ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್, ಪಿಎಸ್ಐ, ಪಿಡಿಓ, ಎಫ್ ಡಿ ಎ, ಎಸ್ ಡಿ ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಆಗಸ್ಟ್ 8, 2016

Question 1

1.ಶ್ರೀಲಂಕಾದ ಕೊಲೊಂಬೋದಲ್ಲಿ ನಡೆದ ಕಾಮನ್ ವೆಲ್ತ್ ಚೆಸ್ ಚಾಂಪಿಯನ್ ಷಿಪ್ ಗೆದ್ದ ಭಾರತೀಯ ಚೆಸ್ ಆಟಗಾರ ಯಾರು?

A
ಎಸ್ ಎಲ್ ನಾರಾಯಣ್
B
ದೀಪ್ ಚಕ್ರವರ್ತಿ
C
ಅಭಿಜಿತ್ ಗುಪ್ತಾ
D
ಕಿರಣ್ ಮನಿಷಾ ಮೊಹಂತಿ
Question 1 Explanation: 
ಅಭಿಜಿತ್ ಗುಪ್ತಾ:

ಗ್ರಾಂಡ್ ಮಾಸ್ಟರ್ ಹಾಗೂ ಮಾಜಿ ವರ್ಲ್ಡ್ ಜೂನಿಯರ್ ಚಾಂಪಿಯನ್ ಅಭಿಜಿತ್ ಗುಪ್ತಾ ಶ್ರೀಲಂಕಾದ ಕೊಲೊಂಬೋದಲ್ಲಿ ನಡೆದ ಕಾಮನ್ ವೆಲ್ತ್ ಚೆಸ್ ಚಾಂಪಿಯನ್ ಷಿಪ್-2016 ಗೆದ್ದುಕೊಂಡರು. ಗ್ರಾಂಡ್ ಮಾಸ್ಟರ್ ಎಸ್ ಎಲ್ ನಾರಾಯಣ್ ಮತ್ತು ದೀಪ್ ಚಕ್ರವರ್ತಿ ಕ್ರಮವಾಗಿ ಬೆಳ್ಳಿ ಮತ್ತು ಕಂಚಿಗೆ ತೃಪ್ತಿಪಟ್ಟುಕೊಂಡರು.

Question 2

2.ಇತ್ತೀಚೆಗೆ ಕೇಂದ್ರ ಆರೋಗ್ಯ ಸಚಿವಾಲಯ ರಾಷ್ಟ್ರವ್ಯಾಪ್ತಿ ಚಾಲನೆ ನೀಡಿದ “ಮಾ” (MAA Mother’s Absolute Affection) ಕಾರ್ಯಕ್ರಮದ ಪ್ರಮುಖ ಉದ್ದೇಶವೇನು?

A
ಸ್ತನಪಾನ ಪ್ರೋತ್ಸಾಹಿಸುವುದು
B
ತಾಯಂದಿರ ಮರಣ ಪ್ರಮಾಣ ಕಡಿಮೆ ಮಾಡುವುದು
C
ತಾಯಿ-ಮಗು ಆರೈಕೆ ಬಗ್ಗೆ ಅರಿವು ಮೂಡಿಸುವುದು
D
ಹೆಣ್ಣು ಮಗುವನ್ನು ಬೆಂಬಲಿಸುವುದು
Question 2 Explanation: 
ಸ್ತನಪಾನ ಪ್ರೋತ್ಸಾಹಿಸುವುದು:

ಕೇಂದ್ರ ಸರ್ಕಾರ ರಾಷ್ಟ್ರವ್ಯಾಪ್ತಿ ಸ್ತನಪಾನ ಕಾರ್ಯಕ್ರಮ ಮಾ (MAA Mothers Absolute Affection)ಗೆ ಚಾಲನೆ ನೀಡಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಜೆ.ಪಿ.ನಡ್ಡ ಹಾಗೂ ಈ ಕಾರ್ಯಕ್ರಮದ ರಾಯಭಾರಿಯಾಗಿರುವ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಾ ಕೇಂದ್ರ ಆರೋಗ್ಯ ಸಚಿವಾಲಯದ ಮಹತ್ವದ ಕಾರ್ಯಕ್ರಮವಾಗಿದ್ದು, ದೇಶದಲ್ಲಿ ಸ್ತನಪಾನದ ಬಗ್ಗೆ ಸೂಕ್ತ ಅರಿವು ಮೂಡಿಸುವುದಕ್ಕೆ ಆರಂಭಿಸಲಾಗಿದೆ.

Question 3

3.ಸುರಕ್ಷತೆ ದೃಷ್ಟಿಯಿಂದ “ಪೋಕ್ ಮನ್ ಗೋ” ಸ್ಮಾರ್ಟ್ ಪೋನ್ ಗೇಮ್ ಮೇಲೆ ನಿಷೇಧ ಹೇರಿದ ದೇಶ ಯಾವುದು?

A
ಅಮೆರಿಕಾ
B
ಇರಾನ್
C
ಈಜಿಪ್ಟ್
D
ಫ್ರಾನ್ಸ್
Question 3 Explanation: 
ಇರಾನ್:

ಇರಾನ್ ದೇಶ ಇತ್ತೀಚೆಗೆ ಪೋಕ್ ಮನ್ ಗೋ” ಸ್ಮಾರ್ಟ್ ಪೋನ್ ಗೇಮ್ ಮೇಲೆ ನಿಷೇಧ ಹೇರಿದೆ.

Question 4

4.ಏಷ್ಯಾ ಅಭಿವೃದ್ದಿ ಬ್ಯಾಂಕ್ (ADB)ನ ಅಧ್ಯಕ್ಷರಾಗಿ ಆಯ್ಕೆಯಾದವರು ಯಾರು?

A
ತಕೆಹಿಕೊ ನಕವೊ
B
ಹರುಹಿಕೊ ಕುರೊಡ
C
ವಿಲ್ಸನ್ ಜಮೆಜ
D
ಜಿಮ್ ಯಾಂಗ್ ಕಿಮ್
Question 4 Explanation: 
ತಕೆಹಿಕೊ ನಕವೊ:

ತಕೆಹಿಕೊ ನಕವೊ ರವರು ಏಷ್ಯಾ ಅಭಿವೃದ್ದಿ ಬ್ಯಾಂಕ್ನ ಅಧ್ಯಕ್ಷರಾಗಿ ಎರಡನೇ ಬಾರಿಗೆ ನೇಮಕಗೊಂಡಿದ್ದಾರೆ. ಇವರ ಎರಡನೇ ಅವಧಿ ನವೆಂಬರ್, 2016 ರಿಂದ ಆರಂಭಗೊಳ್ಳಲಿದ್ದು, 2021 ವರೆಗೆ ಅಧಿಕಾರ ಚಲಾಯಿಸಲಿದ್ದಾರೆ.

Question 5
5.2016 ಕೆರಿಬಿಯನ್ ಪ್ರೀಮಿಯರ್ ಲೀಗ್ ಪ್ರಶಸ್ತಿ ಗೆದ್ದ ತಂಡ ಯಾವುದು?
A
ಗುಯಾನ ಅಮೆಜಾನ್ ವಾರಿಯರ್ಸ್
B
ಜಮೈಕ ತಲ್ಲವಾಸ್
C
ಬರ್ಬೊದಸ್ ಟ್ರೈಡೆಂಟ್
D
ಸೆಂಟ್ ಲೂಸಿಯ ಝೂಕ್ಸ್
Question 5 Explanation: 
ಜಮೈಕ ತಲ್ಲವಾಸ್:

ಜಮೈಕಾ ತಲ್ಲವಾಸ್ ತಂಡ ಕೆರಿಬಿಯನ್ ಪ್ರೀಮಿಯರ್ ಲೀಗ್ ಟ್ರೋಫಿ ಗೆದ್ದುಕೊಂಡಿದೆ. ಗಯಾನ ಅಮಜೋನ್ ವಾರಿಯರ್ಸ್ ಸೋಲಿಸಿದ ಕ್ರಿಸ್ ಗೇಲ್ ಪಡೆ 2ನೇ ಬಾರಿಗೆ ಸಿಪಿಎಲ್ ಚಾಂಪಿಯನ್ ಪಟ್ಟ ಅಲಂಕರಿಸಿದೆ.

Question 6

6.ಯಾವ ರಾಜ್ಯ ತನ್ನ ರಾಜಧಾನಿಯಲ್ಲಿ ಮೇ, 2017 ಅಂತ್ಯಕ್ಕೆ 1200 ವೈಫೈ ಹಾಟ್ ಸ್ಪಾಟ್ ವ್ಯವಸ್ಥೆಯನ್ನು ಕಲ್ಪಿಸಲಿದೆ?

A
ಕರ್ನಾಟಕ
B
ಮದ್ಯ ಪ್ರದೇಶ
C
ಮಹಾರಾಷ್ಟ್ರ
D
ತೆಲಂಗಣ
Question 6 Explanation: 
ಮಹಾರಾಷ್ಟ್ರ:

ಮಹಾರಾಷ್ಟ್ರ ಸರ್ಕಾರ ತನ್ನ ರಾಜಧಾನಿ ಮುಂಬೈನಲ್ಲಿ 1,200 ವೈಫೈ ಹಾಟ್ ಸ್ಪಾಟ್ ವ್ಯವಸ್ಥೆಯನ್ನು ಮೇ, 2017 ಅಂತ್ಯಕ್ಕೆ ಕಲ್ಪಿಸುವ ಮಹತ್ವದ ನಿರ್ಣಯವನ್ನು ಕೈಗೊಂಡಿದೆ. ಮೊದಲ ಹಂತದಲ್ಲಿ 500 ವೈಫೈ ಹಾಟ್ ಸ್ಪಾಟ್ ಗಳನ್ನು ನವೆಂಬರ್ 2016 ಅಂತ್ಯಕ್ಕೆ ವ್ಯವಸ್ಥೆ ಮಾಡಲಾಗುವುದು.

Question 7

7.ಇತ್ತೀಚೆಗೆ ನಿಧನರಾದ ಸರ್ಫಿಂಗ್ ಚಾಂಪಿಯನ್ ಬರ್ನರ್ಡ್ ಫರೆಲ್ಲಿ (Bernard Farrelly) ಯಾವ ದೇಶದವರು?

A
ನ್ಯೂಜಿಲ್ಯಾಂಡ್
B
ಆಸ್ಟ್ರೇಲಿಯಾ
C
ಥಾಯ್ಲೆಂಡ್
D
ಸಿಂಗಾಪುರ್
Question 7 Explanation: 
ಆಸ್ಟ್ರೇಲಿಯಾ:

ಸರ್ಫಿಂಗ್ನ ಮೊದಲ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾದ ಬರ್ನರ್ಡ್ ಫರೆಲ್ಲಿ ನಿಧನರಾದರು. ಸರ್ಫಿಂಗ್ ನಲ್ಲಿ ವಿಶ್ವ ವಿಖ್ಯಾತಿಗಳಿಸಿದ್ದ ಅವರು 1964ರಲ್ಲಿ ಸರ್ಫಿಂಗ್ನ ಮೊದಲ ವಿಶ್ ಚಾಂಪಿಯನ್ ಆಗಿ ದಾಖಲೆ ನಿರ್ಮಿಸಿದ್ದರು. ಸ್ಫೋರ್ಟ್ಸ್ ಆಸ್ಟ್ರೇಲಿಯಾ ಹಾಲ್ ಫೇಮ್ 1985 ರಲ್ಲಿ ಇವರು ಸೇರ್ಪಡೆಗೊಂಡಿದ್ದರು.

Question 8

8.ಯಾವ ರಾಜ್ಯ ಇತ್ತೀಚೆಗೆ “ಮಿಷನ್ ಭಗೀರಥ” ಯೋಜನೆಯನ್ನು ಜಾರಿಗೆ ತಂದಿದೆ?

A
ಆಂಧ್ರ ಪ್ರದೇಶ
B
ತೆಲಂಗಣ
C
ಗೋವಾ
D
ಕೇರಳ
Question 8 Explanation: 
ತೆಲಂಗಣ:

ತೆಲಂಗಣ ಸರ್ಕಾರ ಮಿಷನ್ ಭಗೀರಥ ಯೋಜನೆಯನ್ನು ಜಾರಿಗೊಳಿಸಿದ್ದು, ಕುಡಿಯುವ ನೀರಿನ ಸಮಸ್ಯೆಗೆ ಸಮರ್ಥನೀಯ ಮತ್ತು ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶ ಹೊಂದಿದೆ. ಈ ಯೋಜನೆಯ ಮೊದಲ ಹಂತದ ಕಾಮಗಾರಿ ಪ್ರಧಾನಿ ಮೋದಿ ರವರು ಆಗಸ್ಟ್ 7, 2016 ರಂದು ಚಾಲನೆ ನೀಡಿದರು. ಮಿಷನ್ ಭಗೀರಥ ಯೋಜನೆ ಸುಮಾರು 42000 ಕೋಟಿ ಬೃಹತ್ ಮೊತ್ತದ ಯೋಜನೆಯಾಗಿದ್ದು, ಪ್ರತಿ ಕುಟುಂಗಳಿಗೆ ಕುಡಿಯುವ ನೀರಿನ್ನು ಒದಗಿಸುವುದರ ಜೊತೆಗೆ 45000 ಸಾಂಪ್ರದಾಯಿಕ ನೀರಿನ ಮೂಲಗಳನ್ನು (ಕುಂಟೆ, ಕಲ್ಯಾಣಿ) ಪುನರ್ಶ್ಚೇತನಗೊಳಿಸುವ ಗುರಿ ಹೊಂದಿದೆ.

Question 9

9.2016 ರಿಯೋ ಒಲಂಪಿಕ್ಸ್ ಕ್ರೀಡಾಕೂಟದ ಧ್ಯೇಯವಾಕ್ಯ (Theme) _______?

A
ವರ್ಲ್ಡ್ ಪೀಸ್ ಅಂಡ್ ಎನ್ವಿರ್ನಮೆಂಟ್
B
ಸ್ಪೋರ್ಟ್ ಫಾರ್ ಸ್ಪಿರಿಟ್
C
ಸ್ಪೋರ್ಟ್ ಫಾರ್ ಫೀಸ್
D
ಒನ್ ವರ್ಲ್ಡ್ ಮೆನಿ ಸ್ಪೋರ್ಟ್ಸ್
Question 9 Explanation: 
ವರ್ಲ್ಡ್ ಪೀಸ್ ಅಂಡ್ ಎನ್ವಿರ್ನಮೆಂಟ್:

ವಿಶ್ವ ಶಾಂತಿ ಮತ್ತು ಪರಿಸರ (World Peace and Environment) ಇದು 2016 ರಿಯೋ ಒಲಂಪಿಕ್ಸ್ನ ಧ್ಯೇಯವಾಕ್ಯ. 31 ನೇ ಆವೃತ್ತಿಯ ಒಲಂಪಿಕ್ಸ್ ಕ್ರೀಡಾಕೂಟಕ್ಕೆ ಬ್ರೆಜಿಲ್ನ ರಿಯೋ ಡಿ ಜನೈರೋದ ಮರಕಾನ ಸ್ಟೇಡಿಯಂನಲ್ಲಿ ಆಗಸ್ಟ್ 5 ರಂದು ಆರಂಭಗೊಂಡಿದ್ದು, ಆಗಸ್ಟ್ 21 ವರೆಗೆ ನಡೆಯಲಿದೆ.

Question 10

10.ಯಾವ ರಾಜ್ಯ ನೇಕಾರ ಸಮುದಾಯಕ್ಕೆ ಪಿಂಚಣಿ ನೀಡುವ ಸಲುವಾಗಿ “ಬರಿಸ್ಥ ಬುನಾಕರ್ ಸಹಾಯತ ಯೋಜನಾ” ಜಾರಿಗೆ ತಂದಿತು?

A
ಆಂಧ್ರ ಪ್ರದೇಶ
B
ತಮಿಳು ನಾಡು
C
ಪಶ್ಚಿಮ ಬಂಗಾಳ
D
ಓಡಿಶಾ
Question 10 Explanation: 
ಓಡಿಶಾ:

ಓಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ರವರು ರಾಜ್ಯದ ನೇಕಾರ ಸಮುದಾಯಕ್ಕೆ ಪಿಂಚಣಿ ನೀಡುವ ಬರಿಸ್ಥ ಬುನಾಕರ್ ಸಹಾಯತ ಯೋಜನಗೆ ಚಾಲನೆ ನೀಡಿದರು. ಈ ಯೋಜನೆಯಡಿ ನೇಕಾರರಿಗೆ ರೂ 500 ಮಾಸಿಕ ಪಿಂಚಣಿ ದೊರೆಯಲಿದೆ. ರಾಷ್ಟ್ರೀಯ ಕೈಮಗ್ಗ ದಿನದ ಅಂಗವಾಗಿ ಈ ಯೋಜನೆಯನ್ನು ತರಲಾಗಿದೆ. ಈ ಯೋಜನೆಯಡಿ ಫಲಾನುಭವಿಯಾಗಲು ಕನಿಷ್ಠ 20 ವರ್ಷದಿಂದ ನೇಕಾರ ವೃತ್ತಿಯನ್ನು ಮಾಡುತ್ತಿರಬೇಕು ಹಾಗೂ 60 ವರ್ಷ ವಯಸ್ಸಾಗಿರಬೇಕು. 80 ವರ್ಷ ಮೇಲ್ಪಟ್ಟವರಿಗೆ ರೂ 700 ಮಾಸಿಕ ವೇತನ ದೊರೆಯಲಿದೆ.

There are 10 questions to complete.

2 Thoughts to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಆಗಸ್ಟ್ 8, 2016”

  1. Mallikarjun marol

    Nice questions

  2. Anonymous

    Nice questions

Leave a Comment

This site uses Akismet to reduce spam. Learn how your comment data is processed.