ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಆಗಸ್ಟ್ 22, 2016

Question 1

1.ಜಗತ್ತಿನಲ್ಲೇ ಪ್ರಪ್ರಥಮ ಬಾರಿಗೆ ಯಾವ ರಾಷ್ಟ್ರ ಕುಷ್ಠರೋಗ ಪ್ರತಿರೋಧಕ ಲಸಿಕೆಯನ್ನು ಅಭಿವೃದ್ದಿಪಡಿಸಿದೆ?

A
ಭಾರತ
B
ಚೀನಾ
C
ಥಾಯ್ಲೆಂಡ್
D
ರಷ್ಯಾ
Question 1 Explanation: 
ಭಾರತ:

ಜಗತ್ತಿನಲ್ಲೇ ಪ್ರಥಮಬಾರಿಗೆ ಭಾರತ ಕುಷ್ಠರೋಗ ಪ್ರತಿರೋಧಕ ಲಸಿಕೆಯನ್ನು ಅಭಿವೃದ್ಧಿ ಪಡಿಸಿದೆ. ಮೈಕೋಬ್ಯಾಕ್ಟೀಯಿಂ ಇಂಡಿಕಸ್ ಪ್ರಣಿ (Mycobacterium indicus pranii (MIP)) ಹೆಸರಲಿನ ಲಸಿಕೆಯನ್ನು ದೆಹಲಿಯ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಇಮ್ಯೂನಾಲಜಿ ಅಭಿವೃದ್ದಿಪಡಿಸಿದೆ. ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಮತ್ತು ಅಮೆರಿಕಾದ FDA ಈ ಲಸಿಕೆಯನ್ನು ಅನುಮೋದಿಸಿದ್ದು, ಹೊಸ ಲಸಿಕೆಯ ಮೊದಲ ಹಂತದ ಪ್ರಯೋಗವನ್ನು ಬಿಹಾರ, ಗುಜರಾತ್ಗಳ ಐದು ಜಿಲ್ಲೆಗಳಲ್ಲಿ ಆರಂಭಿಸಲಾಗುವುದು. ನಂತರ ಫಲಿತಾಂಶವನ್ನು ಆಧಾರಿಸಿ ಇತರೆ ಭಾಗಗಳಲ್ಲೂ ಬಳಸಲಾಗುವುದು. ಭಾರತದಲ್ಲಿ ಪ್ರತಿ ವರ್ಷ 1.25 ಲಕ್ಷ ಜನರು ಈ ರೋಗಕ್ಕೆ ತುತ್ತಾಗುತ್ತಿದ್ದಾರೆ. ವಿಶ್ವದ ಶೇ 60% ಕುಷ್ಟರೋಗ ಪ್ರಕರಣಗಳು ಭಾರತದಲ್ಲಿ ಕಂಡುಬರುತ್ತಿವೆ.

Question 2

2.2016 ಬ್ರಿಕ್ಸ್ ವಿಪತ್ತು ನಿರ್ವಹಣಾ (Disaster Management) ಕಾನ್ಪೆರನ್ಸ್ ಯಾವ ನಗರದಲ್ಲಿ ಆರಂಭಗೊಂಡಿತು?

A
ಭೂಪಾಲ್
B
ಪುಣೆ
C
ಉದಯ್ ಪುರ
D
ಜೈಪುರ
Question 2 Explanation: 
ಉದಯ್ ಪುರ:

ಎರಡನೇ ಬ್ರಿಕ್ಸ್ ವಿಪತ್ತು ನಿರ್ವಹಣಾ ಕಾನ್ಪೆರನ್ಸ್ ರಾಜಸ್ತಾನದ ಉದಯ್ ಪುರದಲ್ಲಿ ಆಗಸ್ಟ್ 22 ರಂದು ಆರಂಭಗೊಂಡಿತು. ಪ್ರವಾಹ ಭೀತಿ ನಿರ್ವಹಣೆ ಮತ್ತು ಹವಾಮಾನ ಬದಲಾವಣೆಯಿಂದ ವಾತಾವರಣದಲ್ಲಾಗುವ ವೈಪರೀತ್ಯಗಳ ಮುನ್ಸೂಚನೆ ವಿಷಯಗಳ ಬಗ್ಗೆ ಪ್ರಮುಖವಾಗಿ ಚರ್ಚಿಸಲಾಗುವುದು. ಪ್ರವಾಹ ಭೀತಿ ನಿರ್ವಹಣೆ ಮತ್ತು ಹವಾಮಾನ ಬದಲಾವಣೆಯಿಂದ ವಾತಾವರಣದಲ್ಲಾಗುವ ವೈಪರೀತ್ಯಗಳ ಮುನ್ಸೂಚನೆ ಬಗ್ಗೆ ಬ್ರಿಕ್ಸ್ ರಾಷ್ಟ್ರಗಳ ನಡುವೆ ತಂತ್ರಜ್ಞಾನ ವಿನಿಮಯ ಮಾಡಿಕೊಳ್ಳಲು ಈ ಕಾರ್ಯಕ್ರಮ ವೇದಿಕೆಯಾಗಲಿದೆ.

Question 3

3.ಇತ್ತೀಚೆಗೆ ನಿಧನರಾದ ಸುಬ್ರತ ಬ್ಯಾನರ್ಜಿ ಯಾವ ಕ್ರೀಡೆಯಲ್ಲಿ ಪ್ರಸಿದ್ದರಾಗಿದ್ದರು?

A
ಕ್ರಿಕೆಟ್
B
ಪುಟ್ಬಾಲ್
C
ಹಾಕಿ
D
ಟೆನ್ನಿಸ್
Question 3 Explanation: 
ಕ್ರಿಕೆಟ್:

ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟ್ ಅಂಪೈರ್ ಸುಬ್ರತ ಬ್ಯಾನರ್ಜಿ ಕೊಲ್ಕತ್ತದಲ್ಲಿ ನಿಧನರಾದರು. ಬ್ಯಾನರ್ಜಿ ಸುಮಾರು 15 ವರ್ಷಗಳ ಕಾಲ ಅಂತಾರಾಷ್ಟ್ರೀಯ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದರು. 1998 ರಲ್ಲಿ ಗ್ವಾಲಿಯರ್ ನಲ್ಲಿ ಭಾರತ-ಕೀನ್ಯಾ ನಡುವೆ ನಡೆದ ಪಂದ್ಯ ಅವರು ಅಂಪೈರ್ ಆಗಿ ಕಾರ್ಯನಿರ್ವಹಿಸಿದ ಕೊನೆಯ ಪಂದ್ಯವಾಗಿತ್ತು. ಬಿಸಿಸಿಐ ನ ಅಂಪೈರ್ ಕೋಚ್ ಆಗಿಯೂ ಅವರು ಸೇವೆ ಸಲ್ಲಿಸಿದ್ದರು.

Question 4

4.ಈ ಕೆಳಗಿನ ಯಾರಿಗೆ ಒಲಂಪಿಕ್ ಆರ್ಡರ್ (Olympic Order) ಪ್ರಶಸ್ತಿಯನ್ನು ನೀಡಲಾಯಿತು?

A
ಎನ್.ರಾಮಚಂದ್ರನ್
B
ಥಾಮಸ್ ಬಾಚ್
C
ಬ್ರಿಜೇಶ್ ಸಿಂಗ್
D
ರಜನೀಶ್ ಗೋಯಲ್
Question 4 Explanation: 
ಎನ್.ರಾಮಚಂದ್ರನ್:

ಭಾರತೀಯ ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷ ಎನ್.ರಾಮಚಂದ್ರನ್ ಅವರಿಗೆ ಒಲಂಪಿಕ್ ಆರ್ಡರ್ ಪ್ರಶಸ್ತಿಯನ್ನು ನೀಡಲಾಯಿತು. ಒಲಂಪಿಕ್ ಕ್ರೀಡಕೂಟ ಆಯೋಜನೆಗೆ ನೀಡಿರುವ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಗೆ ರಾಮಚಂದ್ರನ್ ಅವರನ್ನು ಆಯ್ಕೆಮಾಡಲಾಗಿದೆ. ಅಂತಾರಾಷ್ಟ್ರೀಯ ಒಲಂಪಿಕ್ ಸಮಿತಿ ಅಧ್ಯಕ್ಷ ಥಾಮಸ್ ಬಾಚ್ ಅವರು ಪ್ರಶಸ್ತಿಯನ್ನು ಪ್ರಧಾನ ಮಾಡಿದರು.

Question 5

5.ವಿಶ್ವ ಸೊಳ್ಳೆ ದಿನ (World Mosquito Day) ಯಾವ ದಿನದಿಂದ ಆಚರಿಸಲಾಗುತ್ತದೆ?

A
ಆಗಸ್ಟ್ 19
B
ಆಗಸ್ಟ್ 20
C
ಆಗಸ್ಟ್ 21
D
ಆಗಸ್ಟ್ 22
Question 5 Explanation: 
ಆಗಸ್ಟ್ 20:

ಪ್ರತಿ ವರ್ಷ ಆಗಸ್ಟ್ 20 ಅನ್ನು ವಿಶ್ವ ಸೊಳ್ಳೆ ದಿನವೆಂದು ಆಚರಿಸಲಾಗುತ್ತದೆ. ಮಲೇರಿಯಾ ರೋಗ ಹೆಣ್ಣು ಅನಾಫಿಲಿಸ್ ಸೊಳ್ಳೆಯಿಂದ ಹಬ್ಬುತ್ತದೆ ಎಂದು ರೊನಾಲ್ಡ್ ರಾಸ್ 1897ರಲ್ಲಿ ಕಂಡು ಹಿಡಿದ ದಿನವನ್ನು ಕಳೆದ 114 ವರ್ಷಗಳಿಂದ ವಿಶ್ವದಾದ್ಯಂತ 'ವಿಶ್ವ ಸೊಳ್ಳೆ ದಿನ' ಎಂದು ಆಚರಿಸಿಕೊಂಡು ಬರಲಾಗುತ್ತಿದೆ. ಈ ಶೋಧಕ್ಕಾಗಿ ರೊನಾಲ್ಡ್ ರಾಸ್ ಅವರಿಗೆ ನೋಬೆಲ್ ಪ್ರಶಸ್ತಿ ಪಡೆದಿದ್ದರು. ಸೊಳ್ಳೆಯಿಂದ ಹರಡುವ ಮಲೇರಿಯಾ ರೋಗ ಮತ್ತು ಅದರ ನಿಯಂತ್ರಣದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ಈ ದಿನದಂದು ಮಾಡಲಾಗುವುದು.

Question 6

6.ಯಾವ ರಾಜ್ಯದ ಪೊಲೀಸ್ ಇಲಾಖೆಯು ಅಪರಾಧ ಪಕ್ರರಣಗಳನ್ನು ನಿಯಂತ್ರಿಸುವ ಸಲುವಾಗಿ ದೇಶದಲ್ಲೇ ಮೊದಲೆನಿಸಿದ ಡಿಎನ್ಎ ಇಂಡೆಕ್ಸ್ ವ್ಯವಸ್ಥೆಯನ್ನು (DNA Index System) ಇತ್ತೀಚೆಗೆ ಜಾರಿಗೆ ತಂದಿದೆ?

A
ಕೇರಳ
B
ಹರಿಯಾಣ
C
ಆಂಧ್ರ ಪ್ರದೇಶ
D
ಉತ್ತರ ಪ್ರದೇಶ
Question 6 Explanation: 
ಆಂಧ್ರ ಪ್ರದೇಶ:

ಅಪರಾಧ ಪ್ರಕರಣ ನಿಯಂತ್ರಿಸುವ ಸಲುವಾಗಿ ಆಂಧ್ರ ಪ್ರದೇಶ ಪೊಲೀಸ್ ಇಲಾಖೆ ದೇಶದಲ್ಲೇ ಮೊದಲ ಬಾರಿಗೆ ಡಿಎನ್ಎ ಇಂಡೆಕ್ಸ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಈ ನೂತನ ವ್ಯವಸ್ಥೆಯಡಿ ಅಪರಾಧಿಗಳ ಮತ್ತು ಶಂಕಿತರ ಲಾಲಾರಸ ಮತ್ತು ರಕ್ತದ ಕಲೆಗಳಿಂದ ಡಿಎನ್ಎ ಪ್ರೋಪೈಲ್ ಅನ್ನು ಕೇವಲ 90 ರಿಂದ 120 ನಿಮಿಷದಲ್ಲಿ ರಚಿಸಬಹುದಾಗಿದ್ದು, ಅಪರಾಧಿಗಳನ್ನು ಸುಲಭವಾಗಿ ಪತ್ತೆಹಚ್ಚಬಹುದಾಗಿದೆ. ಅಲ್ಲದೇ ಶಂಕಿತರನ್ನು ಅಪರಾಧಿಗಳೇ ಅಥವಾ ನಿರಾಪಧಿಗಳ ಎಂಬುದನ್ನು ಸಾಬೀತುಪಡಿಸಲು ಸಾಧ್ಯವಾಗಲಿದೆ. ಇದಕ್ಕಾಗಿ ಅಮೆರಿಕಾ ಅಭಿವೃದ್ದಿಪಡಿಸಿರುವ RapidHit ಡಿಎನ್ಎ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗುತ್ತಿದೆ.

Question 7

7.2016 ವಿಶ್ವ ಕಬಡ್ಡಿ ಕಪ್ ಟೂರ್ನಮೆಂಟ್ ನಡೆಯಲಿರುವ ನಗರ _______?

A
ಬೆಂಗಳೂರು
B
ಚೆನ್ನೈ
C
ಅಹಮದಬಾದ್
D
ಮುಂಬೈ
Question 7 Explanation: 
ಅಹಮದಬಾದ್:

ಗುಜರಾತ್ನ ಅಹಮದಬಾದ್ ನಲ್ಲಿ 2016 ವಿಶ್ವ ಕಬಡ್ಡಿ ಕಪ್ ಆಯೋಜಿಸಲು ಅಂತಾರಾಷ್ಟ್ರೀಯ ಕಬಡ್ಡಿ ಫೆಡರೇಷನ್ ಸಮ್ಮತಿಸಿದೆ. ಅಕ್ಟೋಬರ್ 7ರಂದು ಆರಂಭಗೊಳ್ಳಿರುವ ಟೂರ್ನಮೆಂಟ್ ಅಕ್ಟೋಬರ್ 22, 2016 ರಂದು ಮುಕ್ತಾಯಗೊಳ್ಳಲಿದೆ. ಭಾರತ ಸೇರಿದಂತೆ ಒಟ್ಟು 12 ದೇಶಗಳು ಟೂರ್ನಿಯಲ್ಲಿ ಭಾಗವಹಿಸಲಿದೆ. 2014ರಲ್ಲಿ ಕೊನೆಯದಾಗಿ ನಡೆದ ಕಬಡ್ಡಿ ವಿಶ್ವಕಪ್ ನಲ್ಲಿ ಭಾರತ ನ್ಯೂಜಿಲ್ಯಾಂಡ್ ಅನ್ನು ಮಣಿಸಿ ಚಾಂಪಿಯನ್ ಆಗಿತ್ತು.

Question 8

8.ಈ ಕೆಳಗಿನ ಯಾರು ಹೋಮಿ ಬಾಬಾ ನ್ಯಾಷನಲ್ ಇನ್ಸ್ಟಿಟ್ಯೂಟ್ನ ನೂತನ ವೈಸ್ ಚಾನ್ಸೆಲರ್ ಆಗಿ ನೇಮಕಗೊಂಡಿದ್ದಾರೆ?

A
ಪಿ.ಡಿ.ಗುಪ್ತಾ
B
ನವೀನ್ ಕಿರಣ್
C
ಜಗದೀಶ್ ನಾಯಕ್
D
ರವೀಂದ್ರ ಪಟ್ನಾಯಕ್
Question 8 Explanation: 
ಪಿ.ಡಿ.ಗುಪ್ತಾ:

ಖ್ಯಾತ ವಿಜ್ಞಾನಿ ಪಿ.ಡಿ.ಗುಪ್ತಾ ಅವರು ಮುಂಬೈ ಮೂಲದ ಹೋಮಿ ಬಾಬಾ ನ್ಯಾಷನಲ್ ಇನ್ಸ್ಟಿಟ್ಯೂಟ್ನ (HBNI)ನ ವೈಸ್ ಚಾನ್ಸಲರ್ ಆಗಿ ನೇಮಕಗೊಂಡಿದ್ದಾರೆ. ಗುಪ್ತಾ ಐದು ವರ್ಷಗಳ ಕಾಲ ಹುದ್ದೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಪರಮಾಣು ಶಕ್ತಿ ಇಲಾಖೆಯಡಿ ಕಾರ್ಯನಿರ್ವಹಿಸುವ ಹೋಮಿ ಬಾಬಾ ನ್ಯಾಷನಲ್ ಇನ್ಸ್ಟಿಟ್ಯೂಟ್ ಯುಜಿಸಿ ಕಾಯಿದೆಯಡಿ ವಿಶ್ವವಿದ್ಯಾಲಯದ ಮಾನ್ಯತೆಯನ್ನು

Question 9

9.ಇತ್ತೀಚೆಗೆ ನಿಧನರಾದ ಎಸ್.ಆರ್.ನಾಥನ್ ಅವರು ಯಾವ ದೇಶದ ಮಾಜಿ ಅಧ್ಯಕ್ಷರು?

A
ವಿಯಟ್ನಾಂ
B
ಸಿಂಗಾಪುರ
C
ಮಾರಿಷಸ್
D
ಶ್ರೀಲಂಕಾ
Question 9 Explanation: 
ಸಿಂಗಾಪುರ:

ಸಿಂಗಾಪುರದ ಮಾಜಿ ಅಧ್ಯಕ್ಷ ಎಸ್.ಆರ್.ನಾಥನ್ (92) ಅನಾರೋಗ್ಯದ ನಿಮಿತ್ತ ನಿಧನರಾದರು. 1924 ರಲ್ಲಿ ಮಲೇಷಿಯಾದಲ್ಲಿ ಹುಟ್ಟಿದ ನಾಥನ್, ಕುಟುಂಬದ ಜೊತೆ ಸಿಂಗಾಪುರಕ್ಕೆ ತೆರಳಿ ನೆಲಸಿದರು. 1999 ರಿಂದ 2011ರ ವರೆಗೆ ಸಿಂಗಾಪುರದ ಅಧ್ಯಕ್ಷರಾಗಿದ್ದರು. ನಾಥನ್ ಸಿಂಗಾಪುರ ಇತಿಹಾಸದಲ್ಲೇ ದೀರ್ಘಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಕೀರ್ತಿ ಹೊಂದಿದ್ದಾರೆ.

Question 10

10.ಈ ಕೆಳಗಿನ ಯಾರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಮೊದಲ ಮುಸ್ಲಿಂ ಅಧ್ಯಕ್ಷರಾಗಿದ್ದಾರೆ?

A
ಅಬ್ದುಲ್ ಕಲಾಂ ಅಜಾದ್
B
ರಫಿ ಅಹಮ್ಮದ್ ಕಿದ್ವಾಯಿ
C
ಬಬ್ರುದ್ದೀನ್ ತ್ಯಾಬ್ಜಿ
D
ಹಕೀಂ ಅಜ್ಮಲ್ ಖಾನ್
Question 10 Explanation: 
ಬಬ್ರುದ್ದೀನ್ ತ್ಯಾಬ್ಜಿ:

ಬಬ್ರುದ್ದೀನ್ ತ್ಯಾಬ್ಜಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಮೊದಲ ಮುಸ್ಲಿಂ ಅಧ್ಯಕ್ಷರು. ತ್ಯಾಬ್ಜಿ ಅವರು 1867 ಮುಂಬೈನ ಮೊದಲ ಭಾರತೀಯ ಬ್ಯಾರಿಸ್ಟರ್ ಸಹ ಎನಿಸಿದ್ದರು. ಮುಂಬೈನ ಮುಖ್ಯ ನ್ಯಾಯಾಧೀಶ ಹುದ್ದೆಯನ್ನು ಅಲಂಕರಿಸಿದ ಮೊದಲ ಭಾರತೀಯ ಸಹ ಆಗಿದ್ದಾರೆ.

There are 10 questions to complete.

6 Thoughts to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಆಗಸ್ಟ್ 22, 2016”

  1. Basavaraj

    Thanks sir

  2. Anonymous

    Thanks sir

  3. ಸಂತೋಷ್ ಗೌಡರ

    ಧನ್ಯವಾದಗಳು ಸರ್

Leave a Comment

This site uses Akismet to reduce spam. Learn how your comment data is processed.