ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್, ಪಿಎಸ್ಐ, ಪಿಡಿಓ, ಎಫ್ ಡಿ ಎ, ಎಸ್ ಡಿ ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಆಗಸ್ಟ್ 15, 2016

Question 1

1.ವಿಶ್ವದ ಮೊದಲ ಕ್ವಾಂಟಮ್ ಸಂವಹನ ಉಪಗ್ರಹ(Quantum Communication Satellite)ವನ್ನು ಯಾವ ದೇಶ ಅಭಿವೃದ್ದಿಪಡಿಸಿದೆ?

A
ಚೀನಾ
B
ಅಮೆರಿಕಾ
C
ಜಪಾನ್
D
ರಷ್ಯಾ
Question 1 Explanation: 
ಚೀನಾ:

ಜಗತ್ತಿನ ಮೊದಲ ಕ್ವಾಂಟಮ್ ಸಂವಹನ ಉಪಗ್ರಹವನ್ನು ಚೀನಾ ಅಭಿವೃದ್ದಿಪಡಿಸಿದ್ದು, ಯಶಸ್ವಿಯಾಗಿ ಕಕ್ಷೆಗೆ ಸೇರಿಸಿರುವುದಾಗಿ ಹೇಳಿದೆ. ಉಪಗ್ರಹವನ್ನು ಚೀನಾದ ಗನ್ಸು ವಾಯವ್ಯ ಪ್ರಾಂತ್ಯದ ಜಿಯೊಕ್ವಾನ್ ಉಪಗ್ರಹ ಉಡಾವಣಾ ಕೇಂದ್ರದಿಂದ ಕಕ್ಷೆಗೆ ಸೇರಿಸಲಾಯಿತು. ಕ್ರಿ.ಪೂ. 5ನೇ ಶತಮಾನದಲ್ಲಿದ್ದ ಚೀನಾದ ವಿಜ್ಞಾನಿ 'ಮಿಸಿಯಸ್' ಅವರ ಹೆಸರನ್ನು ಈ ಉಪಗ್ರಹಕ್ಕೆ ಇಡಲಾಗಿದೆ ಎಂದು ಚೀನಾದ ವಿಜ್ಞಾನ ಅಕಾಡೆಮಿ (ಸಿಎಎಸ್) ತಿಳಿಸಿದೆ. ಈ ಉಪಗ್ರಹವು ಬೆಳಕು ಹಾಗೂ ಅದರ ತರಂಗಾತರಗಳ ರೂಪದಲ್ಲಿ ಮಾಹಿತಿಯನ್ನು ಪರಿವರ್ತಿಸಿ ಭೂಮಿಯಲ್ಲಿರುವ ನಿಯಂತ್ರಣ ಕೇಂದ್ರಕ್ಕೆ ಅತ್ಯಂತ ವೇಗವಾಗಿ ರವಾನಿಸುತ್ತದೆ. ರವಾನೆಯಾಗುವ ಮಾರ್ಗದಲ್ಲಿ ಮಾಹಿತಿಯು ಕಳ್ಳತನವಾಗದಂತೆ ತಡೆಯುವುದೇ ಈ ಉಪಗ್ರಹದ ವಿಶೇಷತೆ.

Question 2

2.ದೃಷ್ಟಿ ಹೀನರಿಗಾಗಿ ಭಾರತದ ಮೊದಲ ಸ್ಪರ್ಶಸಿ ಗ್ರಹಿಸುವ (Touch and Feel) ಉದ್ಯಾನವನ್ನು ಯಾವ ರಾಜ್ಯದಲ್ಲಿ ತೆರೆಯಲಾಯಿತು?

A
ಕರ್ನಾಟಕ
B
ಕೇರಳ
C
ಗೋವಾ
D
ಅಸ್ಸಾಂ
Question 2 Explanation: 
ಕೇರಳದಲ್ಲಿ :

ದೃಷ್ಟಿ ಹೀನರಿಗಾಗಿ ದೇಶದ ಮೊಲದ ಸ್ಪರ್ಶಿಸಿ ಗ್ರಹಿಸುವ ಉದ್ಯಾನವನ್ನು ಕೇರಳದ ತೆಂಜಿಪಲಂನಲ್ಲಿ ಕ್ಯಾಲಿಕಟ್ ವಿಶ್ವವಿದ್ಯಾಲಯದಲ್ಲಿ ಕೇರಳ ವಿಧಾನ ಸಭಾ ಸ್ಪೀಕರ್ ಶ್ರೀರಾಮಕೃಷ್ಣನ್ ಅವರು ಲೋಕಾರ್ಪಣೆ ಮಾಡಿದರು. ಈ ಉದ್ಯಾನದಲ್ಲಿ ಸುಮಾರು 6 ಡಜನ್ಗೂ ಹೆಚ್ಚು ಸುಗಂಧದ್ರವ್ಯ ಸಸ್ಯಗಳಿದ್ದು, ದೃಷ್ಟಿ ಹೀನರಿಗೆ ಕಲಿಯುವ ಅವಕಾಶವನ್ನು ಕಲ್ಪಿಸಲಿದೆ. ದೃಷ್ಟಿ ಹೀನರು ಸಸ್ಯಗಳನ್ನು ಮುಟ್ಟುವ ಮೂಲಕ, ಪರಿಮಳ ಮೂಸುವ ಮೂಲಕ, ಭಾವಿಸುವ ಮೂಲಕ ಮತ್ತು ಅವುಗಳನ್ನ ರುಚಿಸುವ ಮೂಲಕ ಅವುಗಳ ಬಗ್ಗೆ ತಿಳಿಯಬಹುದಾಗಿದೆ. ಅಲ್ಲದೇ ಸಸ್ಯಗಳ ಬಗ್ಗೆ ಮಾಹಿತಿಯನ್ನು ಆಡಿಯೋ ವ್ಯವಸ್ಥೆಯನ್ನು ಅಳವಡಿಸಿದ್ದು ಸಂಪೂರ್ಣ ಮಾಹಿತಿಯನ್ನು ಕಲೆಹಾಕಬಹುದಾಗಿದೆ.

Question 3

3.ವಿಶ್ವಸಂಸ್ಥೆ ಸಾಮಾನ್ಯ ಸಭೆಯ 71 ನೇ ಅಧಿವೇಶನದ ಅಧ್ಯಕ್ಷರಾಗಿ ಯಾರು ಆಯ್ಕೆಯಾಗಿದ್ದಾರೆ?

A
ಪೀಟರ್ ಥಾಮಸ್
B
ಮೊಗೆನ್ಸ್ ಲೈಕ್ಕೆಟೊಪ್ಟ್
C
ಸ್ಟುವರ್ಟ್ ಲೆಮ್ನೆ
D
ಡೇವಿಡ್ ಮಿಷಲೊಕ್
Question 3 Explanation: 
ಪೀಟರ್ ಥಾಮಸ್:

ಫಿಜಿ ದೇಶದ ರಾಜತಂತ್ರ್ಞ ಹಾಗೂ ಫಿಜಿಯ ವಿಶ್ವಸಂಸ್ಥೆಯ ಖಾಯಂ ಪ್ರತಿನಿಧಿ ಪೀಟರ್ ಥಾಮಸ್ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 71ನೇ ಅಧಿವೇಶನದ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಥಾಮಸ್ ಫೆಸಿಫಿಕ್ ದ್ವೀಪ ರಾಜ್ಯದಿಂದ 71 ವರ್ಷಗಳ ಇತಿಹಾಸದಲ್ಲೆ ಈ ಹುದ್ದೆಗೆ ಆಯ್ಕೆಯಾದ ಮೊದಲಿಗರು. ಸೆಪ್ಟೆಂಬರ್ 2016 ರಿಂದ ಆರಂಭಗೊಳ್ಳಲಿರುವ ಅಧಿವೇಶನದಿಂದ ಇವರು ಹುದ್ದೆಯನ್ನು ಅಲಂಕರಿಸಲಿದ್ದಾರೆ. ವಿಜಯ ಲಕ್ಷಿ ಪಂಡಿತ್ ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಅಧಿವೇಶನದ ಅಧ್ಯಕ್ಷರಾಗಿ ಆಯ್ಕೆಯಾದ ಏಕೈಕ ಭಾರತೀಯ ವ್ಯಕ್ತಿ. 1953 ರಲ್ಲಿ ಈ ಹುದ್ದೆಗೆ ನೇಮಕಗೊಂಡಿದ್ದರು.

Question 4

4.“ದಿ ಗಾಸ್ಪೆಲ್ ಆಫ್ ಯುದಸ್ (The Gospel of Yudas)” ಪುಸ್ತಕದ ಲೇಖಕರು ಯಾರು?

A
ಅರುಂದತಿ ರಾಯ್
B
ಕೆ.ಆರ್.ಮೀರಾ
C
ಸುಮನ್ ಅಗರವಾಲ್
D
ರವೀಂದ್ರ ಸಿಂಗ್
Question 4 Explanation: 
ಕೆ.ಆರ್.ಮೀರಾ
Question 5

5.ತನಿಖಾ ದಳಗಳ ಮೊದಲ ರಾಷ್ಟ್ರೀಯ ಸಮ್ಮೇಳನವನ್ನು(National Conference of Investing Agencies) ಯಾವ ನಗರದಲ್ಲಿ ಆಯೋಜಿಸಲಾಗಿತ್ತು?

A
ನವದೆಹಲಿ
B
ಮುಂಬೈ
C
ಬೆಂಗಳೂರು
D
ಚೆನ್ನೈ
Question 5 Explanation: 
ನವದೆಹಲಿ:

ತನಿಖಾ ದಳಗಳ ಮೊದಲ ರಾಷ್ಟ್ರೀಯ ಸಮ್ಮೇಳನವು ಆಗಸ್ಟ್ 12 ರಿಂದ 13 ರವರೆಗೆ ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆಯಿತು. ಎರಡು ದಿನದ ಈ ಸಮ್ಮೇಳನವನ್ನು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಉದ್ಘಾಟಿಸಿದರು. ಕೇಂದ್ರ,ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೊಲೀಸ್ ಸಂಸ್ಥೆಗಳಿಂದ ಸುಮಾರು 100 ಕ್ಕೂ ಹೆಚ್ಚು ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಬ್ಯುರೋ ಆಫ್ ಪೊಲೀಸ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಈ ಸಮ್ಮೇಳನವನ್ನು ರಾಷ್ಟ್ರೀಯ ತನಿಖಾ ದಳದ ಸಹಕಾರದೊಂದಿಗೆ ಆಯೋಜಿಸಿತ್ತು.

Question 6

6.ಪ್ರಾದೇಶಿಕ ಸಮಗ್ರ ಆರ್ಥಿಕ ಒಪ್ಪಂದ (Regional Comprehensive Economic Agreement) ಈ ಕೆಳಗಿನ ಯಾವ ಒಕ್ಕೂಟಕ್ಕೆ ಸಂಬಂಧಿಸಿದೆ?

A
ASEAN
B
SAARC
C
BRICS
D
ASEM
Question 6 Explanation: 
ASEAN:

ಪ್ರಾದೇಶಿಕ ಸಮಗ್ರ ಆರ್ಥಿಕ ಒಪ್ಪಂದವು ASEAN (ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟ)ನ 10 ರಾಷ್ಟ್ರಗಳು ಅಂದರೆ ಬ್ರೂನಿ, ಮಯಾನ್ಮರ್, ಕಾಂಬೋಡಿಯ, ಇಂಡೋನೇಷಿಯಾ, ಲಾವೊಸ್, ಮಲೇಷಿಯಾ, ಫಿಲಿಫೈನ್ಸ್, ಸಿಂಗಾಪುರ, ಥಾಯ್ ಲ್ಯಾಂಡ್ ಮತ್ತು ನ್ಯೂಜಿಲ್ಯಾಂಡ್ ಹಾಗೂ ASEAN ರಾಷ್ಟ್ರಗಳು ಈಗಾಗಲೇ ಮುಕ್ತ ವ್ಯಾಪಾರ ಒಪ್ಪಂದ ಹೊಂದಿರುವ ಆರು ರಾಷ್ಟ್ರಗಳಾದ ಆಸ್ಟ್ರೇಲಿಯಾ, ಭಾರತ, ಚೀನಾ ಜಪಾನ್. ದಕ್ಷಿಣ ಕೊರಿಯಾ ಮತ್ತು ನ್ಯೂಜಿಲ್ಯಾಂಡ್ ನಡುವಿನ ಉದ್ದೇಶಿತ ಮುಕ್ತ ವ್ಯಾಪಾರ ಒಪ್ಪಂದವಾಗಿದೆ. 2012 ರಲ್ಲಿ ಕಾಂಬೋಡಿಯಾದಲ್ಲಿ ನಡೆದ ASEAN ಶೃಂಗಸಭೆಯಲ್ಲಿ ಪ್ರಾದೇಶಿಕ ಸಮಗ್ರ ಆರ್ಥಿಕ ಒಪ್ಪಂದ ಮೊದಲು ಪ್ರಸ್ತಾಪಿಸಲಾಗಿತ್ತು.

Question 7

7.ಇತ್ತೀಚೆಗೆ ಕೇಂದ್ರ ಸರ್ಕಾರ ರಚಿಸಿದ ವ್ಯಾಪಾರ ಸೌಲಭ್ಯ ರಾಷ್ಟ್ರೀಯ ಸಮಿತಿ (National Committee on Trade Facilitation)ಯ ಅಧ್ಯಕ್ಷರು ಯಾರು?

A
ಕೇಂದ್ರ ಸಂಪುಟ ಕಾರ್ಯದರ್ಶಿ
B
ಕೇಂದ್ರ ಹಣಕಾಸು ಕಾರ್ಯದರ್ಶಿ
C
ವಿದೇಶಾಂಗ ಕಾರ್ಯದರ್ಶಿ
D
ಕೇಂದ್ರ ವಾಣಿಜ್ಯ ಕಾರ್ಯದರ್ಶಿ
Question 7 Explanation: 
ಕೇಂದ್ರ ಸಂಪುಟ ಕಾರ್ಯದರ್ಶಿ:

ದೇಶದಲ್ಲಿ ವ್ಯಾಪಾರ ಸೌಲಭ್ಯ ಮಾರ್ಗಸೂಚಿಯನ್ನು ಅಭಿವೃದ್ದಿ ಪಡಿಸುವ ಸಲುವಾಗಿ ಕೇಂದ್ರ ಸರ್ಕಾರ ವ್ಯಾಪಾರ ಸೌಲಭ್ಯ ರಾಷ್ಟ್ರೀಯ ಸಮಿತಿಯನ್ನು ಇತ್ತೀಚೆಗೆ ರಚಿಸಿದೆ. ವಿಶ್ವ ವಾಣಿಜ್ಯ ಸಂಸ್ಥೆಯ (WTO) ವ್ಯಾಪಾರ ಸೌಲಭ್ಯ ಒಪ್ಪಂದದ ಅನುಗುಣವಾಗಿ ಈ ಸಮಿತಿಯನ್ನು ರಚಿಸಲಾಗಿದೆ. ಡಬ್ಲೂಟಿಓ ನ ವ್ಯಾಪಾರ ಸೌಲಭ್ಯ ಒಪ್ಪಂದವನ್ನು ಈಗಾಗಲೇ ಭಾರತ ಅನುಮೋದಿಸಿದೆ. ಕೇಂದ್ರ ಸಂಪುಟ ಕಾರ್ಯದರ್ಶಿ ಈ ಸಮಿತಿಯ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಪ್ರಸ್ತುತ ಕೇಂದ್ರ ಸಂಪುಟ ಕಾರ್ಯದರ್ಶಿ ಪ್ರದೀಪ್ ಕುಮಾರ್ ಸಿನ್ಹಾ ಈ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಈ ಸಮಿತಿಯು ರಾಷ್ಟ್ರಮಟ್ಟದಲ್ಲಿ ಕಾರ್ಯನಿರ್ವಹಿಸಲಿದ್ದು ದೇಶಿಯ ಸಮನ್ವಯತೆ ಮತ್ತು ವ್ಯಾಪಾರ ಸೌಲಭ್ಯ ಒಪ್ಪಂದದ ನಿಬಂಧನೆಗಳನ್ನು ಅನುಷ್ಟಾನಗೊಳಿಸಲು ಸಹಕರಿಸಲಿದೆ.

Question 8

8.ಇತ್ತೀಚೆಗೆ ಯಾವ ಬ್ಯಾಂಕ್ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುವ ಸಲುವಾಗಿ “Unstructured Supplementary Service Data (USSD)” ಆಧಾರಿತ *99# ಮೊಬೈಲ್ ಅಪ್ಲೀಕೇಷನ್ ಅನ್ನು ಜಾರಿಗೆ ತಂದಿದೆ?

A
ಭಾರತೀಯ ಸ್ಟೇಟ್ ಬ್ಯಾಂಕ್
B
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ
C
ಬ್ಯಾಂಕ್ ಆಫ್ ಬರೋಡ
D
ಸಿಂಡಿಕೇಟ್ ಬ್ಯಾಂಕ್
Question 8 Explanation: 
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ:

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಇತ್ತೀಚೆಗೆ Unstructured Supplementary Service Data (USSD)” ಆಧಾರಿತ *99# ಮೊಬೈಲ್ ಅಪ್ಲೀಕೇಷನ್ ಅನ್ನು ನ್ಯಾಷನಲ್ ಪೇಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾ (NPCI)ದ ಜೊತೆಗೂಡಿ ಆರಂಭಿಸಿದೆ. ಇದೊಂದು ಜಿಎಸ್ಎಮ್ ಆಧಾರಿತ ತಂತ್ರಜ್ಞಾನವಾಗಿದ್ದು ಮೊಬೈಲ್ ಮತ್ತು ಅಪ್ಲಿಕೇಷನ್ ಪ್ರೋಗ್ರಾಂ ನಡುವೆ ಎಸ್ಎಂಎಸ್ ಕಳುಹಿಸಬಹುದಾಗಿದೆ. * 99 # ಮೊಬೈಲ್ ಅಪ್ಲಿಕೇಶನ್ ನಿಂದ ಖಾತೆಯಲ್ಲಿ ಹಣ ನೋಡುವುದು, ಬೇರೆ ಖಾತೆಗಳಿಗೆ ಹಣ ವರ್ಗಾವಣೆ ಮಾಡುವುದು, ಮೊಬೈಲ್ ಪಿನ್ (MPIN), ಆಧಾರ್ ತಪಾಸಣೆ ಸೇರಿದಂತೆ ಮೂಲಭೂತ ಬ್ಯಾಂಕಿಂಗ್ ಸೌಲಭ್ಯಗಳನ್ನು ಒದಗಿಸಲಿದೆ. ಇದು 10 ಭಾಷೆಗಳಲ್ಲಿ ಲಭ್ಯವಿದೆ.

Question 9

9.ಇತ್ತೀಚೆಗೆ ಸುದ್ದಿಯಲ್ಲಿರುವ ಅಮ್ನೆಸ್ಟಿ ಇಂಟರ್ ನ್ಯಾಷನಲ್ (Amnesty International) ಒಂದು ________?

A
ಮಾನವ ಹಕ್ಕು ಹೋರಾಟ ಸಂಸ್ಥೆ
B
ವನ್ಯಜೀವಿ ಸಂರಕ್ಷಣೆ ಸಂಸ್ಥೆ
C
ಭಯೋತ್ಪಾದನ ನಿಗ್ರಹ ಸಂಸ್ಥೆ
D
ಪರಿಸರ ಸಂರಕ್ಷಣ ಸಂಸ್ಥೆ
Question 9 Explanation: 
ಮಾನವ ಹಕ್ಕು ಹೋರಾಟ ಸಂಸ್ಥೆ:

ಅಮ್ನೆಸ್ಟಿ ಇಂಟರ್ ನ್ಯಾಷನಲ್ ಒಂದು ಸರ್ಕಾರೇತರ ಸಂಸ್ಥೆಯಾಗಿದ್ದು, ಮಾನವ ಹಕ್ಕು ಸಂರಕ್ಷಿಸುವ ಉದ್ದೇಶವನ್ನು ಹೊಂದಿದೆ. ಸುಮಾರು 7 ಮಿಲಿಯನ್ ಸದಸ್ಯರನ್ನು ಹೊಂದಿರುವ ಇದು ಪ್ರಪಂಚದಾದ್ಯಂತ ಕಾರ್ಯನಿರ್ವಹಿಸುತ್ತಿದೆ. ಇದನ್ನು 1961 ರಲ್ಲಿ ಸ್ಥಾಪಿಸಲಾಗಿದ್ದು, ಕೇಂದ್ರ ಕಚೇರಿ ಲಂಡನ್ ನಲಿದೆ.

Question 10

10.2016 ರಿಯೋ ಒಲಂಪಿಕ್ಸ್ನ ಟೆನ್ನಿಸ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದವರು ಯಾರು?

A
ನೊವಾಕ್ ಜೊಕೊವಿಕ್
B
ರಾಫೆಲ್ ನಡಾಲ್
C
ಆಂಡಿ ಮರ್ರೆ
D
ಮಿಲೋಸ್ ರಾವೋನಿಕ್
Question 10 Explanation: 
ಆಂಡಿ ಮರ್ರೆ:

ಹಾಲಿ ವಿಂಬಲ್ಡನ್ ಚಾಂಪಿಯನ್ ಆಂಡಿ ಮರ್ರೆ ಒಲಿಂಪಿಕ್ಸ್ ಪುರುಷರ ಟೆನಿಸ್ ಸಿಂಗಲ್ಸ್ನಲ್ಲಿ ಎರಡು ಸ್ವರ್ಣ ಪದಕ ಗೆದ್ದ ವಿಶ್ವದ ಮೊದಲ ಆಟಗಾರ ಎಂಬ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಪುರುಷರ ಸಿಂಗಲ್ಸ್ ಫೈನಲ್ನಲ್ಲಿ ಬ್ರಿಟನ್ ತಾರೆ ಮರ್ರೆ 7-5, 4-6, 6-2, 7-5 ಸೆಟ್ಗಳಿಂದ ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಅರ್ಜೆಂಟೀನಾದ ಜುವಾನ್ ಮಾರ್ಟಿನ್ ಡೆಲ್ ಪೊಟ್ರೊರನ್ನು ಮಣಿಸಿ ಇತಿಹಾಸ ನಿರ್ವಿುಸಿದರು.

There are 10 questions to complete.

3 Thoughts to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಆಗಸ್ಟ್ 15, 2016”

  1. ಸಂತೋಷ್ ಗೌಡರ

    Thanks sir

Leave a Comment

This site uses Akismet to reduce spam. Learn how your comment data is processed.