ನಾಸಾದ ಸಂಪರ್ಕಕ್ಕೆ ಲಭಿಸಿದ ಚಂದ್ರಯಾನ-1

ಏಳು ವರ್ಷಗಳ ಹಿಂದೆ ಭೂಮಿ ಜತೆಗಿನ ಸಂಪರ್ಕ ಕಳೆದುಕೊಂಡು “ಕಣ್ಮರೆ’ಯಾಗಿದ್ದ ಭಾರತದ ಮಹತ್ವಾಕಾಂಕ್ಷಿ ಚಂದ್ರ ಅಧ್ಯಯನ ನೌಕೆ “ಚಂದ್ರಯಾನ 1′ ಅನ್ನು ನಾಸಾದ  ಜೆಟ್‌ ಪ್ರಾಪಲÒನ್‌ ಲ್ಯಾಬೋರೇಟರಿ (ಜೆಪಿಎಲ್‌), ಪತ್ತೆಹಚ್ಚಿದೆ. ಚಂದ್ರಯಾನ-1 ನೌಕೆ ಚಂದ್ರನ ಮೇಲ್ಮೆ„ನಿಂದ ಸರಿಸುಮಾರು 200 ಕಿಲೋಮೀಟರ್‌ ದೂರದಲ್ಲಿ ಚಂದ್ರನ ಸುತ್ತುತ್ತಿರುವುದಾಗಿ ನಾಸಾ ವಿಜ್ಞಾನಿಗಳ ತಂಡ ಹೇಳಿದೆ. ಅಕ್ಟೋಬರ್ 22, 2008 ರಂದು ಚಂದ್ರಯಾನ ನೌಕೆಯನ್ನು ಉಡಾಯಿಸಿದ ಸರಿಯಾಗಿ ಒಂದು ವರ್ಷಗಳ ನಂತರ ಅಂದರೆ 2009ರ ಆ.29ರಂದು ಇಸ್ರೋ ಚಂದ್ರಯಾನ-1 ನೌಕೆಯೊಂದಿಗೆ ಸಂಪರ್ಕವನ್ನು ಕಳೆದುಕೊಂಡಿತ್ತು.

ಹೇಗೆ ಸಂಪರ್ಕವನ್ನು ಕಂಡುಕೊಳ್ಳಲಾಯಿತು?

ನಿರ್ವಹಣಾ ಘಟಕದ ಸಂಪರ್ಕ ಕಡಿದುಕೊಂಡಿದ್ದ ಈ ನೌಕೆ ಆಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿರುವ ಭೂಆಧಾರಿತ ರೆಡಾರ್‌ನಿಂದ ಇದು ಸಾಧ್ಯವಾಗಿದೆ ಎಂದಿದ್ದಾರೆ ನಾಸಾ ವಿಜ್ಞಾನಿಗಳು. ಈ ಕುರಿತು ಮಾಹಿತಿ ನೀಡಿರುವ ಜೆಪಿಎಲ್‌ ಮತ್ತು ಟೆಸ್ಟ್‌ ಪ್ರಾಜಕ್ಟ್‌ನ ರೆಡಾರ್‌ ವಿಜ್ಞಾನಿ ಮರಿನಾ ಬ್ರೋಜೋವಿಕ್‌, ನಾಸಾದ ಚಂದ್ರಾನ್ವೇಷಣೆ ಉಪಗ್ರಹ (ಎಲ್‌ಆರ್‌ಒ) ಮತ್ತು ಭಾರತೀಯ ಬಾಹ್ಯಾಕಾಶ ಅಧ್ಯಯನಾ ಕೇಂದ್ರ (ಇಸ್ರೋ) ಅಭಿವೃದ್ಧಿಪಡಿಸಿದ್ದ ಚಂದ್ರಯಾನ 1 ನೌಕೆಯನ್ನು ಚಂದ್ರ ಮೇಲ್ಮೆ„ ಅಧ್ಯಯನ ಯೋಗ್ಯ ರೆಡಾರ್‌ನಿಂದ ಪತ್ತೆಮಾಡಲಾಗಿದೆ ಎಂದು ತಿಳಿಸಿದೆ.

ಪ್ರಮುಖಾಂಶಗಳು:

  • ಮಾಹಿತಿ ಪ್ರಕಾರ ಚಂದ್ರಯಾನ-1 ಭೂಮಿಯಿಂದ ಅಂದಾಜು 3,80,000 ಕಿಲೋಮೀಟರ್‌ ದೂರದಲ್ಲಿರುವುದು ಕಂಡುಬಂದಿದೆ.
  • ಈ ಕಾರ್ಯಾಚರಣೆಗೆ ಜೆಪಿಎಲ್‌ ತಂಡ 70 ಮೀಟರ್‌ ಆ್ಯಂಟೇನಾ ಬಳಸಿಕೊಂಡಿದೆ. ಇದು ಕ್ಯಾಲಿಫೋರ್ನಿಯಾದ ಗೋಲ್ಡ್‌ಸ್ಟೋನ್‌ ದೀಪ್‌ ಸ್ಪೇಸ್‌ ಕಮ್ಯುನಿಕೇಷನ್‌ ಕಾಂಪ್ಲೆಕ್ಸ್‌ನಲ್ಲಿದ್ದು, ಭಾರಿ ಪ್ರಮಾಣದ ಬೆಳಕು ಚೆಲ್ಲುವಂತೆ ಮಾಡಿ  ಪತ್ತೆ ಮಾಡುವಲ್ಲಿ ನಾಸಾ ತಂಡ ಯಶಸ್ವಿಯಾಗಿದೆ.

ಚಂದ್ರಯಾನ 1 ಸಂಕ್ಷಿಪ್ತ ಪರಿಚಯ:

ಚಂದ್ರಯಾನ-1 ನೌಕೆಯನ್ನು ಅಕ್ಟೋಬರ್ 22, 2008 ರಂದು ಯಶಸ್ವಿಯಾಗಿ ಹಾರಿ ಬಿಡಲಾಗಿತ್ತು. ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಲಿದೆ ಎಂದು ಅಂದಾಜಿಸಲಾಗಿದ್ದ, ಈ ನೌಕೆ ಕೇವಲ 312 ದಿನಗಳ ಕಾಲ ಕಾರ್ಯನಿರ್ವಹಿಸಿ ಶೇ 95% ಗುರಿಯನ್ನು ಮಾತ್ರ ಸಾಧಿಸಿತು. ಚಂದ್ರ ಹಾಗೂ ಚಂದ್ರನ ಮೇಲ್ಮೈ ಸ್ವರೂಪದ ಸುಮಾರು 70000ಕ್ಕೂ ಹೆಚ್ಚು ಚಿತ್ರಗಳನ್ನು ಈ ನೌಕೆಗೆ ಭೂಮಿಗೆ ರವಾನಿಸಿದೆ.

 ಮಾತೃತ್ವ ಅನುಕೂಲ ಮಸೂದೆ-2016ಗೆ ಸಂಸತ್ತು ಅಂಗೀಕಾರ

ಉದ್ಯೋಗಸ್ಥ ಮಹಿಳೆಯರಿಗೆ ಇದುವರೆಗೂ ಸಂಭಾವನೆ ಸಹಿತ 12 ವಾರಗಳಷ್ಟೇ ಇದ್ದ ಮಾತೃತ್ವ ರಜೆಯನ್ನು 26 ವಾರಗಳಿಗೆ ಹೆಚ್ಚಿಸುವ ಮಾತೃತ್ವ ಅನುಕೂಲ ಮಸೂದೆ-2016ಗೆ ಸಂಸತ್ತು ಅಂಗೀಕಾರ ನೀಡಿದೆ. ಈಗಾಗಲೇ ಮಸೂದೆಗೆ ರಾಜ್ಯ ಸಭಾದಲ್ಲಿ ಅನುಮೋದನೆ ದೊರೆತಿದ್ದು, ಇದೀಗ ಲೋಕಸಭೆಯಲ್ಲಿ ಅನುಮೋದನೆ ದೊರೆತಿದೆ. ನಾರ್ವೆ (44 ವಾರ), ಕೆನಡಾ (50 ವಾರ) ನಂತರ ವಿಶ್ವದಲ್ಲೆ ಅತಿ ಹೆಚ್ಚು ವಾರಗಳ ಹೆರಿಗೆ ರಜೆ ನೀಡುವ ಮೂರನೇ ರಾಷ್ಟ್ರ ಭಾರತ ಎನಿಸಿದೆ.

ಮಸೂದೆಯ ಮುಖ್ಯಾಂಶಗಳು:

  • ಮಸೂದೆಯು ಮಾತೃತ್ವ ಅನುಕೂಲ ಕಾಯಿದೆ-1961ಕ್ಕೆ ತಿದ್ದುಪಡಿ ತರಲಿದೆ.
  • ಈ ಮಸೂದೆಯಿಂದ ಸಂಘಟಿತ ವಲಯದ 18 ಲಕ್ಷ ಮಹಿಳೆಯರಿಗೆ ಅನುಕೂಲವಾಗಲಿದೆ.
  • ಮಹಿಳಾ ಉದ್ಯೋಗಿ ಗರ್ಭಿಣಿಯಾದರೆ ಕೇವಲ 3 ತಿಂಗಳಷ್ಟೇ ಸಂಭಾವನೆ ಸಹಿತ ರಜೆ ಸಿಗುತ್ತಿತ್ತು. ಈಗ ಇದು ಆರೂವರೆ ತಿಂಗಳಿಗೆ ವಿಸ್ತರಣೆ ಆದಂತಾಗಿದೆ. ಮೊದಲ ಎರಡು ಮಕ್ಕಳಿಗೆ 26 ವಾರಗಳ ರಜೆ ಸಿಗಲಿದೆ. ಮೂರನೇ ಅಥವಾ ಅದಕ್ಕಿಂತ ಹೆಚ್ಚು ಮಕ್ಕಳಿಗೆ 12 ತಿಂಗಳ ರಜೆ ಲಭಿಸಲಿದೆ.
  • ಮೂರು ತಿಂಗಳಿಗಿಂತಲೂ ಕಡಿಮೆ ವಯಸ್ಸಿನ ಮಗುವನ್ನು ದತ್ತು ತೆಗೆದುಕೊಳ್ಳುವ ಮಹಿಳಾ ಉದ್ಯೋಗಿಗೂ 12 ವಾರಗಳ ಕಾಲ ರಜೆ ಸಿಗಲಿದೆ.
  • ಗುರುವಾರ ಲೋಕಸಭೆಯಲ್ಲಿ ಅನುಮೋದನೆ ಪಡಕೊಂಡಿದೆ. ಆರಂಭದ ಎರಡು ಮಕ್ಕಳಿಗೆ ಸೌಲಭ್ಯ ಸಿಗಲಿದೆ. ಮೂರನೇ ಮಗುವಿನ ಅವಧಿಯಲ್ಲಿ ಕೇವಲ 12 ವಾರ ಮಾತ್ರ ಸಂಭಾವನೆ ಸಹಿತ ರಜೆ ಇರಲಿದೆ.
  • ಶಿಶುಪಾಲನ ಸೌಲಭ್ಯ: ಐವತ್ತಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಗಳಲ್ಲಿ ಶಿಶುಪಾಲನ ಸೌಲಭ್ಯವನ್ನು ನೀಡಬೇಕು. ಕೆಲಸದ ಅವಧಿಯಲ್ಲಿ ಕನಿಷ್ಠ ನಾಲ್ಕು ಬಾರಿ ಮಗುವಿನ ಆರೈಕೆಗೆ ಅವಕಾಶ ನೀಡಬೇಕು.
  • ಸೌಲಭ್ಯದ ಬಗ್ಗೆ ಮಾಹಿತಿ: ಮಹಿಳಾ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವ ವೇಳೆ ಕಾಯಿದೆಯ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ನೀಡುವುದು ಕಡ್ಡಾಯ.

ಆನೆ ಗಣತಿಗೆ ಮುಂದಾದ ನಾಲ್ಕು ರಾಜ್ಯಗಳು

ಇದೇ ಮೊದಲ ಬಾರಿಗೆ ದೇಶದ ನಾಲ್ಕು ರಾಜ್ಯಗಳಲ್ಲಿ ಆನೆ ಗಣತಿ ನಡೆಸಲು ನಿರ್ಧರಿಸಲಾಗಿದೆ. ಈ ನಾಲ್ಕು ರಾಜ್ಯಗಳೆಂದರೆ ಓಡಿಶಾ, ಚತ್ತೀಸಗರ್. ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್. ಮೇ 2017 ರಿಂದ ಆನೆ ಗಣತಿಯನ್ನು ಆರಂಭಿಸಲಾಗುವುದು. ಈ ನಾಲ್ಕು ರಾಜ್ಯಗಳಲ್ಲಿ ದೇಶದಲ್ಲಿ ಅತಿ ಹೆಚ್ಚು ಆನೆ ಮತ್ತು ಮಾನವ ನಡುವಿನ ಸಂಘರ್ಷಣೆ ದಾಖಲಾಗಿವೆ.

ಪ್ರಮುಖಾಂಶಗಳು:

  • ಪ್ರತ್ಯಕ್ಷ ಮತ್ತು ಪರೋಕ್ಷ ಮತ ಎಣಿಕೆ ವಿಧಾನಗಳನ್ನು ಬಳಸಿ ಗಣತಿಯನ್ನು ನಡೆಸಲಾಗುವುದು.
  • ಪ್ರತ್ಯಕ್ಷ ವಿಧಾನದಲ್ಲಿ ಆನೆಗಳನ್ನು ನೇರವಾಗಿ ನೋಡಿ ದಾಖಲು ಮಾಡಲಾಗುತ್ತದೆ. ಪರೋಕ್ಷ ವಿಧಾನದಲ್ಲಿ ಆನೆಗಳ ಲದ್ದಿಯ ವಿಶ್ಲೇಷಣೆಯನ್ನು ಆಧರಿಸಿ ಗಣತಿಯನ್ನು ನಡೆಸಲಾಗುವುದು.
  • ಪರೋಕ್ಷ ವಿಧಾನವನ್ನು ಬಳಸಿ ಈಗಾಗಲೇ ತಮಿಳುನಾಡು ಮತ್ತು ಕರ್ನಾಟಕದಲ್ಲಿ ಗಣತಿಯನ್ನು ನಡೆಸಲಾಗಿದೆ.
  • 2015 ರ ಸಮೀಕ್ಷೆಯ ಪ್ರಕಾರ ಓಡಿಶಾದಲ್ಲಿ 1,954 ಆನೆಗಳಿದ್ದು ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಜಾರ್ಖಂಡ್ 700, ಚತ್ತೀಸಘರ್ ಮತ್ತು ಪಶ್ಚಿಮ ಬಂಗಾಳದಲ್ಲಿ 275 ಹಾಗೂ 130 ಆನೆಗಳು ಇರುವುದಾಗಿ ತಿಳಿದುಬಂದಿದೆ.

15 ಐಐಐಟಿಗಳಿಗೆ ರಾಷ್ಟ್ರೀಯ ಪ್ರಮುಖ ಸಂಸ್ಥೆ ಸ್ಥಾನಮಾನ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ ಮಸೂದೆ-(ಸರ್ಕಾರಿ ಮತ್ತು ಖಾಸಗಿ ಪಾಲುದಾರಿಕೆ) 2017ಗೆ ಅನುಮೋದನೆ ನೀಡಿದೆ.

ಪ್ರಮುಖಾಂಶಗಳು:

  • ಪ್ರಸ್ತುತ ಇರುವ ಐಐಐಟಿ ಗಳನ್ನು ಸರ್ಕಾರಿ-ಖಾಸಗಿ ಪಾಲುದಾರಿಕೆಯಲ್ಲಿ ರಾಷ್ಟ್ರೀಯ ಪ್ರಮುಖ ಸಂಸ್ಥೆಗಳ ಸ್ಥಾನಮಾನವನ್ನು ನೀಡಲು ಮಸೂದೆ ಅವಕಾಶ ಕಲ್ಪಿಸಿದೆ.
  • ಈ ಸ್ಥಾನಮಾನದಿಂದ ಐಐಐಟಿ ಸಂಸ್ಥೆಗಳು ಬಿ.ಟೆಕ್ ಅಥವಾ ಎಂ.ಟೆಕ್ ಅಥವಾ ಪಿ.ಎಚ್.ಡಿ ಹೆಸರಿನಲ್ಲಿ ಪದವಿಗಳನ್ನು ನೀಡಬಹುದಾಗಿದೆ.
  • ಮೇಲಿನ ಪದವಿಗಳನ್ನು ನೀಡುವುದರಿಂದ ಐಐಐಟಿ ಕಡೆಗೆ ವಿದ್ಯಾರ್ಥಿಗಳು ಹೆಚ್ಚು ಆಕರ್ಷಿತ ಆಗುವುದಲ್ಲದೆ, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅತ್ಯುನ್ನತ ಸಂಶೋಧನಾ ಕೌಶಲ್ಯವನ್ನು ಅಭಿವೃದ್ದಿಪಡಿಸಲು ಸಹಕರಿಯಾಗಲಿದೆ.

ಯಾವುವು ಈ ಐಐಐಟಿಗಳು?

ಅಸ್ಸಾಂ (ಗುವಾಹಟಿ), ಆಂಧ್ರ ಪ್ರದೇಶ (ಚಿತ್ತೂರು), ಹರಿಯಾಣ (ಸೊನಿಪತ್), ಗುಜರಾತ್ (ವಡೋದರ), ಹಿಮಾಚಲ ಪ್ರದೇಶ (ಉನ), ಕೇರಳ (ಕೊಟ್ಟಯಂ), ಜಾರ್ಖಂಡ್ (ರಾಂಚಿ), ಕರ್ನಾಟಕ (ಧಾರವಾಡ), ಮಹಾರಾಷ್ಟ್ರ (ಪುಣೆ & ನಾಗ್ಪುರ), ರಾಜಸ್ತಾನ (ಕೋಟ), ಮಣಿಪುರ (ಸೇನಾಪತಿ), ತಮಿಳುನಾಡು (ತಿರುಚನಪಲ್ಲಿ), ಉತ್ತರ ಪ್ರದೇಶ (ಲಕ್ನೋ), ಪಶ್ಚಿಮ ಬಂಗಾಳ (ಕಲ್ಯಾಣಿ).

ಚೂರು ಪಾರು:

  • ಕನ್ನಡದ ಮೊದಲ ಶಾಯರಿ ಕವಿ ಇಟಗಿ ಈರಣ್ಣ (68) ನಿಧನರಾದರು. ಬಳ್ಳಾರಿ ಜಿಲ್ಲೆಯ ಹೊಸಪೇಟೆ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸಿ ನಿವೃತ್ತರಾಗಿದ್ದರು. ನಂತರ ಶಿವಮೊಗ್ಗದಲ್ಲಿ ನೆಲೆಸಿದ್ದರು. ಉರ್ದು ಮತ್ತು ಪರ್ಶಿಯನ್‌ ಭಾಷಾಜ್ಞಾನ ಹೊಂದಿದ್ದ ಅವರು ಆ ಭಾಷೆಯ ಸಾಕಷ್ಟು ಶಾಯರಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದರು. ಸ್ಪರ್ಶ ಚಿತ್ರಕ್ಕಾಗಿ ಅವರು ಬರೆದ ‘ಚಂದಕ್ಕಿಂತ ಚಂದ ನೀನೆ ಸುಂದರ’ ಹಾಡು ಜನಪ್ರಿಯವಾಗಿತ್ತು.
  • ಅಗ್ರ ಶ್ರೇಯಾಂಕದ ಚೀನಾದ ಆಟಗಾರ್ತಿ ತಾಯ್‌ ಜು ಯಿಂಗ್‌ ಅವರು ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಸೋಮವಾರ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.ವಿಶ್ವ ರ‍್ಯಾಂಕಿಂಗ್‌ನಲ್ಲಿ ಭಾನುವಾರ ಮೊದಲ ಸ್ಥಾನಕ್ಕೆ ಏರಿದ್ದ ತಾಯ್ ಮಹಿಳೆಯರ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ 21–16, 22–20ರಲ್ಲಿ ಥಾಯ್ಲೆಂಡ್‌ನ ರಾಚನಕ್‌ ಇಂಟನಾನ್ ಅವರನ್ನು ಮಣಿಸಿದರು.

 

Leave a Comment

This site uses Akismet to reduce spam. Learn how your comment data is processed.