ಇಂದ್ರಾಣಿ ದಾಸ್ ಗೆ ಪ್ರತಿಷ್ಠಿತ ರೀಜನರೇಷನ್ ಸೈನ್ಸ್ ಟಾಲೆಂಟ್ ಸರ್ಚ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ

ಭಾರತೀಯ ಮೂಲದ ಅಮೆರಿಕದ ಬಾಲಕಿ ಇಂದ್ರಾಣಿ ದಾಸ್ ರವರು ಪ್ರತಿಷ್ಠಿತ ರೀಜನರೇಷನ್ ಸೈನ್ಸ್ ಟಾಲೆಂಟ್ ಸರ್ಚ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಮೆದುಳಿನ ಗಾಯಗಳು ಮತ್ತು ರೋಗಕ್ಕೆ ಚಿಕಿತ್ಸೆ ನೀಡುವುದಕ್ಕೆ ಸಂಬಂಧಪಟ್ಟ ಮಹತ್ವದ ಸಂಶೋಧನೆಗಾಗಿ ಈ ಪ್ರಶಸ್ತಿ ಲಭಿಸಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಇದೊಂದು ಮಹತ್ತರ ಸಂಶೋಧನೆ ಎನಿಸಿದೆ.

ಪ್ರಶಸ್ತಿ ಪಡೆದ ಇತರ ಭಾರತೀಯರು:

  • ಭಾರತೀಯ ಮೂಲದ ಬಾಲಕ ಅರ್ಜುನ್ ರಮಣಿ ತೃತ್ತೀಯ ಸ್ಥಾನ ಗಳಿಸಿದ್ದಾರೆ. ಮ್ಯಾಥೆಮ್ಯಾಟಿಕಲ್ ಫೀಲ್ಡ್ ಆಫ್ ಗ್ರಾಫ್ ಥಿಯರಿ ಮತ್ತು ಕಂಪ್ಯೂಟರ್ ಪ್ರೋಗ್ರಾಮಿಂಗ್ ಆಧಾರಿತ ನೆಟ್‍ವರ್ಕ್‍ಗಳ ಕುರಿತ ಸಂಶೋಧನೆಗಾಗಿ ಈ ಗೌರವ ಲಭಿಸಿದೆ. ಈ ಪ್ರಶಸ್ತಿಯು5 ಲಕ್ಷ ಡಾಲರ್ (98 ಲಕ್ಷ ರೂ.ಗಳು) ನಗದು ಬಹುಮಾನ ಹೊಂದಿದೆ.
  • ಭಾರತದ ಬಾಲಕಿ ಅರ್ಚನಾ ವರ್ಮಾ ಐದನೇ ಸ್ಥಾನ ಪಡೆದುಕೊಂಡಿದ್ದಾರೆ. ಸೌರಶಕ್ತಿಯನ್ನು ಉತ್ಪಾದಿಸಬಹುದಾದ ಕಿಟಕಿಗಳಿಗೆ ಕಾರಣವಾಗುವ ಸಂಶೋಧನೆಗಾಗಿ ಈ ಪ್ರತಸ್ತಿ ಲಭಿಸಿದೆ. ಈ ಪ್ರಶಸ್ತಿಯು 90,000 ಡಾಲರ್ (58.89 ಲಕ್ಷ ರೂ.ಗಳು) ನಗದು ಬಹುಮಾನ ಪಡೆದಿದ್ದಾರೆ.
  • ಪ್ರತೀಕ್ ನಾಯ್ಡು (ಜೀನೋಮ್ ಮತ್ತು ಕ್ಯಾನ್ಸರ್ ಚಿಕಿತ್ಸೆ ಅಧ್ಯಯನ) ಹಾಗೂ ವೃಂದಾ ಮದನ್ (ಮಲೇರಿಯಾ ಚಿಕಿತ್ಸೆ ಸಂಶೋಧನೆ) ಕ್ರಮವಾಗಿ ಏಳು ಮತ್ತು ಒಂಭತ್ತನೇ ಸ್ಥಾನ ಪಡೆದಿದ್ದು, 50,000 ಡಾಲರ್ ಬಹುಮಾನ ಪಡೆದಿದ್ದಾರೆ. ಅಂತಿಮ ಸುತ್ತಿಗೆ ಬಂದ 40 ವಿದ್ಯಾರ್ಥಿಗಳಲ್ಲಿ ಭಾರತೀಯ ಮೂಲದ ಇತರ ಎಂಟು ವಿದ್ಯಾರ್ಥಿಗಳು ತಲಾ 25,000 ಡಾಲರ್ ನಗದು ಬಹುಮಾನ ಗೆದ್ದಿದ್ದಾರೆ.

ಪ್ರಶಸ್ತಿಯ ಬಗ್ಗೆ:

  • ರೀಜನರೇಷನ್ ಸೈನ್ಸ್ ಟಾಲೆಂಟ್ ಸರ್ಚ್ ಸ್ಪರ್ಧೆ ಅಮೆರಿಕದ ಹಳೆಯ ವಿಜ್ಞಾನ ಸ್ಪರ್ಧೆಯಾಗಿದೆ. ಇದನ್ನು ಜ್ಯೂನಿಯರ್ ನೊಬೆಲ್ ಪ್ರಶಸ್ತಿ ಎಂದೇ ಕರೆಯಲಾಗುತ್ತದೆ.

“ರಾಷ್ಟ್ರೀಯ ಆರೋಗ್ಯ ನೀತಿ-2017” ವಿಶೇಷತೆಗಳು:

ಪ್ರತಿಯೊಬ್ಬರಿಗೂ ಗುಣಮಟ್ಟದ ಮತ್ತು ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆ ಒದಗಿಸುವ ಉದ್ದೇಶದ ‘ರಾಷ್ಟ್ರೀಯ ಆರೋಗ್ಯ ನೀತಿ– 2017’ರ ಅನುಷ್ಠಾನಕ್ಕೆ ಕಡೆಗೂ ಕೇಂದ್ರ  ಸರ್ಕಾರ  ಮುಂದಾಗಿದೆ. ಈ ನೀತಿಯ ಪ್ರಮುಖಾಂಶಗಳು ಹೀಗಿವೆ.

  • ಸಾರ್ವಜನಿಕ ಆರೋಗ್ಯ ವೆಚ್ಚವನ್ನು ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇ4ರಿಂದ ಶೇ 2.5ಕ್ಕೆ ಹೆಚ್ಚಿಸುವುದು ಈ ಯೋಜನೆಯ ಮಹತ್ವದ ಅಂಶಗಳಲ್ಲಿ ಒಂದು.
  • ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ದೊರೆಯುವ ಸೇವೆಗಳು ಮತ್ತು ಜಿಲ್ಲಾಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸುವುದಲ್ಲದೆ ಮಾನವನ ಜೀವಿತಾವಧಿಯನ್ನು5 ವರ್ಷಗಳಿಂದ 70 ವರ್ಷಗಳಿಗೆ ಹೆಚ್ಚಿಸುವ ಗುರಿಯನ್ನೂ ಈ ನೀತಿ ಹೊಂದಿದೆ.
  • ಕಾಯಿಲೆಗಳು ಬರದಂತೆ ಮುಂಜಾಗ್ರತಾ ಕ್ರಮಗಳಿಗೆ ಈ ನೀತಿಯಲ್ಲಿ ಆದ್ಯತೆ ನೀಡಲಾಗಿದೆ. ಚಿಕಿತ್ಸೆ ಪಡೆಯುವಾಗ ಹಣಕಾಸು ಸಂಕಷ್ಟ ಎದುರಾಗದಂತೆ ನೋಡಿಕೊಳ್ಳುವ ಕಾಳಜಿಯನ್ನೂ ಒಳಗೊಂಡಿರುವುದು ಈ ನೀತಿಯ ಪ್ರಮುಖ ಅಂಶ.
  • ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ವಿನಿಯೋಗಿಸುವ ಮೊತ್ತದಲ್ಲಿ ಗಮನಾರ್ಹ ಹೆಚ್ಚಳ, ಶಾಲೆ ಮತ್ತು ಕೆಲಸ ಮಾಡುವ ಸ್ಥಳಗಳಲ್ಲಿ ಯೋಗ ಶಿಕ್ಷಣ ಜಾರಿ ಈ ನೀತಿಯಲ್ಲಿ ಸೇರಿವೆ.
  • 2025ರ ವೇಳೆಗೆ ರಾಷ್ಟ್ರ ಮಟ್ಟದಲ್ಲಿ ಒಟ್ಟಾರೆ ಫಲವತ್ತತೆಯ ದರವನ್ನು 2.1ಕ್ಕೆ ಇಳಿಸುವ ಗುರಿಯನ್ನು ಈ ನೀತಿಯಡಿ ಹೊಂದಲಾಗಿದೆ.
  • ಐದು ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣವನ್ನು 1000 ದಲ್ಲಿ 23ಕ್ಕೆ ಹಾಗೂ ತಾಯಂದಿರ ಮರಣ ಪ್ರಮಾಣವನ್ನು 2020 ರ ವೇಳೆಗೆ 100ಕ್ಕೆ ಇಳಿಸುವ ಉದ್ದೇಶವನ್ನು ಹೊಂದಲಾಗಿದೆ.
  • ಹೆರಿಗೆ ಸಂದರ್ಭದಲ್ಲಿ ತಾಯಿ ಮತ್ತು ಶಿಶು ಮರಣ ತಗ್ಗಿಸುವ ವಿಚಾರ ಆದ್ಯತೆ ಪಡೆದುಕೊಂಡಿದೆ. ಇದು ಸದ್ಯದ ತುರ್ತು ಅಗತ್ಯವಾಗಿತ್ತು ಎಂಬುದನ್ನು ಗಮನಿಸಬೇಕು. ಜೊತೆಗೆ ಚಿಕಿತ್ಸೆಯಲ್ಲಿನ ಲೋಪದೋಷಗಳ ವಿರುದ್ಧ ನ್ಯಾಯಮಂಡಳಿಗೆ ದೂರು ನೀಡಲು ಅವಕಾಶ ಕಲ್ಪಿಸಿರುವುದು ರೋಗಿಗಳ ಹಕ್ಕುಗಳ ರಕ್ಷಣೆಯ ಪ್ರಮುಖ ಕ್ರಮವಾಗಿದೆ.

ಮಾರ್ಚ್ 15: ವಿಶ್ವ ಗ್ರಾಹಕ ಹಕ್ಕುಗಳ ದಿನ

ವಿಶ್ವ ಗ್ರಾಹಕ ಹಕ್ಕುಗಳ ದಿನವನ್ನು ಮಾರ್ಚ್ 15 ರಂದು ಆಚರಿಸಲಾಗುತ್ತದೆ. ಅಂತಾರಾಷ್ಟ್ರೀಯ ಗ್ರಾಹಕರ ಚಳುವಳಿಗೆ ಗೌರವ ಅರ್ಪಿಸುವುದು ಹಾಗೂ ಗ್ರಾಹಕರ ಮೂಲಭೂತ ಹಕ್ಕುಗಳನ್ನು ಪ್ರೋತ್ಸಾಹಿಸುವುದು ವಿಶ್ವ ಗ್ರಾಹಕರ ದಿನದ ಉದ್ದೇಶ.

ವಿಶ್ವ ಗ್ರಾಹಕ ಹಕ್ಕುಗಳ ದಿನದ ವಿಶೇಷ:

  • ಪ್ರತಿಯೊಬ್ಬ ಗ್ರಾಹಕನ ಮೂಲಭೂತ ಹಕ್ಕುಗಳನ್ನು ಪ್ರೋತ್ಸಾಹಿಸುವುದು.
  • ಅಂತಹ ಹಕ್ಕುಗಳನ್ನು ಗೌರವಿಸಲು ಮತ್ತು ರಕ್ಷಿಸಲು ಒತ್ತಾಯಿಸುವುದು.
  • ಮಾರುಕಟ್ಟೆ ದುರುಪಯೋಗ ಮತ್ತು ಸಾಮಾಜಿಕ ಅನ್ಯಾಯಗಳನ್ನು ವಿರೋಧಿಸುವುದು.

2017 ಧ್ಯೇಯವಾಕ್ಯ: ‘Building a Digital World Consumers can Trust’.
ಹಿನ್ನಲೆ:

ಗ್ರಾಹಕ ಹಕ್ಕುಗಳ ಪರಿಕಲ್ಪನೆ ಬಗ್ಗೆ ಮೊದಲು ಮಂಡಿಸಿದವರು ಅಮೆರಿಕಾದ ಮಾಜಿ ಅಧ್ಯಕ್ಷ ಜಾನ್ ಎಫ್ ಕೆನಡಿ ಅವರು. 1962 ರಲ್ಲಿ ಅಮೆರಿಕ ಕಾಂಗ್ರೆಸ್ ಅನ್ನು ಉದ್ದೇಶಿಸಿ ಮಾತನಾಡುವಾಗ ಗ್ರಾಹಕ ಹಕ್ಕುಗಳು ಎಂದರೇನೆಂಬ ವ್ಯಾಖ್ಯಾನವನ್ನು ನೀಡಿದರು. ಆ ಮೂಲಕ ಜಾನ್ ಎಫ್ ಕೆನಡಿ ಅವರು ಗ್ರಾಹಕ ಹಕ್ಕುಗಳ ಬಗ್ಗೆ ಮೊದಲು ಧ್ವನಿ ಎತ್ತಿದ ವಿಶ್ವದ ಮೊದಲ ನಾಯಕ. ಪ್ರಥಮ ವಿಶ್ವ ಗ್ರಾಹಕ ಹಕ್ಕು ದಿನವನ್ನು 15ನೇ ಮಾರ್ಚ್ 1983ರಲ್ಲಿ ಆಚರಿಸಲಾಯಿತು.

  • ಭಾರತದಲ್ಲಿ ರಾಷ್ಟ್ರೀಯ ಗ್ರಾಹಕ ದಿನವನ್ನು ಡಿಸೆಂಬರ್ 24 ರಂದು ಆಚರಿಸಲಾಗುತ್ತದೆ. 1986ರಲ್ಲಿ ಗ್ರಾಹಕ ರಕ್ಷಣೆ ಕಾಯಿದೆ ಈ ದಿನದಂದು ಜಾರಿಗೆ ಬಂದ ಹಿನ್ನಲೆಯಲ್ಲಿ ರಾಷ್ಟ್ರೀಯ ಗ್ರಾಹಕ ದಿನವನ್ನು ಆಚರಿಸಲಾಗುತ್ತಿದೆ.

Leave a Comment

This site uses Akismet to reduce spam. Learn how your comment data is processed.