ಸ್ವಿಟ್ಜರ್ಲ್ಯಾಂಡ್ನ ನಲ್ಲಿ ವಿಶ್ವದ ಅತಿ ಉದ್ದನೆಯ ರೈಲು ಸುರಂಗ ಮಾರ್ಗ

ವಿಶ್ವದ ಅತೀ ಉದ್ದನೆಯ ರೈಲ್ವೆ ಸುರಂಗ ಮಾರ್ಗ ಸ್ವಿಟ್ಜರ್ಲ್ಯಾಂಡ್ನನಲ್ಲಿ ಅಧಿಕೃತವಾಗಿ ಉದ್ಘಾಟನೆಯಾಗಿದೆ. ಸುಮಾರು 17 ವರ್ಷಗಳ ಕಾಮಗಾರಿಯ ಬಳಿಕ ಈ ಮಾರ್ಗ ಸಂಚಾರಕ್ಕೆ ಮುಕ್ತಾವಾಗಿದ್ದು, 2016ರ ಡಿಸೆಂಬರ್ ನಲ್ಲಿ ರೈಲು ಸಂಚಾರ ಸಂಪೂರ್ಣವಾಗಿ ಆರಂಭವಾಗಲಿದೆ. ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡೆ, ಜರ್ಮನ್ ಚಾನ್ಸೆಲರ್ ಏಂಜೆಲಾ ಮರ್ಕೆಲ್, ಇಟಲಿ ಪ್ರಧಾನಿ ಮಟ್ಟೆವೋ ರೆಂಝಿ ರೈಲ್ವೆ ಸುರಂಗ ಮಾರ್ಗ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಸುರಂಗ ಮಾರ್ಗದ ಬಗ್ಗೆ:

  • ಗೋಟ್ಟಹಾರ್ಡ್ ರೈಲ್ವೆ ಸುರಂಗ ಮಾರ್ಗದ ಬಗ್ಗೆ 1947ರಲ್ಲಿ ಸ್ವಿಸ್ ಇಂಜಿನಿಯರ್ ಕಾರ್ಲ್ ಎಡ್ವರ್ಡ್ ಗ್ರುನೆರ್ ಮೊದಲ ನೀಲಿನಕ್ಷೆಯನ್ನು ತಯಾರಿಸಿದ್ದರು. ಆದರೆ ಅಧಿಕಾರಿಶಾಹಿಗಳಿಂದಾಗಿ ಅದು ತಡವಾಗಿತ್ತು.
  • 1999ರಲ್ಲಿ ಸುರಂಗ ಮಾರ್ಗದ ಕಾಮಗಾರಿಗೆ ಚಾಲನೆ ಸಿಕ್ಕಿತ್ತು
  • ಈ ಮಾರ್ಗವು 57 ಕಿಲೋ ಮೀಟರ್ ಉದ್ದ ಹಾಗೂ3ಕಿಲೋ ಮೀಟರ್ ಆಳವಿದೆ.
  • ಆಲ್ಪ್ಸ್ನ ರೆಸ್ಟ್ ಫೆಲ್ಡ್ ನ ಸೆಂಟ್ರಲ್ ಕ್ಯಾಂಟನ್ ನ ಯೂರಿಯಿಂದ ದಕ್ಷಿಣ ಟಿಸಿನೋ ಕ್ಯಾಂಟನ್ ನ ಬೋಡಿಯೋವರೆಗೆ 57 ಕಿಲೋ ಮೀಟರ್ ಸಂಪರ್ಕ ಕಲ್ಪಿಸಲಿದೆ.
  • ಸುಮಾರು 12 ಬಿಲಿಯನ್ ಡಾಲರ್ ವೆಚ್ಚದಲ್ಲಿ ಸುರಂಗ ಮಾರ್ಗ ನಿರ್ಮಾಣವಾಗಿದೆ. ಸುರಂಗದ ಟ್ರ್ಯಾಕ್ ಸ್ಲ್ಯಾಬ್ ನಿರ್ಮಾಣಕ್ಕಾಗಿ 125 ಕಾರ್ಮಿಕರು ಪ್ರತಿದಿನ 3 ಪಾಳಿಯಲ್ಲಿ ಒಟ್ಟು 43,800 ಗಂಟೆ ಕಾರ್ಯನಿರ್ವಹಿಸಿದ್ದರು.
  • 2016ರ ಡಿಸೆಂಬರ್ ನಲ್ಲಿ ರೈಲು ಸುರಂಗ ಮಾರ್ಗದಲ್ಲಿ ಅಧಿಕೃತವಾಗಿ ಸಂಚರಿಸಲಿದ್ದು, ದಿನಂಪ್ರತಿ 260 ಗೂಡ್ಸ್ ಹಾಗೂ 65 ಪ್ರಯಾಣಿಕರ ರೈಲು ಸಂಚರಿಸಲಿದೆ ಎಂದು ನಿರೀಕ್ಷಿಸಲಾಗಿದೆ. 2020ರೊಳಗೆ ಪ್ರಯಾಣಿಕರ ಸಂಖ್ಯೆ 15 ಸಾವಿರಕ್ಕೆ ಏರಲಿದೆ ಎಂದು ಸ್ವಿಸ್ ಫೆಡರಲ್ ರೈಲ್ವೆ ಸರ್ವಿಸ್ ತಿಳಿಸಿದೆ.