ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್, ಪಿಎಸ್ಐ, ಪಿಡಿಓ, ಎಫ್ ಡಿ ಎ, ಎಸ್ ಡಿ ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಆಗಸ್ಟ್ 9, 2016

Question 1

1.ಸಂಸತ್ತಿನಲ್ಲಿ ಇತ್ತೀಚೆಗೆ ಅನುಮೋದನೆಗೊಂಡ ಸರಕು ಮತ್ತು ಸೇವಾ ತೆರಿಗೆ (GST) ಸಂವಿಧಾನ ತಿದ್ದುಪಡಿ ಮಸೂದೆಯ ವ್ಯಾಪ್ತಿಗೆ ಈ ಕೆಳಗಿನ ಯಾವುದು ಬರುವುದಿಲ್ಲ?

A
ಉಕ್ಕು
B
ಅಲ್ಕೋಹಾಲ್
C
ತಂಬಾಕು ಉತ್ಪನ್ನ
D
ರಸಗೊಬ್ಬರ
Question 1 Explanation: 
ಅಲ್ಕೋಹಾಲ್:

ಸರಕು ಮತ್ತು ಸೇವಾ ತೆರಿಗೆ (GST) ಸಂವಿಧಾನ ತಿದ್ದುಪಡಿ ಮಸೂದೆಯ ವ್ಯಾಪ್ತಿಗೆ ಮದ್ಯ (ಅಲ್ಕೊಹಾಲ್) ಬರುವುದಿಲ್ಲ. ಮದ್ಯದ ಮೇಲೆ ರಾಜ್ಯ ಸರ್ಕಾರಗಳು ಅಬಕಾರಿ ತೆರಿಗೆ ವಿಧಿಸುತ್ತವೆ. ಮದ್ಯಕ್ಕೆ ತೆರಿಗೆ ವಿಧಿಸುವ ಅವಕಾಶ ರಾಜ್ಯ ಸರ್ಕಾರಗಳ ಬಳಿಯೇ ಇರಲಿದೆ.

Question 2

2.ಯಾವ ಕ್ರೀಡೆಯಲ್ಲಿ “ಮಜ್ಲಿಂದಾ ಕಲ್ಮಂದಿ” ಅವರು ರಿಯೊ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಕೊಸೊವೊ ಇತಿಹಾಸದಲ್ಲೇ ಒಲಿಂಪಿಕ್ ಪದಕ ಗೆದ್ದ ಮೊಟ್ಟಮೊದಲ ಅಥ್ಲೀಟ್ ಆಗಿ ದಾಖಲೆ ಬರೆದರು?

A
ಜುಡೊ
B
ಈಜು
C
ಜಿಮ್ನಾಸ್ಟಿಕ್
D
ಶೂಟಿಂಗ್
Question 2 Explanation: 
ಜುಡೊ:

ಕೊಸೊವೋದ ಮಜ್ಲಿಂದಾ ಕಲ್ಮಂದಿ ರಿಯೊ ಒಲಿಂಪಿಕ್ಸ್ನ ಜುಡೊ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಕೊಸೊವೊ ಇತಿಹಾಸದಲ್ಲೇ ಒಲಿಂಪಿಕ್ ಪದಕ ಗೆದ್ದ ಮೊಟ್ಟಮೊದಲ ಅಥ್ಲೀಟ್ ಎಂಬ ಗೌರವಕ್ಕೆ ಪಾತ್ರರಾದರು. ಕೊಸೊವೊ ದೇಶವನ್ನು 2014ರಲ್ಲಿ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಂಸ್ಥೆ ಸದಸ್ಯ ದೇಶವಾಗಿ ಸ್ವೀಕರಿಸಿತ್ತು. ಇದಕ್ಕೂ ಮೊದಲು ಕೊಸೊವೋದ ಮಜ್ಲಿಂದಾ ಕಲ್ಮಂದಿ ಸೇರಿದಂತೆ ಅಥ್ಲೀಟ್ಗಳು ಬೇರೆ ದೇಶಗಳನ್ನು ಪ್ರತಿನಿಧಿಸುತ್ತಿದ್ದರು. 52 ಕೆ.ಜಿ. ವಿಭಾಗದಲ್ಲಿ ಎರಡು ಬಾರಿಯ ಈ ವಿಶ್ವ ಚಾಂಪಿಯನ್ ಲಂಡನ್ ಒಲಿಂಪಿಕ್ಸ್ನಲ್ಲಿ ಅಲ್ಬೇನಿಯಾವನ್ನು ಪ್ರತಿನಿಧಿಸಿದ್ದರು. ಆಗ ಆಕೆಗೆ ಪದಕ ದಕ್ಕಿರಲಿಲ್ಲ. ಈ ಬಾರಿ ಕೊಸೊವೊದ ಧ್ವಜಧಾರಿಯಾಗಿದ್ದರು.

Question 3
3.ಇತ್ತೀಚೆಗೆ ನಿಧನರಾದ ಟಿ.ಕೆ.ವಿ.ದೇಸಿಕಚಾರ್ ರವರು ಪ್ರಸಿದ್ದ______?
A
ಕ್ರಿಕೆಟ್ ಆಟಗಾರ
B
ಯೋಗ ಗುರು
C
ಸಂಗೀತಗಾರ
D
ಪತ್ರಕರ್ತ
Question 3 Explanation: 
ಯೋಗ ಗುರು:

ಪ್ರಸಿದ್ದ ಯೋಗ ಗುರು ಟಿ.ಕೆ.ವಿ.ದೇಸಿಕಚಾರ್ ರವರು ಅನಾರೋಗ್ಯದ ಕಾರಣ ನಿಧನರಾದರು. ದೇಸಿಕಚಾರ್ ಆಧುನಿಕ ಯೋಗದ ಪಿತಾಮಹ ಎಂದೇ ಖ್ಯಾತರಾಗಿದ್ದ ಟಿ. ಕೃಷ್ಣಮಚಾರ್ಯ ರವರ ಪುತ್ರ. ವೃತ್ತಿಯಲ್ಲಿ ಎಂಜನಿಯರಿಂಗ್ ಆಗಿದ್ದರೂ, ತಂದೆಯಿಂದ ಪ್ರೇರೇಪಿತರಾಗಿ ಇವರು ಯೋಗದ ಕಡೆ ಆಕರ್ಷಣೆಗೊಂಡಿದ್ದರು. ವಿನಿಯೋಗ ಎಂಬ ತನ್ನದೇ ಶೈಲಿಯ ಯೋಗವನ್ನು ಇವರು ಕರಗತ ಮಾಡಿಕೊಂಡಿದ್ದರು. ಕೃಷ್ಣಮಚಾರ್ಯ ಯೋಗ ಮಂದಿರಂ ಅನ್ನು ಇವರು ಸ್ಥಾಪಿಸಿದ್ದರು. ಇಂದು ಈ ಯೋಗ ಮಂದಿರಲ್ಲಿ ಸಾವಿರಕ್ಕೂ ಹೆಚ್ಚು ಜನ ಯೋಗಾಭ್ಯಸ ಮಾಡುತ್ತಿದ್ದಾರೆ.

Question 4

4.ಇತ್ತೀಚೆಗೆ ಈ ಕೆಳಗಿನ ಯಾವ ದೇಶಕ್ಕೆ ಅರ್ಲ್ ಚಂಡಮಾರುತ (Earl) ಅಪ್ಪಳಿಸಿ ಅವಾಂತರ ಸೃಷ್ಟಿಸಿತು?

A
ಮೆಕ್ಸಿಕೊ
B
ಇಟಲಿ
C
ಆಸ್ಟ್ರೇಲಿಯ
D
ಜಪಾನ್
Question 4 Explanation: 
ಮೆಕ್ಸಿಕೊ:

ಮೆಕ್ಸಿಕೊದ ಕರಾವಳಿ ಪ್ರದೇಶಕ್ಕೆ ಅರ್ಲ್ ಚಂಡಮಾರುತ ಅಪ್ಪಳಿಸುವ ಮೂಲಕ 40ಕ್ಕೂ ಜನರು ಸಾವನ್ನಪ್ಪಿದ್ದಾರೆ. ಮೆಕ್ಸಿಕೊದ ಪ್ಲೆಬೋ ರಾಜ್ಯ ಸೇರಿದಂತೆ ಅನೇಕ ಭಾಗದಲ್ಲಿ ಚಂಡಮಾರುತದಿಂದ ಭಾರಿ ಮಳೆಯಾಗಿದ್ದು, ಅಪಾರ ನಷ್ಟ ಉಂಟಾಗಿದೆ.

Question 5

5.ರಾಜ್ಯಸಭೆಯಲ್ಲಿ ಇತ್ತೀಚೆಗೆ ಅನುಮೋದನೆಗೊಂಡ ಮಾನಸಿಕ ಆರೋಗ್ಯ ಮಸೂದೆ-2013ಯಡಿ ಈ ಕೆಳಗಿನ ಯಾವ ಕಾಯಿದೆಗೆ ತಿದ್ದುಪಡಿ ತರಲಾಗುವುದು?

A
ಮಾನಸಿಕ ಆರೋಗ್ಯ ಕಾಯಿದೆ-1987
B
ಮಾನಸಿಕ ಆರೋಗ್ಯ ಕಾಯಿದೆ-1990
C
ಮಾನಸಿಕ ಆರೋಗ್ಯ ಕಾಯಿದೆ-1993
D
ಮಾನಸಿಕ ಆರೋಗ್ಯ ಕಾಯಿದೆ-1996
Question 5 Explanation: 
ಮಾನಸಿಕ ಆರೋಗ್ಯ ಕಾಯಿದೆ-1987
Question 6

6.ಜಲ ಸಂಪನ್ಮೂಲ ಮಾಹಿತಿ ವ್ಯವಸ್ಥೆ ಜಾರಿಗೆ ತರುವ ಸಲುವಾಗಿ ಯಾವ ರಾಜ್ಯ ಇತ್ತೀಚೆಗೆ ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯೊಂದಿಗೆ ಒಡಂಬಡಿಕೆಗೆ ಸಹಿ ಹಾಕಿದೆ?

A
ಕೇರಳ
B
ತೆಲಂಗಣ
C
ಕರ್ನಾಟಕ
D
ಉತ್ತರ ಪ್ರದೇಶ
Question 6 Explanation: 
ತೆಲಂಗಣ:

ತೆಲಂಗಣ ರಾಜ್ಯದ ಸಮಗ್ರ ಜಲ ಸಂಪನ್ಮೂಲದ ಮಾಹಿತಿಯನ್ನು ಕಲೆ ಹಾಕುವ ಸಲುವಾಗಿ ಜಲ ಸಂಪನ್ಮೂಲ ಮಾಹಿತಿ ವ್ಯವಸ್ಥೆಯನ್ನು (Water Resource Information System) ಆರಂಭಿಸಿದೆ. ಈ ಸಂಬಂಧ ತೆಲಂಗಣ ನೀರಾವರಿ ಇಲಾಖೆ ಮತ್ತು ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಒಡಂಬಡಿಕೆಗೆ ಸಹಿಹಾಕಿವೆ. ಒಡಂಬಡಿಕೆ ಅನ್ವಯ ಇಸ್ರೋದ ರಾಷ್ಟ್ರೀಯ ದೂರಸಂವೇದಿ ಕೇಂದ್ರವೂ ಈ ವ್ಯವಸ್ಥೆಯನ್ನು ಸ್ಥಾಪಿಸಲಿದ್ದು, ಉಪಗ್ರಹದ ಮೂಲಕ ಮಾಹಿತಿ ಹಂಚಲಿದೆ.

Question 7
7.2016 ವಿಶ್ವ ಜೂನಿಯರ್ ಚೆಸ್ ಚಾಂಪಿಯನ್ ಪಿಪ್ ಯಾವ ರಾಜ್ಯದಲ್ಲಿ ನಡೆಯಲಿದೆ?
A
ಓಡಿಶಾ
B
ತಮಿಳು ನಾಡು
C
ಮಧ್ಯ ಪ್ರದೇಶ
D
ಗುಜರಾತ್
Question 7 Explanation: 
ಓಡಿಶಾ:

2016 ವಿಶ್ವ ಜೂನಿಯರ್ ಚೆಸ್ ಚಾಂಪಿಯನ್ ಪಿಪ್ ಓಡಿಶಾದ ಕೆಐಐಟಿ ವಿಶ್ವವಿದ್ಯಾಲಯದಲ್ಲಿ ಆಗಸ್ಟ್ 7 ರಂದು ಆರಂಭಗೊಂಡಿತ್ತು. ವಿಶ್ವದ 12 ರಾಷ್ಟ್ರಗಳ 137 ಸ್ಪರ್ಧಾಳುಗಳು ಈ ಚಾಂಪಿಯನ್ ಷಿಪ್ ನಲ್ಲಿ ಭಾಗವಹಿಸಲಿದ್ದಾರೆ. ಒಟ್ಟು 13 ಸುತ್ತಿನಲ್ಲಿ ನಡೆಯಲಿದ್ದು, ಆಗಸ್ಟ್ 23 ರಂದು ಕೊನೆಗೊಳ್ಳಲಿದೆ.

Question 8
8.ಪ್ರಸ್ತುತ ದೇಶದಲ್ಲಿರುವ ಹೈಕೋರ್ಟ್ಗಳ ಸಂಖ್ಯೆ ಎಷ್ಟು?
A
21
B
24
C
27
D
29
Question 8 Explanation: 
24: ಸದ್ಯ ದೇಶದಲ್ಲಿ 24 ಹೈಕೋರ್ಟ್ಗಳು ಕಾರ್ಯನಿರ್ವಹಿಸುತ್ತಿವೆ.
Question 9

9. ಭಾರತೀಯ ರಿಸರ್ವ್ ಬ್ಯಾಂಕ್ನ ಮಾಜಿ ಡೆಪ್ಯೂಟಿ ಗರ್ವನರ್ ಆನಂದ್ ಸಿನ್ಹಾ ರವರು ಯಾವ ಬ್ಯಾಂಕ್ನ ಆಡಳಿತ ಮಂಡಳಿಯ ಸ್ವತಂತ್ರ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ?

A
HDFC
B
IDBI
C
IDFC
D
ICICI
Question 9 Explanation: 
IDFC

ಭಾರತೀಯ ರಿಸರ್ವ್ ಬ್ಯಾಂಕ್ನ ಮಾಜಿ ಡೆಪ್ಯೂಟಿ ಗರ್ವನರ್ ಆನಂದ್ ಸಿನ್ಹಾ ಅವರನ್ನು ಖಾಸಗಿ ವಲಯದ ಬ್ಯಾಂಕ್ IDFC ತನ್ನ ಆಡಳಿತ ಮಂಡಳಿಯ ಸ್ವತಂತ್ರ ನಿರ್ದೇಶಕರನ್ನಾಗಿ ನೇಮಕಮಾಡಿದೆ. ಸಿನ್ಹಾ ರವರು ಭಾರತದ ಮಾಜಿ ಮಹಾಲೇಖಪಾಲ ವಿನೋದ್ ರಾಯ್ ರವರ ಉತ್ತರಾಧಿಕಾರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

Question 10

10.ಭಾರತದಲ್ಲಿ ಈ ಕೆಳಗಿನ ಯಾವ ಪ್ರದೇಶದಲ್ಲಿ ಹವಳದ ಬಂಡೆಗಳು (Coral Reefs) ಕಾಣ ಸಿಗುವುದಿಲ್ಲ?

A
ಅಂಡಮಾನ್ ಮತ್ತು ನಿಕೋಬರ್
B
ಗಲ್ಪ್ ಆಫ್ ಮನ್ನರ್
C
ಗಲ್ಪ್ ಆಫ್ ಕಚ್
D
ಸುಂದರಬನ್ಸ್
Question 10 Explanation: 
ಸುಂದರಬನ್ಸ್
There are 10 questions to complete.

9 Thoughts to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಆಗಸ್ಟ್ 9, 2016”

  1. Shivananda

    6th question answer is Telangaana. but its shows Uttara Pradesh. Please change the answer

    1. karunadu

      Thank you its done, In Explanation answer was correct

    2. Karunaduexams

      We will correct it…thank u for reminding us
      Regards
      Karunaduexams team

  2. Anonymous

    Super very useful to kannada students

  3. Nagaraj jadhav kpl

    super

  4. Anonymous

    Usefuli. Metal

  5. Anonymous

    Good questions.thanks to one & all

Leave a Comment

This site uses Akismet to reduce spam. Learn how your comment data is processed.