ಬ್ರಿಕ್ಸ್ (BRICS) ಮಹಿಳಾ ಸಂಸದರ ಸಭೆಗೆ ಚಾಲನೆ

ಬ್ರಿಕ್ಸ್ ರಾಷ್ಟ್ರಗಳ ಮಹಿಳಾ ಸಂಸದರ ಸಭೆ ರಾಜಸ್ತಾನದ ಜೈಪುರದಲ್ಲಿ ಆರಂಭಗೊಂಡಿತು. ಬ್ರಿಕ್ಸ್ ರಾಷ್ಟ್ರಗಳೆಂದರೆ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಪ್ರಿಕಾ. ಎರಡು ದಿನದ ಈ ಸಭೆಯನ್ನು ಲೋಕ ಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಉದ್ಗಾಟಿಸಿದರು.

  • ಸಭೆಯಲ್ಲಿ ಬ್ರಿಕ್ಸ್ ರಾಷ್ಟ್ರಗಳ 43 ಮಹಿಳಾ ಸಂಸದರು ಭಾಗವಹಿಸಲಿದ್ದಾರೆ.
  • ಬ್ರೆಜಿಲ್ ನ ಐದು ಮಹಿಳಾ ಸಂಸದರು, ರಷ್ಯಾದ ಮೂರು, ಭಾರತದಿಂದ ಇಪ್ಪತ್ತೆಂಟು, ಚೀನಾದ ಇಬ್ಬರು ಹಾಗೂ ದಕ್ಷಿಣ ಆಫ್ರಿಕಾದಿಂದ ನಾಲ್ಕು ಮಹಿಳಾ ಸಂಸದರು ಪಾಲ್ಗೊಳ್ಳಲ್ಲಿದ್ದಾರೆ.
  • ಮೊದಲ ಅಧಿವೇಶನದಲ್ಲಿ ಸುಸ್ಥಿರ ಅಭಿವೃದ್ದಿ ಗುರಿಗಳನ್ನು ಸಾಧಿಸುವುದು ಮತ್ತು ಅದಕ್ಕೆ ನಾಗರೀಕರನ್ನು ಒಳಪಡಿಸುವಲ್ಲಿ ಮಹಿಳಾ ಸಂಸದರ ಪಾತ್ರದ ಬಗ್ಗೆ ಚರ್ಚಿಸಲಾಗುವುದು.
  • ಎರಡನೇ ದಿನದ ಅಧಿವೇಶನದಲ್ಲಿ ಹವಾಮಾನ ಬದಲಾವಣೆ ನಿಗ್ರಹಿಸುವುದು-ಜಾಗತಿಕ ಸಹಕಾರ ಅಗತ್ಯದ ಬಗ್ಗೆ ಚರ್ಚಿಸಲಾಗುವುದು.

ಒಲಂಪಿಕ್ಸ್ ಓಟದಲ್ಲಿ 9 ಚಿನ್ನದ ಪದಕ ಗೆದ್ದು ದಾಖಲೆ ನಿರ್ಮಿಸಿದ ಉಸೇನ್ ಬೋಲ್ಟ್

ಜಮೈಕಾದ ವೇಗಿ ಉಸೇನ್ ಬೋಲ್ಟ್ ಅವರು ರಿಯೋ ಒಲಂಪಿಕ್ಸ್ನಲ್ಲಿ ಮೂರು ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದರು. ಬೋಲ್ಟ್‌ ರಿಯೋ ಕೂಟದ ಪುರುಷರ 4X100 ಮೀ. ರಿಲೇ ಸ್ಪರ್ಧೆಯಲ್ಲಿ ಜಮೈಕ ತಂಡವನ್ನು ಚಿನ್ನದೆಡೆಗೆ ಮುನ್ನಡೆಸಿ ಈ ದಾಖಲೆ ನಿರ್ಮಿಸಿದರು. ಈ ರಿಲೇ ತಂಡದಲ್ಲಿ ಉಸೇನ್ ಬೋಲ್ಟ್, ಅಸಫ್ ಪೊವೆಲ್, ಯೊಹನ್ ಬ್ಲೆಕ್ ಮತ್ತು ನಿಕಲ್ ಅಶ್ಮಡೆ ಭಾಗವಹಿಸಿದ್ದರು. ರಿಯೋ ಕ್ರೀಡಾಕೂಟದ 100ಮೀ ಓಟದಲ್ಲಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದರು. ಆ ಮೂಲಕ ಸತತವಾಗಿ ಮೂರು ಒಲಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಮೊದಲ ಅಥ್ಲೆಟ್ ಎನಿಸಿದ್ದರು. ನಂತರ 200 ಮೀ 200 ಮೀ. ಓಟದಲ್ಲೂ ಚಿನ್ನ ಜಯಿಸಿದ್ದ ಬೋಲ್ಟ್‌ ರಿಯೊ ಕೂಟದಲ್ಲಿ ‘ಟ್ರಿಪಲ್‌’ ಸಾಧನೆ ಮಾಡಿದರು. 2008ರ ಬೀಜಿಂಗ್‌ ಮತ್ತು 2012ರ ಲಂಡನ್‌ ಕೂಟದಲ್ಲೂ ಅವರು ಇದೇ ಸಾಧನೆ ಮಾಡಿದ್ದರು.

ಉಸೇನ್ ಬೋಲ್ಟ್:

  • ಉಸೇನ್ ಬೋಲ್ಟ್ ಜಮೈಕಾದ ವೇಗದ ಸರದಾರ. ಓಟದಲ್ಲಿ ವಿಶೇಷ ಸಾಧನೆ ಮಾಡಿರುವ ಇವರನ್ನು “ಲೈಟ್ನಿಂಗ್ ಬೋಲ್ಟ್” ಎಂದು ಕರೆಯಲಾಗುತ್ತದೆ.
  • ವಿಶ್ವದಲ್ಲೆ ಅತ್ಯಂತ ವೇಗವಾಗಿ ಓಡುವ ವ್ಯಕ್ತಿ ಎಂದೇ ಇವರನ್ನು ಬಣ್ಣಿಸಲಾಗಿದೆ. 100 ಮೀಟರ್ ಓಟ ಹಾಗು 2೦೦ ಮೀಟರ್ ಓಟ ಸ್ಪರ್ಧೆಗಳಲ್ಲಿ ವಿಶ್ವ ಹಾಗು ಒಲಂಪಿಕ್ ದಾಖಲೆಗಳನ್ನು ಹೊಂದಿದ್ದಾರೆ.
  • ಜಮೈಕದ ಇತರ ತಂಡಗಾರರೊಂದಿಗೆ 4 x 1೦೦ ಮೀಟರ್ ರಿಲೇ ಸ್ಪರ್ಧೆಯಲ್ಲೂ ವಿಶ್ವದಾಖಲೆ ಸೃಷ್ಟಿಸಿದ್ದಾರೆ.

ಭಾರತೀಯ ಅಂಚೆ ಪಾವತಿ ಬ್ಯಾಂಕ್ ಲಿಮೆಟೆಡ್ ಗೆ (IPPBL)ಅಧಿಕೃತ ಒಪ್ಪಿಗೆ

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮೈಲುಗಲ್ಲು ಸ್ಥಾಪಿಸಲು ಭಾರತೀಯ ಅಂಚೆ ಸಜ್ಜಾಗಿದ್ದು, ಇದೀಗ ಭಾರತೀಯ ಅಂಚೆ ಪಾವತಿ ಬ್ಯಾಂಕ್ ಲಿಮೆಟೆಡ್ (Indian Post Payments Bank Limited) ಸ್ಥಾಪಿಸಲು ಅಧಿಕೃತವಾಗಿ ಅನುಮೋದನೆ ದೊರೆತಿದೆ. ಕಾರ್ಪೋರೇಟ್ ವ್ಯವಹಾರದ ಸಚಿವಾಲಯಗಳ ಕಂಪನಿ ನೋಂದಾಣಲಯ ಐಪಿಪಿಬಿಎಲ್ ಸ್ಥಾಪಿಸಲು ಪ್ರಮಾಣ ಪತ್ರ ನೀಡಿದೆ. ಕಂಪನಿ ಕಾಯಿದೆ 2013 ರಡಿ ಇದಕ್ಕೆ ಅನುಮೋದನೆ ನೀಡಲಾಗಿದೆ.  ಐಪಿಪಿಬಿಎಲ್ ಭಾರತೀಯ ಅಂಚೆ ಇಲಾಖೆಯ ಮೊದಲ ಸರ್ಕಾರಿ ಸ್ವಾಮದ್ಯ ಸಂಸ್ಥೆಯಾಗಿದೆ (PSU). ಇದರ ಜೊತೆ ಭಾರತೀಯ ಅಂಚೆ ಪಾವತಿ ಬ್ಯಾಂಕ್ ಲಿಮೆಟೆಡ್ ಮಂಡಳಿ ಸಹ ರಚನೆಯಾಗಲಿದೆ.

  • ಭಾರತೀಯ ಅಂಚೆ ಪಾವತಿ ಬ್ಯಾಂಕ್ ಲಿಮೆಟೆಡ್ ಸ್ಥಾಪನೆಯಿಂದ ಅಂಚೆ ಬ್ಯಾಂಕಿಂಗ್ ಹಾದಿ ಸುಗಮವಾಗಲಿದ್ದು, ಬ್ಯಾಂಕಿಂಗ್ ವೃತ್ತಿಪರರ ನೇಮಕಾತಿ ಆರಂಭಗೊಳ್ಳಲಿದ್ದು, 2017ರಲ್ಲಿ ಬ್ಯಾಂಕಿಂಗ್ ಸೇವೆ ದೊರೆಯಲಿದೆ.
  • ಸೆಪ್ಟೆಂಬರ್ 2017 ರ ಅಂತ್ಯಕ್ಕೆ ದೇಶದಾದ್ಯಂತ ಅಂಚೆ ಬ್ಯಾಂಕಿಂಗ್ ಶಾಖೆಗಳನ್ನು ತೆರೆಯಲು ಅಂಚೆ ಇಲಾಖೆ ನಿರ್ಧರಿಸಿದೆ.

ಅಂಚೆ ಪೇಮೆಂಟ್ ಬ್ಯಾಂಕ್ ಬಗ್ಗೆ:

  • ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯ ಕೇಂದ್ರ ಸಚಿವ ಸಂಪುಟ, ಭಾರತ ಸರ್ಕಾರದ ಶೇ.100 ಈಕ್ವಿಟಿಯೊಂದಿಗೆ ಅಂಚೆ ಇಲಾಖೆಯ ಅಡಿಯಲ್ಲಿ ಸಾರ್ವಜನಿಕ ನಿಯಮಿತ ಕಂಪನಿಯಾಗಿ ಭಾರತೀಯ ಅಂಚೆ ಪಾವತಿ ಬ್ಯಾಂಕ್ (ಐ.ಪಿ.ಪಿ.ಬಿ) ಸ್ಥಾಪನೆಗೆ ತನ್ನ ಅನುಮೋದನೆ ನೀಡಿದೆ.
  • ಈ ಯೋಜನೆಗೆ ತಗಲುವ ಒಟ್ಟು ವೆಚ್ಚ 800 ಕೋಟಿ ರೂಪಾಯಿಗಳು. ಎಲ್ಲ ನಾಗರಿಕರೂ, ಅದರಲ್ಲೂ ಶೇ.40ರಷ್ಟು ದೇಶದ ಜನಸಂಖ್ಯೆ ಸಾಂಪ್ರದಾಯಿಕ ಬ್ಯಾಂಕಿಂಗ್ ನಿಂದ ಹೊರಗಿದ್ದು, ಈ ಯೋಜನೆಯಿಂದ ಅವರಿಗೆ ಲಾಭವಾಗಲಿದೆ. ಈ ಯೋಜನೆಯನ್ನು ಹಂತಹಂತವಾಗಿ ದೇಶದಾದ್ಯಂತ ಆರಂಭಿಸಲಾಗುವುದು.
  • 2015 ರಲ್ಲಿ ಭಾರತೀಯ ಅಂಚೆ ಪೇಮೆಂಟ್ ಬ್ಯಾಂಕ್ ಸ್ಥಾಪಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಅನುಮೋದನೆ ನೀಡಿತ್ತು.

2 Thoughts to “ಪ್ರಚಲಿತ ವಿದ್ಯಮಾನಗಳು-ಆಗಸ್ಟ್ 20, 2016”

Leave a Comment

This site uses Akismet to reduce spam. Learn how your comment data is processed.