ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಜನವರಿ,3,2022

Question 1
ಈ ಕೆಳಗಿನ ಯಾವ ರಾಜ್ಯದಲ್ಲಿ ಕೇಂದ್ರ ಸರ್ಕಾರ ಇತ್ತೀಚೆಗೆ ಸಶಸ್ತ್ರ ಪಡೆ ವಿಶೇಷ ಅಧಿಕಾರ ಕಾಯ್ದೆ-1958 ರನ್ನು ವಿಸ್ತರಿಸಿತು?
A
ಮಿಜೋರಾಂ
B
ಸಿಕ್ಕಿಂ
C
ನಾಗಾಲ್ಯಾಂಡ್
D
ಅಸ್ಸಾಂ
Question 1 Explanation: 

ನಾಗಾಲ್ಯಾಂಡ್ ವಿವಾದಾತ್ಮಕ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ 1958 (ಎಎಫ್ಎಸ್ಪಿಎ) ಅನ್ನು ನಾಗಾಲ್ಯಾಂಡ್ನಲ್ಲಿ ಇನ್ನೂ 6 ತಿಂಗಳವರೆಗೆ ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶಿಸಿದೆ. ಕಾನೂನು ಮತ್ತು ಸುವ್ಯವಸ್ಥೆಗೆ ವಿರುದ್ಧವಾಗಿ ನಡೆದುಕೊಳ್ಳುವ ಯಾರ ಮೇಲಾದರೂ ಕಠಿಣ ಕ್ರಮ ತೆಗೆದುಕೊಳ್ಳುವ ಅಧಿಕಾರವನ್ನು ಸಶಸ್ತ್ರ ಪಡೆಗಳಿಗೆ ಈ ಕಾಯ್ದೆ ನೀಡುತ್ತದೆ. ಯಾರನ್ನೇ ಆದರೂ ವಾರೆಂಟ್ ಇಲ್ಲದೆ ಬಂಧಿಸಲು, ಯಾವುದೇ ವಾಹನ ಪರಿಶೀಲಿಸಲು ಹಾಗೂ ಐದು ಅಥವಾ ಅದಕ್ಕಿಂತ ಹೆಚ್ಚಿನ ಜನರು ಗುಂಪುಗೂಡದಂತೆ ನಿಷೇಧಿಸುವುದು ಈ ಕಾಯ್ದೆಯ ಕೆಲವು ವಿಶೇಷ ಅಧಿಕಾರಗಳಲ್ಲಿ ಸೇರಿವೆ.

Question 2
Best Balkan Athlete of the year’ 2021 ಪ್ರಶಸ್ತಿಗೆ ಭಾಜನರಾದ ಕ್ರೀಡಾಪಟು.....?
A
ಕ್ರಿಸ್ಟಿಯಾನೋ ರೊನಾಲ್ಡೊ
B
ಲಿಯೋನೆಲ್ ಮೆಸ್ಸಿ
C
ನೊವಾಕ್ ಜೊಕವಿಕ್
D
ರೋಜರ್ ಫೆಡರರ್
Question 2 Explanation: 

ನೊವಾಕ್ ಜೊಕವಿಕ್ ಸರ್ಬಿಯಾದ ಖ್ಯಾತ ಟೆನಿಸ್ ಆಟಗಾರ ನೊವಾಕ್ ಜೊಕೊವಿಕ್ ರವರು Best Balkan Athlete of the year’ 2021 ಪ್ರಶಸ್ತಿಗೆ ಭಾಜನರಾಗಿದ್ದಾರೆ. ಜೊಕೊವಿಕ್ ರವರು 7ನೇ ಬಾರಿ ಈ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

Question 3
ಅಟಲ್ ರಾಂಕಿಂಗ್ ಆಫ್ ಇನ್ಸ್ಟಿಟ್ಯೂಷನ್ ಇನೋವೇಷನ್ ಅಚೀವ್ಮೆಂಟ್ಸ್ 2021 ಪಟ್ಟಿಯಲ್ಲಿ ಪ್ರಥಮ ಸ್ಥಾನ ಪಡೆದ ಶಿಕ್ಷಣ ಸಂಸ್ಥೆ ಯಾವುದು?
A
ಐಐಟಿ ಮದ್ರಾಸ್
B
ಐಐಟಿ ಬಾಂಬೆ
C
ಐಐಟಿ ಖರಗಪುರ
D
ಐಐಟಿ ದೆಹಲಿ
Question 3 Explanation: 

ಐಐಟಿ ಮದ್ರಾಸ್ ಅಟಲ್ ರಾಂಕಿಂಗ್ ಆಫ್ ಇನ್ಸ್ಟಿಟ್ಯೂಷನ್ ಇನೋವೇಷನ್ ಅಚೀವ್ಮೆಂಟ್ಸ್ 2021 ಪಟ್ಟಿಯಲ್ಲಿ ಐಐಟಿ ಮದ್ರಾಸ್ ಶಿಕ್ಷಣ ಸಂಸ್ಥೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ಐಐಟಿ ಬಾಂಬೆ ಮತ್ತು ಐಐಟಿ ದೆಹಲಿ ಎರಡು ಮತ್ತು ಮೂರನೇ ಸ್ಥಾನದಲ್ಲಿದೆ.

Question 4
ಯಾವ ರಾಜ್ಯ ವಿಜಯ್ ಹಜಾರೆ ಟ್ರೋಫಿ 2021-22 ಗೆದ್ದುಕೊಂಡಿತು?
A
ತಮಿಳುನಾಡು
B
ಹಿಮಾಚಲ ಪ್ರದೇಶ
C
ಕರ್ನಾಟಕ
D
ಮಹಾರಾಷ್ಟ್ರ
Question 4 Explanation: 

ಹಿಮಾಚಲ ಪ್ರದೇಶ ಹಿಮಾಚಲಪ್ರದೇಶ ಕ್ರಿಕೆಟ್ ತಂಡ ಇದೇ ಮೊದಲ ಬಾರಿಗೆ ವಿಜಯ ಹಜಾರೆ ಟ್ರೋಫಿಯನ್ನು ಗೆದ್ದುಕೊಂಡಿತು.

Question 5
2021 ನೇ ಸಾಲಿನಲ್ಲಿ ಯಾವ ರಾಜ್ಯದಲ್ಲಿ ಅತಿ ಹೆಚ್ಚು ಹುಲಿಗಳ ಸಾವು ಪ್ರಕರಣ ದಾಖಲಾಗಿದೆ?
A
ಕರ್ನಾಟಕ
B
ಮಧ್ಯಪ್ರದೇಶ
C
ಗುಜರಾತ್
D
ಮಹಾರಾಷ್ಟ್ರ
Question 5 Explanation: 

ಮಧ್ಯಪ್ರದೇಶ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಅಂಕಿ-ಅಂಶಗಳ ಪ್ರಕಾರ 2021 ನೇ ಸಾಲಿನಲ್ಲಿ 146 ಹುಲಿಗಳು ಸಾವನ್ನಪ್ಪಿದ್ದು ಮಧ್ಯಪ್ರದೇಶದಲ್ಲಿ ಅತಿ ಹೆಚ್ಚು ಅಂದರೆ 44 ಹುಲಿಗಳು ಸಾವನ್ನಪ್ಪಿವೆ. ನಂತರದ ಸ್ಥಾನದಲ್ಲಿ ಮಹಾರಾಷ್ಟ್ರ (26) ಮತ್ತು ಕರ್ನಾಟಕ (14) ಇದೆ.

Question 6
ವಿಶ್ವದಲ್ಲಿ ಅತಿ ಉದ್ದನೆಯ ಮೆಟ್ರೋ ರೈಲ್ವೇ ನೆಟ್ವರ್ಕ್ ಹೊಂದಿರುವ ನಗರ ಯಾವುದು?
A
ಶಾಂಘೈ
B
ಬೀಜಿಂಗ್
C
ಟೋಕಿಯೋ
D
ದೆಹಲಿ
Question 6 Explanation: 

ಶಾಂಘೈ ಚೀನಾದ ಶಾಂಘೈ ನಗರ ವಿಶ್ವದಲ್ಲೇ ಅತಿ ಹೆಚ್ಚು ಉದ್ದನೆಯ ಮೆಟ್ರೋ ರೈಲ್ವೇ ನೆಟ್ವರ್ಕ್ ಹೊಂದಿರುವ ನಗರ ಎಂಬ ಖ್ಯಾತಿ ಪಡೆದುಕೊಂಡಿದೆ. ಶಾಂಗೈ ನಗರದಲ್ಲಿ 831 ಕಿಲೋಮೀಟರ್ ಉದ್ದನೆಯ ರೈಲ್ವೆ ನೆಟ್ವರ್ಕ್ ಇದೆ. ಬೀಜಿಂಗ್ ಮತ್ತು ನವದೆಹಲಿ ನಂತರದ ಸ್ಥಾನದಲ್ಲಿವೆ.

Question 7
ಈ ಕೆಳಗಿನ ಯಾರು ರೈಲ್ವೆ ಬೋರ್ಡಿನ ಚೇರ್ಮನ್ ಮತ್ತು ಸಿಇಓ ಆಗಿ ನೇಮಕಗೊಂಡಿದ್ದಾರೆ?
A
ವಿವೇಕ್ ಗೋಸ್ವಲ್
B
ವಿಕೆ ತ್ರಿಪಾಠಿ
C
ಅಶಿಷ್ ಪಾಂಡೆ
D
ತರುಣ್ ಜೈನ್
Question 7 Explanation: 

ವಿಕೆ ತ್ರಿಪಾಠಿ

Question 8
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿರವರು ಬ್ರಿಟಿಷ್ ವಸಾಹತುಶಾಹಿ ವಿರುದ್ಧ ಹೋರಾಡಿದ ಭಾರತದ ಪ್ರಥಮ ಮಹಿಳೆ ರಾಣಿ ವೇಲು ನಾಚಿಯರ್ ಅವರಿಗೆ ಗೌರವ ಸಲ್ಲಿಸಿದರು. ರಾಣಿ ವೇಲು ನಾಚಿಯರ್ ಯಾವ ರಾಜ್ಯಕ್ಕೆ ಸಂಬಂಧಿಸಿದ್ದಾರೆ?
A
ಪಶ್ಚಿಮ ಬಂಗಾಳ
B
ತಮಿಳುನಾಡು
C
ತೆಲಂಗಣ
D
ಕೇರಳ
Question 8 Explanation: 

ತಮಿಳುನಾಡು ರಾಣಿ ವೇಲು ನಾಚಿಯಾರ್ (3 ಜನವರಿ 1730 - 25 ಡಿಸೆಂಬರ್ 1796) ಶಿವಗಂಗ ಎಸ್ಟೇಟ್ನ ರಾಣಿಯಾಗಿದ್ದು, ಭಾರತದಲ್ಲಿ ಬ್ರಿಟಿಷ್ ವಸಾಹತುಶಾಹಿ ಶಕ್ತಿಯ ವಿರುದ್ಧ ಹೋರಾಡಿದ ಮೊದಲ ರಾಣಿ. ಆಕೆಯನ್ನು ತಮಿಳರು ವೀರಮಂಗೈ ("ಧೈರ್ಯಶಾಲಿ ಮಹಿಳೆ") ಎಂದು ಕರೆಯುತ್ತಾರೆ.

Question 9
ಕಲ್ಪನಾ ಚಾವ್ಲಾ ಸೆಂಟರ್ ಫಾರ್ ರಿಸರ್ಚ್ ಇನ್ ಸ್ಪೇಸ್ ಸೈನ್ಸ್ ಅಂಡ್ ಟೆಕ್ನಾಲಜಿಯನ್ನು ಯಾವ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಲಾಗಿದೆ?
A
ಮದ್ರಾಸ್ ವಿಶ್ವವಿದ್ಯಾಲಯ
B
ಅಲಹಾಬಾದ್ ವಿಶ್ವವಿದ್ಯಾಲಯ
C
ಚಂಡಿಗರ್ ವಿಶ್ವವಿದ್ಯಾಲಯ
D
ಬಾಂಬೆ ವಿಶ್ವವಿದ್ಯಾಲಯ
Question 9 Explanation: 

ಚಂಡಿಗರ್ ವಿಶ್ವವಿದ್ಯಾಲಯ ಜನವರಿ 3, 2021 ರಂದು ಚಂಡೀಗರ್ ವಿಶ್ವವಿದ್ಯಾಲಯದಲ್ಲಿ ಕಲ್ಪನಾ ಚಾವ್ಲಾ ಸೆಂಟರ್ ಫಾರ್ ರಿಸರ್ಚ್ ಇನ್ ಸ್ಪೇಸ್ ಸೈನ್ಸ್ ಅಂಡ್ ಟೆಕ್ನಾಲಜಿಯನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉದ್ಘಾಟಿಸಿದರು. ಬಾಹ್ಯಾಕಾಶ ವಿಜ್ಞಾನ, ಉಪಗ್ರಹ ಅಭಿವೃದ್ಧಿ ಮತ್ತು ಬಾಹ್ಯಾಕಾಶದಲ್ಲಿ ಭವಿಷ್ಯದ ಸವಾಲುಗಳನ್ನು ಎದುರಿಸಲು ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಉದ್ದೇಶದಿಂದ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲಾಗಿದೆ.

Question 10
ಯಾವ ದೇಶ U-19 ಏಷ್ಯಾ ಕ್ರಿಕೆಟ್ ಕಪ್ ಗೆದ್ದುಕೊಂಡಿತು?
A
ಭಾರತ
B
ಶ್ರೀಲಂಕಾ
C
ಆಸ್ಟ್ರೇಲಿಯಾ
D
ನ್ಯೂಜಿಲೆಂಡ್
Question 10 Explanation: 

ಭಾರತ ಭಾರತ ಕ್ರಿಕೆಟ್ ತಂಡ ಶ್ರೀಲಂಕಾ ತಂಡವನ್ನು ಮಣಿಸುವ ಮೂಲಕ U-19 ಏಷ್ಯಾ ಕ್ರಿಕೆಟ್ ಕಪ್ ಅನ್ನು ತನ್ನದಾಗಿಸಿಕೊಂಡಿತು.

There are 10 questions to complete.

Leave a Comment

This site uses Akismet to reduce spam. Learn how your comment data is processed.