ಗುಪ್ತದಳದ ನೂತನ ನಿರ್ದೇಶಕರಾಗಿ ರಾಜೀವ್ ಜೈನ್ ನೇಮಕ

ಹಿರಿಯ ಐಪಿಎಸ್‌ ಅಧಿಕಾರಿಯಾದ ರಾಜೀವ್‌ ಜೈನ್‌ ಅವರನ್ನು ಗುಪ್ತದಳದ (Intelligence Bureau)ದ ನಿರ್ದೇಶಕರಾಗಿ ಕೇಂದ್ರ ಸರ್ಕಾರ ನೇಮಕ ಮಾಡಿದೆ. ಗುಪ್ತದಳದ ನಿರ್ದೇಶಕರಾಗಿರುವ ದಿನೇಶ್ವರ್‌ ಶರ್ಮಾ  ಅವರ ಅವಧಿ  ಡಿಸೆಂಬರ್‌ 31 ಕ್ಕೆ  ಪೂರ್ತಿಯಾಗುತ್ತದೆ. ರಾಜೀವ್‌ ಅವರು ಶರ್ಮಾ ಸ್ಥಾನವನ್ನು ತುಂಬಲಿದ್ದಾರೆ. ಜೈನ್ ರವರು 1980ನೇ ಬ್ಯಾಚ್ ನ ಜಾರ್ಖಂಡ್ ಕೇಡರ್ ನ ಐಪಿಎಸ್ ಅಧಿಕಾರಿ. ಜೈನ್ ರವರು 1989 ರಲ್ಲಿ ಗುಪ್ತಚರ ದಳದ ಸಹಾಯಕ ನಿರ್ದೇಶಕರಾಗಿ ನೇಮಕಗೊಂಡರು. ಅಂದಿನಿಂದ ಅನೇಕ ಜವಬ್ದಾರಿಗಳನ್ನು ಅವರು ನಿಭಾಯಿಸಿದ್ದಾರೆ.

ಗುಪ್ತದಳ:

  • ಐಬಿ ಭಾರತದ ಆಂತರಿಕ ಗುಪ್ತದಳವಾಗಿದೆ.
  • ಬ್ರಿಟಿಷ್ ಭಾರತ ಆಳ್ವಿಕೆಯಲ್ಲಿ 1887 ರಲ್ಲಿ ಇದನ್ನು ಸ್ಥಾಪಿಸಲಾಗಿದೆ.
  • 1947 ರಲ್ಲಿ ಕೇಂದ್ರ ಗುಪ್ತಚರ ಬ್ಯೂರೋವಾಗಿ ಕೇಂದ್ರ ಗೃಹ ಸಚಿವಾಲಯದಡಿ ಮಾರ್ಪಾಟು ಮಾಡಲಾಯಿತು.
  • ಯಾವಾಗಲೂ ಎಚ್ಚರಿಕೆ (Always Alert) ಇದು ಗುಪ್ತದಳದ ಧ್ಯೇಯವಾಕ್ಯ.

ರಾ (ರಿಸರ್ಚ್‌ ಅಂಡ್ ಅನಾಲಿಸಿಸ್‌ ವಿಂಗ್‌) ಮುಖ್ಯಸ್ಥರಾಗಿ ಅನಿಲ್ ಧಸ್ಮಾನಾ ನೇಮಕ

ಹಿರಿಯ ಐಪಿಎಸ್ ಅಧಿಕಾರಿ ಅನಿಲ್‌ ಧಸ್ಮಾನಾ ಅವರನ್ನು ಗುಪ್ತಚರ ಸಂಸ್ಥೆ ‘ರಾ’ (ರಿಸರ್ಚ್‌ ಅಂಡ್ ಅನಾಲಿಸಿಸ್‌ ವಿಂಗ್‌) ಮುಖ್ಯಸ್ಥರನ್ನಾಗಿ ಕೇಂದ್ರ ಸರ್ಕಾರ ನೇಮಕ ಮಾಡಿದೆ. ರಾಜೀಂದರ್ ಖನ್ನಾ ರವರ ಅವಧಿ ಡಿಸೆಂಬರ್ 31, 2016ಕ್ಕೆ ಮುಗಿಯಲಿದ್ದು, ಅವರ ಉತ್ತರಾಧಿಕಾರಿಯಾಗಿ ಅನಿಲ್ ಧಸ್ಮಾನಾ ರವರನ್ನು ನೇಮಕ ಮಾಡಲಾಗಿದೆ.

ಅನಿಲ್ ಧಸ್ಮಾನಾ:

  • 1981ನೇ ಬ್ಯಾಚ್ ನ ಮಧ್ಯಪ್ರದೇಶ ಕೇಡರ್ ನ ಐಪಿಎಸ್ ಅಧಿಕಾರಿ. ನೇಮಕಾತಿಗೆ ಮುಂಚೆ ಏಜೆನ್ಸಿಯ ವಿಶೇಷ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು.
  • ಕಳೆದ 23 ವರ್ಷಗಳಿಂದ ಇವರು “ರಾ” ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ವಿವಿಧ ಜವಬ್ದಾರಿಗಳನ್ನು ನಿರ್ವಹಿಸಿದ್ದಾರೆ.

“ರಾ” ಬಗ್ಗೆ:

  • ರಾ ಭಾರತದ ಪ್ರಥಮ ವಿದೇಶಿ ಗುಪ್ತಚರ ಸಂಸ್ಥೆ. ಚೀನಾ-ಭಾರತ ಮತ್ತು ಭಾರತ-ಪಾಕಿಸ್ತಾನ ಯುದ್ದಗಳ ನಂತರ ಗುಪ್ತಚರ ವೈಫಲ್ಯತೆ ಹಿನ್ನಲೆಯಲ್ಲಿ 1968 ರಲ್ಲಿ ಸ್ಥಾಪಿಸಲಾಗಿದೆ.
  • ಪ್ರಧಾನ ಮಂತ್ರಿಗಳ ಅಡಿ ಕಾರ್ಯನಿರ್ವಹಿಸುತ್ತಿದ್ದು, ಸಂಪುಟ ಕಾರ್ಯದರ್ಶಿಯವರಿಗೆ ಆಡಳಿತ್ಮಾಕ ಆಧರದ ಮೇಲೆ ನೇರವಾಗಿ ವರದಿ ಮಾಡುತ್ತದೆ. ಆ ನಂತರ ಕಾರ್ಯದರ್ಶಿಯವರು ಪ್ರಧಾನ ಮಂತ್ರಿಯವರಿಗೆ ವರದಿಯನ್ನು ಸಲ್ಲಿಸುತ್ತಾರೆ.
  • ವಿದೇಶಿ ಗುಪ್ತಚರ ಮಾಹಿತಿಯನ್ನು ಕಲೆ ಹಾಕುವುದು, ಭಯೋತ್ಪಾದನೆ ವಿರೋಧಿ ಚಟುವಟಿಕೆಗಳನ್ನು ನಡೆಸುವುದು, ದೇಶದ ಭದ್ರತೆ ವಿಚಾರಕ್ಕೆ ಸಂಬಂಧಿಸಿದಂತೆ ಸಲಹೆ ನೀಡುವುದು ‘ರಾ’ ನ ಪ್ರಮುಖ ಕಾರ್ಯಗಳು.
  • “ರಾ” ದ ಕೇಂದ್ರ ಕಚೇರಿ ನವ ದೆಹಲಿಯಲ್ಲಿದೆ.
  • “Law Protects when its protected” ಇದು “ರಾ” ದ ಧ್ಯೇಯವಾಕ್ಯ.

ಚಂಡಮಾರುತ ಮುನ್ಸೂಚನೆಗೆ “ಎಂಟು” ಸಣ್ಣ ಉಪಗ್ರಹಗಳನ್ನು ಉಡಾಯಿಸಿದ ನಾಸಾ

ಚಂಡಮಾರುತ ಮುನ್ಸೂಚನೆ ವ್ಯವಸ್ಥೆಯನ್ನು ಸುಧಾರಿಸುವ ಸಲುವಾಗಿ ನಾಸಾ ಎಂಟು ಸಣ್ಣ ಉಪಗ್ರಹಗಳ ಸಮೂಹವನ್ನು ಯಶಸ್ವಿಯಾಗಿ ಉಡಾಯಿಸಿದೆ. ಇದು ನಾಸಾದ “ಸೈಕ್ಲೋನ್ ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಂ”ನ ಭಾಗವಾಗಿದೆ. ಈ ಉಪಗ್ರಹಗಳನ್ನು ಭೂಮಿಯಿಂದ 12ಕಿ.ಮೀ ಎತ್ತರದಲ್ಲಿ ಗಾಳಿಯಿಂದ ಉಡಾಯಿಸಲಾಯಿತು. ಉಡಾವಣಾ ವೆಚ್ಚವನ್ನು ಕಡಿಮೆಗೊಳಿಸುವ ಸಲುವಾಗಿ ಈ ಉಪಗ್ರಹಗಳನ್ನು ಭೂಮಿಯಿಂದ ಹಾರಿಸದೆ ಗಾಳಿಯಿಂದ ಉಡಾಯಿಸಲು ನಾಸಾ ತೀರ್ಮಾನಿಸಿತ್ತು. ಇದಕ್ಕಾಗಿ ಆರ್ಬಿಟಲ್ ATK ಬಾಹ್ಯಕಾಶ ಸಂಸ್ಥೆಯ ಪೆಗಸಸ್ ರಾಕೆಟ್ ಬಳಸಿ ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಲಾಗಿದೆ.

  • ಸೈಕ್ಲೋನ್ ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಂ”ನ ಈ ಪ್ರತಿ ಉಪಗ್ರಹಗಳ ತೂಕ 32 ಕೆ.ಜಿ. 5 ಅಡಿ ಉದ್ದದ ರೆಕ್ಕೆಗಳನ್ನು ಹೊಂದಿವೆ. ಭೂಮಿಯಂದ 500 ಕಿ.ಮೀ ಎತ್ತರದ ಕಕ್ಷೆಯಲ್ಲಿ ಇವು ಕಾರ್ಯನಿರ್ವಹಿಸಲಿವೆ.
  • ಸಮುದ್ರ ಮೇಲ್ಬಾಗದ ಬಿರುಸುತನವನ್ನು ಅಳೆಯಲು ಜಿಪಿಎಸ್ ನ್ಯಾವಿಗೇಷನ್ ರಿಸಿವರ್ ಗಳನ್ನು ಉಪಗ್ರಹಗಳಿಗೆ ಅಳವಡಿಸಲಾಗಿದೆ. ಆ ಮೂಲಕ ಗಾಳಿಯ ವೇಗ ಮತ್ತು ಚಂಡಮಾರುತದ ತೀವ್ರತೆಯನ್ನು ಅಳೆಯಲು ವಿಜ್ಞಾನಿಗಳಿಗೆ ಸಹಾಯವಾಗಲಿದೆ.

One Thought to “ಪ್ರಚಲಿತ ವಿದ್ಯಮಾನಗಳು-ಡಿಸೆಂಬರ್-19,2016”

Leave a Comment

This site uses Akismet to reduce spam. Learn how your comment data is processed.