ಸಾಮಾನ್ಯ ಜ್ಞಾನ ಕ್ವಿಜ್ 2 ಎಲ್ಲಾ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಾಯಕವಾಗಿವೆ.

ಕ್ವೀಜ್ 2

Question 1
1. ಭಾರತದ ರಕ್ಷಣಾ ವ್ಯವಸ್ಥೆಗೆ ಸಂಬಂಧಿಸಿದಂತೆ “ಐಎನ್ಎಸ್ ವಿಕ್ರಮಾದಿತ್ಯ” ಎಂಬುದು___________?
A
ಸಮುದ್ರ ಕಣ್ಗಾವಲು ನೌಕೆ
B
ವಿಮಾನ ಹೊತ್ತಯ್ಯೊಬಲ್ಲ ನೌಕೆ
C
ಸಮುದ್ರದ ತಳದಿಂದ ಹಾರಿಸಬಲ್ಲ ಕ್ಷಿಪಣಿ
D
ಇದ್ಯಾವುದು ಅಲ್ಲ
Question 1 Explanation: 
ವಿಮಾನ ಹೊತ್ತಯ್ಯೊಬಲ್ಲ ನೌಕೆ:ಐಎನ್ಎಸ್ ವಿಕ್ರಮಾದಿತ್ಯ ವಿಮಾನವನ್ನು ಹೊತ್ತಯ್ಯೊಬಲ್ಲ ನೌಕೆ. ರಷ್ಯಾ ಇದನ್ನು ನಿರ್ಮಿಸಿದ್ದು, ಭಾರತಕ್ಕೆ ಹಸ್ತಾಂತರಿಸಿದೆ,
Question 2
2. ಅಂತರರಾಷ್ಟ್ರೀಯ ವಿಕಲಚೇತನರ ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ?
A
ನವೆಂಬರ್ 29
B
ನವೆಂಬರ್ 30
C
ಡಿಸೆಂಬರ್ 1
D
ಡಿಸೆಂಬರ್ 3
Question 2 Explanation: 
ಡಿಸೆಂಬರ್ 3:ಅಂತರರಾಷ್ಟ್ರೀಯ ವಿಕಲಚೇತನರ ದಿನವನ್ನು ಡಿಸೆಂಬರ್ 3 ರಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ವಿಕಲಚೇತನರ ಹಕ್ಕು ಮತ್ತು ಘನತೆಯನ್ನು ಕಾಪಾಡಿ ಅವರನ್ನು ಪ್ರೋತ್ಸಾಹಿಸುವುದು ಈ ದಿನದ ಮುಖ್ಯ ಧ್ಯೇಯ. ವಿಶ್ವಸಂಸ್ಥೆ 1981 ರಿಂದ ವಿಕಲಚೇತನರ ದಿನವನ್ನು ಆಚರಿಸುತ್ತಿದೆ,
Question 3
3. “ಸೆನಕಾಕು” ದ್ವೀಪ ಪ್ರದೇಶದ ಮೇಲಿನ ಸಾರ್ವಭೌಮತ್ವಕ್ಕಾಗಿ ಈ ಕೆಳಗಿನ ಯಾವ ಎರಡು ರಾಷ್ಟ್ರಗಳು ಸೆಣಸುತ್ತಿವೆ?
A
ಚೀನಾ ಮತ್ತು ದಕ್ಷಿಣ ಕೊರಿಯಾ
B
ಚೀನಾ ಮತ್ತು ಜಪಾನ್
C
ಜಪಾನ್ ಮತ್ತು ಇಂಡೋನೇಷಿಯಾ
D
ಚೀನಾ ಮತ್ತು ರಷ್ಯಾ
Question 3 Explanation: 
ಚೀನಾ ಮತ್ತು ಜಪಾನ್: ಸೆನಕಾಕು ದ್ವೀಪ ಪ್ರದೇಶದ ಮೇಲಿನ ಹಿಡಿತಕ್ಕಾಗಿ ಚೀನಾ ಮತ್ತು ಜಪಾನ ದೇಶಗಳು ಸೆಣಸುತ್ತಿವೆ.
Question 4
4. ಟ್ರಾನ್ಸ್ ಫರೆನ್ಸಿ ಇಂಟರ್ ನ್ಯಾಷನಲ್ ಇತ್ತೀಚೆಗೆ ಹೊರತಂದಿರುವ ಮಾಹಿತಿಯಲ್ಲಿ ಭಾರತ ಭ್ರಷ್ಟಾಚಾರದಲ್ಲಿ 94 ನೇ ಸ್ಥಾನವನ್ನು ಪಡೆದುಕೊಂಡಿದೆ. ಈ ಸಮೀಕ್ಷೆಯ ಪ್ರಕಾರ ಭ್ರಷ್ಟಾಚಾರ ಶೂನ್ಯ ರಾಷ್ಟ್ರಗಳು ಯಾವುವು?
A
ಡೆನ್ಮಾರ್ಕ್ ಮತ್ತು ನ್ಯೂಜಿಲ್ಯಾಂಡ್
B
ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್
C
ಸ್ವಿಟ್ಜರ್ಲ್ಯಾಂಡ್ ಮತ್ತು ಡೆನ್ಮಾರ್ಕ್
D
ನಾರ್ವೆ ಮತ್ತು ನ್ಯೂಜಿಲ್ಯಾಂಡ್
Question 4 Explanation: 
ಡೆನ್ಮಾರ್ಕ್ ಮತ್ತು ನ್ಯೂಜಿಲ್ಯಾಂಡ್:ಡೆನ್ಮಾರ್ಕ್ ಮತ್ತು ನ್ಯೂಜಿಲ್ಯಾಂಡ್ ವಿಶ್ವದಲ್ಲೇ ಅತ್ಯಂತ ಕಡಿಮೆ ಭ್ರಷ್ಟಾಚಾರವನ್ನು ಹೊಂದಿರುವ ರಾಷ್ಟ್ರಗಳು ಎನಿಸಿವೆ. ಈ ಸಮೀಕ್ಷೆಯಲ್ಲಿ ಭಾರತ 94 ನೇ ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ವರ್ಷ ಸಹ ಭಾರತ 94 ನೇ ಸ್ಥಾನವನ್ನು ಪಡೆದುಕೊಂಡಿತ್ತು.
Question 5
5. ಈ ಕೆಳಗಿನ ಯಾವ ವಿಮಾನಯಾನ ಸಂಸ್ಥೆ ವಿಶ್ವದ ಅಗ್ಗ ದರದ ಸಂಸ್ಥೆ ಎಂಬ ಹೆಗ್ಗಳಿಕೆಯನ್ನು ವರ್ಲ್ಡ್ ಟ್ರಾವೆಲ್ ಆವಾರ್ಡ್ಸ್-2013 ಪಡೆದುಕೊಂಡಿದೆ?
A
ಏರ್ ಏಷ್ಯಾ
B
ಏರ್ ಬರ್ಲಿನ್
C
ಕಿಂಗ್ ಫಿಶರ್
D
ಸಹರಾ ಏರ್ ಲೈನ್ಸ್
Question 5 Explanation: 
ಏರ್ ಏಷ್ಯಾ
Question 6
6. ಭಾರತದ ಗಗನ್ ಜಿತ್ ಬುಲ್ಲರ್ ಅವರು ಯಾವ ಕ್ರೀಡೆಯಲ್ಲಿ ಪ್ರಸಿದ್ದಿ ಹೊಂದಿದ್ದಾರೆ?
A
ಟೆನ್ನಿಸ್
B
ಗಾಲ್ಪ್
C
ಬಾಸ್ಕೆಟ್ ಬಾಲ್
D
ಪುಟ್ ಬಾಲ್
Question 6 Explanation: 
ಗಾಲ್ಪ್: ಗಗನ್ ಜಿತ್ ಬುಲ್ಲರ್ ಅವರು ಗಾಲ್ಪ್ ಕ್ರೀಡೆಯಲ್ಲಿ ಪ್ರಸಿದ್ದಿ ಹೊಂದಿದ್ದಾರೆ, ಇತ್ತೇಚೆಗೆ ಇಂಡೋನೇಷಿಯಾ ಓಪನ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಈ ಪ್ರಶಸ್ತಿಯನ್ನು ಗೆದ್ದ ಭಾರತದ ಮೊದಲಿಗರು ಎನಿಸಿದರು.
Question 7
7. ಅಮೆರಿಕಾದ ಬಾಹ್ಯಕಾಶ ಸಂಸ್ಥೆ “ನಾಸಾ” ಈ ಕೆಳಗಿನ ಯಾವ ಗ್ರಹ/ಉಪಗ್ರಹ ದ ಮೇಲೆ ಗಿಡಗಳನ್ನು ಬೆಳೆಸುವ ಯೋಜನೆಯನ್ನು ಹಾಕಿಕೊಂಡಿದೆ?
A
ಮಂಗಳ
B
ಚಂದ್ರ
C
ಟೈಟಾನ್
D
ಗುರು
Question 7 Explanation: 
ಚಂದ್ರ: ನಾಸಾ ಸಂಸ್ಥೆ ಚಂದ್ರನ ಮೇಲೆ ಬೆಸಿಲ್, ಟರ್ನಿಪ್ ಸೇರಿದಂತೆ ವಿವಿಧ ಗಿಡಗಳನ್ನು ಬೆಳೆಸುವ ಯೋಜನೆಯನ್ನು ರೂಪಿಸಿಕೊಂಡಿದೆ. ಈ ಯೋಜನೆ 2015 ರ ಹೊತ್ತಿಗೆ ಸಕಾರಗೊಳಿಸುವ ನಿಟ್ಟಿನಲ್ಲಿ ನಾಸಾ ಗುರಿ ಇಟ್ಟಿದೆ.
Question 8
8. ಕರ್ನಾಟಕದಲ್ಲಿ ಅತಿ ಹೆಚ್ಚು ರಾಷ್ಟ್ರೀಯ ಉದ್ಯಾನವನಗಳು ಹಾಗೂ ವನ್ಯಜೀವಿ ರಕ್ಷಣಾ ಧಾಮಗಳನ್ನು ಹೊಂದಿರುವ ಜಿಲ್ಲೆ
A
ಮೈಸೂರು
B
ಉತ್ತರ ಕನ್ನಡ
C
ಕೊಡಗು
D
ಚಿಕ್ಕಮಗಳೂರು
Question 8 Explanation: 
ಮೈಸೂರು
Question 9
9. ವಿಶ್ವ ಪ್ರಶಂಸೆಗಳಿಸಿರುವ “ದಿ ಲೊಲ್ಯಾಂಡ್ (The Lowland)” ಕೃತಿಯ ಲೇಖಕರು ಯಾರು?
A
ಜುಂಪಾ ಲಹರಿ
B
ಚೇತನ್ ಭಗತ್
C
ಖುಷ್ವಂತ್ ಸಿಂಗ್
D
ಅರುಂಧತಿ
Question 9 Explanation: 
ಜುಂಪಾ ಲಹರಿ: ಭಾರತ-ಅಮೆರಿಕಾ ಮೂಲದ ಲೇಖಕಿ ಜುಂಪಾ ಲಹರಿ ಅವರು “ದಿ ಲೊಲ್ಯಾಂಡ್” ಕೃತಿಯ ಲೇಖಕರು.
Question 10
10. ಈ ಕೆಳಗಿನ ಯಾರು ಮಾಕು ಗ್ರಾಂಡ್ ಪ್ರಿಕ್ಸ್ ಟೈಟಲ್ (Macau Prix Gold Title)- 2013 ಗೆದ್ದುಕೊಂಡರು?
A
ಸೈನಾ ನೆಹ್ವಾಲ್
B
ಪಿ.ವಿ.ಸಿಂಧು
C
ಅಶ್ವಿನಿ ಪೊನ್ನಪ್ಪ
D
ಪಿ.ಕಶ್ಯಪ್
Question 10 Explanation: 
ಪಿ.ವಿ.ಸಿಂಧು: ಭಾರತದ ಉದಯ್ಮೋನುಖ ಆಟಗಾರ್ತಿ ಪಿ.ವಿ,ಸಿಂಧು ಅವರು ಮಾಕು ಗ್ರಾಂಡ್ ಪ್ರಿಕ್ಸ್ ಟೈಟಲ್-2013 ಅನ್ನು ತಮ್ಮದಾಗಿಸಿಕೊಂಡರು.
There are 10 questions to complete.