ತೇಜಸ್ವಿನಿ ಯೋಜನೆಯ ಅನುಷ್ಟಾನಕ್ಕೆ ವಿಶ್ವಬ್ಯಾಂಕ್ ಜೊತೆ ಆರ್ಥಿಕ ಒಪ್ಪಂದಕ್ಕೆ ಸಹಿ

ಹದಿಹರೆಯದ ಬಾಲಕಿಯರ ಹಾಗೂ ಯುವ ಮಹಿಳೆಯರ ಸಾಮಾಜಿಕ ಆರ್ಥಿಕ ಸಬಲೀಕರಣದ ಆಶಯ ಹೊಂದಿರುವ ತೇಜಸ್ವಿನಿ ಯೋಜನೆಯ ಆರ್ಥಿಕ ನೆರವಿಗೆ ಕೇಂದ್ರ ಸರ್ಕಾರ ವಿಶ್ವಬ್ಯಾಂಕ್ ನೊಂದಿಗೆ ರೂ 63 ಮಿಲಿಯನ್ ಡಾಲರ್ ಆರ್ಥಿಕ ಒಪ್ಪಂದಕ್ಕೆ ಸಹಿ ಹಾಕಿದೆ. ಹದಿಹರೆಯದ ಹೆಣ್ಣು ಮಕ್ಕಳ ಹಾಗೂ ಯುವ ಮಹಿಳೆಯರ ಸಬಲೀಕರಣ ಯೋಜನೆಯೊಂದನ್ನು ವಿಶ್ವಬ್ಯಾಂಕ್ ಇದೇ ಮೊದಲ ಬಾರಿಗೆ ಭಾರತದಲ್ಲಿ ಅನುಷ್ಟಾನಗೊಳಿಸುತ್ತಿದೆ.

ಪ್ರಮುಖಾಂಶಗಳು:

  • ಹದಿಹರೆಯದ ಹೆಣ್ಣುಮಕ್ಕಳಲ್ಲಿ ಮಾರುಕಟ್ಟೆ ಆಧಾರಿತ ಕೌಶಲ್ಯ ತರಭೇತಿಯನ್ನು ಪಡೆದುಕೊಳ್ಳಲು ಮೂಲ ಜೀವನ ಕೌಶಲ್ಯವನ್ನು ಅಭಿವೃದ್ದಿಪಡಿಸುವುದು.
  • ಇದು ಮುಖ್ಯವಾಗಿ ಮೂರು ಘಟಕಗಳನ್ನು ಒಳಗೊಂಡಿದೆ ಅವುಗಳೆಂದರೆ: ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಅವಕಾಶಗಳನ್ನು ವಿಸ್ತರಿಸುವುದು. ಉತ್ತಮ ಸೇವೆ ನೀಡುವುದು ಹಾಗೂ ರಾಜ್ಯಗಳ ಸಾಮರ್ಥ್ಯ ಅಭಿವೃದ್ದಿ.
  • ಯೋಜನೆಯನ್ನು ಜಾರ್ಖಂಡ್ನ 17 ಜಿಲ್ಲೆಗಳಲ್ಲಿ ಆರಂಭಿಸಲಾಗಿದೆ. ಸುಮಾರು 6,80,000 ಸಾವಿರ ಹದಿಹರೆಯದ ಬಾಲಕಿಯರು ಹಾಗೂ ಯುವ ಮಹಿಳೆಯರು ಇದರಿಂದ ಅನುಕೂಲ ಪಡೆದುಕೊಳ್ಳಲಿದ್ದಾರೆ.

ಸೀಮೈ ಕರುವೇಲಂ (Seemai Karuvelam) ಮರಗಳನ್ನು ತೆರವುಗೊಳಿಸಲು ಕಾನೂನು ಜಾರಿಗೊಳಿಸುವಂತೆ ಮದ್ರಾಸ್ ಹೈಕೋರ್ಟ್ ಆದೇಶ

ಮದ್ರಾಸ್ ಹೈಕೋರ್ಟಿನ ಮಧುರೈ ಪೀಠ “ಸೀಮೈ ಕರುವೇಲಂ (Seemai Karuvelam)” ಮರಗಳನ್ನು ತೆರವುಗೊಳಿಸಲು ಎರಡು ತಿಂಗಳೊಳಗೆ ಸೂಕ್ತ ಕಾನೂನು ಜಾರಿಗೊಳಿಸುವಂತೆ ತಮಿಳುನಾಡು ಸರ್ಕಾರಕ್ಕೆ ಆದೇಶ ಮಾಡಿದೆ. ಸೀಮೈ ಕರುವೇಲಂ ಆಕ್ರಮಣಶೀಲ ಸಸ್ಯ ಪ್ರಭೇದವಾಗಿದ್ದು, ಅತಿಯಾದ ನೀರನ್ನು ಹೀರಿಕೊಳ್ಳುವುದರಿಂದ ಪರಿಸರ ಹಾಗೂ ಕೃಷಿ ಚಟುವಟಿಕೆ ಮೇಲೆ ಗಂಭೀರ ಹಾನಿಯನ್ನು ಉಂಟುಮಾಡುತ್ತಿದೆ.

ಏನಿದು ವಿವಾದ:

  • ಪರಿಸರ ಹಾಗೂ ಕೃಷಿ ಚಟುವಟಿಕೆಗೆಗೆ ಮಾರಕವಾಗಿರುವ ಸೀಮೈ ಕರುವೇಲಂ ಮರಗಳನ್ನು ತೆರವುಗೊಳಿಸಲು ಸೂಕ್ತ ಆದೇಶವನ್ನು ಹೊರಡಿಸುವಂತೆ ಡಿಸೆಂಬರ್, 2016 ರಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿತ್ತು. ಅರ್ಜಿಯ ವಿಚಾರಣೆಯನ್ನು ನಡೆಸಿದ ನ್ಯಾಯಾಲಯ ರಾಜ್ಯದ 13 ಜಿಲ್ಲೆಗಳಲ್ಲಿ ಖಾಸಗಿ ಹಾಗೂ ಸರ್ಕಾರಿ ಜಮೀನುಗಳಲ್ಲಿ ವ್ಯಾಪಕವಾಗಿ ಬೆಳೆದಿರುವ ಕರುವೇಲಂ ಮರಗಳನ್ನು ಬುಡಸಮೇತ ಕೀಳುವಂತೆ ತಮಿಳುನಾಡು ರಾಜ್ಯ ಸರ್ಕಾರಕ್ಕೆ ಆದೇಶ ಮಾಡಲಾಗಿದೆ.

ಆದೇಶದಲ್ಲಿ ಏನಿದೆ?

  • ರಾಜ್ಯದ 32 ಜಿಲ್ಲೆಗಳಲ್ಲಿ ಸೀಮೈ ಕರುವೇಲಂ ಮರಗಳನ್ನು ನಾಶಪಡಿಸಲು ಎರಡು ತಿಂಗಳೊಳಗೆ ಸೂಕ್ತ ಕಾನೂನನ್ನು ಜಾರಿಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿದೆ.
  • ಖಾಸಗಿ ಹಾಗೂ ಸರ್ಕಾರಿ ಜಮೀನುಗಳಿಂದ ಈ ಮರಗಳನ್ನು ಕಿತ್ತೊಗೆಯಲು ಜಿಲ್ಲಾಧಿಕಾರಿಗಳಿಗೆ ಸೂಕ್ತ ಅನುದಾನವನ್ನು ಬಿಡುಗಡೆಗೊಳಿಸಲು ಸಹ ಆದೇಶಿಸಲಾಗಿದೆ.

ಸೀಮೈ ಕರುವೇಲಂ:

ಸೀಮೈ ಕರುವೇಲಂ ಪಶ್ಚಿಮ ಆಫ್ರಿಕಾಕ್ಕೆ ಸೇರಿದ ಮರ ಪ್ರಭೇದ. 1960 ರಲ್ಲಿ ಉರುವಲು ಉದ್ದೇಶಕ್ಕಾಗಿ ತಮಿಳುನಾಡಿನಲ್ಲಿ ಈ ಪ್ರದೇಶವನ್ನು ಪರಿಚಯಿಸಲಾಯಿತು. ಅತಿಯಾಗಿ ನೀರನ್ನು ಹೀರಿಕೊಳ್ಳುವ ಈ ಪ್ರಬೇಧದಿಂದ ಸ್ಥಳೀಯ ಪರಿಸರ ವ್ಯವಸ್ಥೆಗೆ ಮಾರಕವಾಗಿ ಪರಿಣಮಿಸಿದೆ.

ಮೂರು ಅರಣ್ಯ ಸಂಶೋಧನೆ ಸಂಸ್ಥೆಗಳಿಂದ ಅಧಿಕ ಇಳುವರಿ ಸಸ್ಯ ತಳಿಗಳನ್ನು ಅಭಿವೃದ್ದಿ

ಇಂಡಿಯನ್ ಕೌನ್ಸಿಲ್ ಆಫ್ ಫಾರೆಸ್ಟ್ ರಿಸರ್ಚ್ ಅಂಡ್ ಎಜುಕೇಷನ್ (ICFRE), ಡೆಹ್ರಾಡೂನ್ ನ ಮೂರು ಸಂಸ್ಥೆಗಳು 20 ಅಧಿಕ ಇಳುವರಿ ಸಸ್ಯ ತಳಿಗಳನ್ನು ಅಭಿವೃದ್ದಿಪಡಿಸಿವೆ.  ಡೆಹ್ರಾಡೂನ್ ನ ಫಾರೆಸ್ಟ್ ರಿಸರ್ಚ್ ಇನ್ಸ್ಟಿಟ್ಯೂಟ್, ಜಬಲ್ಪುರದ ಟ್ರಾಫಿಕಲ್ ಫಾರೆಸ್ಟ್ ರಿಸರ್ಚ್ ಇನ್ಸ್ಟಿಟ್ಯೂಟ್ ಮತ್ತು ಕೊಯಮುತ್ತೂರಿನ ಇನ್ಸ್ಟಿಟ್ಯೂಟ್ ಆಫ್ ಫಾರೆಸ್ಟ್ ಜೆನೆಟಿಕ್ಸ್ ಅಂಡ್ ಟ್ರೀ ಬ್ರೀಡಿಂಗ್  ಈ ಸಸ್ಯ ತಳಿಗಳನ್ನು ಅಭಿವೃದ್ದಿಪಡಿಸಿರುವ ಸಂಸ್ಥೆಗಳಾಗಿವೆ. ICFREನ ತಳಿ ಬಿಡುಗಡೆ ಸಮಿತಿ ಈ ಹೊಸ ಸಸ್ಯ ತಳಿಗಳನ್ನು ಬಿಡುಗಡೆಗೊಳಿಸಲು ಅನುಮೋದನೆ ನೀಡಿದೆ. ಈ ಹೊಸ ತಳಿಗಳನ್ನು ಈಗಾಗಲೇ ದೀರ್ಘಕಾಲದ ಕಟ್ಟುನಿಟ್ಟಾದ ಕ್ಷೇತ್ರ ಪರೀಕ್ಷೆಗಳಿಗೆ ಒಳಪಡಿಸಲಾಗಿದ್ದು, ಉತ್ತಮ ಫಲಿತಾಂಶ ಬಂದಿರುವ ಕಾರಣ ಬಿಡುಗಡೆಗೊಳಿಸಲಾಗುತ್ತಿದೆ.

ಪ್ರಮುಖಾಂಶಗಳು:

  • ಡೆಹ್ರಾಡೂನ್ ಮೂಲದ ಫಾರೆಸ್ಟ್ ರಿಸರ್ಚ್ ಇನ್ಸ್ಟಿಟ್ಯೂಟ್ ಮಲಬಾರ್ ಬೇವು ಅಥವಾ ಮೆಲಿಯ ದುಬಿಯಾದ 10 ಹೊಸ ತಳಿಗಳನ್ನು ಅಭಿವೃದ್ದಿಪಡಿಸಿದೆ. ಅಲ್ಲದೇ ಯುಕಲ್ಪಿಟಸ್ ಟೆರೆಟಿಕೊರ್ನಿಸ್ (Eucolyptus Tereticornis)ನ ಮೂರು ಹೊಸ ತಳಿಗಳನ್ನು ಅಭಿವೃದ್ದಿಪಡಿಸಿದೆ. ಯುಕಲ್ಪಿಟಸ್ ಮರಗಳ ದಿಮ್ಮೆಗಳಿಗೆ ಕೈಗಾರಿಕೆಯಲ್ಲಿ ಭಾರಿ ಬೇಡಿಕೆ ಇದೆ.
  • ಮಲಬಾರ್ ಬೇವಿನ ಹೊಸ ತಳಿಗಳು ಅಧಿಕ ಇಳುವರಿ ನೀಡುವ ವೈಶಿಷ್ಟ್ಯತೆಯನ್ನು ಹೊಂದಿವೆ. ಪ್ಲೈವುಡ್ ಉದ್ದಿಮೆಯಲ್ಲಿ ಇವುಗಳಿಗೆ ಹೆಚ್ಚು ಬೇಡಿಕೆಯಿದೆ.
  • ಕೊಯಮುತ್ತೂರಿನ IFGTB ಸಂಸ್ಥೆ Casuarina equisetifolia ದ ಐದು ಹೊಸ ತಳಿಗಳನ್ನು ಅಭಿವೃದ್ದಿಪಡಿಸಿದ್ದು, ಮರದ ದಿಮ್ಮೆಗಳಿಗೆ ಬಳಕೆಯಾಗಲಿದೆ.
  • TFRI, ಜಬಲ್ಪುರ: ಔಷಧೀಯ ಗುಣವುಳ್ಳ ರಾವೊಲ್ಫಿಯ ಸೆರ್ಪೆಂಟಿನ (Rauvoflia Serpentina)ದ ಎರಡು ತಳಿಗಳನ್ನು ಟಿಎಫ್ಆರ್ ಐ ಅಭಿವೃದ್ದಿಪಡಿಸಿದೆ.

ಇಂಡಿಯನ್ ಕೌನ್ಸಿಲ್ ಆಫ್ ಫಾರೆಸ್ಟ್ ರಿಸರ್ಚ್ ಅಂಡ್ ಎಜುಕೇಷನ್:

  • ICFRE ಒಂದು ಸ್ವಾಯತ್ತ ಸಂಸ್ಥೆಯಾಗಿದ್ದು, ಕೇಂದ್ರ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಡಿ ಕಾರ್ಯನಿರ್ವಹಿಸುತ್ತಿದೆ.
  • ಅರಣ್ಯ ಸಸ್ಯ ಪ್ರಬೇಧಗಳ ಅಭಿವೃದ್ದಿಗೆ ಸಂಶೋಧನೆಯನ್ನು ನಡೆಸುವುದು ಹಾಗೂ ಅಗತ್ಯ ತಂತ್ರಜ್ಞಾನವನ್ನು ರಾಜ್ಯಗಳೊಂದಿಗೆ ವಿನಿಮಯ ಮಾಡಿಕೊಳ್ಳುವುದು ಇದರ ಮುಖ್ಯ ಉದ್ದೇಶ.
  • ICFRE ಯಡಿ ಒಟ್ಟು ಒಂಬತ್ತು ಸಂಶೋಧನಾ ಸಂಸ್ಥೆಗಳು ಹಾಗೂ 4 ಸುಧಾರಿತ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.

2 Thoughts to “ಪ್ರಚಲಿತ ವಿದ್ಯಮಾನಗಳು-ಮಾರ್ಚ್,3,2017”

  1. Nagendra

    Sir do you have Android app so, that we can download the descriptive news…

  2. Sharanabasava

    Realy it is extrordinary information sir.

Leave a Comment

This site uses Akismet to reduce spam. Learn how your comment data is processed.