ಮೂವತ್ತು ಮೀಟರ್ ಟೆಲಿಸ್ಕೋಪ್ ಮತ್ತು ಭಾರತದ ಕೊಡುಗೆ

ಮೂವತ್ತು ಮೀಟರ್ ಟೆಲಿಸ್ಕೋಪ್ (Thirty Meter Telescope) ಪ್ರಪಂಚದ ಅತಿದೊಡ್ಡ ದೂರದರ್ಶಕವಾಗಿದೆ. ಈ ದೂರದಶರ್ಕದ ಮೂಲಕ ಖಗೋಳಶಾಸ್ತ್ರಜ್ಞರು ಭೂಮಿಯಿಂದ ವಿಶ್ವದ ಜಟಿಲತೆಗಳನ್ನು ವೀಕ್ಷಿಸಬಹುದಾಗಿದೆ.

ಪ್ರಮುಖಾಂಶಗಳು:

ಮೂವತ್ತು ಮೀಟರ್ ಟೆಲಿಸ್ಕೋಪ್ (ಟಿಎಂಟಿ) ಅನ್ನು ಭಾರತ ಸೇರಿದಂತೆ ಐದು ರಾಷ್ಟ್ರಗಳ ಅಂತಾರಾಷ್ಟ್ರೀಯ ಒಕ್ಕೂಟವು ಅಭಿವೃದ್ಧಿಪಡಿಸುತ್ತಿರುವ ಬಹು-ಮಿಲಿಯನ್ ಡಾಲರ್ ಯೋಜನೆಯಾಗಿದೆ. ಕೆನಡಾ, ಚೀನಾ, ಜಪಾನ್ ಮತ್ತು ಯು.ಎಸ್. ಇತರ ನಾಲ್ಕು ದೇಶಗಳು. ಜುಲೈ 2013ರಲ್ಲಿ ಯೋಜನೆಯಲ್ಲಿ ಪಾಲ್ಗೊಳ್ಳುವ ಐದು ದೇಶಗಳು ಮೂವತ್ತು ಮೀಟರ್ ಟೆಲಿಸ್ಕೋಪ್ (ಟಿಎಂಟಿ) ನಿರ್ಮಾಣಕ್ಕಾಗಿ ಮಾಸ್ಟರ್ ಪಾರ್ಟ್ನರ್ಶಿಪ್ ಅಗ್ರಿಮೆಂಟ್ (ಎಮ್ಪಿಎ)ಗೆ ಸಹಿ ಹಾಕಿದವು.

                ಮಹತ್ವಾಕಾಂಕ್ಷೆಯ ಮುಂದಿನ ಪೀಳಿಗೆಯ ದೂರದರ್ಶಕವನ್ನು ಯುಎಸ್ 1.47 ಬಿಲಿಯನ್ ಡಾಲರ್ ವೆಚ್ಚದಲ್ಲಿ ನಿರ್ಮಿಸಲಾಗುವುದು. ಯೋಜನೆಗೆ ರೂ 1,300 ಕೋಟಿಯನ್ನು ಭಾರತ ವ್ಯಯಿಸಲಿದೆ.  ಭಾರತ ಹಣಕ್ಕಿಂತಲೂ ಹಾರ್ಡ್ವೇರ್ ವಿಷಯದಲ್ಲಿ ಹೆಚ್ಚು ಕೊಡುಗೆಯನ್ನು ನೀಡಲಿದೆ.

 ಇರುತ್ತದೆ.

ಹವಾಯಿಯ ಮೌನಾ ಕೀಯಾದಲ್ಲಿ ಪ್ರಾರಂಭಿಸಲು ನಿರ್ಧರಿಸಲಾಗಿದ್ದ ಈ ಟೆಲಿಸ್ಕೋಪ್ ಅನ್ನು ಸ್ಥಳೀಯರ ಪ್ರತಿಭಟನೆಯ ನಂತರ ಸ್ಥಗಿತಗೊಳಿಸಲಾಯಿತು. ಯೋಜನೆಯ ಸ್ಥಳವನ್ನು ಯೋಜನೆಯಲ್ಲಿ ಒಳಗೊಂಡಿರುವ ದೇಶಗಳ ಒಕ್ಕೂಟದಿಂದ ಅಂತಿಮಗೊಳಿಸಬೇಕಿದೆ. ಲಡಾಖ್ ನಲ್ಲಿರುವ ಹಾನೆ ದೂರದರ್ಶಕದ ನಿರ್ಮಾಣಕ್ಕೆ ಗುರುತಿಸಲಾಗಿರುವ ಹೊಸ ಸ್ಥಳಗಳಲ್ಲಿ ಒಂದಾಗಿದೆ.

            ದೂರದರ್ಶಕವು 2020ರ ಹೊತ್ತಿಗೆ ಸಿದ್ಧವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ದೂರದರ್ಶಕವು ಸಿದ್ಧವಾದಾಗ ಖಗೋಳಶಾಸ್ತ್ರಜ್ಞರು ಬ್ರಹ್ಮಾಂಡವನ್ನು ವೀಕ್ಷಿಸದಷ್ಟೆ ಅನುಭವವಾಗಲಿದೆ. ಈ ಯೋಜನೆಯಲ್ಲಿ ಭಾರತವು 10% ಪಾಲುದಾರರನ್ನು ಹೊಂದಿದೆ. ಭಾರತೀಯ ಖಗೋಳಶಾಸ್ತ್ರಜ್ಞರು ಒಟ್ಟು ಯೋಜನೆಯ ವೆಚ್ಚದಲ್ಲಿ ಭಾರತದ ಪಾಲಿಗೆ ಅನುಗುಣವಾಗಿ ವೀಕ್ಷಣೆಯ ಸಮಯವನ್ನು ಹೊಂದಿರಲಿದ್ದಾರೆ.

            ಭಾರತದ ಪರವಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಮತ್ತು ಪರಮಾಣು ಇಂಧನ ಇಲಾಖೆಯಿಂದ ಯೋಜನೆಯು ನಿರ್ವಹಿಸಲ್ಪಡುತ್ತದೆ. ಈ ಯೋಜನೆಯ ನೇತೃತ್ವವನ್ನು Indian Institute of Astrophysics (IIA), ಬೆಂಗಳೂರು, Aryabhatta Research Institute of Observational Sciences (ARIES), ನೈನಿತಾಲ್ ಮತ್ತು Inter-University Centre for Astronomy and Astrophysics (IUCAA), ಪುಣೆ ವಹಿಸಿಕೊಂಡಿವೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಉಪಾಧ್ಯಕ್ಷರಾಗಿ ಇಮ್ರಾನ್ ಖವಾಜ ಆಯ್ಕೆ

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಇಮ್ರಾನ್ ಖವಾಜ ರವರನ್ನು ಮಂಡಳಿಯ ಉಪ ಅಧ್ಯಕ್ಷರಾಗಿ ನೇಮಿಸಿದೆ. ಇಮ್ರಾನ್ ಖವಾಜ ಅವರು ಅಸೋಸಿಯೇಟ್ ಕೌಂಟಿಗಳ ಅಧ್ಯಕ್ಷರಾಗಿದ್ದಾರೆ ಮತ್ತು ಸಿಂಗಪರು ಮೂಲದ ಹಿರಿಯ ಆಡಳಿತಗಾರ. ಇತ್ತೀಚೆಗೆ, ಐಸಿಸಿ ಫುಲ್ ಕೌನ್ಸಿಲ್ ಉಪ ಅಧ್ಯಕ್ಷರ ಹುದ್ದೆ ರಚನೆಗೆ ಅನುಮೋದನೆ ನೀಡಿ ಸಾಂವಿಧಾನಿಕ ಬದಲಾವಣೆಯನ್ನು ತಂದಿದೆ. ಇಮ್ರಾನ್ ಖವಾಜಾ ಅವರು ಐಸಿಸಿಯ ಹೊಸ ಸಂವಿಧಾನವನ್ನು ಜಾರಿಗೆ ತರಲು ಕಳೆದ ವರ್ಷ ನೇಮಿಸಲಾಗಿದ್ದ ಐದು ಜನ ಸದಸ್ಯರಲ್ಲಿ ಒಬ್ಬರು. ಕಾರ್ಯನಿರತ ತಂಡದಲ್ಲಿದ್ದರು. ಐಸಿಸಿ ಅಧ್ಯಕ್ಷ ಶಶಾಂಕ್ ಮನೋಹರ್ ಅವರು ಅನುಪಸ್ಥಿತಿಯಲ್ಲಿ ಖವಾಜಾ ಅವರು ಐಸಿಸಿ ಸಭೆಗಳ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.

ಐಸಿಸಿ:

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು (ಐಸಿಸಿ), ಕ್ರಿಕೆಟ್ ಆಟವನ್ನು ನಿಯಂತ್ರಿಸು ಅಂತಾರಾಷ್ಟ್ರೀಯ ಸಂಸ್ಥೆಯಾಗಿದ್ದು, 1909 ರಲ್ಲಿ ಇಂಪೀರಿಯಲ್ ಕ್ರಿಕೆಟ್ ಕಾನ್ಪೆರೆನ್ಸ್ ಆಗಿ ಸ್ಥಾಪಿಸಲ್ಪಟ್ಟಿತು. ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಪ್ರತಿನಿಧಿಗಳು ಐಸಿಸಿ ಯನ್ನು ಸ್ಥಾಪಿಸಿದರು. 1965ರಲ್ಲಿ ಇಂಟರ್ನ್ಯಾಷನಲ್ ಕ್ರಿಕೆಟ್ ಕಾನ್ಫರೆನ್ಸ್ ಎಂದು ಮರುನಾಮಕರಣ ಮಾಡಲಾಯಿತು ಮತ್ತು 1989 ರಲ್ಲಿ ಮತ್ತೊಮ್ಮೆ ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಎಂದು ಮರುನಾಮಕರಣ ಮಾಡಲಾಯಿತು. ಐಸಿಸಿಯು 105 ಸದಸ್ಯರನ್ನು ಹೊಂದಿದೆ, ಇದರಲ್ಲಿ 12 ಮಂದಿ ಪೂರ್ಣ ಸದಸ್ಯರು, 37 ಅಸೋಸಿಯೆಟ್ ಮತ್ತು 56 ಅಫಿಲಿಯೆಟ್ ಸದಸ್ಯರು.

ಪಶ್ಚಿಮ ಬಂಗಾಳಕ್ಕೆ ವಿಶ್ವಸಂಸ್ಥೆ ಸಾರ್ವಜನಿಕ ಸೇವಾ ಪ್ರಶಸ್ತಿ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರಕ್ಕೆ ವಿಶ್ವಸಂಸ್ಥೆ ಸಾರ್ವಜನಿಕ ಸೇವಾ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿಯನ್ನು ಮಮತಾ ಬ್ಯಾನರ್ಜಿ ರವರು ಹೇಗ್ ನಲ್ಲಿ ಸ್ವೀಕರಿಸಿದರು. ಪಶ್ಚಿಮ ಬಂಗಾಳದ ರಾಜ್ಯ ಸರ್ಕಾರದ ಕನ್ಯಾಶ್ರೀ ಪ್ರಕಲ್ಪಾ (ಹೆಣ್ಣು ಮಕ್ಕಳ) ಯೋಜನೆಗಾಗಿ ಈ ಪ್ರಶಸ್ತಿ ಲಭಿಸಿದೆ. ಪಶ್ಚಿಮ ಬಂಗಾಳದ ಕನ್ಯಾಶ್ರೀ ಪ್ರಕಲ್ಪಾ ಯೋಜನೆಯು 62 ರಾಷ್ಟ್ರಗಳಿಂದ ವಿಶ್ವಸಂಸ್ಥೆಯ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದ 552 ಯೋಜನೆಗಳ ಪೈಕಿ ಮೊದಲನೆಯದಾಗಿ ಹೊರಹೊಮ್ಮಿದೆ.

            ಏಷ್ಯಾ-ಪೆಸಿಫಿಕ್ ವಿಭಾಗದಲ್ಲಿ ಪಶ್ಚಿಮ ಬಂಗಾಳಕ್ಕೆ ಗುಂಪಿನಲ್ಲಿ ಈ ವಿಭಾಗಕ್ಕೆ ನೀಡಲಾಗಿದೆ: ‘ಅಂತರ್ಗತ ಸೇವೆ ಮತ್ತು ಭಾಗವಹಿಸುವಿಕೆ ಮೂಲಕ ಬಡವರಿಗೆ ಹಾಗೂ ದುರ್ಬಲ ವರ್ಗದವರಿಗೆ ಸೇವೆಯನ್ನು ಒದಗಿಸುತ್ತಿರುವ ವಿಭಾಗದಲ್ಲಿ ಈ ಪ್ರಶಸ್ತಿ ಸಂದಿದೆ. ಬಾಲ್ಯ ಶಿಕ್ಷಣ ಕಾರ್ಯಕ್ರಮದ ಅನುಷ್ಠಾನಕ್ಕಾಗಿ ಅರ್ಜೆಂಟೈನಾ ಲ್ಯಾಟಿನ್ ಅಮೆರಿಕಾ-ಕೆರಿಬಿಯನ್ ವಲಯದಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿದೆ. ವೆಸ್ಟರ್ನ್ ಗ್ರೂಪ್ ವಿಭಾಗದಲ್ಲಿ ಯುನೈಟೆಡ್ ಕಿಂಗ್ಡಮ್ ಗೆ ಪ್ರಶಸ್ತಿ ಲಭಿಸಿದೆ.  ಹಿರಿಯ ನಾಗರಿಕರನ್ನು  ಮೋಸಗೊಳಿಸದಂತೆ ತಡೆಗಟ್ಟುವ ಕಾರ್ಯಕ್ರಮಕ್ಕೆ ಯುಕೆ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.

ಹಿನ್ನಲೆ:

ಕನ್ಯಾಶ್ರೀ ಪ್ರಕಲ್ಪಾ ಹದಿಹರೆಯದ ಹುಡುಗಿಯರ ಜೀವನ ಮತ್ತು ಸ್ಥಿತಿಯನ್ನು ಸುಧಾರಿಸಲು ಪಶ್ಚಿಮ ಬಂಗಾಳ ಸರಕಾರದ ಒಂದು ಉಪಕ್ರಮವಾಗಿದೆ. ಈ ಯೋಜನೆಯಡಿ ಅನಾನುಕೂಲಕರ ಕುಟುಂಬಗಳ ಹೆಣ್ಣುಮಕ್ಕಳಿಗೆ ಉನ್ನತ ಶಿಕ್ಷಣವನ್ನು ಪಡೆಯಲು ಹಣಕಾಸಿನ ಸಹಾಯವನ್ನು ಒದಗಿಸಲಾಗುತ್ತದೆ. ಇದು ಬಾಲ್ಯ ವಿವಾಹವನ್ನು ತಡೆಗಟ್ಟುವ ಗುರಿ ಹೊಂದಿದೆ. ಶೈಕ್ಷಣಿಕ ಸಾಧನೆ, ಬಾಲ್ಯ ವಿವಾಹ ತಡೆಗಟ್ಟುವುದು ಮತ್ತು ಆರ್ಥಿಕ ಸೇರ್ಪಡೆ ಯೋಜನೆಯ ಉದ್ದೇಶಗಳು. ಅಕ್ಟೋಬರ್ 2013ರಲ್ಲಿ ಮಮತಾ ಬ್ಯಾನರ್ಜಿ ಈ ಯೋಜನೆಯನ್ನು ಪ್ರಾರಂಭಿಸಿದರು.

                ಕನ್ಯಾಶ್ರೀ ಪ್ರಕಲ್ಪಾ ಯೋಜನೆಗೆ ಪ್ರಶಸ್ತಿ ಸಂದಿರುವುದು ಇದೇ ಮೊದಲಲ್ಲ.  ಮೊದಲಿಗೆ, ಇದು ಯುನಿಸೆಫ್ನ ಮೆಚ್ಚುಗೆ ಪಡೆದಿತ್ತು. ಯೋಜನೆಯಡಿ 40 ಲಕ್ಷ ಶಾಲಾ ಮತ್ತು ಕಾಲೇಜು ಬಾಲಕಿಯರ ಉಪಯೋಗವನ್ನು ಪಡೆದುಕೊಂಡಿದ್ದಾರೆ. ಈ ಯೋಜನೆಯಡಿ, ಶಾಲೆಯನ್ನು ಮುಂದುವರೆಸುವವರೆಗೆ ವಿದ್ಯಾರ್ಥಿಗಳಿಗೆ ಹಣದ ವರ್ಗಾವಣೆಗಳನ್ನು ಒದಗಿಸಲಾಗಿದೆ. ಯುಎನ್ ಪಬ್ಲಿಕ್ ಸರ್ವಿಸ್ ಪ್ರಶಸ್ತಿಗಳನ್ನು 2003 ರಲ್ಲಿ ಪ್ರಾರಂಭಿಸಲಾಯಿತು.

ಯುನಿಸೆಫ್ “ಸೂಪರ್ ಡ್ಯಾಡ್” ಕಾರ್ಯಕ್ರಮಕ್ಕೆ ಸಚಿನ್ ತೆಂಡುಲ್ಕರ್

ಮಕ್ಕಳ ಆರಂಭಿಕ ಬೆಳವಣಿಗೆಯಲ್ಲಿ ತಂದೆಯ ಪಾತ್ರವನ್ನು ಬಣ್ಣಿಸುವ ಯುನಿಸೆಫ್ ನ “ಸೂಪರ್ ಡ್ಯಾಡ್” ಕಾರ್ಯಕ್ರಮಕ್ಕೆ ಸಚಿನ್ ತೆಂಡುಲ್ಕರ್ ನೇಮಕಗೊಂಡಿದ್ದಾರೆ. ಆ ಮೂಲಕ ಅವರು ದ್ರಾವಿಡ್, ಬೆಕ್ಹ್ಯಾಮ್, ನೊವಾಕ್ ಜೊಕೊವಿಕ್, ಅಕಾಡೆಮಿ ಪ್ರಶಸ್ತಿ ವಿಜೇತ ಅಮೆರಿಕನ್ ನಟ ಮಹೆರ್ಶಾಲಾ ಅಲಿ, ಬ್ರಿಟಿಷ್ ಫಾರ್ಮ್ಯುಲಾ ಒನ್ ರೇಸಿಂಗ್ ಚಾಲಕ ಲೆವಿಸ್ ಹ್ಯಾಮಿಲ್ಟನ್ ಮತ್ತು ಆಸ್ಟ್ರೇಲಿಯಾದ ನಟ ಹ್ಯೂ ಜ್ಯಾಕ್ಮನ್ ಮುಂತಾದ ಜಾಗತಿಕ ಸೆಲೆಬ್ರಿಟಿಗಳನ್ನು ಸೇರ್ಪಡೆಗೊಳ್ಳಲಿದ್ದಾರೆ. ಈ ಉಪಕ್ರಮವು ತಂದೆತನವನ್ನು ಆಚರಿಸುವುದು ಮತ್ತು ಯುವ ಮಕ್ಕಳ ಮಿದುಳಿನ ಆರೋಗ್ಯಕರ ಬೆಳವಣಿಗೆಗೆ ಪ್ರೀತಿ ಮತ್ತು ಉತ್ತಮ ಪೋಷಣೆಯ ಮಹತ್ವವನ್ನು ತೋರುವ ಉದ್ದೇಶವನ್ನು ಹೊಂದಿದೆ.

ಹಿನ್ನಲೆ:

‘ಸೂಪರ್ ಅಪ್ಪಂದಿರು’ ಉಪಕ್ರಮ ಯುನಿಸೆಫ್ನ # ಆರ್ಲಿಮೊಮೆಂಟ್ಸ್ ಮ್ಯಾಟರ್ ಅಭಿಯಾನದ ಒಂದು ಭಾಗವಾಗಿದೆ. ಬಾಲ್ಯದಲ್ಲಿ ಪರಿಸರ ಮತ್ತು ಅನುಭವಗಳು ಮಗುವಿನ ಭವಿಷ್ಯದ ಆರೋಗ್ಯ, ಕಲಿಯುವ ಸಾಮರ್ಥ್ಯ ಇತ್ಯಾದಿಗಳನ್ನು ಹೇಗೆ ರೂಪಿಸುತ್ತದೆ ಎಂಬುದರ ಅರ್ಥವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ವಿಶ್ವ ಸಮರ II ರ ನಂತರ ಬದುಕಲು ಹೆಣಗಾಡುವ ಮಕ್ಕಳನ್ನು ರಕ್ಷಿಸಲು ವಿಶ್ವಸಂಸ್ಥೆ UNICEF ಅನ್ನು 1946ರಲ್ಲಿ ಸ್ಥಾಪಿಸಲಾಯಿತು.

ನೇಪಾಳದ ನೂತನ ಪ್ರಧಾನಿಯಾಗಿ ಶೇರ್ ಬಹದ್ದೂರ್ ದುಬೌ ಆಯ್ಕೆ

ನೇಪಾಳದ ಪ್ರಧಾನಿಯಾಗಿ ಶೇರ್ ಬಹದ್ದೂರ್ ದುಬೌ ನಾಲ್ಕನೇ ಬಾರಿಗೆ ಆಯ್ಕೆಯಾಗಿದ್ದಾರೆ. ನೇಪಾಳದ ಪ್ರಮುಖ ವಿರೋಧ ಪಕ್ಷವಾದ ಯುಎಂಎಲ್ ಸಂಸತ್ತಿನಲ್ಲಿ ಅಡಚಣೆಯನ್ನು ಅಂತ್ಯಗೊಳಿಸಲು ನಿರ್ಧರಿಸಿದ ಕಾರಣ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ ಆಗಾಗಿ ದುಬೌ ಅವರು ಸ್ಪರ್ಧೆಯಲ್ಲಿದ್ದ ಏಕೈಕ ಅಭ್ಯರ್ಥಿಯಾಗಿದ್ದರು. 598 ಮತಗಳಿರುವ ಸಂಸತ್ತಿನಲ್ಲಿ 388 ಮತಗಳನ್ನು ಗಳಿಸುವ ಮೂಲಕ ದುಬೌ ಅವರು ಬಹುಮತವನ್ನು ಸಾಬೀತುಪಡಿಸಿದರು.

            ದುಬೌ ಅವರು 1995 ರಿಂದ 1997, 2001 ರಿಂದ 2002 ರವರೆಗೆ ಮತ್ತು 2004 ರಿಂದ 2005 ರವರೆಗೆ ಮೂರು ಬಾರಿ ನೇಪಾಳದ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. 2005ರಲ್ಲಿ ಮೂರನೇ ಅವಧಿಯಲ್ಲಿ ಪ್ರಧಾನಿಯಾಗಿದ್ದಾಗ ಮಾವೋವಾದಿ ಬಂಡುಕೋರರನ್ನು ಮಾತುಕತೆಗಳಿಗೆ ತರಲು ವಿಫಲವಾದಗ ಅಂದಿನ ರಾಜ ಜ್ಞಾನೇಂದ್ರ ಷಾ ಅವರನ್ನು 2005ರಲ್ಲಿ ಪದಚ್ಯುತಗೊಳಿಸಿದರು.

ಹಿನ್ನಲೆ:

ಶೇರ್ ಬಹದ್ದೂರ್ ದುಬೌ ನೇಪಾಳದ 40ನೇ ಪ್ರಧಾನ ಮಂತ್ರಿ. ಕಳೆದ ತಿಂಗಳು ಮಾವೋವಾದಿ ನಾಯಕ ಪ್ರಚಂಡ ಕಮಲ್ ದಹಾಲ್ ಅವರು ನೇಪಾಳಿ ಕಾಂಗ್ರೆಸ್ ನಾಯಕರೊಂದಿಗೆ ಅಧಿಕಾರ ಹಂಚಿಕೆ ಒಪ್ಪಂದದಿಂದ ರಾಜೀನಾಮೆ ನೀಡಿದ್ದರು. ಆಡಳಿತಾತ್ಮಕ ಪಕ್ಷಗಳು ಜೂನ್ 28 ರಂದು ಉಳಿದ ಪ್ರಾಂತ್ಯಗಳಲ್ಲಿ ಸ್ಥಳೀಯ ಚುನಾವಣೆಯನ್ನು ನಡೆಸಲು ಹಾಗೂ ಜನವರಿ 2018ರ ನಂತರ ಪ್ರಾಂತೀಯ ಮತ್ತು ಸಂಸತ್ತಿನ ಚುನಾವಣೆಗಳನ್ನು ನಡೆಸಲು ಒಪ್ಪಿಕೊಂಡ ನಂತರ ಸಿಪಿಎನ್-ಯುಎಂಎಲ್ ಸಂಸತ್ತಿನ ಅಡಚಣೆಯನ್ನು ಅಂತ್ಯಗೊಳಿಸಲು ನಿರ್ಧರಿಸಿತು.

One Thought to “ಪ್ರಚಲಿತ ವಿದ್ಯಮಾನಗಳು-ಜೂನ್,18,19,2017”

Leave a Reply to Shashidhar Cancel reply

This site uses Akismet to reduce spam. Learn how your comment data is processed.