ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಸೆಪ್ಟೆಂಬರ್ 3, 2016

Question 1

1.ಯಾವ ರಾಜ್ಯ ಇತ್ತೀಚೆಗೆ ಹೆಣ್ಣು ಮಕ್ಕಳ ಅಭಿವೃದ್ದಿಗಾಗಿ “ಬಿಜು ಕನ್ಯಾ ರತ್ನ ಯೋಜನಾ” ಯನ್ನು ಆರಂಭಿಸಿದೆ?

A
ಒಡಿಶಾ
B
ಮಧ್ಯ ಪ್ರದೇಶ
C
ಹಿಮಾಚಲ ಪ್ರದೇಶ
D
ಉತ್ತರಖಂಡ್
Question 1 Explanation: 
ಒಡಿಶಾ:

ಒಡಿಶಾ ರಾಜ್ಯದ ಮೂರು ಜಿಲ್ಲೆಗಳಲ್ಲಿ ಹೆಣ್ಣು ಮಕ್ಕಳ ಅಭಿವೃದ್ದಿಗಾಗಿ “ಬಿಜು ಕನ್ಯಾ ರತ್ನ ಯೋಜನೆ”ಗೆ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಚಾಲನೆ ನೀಡಿದರು. ಲಿಂಗಾನುಪಾತದಲ್ಲಿ ತೀರಾ ಹಿಂದೆ ಬಿದ್ದಿರುವ ಒಡಿಶಾ ಮೂರು ಜಿಲ್ಲೆಗಳಾದ ಗಂಜಮ್, ಡೆಂಕನಲ್ ಮತ್ತು ಅಂಗುಲ್ ಜಿಲ್ಲೆಗಳಲ್ಲಿ ಈ ಯೋಜನೆಯನ್ನು ಅನುಷ್ಟಾನಗೊಳಿಸಲಾಗುವುದು. ಶಿಶು ಮತ್ತು ಮಕ್ಕಳ ಲಿಂಗಾನುಪಾತವನ್ನು ಸುಧಾರಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಇದರ ಜೊತೆಗೆ ಪ್ರಾಥಮಿಕ ಶಿಕ್ಷಣದಲ್ಲಿ ಹೆಣ್ಣು ಮಕ್ಕಳ ನೋಂದಣಿ, ಶಾಲೆ ಬಿಟ್ಟ ಹೆಣ್ಣು ಮಕ್ಕಳನ್ನು ಗುರ್ತಿಸುವುದು ಹಾಗೂ ಹೆಣ್ಣು ಮಕ್ಕಳಿಗೆ ಪೂರಕವಾದ ವಾತಾವರಣ ಸೃಷ್ಟಿಸುವುದು ಈ ಯೋಜನೆಯ ಗುರಿಯಾಗಿದೆ.

Question 2

2.ಇತ್ತೀಚೆಗೆ ಭಾರತ ಈ ಕೆಳಗಿನ ಯಾವ ದೇಶದೊಂದಿಗೆ ಸಾಗರ ಸಾರಿಗೆ (Maritime Transport) ಕ್ಷೇತ್ರದಲ್ಲಿ ಒಪ್ಪಂದಕ್ಕೆ ಸಹಿ ಹಾಕಿತು?

A
ವಿಯಟ್ನಾಂ
B
ಈಜಿಪ್ಟ್
C
ಆಪ್ಘಾನಿಸ್ತಾನ
D
ಚೀನಾ
Question 2 Explanation: 
ಈಜಿಪ್ಟ್:

ಸಾಗರ ಸಾರಿಗೆ ಕ್ಷೇತ್ರದಲ್ಲಿ ಪರಸ್ಪರ ಸಹಕಾರ ನೀಡುವ ಸಲುವಾಗಿ ಭಾರತ ಮತ್ತು ಈಜಿಪ್ಟ್ ಸಾಗರ ಸಾರಿಗೆ ಒಪ್ಪಂದಕ್ಕೆ ಸಹಿಹಾಕಿದವು. ಸಾಗರ ಸಾರಿಗೆ ಸಂಬಂಧಿ ವಿಷಯಗಳ ಬಗ್ಗೆ ಪರಸ್ಪರ ಸಹಕಾರ ಮತ್ತು ಸಲಹೆಗಳನ್ನು ವಿನಿಮಯ ಮಾಡಿಕೊಳ್ಳಲು ಈ ಒಪ್ಪಂದ ಅವಕಾಶ ಕಲ್ಪಿಸಲಿದೆ. ಜೊತೆಗೆ ಉಭಯ ದೇಶಗಳ ನಡುವೆ ಸಾಗರ ಸಂಬಂಧವನ್ನು ಬಲಗೊಳಿಸಲು ಮತ್ತು ಸಾಗರ ಸಾರಿಗೆಯನ್ನು ಸುಸ್ಥಿರವಾಗಿ ಅಭಿವೃದ್ದಿಪಡಿಸಲು ಇದು ಸಹಕಾರಿಯಾಗಲಿದೆ.

Question 3

3.ಮಹಾನದಿ ನೀರು ಹಂಚಿಕೆ ಈ ಕೆಳಗಿನ ಯಾವ ಎರಡು ರಾಜ್ಯಗಳ ನಡುವೆ ವಿವಾದಕ್ಕೆ ಕಾರಣವಾಗಿದೆ?

A
ಛತ್ತೀಸ್ ಘರ್ ಮತ್ತು ಮಧ್ಯಪ್ರದೇಶ
B
ಮಹಾರಾಷ್ಟ್ರ ಮತ್ತು ಒಡಿಶಾ
C
ಛತ್ತೀಸ್ ಘರ್ ಮತ್ತು ಒಡಿಶಾ
D
ಜಾರ್ಖಂಡ್ ಮತ್ತು ಛತ್ತೀಸ್ ಘರ್
Question 3 Explanation: 
ಛತ್ತೀಸ್ ಘರ್ ಮತ್ತು ಒಡಿಶಾ:

ಮಹಾನದಿಯ ಮೇಲೆ ಛತ್ತೀಸ್ ಘರ್ ರಾಜ್ಯ ನಿರ್ಮಿಸುತ್ತಿರುವ ಅಣೆಕಟ್ಟು ವಿವಾದಕ್ಕೆ ಎಡೆಮಾಡಿದೆ. ಈ ಅಣೆಕಟ್ಟು ನಿರ್ಮಾಣದ ಮಾಹಿತಿಯನ್ನು ತನಗೆ ತಿಳಿಸಿಲ್ಲವೆಂದು ಒಡಿಶಾ ಸರ್ಕಾರ ಕೇಂದ್ರದ ಮೊರೆ ಹೋಗಿದೆ. ಅಲ್ಲದೇ ಛತ್ತೀಸ್ ಘರ್ ಮಹಾನದಿಯ ನೀರನ್ನು ಕೇವಲ ಕೃಷಿಗೆ ಬಳಸದೆ ಕೈಗಾರಿಕೆಗಳಿಗೂ ಪೂರೈಸುತ್ತಿದೆ ಎಂದು ಒಡಿಶಾ ಸರ್ಕಾರ ಕಿಡಿಕಾರಿದೆ. ಮಹಾನದಿ ಭಾರತದ ಛತ್ತೀಸ್‌ಗಢ ರಾಜ್ಯದ ಉನ್ನತಪ್ರಾಂತ್ರ್ಯದಲ್ಲಿ ಧಮ್ತಾರಿ ಜಿಲ್ಲೆಯಲ್ಲಿ ಉಗಮಿಸುತ್ತದೆ. ಮುಂದೆ ಒಡಿಶಾ ರಾಜ್ಯದ ಮೂಲಹ ಪ್ರವಹಿಸಿ ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಮಹಾನದಿಯ ಉದ್ದ ಸುಮಾರು ೮೬೦ ಕಿ.ಮೀ.ಗಳು. ಭಾರತದ ದೊಡ್ಡನದಿಗಳ ಪೈಕಿ ಒಂದಾದ ಮಹಾನದಿಗೆ ಅಡ್ಡಲಾಗಿ ಸಂಬಾಲ್ಪುರದ ಬಳಿ ಜಗತ್ತಿನ ಅತ್ಯಂತ ದೊಡ್ಡ ಮಣ್ಣುಗಾರೆಯ ಆಣೆಕಟ್ಟನ್ನು ನಿರ್ಮಿಸಲಾಗಿದೆ. ಈ ಆಣೆಗೆ ಹಿರಾಕುಡ್ ಆಣೆಕಟ್ಟು ಎಂಬ ಹೆಸರು. ಮಹಾನದಿ ಕಣಿವೆಯ ಫಲವತ್ತಾದ ನೆಲದಲ್ಲಿ ಭತ್ತವನ್ನು ವ್ಯಾಪಕವಾಗಿ ಬೆಳೆಯಲಾಗುತ್ತದೆ. ಮಹಾನದಿಯು ಬ್ರಾಹ್ಮಣಿ ನದಿಯೊಂದಿಗೆ ಸಂಗಮಿಸಿ ಬಂಗಾಳ ಕೊಲ್ಲಿಯನ್ನು ಸೇರುವೆಡೆಯಲ್ಲಿ ಬೃಹತ್ ಮುಖಜಭೂಮಿಯನ್ನು ಸೃಷ್ಟಿಸಿದೆ. ಈ ಮುಖಜಭೂಮಿಯಲ್ಲಿ ಜಂಬೂದ್ವೀಪದ ಅತ್ಯಂತ ವಿಸ್ತಾರವಾದ ಮ್ಯಾಂಗ್ರೋವ್ ಅರಣ್ಯಗಳಿವೆ. ಅಲ್ಲದೆ ಈ ಪ್ರದೇಶವು ಪೂರ್ವ ಭಾರತದ ಭತ್ತದ ಕಣಜವೆಂದು ಕರೆಯಲ್ಪಡುವುದು.

Question 4

4. ಈ ಕೆಳಗಿನ ಯಾವ ದೇಶಗಳಲ್ಲಿ ಭಾರತದ ಆರ್ಥಿಕ ಉಪಸ್ಥಿತಿಯನ್ನು ವೃದ್ದಿಸುವ ಸಲುವಾಗಿ ಕೇಂದ್ರ ಸರ್ಕಾರ ಇತ್ತೀಚೆಗೆ “ಯೋಜನಾ ಅಭಿವೃದ್ದಿ ನಿಧಿ” ಸ್ಥಾಪಿಸಲು ಸಮ್ಮತಿಸಿದೆ?

I) ಕಾಂಬೋಡಿಯಾ

II) ಲಾವೋಸ್

III) ಮಯನ್ಮಾರ್

IV) ವಿಯಟ್ನಾಂ

ಈ ಕೆಳಗೆ ನೀಡಿರುವ ಕೋಡ್ ಮೂಲಕ ಸರಿಯಾದ ಉತ್ತರವನ್ನು ಗುರುತಿಸಿ:

A
I & II ಮಾತ್ರ
B
II & III ಮಾತ್ರ
C
I, II & III ಮಾತ್ರ
D
ಮೇಲಿನ ಎಲ್ಲವೂ
Question 4 Explanation: 
ಮೇಲಿನ ಎಲ್ಲವೂ:

ಕಾಂಬೋಡಿಯಾ, ಲಾವೋಸ್, ಮಯನ್ಮಾರ್ ಮತ್ತು ವಿಯಟ್ನಾಂ (CLMV) ದೇಶಗಳಲ್ಲಿ ಭಾರತದ ಆರ್ಥಿಕ ಉಪಸ್ಥಿತಿಯನ್ನು ವೃದ್ದಿಸುವ ಸಲುವಾಗಿ 500 ಕೋಟಿ ಮೂಲ ಬಂಡವಾಳದ “ಯೋಜನಾ ಅಭಿವೃದ್ದಿ ನಿಧಿ (Project Development Fund)” ಸ್ಥಾಪಿಸಲು ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ಸಮ್ಮತಿಸಿದೆ. ಕೇಂದ್ರ ವ್ಯವಹಾರ ಇಲಾಖೆಯಡಿಈ ಯೋಜನಾ ಅಭಿವೃದ್ದ ನಿಧಿಯನ್ನು ಸ್ಥಾಪಿಸಲಾಗಿದ್ದು, ಎಕ್ಸಿಂ ಬ್ಯಾಂಕ್ ಮೂಲಕ ಕಾರ್ಯನಿರ್ವಹಿಸಲಿದೆ.

Question 5

5. ಅಖಿಲ ಭಾರತ ಟೆನಿಸ್ ಅಸೋಸಿಯೇಶ್ನ ಗೌರವ ಅಜೀವ ಅಧ್ಯಕ್ಷರಾಗಿ ಯಾರು ಆಯ್ಕೆಯಾಗಿದ್ದಾರೆ?

A
ಸುಮನ್ ಕಪೂರ್
B
ಹಿರೊನ್ಮಯ್ ಚಟರ್ಜಿ
C
ಅನಿಲ್ ಖನ್ನಾ
D
ದೀಪೆಂದ್ರ ಹೂಡಾ
Question 5 Explanation: 
ಅನಿಲ್ ಖನ್ನಾ:

ಏಷ್ಯನ್ ಟೆನಿಸ್ ಫೆಡರೇಶನ್ ಅಧ್ಯಕ್ಷ ಹಾಗೂ ಅಂತಾರಾಷ್ಟ್ರೀಯ ಟೆನಿಸ್ ಫೆಡರೇಶನ್ನ ಉಪಾಧ್ಯಕ್ಷ ಅನಿಲ್ ಖನ್ನಾ ಅಖಿಲ ಭಾರತ ಟೆನಿಸ್ ಅಸೋಸಿಯೇಶನ್ನ(ಎಐಟಿಎ) ಗೌರವ ಆಜೀವ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಎಐಟಿಎ ವಾರ್ಷಿಕ ಮಹಾ ಸಭೆ(ಎಜಿಎಂ)ಯಲ್ಲಿ ಮಾನ್ಯತೆ ಪಡೆದಿರುವ 23 ಘಟಕಗಳಿಂದ ಖನ್ನಾ ಹೆಸರನ್ನು ಈ ಗೌರವಕ್ಕೆ ಅವಿರೋಧವಾಗಿ ಶಿಫಾರಸು ಮಾಡಲಾಯಿತು. ಎಐಟಿಎಯಲ್ಲಿ ಈಗಾಗಲೇ ಇಬ್ಬರು ಆಜೀವ ಗೌರವ ಅಧ್ಯಕ್ಷರಿದ್ದಾರೆ. ಅವರುಗಳೆಂದರೆ ಎಸ್.ಎಂ. ಕೃಷ್ಣ ಹಾಗೂ ಯಶವಂತ್ ಸಿನ್ಹಾ.

Question 6

6. ಯಾವ ನಗರ 65ನೇ ಅಖಿಲ ಭಾರತ ಪೊಲೀಸ್ ಅಥ್ಲೆಟಿಕ್ಸ್ ಚಾಂಪಿಯನ್ ಷಿಪ್ ಆತಿಥ್ಯವಹಿಸಲಿದೆ?

A
ಹೈದ್ರಾಬಾದ್
B
ಮೈಸೂರು
C
ಪುಣೆ
D
ಕೊಲ್ಕತ್ತಾ
Question 6 Explanation: 
ಹೈದ್ರಾಬಾದ್:

65ನೇ ಅಖಿಲ ಭಾರತ ಪೊಲೀಸ್ ಅಥ್ಲೆಟಿಕ್ಸ್ ಚಾಂಪಿಯನ್ ಷಿಪ್ ಹೈದ್ರಾಬಾದ್ನ ಬಾಲಯೋಗಿ ಸ್ಟೇಡಿಯಂನಲ್ಲಿ ಆರಂಭಿಗೊಂಡಿದೆ. ಕೇಂದ್ರ ಕೈಗಾರಿಕೆ ಭದ್ರತ ಪಡೆ ಈ ಬಾರಿಯ ಕ್ರೀಡಾಕೂಟವನ್ನು ಆಯೋಜಿಸಿದ್ದು, ಸೆಪ್ಟೆಂಬರ್ 3 ರಿಂದ 7 ವರೆಗೆ ನಡೆಯಲಿದೆ. ಪ್ಯಾರಮಿಲಿಟರಿ ಪಡೆ ಮತ್ತು ವಿವಿಧ ರಾಜ್ಯಗಳ ಪೊಲೀಸ್ ಇಲಾಖೆಯ 1000 ಕ್ಕೂ ಹೆಚ್ಚು ಅಥ್ಲಿಟಿಕ್ಸ್ ಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ.

Question 7

7. ಪ್ರತಿಷ್ಠಿತ ಪ್ರಯಾಣ ನಿಯತಕಾಲಿಕೆ ಕೊಂಡ್ ನಾಸ್ಟ್ ಟ್ರಾವೆಲರ್(Conde Nast Traveller) ಸಮೀಕ್ಷೆ ಪ್ರಕಾರ ಏಷ್ಯಾದ ಅತ್ಯುತ್ತಮ ಹೋಟೆಲ್ ಯಾವುದು?

A
ಲೇಕ್ ಪ್ಯಾಲೇಸ್, ಉದಯ್ ಪುರ
B
ತಾಜ್ ಹೋಟೆಲ್, ಮುಂಬೈ
C
ದಿ ಓಬೆರಾಯ್ ಅಮರ್ವಿಲಾಸ್, ಆಗ್ರಾ
D
ಉಮೈದ್ ಭವನ್ ಪ್ಯಾಲೇಸ್, ಜೋಧ್ ಪುರ
Question 7 Explanation: 
ಲೇಕ್ ಪ್ಯಾಲೇಸ್, ಉದಯ್ ಪುರ:

ಪ್ರತಿಷ್ಠಿತ ಪ್ರಯಾಣ ನಿಯತಕಾಲಿಕ ಕೊಂಡ್ ನಾಸ್ಟ್ ಟ್ರಾವೆಲರ್ ನಡೆಸಿರುವ ಸಮೀಕ್ಷೆಯಲ್ಲಿ ರಾಜಸ್ಥಾನದ ಉದಯಪುರದಲ್ಲಿರುವ ತಾಜ್ ಲೇಕ್ ಪ್ಯಾಲೇಸ್ 2016ನೇ ಸಾಲಿನಲ್ಲಿ ಏಷ್ಯಾ ಖಂಡದಲ್ಲೇ ಶ್ರೇಷ್ಠ ಹೋಟೆಲ್ ಎಂಬ ಕೀರ್ತಿಗೆ ಪಾತ್ರವಾಗಿದೆ. ಕೆರಿಬಿಯನ್ ದ್ವೀಪದ ಸೇಂಟ್ ಬರ್ಥ್ಸ್ ನಲ್ಲಿರುವ ಈಡನ್ ರಾಕ್ ಹೋಟೆಲ್ ವಿಶ್ವದ ಅತ್ಯುತ್ತಮ ಹೋಟೆಲ್ ಎಂಬ ಹೆಗ್ಗಳಿಕೆಯನ್ನು ಪಡೆದಿದೆ. 1746 ರಲ್ಲಿ ನಿರ್ಮಿತ ,ಪಿಚೋಲಾ ಕೆರೆಯ ದ್ವೀಪದ ಮಧ್ಯದಲ್ಲಿರುವ ಈ ವೈಭವೋಪೇತ ಅರಮನೆ ಹೋಟೆಲ್ ಈ ಹಿಂದೆ ಜಗ್ ನಿವಾಸ್ ಹೆಸರಲ್ಲಿ ಕರೆಯಲ್ಪಡುತ್ತಿತ್ತು. ಇದರಲ್ಲಿ 17 ಗ್ರ್ಯಾನ್ಡ್ ಸ್ವೀಟ್ ಗಳು ಹಾಗು 60 ವಿಲಾಸಿ ರೂಮುಗಳಿವೆ. ದೇಶದ ಪ್ರತಿಷ್ಠಿತ , ದುಬಾರಿ, ವೈಭವದ ಮದುವೆ , ಮಧುಚಂದ್ರಗಳಿಗೆ ಖ್ಯಾತವಾಗಿರುವ ಈ ಹೋಟೆಲನ್ನು ದೇಶದ ಅತ್ಯಂತ ರೊಮ್ಯಾಂಟಿಕ್ ಹೋಟೆಲ್ ಎಂದೂ ಬಣ್ಣಿಸಲಾಗುತ್ತದೆ.

Question 8

8. ಇತ್ತೀಚೆಗೆ ಭಾರತ ಸರ್ಕಾರ ವಿಯೆಟ್ನಾಂನ ರಕ್ಷಣಾ ಕ್ಷೇತ್ರದ ಅಭಿವೃದ್ದಿಗೆ ಎಷ್ಟು ಮಿಲಿಯನ್ ಡಾಲರ್ ಆರ್ಥಿಕ ನೆರವು ಘೋಷಿಸಿದೆ?

A
100 ಮಿಲಿಯನ್ ಡಾಲರ್
B
300 ಮಿಲಿಯನ್ ಡಾಲರ್
C
500 ಮಿಲಿಯನ್ ಡಾಲರ್
D
1000 ಮಿಲಿಯನ್ ಡಾಲರ್
Question 8 Explanation: 
500 ಮಿಲಿಯನ್ ಡಾಲರ್:

ವಿಯೆಟ್ನಾಂನ ರಕ್ಷಣಾ ಕ್ಷೇತ್ರದ ಅಭಿವೃದ್ದಿಗೆ ಭಾರತ 500 ಮಿಲಿಯನ್ ಡಾಲರ್ ಆರ್ಥಿಕ ನೆರವು ಘೋಷಿಸಿದೆ. ವಿಯೆಟ್ನಾಂ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿಯೆಟ್ನಾಂ ಪ್ರಧಾನಿ ಗುಯೆನ್ ಕ್ಸುವಾನ್ ಅವರು ಈ ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕಿದರು. ಇದಲ್ಲದೇ ಉಭಯ ದೇಶಗಳು ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ, ಸೈಬರ್ ಭದ್ರತೆ ಹಾಗೂ ಆರೋಗ್ಯ ಸೇರಿದಂತೆ 12 ಮಹತ್ವದ ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕಿವೆ.

Question 9

9. ಏಷ್ಯಾದ ಅತ್ಯಂತ ಹಳೆಯ ಪುಟ್ಬಾಲ್ ಪಂದ್ಯಾವಳಿ ______?

A
ಫೆಡರೇಷನ್ ಕಪ್
B
ಡುರಾಂಡ್ ಕಪ್
C
ಸಂತೋಷ್ ಟ್ರೋಫಿ
D
ಐಎಫ್ಎ ಶೀಲ್ಡ್
Question 9 Explanation: 
ಡುರಾಂಡ್ ಕಪ್:

ಡುರಾಂಡ್ ಕಪ್ ಏಷ್ಯಾದ ಹಾಗೂ ಭಾರತದ ಅತ್ಯಂತ ಹಳೆಯ ಪುಟ್ಬಾಲ್ ಪಂದ್ಯಾವಳಿ ಆಗಿದೆ. 1888 ರಲ್ಲಿ ಡುರಾಂಡ್ ಕಪ್ ಅನ್ನು ಅಂದಿನ ಭಾರತದ ವಿದೇಶಾಂಗ ಕಾರ್ಯದರ್ಶಿ ಮೊರ್ಟಿಮರ್ ಡುರಾಂಡ್ ಅವರು ಶಿಮ್ಲಾದಲ್ಲಿ ಆರಂಭಿಸಿದ್ದರು. ಭಾರತದ ಪುಟ್ಬಾಲ್ ತಂಡಗಳ ಪೈಕಿ ಅತ್ಯಂತ ಹಳೆಯ ತಂಡವೆಂದರೆ ಮೋಹುನ್ ಭಾಗನ್ ಪುಟ್ಬಾಲ್ ತಂಡ. ಇದನ್ನು 1889 ರಲ್ಲಿ ಸ್ಥಾಪಿಸಲಾಗಿದೆ.

Question 10

9. ಏಷ್ಯಾದ ಅತ್ಯಂತ ಹಳೆಯ ಪುಟ್ಬಾಲ್ ಪಂದ್ಯಾವಳಿ ______?

A
ಫೆಡರೇಷನ್ ಕಪ್
B
ಡುರಾಂಡ್ ಕಪ್
C
ಸಂತೋಷ್ ಟ್ರೋಫಿ
D
ಐಎಫ್ಎ ಶೀಲ್ಡ್
Question 10 Explanation: 
ಡುರಾಂಡ್ ಕಪ್:

ಡುರಾಂಡ್ ಕಪ್ ಏಷ್ಯಾದ ಹಾಗೂ ಭಾರತದ ಅತ್ಯಂತ ಹಳೆಯ ಪುಟ್ಬಾಲ್ ಪಂದ್ಯಾವಳಿ ಆಗಿದೆ. 1888 ರಲ್ಲಿ ಡುರಾಂಡ್ ಕಪ್ ಅನ್ನು ಅಂದಿನ ಭಾರತದ ವಿದೇಶಾಂಗ ಕಾರ್ಯದರ್ಶಿ ಮೊರ್ಟಿಮರ್ ಡುರಾಂಡ್ ಅವರು ಶಿಮ್ಲಾದಲ್ಲಿ ಆರಂಭಿಸಿದ್ದರು. ಭಾರತದ ಪುಟ್ಬಾಲ್ ತಂಡಗಳ ಪೈಕಿ ಅತ್ಯಂತ ಹಳೆಯ ತಂಡವೆಂದರೆ ಮೋಹುನ್ ಭಾಗನ್ ಪುಟ್ಬಾಲ್ ತಂಡ. ಇದನ್ನು 1889 ರಲ್ಲಿ ಸ್ಥಾಪಿಸಲಾಗಿದೆ.

Question 11

10. ಇತ್ತೀಚೆಗೆ ಸುದ್ದಿಯಲ್ಲಿರುವ ಬ್ರುಸೆಲ್ಲೋಸಿಸ್ (Brucellosis) ರೋಗಕ್ಕೆ ಸಂಬಂಧಿಸಿದಂತೆ ಹೇಳಿಕೆಗಳನ್ನು ಗಮನಿಸಿ:

I) ಬ್ರುಸೆಲ್ಲೋಸಿಸ್ ಬ್ಯಾಕ್ಟೀರಿಯಾದಿಂದ ಜಾನುವಾರುಗಳಿಗೆ ಹರಡಬಲ್ಲ ಮಾರಣಂತಿಕ ರೋಗವಾಗಿದೆ

II) ಸೋಂಕಿತ ಪ್ರಾಣಿಗಳ ಸಂಪರ್ಕದಿಂದ ಮನುಷ್ಯರಲ್ಲೂ ಈ ರೋಗ ಹರಡಬಲ್ಲದಾಗಿದೆ

ಮೇಲಿನ ಹೇಳಿಕೆಗಳಲ್ಲಿ ಸರಿಯಾದ ಹೇಳಿಕೆ/ಹೇಳಿಕೆಗಳು ಯಾವುವು?

A
ಹೇಳಿಕೆ ಒಂದು ಮಾತ್ರ
B
ಹೇಳಿಕೆ ಎರಡು ಮಾತ್ರ
C
ಎರಡು ಹೇಳಿಕೆ ಸರಿಯಾಗಿವೆ
D
ಎರಡು ಹೇಳಿಕೆ ತಪ್ಪಾಗಿವೆ
Question 11 Explanation: 
ಎರಡು ಹೇಳಿಕೆ ಸರಿಯಾಗಿವೆ:

ಬ್ರುಸೆಲ್ಲೋಸಿಸ್ ಬ್ಯಾಕ್ಟೀರಿಯಾದಿಂದ ಜಾನುವಾರುಗಳಿಗೆ ಹರಡಬಲ್ಲ ಮಾರಣಂತಿಕ ರೋಗವಾಗಿದೆ. ಹಸು, ಮೇಕೆ, ಒಂಟೆ, ಹಂದಿ ಮತ್ತು ನಾಯಿಗಳಲ್ಲೂ ಈ ರೋಗ ಕಂಡುಬರುತ್ತದೆ. ಹಸುಗಳಲ್ಲಿ ಗರ್ಭಪಾತವಾಗುವುದು ರೋಗದ ಪ್ರಮುಖ ಲಕ್ಷಣವಾಗಿದೆ. ಸೋಂಕಿತ ಪ್ರಾಣಿಗಳ ಮಾಂಸ, ಹಾಲು ಮತ್ತು ಇತರೆ ಯಾವುದೇ ಮೂಲಗಳಿಂದ ಸಂಪರ್ಕಕ್ಕೆ ಬಂದಾಗ ಮನುಷ್ಯರಿಗೂ ಈ ರೋಗ ಹರಡುತ್ತದೆ. ಇತ್ತೀಚೆಗೆ ಕೋಲಾರದಲ್ಲಿರುವ ಶಾಸಕ ವರ್ತೂರು ಪ್ರಕಾಶ್ ಫಾರ್ಮ್ಹೌಸ್ನಲ್ಲಿ ರೋಗಾಣು ಪತ್ತೆಯಾಗಿದೆ. 988 ಹಸುಗಳಲ್ಲಿ 49 ಹಸುಗಳಲ್ಲಿ ಈ ಬ್ಯಾಕ್ಟೀರಿಯಾ ಪತ್ತೆಯಾಗಿದೆ. ಮುನ್ನೆಚ್ಚರಿಕೆ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು, ಫಾರ್ಮ್ಹೌಸ್ನಲ್ಲಿರುವ ಹಸುಗಳ ಹಾಲು ಮಾರಾಟಕ್ಕೆ ನಿಷೇಧ ಮಾಡಲಾಗಿದೆ. ಆ ಭಾಗದ ಸುತ್ತಮುತ್ತ ಹಸುಗಳುಗೆ ಪರೀಕ್ಷೆ ಮಾಡಲು ಆದೇಶಿಸಿದ್ದು, ಸೋಂಕು ದೃಢಪಟ್ಟ ಹಸುಗಳಿಗೆ ದಯಾಮರಣಕ್ಕೆ ಆದೇಶಿಸಲಾಗಿದೆ.

There are 11 questions to complete.

7 Thoughts to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಸೆಪ್ಟೆಂಬರ್ 3, 2016”

  1. subhas.jogi

    Super current affairs …..thank u sir

  2. vasant

    super questions..

  3. raj

    1st Question Ans: Himachal pradesh. .

  4. Chinnu

    1st question answer is orissa

  5. Karunaduexams

    It’s done

  6. ಸಂತೋಷ್ ಗೌಡರ

    ಧನ್ಯವಾದಗಳು ಸರ್

Leave a Comment

This site uses Akismet to reduce spam. Learn how your comment data is processed.