ಸಾಮಾನ್ಯ ಜ್ಞಾನ ಕ್ವಿಜ್ 3: ಸಾಮಾನ್ಯ ಜ್ಞಾನ ಕ್ವಿಜ್ ಎಲ್ಲಾ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಾಯಕವಾಗಿವೆ.

ಕ್ವೀಜ್ 3

Question 1
1. ವಿಶ್ವದಲ್ಲೇ ಅತಿ ಎತ್ತರದ ಗಾಂಧೀಜಿಯವರ ಪ್ರತಿಮೆಯನ್ನು ದೇಶದ ಯಾವ ನಗರದಲ್ಲಿ ಅನಾವರಣಗೊಳಿಸಲಾಗಿದೆ?
A
ಅಹಮದಬಾದ್
B
ಸಬರಮತಿ
C
ಪಾಟ್ನಾ
D
ಮುಂಬೈ
Question 1 Explanation: 
ಪಾಟ್ನಾ: (ಬಿಹಾರದ ಪಾಟ್ನಾದಲ್ಲಿ ಪ್ರಪಂಚದಲ್ಲೇ ಅತಿ ಎತ್ತರವಾದ (ಸುಮಾರು 70 ಅಡಿ) ಮಹಾತ್ಮ ಗಾಂಧಿಯವರ ಪ್ರತಿಮೆಯನ್ನು ಇತ್ತೀಚೆಗೆ ಅನಾವರಣಗೊಳಿಸಲಾಗಿದೆ. ನವದೆಹಲಿಯ ಸಂಸತ್ತಿನ ಆವರಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಈ ತನಕ ಅತಿ ಎತ್ತರದ ಪ್ರತಿಮೆಯಾಗಿತ್ತು. ದೆಹಲಿ ಮೂಲದ ಶಿಲ್ಪಿ ರಾಮ್ ಸುತಾರ್ ಮತ್ತು ಮಕ್ಕಳು ಇದನ್ನು ನಿರ್ಮಿಸಿದ್ದಾರೆ.)
Question 2
2. ಈ ಕೆಳಗಿನ ಯಾವ ರಾಜ್ಯ ತನ್ನ ರಾಜ್ಯದ ಶಾಲೆಗಳಲ್ಲಿ “ಸೂರ್ಯ ನಮಸ್ಕಾರ” ವನ್ನು ಕಡ್ಡಾಯಗೊಳಿಸಿದೆ?
A
ಬಿಹಾರ
B
ಮಧ್ಯ ಪ್ರದೇಶ
C
ಮಹಾರಾಷ್ಟ್ರ
D
ಕೇರಳ
Question 2 Explanation: 
ಬಿಹಾರ: (ಬಿಹಾರ ರಾಜ್ಯ ಸರ್ಕಾರವು ಇತ್ತೀಚೆಗೆ ತನ್ನ ರಾಜ್ಯದ ಶಾಲೆಗಳಲ್ಲಿ “ಸೂರ್ಯ ನಮಸ್ಕಾರ” ಕಡ್ಡಾಯವಾಗಿ ಜಾರಿಗೆ ತರಲು ಆದೇಶ ಹೊರಡಿಸಿದೆ.)
Question 3
3. ಭಾರತಕ್ಕೆ ಹೆಲಿಕ್ಯಾಪ್ಟರ್ ಪೂರೈಸುವಿಕೆಗೆ ಸಂಬಂಧಿಸಿದಂತೆ ಭ್ರಷ್ಟಚಾರದ ಸುಳಿಯಲ್ಲಿ ಸಿಲುಕಿರುವ ಆಗಸ್ಟಾ ವೆಸ್ಟ್ ಲ್ಯಾಂಡ್ ಯಾವ ದೇಶದಲ್ಲಿದೆ?
A
ರಷ್ಯಾ
B
ಆಮೆರಿಕಾ
C
ಇಟಲಿ
D
ಬ್ರಿಟನ್
Question 3 Explanation: 
ಬ್ರಿಟನ್ :(ಹೆಲಿಕ್ಯಾಪ್ಟರ್ ಪೂರೈಕೆಗೆ ಲಂಚ ಪಡೆದ ಆರೋಪ ಹೊತ್ತಿರುವ ಆಗಸ್ಟಾ ವೆಸ್ಟ್ ಲೆಂಡ್ ಕಂಪನಿಯು ಇಟಲಿಯ ಬಾಹ್ಯಾಕಾಶ ಮತ್ತು ರಕ್ಷಣಾ ಉತ್ಪನ್ನ ತಯಾರಿಕ ಕಂಪನಿಯಾದ “ಫಿನ್ ಮೆಕ್ಕಾನಿಕ” ಕಂಪನಿಯ ಅಂಗ ಸಂಸ್ಥೆಯಾಗಿದೆ. ಈ ಕಂಪನಿ ನೊಂದಣಿ ಆಗಿರುವುದು ಬ್ರಿಟನ್ ನಲ್ಲಿ.)
Question 4
4. ಅಭಿಷೇಕ್ ಕಪೂರ್ ನಿರ್ದೇಶನದ “ಕೈ ಪೋ ಚಿ (Kai Po chi)” ಸಿನಿಮಾವು ಚೇತನ್ ಭಗತ್ ರವರ ಯಾವ ಕಾದಂಬರಿ ಆಧಾರಿತ ಚಿತ್ರವಾಗಿದೆ?
A
ಎ ನೈಟ್ ಅಟ್ ದಿ ಕಾಲ್ ಸೆಂಟರ್
B
ರೆವಲ್ಯೂಷನ್ 2020
C
ಥ್ರಿ ಮಿಸ್ಟೆಕ್ಸ್ ಇನ್ ಮೈ ಲೈಫ್
D
ಫೈವ್ ಪಾಯಿಂಟ್ ಸಮ್ ಒನ್
Question 4 Explanation: 
ಥ್ರಿ ಮಿಸ್ಟೆಕ್ಸ್ ಇನ್ ಮೈ ಲೈಫ್: (ಬಿಡುಗಡೆ ಸಿದ್ದವಾಗಿರುವ “ಕೈ ಪೋ ಚಿ” ಚಿತ್ರವನ್ನು ಚೇತನ್ ಭಗತ್ ರವರ “ಥ್ರಿ ಮಿಸ್ಟೆಕ್ಸ್ ಇನ್ ಮೈ ಲೈಫ್” ಎಂಬ ಪ್ರಸಿದ್ದ ಕಾದಂಬರಿಯನ್ನು ಆಧಾರಿಸಿ ತಯಾರಿಸಲಾಗಿದೆ)
Question 5
5. ಇರಾನಿ ಕಪ್ ಈ ಕೆಳಗಿನ ಯಾವ ಆಟಕ್ಕೆ ಸಂಬಂಧಿಸಿದೆ?
A
ಪುಟ್ ಬಾಲ್
B
ಟೆನ್ನಿಸ್
C
ಕ್ರಿಕೆಟ್
D
ಹಾಕಿ
Question 5 Explanation: 
ಕ್ರಿಕೆಟ್: (ರಣಜಿ ಟ್ರೋಪಿ ಚಾಂಪಿಯನ್ ಶಿಪ್ 25 ವರ್ಷಗಳನ್ನು ಪೂರೈಸಿದರ ಸ್ಮರಣಾರ್ಥ 1959-60 ನೇ ಸಾಲಿನಲ್ಲಿ ಇರಾನಿ ಕಪ್ ಸ್ಥಾಪಿಸಲಾಗಿದೆ. 1928 ರಿಂದ 1970 ರ ವರೆಗೆ ಬಿಸಿಸಿಐ ಗೆ ಶ್ಲಾಘನೀಯ ಸೇವೆ ಸಲ್ಲಿಸಿದ Z.R.ಇರಾನಿಯವರ ಹೆಸರನ್ನು ಈ ಕಪ್ ಗೆ ನೀಡಲಾಗಿದೆ. ಯಾವುದೇ ವರ್ಷದಲ್ಲಿ ರಣಜಿ ಚಾಂಪಿಯನ್ ಆಗುವ ತಂಡ ಮತ್ತು ಭಾರತದ ಇತರೆ ತಂಡಗಳ ನಡುವೆ ಮಾತ್ರ ಈ ಟೂರ್ನಿಯನ್ನು ಆಯೋಜಿಸಲಾಗುತ್ತದೆ. ಈ ವರ್ಷದಲ್ಲಿ ಮುಂಬೈ ತಂಡ 44 ನೇ ಬಾರಿ ರಣಜಿ ಚಾಂಪಿಯನ್ ಆಗಿತ್ತು. ಆದರೆ ಭಾರತದ ಇತರೆ ತಂಡಕ್ಕೆ ಸತತ 8 ನೇ ಬಾರಿ ಇರಾನಿ ಕಪ್ ಒಲಿಯಿತು.)
Question 6
6. ಈ ಕೆಳಗಿನ ಯಾವ ದೇಶದಲ್ಲಿ “ಸಿಖ್ಖರು” ಪೇಟ ಧರಿಸುವುದರ ಮೇಲೆ ನಿಷೇಧ ಹೇರಲಾಗಿದೆ?
A
ಫ್ರಾನ್ಸ್
B
ಆಮೆರಿಕಾ
C
ಬ್ರಿಟನ್
D
ಆಸ್ಟ್ರೇಲಿಯಾ
Question 6 Explanation: 
ಫ್ರಾನ್ಸ್:(ಫ್ರಾನ್ಸ್ ಸರ್ಕಾರವು ತನ್ನ ದೇಶದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಸರ್ಕಾರಿ ಶಾಲೆಗಳಲ್ಲಿ ಸಿಖ್ಖರು ಪೇಟ ಧರಿಸುವುದರ ಮೇಲೆ ನಿಷೇಧವನ್ನು ಹೇರಿದೆ. ಫ್ರಾನ್ಸ್ ನ ಅಧ್ಯಕ್ಷರಾದ ಫ್ರಾಂಕೋಯಿಸ್ ಹಾಲೆಂಡ್ ರವರು ಭಾರತಕ್ಕೆ ಭೇಟಿ ನೀಡಲಿದ್ದು, ದೆಹಲಿಯಲ್ಲಿ ಇವರ ವಿರುದ್ದ ಪ್ರತಿಭಟನೆ ನಡೆಸುವುದಾಗಿ ಸಿಖ್ ಸಮುದಾಯ ಹೇಳಿದೆ.)
Question 7
7. ಕೆಳಗಿನವರಲ್ಲಿ ಯಾರು ವಿಶ್ವ ಸಂಸ್ಥೆಗೆ ಭಾರತದ ಖಾಯಂ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ?
A
ನಿರುಪಮ ರಾವ್
B
ಸಂದೀಪ್ ಸಿಂಗ್
C
ಅಶೋಕ್ ಕುಮಾರ್ ಮುಖರ್ಜಿ
D
ನವೀನ್ ಚಾವ್ಲ
Question 7 Explanation: 
ಅಶೋಕ್ ಕುಮಾರ್ ಮುಖರ್ಜಿ: (ಅಶೋಕ್ ಕುಮಾರ್ ಮುಖರ್ಜಿಯವರನ್ನು ವಿಶ್ವ ಸಂಸ್ಥೆಗೆ ಭಾರತದ ಖಾಯಂ ರಾಯಭಾರಿಯಾಗಿ ನೇಮಕ ಮಾಡಲಾಗಿದೆ. ಇದುವರೆಗೂ ಈ ಹುದ್ದೆಯಲ್ಲಿದ್ದ ಹರದೀಪ್ ಸಿಂಗ್ ರವರು ನಿವೃತ್ತಿ ಹೊಂದಲಿರುವ ಕಾರಣ ಮುಖರ್ಜಿಯವರನ್ನು ನೇಮಕ ಮಾಡಲಾಗಿದೆ.)
Question 8
8. ಇತ್ತೀಚೆಗ ಆಯೋಜಿಸಲಾಗಿದ್ದ ಚೊಚ್ಚಲ “ಹಾಕಿ ಇಂಡಿಯಾ ಲೀಗ್” ಟೂರ್ನಿಯಲ್ಲಿ ಯಾವ ತಂಡ ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡಿತು?
A
ರಾಂಚಿ ರಿನೋಸ್
B
ಡೆಲ್ಲಿ ವೇವ್ ರೈಡರ್ಸ್
C
ಪಂಜಾಬ್ ವಾರಿಯರ್ಸ್
D
ಮುಂಬೈ ಮ್ಯಾಜಿಷಿಯನ್ಸ್
Question 8 Explanation: 
ರಾಂಚಿ ರಿನೋಸ್: (ರಾಂಚಿ ರಿನೋಸ್ ತಂಡ ಡೆಲ್ಲಿ ವೇವ್ ರೈಡರ್ಸ್ ತಂಡವನ್ನು 3-1 ಗೋಲುಗಳಿಂದ ಸೋಲಿಸುವ ಮೂಲಕ ಚಾಂಪಿಯನ್ ತಂಡವಾಗಿ ಉದಯಿಸಿತು.)
Question 9
9. ಇತ್ತೀಚೆಗೆ ಸುದ್ದಿಯಲ್ಲಿದ್ದ 2012DA14 ಒಂದು______?
A
ನಕ್ಷತ್ರ ಪುಂಜ
B
ಧೂಮಕೇತು
C
ಕ್ಷುದ್ರ ಗ್ರಹ
D
ಉಲ್ಕೆ
Question 9 Explanation: 
ಕ್ಷುದ್ರ ಗ್ರಹ: (2012DA14 ಒಂದು ಕ್ಷುದ್ರಗ್ರಹ. ಇದು ಇತ್ತೀಚೆಗೆ ಭೂಮಿಯಿಂದ ಕೇವಲ 17,200 ಮೈಲಿ ದೂರದ ಸಮೀಪದಲ್ಲಿ ಹಾದು ಹೋಗುವ ಮೂಲಕ ಆತಂಕ ಸೃಷ್ಟಿಸಿತ್ತು. 2012DA14 ಕ್ಷುದ್ರಗ್ರಹವು ಭೂಮಿಗೆ ಅಪ್ಪಳಿಸಲಿದೆ ಎಂದು ವಿಜ್ಞಾನಿಗಳು ಮೊದಲಿಗೆ ಅಂದಾಜಿಸಿದ್ದರು. ಆದರೆ ಇದರಿಂದ ಯಾವುದೇ ಅಪಾಯವಿಲ್ಲವೆಂದು ನಂತರ ತಿಳಿದು ಬಂದಿದೆ.)
Question 10
10. ವಿಧಾನ ಪರಿಷತ್ ನಲ್ಲಿ ಇತ್ತೀಚೆಗೆ ಖಾಸಗಿ ವಿಶ್ವ ವಿದ್ಯಾಲಯಗಳ ಸ್ಥಾಪನೆಗೆ ಅವಕಾಶ ಕಲ್ಪಿಸುವ ಮಸೂದೆಗಳಿಗೆ ಅನುಮೋದನೆ ನೀಡಲಾಗಿದ್ದು, ಇದರಿಂದ ರಾಜ್ಯದಲ್ಲಿ ಖಾಸಗಿ ವಿವಿ ಗಳ ಸಂಖ್ಯೆ ಎಷ್ಟಕ್ಕೆ ಏರಲಿದೆ?
A
20
B
22
C
25
D
27
Question 10 Explanation: 
22: (ವಿರೋಧ ಪಕ್ಷಗಳ ವಿರೋಧದ ನಡುವೆಯೂ ರಾಜ್ಯದಲ್ಲಿ ಖಾಸಗಿ ವಿವಿ ಗಳ ಸ್ಥಾಪನೆಗೆ ಅನುಮೋದನೆ ನೀಡುತ್ತಿರುವ ಪಟ್ಟಿ ಬೆಳೆಯುತ್ತಲೆ ಇದೆ. ಬೆಳಗಾವಿ ಅಧಿವೇಶನದಲ್ಲಿ 13 ಖಾಸಗಿ ವಿವಿಗಳ ಸ್ಥಾಪನೆಗೆ ಅಂಗೀಕಾರ ನೀಡಲಾಗಿತ್ತು. ಸದ್ಯ ರಾಜ್ಯದಲ್ಲಿ ಖಾಸಗಿ ವಿವಿಗಳ ಸಂಖ್ಯೆ 22 ಕ್ಕೆ ಏರಲಿದೆ.)
There are 10 questions to complete.