2016 ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ: ಸಿಂಧು, ಸಾಕ್ಷಿ ಮಲಿಕ್, ದೀಪಾ ಕಮಾರ್ಕರ್ ಮತ್ತು ಜಿತು ರಾಯ್ ಗೆ ಖೇಲ್ ರತ್ನ

ಕ್ರೀಡಾ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ತೋರಿದವರಿಗೆ ಕೇಂದ್ರ ಸರ್ಕಾರ ನೀಡುವ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಯನ್ನು 2016ನೇ ಸಾಲಿಗೆ ಪ್ರಕಟಿಸಿದೆ.

ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ:

ಪಿವಿ ಸಿಂಧು –ಬ್ಯಾಡ್ಮಿಂಟನ್, ದೀಪಾ ಕರ್ಮಾಕರ್ – ಜಿಮ್ನಾಸ್ಟಿಕ್ಸ್, ಜಿತು ರಾಯ್ – ಶೂಟಿಂಗ್ ಮತ್ತು ಸಾಕ್ಷಿ ಮಲಿಕ್ – ಕುಸ್ತಿ.

ಅರ್ಜುನ ಪ್ರಶಸ್ತಿ: ಶ್ರೀ ರಜತ್ ಚೌಹಾಣ್ – ಬಿಲ್ವಿದ್ಯೆ, ಶಿವ ಥಾಪಾ – ಬಾಕ್ಸಿಂಗ್, ಅಜಿಂಕ್ಯ ರೆಹಾನೆ- ಕ್ರಿಕೆಟ್, ಲಲಿತಾ ಬಾಬರ್ ಅಥ್ಲೆಟಿಕ್ಸ್, ಅಮಿತ್ ಕುಮಾರ್ – ಕುಸ್ತಿ, ಸಂದೀಪ್ ಸಿಂಗ್ ಮನ್ನ್ – ಪ್ಯಾರಾ ಅಥ್ಲೆಟಿಕ್ಸ್, ವಿರೇಂದ್ರ ಸಿಂಗ್- ಕುಸ್ತಿ, ಸೌರವ್ ಕೊಠಾರಿ – ಬಿಲಿಯರ್ಡ್ ಮತ್ತು ಸ್ನೂಕರ್ ಅಪೂರ್ಮಿ ಚಂಡೇಲಾ –ಶೂಟಿಂಗ್, ಸೌಮ್ಯಜಿತ್ ಘೋಷ್- ಟೇಬಲ್ ಟೆನಿಸ್, ವಿನೇಶ್ ಫೋಗಟ್ – ಕುಸ್ತಿ, ಸುಬ್ರತಾ ಪೌಲ್ –ಫುಟ್ಬಾಲ್, ರಾಣಿ – ಹಾಕಿ, ರಘುನಾಥ್ ವಿ. ಆರ್- ಹಾಕಿ ಮತ್ತು ಗುರ್ಪ್ರೀತ್ ಸಿಂಗ್- ಶೂಟಿಂಗ್.
ಧ್ಯಾನ್ ಚಂದ್ ಪ್ರಶಸ್ತಿ: ಸತ್ತಿ ಗೀತಾ – ಅಥ್ಲೆಟಿಕ್ಸ್, ರಾಜೇಂದ್ರ ಪ್ರಹ್ಲಾದ್ ಶೆಲ್ಕೆ-ರೋಯಿಂಗ್, ಸೆಲ್ವಾನಸ್ ಡುಂಗ್ ಡುಂಗ್ -ಹಾಕಿ

ದ್ರೋಣಾಚಾರ್ಯಪ್ರಶಸ್ತಿ:
ರಾಜ್ ಕುಮಾರ್ ಶರ್ಮಾ –ಕ್ರಿಕೆಟ್, ಬಿಶೇಶ್ವರ್ ನಂದಿ- ಜಿಮ್ನಾಸ್ಟಿಕ್ಸ್, ನಾಗಪುರಿ ರಮೇಶ್ –ಅಥ್ಲೆಟಿಕ್ಸ್, ಸಾಗರ್ ಮಲ್ ದಯಾಳ್ – ಬಾಕ್ಸಿಂಗ್, ಎಸ್ ಪ್ರದೀಪ್ ಕುಮಾರ್ – ಈಜು (ಜೀವಮಾನ ಸಾಧನೆ), ಮಹಾಬೀರ್ ಸಿಂಗ್ – ಕುಸ್ತಿ (ಜೀವಮಾನ ಸಾಧನೆ).

ಖೇಲ್ ರತ್ನ ಪ್ರಶಸ್ತಿ: ಖೇಲ್ ರತ್ನ ಪ್ರಶಸ್ತಿಯು ಪದಕ, ಸ್ಮರಣಿಕೆ, ಪ್ರಶಸ್ತಿ ಪತ್ರ ಮತ್ತು ರು.7.5 ಲಕ್ಷ ನಗದು ಬಹುಮಾನವನ್ನು ಹೊಂದಿದೆ. ಅರ್ಜುನ ಪ್ರಶಸ್ತಿ, ದ್ರೋಣಾಚಾರ್ಯ ಮತ್ತು ಧ್ಯಾನ್‍ಚಂದ್ ಪ್ರಶಸ್ತಿಯು ಸ್ಮರಣಿಕೆ, ಪ್ರಶಸ್ತಿ ಪತ್ರ ಮತ್ತು ತಲಾ ರು. 5 ಲಕ್ಷ ನಗದು ಬಹುಮಾನವನ್ನು ಹೊಂದಿದೆ.

ಸಿಂಗಾಪುರದ ಮಾಜಿ ಅಧ್ಯಕ್ಷ ಎಸ್ ಆರ್ ನಾಥನ್ ನಿಧನ

ಭಾರತ ಮೂಲದ ಸಿಂಗಾಪುರದ ಮಾಜಿ ಅಧ್ಯಕ್ಷ ಎಸ್.ಆರ್.ನಾಥನ್ ನಿಧನರಾದರು. ನಾಥನ್ ಸಿಂಗಾಪುರದ ಆರನೇ ಅಧ್ಯಕ್ಷರಾಗಿದ್ದು ಈ ಹುದೆಯಲ್ಲಿ ದೀರ್ಘಕಾಲ ಸೇವೆಸಲ್ಲಿಸಿದ್ದ ಖ್ಯಾತಿಯನ್ನು ಹೊಂದಿದ್ದಾರೆ.

ನಾಥನ್ ಬಗ್ಗೆ:

  • ಸೆಲ್ಲಪನ್ ರಾಮನಾಥನ್ ಜುಲೈ 3, 1924 ರಲ್ಲಿ ಜನಸಿದರು. ಭಾರತ ಮೂಲದ ತಮಿಳು ಕುಟುಂಬದಲ್ಲಿ ಜನಸಿದ ಇವರು ಸಿಂಗಾಪುರದಲ್ಲಿ ನೆಲೆಸಿದ್ದರು.
  • 1999 ರಿಂದ 2011ರವರೆಗೆ ಎರಡು ಅವಧಿಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. 1999 ರಲ್ಲಿ ಮೊದಲ ಬಾರಿಗೆ ಅಧ್ಯಕ್ಷ ಹುದ್ದೆಗೆ ಅವಿರೋಧವಾಗಿ ಆಯ್ಕೆಯಾಗಿದ್ದು ವಿಶೇಷ.
  • 2011 ರಲ್ಲಿ ಮೂರನೇ ಬಾರಿಗೆ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಲು ಇಚ್ಚಿಸಿದೆ ಹುದ್ದೆಯಿಂದ ಕೆಳಗಿಳಿದು ಇನ್ ಸ್ಟಿಟ್ಯೂಟ್ ಆಫ್ ಸೌತ್ ಏಷಿಯನ್ ಸ್ಟಡೀಸ್ ಮತ್ತು ಸಿಂಗಾಪುರ ಮ್ಯಾನೆಜ್ಮೆಂಟ್ ಯೂನಿವರ್ಸಿಟಿ ಸ್ಕೂಲ್ ಆಫ್ ಸೋಶಿಯಲ್ ಸೈನ್ಸ್ ನಲ್ಲಿ ಸಿನಿಯರ್ ಫೆಲೊ ಆಗಿ ಕಾರ್ಯನಿರ್ವಹಿಸಿದ್ದರು.
  • ಭಾರತ ಮತ್ತು ಸಿಂಗಾಪುರ ದೇಶಗಳ ನಡುವೆ ಸಂಬಂಧವನ್ನು ವೃದ್ದಿಪಡಿಸಿದಕ್ಕಾಗಿ ಭಾರತ ಸರ್ಕಾರ ಇವರಿಗೆ 2012 ರಲ್ಲಿ ಪ್ರವಾಸಿ ಭಾರತೀಯ ಸಮ್ಮಾನ್ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.

ತಂತ್ರಜ್ಞಾನ ಆಧಾರಿತ ಸ್ಟಾರ್ಟ್ ಆಫ್: ಭಾರತಕ್ಕೆ ಮೂರನೇ ಸ್ಥಾನ

ತಂತ್ರಜ್ಞಾನ ಆಧಾರಿತ ಸ್ಟಾರ್ಟ್ ಆಫ್ ಗಳನ್ನು ಆರಂಭಿಸುವ ವಿಷಯದಲ್ಲಿ ಭಾರತ ವಿಶ್ವದ ಮೂರನೇ ಅತಿದೊಡ್ಡ ದೇಶವಾಗಿದೆ. ಅಮೆರಿಕಾ ಮತ್ತು ಇಂಗ್ಲೆಂಡ್ ಪಟ್ಟಿಯಲ್ಲಿ ಕ್ರಮವಾಗಿ ಪ್ರಥಮ ಮತ್ತು ಎರಡನೇ ಸ್ಥಾನದಲ್ಲಿವೆ. ಅಸ್ಸೋಚಾಮ್ ಅಸೋಷಿಯೇಶನ್ ಅರ್ಬಿಟ್ರೇಜ್ ಸಂಶೋಧನಾ ಸಂಸ್ಥೆ ಜಂಟಿಯಾಗಿ ನಡೆಸಿದ ಸಮೀಕ್ಷೆಯಲ್ಲಿ ಈ ವಿಷಯ ಬಹಿರಂಗಗೊಂಡಿದೆ.

ಸಮೀಕ್ಷೆ ಪ್ರಮುಖಾಂಶಗಳು:

  • ಸಮೀಕ್ಷೆ ಪ್ರಕಾರ ಅಮೆರಿಕದಲ್ಲಿ 47 ಸಾವಿರ ಸ್ಟಾರ್ಟ್ ಅಪ್​ಗಳಿದ್ದರೆ, ಬ್ರಿಟನ್​ನಲ್ಲಿ 4,500 ಸ್ಟಾರ್ಟ್ ಅಪ್​ಗಳಿವೆ. ಮೂರನೇ ಸ್ಥಾನದಲ್ಲಿರುವ ಭಾರತದಲ್ಲಿ 4200 ಸ್ಟಾರ್ಟ್ ಆಫ್ ಕಾರ್ಯನಿರ್ವಹಿಸುತ್ತಿವೆ.
  • ತಾಂತ್ರಿಕ ಮತ್ತು ತಾಂತ್ರಿಕೇತರ ಸ್ಟಾರ್ಟ್ ಉದ್ಯಮದಲ್ಲಿ ಚೀನಾ ಅಗ್ರಸ್ಥಾನದಲ್ಲಿದ್ದರೆ, ಭಾರತ 5ನೇ ಸ್ಥಾನವನ್ನು ಪಡೆದುಕೊಂಡಿದೆ.
  • ಸ್ಟಾರ್ಟ್ ಆಫ್ ಗಳಲ್ಲಿ ದೇಶದಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಕ್ರಮವಾಗಿ ದೆಹಲಿ, ಮುಂಬೈ, ಹೈದ್ರಾಬಾದ್ ಮತ್ತು ಚೆನ್ನೈ ನಗರಗಳು ಗುರುತಿಸಿಕೊಂಡಿವೆ.
  • ಸ್ಟಾರ್ಟ್‌ಅಪ್ ಗಳಲ್ಲಿ ಸಾಪ್ಟ್ವೇರ್ ರಾಜಧಾನಿ ಖ್ಯಾತಿಯ ಬೆಂಗಳೂರು ಶೇ. 26ರಷ್ಟು ಪಾಲನ್ನು ಹೊಂದಿದೆ. ದೆಹಲಿ ಶೇ. 23 ಹಾಗೂ ಮುಂಬೈ ಶೇ. 17 ಪಾಲನ್ನು ಹೊಂದಿದೆ.

ಚೀನಾದಲ್ಲಿ ವಿಶ್ವದ ಅತಿ ಎತ್ತರದ ಮತ್ತು ಉದ್ದದ ಗಾಜು ಸೇತುವೆ ಅನಾವರಣ

ವಿಶ್ವದ ಅತಿ ಎತ್ತರದ ಮತ್ತು ಉದ್ದದ ಗಾಜಿನ ಸೇತುವೆಯನ್ನು ಚೀನಾದಲ್ಲಿ ಲೋಕಾರ್ಪಣೆ ಮಾಡಲಾಯಿತು. ಚೀನಾದ ಹುನಾನ್ ಪ್ರಾಂತ್ಯದಲ್ಲಿ ಬೃಹತ್ ಗಾಜಿನ ಸೇತುವೆಯನ್ನು ನಿರ್ಮಿಸಲಾಗಿದ್ದು, ವಿಶ್ವದ ಅತಿ ಎತ್ತರದ ಮತ್ತು ಅತಿ ಉದ್ದದ ಗಾಜು ಸೇತುವೆ ಎಂಬ ಖ್ಯಾತಿಗೆ ಒಳಗಾಗಿದೆ. ಚೀನಾನ್ ಹುನಾನ್ ಪ್ರಾಂತ್ಯದಲ್ಲಿರುವ ಎರಡು ಬೆಟ್ಟಗಳನ್ನು ಈ ಸೇತುವೆ ಸಂಪರ್ಕಸಲಿದೆ.

ಗಾಜು ಸೇತುವೆಯ ವಿಶೇಷತೆಗಳು:

  • ಮೂರು ಪದರ ಗಾಜಿನ ಕೋಟಿಂಗ್ ಹೊಂದಿರುವ ಈ ಗಾಜಿನ ಸೇತುವೆ 430 ಮೀಟರ್ ಉದ್ದ ಮತ್ತು 6 ಮೀಟರ್ ಅಗಲವಿದೆ.
  • ಯಾನ್ಮನ್ ಮೌಂಟೇನ್ ನ್ಯಾಷನಲ್ ಪಾರ್ಕ್ನ ಕಣಿವೆಯಲ್ಲಿ ಸಮುದ್ರ ಮಟ್ಟದಿಂದ 430 ಮೀಟರ್ ಎತ್ತರದಲ್ಲಿ ಈ ಸೇತುವೆ ನಿರ್ಮಾಣಗೊಂಡಿದೆ. ಹಾಲಿವುಡ್​ನ ಸೂಪರ್​ಹಿಟ್ ಚಿತ್ರ “ಅವತಾರ್’ ಕೆಲಭಾಗವನ್ನು ಇದೇ ಪಾರ್ಕ್ನ ಬೆಟ್ಟದ ತಪ್ಪಲಲ್ಲಿ ಶೂಟಿಂಗ್ ಮಾಡಲಾಗಿತ್ತು ಎಂಬುದು ವಿಶೇಷ.
  • ಇಸ್ರೇಲ್ ನ ವಾಸ್ತುಶಿಲ್ಪಿ ಹೈಮ್ ಡೊಟನ್ ಈ ಸೇತುವೆಯನ್ನು ವಿನ್ಯಾಸಗೊಳಿಸಿದ್ದಾರೆ.
  • ಈ ಸೇತುವೆಯ ನಿರ್ಮಾಣ ಡಿಸೆಂಬರ್ 2015 ರಂದು ಪೂರ್ಣಗೊಂಡಿತ್ತು. ಆದರೆ ಸುರಕ್ಷತ ಪರೀಕ್ಷೆಗಳನ್ನು ನಡೆಸಿದ ಮೇಲೆ ವೀಕ್ಷಕರಿಗೆ ಮುಕ್ತಗೊಳಿಸಲಾಗಿದೆ.
  • ಪ್ರತಿದಿನ 8000 ಪ್ರವಾಸಿಗರಿಗೆ ಈ ಸೇತುವೆಯನ್ನು ವೀಕ್ಷಿಸಲು ಅವಕಾಶ ನೀಡಲಾಗುವುದು.

ಖ್ಯಾತ ಹಿಂದಿ ಲೇಖಕಿ ಸುನೀತಾ ಜೈನ್ ಗೆ ವ್ಯಾಸ ಸಮ್ಮಾನ್ ಪ್ರಶಸ್ತಿ ಪ್ರಧಾನ

ಖ್ಯಾತ ಹಿಂದಿ ವಿದ್ವಾಂಸಕಿ ಮತ್ತು ಲೇಖಕಿ ಸುನೀತಾ ಜೈನ್ ಅವರಿಗೆ 25ನೇ ವ್ಯಾಸ ಸಮ್ಮಾನ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಪಶ್ಚಿಮ ಬಂಗಾಳದ ಗವರ್ನರ್ ಕೆ.ಎನ್.ತ್ರಿಪಾಠಿ ಅವರು ಪ್ರಶಸ್ತಿಯನ್ನು ಪ್ರಧಾನ ಮಾಡಿದರು. ಸುನೀತಾ ಜೈನ್ ಅವರ 2008 ರಲ್ಲಿ ಪ್ರಕಟಣಗೊಂಡ “ಕ್ಷಮಾ” ಕವನ ಸಂಕಲನಕ್ಕೆ ಈ ಪ್ರಶಸ್ತಿಯನ್ನು ನೀಡಲಾಗಿದೆ.

ಸುನೀತಾ ಜೈನ್ ಬಗ್ಗೆ:

  • ಸುನೀತಾ ಜೈನ್ ಖ್ಯಾತ ಹಿಂದಿ ಲೇಖಕಿ ಮತ್ತು ವಿದ್ವಾಂಸಕಿ. ಹಿಂದಿ ಮತ್ತು ಇಂಗ್ಲೀಷ್ ಎರಡು ಭಾಷೆಯಲ್ಲೂ ಸಣ್ಣಕಥೆಗಳನ್ನು ರಚಿಸುವ ಮೂಲಕ ಇವರು ಪ್ರಸಿದ್ದರಾಗಿದ್ದಾರೆ. ಸುನೀತಾ ತಮ್ಮ 22ನೇ ವಯಸ್ಸಿನಿಂದಲೇ ಸಾಹಿತ್ಯದ ಕಡೆ ಆಕರ್ಷಣೆಗೊಂಡವರು.
  • ಕಥೆ, ಸಣ್ಣ ಕಥೆ ಮತ್ತು ಕಾದಂಬರಿಗಳನ್ನು ಹೊರತುಪಡಿಸಿ ಸುಮಾರು 100 ಪುಸ್ತಕಗಳನ್ನು ಇವರು ಬರೆದಿದ್ದಾರೆ. ಸಾಕಷ್ಟು ಜೈನ ಕೃತಿಗಳನ್ನು ಇಂಗ್ಲೀಷ್ ಗೆ ತರ್ಜುಮೆ ಮಾಡಿದ್ದಾರೆ.
  • ಸಾಹಿತ್ಯ ಲೋಕಕ್ಕೆ ಆಗಾಧ ಕೊಡುಗೆ ನೀಡಿರುವ ಸುನೀತಾ ಅವರಿಗೆ 2004 ರಲ್ಲಿ ಪದ್ಮಶ್ರೀ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ನೀಡಲಾಗಿದೆ.

ವ್ಯಾಸ ಸಮ್ಮಾನ್ ಪ್ರಶಸ್ತಿ ಬಗ್ಗೆ:

  • ಕೆ.ಕೆ.ಬಿರ್ಲಾ ಫೌಂಡೇಷನ್ ಈ ಪ್ರಶಸ್ತಿಯನ್ನು 1991 ರಲ್ಲಿ ಸ್ಥಾಪಿಸಿದೆ.
  • ಹಿಂದಿ ಸಾಹಿತ್ಯಕ್ಕೆ ಅಗಾಧ ಕೊಡುಗೆ ನೀಡಿದ ಭಾರತೀಯ ಪ್ರಜೆಗೆ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
  • ಪ್ರಶಸ್ತಿಯು ರೂ 2.5 ಲಕ್ಷ ನಗದು, ಸ್ಮರಣಿಕೆ ಮತ್ತು ಫಲಕವನ್ನು ಒಳಗೊಂಡಿದೆ.

5 Thoughts to “ಪ್ರಚಲಿತ ವಿದ್ಯಮಾನಗಳು-ಆಗಸ್ಟ್ 22, 2016”

  1. Anonymous

    Good information.

  2. Anonymous

    Daily not updated.please update.

    1. Anonymous

      Quizs are upadted

  3. Anonymous

    Quizs are updated

Leave a Comment

This site uses Akismet to reduce spam. Learn how your comment data is processed.