ನಾಡಪ್ರಭು ರಾಷ್ಟ್ರೀಯ ಕೆಂಪೇಗೌಡ ಉತ್ಸವಕ್ಕೆ ರಾಷ್ಟ್ರಪತಿ ಚಾಲನೆ

ನವದೆಹಲಿಯ ನಾಡಪ್ರಭು ಕೆಂಪೇಗೌಡ ಫೌಂಡೇಶನ್ ವತಿಯಿಂದ ಆಯೋಜಿಸಲಾಗಿದ್ದ ರಾಷ್ಟ್ರೀಯ ಕೆಂಪೇಗೌಡ ಉತ್ಸವಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಚಾಲನೆ ನೀಡಿದರು.

ಕೆಂಪೇಗೌಡ ಬಗ್ಗೆ:

  • ಹಿರಿಯ ಕೆಂಪೇಗೌಡರು (1510–1569) ಅಥವಾ ಮೊದಲನೆಯ ಕೆಂಪೇಗೌಡರು ವಿಜಯನಗರ ಸಾಮ್ರಾಜ್ಯದ ಸಾಮಂತ ರಾಜ್ಯವಾಗಿದ್ದ ಯಲಹಂಕ ನಾಡಿನ ಪಾಳೇಗಾರರಾಗಿದ್ದರು.
  • ನಾಡಪ್ರಭು ಕೆಂಪನಂಜೇಗೌಡ ಹಾಗೂ ಲಿಂಗಾಂಬೆ ದಂಪತಿಗಳಿಗೆ 1510ರಲ್ಲಿ ಯಲಹಂಕದಲ್ಲಿ ಜನಿಸಿದರು.
  • ಬೆಂಗಳೂರನ್ನು ನಿರ್ಮಿಸಿದ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ. ಬೆಂಗಳೂರಿನಲ್ಲಿ ಅನೇಕ ಕೆರೆಗಳು, ದೇವಸ್ಥಾನಗಳು ಹಾಗೂ ಕೋಟೆ ಮಹಾದ್ವಾರಗಳನ್ನು ನಿರ್ಮಿಸಿದರು. 1532ರಲ್ಲಿ ವಿಜಯನಗರ ಸಾಮ್ರಾಜ್ಯದ ಅಚ್ಯುತರಾಯರು ಬೆಂಗಳೂರು ನಗರವನ್ನು ಕಟ್ಟಲು ಕೆಂಪೇಗೌಡರಿಗೆ ಸೂಚಿಸಿದರು.
  • ಬೆಂಗಳೂರಿನ ಪ್ರಸಿದ್ದ ಬಸವನಗುಡಿ ಬಸವ ದೇವಸ್ಥಾನ, ಹಲಸೂರು ಸೋಮೇಶ್ವರ ದೇವಸ್ಥಾನ, ಗವಿ ಗಂಗಾಧೇಶ್ವರ ದೇವಸ್ಥಾನಗಳು ಕೆಂಪೇಗೌಡರ ಕಾಲದಲ್ಲಿ ನಿರ್ಮಾಣಗೊಂಡಿದ್ದು, ಈಗಲೂ ಬಲಿಷ್ಠವಾಗಿವೆ.
  • 1550 ರಲ್ಲಿ ಕೆಂಪೇಗೌಡರವರು “ಪಗೊಡ” ಎಂಬ ನಾಣ್ಯಗಳನ್ನು ಹೊರತಂದರು. ಇದು ವಿಜಯನಗರ ರಾಜರಲ್ಲಿ ಅಸಮಾಧಾನಕ್ಕೆ ಕಾರಣವಾಯಿತು.
  • ಸುಮಾರು ಮೂರು ದಶಕಗಳ ಅವೀಸ್ಮರಣಿಯ ರಾಜ್ಯ ಆಳ್ವಿಕೆ ಮಾಡಿದ ಕೆಂಪೇಗೌಡರು 1569ರಲ್ಲಿ ನಿಧನರಾದರು.

2016ನೇ ಸಾಲಿನ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿ ಪ್ರಕಟ

2016ನೇ ಸಾಲಿನ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಗಳು ಪ್ರಕಟಗೊಂಡಿವೆ. ಕವಿತಾ ಲಂಕೇಶ್‌ ನೇತೃತ್ವದ ಎಂಟು ಜನ ಸದಸ್ಯರ ಆಯ್ಕೆ ಸಮಿತಿ 126 ಸಿನಿಮಾಗಳನ್ನು ವೀಕ್ಷಿಸಿ 25 ವಿಭಾಗಗಳಲ್ಲಿ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಪ್ರಶಸ್ತಿಯ ವಿವರ:

  • ಅತ್ಯುತ್ತಮ ಚಿತ್ರ: ಅಮರಾವತಿ:
  • ಅತ್ಯುತ್ತಮ ನಟ” (ಸುಬ್ಬಯ್ಯ ನಾಯ್ಡು ಪ್ರಶಸ್ತಿ): ಅಚ್ಯುತ್ ಕುಮಾರ್ (ಅಮರಾವತಿ)
  • ಅತ್ಯುತ್ತಮ ನಟಿ: ಶ್ರುತಿ ಹರಿಹರನ್ (ಬ್ಯೂಟಿಫುಲ್‌  ಮನಸುಗಳು)
  • ಎರಡನೇ ಅತ್ಯುತ್ತಮ ಚಲನಚಿತ್ರ: ರೈಲ್ವೇ ಚಿಲ್ಡ್ರನ್
  • ಮೂರನೇ ಅತ್ಯುತ್ತಮ ಚಲನಚಿತ್ರ: ಅಂತರ್ಜಲ
  • ವಿಶೇಷ ಸಾಮಾಜಿಕ ಕಳಕಳಿಯ ಚಿತ್ರ: ಮೂಡ್ಲ ಸೀಮೆಯಲಿ
  • ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ: ಕಿರಿಕ್ ಪಾರ್ಟಿ
  • ಅತ್ಯುತ್ತಮ ಮಕ್ಕಳ ಚಿತ್ರ: ಜೀರ್‌ಜಿಂಬೆ
  • ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ: ರಾಮಾ ರಾಮಾ ರೇ
  • ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಭಾಷಾ ಚಿತ್ರ: ಮದಿಪು

·         ಅತ್ಯುತ್ತಮ ಪೋಷಕ ನಟ (ಕೆ ಎಸ್ ಅಶ್ವತ್ಥ್ ಪ್ರಶಸ್ತಿ) : ನವೀನ್ ಡಿ ಪಡೀಲ್ (ಕುಡ್ಲಕೆಫೆ) ತುಳುಚಿತ್ರ

·         ಅತ್ಯುತ್ತಮ ಪೋಷಕ ನಟಿ : ಅಕ್ಷತಾ ಪಾಂಡವಪುರ(ಚಿತ್ರ:ಪಲ್ಲಟ)

·         ಅತ್ಯುತ್ತಮ ಕಥೆ : ನಂದಿತಾ ಯಾದವ್ (ಚಿತ್ರ:ರಾಜು ಎದೆಗೆ ಬಿದ್ದ ಅಕ್ಷರ)

·         ಅತ್ಯುತ್ತಮ ಚಿತ್ರಕಥೆ : ಅರವಿಂದ ಶಾಸ್ತ್ರಿ (ಚಿತ್ರ:ಕಹಿ)

·         ಅತ್ಯುತ್ತಮ ಸಂಭಾಷಣೆ: ಬಿ ಎಂ ಗಿರಿರಾಜ್ (ಅಮರಾವತಿ)

·         ಅತ್ಯುತ್ತಮ ಛಾಯಾಗ್ರಹಣ: ಶೇಖರ್ ಚಂದ್ರ (ಮುಂಗಾರು ಮಳೆ-2)

·         ಅತ್ಯುತ್ತಮ ಸಂಗೀತ ನಿರ್ದೇಶನ: ಎಂ ಆರ್ ಚರಣ್ ರಾಜ್ (ಚಿತ್ರ: ಜೀರ್ ಜಿಂಬೆ)

·         ಅತ್ಯುತ್ತಮ ಸಂಕಲನ: ಮಾಸ್ಟರ್ ಸಿ ರವಿಚಂದ್ರನ್ (ಚಿತ್ರ : ಮಮ್ಮಿ)

·         ಅತ್ಯುತ್ತಮ ಬಾಲ ನಟ: ಮನೋಹರ್ ಕೆ (ಚಿತ್ರ : ರೈಲ್ವೇ ಚಿಲ್ಡ್ರನ್)

·         ಅತ್ಯುತ್ತಮ ಬಾಲ ನಟಿ: ಬೇಬಿ ಸಿರಿವಾನಳ್ಳಿ (ಚಿತ್ರ: ಜೀರ್ ಜಿಂಬೆ) ಬೇಬಿ ರೇವತಿ (ಬೇಟಿ)

·         ಅತ್ಯುತ್ತಮ ಕಲಾ ನಿರ್ದೇಶನ: ಶಶಿಧರ ಅಡಪ (ಚಿತ್ರ :ಉಪ್ಪಿನ ಕಾಗದ)

·         ಅತ್ಯುತ್ತಮ ಗೀತೆ ರಚನೆ: ಕಾರ್ತಿಕ್ ಸರಗೂರು (ಚಿತ್ರ:ಜೀರ್ ಜಿಂಬೆ)

·         ಅತ್ಯುತ್ತಮ ಹಿನ್ನೆಲೆ ಗಾಯಕ: ವಿಜಯ ಪ್ರಕಾಶ್ (ಚಿತ್ರ:ಬ್ಯೂಟಿಫುಲ್ ಮನಸ್ಸುಗಳು)

·         ಅತ್ಯುತ್ತಮ ಹಿನ್ನೆಲೆ ಗಾಯಕಿ : ಸಂಗೀತ ರವೀಂದ್ರನಾಥ್ (ಚಿತ್ರ: ಜಲ್ಸಾ)

·         ತೀರ್ಪುಗಾರರ ವಿಶೇಷ ಪ್ರಶಸ್ತಿ: ಚಿನ್ಮಯ್ (ಸಂತೆಯಲ್ಲಿ ನಿಂತ ಕಬೀರ-ವಸ್ತ್ರಾಲಂಕಾರ ವಿಭಾಗ)

·         ಅತ್ಯುತ್ತಮ ನಿರ್ಮಾಣ ನಿರ್ವಾಹಕ : ಕೆ ವಿ ಮಂಜಯ್ಯ (ಮುಂಗಾರು ಮಳೆ-2)

 ಚೂರು ಪಾರು:

  • ಪಂಜಾಬಿನಲ್ಲಿ ವಿಐಪಿ ಸಂಸ್ಕೃತಿಗೆ ವಿದಾಯ: ಶಿಲಾನ್ಯಾಸ ಫಲಕಗಳಲ್ಲಿ ಎಂಎಲ್ಎ ಮತ್ತು ಎಂಪಿಗಳ ಹೆಸರನ್ನು ಅಳವಡಿಸಿದಂತೆ ಪಂಜಾಬ್ ಸರ್ಕಾರ ನಿಷೇಧ ಹೇರಿದೆ. ಆ ಮೂಲಕ ವಿಐಪಿ ಸಂಸ್ಕೃತಿಗೆ ವಿದಾಯ ಹೇಳುವ ಮಹತ್ವದ ನಿರ್ಣಯವನ್ನು ಕೈಗೊಂಡಿದೆ.
  • ಕೇರಳದ ಶಾಲೆಗಳಲ್ಲಿ ಮಲೆಯಾಳಂ ಕಡ್ಡಾಯ: ಕೇರಳ ರಾಜ್ಯದ ಎಲ್ಲಾ ಶಾಲೆಗಳಲ್ಲಿ 10ನೇ ತರಗತಿ ವರೆಗೆ  ಮಲಯಾಳ ಕಡ್ಡಾಯಗೊಳಿಸಿ ಕೇರಳ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ. ಎಲ್ಲಾ ಸರ್ಕಾರಿ, ಅನುದಾನಿತ, ಅನನುದಾನಿತ, ಆರ್ಥಿಕ ಸ್ವಾವಲಂಬಿ ಶಿಕ್ಷಣ ಸಂಸ್ಥೆಗಳು ಹಾಗೂ ಸಿಬಿಎಸ್‌ಸಿ ಮತ್ತು ಐಸಿಎಸ್‌ಇ ಪಠ್ಯಕ್ರಮ ಸಂಯೋಜಿತ ಶಿಕ್ಷಣ ಸಂಸ್ಥೆಗಳಿಗೆ ಇದು ಅನ್ವಯವಾಗಲಿದ್ದು ಮುಂದಿನ ಶೈಕ್ಷಣಿಕ ವರ್ಷದಿಂದ ಈ ಸುಗ್ರೀವಾಜ್ಞೆ ಜಾರಿಗೆ ಬರಲಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ತಿಳಿಸಿದ್ದಾರೆ.
  • ಚಾಂಪಿಯನ್ಸ್ ಟ್ರೋಫಿಗೆ ಹರಭಜನ್ ಸಿಂಗ್ ರಾಯಭಾರಿ: ಇಂಗ್ಲೆಂಡ್‌ ಹಾಗೂ ವೇಲ್ಸ್‌ನಲ್ಲಿ ಜೂನ್‌ 1ರಿಂದ 18ರವರೆಗೆ ನಡೆಯಲಿರುವ 2017 ಚಾಂಪಿಯನ್ಸ್ ಟ್ರೋಫಿಗೆ ಭಾರತದ ಬೌಲರ್‌ ಹರಭಜನ್ ಸಿಂಗ್ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. ಐಸಿಸಿ ಎಂಟು ಅಂತರ ರಾಷ್ಟ್ರೀಯ ಆಟಗಾರರನ್ನು ರಾಯಭಾರಿಗಳನ್ನಾಗಿ ನೇಮಕಮಾಡಿದ್ದು, ಸಿಂಗ್ ಅವರಲ್ಲಿ ಒಬ್ಬರು. ಭಾರತದ ಹರ್‌ಭಜನ್ ಸೇರಿದಂತೆ, ಪಾಕಿಸ್ತಾನದ ಶಾಹಿದ್ ಅಫ್ರಿದಿ, ಬಾಂಗ್ಲಾದೇಶದ ಹಬೀಬುಲ್‌ ಬಾಶರ್‌, ಇಂಗ್ಲೆಂಡ್‌ನ ಇಯಾನ್ ಬೆಲ್‌, ನ್ಯೂಜಿಲೆಂಡ್‌ ತಂಡದ ಶೇನ್ ಬಾಂಡ್‌, ಆಸ್ಟ್ರೇಲಿಯಾದ ಮೈಕ್ ಹಸ್ಸಿ, ಶ್ರೀಲಂಕಾದ ಕುಮಾರ ಸಂಗಕ್ಕಾರ, ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್ ಕೂಡ ಸೇರಿದ್ದಾರೆ.
  • ವಿಶ್ವದ ಹಿರಿಯಜ್ಜಿ ಎಮ್ಮಾ ಮೊರಾನೊ (117) ನಿಧನ: ವಿಶ್ವದ ಅತಿ ಹಿರಿಯ ವ್ಯಕ್ತಿ, ಇಟಲಿಯ 117 ವರ್ಷದ ಮಹಿಳೆ ಎಮ್ಮಾ ಮೊರಾನೊ ನಿಧನರಾಗಿದ್ದಾರೆ.
    ಎಮ್ಮಾ ಅವರು 1899ರ ನವೆಂಬರ್ 29ರಂದು ಜನಿಸಿದ್ದರು. ದೀರ್ಘಕಾಲ ಜೀವಿಸಿದ ವ್ಯಕ್ತಿಯಾಗಿ ಅವರ ಹೆಸರು ಗಿನ್ನಿಸ್ ದಾಖಲೆಯಲ್ಲಿ ಸೇರ್ಪಡೆಗೊಂಡಿದೆ.
  • ಪಂಕಜ್ ಅಡ್ವಾಣಿ ಮುಡಿಗೆ ಏಷ್ಯನ್ ಬಿಲಿಯರ್ಡ್ಸ್ ಚಾಂಪಿಯನ್ ಷಿಪ್ ಪ್ರಶಸ್ತಿ: ಪಂಕಜ್ ಅಡ್ವಾಣಿ ಅವರ ಏಷ್ಯನ್ ಬಿಲಿಯರ್ಡ್ಸ್ ಚಾಂಪಿಯನ್‌ ಷಿಪ್‌ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಫೈನಲ್‌ ಪಂದ್ಯದಲ್ಲಿ ಪಂಕಜ್‌ 6–3 ಫ್ರೇಮ್‌ಗಳಲ್ಲಿ ಭಾರತದವರೇ ಆದ ಸೌರವ್ ಕೊಠಾರಿ ಅವರನ್ನು ಸೋಲಿಸಿ ಆರನೇ ಬಾರಿಗೆ ಪ್ರಶಸ್ತಿ. ಒಟ್ಟಾರೆ ಏಷ್ಯನ್ ಚಾಂಪಿಯನ್‌ ಷಿಪ್‌ನಲ್ಲಿ ಪಂಕಜ್ ಗೆದ್ದ ಏಳನೇ ಪ್ರಶಸ್ತಿ ಇದಾಗಿದೆ. ಹೋದ ವರ್ಷ 6ರೆಡ್‌ ಸ್ನೂಕರ್ ಚಾಂಪಿಯನ್‌ಷಿಪ್‌ನಲ್ಲಿ ಅವರು ಚಾಂಪಿಯನ್ ಆಗಿದ್ದರು.

2 Thoughts to “ಪ್ರಚಲಿತ ವಿದ್ಯಮಾನಗಳು-ಏಪ್ರಿಲ್,17,2017”

  1. When will downlode the april current affirs today date is may 09 So plz downlode as soon as .we are waiting

  2. Mallu Nayak

    Plz complete April Gk sir

Leave a Comment

This site uses Akismet to reduce spam. Learn how your comment data is processed.