ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಆಗಸ್ಟ್, 1, 2, 2017

Question 1

1. 2017 ಡಿಜಿಟಲ್ ಎವಲ್ಯೂಷನ್ ಇಂಡೆಕ್ಸ್ (ಡಿಐಐ) Digital Evolution Index) ನಲ್ಲಿ ಭಾರತ ಎಷ್ಟನೇ ಸ್ಥಾನವನ್ನು ಪಡೆದುಕೊಂಡಿದೆ?

A
45
B
53
C
66
D
77
Question 1 Explanation: 
53

2017 ಡಿಜಿಟಲ್ ಎವಲ್ಯೂಷನ್ ಇಂಡೆಕ್ಸ್ (ಡಿಐಐ)ನಲ್ಲಿ ಭಾರತವು 60 ದೇಶಗಳ ಪೈಕಿ 53 ನೇ ಸ್ಥಾನ ಪಡೆದಿದೆ. ಈ ಪಟ್ಟಿಯಲ್ಲಿ ನಾರ್ವೆ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಸ್ವೀಡನ್, ಸ್ವಿಟ್ಜರ್ಲ್ಯಾಂಡ್, ಡೆನ್ಮಾರ್ಕ್ ಮತ್ತು ಫಿನ್ಲ್ಯಾಂಡ್ ನಂತರದ ಸ್ಥಾನದಲ್ಲಿವೆ. ಮಾಸ್ಟರ್ ಕಾರ್ಡ್ನ ಸಹಯೋಗದೊಂದಿಗೆ ಟಫ್ಟ್ಸ್ ವಿಶ್ವವಿದ್ಯಾನಿಲಯದ ಫ್ಲೆಚರ್ ಸ್ಕೂಲ್, ಡಿಜಿಟಲ್ ಇವಲ್ಯೂಷನ್ ಇಂಡೆಕ್ಸ್ (ಡಿಐಐ) 2017 ಅನ್ನು ಪ್ರಸ್ತುತಪಡಿಸಿದೆ. ಈ ಸೂಚ್ಯಂಕವು 60 ದೇಶಗಳಲ್ಲಿ ಡಿಜಿಟಲ್ ಅರ್ಥವ್ಯವಸ್ಥೆಯ ಪ್ರಗತಿಯನ್ನು ಪತ್ತೆಹಚ್ಚುವ ಒಂದು ಸಮಗ್ರ ಸಂಶೋಧನೆಯಾಗಿದ್ದು, ಅದರಲ್ಲಿ ನಾಲ್ಕು ಪ್ರಮುಖ ವಿಷಯಗಳಾದ ಸರಬರಾಜು, ಗ್ರಾಹಕರ ಬೇಡಿಕೆ, ಸಾಂಸ್ಥಿಕ ಪರಿಸರ ಮತ್ತು ನಾವೀನ್ಯತೆಯಲ್ಲಿ 100 ವಿವಿಧ ಸೂಚಕಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ.

Question 2

2. ಗಂಗೋತ್ರಿ ರಾಷ್ಟ್ರೀಯ ಉದ್ಯಾನವನ (ಜಿ ಎನ್ ಪಿ) ಯಾವ ರಾಜ್ಯದಲ್ಲಿದೆ?

A
ಛತ್ತೀಸಗಢ
B
ಬಿಹಾರ
C
ಉತ್ತರಖಂಡ
D
ಪಶ್ಚಿಮ ಬಂಗಾಳ
Question 2 Explanation: 
ಉತ್ತರಖಂಡ

ಗಂಗೋತ್ರಿ ರಾಷ್ಟ್ರೀಯ ಉದ್ಯಾನವನವು (ಜಿಎನ್ ಪಿ) ಉತ್ತರಖಂಡದ ಉತ್ತರಕಾಶಿ ಜಿಲ್ಲೆಯ ಭಾಗೀರಥಿ ನದಿಯ ಮೇಲ್ಭಾಗದಲ್ಲಿದೆ ಇದು ಸುಮಾರು 2,390 ಚದರ ಕಿಲೋಮೀಟರ್ ಪ್ರದೇಶವನ್ನು ಹೊಂದಿದೆ. ಹಿಮ ಚಿರತೆ, ಐಬೆಕ್ಸ, ತಹರ್, ಸೆರೋವ್, ಬಾರ್ಬೆಟ್, ಮುಂತಾದವುಗಳಿಗೆ ಪಾರ್ಕ್ ನೆಲೆಯಾಗಿವೆ.

Question 3

3. ಇತ್ತೀಚೆಗೆ ನಿಧನರಾದ ಪ್ರಸಿದ್ಧ ಚಲನಚಿತ್ರ ನಟಿ ಜೀನ್ ಮೊರೆವು ಯಾವ ದೇಶದವರು?

A
ಇಟಲಿ
B
ಜರ್ಮನಿ
C
ಯುನೈಟೆಡ್ ಸ್ಟೇಟ್ಸ್
D
ಫ್ರಾನ್ಸ್
Question 3 Explanation: 
ಫ್ರಾನ್ಸ್

ಪ್ರಖ್ಯಾತ ಫ್ರೆಂಚ್ ಚಲನಚಿತ್ರ ನಟಿ ಜೀನ್ ಮೊರೆಯು (89 ವಯಸ್ಸು) ಫ್ರಾನ್ಸ್ ನ ಪ್ಯಾರಿಸ್ ನಲ್ಲಿ ಜುಲೈ 31,2017 ರಂದು ನಿಧನಹೊಂದಿದರು.

Question 4

4. ಈ ಕೆಳಗಿನ ಯಾರು ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ?

A
ಷಾಬಾಜ್ ಶರೀಫ್
B
ನವೀದ್ ಕಮರ್
C
ಖಾಕನ್ ಕಮರ್
D
ಶಾಹಿದ್ ಖಾಕನ್ ಅಬ್ಬಾಸಿ
Question 4 Explanation: 
ಶಾಹಿದ್ ಖಾಕನ್ ಅಬ್ಬಾಸಿ

ಪಾಕಿಸ್ತಾನದ ಮುಸ್ಲಿಮ್ ಲೀಗ್ (ಎನ್) (ಪಿಎಮ್ಎಲ್-ಎನ್) ನ ಸದಸ್ಯರಾದ ಶಾಹಿದ್ ಖಾಕನ್ ಅಬ್ಬಾಸಿಯು ಪಾಕಿಸ್ತಾನದ ನೂತನ ಚುನಾಯಿತ ಮಧ್ಯಂತರ ಪ್ರಧಾನಿಯಗಿದ್ದಾರೆ. ಇವರು ಪಿಪಿಪಿಯ ಪ್ರತಿಸ್ಪರ್ಧಿ ನವೀದ್ ಕಮರ್ ಅವರನ್ನು 221 ಮತಗಳಿಂದ ಸೋಲಿಸಿ ಆಯ್ಕೆಯಾಗಿದ್ದರೆ.

Question 5

5. 2024ರ ಬೇಸಿಗೆ ಒಲಿಂಪಿಕ್ಸ್ ಆತಿಥ್ಯ ವಹಿಸಿಕೊಳ್ಳುವ ನಗರ ಯಾವುದು?

A
ಲಾಸ್ ಎಂಜಲೀಸ್
B
ಲಂಡನ್
C
ಪ್ಯಾರಿಸ್
D
ನ್ಯೂಯಾರ್ಕ್
Question 5 Explanation: 
ಪ್ಯಾರಿಸ್

ಅಂತರರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ (ಐಒಸಿ)ಯು ಇತ್ತೀಚೆಗೆ 2024ರ ಬೇಸಿಗೆ ಒಲಿಂಪಿಕ್ಸ್ ಅನ್ನು ಫ್ರಾನ್ಸ್ನ ಪ್ಯಾರಿಸ್ ನಗರದಲ್ಲಿ ಆಯೋಜಿಸಲಾಗುತ್ತದೆಂದು ಘೋಷಿಸಿದೆ. ಆಗಸ್ಟ್ 8 ರಿಂದ 18 ರವರೆಗೆ ನಡೆಯಲಿದೆ. ಇದಲ್ಲದೆ 2028 ರ ಒಲಂಪಿಕ್ಸ್ ಗೇಮ್ಸ್ ಮತ್ತು ಪ್ಯಾರಾ ಒಲಂಪಿಕ್ಸ್ ಗೇಮ್ಸ್ ಗಳನ್ನು ಲಾಸ್ ಏಂಜಲೀಸ್ (ಯುಎಸ್ಎ)ನಲ್ಲಿ ಆಯೋಜಿಸಲಾಗುವುದೆಂದು ಐಒಸಿ ಘೋಷಿಸಿದೆ.

Question 6

6. ಇತ್ತೀಚೆಗೆ ನಿಧನರಾದ ದ್ರುಪದ್ ಗಾಯಕ ಉಸೇನ್ ಸಯೀದುದ್ದೀನ್ ಡಾಗರ್, ಯಾವ ರಾಜ್ಯಕ್ಕೆ ಸಂಬಂಧಸಿದ್ದಾರೆ?

A
ಅಸ್ಸಾಂ
B
ರಾಜಸ್ಥಾನ
C
ಮಧ್ಯ ಪ್ರದೇಶ
D
ಉತ್ತರ ಪ್ರದೇಶ
Question 6 Explanation: 
ರಾಜಸ್ಥಾನ

ಖ್ಯಾತ ದ್ರುಪದ್ ಗಾಯಕ ಉಸ್ತಾದ್ ಸಯೀದುದ್ದೀನ್ ಡಾಗರ್ ಅವರು ವಿಧಿವಶರಾಗಿದ್ದಾರೆ. 1939, ಎಪ್ರಿಲ್ 20ರಂದು ಅಲ್ವಾರ್ ನ ಖ್ಯಾತ ಶಾಸ್ತ್ರೀಯ ಗಾಯಕರ ಕುಟುಂಬದಲ್ಲಿ ಜನಿಸಿದ್ದ ಉಸ್ತಾದ್ ಅವರು ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದ ಪ್ರಕಾರವಾದ ದ್ರುಪದ್ ನಲ್ಲಿ ಖ್ಯಾತಿ ಗಳಿಸಿದ್ದರು.

Question 7

7. ಪುಲಟ್ಜರ್ ಪ್ರಶಸ್ತಿ ವಿಜೇತ ನಾಟಕಕಾರ ಸ್ಯಾಮ್ ಶೆರ್ಡ್ ನಿಧನರಾದರು. ಇವರು ಯಾವ ದೇಶಕ್ಕೆ ಸಂಬಂಧಿಸಿದ್ದಾರೆ?

A
ಇಟಲಿ
B
ಜರ್ಮನಿ
C
ಅಮೆರಿಕ
D
ಫ್ರಾನ್ಸ್
Question 7 Explanation: 
ಅಮೆರಿಕ

ಪುಲಟ್ಜರ್ ಪ್ರಶಸ್ತಿ ವಿಜೇತ ನಾಟಕಕಾರ ಸ್ಯಾಮ್ ಶೆರ್ಡ್ ರವರು ಜುಲೈ 27, 2017 ರಂದು ಅಮೆರಿಕದ ಕೆಂಟುಕಿಯಲ್ಲಿ ನಿಧನ ಹೊಂದಿದ್ದಾರೆ. ಅವರು ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ನಟ ಮತ್ತು ಪ್ರಸಿದ್ಧ ಲೇಖಕರಾಗಿದ್ದರು. ಅವರು ಸುಮಾರು 50 ನಾಟಕಗಳನ್ನು ರಚಿಸಿದ್ದಾರೆ. 1979 ರಲ್ಲಿ ಅವರ ನಾಟಕ ಬರೀಡ್ ಚೈಲ್ಡ್ (Buried Child) ನಾಟಕಕ್ಕಾಗಿ ಪುಲಿಟ್ಜರ್ ಪ್ರಶಸ್ತಿ ಒಲಿದು ಬಂದಿತ್ತು.

Question 8

8. ಯಾವ ಐಐಟಿ ಸಂಸ್ಥೆ ಕಡಿಮೆ ವೆಚ್ಚದ ಧೂಳು ಶೋಧಕವನ್ನು ಕಂಡುಹಿಡಿದಿದ್ದು, ಅದು ಒಂದು ಸ್ಥಳವನ್ನು ಶುಚಿಗೊಳಿಸುವ ಅಗತ್ಯವಿರುವಾಗ ಅಧಿಕಾರಿಗಳಿಗೆ ಎಚ್ಚರಿಸುತ್ತದೆ?

A
ಐಐಟಿ ಬಾಂಬೆ
B
ಐಐಟಿ ಮದ್ರಾಸ್
C
ಐಐಟಿ ಇಂದೋರ್
D
ಐಐಟಿ ಖರಗ್ಪುರ
Question 8 Explanation: 
ಐಐಟಿ ಖರಗ್ಪುರ

ಐಐಟಿ ಖರಗ್ಪುರದ ಸಂಶೋಧಕರು ಕಡಿಮೆ ವೆಚ್ಚದ ಧೂಳೂ ಶೋಧಕವನ್ನು ಅಭಿವೃದ್ಧಿಪಡಿಸಿದ್ದಾರೆ, ಅದು ಒಂದು ಸ್ಥಳಕ್ಕೆ ಶುಚಿಗೊಳಿಸುವ ಅಗತ್ಯವಿರುವಾಗ ಅಧಿಕಾರಿಗಳಿಗೆ ಎಚ್ಚರಿಕೆ ನೀಡುತ್ತದೆ. ಸ್ಮಾರ್ಟ್ ಹೈಜೀನ್ ಮಾನಿಟರ್ (SHM) ಅಮೋನಿಯಾ, ಸಲ್ಫರ್ ಡಯಾಕ್ಸೈಡ್, ಕಾರ್ಬನ್ ಮಾನಾಕ್ಸೈಡ್, ಕಾರ್ಬನ್ ಡೈಆಕ್ಸೈಡ್, ಬಾಷ್ಪಶೀಲ ಸಾವಯವ ಸಂಯುಕ್ತಗಳ ನಿರ್ದಿಷ್ಟ ಮಿತಿ ಮೀರಿದಾಗ ಸಂವೇದಕಗಳ ಮೂಲಕ ಆನ್ಲೈನ್ ಎಚ್ಚರಿಕೆಗಳನ್ನು ಕಳುಹಿಸುತ್ತದೆ.

Question 9

9. 2017 ಫಾರ್ಮುಲಾ –ಒನ್ ಹಂಗೇರಿಯನ್ ಗ್ರ್ಯಾಂಡ್ ಪ್ರಿಕ್ಸ್ ಪಂದ್ಯಾವಳಿಯಲ್ಲಿ ಪ್ರಶಸ್ತಿ ಗೆದ್ದವರು ಯಾರು?

A
ವಾಲ್ಟೆರಿ ಬಾಟಸ್
B
ಸೆಬಾಸ್ಟಿಯನ್ ವೆಟ್ಟೆಲ್
C
ಕಿಮಿ ರೈಕೊನೆನ್
D
ಲೆವಿಸ್ ಹ್ಯಾಮಿಲ್ಟನ್
Question 9 Explanation: 
ಸೆಬಾಸ್ಟಿಯನ್ ವೆಟ್ಟೆಲ್ ಸೆಬಾಸ್ಟಿಯನ್ ವೆಟ್ಟೆಲ್
Question 10

10. ಯಾವ ರಾಜ್ಯ ಸರ್ಕಾರ ಇತ್ತೀಚೆಗೆ ನಿರುದ್ಯೋಗಸ್ಥರಿಗಾಗಿ “ಅಪ್ನಿ ಗಡ್ಡಿ ಅಪ್ನಾ ರೋಜ್ಗರ್” ಯೋಜನೆಯನ್ನು ಪ್ರಾರಂಭಿಸಿದೆ?

A
ಮಹಾರಾಷ್ಟ್ರ
B
ಪಂಜಾಬ್
C
ಅಸ್ಸಾಂ
D
ಹರಿಯಾಣ
Question 10 Explanation: 

ಪಂಜಾಬ್ ಸರಕಾರ ಇತ್ತೀಚೆಗೆ ನಿರುದ್ಯೋಗಿ ಯುವಜನರಿಗೆ 'ಅಪ್ನಿ ಗಡ್ಡಿ ಅಪ್ನಾ ರೋಜ್ಗರ್' ಯೋಜನೆಯನ್ನು ಪ್ರಾರಂಭಿಸಿದೆ. ಇದರಡಿ ರಾಜ್ಯ ಸರ್ಕಾರವು ಸಬ್ಸಿಡಿ ದರದಲ್ಲಿ ವಾಣಿಜ್ಯ ದ್ವಿಚಕ್ರ ವಾಹನಗಳನ್ನು ಮತ್ತು ನಾಲ್ಕು ಚಕ್ರ ವಾಹನಗಳನ್ನು ನಿರುದ್ಯೋಗಿ ಯುವಕರಿಗೆ ಒದಗಿಸುತ್ತದೆ. ಈ ಯೋಜನೆಯು ಪಂಜಾಬ್ನ ಯುವಜನರಿಗೆ ವರದಾನವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

There are 10 questions to complete.

[button link=”http://www.karunaduexams.com/wp-content/uploads/2017/09/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಆಗಸ್ಟ್-1-2-2017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ 

3 Thoughts to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್-ಆಗಸ್ಟ್,1,2,2017”

  1. Ravi Kumar v

    Thanks for the information

Leave a Comment

This site uses Akismet to reduce spam. Learn how your comment data is processed.