಂಪಿಕ್ಸ್ ನ ಉದ್ಘಾಟನ ಫೆರೆಡ್ನಲ್ಲಿ ಭಾರತದ ಧ್ವಜ ಸಾರಥ್ಯವಹಿಸಿದ್ದವರು ಯಾರು?

A
ದೇವೇಂದ್ರ ಝಜಾರಿಯಾ
B
ಅಂಕುರ್ ಧಾಮಾ
C
ದೀಪಾ ಮಲಿಕ್
D
ವೀರೇಂದ್ರ ಧಂಕಾ
Question 2 Explanation: 
ದೇವೇಂದ್ರ ಝಜಾರಿಯಾ:

ಬ್ರೆಜಿಲ್ ನ ಮರಕಾನ ಸ್ಟೇಡಿಯಂನಲ್ಲಿ ರಿಯೋ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅದ್ದೂರಿ ಚಾಲನೆ ದೊರೆತಿದೆ. 2004ರ ಅಥೆನ್ಸ್ ಪ್ಯಾರಂಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮೊತ್ತ ಮೊದಲ ಬಾರಿ ಚಿನ್ನದ ಪದಕ ಗೆದ್ದುಕೊಟ್ಟಿದ್ದ ದೇವೇಂದ್ರ ಝಜಾರಿಯಾ ಉದ್ಘಾಟನ ಫೆರೆಡ್ನಲ್ಲಿ ಭಾರತದ ಧ್ವಜ ಸಾರಥ್ಯವಹಿಸಿದ್ದರು. 11 ದಿನಗಳ ಕಾಲ ನಡೆಯಲಿರುವ ಪ್ಯಾರಾಲಿಂಪಿಕ್ ಗೇಮ್ಸ್ನಲ್ಲಿ 159 ದೇಶಗಳ 4,342 ಅಥ್ಲೀಟ್ಗಳು ಭಾಗವಹಿಸಲಿದ್ದಾರೆ.

Question 3

3.ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆ ಈ ಕೆಳಗಿನ ಯಾವ ರೋಗಗಳಿಂದ ಭಾರತ ಮುಕ್ತವಾಗಿದೆ ಎಂದು ಘೋಷಿಸಿದೆ?

I) ಯಾಸ್ (Yaws)

II) ತಾಯಿ ಮತ್ತು ನವಜಾತ ಧನುರ್ವಾಯು

III) ಮಲೇರಿಯಾ

IV) ಇಲಿ ಜ್ವರ

ಈ ಕೆಳಗೆ ನೀಡಿರುವ ಕೋಡ್ ಮೂಲಕ ಸರಿಯಾದ ಉತ್ತರವನ್ನು ಆರಿಸಿ:

A
I & II ಮಾತ್ರ
B
I, II & IV ಮಾತ್ರ
C
I & IV ಮಾತ್ರ
D
ಮೇಲಿನ ಎಲ್ಲವೂ
Question 3 Explanation: 
I & II ಮಾತ್ರ:

ಭಾರತ ಯಾಸ್ ಹಾಗೂ ತಾಯಿ ಮತ್ತು ನವಜಾತ ಧನುರ್ವಾಯು ರೋಗ ಮುಕ್ತವೆಂದು ವಿಶ್ವಆರೋಗ್ಯ ಸಂಸ್ಥೆ ಘೋಷಿಸಿದೆ. ಕಳೆದ ವರ್ಷ ಭಾರತ ಪೋಲಿಯೊ ರೋಗವೆಂದು ಘೋಷಿಸಲಾಗಿತ್ತು. ಯಾಸ್ ಬ್ಯಾಕ್ಟೀರಿಯಾದಿಂದ ಚರ್ಮ, ಮೃದ್ವಸ್ಥಿ ಮತ್ತು ಮೂಳೆಗಳಿಗೆ ಉಂಟಾಗುವ ಸೋಂಕು ರೋಗವಾಗಿದೆ. ಶ್ರೀಲಂಕಾದ ಕೊಲೊಂಬೊದಲ್ಲಿ ನೆಡದ ವಿಶ್ವ ಆರೋಗ್ಯ ಸಂಸ್ಥೆಯ ಸಭೆಯಲ್ಲಿ ಅಧಿಕೃತ ಘೋಷಣೆ ಪತ್ರವನ್ನು ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಅವರಿಗೆ ವಿತರಿಸಲಾಯಿತು. ನಿರ್ಲಕ್ಷ್ಯ ಒಳಗಾದ ಉಷ್ಣವಲಯದ ರೋಗ(neglected tropical diseases)ಗಳಲ್ಲಿ ಒಂದಾದ ಯಾಸ್ ರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಿದ ಮೊದಲ ದೇಶ ಭಾರತವೆನಿಸಿದೆ. ಒಂದು ಕಾಲದಲ್ಲಿ ವರ್ಷಕ್ಕೆ 2 ಲಕ್ಷ ಮಂದಿಯನ್ನು ಬಲಿತೆಗೆದುಕೊಳ್ಳುತ್ತಿದ್ದ ಧನುರ್ವಾಯು(ತಾಯಿ ಮತ್ತು ನವಜಾತ ಶಿಶುವಿಗೆ ಸಂಬಂಧಿಸಿದ) ಸೋಂಕನ್ನು ಸಂಪೂರ್ಣ ನಿರ್ಮೂಲನೆ ಮಾಡುವಲ್ಲಿ ಭಾರತ ಯಶಸ್ವಿಯಾಗಿದೆ. ಧನುರ್ವಾಯು ನಿರ್ಮೂಲನೆಗೆ ಬಾಕಿಯಿರುವ 23 ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿತ್ತು. ಕ ಒಂದು ಕಾಲದಲ್ಲಿ ದೇಶದ ಒಟ್ಟು ನವಜಾತ ಶಿಶುಗಳ ಮರಣದ ಪೈಕಿ ಶೇ.15ರಷ್ಟು ಧನುರ್ವಾಯುವಿನಿಂದ ಸಂಭವಿಸುತ್ತಿತ್ತು. ಆದರೆ, ಈಗ ಗರ್ಭೀಣಿಯರಿಗೆ ಸೂಕ್ತ ಸಮಯದಲ್ಲಿ ಪ್ರತಿರಕ್ಷಕ ಲಸಿಕೆ ನೀಡಲಾಗುತ್ತದೆ. ಆಸ್ಪತ್ರೆಗಳಲ್ಲದೆ ಬೇರೆ ಕಡೆ ಹೆರಿಗೆಯಾದರೂ ಸೋಂಕು ಹರಡದಂತೆ ತಡೆಯುವ ಕಿಟ್ಗಳನ್ನು ಬಳಸಲಾಗುತ್ತದೆ. ಇವೆಲ್ಲವೂ ಧನುರ್ವಾಯು ತಡೆಗೆ ಕಾರಣವಾಗಿದೆ.

Question 4

4. “ಅಂಕುರ್ ಧಾಮ” ಅವರು ಪ್ಯಾರಾಲಿಂಪಿಕ್ ನಲ್ಲಿ ಭಾಗವಹಿಸುತ್ತಿರುವ ಭಾರತದ ಮೊದಲ ದೃಷ್ಟಿಮಾಂದ್ಯ ಅಥ್ಲೇಟಿಕ್ ಎನಿಸಿದ್ದಾರೆ. ಅಂಕುರ್ ಯಾವ ಕ್ರೀಡೆಯನ್ನ ಪ್ರತಿನಿಧಿಸಲಿದ್ದಾರೆ?

A
ಈಜು
B
ಜಾವೆಲಿನ್ ಎಸೆತ
C
ಕ್ಲಬ್ ಥ್ರೋ
D
ರನ್ನಿಂಗ್
Question 4 Explanation: 
ರನ್ನಿಂಗ್:

ದೆಹಲಿ ಮೂಲದ ಅಂಕುರ್ ಧಾಮ” ಅವರು ಪ್ಯಾರಾಲಿಂಪಿಕ್ ನಲ್ಲಿ ಭಾಗವಹಿಸುತ್ತಿರುವ ಭಾರತದ ಮೊದಲ ದೃಷ್ಟಿಮಾಂದ್ಯ ಅಥ್ಲೇಟಿಕ್ ಎನಿಸಿದ್ದಾರೆ. ಧಾಮ ಅವರು 1,500ಮೀ ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಸೆಪ್ಟೆಂಬರ್ 7ರಿಂದ 18ರ ತನಕ ನಡೆಯಲಿರುವ ಪ್ಯಾರಾಲಿಂಪಿಕ್ ಗೇಮ್ಸ್ನಲ್ಲಿ ಭಾರತದ ಒಟ್ಟು 19 ಅಥ್ಲೀಟ್ಗಳು 10 ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ. ಭಾರತ ತಂಡದಲ್ಲಿ 2004ರ ಅಥೆನ್ಸ್ ಗೇಮ್ಸ್ನಲ್ಲಿ ಭಾರತಕ್ಕೆ ಪ್ಯಾರಾಲಿಂಪಿಕ್ಸ್ನಲ್ಲಿ ಮೊತ್ತ ಮೊದಲ ಬಾರಿ ಚಿನ್ನದ ಪದಕ ಗೆದ್ದುಕೊಟ್ಟಿದ್ದ ದೇವೇಂದ್ರ ಝಜಾರಿಯಾ ಭಾಗವಹಿಸುತ್ತಿದ್ದಾರೆ. ಈ ಬಾರಿ ಅವರು ಜಾವೆಲಿನ್ ಎಸೆತದಲ್ಲಿ ಪದಕ ಗೆಲ್ಲುವತ್ತ ಚಿತ್ತವಿರಿಸಿದ್ದಾರೆ .2016ರ ಪ್ಯಾರಾಲಿಂಪಿಕ್ಸ್ನಲ್ಲಿ ವಿಶ್ವದ 4,300 ಅಥ್ಲೀಟ್ಗಳು 23 ಸ್ಪರ್ಧೆಗಳಲ್ಲಿ ಭಾಗವಹಿಸಿ ಪದಕಕ್ಕಾಗಿ ಹೋರಾಟ ನಡೆಸಲಿದ್ದಾರೆ. ಭಾರತ ಪ್ಯಾರಾಲಿಂಪಿಕ್ ಗೇಮ್ಸ್ನಲ್ಲಿ ಈ ತನಕ ಒಟ್ಟು 8 ಪದಕಗಳನ್ನು ಜಯಿಸಿದೆ. ಇದರಲ್ಲಿ 2 ಚಿನ್ನ, 3 ಬೆಳ್ಳಿ ಹಾಗೂ ಮೂರು ಕಂಚಿನ

Question 5

5. “ಹಾಪ್ ಮನ್ ಕಪ್ (Hopman Cup)” ಯಾವ ಕ್ರೀಡೆಗೆ ಸಂಬಂಧಿಸಿದೆ?

A
ಕ್ರಿಕೆಟ್
B
ಟೆನ್ನಿಸ್
C
ಪುಟ್ಬಾಲ್
D
ಹಾಕಿ
Question 5 Explanation: 
ಟೆನ್ನಿಸ್:

ಹಾಪ್ ಮನ್ ಕಪ್ ಒಳಾಂಗಣ ಟೆನ್ನಿಸ್ ಟೂರ್ನಮೆಂಟ್ ಆಗಿದ್ದು, ಪ್ರತಿವರ್ಷ ಆಸ್ಟ್ರೇಲಿಯಾದ ಪರ್ಥ್ ನಲ್ಲಿ ಆಯೋಜಿಸಲಾಗುವುದು. ಆಸ್ಟ್ರೇಲಿಯಾದ ಖ್ಯಾತ ಟೆನ್ನಿಸ್ ಆಟಗಾರ ಮತ್ತು ಕೋಚ್ ಆಗಿದ್ದ ಹ್ಯಾರಿ ಹಾಪ್ ಮನ್ ಅವರ ಹೆಸರಿನ್ನು ಈ ಪ್ರಶಸ್ತಿ

Question 6

6.ವಿಶ್ವ ಸಂಸ್ಥೆಯ ಲಿಖಿತ ಸಂವಿಧಾನವನ್ನು ಇತ್ತೀಚೆಗೆ ಈ ಕೆಳಗಿನ ಯಾವ ಭಾಷೆಗೆ ಭಾಷಾಂತರಗೊಳಿಸಲಾಗಿದೆ?

A
ಸಂಸ್ಕೃತಿ
B
ಗುಜರಾತಿ
C
ಪಂಜಾಬಿ
D
ಕನ್ನಡ
Question 6 Explanation: 
ಸಂಸ್ಕೃತಿ:

ವಿಶ್ವ ಸಂಸ್ಥೆಯ ಲಿಖಿತ ಸಂವಿಧಾನ ಅಥವಾ ಒಪ್ಪಂದ ಇದೇ ಮೊದಲ ಬಾರಿಗೆ ಸಂಸ್ಕೃತಕ್ಕೆ ಭಾಷಾಂತರಗೊಂಡಿದೆ. ಲಖನೌ ಮೂಲದ ಅಖಿಲ ಭಾರತೀಯ ಸಂಸ್ಕೃತ ಪರಿಷತ್ತಿನ ಕಾರ್ಯದರ್ಶಿಯಾಗಿರುವ ಡಾ.ಜಿತೇಂದ್ರ ಕುಮಾರ್ ತ್ರಿಪಾಠಿ ಅವರ ಶ್ರಮದಿಂದ ಸಂವಿಧಾನವನ್ನು ಸಂಸ್ಕೃತ ಭಾಷಕ್ಕೆ ಭಾಷಾಂತರಗೊಳಿಸಲಾಗಿದೆ. ವಿಶ್ವ ಸಂಸ್ಥೆಯ ಲಿಖಿತ ಸಂವಿಧಾನ ಎಲ್ಲಾ ಆರು ಅಧಿಕೃತ ಭಾಷೆಗಳಲ್ಲಿ ಲಭ್ಯವಿದೆ. ಅರಾಬಿಕ್, ಚೈನೀಸ್, ಇಂಗ್ಲಿಷ್, ಫ್ರೆಂಚ್, ರಷ್ಯನ್ ಹಾಗೂ ಸ್ಪ್ಯಾನಿಷ್ ಭಾಷೆಗಳನ್ನು ವಿಶ್ವ ಸಂಸ್ಥೆ ಅಧಿಕೃತ ಭಾಷೆಗಳಾಗಿ ಸ್ವೀಕರಿಸಿದೆ. ವಿಶ್ವ ಸಂಸ್ಥೆಯ ಲಿಖಿತ ಸಂವಿಧಾನ(ಮೂಲ ಒಪ್ಪಂದ)ಕ್ಕೆ 1945ರ ಜೂನ್ 26ರಂದು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಸಹಿ ಹಾಕಲಾಗಿತ್ತು. ಅಂತರರಾಷ್ಟ್ರೀಯ ಸಂಸ್ಥೆಗಳ ಕುರಿತಾದ ವಿಶ್ವ ಸಂಸ್ಥೆಯ ಸಭೆಯಲ್ಲಿ ಈ ಒಪ್ಪಂದಕ್ಕೆ ಬರಲಾಗಿತ್ತು. 1945ರ ಅಕ್ಟೋಬರ್ 24ರಿಂದ ಒಪ್ಪಂದ ಕಾರ್ಯ ರೂಪಕ್ಕೆ ಬಂದಿತು.

Question 7

7.ಇತ್ತೀಚೆಗೆ ನಿಧನರಾದ ಹಿರಿಯ ಟೆಸ್ಟ್ ಕ್ರಿಕೆಟ್ ಆಟಗಾರ “ಲಿಂಡ್ಸೆ ಟಕ್ಕೆಟ್ (Lindsay Tuckett)” ಯಾವ ದೇಶದವರು?

A
ಇಂಗ್ಲೆಂಡ್
B
ಆಸ್ಟ್ರೇಲಿಯಾ
C
ದಕ್ಷಿಣ ಆಫ್ರಿಕಾ
D
ನ್ಯೂಜಿಲ್ಯಾಂಡ್
Question 7 Explanation: 
ದಕ್ಷಿಣ ಆಫ್ರಿಕಾ:

ವಿಶ್ವದ ಹಿರಿಯ ಜೀವಂತ ಮಾಜಿ ಕ್ರಿಕೆಟ್ ಆಟಗಾರ ಎನಿಸಿದ್ದ ದಕ್ಷಿಣ ಆಫ್ರಿಕಾದ ಲಿಂಡ್ಸೆ ಟಕ್ಕೆಟ್ ನಿಧನರಾದರು. ಟಕ್ಕೆಟ್ ದಕ್ಷಿಣ ಆಫ್ರಿಕಾ ಪರವಾಗಿ 1947 ರಿಂದ 1949ರ ಅವಧಿಯಲ್ಲಿ 9 ಟೆಸ್ಟ್ ಪಂದ್ಯಗಳನ್ನು ಆಡಿದ್ದರು. 1947 ರಲ್ಲಿ ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ಅವರು 19 ವಿಕೆಟ್ಗಳನ್ನು ಪಡೆದುಕೊಂಡಿದ್ದಾರೆ.

Question 8

8. ವಿಶ್ವ ಆರೋಗ್ಯ ಸಂಸ್ಥೆ ಇತ್ತೀಛೆಗೆ ಭಾರತವನ್ನು “ಯಾಸ್ (Yaws) ಮುಕ್ತರಾಷ್ಟ್ರವೆಂದು ಘೋಷಿಸಿದೆ. ಯಾಸ್ ಈ ಕೆಳಗಿನ ಯಾವುದರಿಂದ ಬರುವ ರೋಗವಾಗಿದೆ?

A
ಫಂಗಸ್
B
ಬ್ಯಾಕ್ಟೀರಿಯಾ
C
ವೈರಸ್
D
ಪ್ರೊಟೊಜೊವ
Question 8 Explanation: 
ಬ್ಯಾಕ್ಟೀರಿಯಾ:

ಯಾಸ್ ಒಂದು ಬ್ಯಾಕ್ಟೀರಿಯಾ ಸೋಂಕಿಗಿದ್ದು, ಟ್ರೆಪೊನಿಮಾ ಪಲ್ಲಿಡಂ (Treponema Pallidum) ಹೆಸರಿನ ಬ್ಯಾಕ್ಟೀರಿಯಾ ಇದಕ್ಕೆ ಪ್ರಮುಖ ಕಾರಣವಾಗಿದೆ. ಚರ್ಮ, ಮೂಳೆ ಮತ್ತು ಮೃದ್ವಸ್ಥಿ ಸೋಂಕಿಗೆ ಒಳಗಾಗುವ ಪ್ರಮುಖ ಅಂಗಗಳು.

Question 9

9.ಈ ಕೆಳಗಿನ ಯಾವ ಉಡಾವಣಾ ವಾಹಕ ಮೂಲಕ ಇಸ್ರೋ ಇತ್ತೀಚೆಗೆ ಸುಧಾರಿತ ಹವಾಮಾನ ಉಪಗ್ರಹ ಇನ್ಸಾಟ್-3ಡಿಆರ್ ಅನ್ನು ಉಡಾವಣೆ ಮಾಡಿತು?

A
GSLV-D6
B
GSLV-D4
C
GSLV-F05
D
GSLV-Mark II
Question 9 Explanation: 
GSLV-D6:

ಸುಧಾರಿತ ಮತ್ತು ಆತ್ಯಾಧುನಿಕ ಹವಾಮಾನ ಉಪಗ್ರಹ ಇನ್ಸಾಟ್-3 ಡಿ.ಆರ್ ಅನ್ನು ಇಸ್ರೋ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಈ ಉಪಗ್ರಹವನ್ನು ಜಿ.ಎಸ್.ಎಲ್.ವಿ.-ಎಫ್ 05 ರಾಕೆಟ್ ಬಳಸಿ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. 2,211 ಕೆ.ಜಿ. ತೂಕವನ್ನು ಹೊಂದಿರುವ ಇನ್ಸಾಟ್-3 ಡಿ.ಆರ್. ಉಪಗ್ರಹ ನಭೋ ಮಂಡಲ ತಲುಪಿದ ನಂತರ, ತನ್ನದೇ ಮುನ್ನೂಕುವ ಶಕ್ತಿಯನ್ನು ಪಡೆದುಕೊಂಡು ಭೂ ಸ್ಥಿರ ಕಕ್ಷೆಯನ್ನು ಸೇರಲಿದೆ ಎನ್ನಲಾಗಿದೆ. ಇನ್ಸಾಟ್-3 ಡಿ.ಆರ್. ಉಪಗ್ರಹ ಸಾಗರದ ಮೇಲ್ಭಾಗದಲ್ಲಿ ಬೀಸುವ ಮಾರುತಗಳ ಚಲನೆಯನ್ನು ವಿಶ್ಲೇಷಿಸಿ, ಚಂಡಮಾರುತ ಗ್ರಹಿಸಲಿದೆ. ಉಷ್ಣಾಂಶ ಏರಿಳಿತ ರಕ್ಷಣಾ ಸೇವೆಗಳಿಗೆ ಮಾಹಿತಿ ಪಡೆದುಕೊಳ್ಳಬಹುದಾಗಿದೆ.

Question 10

10. ಈ ಕೆಳಗಿನ ಒಕ್ಕೂಟಗಳನ್ನು ಗಮನಿಸಿ:

I) ASEAN

II) SAARC

III) APEC

ಭಾರತ ಈ ಮೇಲಿನ ಯಾವ ಒಕ್ಕೂಟಗಳ ಸದಸ್ಯ ರಾಷ್ಟ್ರವಾಗಿದೆ?

A
I ಮಾತ್ರ
B
II ಮಾತ್ರ
C
I & II ಮಾತ್ರ
D
ಮೇಲಿನ ಎಲ್ಲವೂ
Question 10 Explanation: 
II ಮಾತ್ರ:

ಮೇಲಿನ ಒಕ್ಕೂಟಗಳಲ್ಲಿ ಭಾರತ ಸಾರ್ಕ್ ಒಕ್ಕೂಟದ ಸದಸ್ಯ ರಾಷ್ಟ್ರವಾಗಿದೆ. ಏಷಿಯಾನ್ ಅಥವಾ ಅಸೋಸಿಯೇಷನ್ ಆಫ್ ಸೌತ್ ಈಸ್ಟ್ ಏಷ್ಯಾನ್ ನೇಷನ್ ಆಗಸ್ಟ್ 8, 1967 ರಲ್ಲಿ ಸ್ಥಾಪನೆಗೊಂಡಿದೆ. ಇಂಡೋನೇಷಿಯಾ, ಮಲೇಷಿಯಾ, ಫಿಲಿಫೈನ್ಸ್, ಸಿಂಗಾಪುರ, ಥಾಯ್ಲೆಂಡ್, ಬ್ರೂನಿ, ಕಾಂಬೋಡಿಯಾ, ಲಾವೋಸ್, ಮಯನ್ಮಾರ್ ಮತ್ತು ವಿಯೆಟ್ನಾಂ ಇದರ ಸದಸ್ಯ ರಾಷ್ಟ್ರಗಳಾಗಿವೆ. ಏಷ್ಯಾ-ಫೆಸಿಫಿಕ್ ಎಕಾನಿಮಿಕ್ ಕೊ-ಆಪರೇಷನ್ (APEC) 21 ಸದಸ್ಯ ರಾಷ್ಟ್ರಗಳನ್ನು ಹೊಂದಿವೆ. 1989 ರಲ್ಲಿ ಸ್ಥಾಪಿಸಲಾಗಿದೆ.

There are 10 questions to complete.

One Thought to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಸೆಪ್ಟೆಂಬರ್ 7, 2016”

  1. ಸಂತೋಷ್ ಗೌಡರ

    ಧನ್ಯವಾದಗಳು ಸರ್

Leave a Comment

This site uses Akismet to reduce spam. Learn how your comment data is processed.