“ಬಯೋನಿಕ್ ಲೀಫ್ 2.0” ದೃವ ಇಂಧನ ಉತ್ಪಾದಿಸುವ ಕೃತಕ ಎಲೆ ಆವಿಷ್ಕಾರ

ನೈಸರ್ಗಿಕವಾಗಿ ಸಸ್ಯಗಳು ಸೂರ್ಯನ ಕಿರಣಗಳನ್ನು ಬಳಸಿ ದ್ಯುತಿಸಂಶ್ಲೇಷಣೆ ಕ್ರಿಯೆಯ ಮೂಲಕ ಆಹಾರ ತಯಾರಿಸುವ ರೀತಿಯಲ್ಲೆ ಕಾರ್ಯನಿರ್ವಹಿಸಬಲ್ಲ ಕೃತಕ ಎಲೆಯನ್ನು ಹಾರ್ವಡ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಅನ್ವೇಷಿಸಿದ್ದಾರೆ. ಈ ಎಲೆಗೆ “ಬಯೋನಿಕ್ ಲೀಫ್ 2.0” ಎಂದು ಕರೆಯಲಾಗಿದ್ದು, ಸೂರ್ಯನ ಕಿರಣಗಳನ್ನು ಬಳಸಿ ನೀರನ್ನು ಆಮ್ಲಜನಕ ಮತ್ತು ಜಲಜನಕವಾಗಿ ಬೇರ್ಪಡಿಸಿ ದೃವ ಇಂಧನ ಉತ್ಪಾದಿಸಬಹುದಾಗಿದೆ.

  • ಬಯೋನಿಕ್ ಲೀಫ್ 2.0 ಸಸ್ಯಗಳಿಗಿಂತಲೂ 10 ಪಟ್ಟು ಹೆಚ್ಚು ಶಕ್ತಿಯನ್ನು ಹೊಂದಿದೆ
  • ಈ ಎಲೆಯಿಂದ ಬಳಕೆಗೆ ಯೋಗ್ಯವಾದ ಇಂಧನವನ್ನು ಸುಲಭವಾಗಿ ಸೃಷ್ಟಿಸಬಹುದಾಗಿದೆ
  • ವಾಣಿಜ್ಯ ಉದ್ದೇಶಕ್ಕೆ ಬಳಸುವ ಸಲುವಾಗಿ ಈಗಾಗಲೇ ಸಿದ್ದತೆ ನಡೆದಿದ್ದು, ಅತ್ಯುತ್ತಮ ಆವಿಷ್ಕಾರ ಎನಿಸಲಿದೆ.

ಪರಾಶರ್ ಕುಲಕರ್ಣಿ ರವರ “ಕೌ ಅಂಡ್ ಕಂಪನಿ” ಗೆ ಕಾಮನ್ ವೆಲ್ತ್ ಸಣ್ಣ ಕಥೆ ಪ್ರಶಸ್ತಿ

PK_upಭಾರತೀಯ ಪರಾಶರ್ ಕುಲಕರ್ಣಿ ರವರ “ಕೌ ಅಂಡ್ ಕಂಪನಿ” ಕಥೆಗೆ ಕಾಮನ್ ವೆಲ್ತ್ ಸಣ್ಣ ಕಥೆ ಪ್ರಶಸ್ತಿ ಲಭಿಸಿದೆ. ಈ ಮೂಲಕ ಚೊಚ್ಚಲ ಬಾರಿಗೆ ಭಾರತ ಮತ್ತು ಭಾರತೀಯರೊಬ್ಬರಿಗೆ ಈ ಪ್ರಶಸ್ತಿ ಸಂದಂತಾಗಿದೆ. ಜೂನ 5 ರಂದು ನಡೆದ ಜಮೈಕಾದಲ್ಲಿ ನಡೆದ ಕಾಲಬಾಶ್ ಸಾಹಿತ್ಯ ಹಬ್ಬದಲ್ಲಿ ಕುಲಕರ್ಣಿ ರವರಿಗೆ ಈ ಪ್ರಶಸ್ತಿಯನ್ನು ವಿತರಿಸಲಾಯಿತು.

  • ಕುಲಕರ್ಣಿ ರವರು ಪ್ರಸ್ತುತ ಸಿಂಗಾಪುರದ ಯೇಲ್ ಎನ್ ಯು ಎಸ್ ಕಾಲೇಜಿನಲ್ಲಿ ಸಮಾಜ ವಿಜ್ಞಾನ ಸಹಾಯಕ ಪ್ರಾಧ್ಯಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿಶ್ವದ 47 ರಾಷ್ಟ್ರಗಳ ಸುಮಾರು 4000 ಕಥೆಗಳ ನಡುವೆ ಪರಾಶರ್ ರವರು ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
  • 1990 ರ ದಶಕದಲ್ಲಿ ನಡೆದ ಈ ಕಥೆ ಭಾರತದಲ್ಲಿ ನಡೆಯುವ ಸನ್ನಿವೇಶಗಳ ಸಂಕಲನವಾಗಿದೆ.

ಕಾಮನ್ ವೆಲ್ತ್ ಸಣ್ಣ ಕಥೆಪ ಪ್ರಶಸ್ತಿ

  • ವಾರ್ಷಿಕವಾಗಿ ಈ ಪ್ರಶಸ್ತಿಯನ್ನು ಅಪ್ರಕಟಗೊಳ್ಳದ ಅತ್ಯುತ್ತಮ ಸಣ್ಣ ಕಥೆ ನೀಡಲಾಗುತ್ತಿದೆ
  • ಈ ಪ್ರಶಸ್ತಿಗೆ ಕಾಮಲ್ ವೆಲ್ತ್ ರಾಷ್ಟ್ರಗಳ 18 ವರ್ಷ ತುಂಬಿದ ಎಲ್ಲರು ಅರ್ಹರಾಗಿರುತ್ತಾರೆ
  • ಈ ಪ್ರಶಸ್ತಿಯನ್ನು 2012 ರಿಂದ ನೀಡಲಾಗುತ್ತಿದ್ದು, ಪ್ರಶಸ್ತಿಯು ರೂ 4.8 ಲಕ್ಷ ಬಹುಮಾನ ಹೊಂದಿದೆ.