ಸಾಮಾನ್ಯ ಜ್ಞಾನ ಕ್ವಿಜ್ 4: ಸಾಮಾನ್ಯ ಜ್ಞಾನ ಕ್ವಿಜ್ ಎಲ್ಲಾ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಾಯಕವಾಗಿವೆ.

ಕ್ವೀಜ್ 4

Question 1
1. ಪಾಕಿಸ್ತಾನ ನಿರ್ಮಿಸುತ್ತಿರುವ ಪರಮಾಣು ಘಟಕಗಳಿಗೆ ಈ ಕೆಳಗಿನ ಯಾವ ದೇಶ ಆರ್ಥಿಕ ಸಹಾಯ ಮಾಡುತ್ತಿದೆ?
A
ಬಾಂಗ್ಲಾದೇಶ
B
ಶ್ರೀಲಂಕಾ
C
ಆಮೆರಿಕಾ
D
ಚೀನಾ
Question 1 Explanation: 
ಚೀನಾ: (ಪಾಕಿಸ್ತಾನಗಳ ಎರಡು ಅಣು ಸ್ಥಾವರಗಳ ನಿರ್ಮಾಣಕ್ಕೆ ಚೀನಾ ದೇಶವು ರೂ.13,600 ಕೋಟಿ ಸಾಲ ನೀಡಿದೆ. ಪಂಜಾಬ್ ಪ್ರಾಂತ್ಯದ ಚಷ್ಮಾ ಪರಮಾಣು ಸಂಕೀರ್ಣದಲ್ಲಿ ಚೀನಾ ನೆರವಿನಿಂದ ನಿರ್ಮಿಸಲಾಗುತ್ತಿರುವ ತಲಾ 340 ಮೆಗಾ ವ್ಯಾಟ್ ಸಾಮರ್ಥ್ಯದ ಈ ಸ್ಥಾವರಗಳು 2016 ರೊಳಗೆ ಕಾರ್ಯನಿರ್ವಹಿಸಲಿವೆ.)
Question 2
2. ಇತ್ತೀಚೆಗೆ “ಭೀಮಲ್ ಚಟರ್ಜಿ” ಯವರು ಯಾವ ರಾಜ್ಯದ ಅಡ್ವೋಕೇಟ್ ಜನರಲ್ ಆಗಿ ನೇಮಕಗೊಂಡಿದ್ದಾರೆ?
A
ಓಡಿಶಾ
B
ಕೇರಳ
C
ಮಧ್ಯ ಪ್ರದೇಶ
D
ಪಶ್ಚಿಮ ಬಂಗಾಳ
Question 2 Explanation: 
ಪಶ್ಚಿಮ ಬಂಗಾಳ: (ಪಶ್ಚಿಮ ಬಂಗಾಳದ ಅಡ್ವೋಕೇಟ್ ಜನರಲ್ ಆಗಿದ್ದ ಅನಿಂದ್ಯ ಕುಮಾರ್ ಮಿತ್ರರವರು ಈ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾರಣ ಮಮತ ಬ್ಯಾನರ್ಜಿಯವರು ಭೀಮಲ್ ಚಟರ್ಜಿ ರವರನ್ನು ನೂತನ ಅಡ್ವೋಕೇಟ್ ಜನರಲ್ ಆಗಿ ನೇಮಕ ಮಾಡಿದ್ದಾರೆ.)
Question 3
3. ರಾಷ್ಟ್ರೀಯ ಅಪರಾಧ ಅಂಕಿ ಅಂಶ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ಗಲ್ಲು ಶಿಕ್ಷೆ ಆದೇಶ ಮಾಡಿರುವ ಪ್ರಕರಣಗಳಲ್ಲಿ ಕರ್ನಾಟಕ ಎಷ್ಟನೇ ಸ್ಥಾನದಲ್ಲಿದೆ?
A
ಎರಡನೇ ಸ್ಥಾನ
B
ಮೊದಲ ಸ್ಥಾನ
C
ತೃತೀಯಾ ಸ್ಥಾನ
D
ನಾಲ್ಕನೇ ಸ್ಥಾನ
Question 3 Explanation: 
ನಾಲ್ಕನೇ ಸ್ಥಾನ: (ರಾಷ್ಟ್ರೀಯ ಅಪರಾಧ ಅಂಕಿ ಅಂಶ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ಗಲ್ಲು ಶಿಕ್ಷೆ ಆದೇಶ ಮಾಡಿರುವ ಪ್ರಕರಣಗಳಲ್ಲಿ ರಾಜ್ಯ ನಾಲ್ಕನೇ ಸ್ಥಾನದಲ್ಲಿದೆ. 2001 ರಿಂದ 2011 ರ ಅವಧಿಯಲ್ಲಿ ಭಾರತದಲ್ಲಿ 1445 ಜನರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಇದರಲ್ಲಿ ಕರ್ನಾಟಕದ 95 ಜನಗಳಿಗೆ ಕರ್ನಾಟಕ ನ್ಯಾಯಾಲಯಗಳು ಗಲ್ಲು ಶಿಕ್ಷೆ ವಿಧಿಸಲಾಗಿದೆ. 370 ಜನರಿಗೆ ಗಲ್ಲು ಶಿಕ್ಷೆ ವಿಧಿಸುವ ಮೂಲಕ ಉತ್ತರ ಪ್ರದೇಶ ನಂ.1 ಸ್ಥಾನದಲ್ಲಿದೆ. ಉಳಿದಂತೆ ಬಿಹಾರ 132, ಮಹಾರಾಷ್ಟ್ರ 125 ಜನರಿಗೆ ಗಲ್ಲು ಶಿಕ್ಷೆ ವಿಧಿಸುವ ಮೂಲಕ ನಂತರದ ಸ್ಥಾನದಲ್ಲಿವೆ.)
Question 4
4. “ಕರ್ನಾಟಕ ರಾಜ್ಯ ಗಿರಿಜನ ಸಂಶೋಧನ ಸಂಸ್ಥೆ” (KSTRI) ಯಾವ ಜಿಲ್ಲೆಯಲ್ಲಿದೆ?
A
ಬೆಂಗಳೂರು
B
ಮೈಸೂರು
C
ಧಾರವಾಡ
D
ಬೆಳಗಾಂ
Question 4 Explanation: 
ಮೈಸೂರು: (ಕರ್ನಾಟಕದ ಮೈಸೂರು ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ ಗಿರಿಜನ ಸಂಶೋಧನ ಸಂಸ್ಥೆಯನ್ನು 2011 ರಲ್ಲಿ ಸ್ಥಾಪಿಸಲಾಗಿದೆ. ಮೈಸೂರು ಭಾಗದಲ್ಲಿ ಬುಡಕಟ್ಟು ಜನಾಂಗದವರು ಹೆಚ್ಚಾಗಿ ವಾಸಿಸುತ್ತಿರುವುದರಿಂದ ಈ ಭಾಗದಲ್ಲಿ ನಿರ್ಮಿಸಲಾಗಿದೆ. ಈ ಸಂಸ್ಥೆಯ ಕಾರ್ಯನಿರ್ವಹಣೆಗೆ 2011-12 ನೇ ಸಾಲಿನಲ್ಲಿ ರೂ.80 ಲಕ್ಷ ಮತ್ತು 2012-13 ನೇ ಸಾಲಿನಲ್ಲಿ ರೂ.1 ಕೋಟಿ ಅನುದಾನವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಲಾ ಶೇ.50 ರ ಪ್ರಮಾಣದಲ್ಲಿ ಬಿಡುಗಡೆ ಮಾಡಿವೆ. ಇತ್ತೀಚೆಗೆ ಈ ಸಂಸ್ಥೆಯು ದೇಶದಲ್ಲೇ ಪ್ರಥಮವೆನಿಸಿದ ಬುಡಕಟ್ಟು ಜನಾಂಗಗಳ ಶಬ್ದಕೋಶ ರಚನೆಗೆ ಮುಂದಾಗಿದೆ.)
Question 5
5. ತನ್ನ ಗೆಳತಿಯನ್ನು ಗುಂಡಿಟ್ಟು ಕೊಂದ ಆರೋಪ ಹೊತ್ತಿರುವ ಅಥ್ಲೀಟ್ “ಆಸ್ಕರ್ ಪಿಸ್ಟೋರಿಯಸ್” ಯಾವ ದೇಶದವರು?
A
ಆಮೆರಿಕಾ
B
ರಷ್ಯಾ
C
ಚೀನಾ
D
ದಕ್ಷಿಣಾ ಆಫ್ರಿಕಾ
Question 5 Explanation: 
ದಕ್ಷಿಣಾ ಆಫ್ರಿಕಾ: (ಆಸ್ಕರ್ ಪಿಸ್ಟೋರಿಯಸ್ ರವರು ದಕ್ಷಿಣಾ ಆಫ್ರಿಕಾದ ಕ್ರೀಡಾ ಪಟು. ಪ್ಯಾರಾಲಿಂಪಿಕ್ಸ್ ಚಿನ್ನದ ಪದಕ ವಿಜೇತರಾಗಿರುವ ಇವರು ಗೆಳತಿ ಹಾಗೂ ರೂಪದರ್ಶಿ ರೀವಾ ಸ್ಟೀನ್ ಕಾಂಪ್ ಅವರನ್ನು ಹತ್ಯೆ ಮಾಡಿರುವ ಆರೋಪ ಹೊತ್ತಿದ್ದಾರೆ. )
Question 6
6. ಇತ್ತೀಚೆಗೆ ಈ ಕೆಳಗಿನ ಯಾವ ಕೇಂದ್ರ ಸಚಿವಾಲಯವು “MyIndia Intiative A-Digital Volunteer” ಎಂಬ ಕಾರ್ಯಕ್ರಮವನ್ನು ಆರಂಭಿಸಿದೆ?
A
ಗ್ರಾಮೀಣ ಅಭಿವೃದ್ದಿ ಸಚಿವಾಲಯ
B
ಪ್ರವಾಸೋದ್ಯಮ ಸಚಿವಾಲಯ
C
ಮಾಹಿತಿ ಮತ್ತು ಪ್ರಸಾರ ಸಚಿವಾಲಯ
D
ವಿದೇಶಾಂಗ ಸಚಿವಾಲಯ
Question 6 Explanation: 
ಮಾಹಿತಿ ಮತ್ತು ಪ್ರಸಾರ ಸಚಿವಾಲಯ: (ಮಾಹಿತಿ ಮತ್ತು ಪ್ರಸಾರ ಸಚಿವಾಲಯವ (Information and Broadcasting) ಇತ್ತೀಚೆಗೆ “MyIndia Intiative A-Digital Volunteer” ಎಂಬ ಕಾರ್ಯಕ್ರಮಕ್ಕೆ ಚಾಲನೆ ನೀಡಿತು. ದೇಶದ ಅಭಿವೃದ್ದಿಯ ಸಂದೇಶವನ್ನು ಸ್ವ ಇಚ್ಛೆಯಿಂದ ಸಾಮಾಜಿಕ ತಾಣದಲ್ಲಿ ನೊಂದಣಿ ಮಾಡಿಕೊಳ್ಳುವ ಸಾರ್ವಜನಿಕರಿಗೆ ಈ ಕಾರ್ಯಕ್ರಮದ ಗುರಿಯಾಗಿದೆ.)
Question 7
7. ಕೆಳಗಿನ ಯಾವ ದೇಶ ಇತ್ತೀಚೆಗೆ ಜಾಗತಿಕ ಮಟ್ಟದಲ್ಲಿ ಭಾರಿ ವಿರೋದಗಳ ನಡುವೆಯೂ 3 ನೇ ಅಣ್ವಸ್ತ್ರ ಪರೀಕ್ಷೆ ನಡೆಸಿತು?
A
ಉತ್ತರ ಕೋರಿಯಾ
B
ದಕ್ಷಿಣ ಕೋರಿಯಾ
C
ದಕ್ಷಿಣ ಸೂಡಾನ್
D
ಉತ್ತರ ಸೂಡಾನ್
Question 7 Explanation: 
ಉತ್ತರ ಕೋರಿಯಾ:(ವಿಶ್ವಸಂಸ್ಥೆ ನಿರ್ಬಂಧದ ಹೊರತಾಗಿಯೂ ಉತ್ತರ ಕೋರಿಯಾ ಮೂರನೇ ಬಾರಿಗೆ ಅಣ್ವಸ್ತ್ರ ಪರೀಕ್ಷೆಯನ್ನು ಮಾಡುವ ಮೂಲಕ ಜಗತ್ತಿಗೆ ಸೆಡ್ಡು ಹೊಡೆದು ನಿಂತಿದೆ. ಭೂಗತ ಅಣ್ವಸ್ತ್ರ ಪರೀಕ್ಷೆಯನ್ನು ತಾನು ನಡೆಸಿದ್ದಾಗಿ ಉತ್ತರ ಕೋರಿಯಾ ಹೇಳಿದೆ. ಈ ಪರೀಕ್ಷೆಯಿಂದ ಭೂಕಂಪನ ಸಹ ಉಂಟಾಗಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಈ ಹಿಂದೆ 2006 ಮತ್ತು 2009 ರಲ್ಲಿ ಉತ್ತರ ಕೋರಿಯಾ ಇಂತಹ ಅಣ್ವಸ್ತ್ರ ಪರೀಕ್ಷೆಯನ್ನು ಕೈಗೊಂಡಿತ್ತು.)
Question 8
8. ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ “ ಒಂದು ಶತಕೋಟಿ ಕೂಗು (One Billion Raising)” ಪ್ರತಿಭಟನೆ ಯಾವುದಕ್ಕೆ ಸಂಬಂಧಿಸಿದೆ?
A
ಅಣು ವಿದ್ಯುತ್ ಘಟಕಗಳು
B
ಮಹಿಳೆಯರ ಮೇಲಿನ ದೌರ್ಜನ್ಯ
C
ಪರಿಸರ ಮಾಲಿನ್ಯ
D
ಸಿರಿಯಾ ದೇಶದ ಘರ್ಷಣೆ
Question 8 Explanation: 
ಮಹಿಳೆಯರ ಮೇಲಿನ ದೌರ್ಜನ್ಯ: (ಮಹಿಳೆಯರ ಮೇಲಿನ ದೌರ್ಜನ್ಯವನ್ನು ಪ್ರತಿಭಟಿಸಿ ಜಾಗತಿಕ ಮಟ್ಟದಲ್ಲಿ “ಒಂದು ಶತಕೋಟಿ ಕೂಗು” ಎಂಬ ಶೀರ್ಷಿಕೆ ಅಡಿ ಪ್ರತಿಭಟನೆ ನಡೆಸಲಾಯಿತು.)
Question 9
9. “ವಿಶ್ವ ವ್ಯಾಪಾರ ಸಂಸ್ಥೆ (World Trade Organisation) ಅಂಕಿ ಅಂಶಗಳ” ಪ್ರಕಾರ ಭಾರತ ಪ್ರಪಂಚದಲ್ಲಿ ಎಷ್ಟನೇ ರಪ್ತು ದೇಶವಾಗಿದೆ?
A
12 ನೇ
B
15 ನೇ
C
19 ನೇ
D
10 ನೇ
Question 9 Explanation: 
19 ನೇ: (ಭಾರತ ವಿಶ್ವದಲ್ಲೇ 19 ನೇ ಅತಿ ದೊಡ್ಡ ರಪ್ತು ದೇಶವಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಶೇ.1.7 ರಷ್ಟು ರಪ್ತು ಪಾಲನ್ನು ಭಾರತ ಹೊಂದಿದೆ ಎಂದು ಹಣಕಾಸು ರಾಜ್ಯ ಸಚಿವ ನಮೋ ನಾರಾಯಣ ಮೀನ ಹೇಳಿದ್ದಾರೆ. ಆಮದು ಮಾರುಕಟ್ಟೆಯಲ್ಲಿ ಭಾರತ 12 ನೇ ಸ್ಥಾನದಲ್ಲಿದೆ. ಆಮದು ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಭಾರತ ಶೇ. 2.5 ರಷ್ಟು ಪಾಲನ್ನು ಹೊಂದಿದೆ. ವಾಣಿಜ್ಯ ಸರಕು ರಪ್ತಿನಲ್ಲಿ 8 ನೇ ಸ್ಥಾನದಲ್ಲಿದ್ದು, ಶೇ. 3.3 ರಷ್ಟು ಪಾಲನ್ನು ಜಾಗತಿಕವಾಗಿ ಹೊಂದಿದೆ. ವಾಣಿಜ್ಯ ಸರಕು ಆಮದುವಿನಲ್ಲಿ 7 ನೇ ಸ್ಥಾನದಲ್ಲಿರುವ ಭಾರತ ಶೇ.3.1 ರಷ್ಟು ಪಾಲನ್ನು ಹೊಂದಿದೆ. ಜಾಗತಿಕ ಮಟ್ಟದಲ್ಲಿ ಆರ್ಥಿಕ ಕುಸಿತ ಉಂಟಾಗಿರುವುದರಿಂದ ರಪ್ತು ಪ್ರಮಾಣದಲ್ಲಿ ಇಳಿಕೆ ಕಂಡುಬಂದಿರುವುದಾಗಿ ಮೀನಾ ರವರು ತಿಳಿಸಿದ್ದಾರೆ.)
Question 10
10. ಇತ್ತೀಚೆಗೆ ಚಾಲನೆ ನೀಡಲಾದ “ರಾಜೀವ್ ಗಾಂಧಿ ಷೇರು ಉಳಿತಾಯ ಯೋಜನೆ”ಯಡಿ ವ್ಯಕ್ತಿಯ ವರಮಾನ ಎಷ್ಟಿದ್ದರೆ ಷೇರು ಮಾರುಕಟ್ಟೆಯಲ್ಲಿ ಬಂಡವಾಳ ಹೂಡಬಹುದಾಗಿದೆ?
A
15 ಲಕ್ಷಕ್ಕಿಂತ ಕಡಿಮೆ
B
10 ಲಕ್ಷಕ್ಕಿಂತ ಕಡಿಮೆ
C
5 ಲಕ್ಷಕ್ಕಿಂತ ಕಡಿಮೆ
D
20 ಲಕ್ಷಕ್ಕಿಂತ ಕಡಿಮೆ
Question 10 Explanation: 
10 ಲಕ್ಷಕ್ಕಿಂತ ಕಡಿಮೆ:(ರಾಜೀವ್ ಗಾಂಧಿ ಷೇರು ಉಳಿತಾಯ ಯೋಜನೆಯಡಿ 10 ಲಕ್ಷಕ್ಕಿಂತಲೂ ಕಡಿಮೆ ವರಮಾನ ಹೊಂದಿರುವ ವ್ಯಕ್ತಿಗಳು ಷೇರು ಪೇಟಿಯಲ್ಲಿ 50 ಸಾವಿರದವರೆಗೆ ಬಂಡವಾಳ ತೊಡಗಿಸಬಹುದಾಗಿದೆ.)
There are 10 questions to complete.