ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್, ಪಿಎಸ್ಐ, ಪಿಡಿಓ, ಎಫ್ ಡಿ ಎ, ಎಸ್ ಡಿ ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಆಗಸ್ಟ್ 3, 2016

Question 1
1.2016-ಗೋವಾ ಚಲನಚಿತ್ರೋತ್ಸವದ ಜೀವಮಾನ ಸಾಧನೆ ಪ್ರಶಸ್ತಿಯನ್ನು ಯಾರಿಗೆ ನೀಡಲಾಗುವುದು?
A
ಮಣಿರತ್ನಂ
B
ರಾಜೇಂದ್ರಸಿಂಗ್ ಬಾಬು
C
ಎನ್. ಚಂದ್ರ
D
ಶಂಕರ್
Question 1 Explanation: 
ಎನ್. ಚಂದ್ರ: ಪ್ರಖ್ಯಾತ ಬಾಲಿವುಡ್ ಚಿತ್ರ ನಿರ್ಮಾಪಕ ಎನ್ ಚಂದ್ರ ರವರನ್ನು 8 ನೇ ಗೋವಾ ಚಲನಚಿತ್ರೋತ್ಸವದ ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. 2016 ಗೋವಾ ಚಲನಚಿತ್ರೋತ್ಸವವು ಆಗಸ್ಟ್ 5 ರಿಂದ 8 ರವರೆಗೆ ನಡೆಯಲಿದೆ. ಚಂದ್ರ ರವರು ಅಂಕುಶ್, ಪ್ರತಿಘಾಟ್, ತೇಝಬ್ ಮತ್ತು ನರಸಿಂಹ ಅಂತಹ ಪ್ರಸಿದ್ದ ಚಿತ್ರಗಳನ್ನು ನಿರ್ಮಿಸಿದ್ದಾರೆ.
Question 2
2.ಈ ಕೆಳಗಿನ ಯಾವ ದೇಶ ಜಗತ್ತಿನ ಮೊದಲ ಇಂಗಾಲ ನೆಗೆಟಿವ್ ರಾಷ್ಟ್ರ ಎನಿಸಿದೆ?
A
ನೇಪಾಳ
B
ಭೂತಾನ್
C
ಥಾಯ್ಲೆಂಡ್
D
ಫ್ರಾನ್ಸ್
Question 2 Explanation: 
ಭೂತಾನ್: ಏಪ್ಯಾದ ಪುಟ್ಟರಾಷ್ಟ್ರ ಭೂತಾನ್ ವಿಶ್ವದ ಮೊದಲ ಇಂಗಾಲ ನೆಗೆಟಿವ್ ರಾಷ್ಟ್ರ ಆಗಿದೆ. ಕಾರ್ಬನ್ ನೆಗೆಟಿವ್ ಎಂದರೆ ಜಾಗತಿಕ ತಾಪಮಾನ ಹೆಚ್ಚಳಕ್ಕೆ ಕಾರಣವಾಗುವ ಇಂಗಾಲವನ್ನು (ಹಸಿರುಮನೆ ಅನಿಲ- ಪ್ರಧಾನವಾಗಿ ಇಂಗಾಲದ ಡೈ ಆಕ್ಸೈಡ್) ಹೊರಸೂಸುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಅದನ್ನು ಹೀರಿಕೊಳ್ಳುವುದು. 15 ಲಕ್ಷ ಟನ್ ಭೂತಾನ್ ವಾರ್ಷಿಕವಾಗಿ ಹೊರಸೂಸುವ ಇಂಗಾಲದ ಪ್ರಮಾಣ. 60 ಲಕ್ಷ ಟನ್ ಭೂತಾನ್ನ ಕಾಡುಗಳು ಹೀರಿಕೊಳ್ಳುವ ಇಂಗಾಲ ಪ್ರಮಾಣ. ಭೂತಾನಿನ ಶೇ 72 ಭೂಭಾಗ ಅರಣ್ಯದಿಂದ ಕೂಡಿದೆ, ಮರಗಳ ಅಕ್ರಮ ಸಾಗಣೆ ಮೇಲೆ ನಿಷೇಧ ಹೇರಲಾಗಿದೆ ಮತ್ತು ಪರಿಸರಕ್ಕೆ ಮಾರಕವಾಗುವಂತಹ ಪೆಟ್ರೋಲಿಯಂ, ಕಲ್ಲಿದ್ದಲು ಮತ್ತಿತರ ಇಂಧನ ಮೂಲಗಳ ಬದಲಾಗಿ ಜಲವಿದ್ಯುತ್ ಬಳಕೆಗೆ ಹೆಚ್ಚು ಉತ್ತೇಜನ ನೀಡಲಾಗುತ್ತಿದೆ.
Question 3
3.ರಿಯೋ ಒಲಂಪಿಕ್ಸ್ನ ಅತ್ಯಂತ ಕಿರಿಯ ಕ್ರೀಡಾಪಟು ಎನಿಸಿರುವ ಗೌರಿಕಾ ಸಿಂಗ್ ಯಾವ ದೇಶದವರು?
A
ನೇಪಾಳ
B
ಭೂತಾನ್
C
ಶ್ರೀಲಂಕಾ
D
ಭಾರತ
Question 3 Explanation: 
ನೇಪಾಳ: ನೇಪಾಳದ 13 ವರ್ಷದ ಗೌರಿಕಾ ಸಿಂಗ್ ರವರು 2016 ರಿಯೋ ಒಲಂಪಿಕ್ಸ್ ನಲ್ಲಿ ಭಾಗವಹಿಸಲಿರುವ ಕ್ರೀಡಾಪಟುಗಳ ಪೈಕಿ ಅತ್ಯಂತ ಕಿರಿಯ ಕ್ರೀಡಾಪಟು ಆಗಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿರುವ ಗೌರಿಕಾ ಅವರು 100 ಮೀಟರ್ ಬ್ಯಾಕ್ ಸ್ಟ್ರೋಕ್ ವಿಭಾಗದ ಸ್ಪರ್ಧೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 68.12 ಸೆಕೆಂಡುಗಳ ಸಾಧನೆ ಹೊಂದಿದ್ದಾರೆ.
Question 4
4.ನೇಪಾಳದ ನೂತನ ಪ್ರಧಾನಿಯಾಗಿ ಆಯ್ಕೆಯಾದವರು ಯಾರು?
A
ಬಾಬುರಾಮ್ ಭಟ್ಟರಾಯ್
B
ಕೆ.ಪಿ.ಓಲಿ
C
ಪುಷ್ಪ ಕುಮಾರ್ ದಹಲ್
D
ಒನ್ಸಾರಿ ಘರ್ತಿ ಮಗರ್
Question 4 Explanation: 
ಪುಷ್ಪ ಕುಮಾರ್ ದಹಲ್: ಮಾವೋವಾದಿ ಬಂಡುಕೋರ ಮುಖ್ಯಸ್ಥ ಪುಷ್ಪ ಕಮಲ್ ದಹಲ್ ಅವರು ನೇಪಾಳದ ನೂತನ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ದಹಲ್ ರವರು ಪ್ರಚಂಡ ಎಂತಲೂ ಪ್ರಸಿದ್ದರಾಗಿದ್ದಾರೆ. ಪ್ರಧಾನಮಂತ್ರಿ ಆಯ್ಕೆಗಾಗಿ ನಡೆದ ಮತದಾನದಲ್ಲಿ ಶೇ 50ಕ್ಕಿಂತ ಅಧಿಕ ಮತವನ್ನು ಪುಷ್ಪ ಕಮಲ್ ಪಡೆದುಕೊಂಡ್ದರು. 573 ಜನಪ್ರತಿನಿಧಿಗಳ ಪೈಕಿ 363 ಮಂದಿ ದಹಲ್ ಪರ ಮತ ಹಾಕಿದರು. ಪ್ರಧಾನಿ ಪಟ್ಟಕ್ಕೇರಲು ದಹಲ್ ಅವರಿಎಗ್ ಒಟ್ಟಾರೆ 595 ಸಂಸತ್ ಸದಸ್ಯರ ಪೈಕಿ 298 ಮತಗಳು ಅಗತ್ಯವಿತ್ತು.
Question 5
5.ಇತ್ತೀಚೆಗೆ ನಿಧನರಾದ ನೊಬೆಲ್ ಪುರಸ್ಕೃತ ಅಹ್ಮದ್ ಝೆವೈಲ್ (Ahmed Zawail) ರವರು ಯಾವ ಕ್ಷೇತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದಿದ್ದರು?
A
ರಾಸಾಯನಿಕ
B
ಭೌತಶಾಸ್ತ್ರ
C
ಶಾಂತಿ
D
ವೈದ್ಯಕೀಯ
Question 5 Explanation: 
ರಾಸಾಯನಿಕ: ಪ್ರೊಫೆಸರ್ ಅಹ್ಮದ್ ಝೆವೈಲ್ ರವರು ಈಜಿಪ್ಟ್ ನ ಖ್ಯಾತ ರಸಾಯನಶಾಸ್ತ್ರಜ್ಞ. ಇತ್ತೀಚೆಗೆ ಇವರು ಅಮೆರಿಕಾದಲ್ಲಿ ನಿಧನರಾದರು. ಕ್ಯಾಲಿಪೋರ್ನಿಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಅಧ್ಯಾಪಕರಾಗಿದ್ದ ಇವರು ಅಮೆರಿಕಾದ ಅಧ್ಯಕ್ಷ ಬರಾಕ್ ಒಬಾಮ ರವರಿಗೆ ತಾಂತ್ರಿಕ ಸಲಹಗಾರರಾಗಿದ್ದರು. 1999 ರಲ್ಲಿ ರಸಾಯನಶಾಸ್ತ್ರದ ಫೆಕ್ಟೊಕೆಮಿಸ್ಟ್ರಿಯಲ್ಲಿ ಅಗಣನೀಯ ಸಾಧನೆ ಮಾಡಿದ ಕಾರಣ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿತ್ತು. ನೊಬೆಲ್ ಪ್ರಶಸ್ತಿಯನ್ನು ಪಡೆದ ಮೊದಲ ಅರಬ್ ಪ್ರಜೆ ಇವರು.
Question 6
6.ಈ ಕೆಳಗಿನ ಯಾರು ಮೈಕ್ರೊಸಾಪ್ಟ್ ಇಂಡಿಯಾದ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ?
A
ಭಾಸ್ಕರ್ ಪ್ರಮಣಿಕ್
B
ಅನಂತ್ ಮಹೇಶ್ವರಿ
C
ಚಂದ್ರಶೇಖರ ಚೌಧರಿ
D
ರಿಷಿಕ್ ಸಿಂಗ್
Question 6 Explanation: 
ಅನಂತ ಮಹೇಶ್ವರಿ: ಸಾಪ್ಟ್ ವೇರ್ ತಂತ್ರಜ್ಞ ಅನಂತ್ ಮಹೇಶ್ವರಿ ರವರು ಮೈಕ್ರೋಸಾಪ್ಟ್ ಇಂಡಿಯಾದ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಮೈಕ್ರೋಸಾಪ್ಟ್ ಇಂಡಿಯಾ ಅಮೆರಿಕಾದ ಸಾಪ್ಟ್ ವೇರ್ ದೈತ್ಯ ಮೈಕ್ರೋಸಾಪ್ಟ್ನ ಅಂಗಸಂಸ್ಥೆಯಾಗಿದೆ. ಪ್ರಸ್ತುತ ಭಾಸ್ಕರ್ ಪ್ರಮಣಿಕ್ ಇದರ ಅಧ್ಯಕ್ಷರಾಗಿದ್ದು, ಅನಂತ್ ಮಹೇಶ್ವರಿ ರವರು ಮಾರ್ಚ್ 2017 ರಿಂದ ಇವರ ಉತ್ತರಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
Question 7
7.ಇತ್ತೀಚೆಗೆ ಚಂಡಮಾರುತ “ನಿಡಾ” ಯಾವ ದೇಶಕ್ಕೆ ಅಪ್ಪಳಿಸುವ ಮೂಲಕ ಅವಾಂತರ ಸೃಷ್ಟಿಸಿತು?
A
ಚೀನಾ
B
ದಕ್ಷಿಣ ಕೊರಿಯಾ
C
ಬಾಂಗ್ಲದೇಶ
D
ಜಪಾನ್
Question 7 Explanation: 
ಚೀನಾ: ದಕ್ಷಿಣ ಚೀನಾದ ಗಾಂಗ್ ಡಾಂಗ್ ಪ್ರಾಂತಕ್ಕೆ ನಿಡಾ ಚಂಡಮಾರುತ ಅಪ್ಪಳಿಸಿದ್ದು, ಸಾವಿರಾರು ಜನ ತೊಂದರೆಗೆ ಸಿಲುಕಿದ್ದಾರೆ. ಫಿಲಿಪೈನ್ಸ್ ನ ಮನಿಲಾದಿಂದ ಸುಮಾರು 1,020 ಕಿಮೀ ಪೂರ್ವ-ಆಗ್ನೇಯದಲ್ಲಿ ದಿಕ್ಕಿನಲ್ಲಿ ವಾಯು ಕುಸಿತದಿಂದ ಚಂಡಮಾರುತ ಉಂಟಾಗಿದ್ದು, ಫಿಲಿಪೈನ್ಸ್ ಗೆ ಅಪ್ಪಳಿಸಿದ ನಂತರ ಚೀನಾದಲ್ಲಿ ಅವಾಂತರ ಸೃಷ್ಟಿಸಿದೆ. ನಿಡಾ ಚಂಡಮಾರುತ ಕಳೆದ 33 ವರ್ಷಗಳಲ್ಲಿ ಚೀನಾಕ್ಕೆ ಅಪ್ಪಳಿಸಿದ ಅತ್ಯಂತ ಬಲಿಷ್ಠ ಚಂಡಮಾರುತ ಎನ್ನಲಾಗಿದೆ.
Question 8
8.2016 ಪೆನ್/ಹೆಮ್ ಟ್ರಾನ್ಸ್ಲೇಷನ್ ಫಂಡ್ (Pen/Heim Translation Fund) ಪ್ರಶಸ್ತಿ ಪಡೆದ ಭಾರತೀಯ ಅನುವಾದಕಿ ಯಾರು?
A
ಲಕ್ಷೀ ಗೋಸ್ವಾಮಿ
B
ಅನಿತ ಗೋಪಾಲನ್
C
ಶ್ರೀದೇವಿ ಠಾಗೂರ್
D
ಪರಂಜ್ಯೋತಿ ದೇವಿ
Question 8 Explanation: 
ಅನಿತ ಗೋಪಾಲನ್: ಅನುವಾದಕಿ ಮತ್ತು ಕಲಾವಿದೆ ಅನಿತಾ ಗೋಪಾಲನ್ ರವರನ್ನು 2016 ಪೆನ್/ಹೆಮ್ ಟ್ರಾನ್ಸ್ಲೇಷನ್ ಫಂಡ್ (Pen/Heim Translation Fund) ಪ್ರಶಸ್ತಿಗೆ ಆಯ್ಕೆ ಮಾಡಲಾಗದೆ. ಗೀತ್ ಚತುರ್ವೇದಿ ರವರ ಹಿಂದಿ ಕಾದಂಬರಿ "Simsim" ನ ಇಂಗ್ಲೀಷ್ ಭಾಷಾಂತರಕ್ಕೆ ಈ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಫೆಬ್ರವರಿ 2017 ರಲ್ಲಿ ನ್ಯೂಯಾರ್ಕ್ ನಲ್ಲಿ ನಡೆಯಲಿರುವ 2017 ಪೆನ್ ಸಾಹಿತ್ಯ ಪ್ರಶಸ್ತಿ ಸಮಾರಂಭದಲ್ಲಿ ಗೋಪಾಲನ್ ಅವರಿಗೆ ಪ್ರಶಸ್ತಿಯನ್ನು ವಿತರಿಸಲಾಗುವುದು.
Question 9
9.2016 ರ ಮೊಹುನ್ ಭಾಗನ್ ರತ್ನ ಪ್ರಶಸ್ತಿ ಪಡೆದ ಮಾಜಿ ಪುಟ್ಬಾಲ್ ಆಟಗಾರ ಯಾರು?
A
ಸುನೀಲ್ ಚೆತ್ರಿ
B
ರಾಬಿನ್ ಸಿಂಗ್
C
ಸಯ್ಯದ್ ನಯೀಮುದ್ದೀನ್
D
ಸುಬ್ರತ ಪಾಲ್
Question 9 Explanation: 
ಸಯ್ಯದ್ ನಯೀಮುದ್ದೀನ್: ಭಾರತದ ಶ್ರೇಷ್ಠ ಮಾಜಿ ಪುಟ್ ಬಾಲ್ ಆಟಗಾರ ಸಯ್ಯದ್ ನಯೀಮುದ್ದೀನ್ ರವರಿಗೆ ಮೊಹುನ್ ಬಾಗನ್ ಪುಟ್ ಬಾಲ್ ಕ್ಲಬ್ ನ ಅತ್ಯುನ್ನತ ಪ್ರಶಸ್ತಿಯಾದ ಮೊಹುನ್ ಬಾಗನ್ ರತ್ನ ಪ್ರಶಸ್ತಿಯನ್ನು ನೀಡಲಾಗಿದೆ. ಆ ಮೂಲಕ ಸಯ್ಯದ್ ರವರು ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದ 16 ನೇ ಆಟಗಾರ ಆಗಿದ್ದಾರೆ.
Question 10
10.ಅಂತರರಾಷ್ಟ್ರೀಯ ಹುಲಿ ದಿನವನ್ನು ಯಾವ ದಿನಾಂಕದಂದು ಆಚರಿಸಲಾಗುತ್ತದೆ?
A
ಆಗಸ್ಟ್ 1
B
ಜುಲೈ 28
C
ಜುಲೈ 29
D
ಆಗಸ್ಟ್ 3
Question 10 Explanation: 
ಜುಲೈ 29: ಅಂತರರಾಷ್ಟ್ರೀಯ ಹುಲಿ ದಿನವನ್ನು ಪ್ರತಿ ವರ್ಷ ಜುಲೈ 29 ರಂದು ಆಚರಿಸಲಾಗುತ್ತದೆ. ಜಾಗತಿಕ ಮಟ್ಟದಲ್ಲಿ ಹುಲಿ ಮತ್ತು ಅವುಗಳ ಸ್ವಾಭಾವಿಕ ವಾಸಸ್ಥಾನಗಳ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವುದು ಈ ದಿನದ ಉದ್ದೇಶ. 2010 ರಲ್ಲಿ ನಡೆದ ಸೆಂಟ್ ಪೀಟರ್ಸಬರ್ಗ್ ಹುಲಿ ಸಮ್ಮೇಳನದಲ್ಲಿ ಜುಲೈ29 ನ್ನು ಹುಲಿದಿನವೆಂದ ಘೋಷಿಸಲಾಯಿತು.
There are 10 questions to complete.

Leave a Comment

This site uses Akismet to reduce spam. Learn how your comment data is processed.