ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಜೂನ್,1,2,3,2017

Question 1

1. ಏಷ್ಯಾ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್ಮೆಂಟ್ ಬ್ಯಾಂಕ್ (ಎಐಐಬಿ) ಯ 2017 ಬೋರ್ಡ್ ಆಫ್ ಗವರ್ನರ್ಸ್ ಸಭೆಗೆ ಆತಿಥ್ಯ ವಹಿಸುವ ದೇಶ ಯಾವುದು?

A
ಭಾರತ
B
ದಕ್ಷಿಣ ಕೊರಿಯಾ
C
ಚೀನಾ
D
ರಷ್ಯಾ
Question 1 Explanation: 
ದಕ್ಷಿಣ ಕೊರಿಯಾ

ಏಷ್ಯನ್ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್ಮೆಂಟ್ ಬ್ಯಾಂಕ್ (ಎಐಐಬಿ) ಗವರ್ನರ್ಗಳ ಮಂಡಳಿಯ 2 ನೇ ವಾರ್ಷಿಕ ಸಭೆ 2017ರ ಜೂನ್ 14 ರಿಂದ ದಕ್ಷಿಣ ಕೊರಿಯಾದ ಜೆಜುನಲ್ಲಿ ನಡೆಯಲಿದೆ. ಭಾರತದಿಂದ ಹಣಕಾಸು ಸಚಿವ ಅರುಣ್ ಜೇಟ್ಲಿ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಚೀನಾದ ಮಾಜಿ ಸಹಾಯಕ ಹಣಕಾಸು ಸಚಿವ ಜಿನ್ ಲಿಕುನ್ ಅವರು ಎಐಐಬಿ ನೇತೃತ್ವ ವಹಿಸಿದ್ದಾರೆ.

Question 2

2. ಈ ಕೆಳಗಿನ ಯಾರು ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗ(NCSC)ದ ಹೊಸ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ?

A
ವಿಜಯ್ ಸಿಂಗ್
B
ರಾಮ್ ಶಂಕರ್ ಕಥರಿಯಾ
C
ಪಿ ಎಂ ಕಮಲಮ್ಮ
D
ಶಂಕರ್ ಪ್ರಸಾದ್
Question 2 Explanation: 
ರಾಮ್ ಶಂಕರ್ ಕಥರಿಯಾ

ಆಗ್ರಾದ ಬಿಜೆಪಿ ಸಂಸದ ರಾಮ್ ಶಂಕರ್ ಕಥೆರಿಯಾ ರವರು ಮೂರು ವರ್ಷಗಳ ಕಾಲ ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗದ ಹೊಸ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. 2016 ರಲ್ಲಿ ಹಿಂದಿನ ಅಧ್ಯಕ್ಷ ಪಿ.ಎಲ್. ಪೂನಿಯಾ ನಿವೃತ್ತಿಯ ನಂತರ ಈ ಹುದ್ದೆ ಖಾಲಿಯಾಗಿದೆ. ಇದಲ್ಲದೆ ಎಲ್. ಮುರುಗನ್ ಮತ್ತು ಕೆ. ರಾಮುಲು, ಡಾ. ಯೋಗೇಂದ್ರ ಪಾಸ್ವಾನ್ ಮತ್ತು ಡಾ. ಸ್ವರಾಜ್ ವಿಡ್ವಾನ್ ಅವರ ಸದಸ್ಯರಾಗಿ ನೇಮಕಗೊಂಡಿದ್ದಾರೆ. ಆಯೋಗವು ದಲಿತರ ಹಿತಾಸಕ್ತಿಗಳನ್ನು ಕಾಪಾಡುವ ಸಾಂವಿಧಾನಿಕ ಅಂಗವಾಗಿದೆ.

Question 3

3. ಭಾರತದ ಮೊದಲ ಸರಕು ಗ್ರಾಮ (Freight Village)ವನ್ನು ಈ ಕೆಳಗಿನ ನಗರಗಳಲ್ಲಿ ಸ್ಥಾಪಿಸಲಾಗುವುದು?

A
ಮುಂಬೈ
B
ವಾರಣಾಸಿ
C
ಕೊಲ್ಕತ್ತಾ
D
ಮಂಗಳೂರು
Question 3 Explanation: 
ವಾರಣಾಸಿ

ಭಾರತದ ಮೊದಲ ಸರಕು ಗ್ರಾಮವನ್ನು ಉತ್ತರ ಪ್ರದೇಶದ ವಾರಣಾಸಿಯಲ್ಲಿನ ಒಳನಾಡಿನ ಜಲಮಾರ್ಗ ಪ್ರಾಧಿಕಾರ (ಐಡಬ್ಲ್ಯುಐಐ) ಅಭಿವೃದ್ಧಿಪಡಿಸಿಲಿದೆ.

Question 4

4. 2017 ಶಾಂಘೈ ಸಹಕಾರ ಸಂಸ್ಥೆ (SCO)ಯ ಶೃಂಗಸಭೆ ಯಾವ ದೇಶದಲ್ಲಿ ಆಯೋಜಿಸಲಾಗುವುದು?

A
ಚೀನಾ
B
ರಷ್ಯಾ
C
ಕಝಾಕಿಸ್ತಾನ್
D
ತಜಕಿಸ್ತಾನ್
Question 4 Explanation: 
ಕಝಾಕಿಸ್ತಾನ್

ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆ ಜೂನ್8-9, 2017 ರಂದು ಕಝಾಕಿಸ್ತಾನದ ಅಸ್ತಾನಾದಲ್ಲಿ ನಡೆಯಲಿದೆ. ಈ ಸಮಾವೇಶದಲ್ಲಿ ಭಾರತ ಮತ್ತು ಪಾಕಿಸ್ತಾನ ಸಂಘಟನೆಯ ಪೂರ್ಣ ಸದಸ್ಯರಾಗಲಿವೆ. SCO ಒಂದು ಯುರೇಷಿಯಾದ ರಾಜಕೀಯ, ಆರ್ಥಿಕ ಮತ್ತು ಮಿಲಿಟರಿ ಸಂಘಟನೆಯಾಗಿದ್ದು, 2001 ರಲ್ಲಿ ಚೀನಾ, ಕಝಾಕಿಸ್ತಾನ್, ಕಿರ್ಗಿಸ್ತಾನ್, ರಷ್ಯಾ, ತಜಿಕಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ಮುಖಂಡರಿಂದ ಸ್ಥಾಪಿಸಲ್ಪಟ್ಟಿತು. ಇದು ಮುಖ್ಯವಾಗಿ ಸದಸ್ಯರ ನಡುವಿನ ಮಿಲಿಟರಿ ಸಹಕಾರವನ್ನು ಹೊಂದಿದೆ ಮತ್ತು ಮಧ್ಯ ಏಷ್ಯಾದ ಗುಪ್ತಚರ-ಹಂಚಿಕೆ, ಭಯೋತ್ಪಾದನಾ-ವಿರೋಧಿ ಕಾರ್ಯಾಚರಣೆಗಳನ್ನು ಒಳಗೊಂಡಿರುತ್ತದೆ. ಅಫ್ಘಾನಿಸ್ತಾನ, ಬೆಲಾರಸ್, ಭಾರತ, ಇರಾನ್, ಮಂಗೋಲಿಯಾ ಮತ್ತು ಪಾಕಿಸ್ತಾನ ವೀಕ್ಷಕ ಸ್ಥಾನಮಾನವನ್ನು ಹೊಂದಿವೆ.

Question 5

5. ಯಾವ ದಿನದಂದು ವಿಶ್ವ ಹಾಲು ದಿನ (ಡಬ್ಲುಎಂಡಿ) ಅನ್ನು ಆಚರಿಸಲಾಗುತ್ತದೆ?

A
ಜೂನ್ 1
B
ಜೂನ್ 3
C
ಜೂನ್ 5
D
ಜೂನ್ 6
Question 5 Explanation: 
ಜೂನ್ 1

ಜಾಗತಿಕ ಆಹಾರವಾಗಿ ಹಾಲಿನ ಮಹತ್ವವನ್ನು ಗುರುತಿಸಲು ಆಹಾರ ಮತ್ತು ಕೃಷಿ ಸಂಸ್ಥೆ (ಎಫ್ಎಒ) ಜೂನ್ 1 ರಂದು ವಿಶ್ವ ಹಾಲು ದಿನ (ಡಬ್ಲ್ಯೂಎಮ್ಡಿ) ಅನ್ನು ಪ್ರತಿ ವರ್ಷವೂ ಆಚರಿಸುತ್ತಿದೆ. ಭಾರತದಲ್ಲಿ, ಕ್ಷೀರಕ್ರಾಂತಿ ಪಿತಾಮಹ ಡಾ. ವರ್ಜೀಸ್ ಕುರಿಯನ್ ಅವರ ಜನ್ಮ ವಾರ್ಷಿಕೋತ್ಸವವನ್ನು ಗುರುತಿಸಲು ರಾಷ್ಟ್ರೀಯ ಹಾಲು ದಿನ (ಎನ್ಎಂಡಿ) ಪ್ರತಿವರ್ಷ ನವೆಂಬರ್ 26 ರಂದು ಆಚರಿಸಲಾಗುತ್ತದೆ.

Question 6

6. ಚೀನಾ ಭಾಗದಿಂದ ಮೌಂಟ್ ಎವರೆಸ್ಟ್ ಅನ್ನು ಏರಿದ ಮೊದಲ ಭಾರತೀಯ ಮಹಿಳೆ ಯಾರು?

A
ಸುರೇಖಾ ಭಾರ್ಗವಿ
B
ಅನಿತಾ ಕುಂದೂ
C
ಸಾನ್ವಿ ಶ್ರೀವತ್ಸ
D
ಕಿರಣ್ ಸಿಂಗ್
Question 6 Explanation: 
ಅನಿತಾ ಕುಂದೂ

ಹರಿಯಾಣ ಹಿಸ್ಸಾರ್ ಪೋಲೀಸ್ ಸಬ್ ಇನ್ಸ್ಪೆಕ್ಟರ್ ಅನಿತಾ ಕುಂದೂ ಅವರು ಮೇ 2017 ರಂದು ಚೀನಾದಿಂದ ಮೌಂಟ್ ಎವರೆಸ್ಟ್ ಏರುವ ಮೊದಲ ಭಾರತೀಯ ಮಹಿಳೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

Question 7

7. “2017 ಏಷ್ಯಾ ಪೆಸಿಫಿಕ್ ಕ್ವಾಲಿಟಿ ನೆಟ್ವರ್ಕ್ (APQN)” ಪ್ರಶಸ್ತಿಯನ್ನು ಪಡೆದುಕೊಂಡ ಭಾರತೀಯ ಸಂಸ್ಥೆ ಯಾವುದು?

A
ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್)
B
ರಾಷ್ಟ್ರೀಯ ಮೌಲ್ಯಮಾಪನ ಮತ್ತು ಅಕ್ರೆಡಿಟೇಶನ್ ಕೌನ್ಸಿಲ್ (NAAC)
C
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)
D
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO)
Question 7 Explanation: 
ರಾಷ್ಟ್ರೀಯ ಮೌಲ್ಯಮಾಪನ ಮತ್ತು ಅಕ್ರೆಡಿಟೇಶನ್ ಕೌನ್ಸಿಲ್ (NAAC)

2017 ರ ಮೇ 26 ರಂದು ರಷ್ಯಾದ ಮಾಸ್ಕೋದಲ್ಲಿ ನಡೆದ ಕ್ವಾಲಿಟಿ ಅಶ್ಯೂರೆನ್ಸ್ನಲ್ಲಿ “2017 ಏಷ್ಯಾ ಪೆಸಿಫಿಕ್ ಕ್ವಾಲಿಟಿ ನೆಟ್ವರ್ಕ್ (APQN)” ಪ್ರಶಸ್ತಿಯನ್ನು NAAC ಪಡೆದುಕೊಂಡಿದೆ. NAAC ಭಾರತದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳ ಮೌಲ್ಯಮಾಪನ ಮತ್ತು ಮಾನ್ಯತೆ ನೀಡುವ ಸಂಸ್ಥೆಯಾಗಿದೆ. ಇದರ ಪ್ರಧಾನ ಕಛೇರಿ ಬೆಂಗಳೂರು, ಕರ್ನಾಟಕದಲ್ಲಿದೆ.

Question 8

8. ಸೆರ್ಬಿಯಾದ ಹೊಸ ಅಧ್ಯಕ್ಷರಾಗಿ ಈ ಕೆಳಗಿನ ಯಾರು ಪ್ರಮಾಣವಚನ ಸ್ವೀಕರಿಸಿದರು?

A
ಅಲೆಕ್ಸಾಂಡರ್ ವೂಸಿಕ್
B
ಡ್ರಗನ್ ಸೂಟಾನೋವಾಕ್
C
ಟೊಮಿಸ್ಲಾವ್ ನಿಕೊಲಿಕ್
D
ಇವಾಸಿಕ ಜೇಮ್ಸ್
Question 8 Explanation: 
ಅಲೆಕ್ಸಾಂಡರ್ ವೂಸಿಕ್

ಮೇ 31, 2017 ರಂದು ಸೆರ್ಬಿಯದ ಹೊಸ ಅಧ್ಯಕ್ಷರಾಗಿ ಮತ್ತು ಟೊಮಿಸ್ಲಾವ್ ನಿಕೊಲಿಕ್ ಉತ್ತರಾಧಿಕಾರಿಯಾದ ಸೆರ್ಬಿಯಾ ಪ್ರೊಗ್ರೆಸ್ಸಿವ್ ಪಾರ್ಟಿ (ಎಸ್ಎನ್ಎಸ್) ಅಧ್ಯಕ್ಷರಾಗಿದ್ದ ಅಲೆಕ್ಸಾಂಡರ್ ವೂಸಿಕ್ ಪ್ರಮಾಣ ವಚನ ಸ್ವೀಕರಿಸಿದರು.

Question 9

9. “2017 ಜಾಗತಿಕ ಶಾಂತಿ ಸೂಚ್ಯಂಕ”ದಲ್ಲಿ ಭಾರತ ಎಷ್ಟನೇ ಶ್ರೇಯಾಂಕದಲ್ಲಿದೆ?

A
137
B
141
C
155
D
120
Question 9 Explanation: 
137

ದಿ ಇನ್ಸ್ಟಿಟ್ಯೂಟ್ ಆಫ್ ಎಕನಾಮಿಕ್ಸ್ ಆಂಡ್ ಪೀಸ್ (ಐಇಪಿ) ಪ್ರಕಟಿಸಿದ 2017 ಗ್ಲೋಬಲ್ ಪೀಸ್ ಇಂಡೆಕ್ಸ್ (ಜಿಪಿಐ) ನಲ್ಲಿ 163 ರಾಷ್ಟ್ರಗಳಲ್ಲಿ 137ನೇ ಸ್ಥಾನವನ್ನು ಭಾರತ ಹೊಂದಿದೆ. 2017 ಜಿಪಿಐ ಶಾಂತಿಯ ಸ್ಥಿತಿಯನ್ನು ಸಮಗ್ರ ವಿಶ್ಲೇಷಣೆ ಮಾಡುತ್ತದೆ. ಈ ಸೂಚ್ಯಂಕದಲ್ಲಿ ಐಸ್ಲ್ಯಾಂಡ್ ಮೊದಲ ಸ್ಥಾನದಲ್ಲಿದ್ದು ನ್ಯೂಝಿಲೆಂಡ್, ಪೋರ್ಚುಗಲ್, ಆಸ್ಟ್ರಿಯಾ ಮತ್ತು ಡೆನ್ಮಾರ್ಕ್ ನಂತರದ ಸ್ಥಾನದಲ್ಲಿದ್ದರೆ, ಸಿರಿಯಾ ವಿಶ್ವದಲ್ಲೇ ಅತ್ಯಂತ ಅಶಾಂತಿಯುತ ರಾಷ್ಟ್ರವಾಗಿದೆ ನಂತರದ ಸ್ಥಾನವನ್ನು ಅಫ್ಘಾನಿಸ್ತಾನ, ಇರಾಕ್, ದಕ್ಷಿಣ ಸೂಡಾನ್ ಮತ್ತು ಯೆಮೆನ್ ಪಡೆದುಕೊಂಡಿವೆ

Question 10

10. ಭಾರತದ ಮೊದಲ ಸ್ವಯಂಚಾಲಿತ ಕರಾವಳಿ ವಿಪತ್ತು ಎಚ್ಚರಿಕೆ ವ್ಯವಸ್ಥೆ ಯಾವ ರಾಜ್ಯದಲ್ಲಿ ಸ್ಥಾಪನೆಯಾಗಲಿದೆ?

A
ಕರ್ನಾಟಕ
B
ಓಡಿಶಾ
C
ತಮಿಳುನಾಡು
D
ಆಂಧ್ರ ಪ್ರದೇಶ
Question 10 Explanation: 
ಓಡಿಶಾ

ಭಾರತದ ಮೊದಲ ಸ್ವಯಂಚಾಲಿತ ಕರಾವಳಿ ವಿಪತ್ತು ಎಚ್ಚರಿಕೆ ವ್ಯವಸ್ಥೆ ಜುಲೈ 2017 ರಿಂದ ಒಡಿಶಾದಲ್ಲಿ ಜಾರಿಗೆ ಬರಲಿದೆ. ಜಾಗೃತಿ ವ್ಯವಸ್ಥೆಯಿಂದ ಒಡಿಶಾ ರಾಜ್ಯದ ಕರಾವಳಿ ಜನರಿಗೆ ಒಡಿಶಾ ರಾಜಧಾನಿಯಲ್ಲಿನ ನಿಯಂತ್ರಣಾ ಕೊಠಡಿಯಿಂದ ಒಂದು ಗುಂಡಿಯನ್ನು ಒತ್ತುವ ಮೂಲಕ ಸುನಾಮಿ ಅಥವಾ ಚಂಡಮಾರುತದ ಬಗ್ಗೆ ಮುನ್ಸೂಚನೆಯನ್ನು ರವಾನಿಸಬಹುದು.

There are 10 questions to complete.

[button link=”http://www.karunaduexams.com/wp-content/uploads/2017/08/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಜೂನ್1232017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ 

One Thought to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಜೂನ್,1,2,3,2017”

  1. sanket Hiremath

    Very useful

Leave a Comment

This site uses Akismet to reduce spam. Learn how your comment data is processed.