ಚೀನಾದಿಂದ ಸುಧಾರಿತ ಹವಾಮಾನ ಉಪಗ್ರಹ ಫೆಂಗ್ ಯೂನ್-4

ಚೀನಾ ತನ್ನ ಹೊಸ ತಲೆಮಾರಿನ ಸುಧಾರಿತ ಹವಾಮಾನ ಉಪಗ್ರಹ “ಫೆಂಗ್ ಯೂನ್-4” ಅನ್ನು ಯಶಸ್ವಿಯಾಗಿ ಭೂಸ್ಥಿರ ಕಕ್ಷೆಗೆ ಸೇರ್ಪಡೆಗೊಳಿಸಿದೆ. ಈ ಉಪಗ್ರಹವನ್ನು ಲಾಂಗ್ ಮಾರ್ಚ್-3ಬಿ ರಾಕೆಟ್ ಬಳಸಿ ಸಿಚೂಯನ್ ಪ್ರಾಂತ್ಯದಲ್ಲಿರುವ ಕ್ಷಿಚಾಂಗ್ ಉಪಗ್ರಹ ಉಡಾವಣಾ ಕೇಂದ್ರದಿಂದ ಉಡಾಯಿಸಲಾಯಿತು.

ಪ್ರಮುಖಾಂಶಗಳು:

  • ಫೆಂಗ್ ಯೂನ್ ಚೀನಾದ ಮೊದಲ ಎರಡನೇ ತಲೆಮಾರಿನ ಹವಾಮಾನ ಉಪಗ್ರಹ ಹಾಗೂ ಎತ್ತರದ ಕಕ್ಷೆಯಲ್ಲಿ ಕಾರ್ಯನಿರ್ವಹಿಸುವ ಚೀನಾದ ಮೊದಲ ದೂರ ಸಂವೇದಿ ಉಪಗ್ರಹವಾಗಿದೆ.
  • ವಾತಾವರಣ, ಬಾಹ್ಯಕಾಶ ಪರಿಸರ, ಮೋಡ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಮೇಲೆ ಈ ಉಪಗ್ರಹ ನಿಗಾವಹಿಸಲಿದೆ.
  • ಹವಾಮಾನ ಮತ್ತು ಹವಾಮಾನ ಮುನ್ಸೂಚನೆ ಹಾಗೂ ಮುನ್ಸೂಚನೆಯ ನಿಖರತೆಯ ಸಾಮರ್ಥ್ಯವನ್ನು ಸುಧಾರಿಸುವಲ್ಲಿ ಈ ಉಪಗ್ರಹ ಸಹಕಾರಿಯಾಗಲಿದೆ.

ವನಜೀವನ್” ರಾಷ್ಟ್ರೀಯ ಸಂಪನ್ಮೂಲ ಕೇಂದ್ರವನ್ನು ಆರಂಭಿಸಲಿರುವ ಕೇಂದ್ರ ಸರ್ಕಾರ

ಬುಡಕಟ್ಟು ಜನರ ಜೀವನೋಪಾಯ ಕಟ್ಟಿಕಡಲು “ವನಜೀವನ್” ರಾಷ್ಟ್ರೀಯ ಸಂಪನ್ಮೂಲ ಕೇಂದ್ರವನ್ನು ಕೇಂದ್ರ ಬುಡಕಟ್ಟು ವ್ಯವಹಾರ ಸಚಿವಾಲಯ ಭುಬನೇಶ್ವರ, ಒಡಿಶಾದಲ್ಲಿ ಆರಂಭಿಸಲಿದೆ. ವಿಶ್ವಸಂಸ್ಥೆ ಅಭಿವೃದ್ದಿ ಕಾರ್ಯಕ್ರಮ (UNDP) ಹಾಗೂ ರಾಷ್ಟ್ರೀಯ ಪರಿಶಿಷ್ಟ ಹಣಕಾಸು ಅಭಿವೃದ್ದಿ ನಿಗಮ ಸಹಯೋಗದೊಂದಿಗೆ ವನಜೀವನ್ ಕೇಂದ್ರವನ್ನು ಆರಂಭಿಸಲಾಗುತ್ತಿದೆ.

ಮುಖ್ಯಾಂಶಗಳು:

  • ಮೊದಲ ಹಂತದಲ್ಲಿ ಬುಡಕಟ್ಟು ಜನಾಂಗದ ಪೈಕಿ ಮಾನವ ಅಭಿವೃದ್ದಿ ಸೂಚ್ಯಂಕದಲ್ಲಿ ತೀರಾ ಹಿಂದಿರುವ ಆರು ರಾಜ್ಯಗಳ ಆಯ್ದಾ ಜಿಲ್ಲೆಗಳಲ್ಲಿ “ವನಜೀವನ್” ಕೇಂದ್ರವನ್ನು ಆರಂಭಿಸಲಾಗುವುದು. ಈ ಜಿಲ್ಲೆಗಳಲ್ಲಿ ಬುಡಕಟ್ಟು ಜನರ ಜೀವನೋಪಾಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಗುರುತಿಸುವ ಕಾರ್ಯನಡೆಯಲಿದೆ.
  • ಕಾರ್ಯಕ್ರಮದಡಿ ಅಸ್ಥಿತ್ವದಲ್ಲಿರುವ ಕೌಶಲ್ಯ ಮಟ್ಟಕ್ಕೆ ಅನುಗುಣವಾಗಿ ಸ್ಥಳೀಯ ಸಂಪನ್ಮೂಲಗಳನ್ನು ಗುರುತಿಸಿಲಾಗುವುದು.
  • ಕೇಂದ್ರ ಸರ್ಕಾರ ಮೀಸಲಿಟ್ಟಿರುವ ಹಣವನ್ನು ಮೇಲಿನ ಉದ್ದೇಶಗಳಿಗೆ ಬಳಸಲು ವನಜೀವನ್ ಸಹಕರಿಸಲಿದೆ.
  • ಮೊದಲ ಹಂತದಲ್ಲಿ ಅಸ್ಸಾಂ, ಗುಜರಾತ್, ಮಧ್ಯ ಪ್ರದೇಶ, ರಾಜಸ್ತಾನ, ಒಡಿಶಾ ಮತ್ತು ತೆಲಂಗಣ ರಾಜ್ಯಗಳಲ್ಲಿ ಅನುಷ್ಟಾನಗೊಳಿಸಲಾಗುವುದು.
  • ಎರಡನೇ ಹಂತದಲ್ಲಿ ಅರುಣಾಚಲ ಪ್ರದೇಶ, ಜಾರ್ಖಂಡ್, ಚತ್ತೀಸಘರ್, ಮಹಾರಾಷ್ಟ್ರ, ಮೇಘಾಲಯ ಮತ್ತು ತ್ರಿಪುರ ರಾಜ್ಯಗಳಲ್ಲಿ ಜಾರಿಗೊಳಿಸಲಾಗುವುದು.

ಭಾರತ-ರಷ್ಯಾ ನಡುವಿನ ಕಡಲ ಸಮರಭ್ಯಾಸ “ಇಂದ್ರಾ ನ್ಯಾವಿ(INDRA NAVY)-2016” ಆರಂಭ

ಭಾರತ ಮತ್ತು ರಷ್ಯಾ ನಡುವಿನ ವಾರ್ಷಿಕ ದ್ವಿಪಕ್ಷೀಯ ಕಡಲ ಸಮರಭ್ಯಾಸ “ಇಂದ್ರಾ ನ್ಯಾವಿ” ಬಂಗಾಳ ಕೊಲ್ಲಿಯಲ್ಲಿ ಆರಂಭಗೊಂಡಿದೆ. ಉಭಯ ದೇಶಗಳ ನಡುವಿನ ಒಂಬತ್ತನೇ ವರ್ಷದ ಕಡಲ ಸಮರಭ್ಯಾಸ ಇದಾಗಿದೆ. ಉಭಯ ದೇಶಗಳ ನಡುವೆ ಕ್ರಿಯಾಸಾಧ್ಯತೆ ಹೆಚ್ಚಿಸುವುದು ಹಾಗೂ ಕಡಲ ಭದ್ರತೆ ಕಾರ್ಯಾಚರಣೆಗಳ ಕಾರ್ಯವಿಧಾನಗಳನ್ನು ಅಭಿವೃದ್ದಿಪಡಿಸುವುದು “ಇಂದ್ರಾ ನ್ಯಾವಿ-2016” ಅಭ್ಯಾಸದ ಧ್ಯೇಯವಾಗಿದೆ.

ಪ್ರಮುಖಾಂಶಗಳು:

  • ಸಮರಭ್ಯಾಸವು ಎರಡು ಹಂತದಲ್ಲಿ ನಡೆಯಲಿದೆ. ಮೊದಲ ಹಂತ (ಹಾರ್ಬರ್ ಹಂತ) ಡಿಸೆಂಬರ್ 14 ರಿಂದ 18 ರವರೆಗೆ ಹಾಗೂ ಎರಡನೇ ಹಂತ (tSea ಹಂತ) ಡಿಸೆಂಬರ್ 19 ರಿಂದ 21 ರವರೆಗೆ ವಿಶಾಖಪಟ್ಟಣದಲ್ಲಿ ನಡೆಯಲಿದೆ.
  • ಭಾರತದ ನೌಕಪಡೆ ಪರವಾಗಿ ಐಎನ್ಎಸ್ ರಣವೀರ್, ಐಎಎನ್ ಸತ್ಪುರ, ಐಎನ್ಎಸ್ ಕಮೊರ್ಟ ಭಾಗವಹಿಸಲಿವೆ. ರಷ್ಯಾ ನೌಕಪಡೆಯ ಪರವಾಗಿ ರಿಯಲ್ ಅಡ್ಮಿರಲ್ ಎಡ್ವರ್ಡ್ ಮಿಖಾಲೊವ್, ಫೆಸಿಫಿಕ್ ಫ್ಲೀಟ್ ಸಮರಭ್ಯಾಸದಲ್ಲಿ ಭಾಗವಹಿಸಲಿವೆ.

ಹಿನ್ನಲೆ:

ಭಾರತ ಮತ್ತು ರಷ್ಯಾ ನಡುವಿನ ಇಂದ್ರಾ ನ್ಯಾವಿ ದ್ವಿಪಕ್ಷೀಯ ಕಡಲ ಸಮರಭ್ಯಾಸವನ್ನು ಮೊದಲ ಬಾರಿಗೆ 2003 ರಲ್ಲಿ ಆಯೋಜಿಸಲಾಗಿತ್ತು. ಉಭಯ ದೇಶಗಳ ನಡುವೆ ಮಹತ್ವದ ಸ್ನೇಹ ಸಂಬಂಧವನ್ನು ಬೆಸೆಯಲು ಇದು ಸಹಕಾರಿಯಾಗಿದೆ. ವರ್ಷದಿಂದ ವರ್ಷಕ್ಕೆ ಈ ಸಮರಭ್ಯಾಸದ ವ್ಯಾಪ್ತಿ, ಕಾರ್ಯಾಚರಣೆಯ ಸಂಕೀರ್ಣತೆ ಹಾಗೂ ಪಾಲ್ಗೊಳ್ಳುವಿಕೆಯ ಮಟ್ಟ ಪರಿಪಕ್ವವಾಗುತ್ತಿದೆ.

Leave a Comment

This site uses Akismet to reduce spam. Learn how your comment data is processed.